অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಷಯ

ಕ್ಷಯ

ಕ್ಷಯರೋಗವು (TB) ಸೋಂಕಿ ನಿಂದ ಬರುವ ರೋಗ. ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೊಸಿಸ ನಿಂದ ಬರುವುದು.

ಹರಡುವುದು ಕ್ಷಯರೋಗವನ್ನು ರೋಗಿಯು ಗಾಳಿಯ ಮೂಲಕ ಹರಡಬಹುದು. ಒಬ್ಬನು ಒಂದು ವರ್ಷದಲ್ಲಿ 10 ಜನಕ್ಕೆ ಸೋಂಕು ತಗಲಿಸಬಹುದು.

ಲಕ್ಷಣಗಳು

  • ಮೂರು ವಾರದರೂ ಕೆಮ್ಮು ಇರುವುದು, ಕಫದಲ್ಲಿ ರಕ್ತ ಬರುವುದು.
  • ಜ್ವರ , ಅದೂ ರಾತ್ರಿಯಲ್ಲಿ
  • ತೂಕ ನಷ್ಟ
  • ಹಸಿವೆ ಇಲ್ಲದಿರುವುದು

ಕ್ಷಯ ಮತ್ತು ಹೆಚ್.ಐ. ವಿ

ಹ್ಯುಮನ್ ಇಮ್ಯುನೊಡಿಫಿಷಿಯನ್ಸಿ ವೈರಸ್ ( ಎಚ್ ಐ ವಿ, ಏಡ್ಸ ಗೆ ಕಾರಣವಾಗುವ ವೈರಸ್ ) ವಯಸ್ಕರಲ್ಲಿ ಕ್ಷಯ ರೋಗ ತರುವ ಅತಿಹೆಚ್ಚಿನ ಅಪಾಯಕಾರಿ ಅಂಶ. ಕ್ಷಯವು ಎಚ್ ಐವಿ ಸೋಂಕು ಇದ್ದವರಲ್ಲಿ ಬರುವ ಮೊದಲರೋಗ. ಅವರಿಗೆ ಬೇರೆಯವರಿಗಿಂತ ಆರು ಪಟ್ಟು ಹೆಚ್ಚು ಅಪಾಯಕಾರಿ. ಕ್ಷಯದ ಸೋಂಕು ತಗಲಿದರೆ ರೋಗ ಬರುವುದು ಬೇಗ. ಆದರೂ ಕ್ಷಯವನ್ನು ಗುಣ ಪಡಿಸಬಹುದು. HIV- ಸೊಂಕಿತ ವ್ಯಕ್ತಿಗಳಲ್ಲೂ ಕ್ಷಯವನ್ನು DOTS ಚಿಕಿತ್ಸೆಗೆ ಒಳಪಡಿಸಿದರೆ ಅದರ ತೀವ್ರತೆ ಮತ್ತು ಅವರ ಮರಣ ಪ್ರಮಾಣ ಕಡಿಮೆ ಯಾಗುವುದು.

ಮಕ್ಕಳಲ್ಲಿ ಕ್ಷಯ ಕ್ಷಯ ಮಕ್ಕಳಿಗೆ ಬರುವ ಸಂಭವ ಹಚ್ಚು ಕೆಲವು ವರ್ಗದ ಮಕ್ಕಳು ಉಳಿದವರಿಗಿಂತ ಕ್ಷಯ ರೋಗಕ್ಕೆಸುಲಭವಾಗಿ ಗುರಿಯಾಗುವರು, ಅವರೆಂದರೆ

  • ಕ್ಷಯ ರೋಗಿಯಿರುವ ಮನೆಯಲ್ಲಿ ಮಕ್ಕಳು
  • ಕ್ಷಯದ ಸೋಂಕು ತಗುಲವ ಸಂಭವ ವಿರುವ ವ್ಯಕ್ತಿಯೊಂದಿಗೆ ಇರುವ ಮಕ್ಕಳು.
  • ಎಚ್ ಐ ವಿ ಸೊಂಕಿತ ಮಕ್ಕಳು ಇತರೆ ಯಾವುದೆ ನಿರೋಧತೆ ಕಡಿಮೆ ಇರುವ ಮಕ್ಕಳು
  • ಕ್ಷಯವು ವ್ಯಾಪಕವಾಗಿರುವ ದೇಶದಲ್ಲಿ ಜನಿಸಿರುವ ಮಕ್ಕಳು
  • ವೈದ್ಯಕೀಯ ಸೌಲಭ್ಯ ವಂಚಿತ ಸಮುದಾಯದ ಮಕ್ಕಳು

ರೋಗನಿರೋಧಕ ಚುಚ್ಚುಮದ್ದು ಕ್ಷಯದ ವ್ಯಾಕ್ಸಿನ್ ಬಿಸಿಜಿ ಯು, ಕ್ಷಯರೋಗದ ಸಮಸ್ಯೆಯನ್ನು ಕ್ಕ ಮಟ್ಟಿಗೆ ನಿವಾರಿಸುತ್ತದೆ.

ಚಿಕಿತ್ಸೆ ನೇರ ಪರಿಶೀಲನಾ ಚಿಕಿತ್ಸೆ ಅಲ್ಪಾವಧಿ ಕೋರ್ಸ (DOTS) ಅನ್ನು ಕ್ಷಯದ ಚಿತ್ಸೆಗೆ ಬಳಸುವರು. ಕ್ಷಯದ ಚಿಕಿತ್ಸೆ ಗೆ ಕನಿಷ್ಟ 6 ತಿಂಗಳು ಹಿಡಿಯುವುದು ..

ಎಕ್ಸಟ್ರಾ ಪಲ್ಮನರಿ ಕ್ಷಯವು

ಎಕ್ಸಟ್ರಾ –ಪಲ್ಮನರಿ ಕ್ಷಯವು (EPTB) ಶ್ವಾಸಕೋಶದ ಹೊರಭಾಗದಲ್ಲಿ ಬರುವುದು

ಲಕ್ಷಣಗಳು ಎಕ್ಸಟ್ರಾ –ಪಲ್ಮನರಿ ಕ್ಷಯವು ರೋಗಗ್ರಸ್ಥವಾದಾಗ ಸೊಂಕಿತ ಭಾಗವು ಬಾಯುವುದು (ಲಿಂಫ್ ನೋಡ್). ತ್ರಾಸದಾಯಕ ಚಲನೆ( ಬೆನ್ನು ಹುರಿ) ಅಥವ ತೀವ್ರ ತಲೆನೋವು, ನರದೌರ್ಬಲ್ಯಇತ್ಯಾದಿ ಎಕ್ಸಟ್ರಾ –ಪಲ್ಮನರಿ ಕ್ಷಯ ಬಂದಾಗ ಕೆಮ್ಮು ಇರುವುದಿಲ್ಲ ಏಕೆಂದರೆ ಅದು ಶ್ವಾಸ ಕೋಶದ ಕಾಯಿಲೆ ಅಲ್ಲ.

ರೋಗದ ಹೆಚ್ಚಳ

  • ಪ್ರಾಥಮಿಕ ಸೊಂಕು ರಕ್ತದ ಅಥವ ಲಿಂಫಟಿಕ್ ಗ್ರಂಥಿಯ ಮೂಲಕ ಹರಡಬಹುದು. ಸಾಕಷ್ಟು ನಿರೋಧತೆ ಇದ್ದರೆ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ವ್ಯಕ್ತಿಗೆ ನಿರೋಧತೆಯ ಕೊರತೆ ಇದ್ದರೆ ಅವು ದೇಹದ ಒಂದು ಭಾಗದಲಿರುವುದು ರೋಗ ಹೊರ ಹೊಮ್ಮುವವರೆಗೆ ಆ ಭಾಗದಲ್ಲಿ ವರ್ಷಗಳವರೆಗೆ ಗುಪ್ತವಾಗಿರುವುದು
  • ಬ್ಯಾಕ್ಟೀರಿಯಾ ಬಾಯಿಯ ಮೂಲಕ ಮತ್ತು ಉಸಿರಾಟದ ಮೂಲಕ ದೇಹ ಸೇರಬಹುದು. ಅಲ್ಲಿಂದ ಲಿಂಫ್ ನೋಡ್ ಗಳಿಗೆ ಮತ್ತು ಜೀರ್ಣನಾಳಗಳಲ್ಲಿ ಸೇರುವವು.
  • ಸೊಂಕಿತ ಪ್ರಾಣಿಗಳ ಹಾಲಿನಿಂದಲೂ ಮಾನವರಿಗೆ ಸೊಂಕು ತಗುಲಬಹುದು.

ಸೊಂಕು ತಗುಲಬಹುದಾದ ಸಾಮಾನ್ಯವಾದ ಸ್ಥಳಗಳು

  • ಲಿಂಫ್ ಗ್ರಂಥಿಗಳು ಮತ್ತು ಕತ್ತಿನ ಸುತ್ತಲಿರುವರುವ ಅಬಸ್ಕೆಸಸ್.
  • ಮೂಳೆಗಳು ಮತ್ತು ಕೀಲುಗಳು. ಅರ್ಧಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಬೆನ್ನು ಮೂಳೆಯ ಮೇಲೆ ಪರಿಣಾಮವಾಗುವುದು.
  • ಜಿನಿಟೊ ಯುರಿನರಿ ನಾಳ – ಮಹಿಳೆಯರಲ್ಲಿ ಗರ್ಭಾಶಯ ರೋಗಗಳು ಸಾಮಾನ್ಯವಾಗಿ ಕಾಣಿಸಿಕೊಂಡು ಗಂಡಸರಲ್ಲಿ ಎಪಿಡಿಡೈಮಿಸ್ ತೊಂದರೆ ಯಾಗುವುದು. ಇಬ್ಬರಲ್ಲಿ ರೀನಲ್, ಯುರೆಟರಿಕ್ ಮತ್ತು ಬ್ಲಾಡರ್ ತೊಂದರೆ ಬರಬಹುದು..
  • ಹೊಟ್ಟೆ - ಬೊವೆಲ್ ಮತ್ತು ಪೆರಿಟೊನಿಯಂ ಮೇಲೆ ಪರಿಣಾಮ ಬೀರುವುದು.
  • ಮೆನಂಜೈಟಿಸ್ – ಸಮಯದಲ್ಲಿ ಚಿಕೆತ್ಸೆ ಪಡೆಯದಿದ್ದರೆ ಪ್ರಾಣಾಪಾಯಕಾರಿ
  • ಪೆರಿಕಾರ್ಡಿಯಮ್- ಹೃದಯದ ಸಂಪೀಡಕವಾಗಿಸುವುದು.
  • ಚರ್ಮ – ಅದು ಅನೇಕ ರೂಪದಲ್ಲಿ ಇರಬಹುದು,

ಪದೇ ಪದೇ ಕೇಳುವ ಪ್ರಶ್ನೆಗಳು

ಕ್ಷಯಕ್ಕೆ ಕಾರಣವೇನು?

ಕ್ಷಯವು ವಂಶಾನುಗತ ರೋಗವಲ್ಲ. ಇದು ಸೋಂಕುರೋಗ. ಯಾವುದೆ ವ್ಯಕ್ತಿಗೂ ಕ್ಷಯ ಬರಬಹುದು. ಕ್ಷಯದ ಸೋಂಕಿರುವ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ ಗಾಳಿಯಲ್ಲಿ ರೋಗಾಣಗಳು ಹರಡುವವು. ಈ ಏರೋ ಶೆಲ್ ಗಳನ್ನು ಗಾಳಿಯ ಮೂಲಕ ದೇಹದೊಳಗೆ ತೆಗೆದುಕೊಂಡಾಗ ಸೊಂಕು ತಗುಲಬಹುದು.

ರೋಗದ ಲಕ್ಷಣಗಳು ಯಾವು ?

ಕ್ಷಯದ ವಿಶಿಷ್ಟ ಲಕ್ಷಣ, ಮೂರು ವಾರಕ್ಕೂ ಮೀರಿದ ಬಿಟ್ಟೂ ಬಿಡದ ಕಫದಿಂದ ಕೂಡಿದ ಕೆಮ್ಮು.ಜ್ವರ,ತೂಕನಷ್ಟ, ನಿಪ್ಪಹಸಿವು ಇತ್ಯಾದಿ.ಈ ಲಕ್ಷಣಗಳು ಮೂರು ವಾರಕ್ಕೂ ಮಿಗಿಲಾಗಿ ಮುಂದುವರಿದರೆ ತಕ್ಷಣ ಡಾಟ್ಸ ಕ್ಷಯರೋಗ ಕೇಂದ್ರ ಅಥವ ಆರೋಗ್ಯ ಕೇಂದ್ರಕ್ಕೆ ಹೋಗಿ ಕಫ ಪರೀಕ್ಷೆ ಮಾಡಿಸಬೇಕು.

ಕ್ಷಯರೋಗ ಪತ್ತೆಗೆ ಯಾವ ಪರೀಕ್ಷೆಗಳನ್ನು ಮಾಡುವರು?ಅವು ಎಲ್ಲಿ ಲಭ್ಯ?

ಕ್ಷಯದ ರೋಗಾಣು ಪತ್ತೆ ಮಾಡಲು ಸತತ ಮೂರುದಿನ ಕಫದ ಪರೀಕ್ಷೆ ಮಾಡುವುದು ಅಗತ್ಯ. ಇದನ್ನು ದೆಹಲಿಯ NCT ಸ್ಥಾಪಿಸಿರುವ ವಿವಿಧ ಸ್ಥಳಗಳಲ್ಲಿ ಮತ್ತು ಡಾಟ್ಸ ಕೇಂದ್ರಗಳಲ್ಲಿ ಮಾಡುವರು. ಈ ಸೇವೆಯು ಸಂಪೂರ್ಣ ಉಚಿತ. ಸರಿಯಾಗಿ ಕೆಮ್ಮಿ ಕಫವನ್ನು ಪರಿಕ್ಷೆಗೆ ಕೊಡಬೇಕು. ಕಫದ ಬದಲಾಗಿ ಬರಿ ಉಗುಳನ್ನು ನೀಡಬಾರದು . ಆಗ ರೋಗ ಪತ್ತೆ ಆಗದಿರಬಹುದು.

ಕ್ಷಯರೋಗದ ಚಿಕಿತ್ಸೆ ಏನು ?

ಕ್ಷಯರೋಗ ನಿರೋಧಕ ಔಷಧಿಯನ್ನು ಪೂರ್ಣ ಅವಧಿಗೆ ಸಕ್ರಮವಾಗಿ ತೆಗೆದುಕೊಂಡರೆ ರೋಗ ಗುಣವಾವುದು.. ರೋಗಿಯು ಸತತವಾಗಿ ಆರು ತಿಂಗಳ ಕಾಲ ಔಷಧಿ ಸೇವಿಸ ಬೇಕು. ಕೆಲವು ಸಲ ಒಂದು ವರ್ಷದ ವರೆಗೆ ಔಷಧಿ ಮುಂದುವರಿಸ ಬೇಕಾಗಬಹುದು. ವೈದ್ಯರ ಸಲಹೆಯ ಮೇರೆಗೆ ಔಷಧಿ ಸೇವನೆ ನಿಲ್ಲಿಸಬಹುದು. ರೋಗಿಗಳು ಔಷಧಿಯನ್ನು ಪೂರ್ಣಧಿಗೆ ತೆಗೆದುಕೊಳ್ಳದಿದ್ದರೆ ಅಥವ ಸರಾಗಿ ತೆದುಕೊಳ್ಳದಿದ್ದರೆ ಅದು ಗುಣವಾಗದ ರೋಗ ವಾಗುವುದು. ಪ್ರಾಣಾಪಾಯವಾಗಬಹುದು.

ಕ್ಷಯವನ್ನು ಗುಣ ಪಡಿಸಬಹುದೆ ?

ಹೌದು, ರೋಗವು ಸಂಪೂರ್ಣವಾಗಿ ಗುಣ ವಾಗುವುದು. ಚಿಕಿತ್ಸೆಯನ್ನು ನಿರಂತರವಾಗಿ, ಕ್ರಮವಾಗ ಮತ್ತು ಅವಧಿ ಮುಗಿಯುವವರೆಗೆ ತೆಗೆದು ಕೊಂಡಾಗ ಮಾತ್ರ ಗುಣವಾಗುವುದು ಸಾಧ್ಯ.

ಕ್ಷಯವನ್ನು ತಡೆಯುವುದು ಹೇಗೆ?

ಕ್ಷಯ ರೋಗಿಯು ಕೆಮ್ಮುವಾಗ ಮತ್ತು ಸೀನುವಾಗ ಮುಖ ಮುಚ್ಚಿಕೊಳ್ಳಬೇಕು. ಎಲ್ಲೆಂದರೆ ಅಲ್ಲಿ ಉಗುಳಬಾರದು. ಪೀಕದಾನಿಯಲ್ಲೆ ಉಗುಳಬೇಕು. ಅದನ್ನು ನಂತರ ಪರಿಶುದ್ಧ ಗೊಳಿಸಬೇಕು.

ಯಾರಿಗೆ ಆದರೂ ಲಕ್ಷಣಗಳು ಕಂಡಾಗ ಗಾಬರಿ ಯಾಗಬಾರದು ಹಾಗು ಮುಚ್ಚಿಡಬಾರದು. ಸಮಬಂಧಿಸಿದವರು ಪರೀಕ್ಷೆಮಾಡಿಸಿಕೊಂಡು ಅಗತ್ಯವಾದರೆ ತಿಳಿಸಿದಷ್ಟು ಅವಧಿಗೆ ಔಷಧಿ ತೆಗೆದುಕೊಳ್ಳ ಬೇಕು.

ಕ್ಷಯ ರೋಗಿಯ ಪಥ್ಯ ಯಾವುದು?

ಕ್ಷಯ ರೋಗಿಯು ತನ್ನ ಇಷ್ಟಾನುಸಾರ ಯಾವುದೆ ವಿಧದ ಆಹಾರ ಸೇವಿಬಹುದು. ಅವರಿಗೆ ಯಾವುದೆ ವಿಶೇಷ ಪಥ್ಯದ ಅಗತ್ಯವಿಲ್ಲ.ಆ ವ್ಯಕ್ತಿಗೆ ಯಾವ ಆಹಾರ ತೊಂದರೆ ಮಾಡುವುದೋ ಅದನ್ನು ಬಿಡಬೇಕು.

ಕ್ಷಯರೋಗಿಯು ಬಿಡಬೇಕಾದವುಗಳು ಯಾವು ?

ಕ್ಷಯ ರೋಗಿಯು ಬೀಡಿ, ಸಿಗರೇಟು, ಹುಕ್ಕಾ, ತಂಬಾಕು, ಮದ್ಯ ಮತ್ತು ಇತರೆ ಅಮಲು ಪದಾರ್ಥಗಳ ಸೇವನೆಯನ್ನು ಬಿಡಬೇಕು..

ಕ್ಷಯರೋಗ – ಮಾಡು- ಬೇಡ

ಮಾಡು

  • ಕಫ ಪರೀಕ್ಷೆ ಮಾಡಿಸಬೇಕು. ಮೂರುವಾರಗಳಿಗೂ ಹೆಚ್ಚು ಕೆಮ್ಮಿದ್ದರೆ, ಸರ್ಕಾರಿ ಕಫ ಪರೀಕ್ಷಾ ಕೇಂದ್ರಗಳು ಉಚಿತವಾಗಿ ಕಫವನ್ನು ಪರೀಕ್ಷೆ ಮಾಡುವವು.
  • ಎಲ್ಲ ಔಷಧಿಗಳನ್ನು ವೈದ್ಯರು ನಿಗದಿ ಪಡಿಸಿದ ಅವಧಿಯವರೆಗೆ ತಪ್ಪದೆ ತೆಗೆದುಕೊಳ್ಳಿ.
  • ಕ್ಷಯ ಗುಣ ಪಡಿಸಬಹುದು ಎಂಬುದನ್ನು ತಿಳಿದುಕೊಳ್ಳಿ.
  • ಕೆಮ್ಮುವಾಗ ಸೀನುವಾಗ ಕರವಸ್ತ್ರ ಬಳಸಿ.
  • ಗೃಹ ಕ್ರಿಮಿನಾಶಕ ವಿರುವ ಪೀಕದಾನಿಯಲ್ಲಿ ಉಗುಳಿ.

ಬೇಡ

  • ನಿಮಗೆ ಮೂರುವಾರದ ಮೇಲೆ ಕೆಮ್ಮಿದ್ದರೆ ವೈದ್ಯಕೀಯ ಉಪಚಾರ ನಿರಾಕರಿಸಬೇಡಿ.
  • ಕ್ಷಯ ರೋಗ ಪತ್ತೆಗೆ ಕ್ಷ-ಕಿರಣದ ಮೇಲೆ ಅವಲಂಬಿಸಬೇಡಿ.
  • ನಿಮ್ಮ ವೈದ್ಯರು ಹೇಳುವವರೆಗ ಔಷಧಿ ನಿಲ್ಲಿಸಬೇಡಿ.
  • ಕ್ಷಯರೋಗಿಗಳನ್ನು ತಾರತಮ್ಯ ಮಾಡಬೇಡಿ.
  • ಎಲ್ಲೆಂದರೆ ಅಲ್ಲಿ ಉಗಳ ಬೇಡಿ.

DOTS ಎಂದರೇನು?

DOTS(ಡಾಟ್ಸ) ಎಂದರೆ ನೇರವಾದ ಪರಿಶೀಲನಾ ಚಿಕಿತ್ಸೆಯ ಅಲ್ಪಾವಧಿ ಕೋರ್ಸ. ಇದು ಕ್ಷಯ ಗುಣ ಪಡಿಸುವ ಚಿಕಿತ್ಸೆ. ಇದು ಒಂದು ಸರ್ವಾಂಗೀಣವಾದ ತಂತ್ರ. ಕ್ಷಯವನ್ನು ಗುರುತಿಸಲು ಚಿಕಿತ್ಸೆ ಮಾಡಲು ಜಗತ್ತಿನಲ್ಲೆಲ್ಲ ಬಳಸಲಾತ್ತಿದೆ. ಇದು ಐದು ಅಂಶಗಳನ್ನು ಒಳಗೊಂಡಿದೆ:

  • ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವು ರಾಜಕೀಯ ಬದ್ಧತೆಯಾಗಿದೆ.
  • ಸೂಕ್ಷ್ಮದರ್ಶಕ ಸೇವೆಯಿಂದ ಆರೋಗ್ಯ ಸೇವೆಯಲ್ಲಿ ತೊಡಗಿರುವವರ ಸೋಂಕು ಪ್ರಕರಣಗಳ ಪತ್ತೆಗೆ ಅನುಕೂಲವಾಗಿದೆ.ಅದರಲ್ಲೂ ಪಲ್ಮನರಿ ಕ್ಷಯದ ಲಕ್ಷಣವಿದ್ದವರಿಗೆ, ಮೂರು ವಾರ ಅಥವ ಅದಕ್ಕಿಂತ ಹೆಚ್ಚುಕಾಲ ಕೆಮ್ಮಿದ್ದರೆ.
  • ಸಕ್ರಮವಾಗಿ ತಡೆಯಿಲ್ಲದೆ ಕ್ಷಯನಿರೋಧಕ ಔಷಧಿಗಳ ಪೂರೈಕೆ.ನಂಬಲಾರ್ಹವಾದ, ಉತ್ತಮ ಗುಣ ಮಟ್ಟದ ತಡೆಯಿಲ್ಲದೆ ಸದಾ ಕ್ಷಯ ನಿರೋಧಿ ಔಷಧಿಗಳನ್ನು ಸರಬರಾಜು ವ್ವಸ್ಥೆಯು ಡಾಟ್ಸನ ಅತಿ ಮುಖ್ಯ ತಂತ್ರವಾಗಿದೆ. ಕ್ಷಯ ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಕೊರತೆ ಯಾವತ್ತೂ ಆಗಬಾರದು.
  • ಮೊದಲ ಹಂತದಲ್ಲಿ ತೀವ್ರ ಚಿಕಿತ್ಸೆಯ ನೇರ ಪರಿಶೀಲನೆಯ ಅಗತ್ಯವಿದೆ. ಡಾಟ್ಸನ ತಂತ್ರದ ಭಾಗವಾಗಿ ಆರೋಗ್ಯ ಕಾರ್ಯ ಕರ್ತರು ತಮ್ಮ ರೋಗಿಗಳ ಪರಿಶೀಲನೆ ಮಾಡಿ, ಆಪ್ತ ಸಲಹೆ ನೀಡುವರು. ಅವರು ನುಂಗುವ ಔಷಧಿಗಳ ಶಕ್ತಿಶಾಲಿ ಸಂಯೋಜಿತ ಡೋಜುಗಳ ನಿಗಾ ವಹಿಸುವರು.
  • ಪತ್ತೆ ಯಾದ ಪ್ರತಿ ರೋಗಿಯ ಮೇಲುಸ್ತುವಾರಿ, ಹೊಣೆಗಾರಿಕೆ ಮತ್ತು ಚಿಕಿತ್ಸೆಯ ಮೌಲ್ಯಮಾಪನವೂ ಕಾರ್ಯಕ್ರಮದ ವ್ಯವಸ್ಥೆಯ ಜವಾಬ್ದಾರಿಯಾಗಿದೆ.

ಡಾಟ್ಸನ ಅನುಕೂಲಗಳೇನು ?

  • ಡಾಟ್ಸ ಗುಣಪಡಿಸುವ ದರವು ಶೆಕಡಾ 95 ರಷ್ಟು ಹೆಚ್ಚು.
  • ಡಾಟ್ಸ ಬೇಗ ಮತ್ತು ಖಚಿತವಾಗಿ ರೋಗದಿಂದ ಪರಿಹಾರ ಒದಗಿಸುವುದು.
  • ಡಾಟ್ಸ ಭಾರತದಲ್ಲಿ 17 ಲಕ್ಷ ರೋಗಿಗಳ ಜೀವನವನ್ನೆ ಬದಲಾಯಿಸಿದೆ.
  • ಡಾಟ್ಸ ಬಡತನವನ್ನು ನಿವಾರಿಸುವ ತಂತ್ರ. ಜೀವ ಉಳಿಸುವುದು, ಅನಾರೋಗ್ಯದ ಅವಧಿ ಕಡಿಮೆ ಗೊಳಿಸುವುದು. ಮತ್ತು ಹೊಸ ಸೊಂಕನ್ನು ತಡೆಯುವುದು. ಇದರಿಂದ ಅನೇಕ ಕೆಲಸದ ದಿನಗಳ ಉಳಿತಾಯವಾಗುವುದು.
  • ಡಾಟ್ಸ ಕ್ಷಯದ ಜತೆ ಎಚ್ ಐ ವಿ ಸೊಂಕಿತರ ಜಿವನಾವಧಿಯನ್ನು ಹೆಚ್ಚಿಸುವುದು.
  • ಡಾಟ್ಸ ಚಿಕಿತ್ಸೆಯ ವಿಫಲತೆಯನ್ನು ತಡೆಯುವುದು. ಬಹು ಔಷಧಿ ನಿರೋಧಕ ಕ್ಷಯ ಬರುವುದನ್ನು ತಡೆಯುವುದು. ಸತತ ಕ್ಷಯವಿರೋಧಿ ಔಷಧಿ ನೀಡಿಕೆಯಿಂದ ಇದು ಸಾಧ್ಯ
  • ಡಾಟ್ಸ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದು. ಡಾಟ್ಸ ತಂತ್ರವು ಸಹಾಯಕ ಆರೋಗ್ಯ ಸೇವೆಯ ಅಭಿವೃದ್ಧಿಯನ್ನು ಯಶಸ್ವಿಯಾಗಿ ಪ್ರಾಯೋಜಿಸುವುದು
  • ಡಾಟ್ಸ ಎಲ್ಲ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಸಿಗುವುದು.

ಔಷಧಿ ನಿರೋಧಕ ಕ್ಷಯ ಎಂದರೇನು ?

ಇತ್ತೀಚಿನ ವರ್ಷಗಳಲ್ಲಿ ಕ್ಷಯವು ದೊಡ್ಡ ಸಮಸ್ಯೆಯಾಗಿದೆ. ಏಕಂದರೆ ಅದು ಔಷಧಿ ನಿರೋಧತೆಯನ್ನು ಬೆಳಸಿಕೊಂಡಿದೆ. ಸಾಧಾರಣವಾದ ಆಂಟಿಬಯೋಟಿಕ್ ಗಳಿಗೆ ಅದು ಸ್ಪಂದಿಸುವುದೆ ಇಲ್ಲ. ಔಷಧಿ ನಿರೋಧತೆಗೆ ಕಾರಣ ರೋಗಿಯು ಔಷಧಿಯನ್ನು ಸಕ್ರಮವಾಗಿ ಮತ್ತು ತಪ್ಪದೆ ತೆಗೆದು ಕೊಳ್ಳದಿರುವುದೆ ಆಗಿದೆ. MDR ಕ್ಷಯವನ್ನು ತಡೆಯಲು ಔಷಧಿಗಳನ್ನು ಪೂರ್ತಿ ಅವಧಿಗೆ ಕ್ರಮವಾಗಿ ತೆಗದು ಕೊಳ್ಳಬೇಕು. ಈ ರೀತಿಯ ಕ್ಷಯಕ್ಕೆ ಬಹು ದುಬಾರಿಯಾದ ಔಷಧಿಗಳು ತೆಗೆದು ಕೊಳ್ಳ ಬೇಕಾಗುತ್ತದೆ. ಆದರೂ ಅವು ಕೆಲಸಮಾಡದೆ ಇರಬಹುದು ಮತ್ತು ಚಿಕಿತ್ಸೆಯ ಅವಧಿಯು 2 ವರ್ಷಗಳಿಗೂ ಹೆಚ್ಚಾಬಹುದು.

ಕ್ಷಯ ಮತ್ತು ಎಚ್ ಐ ವಿ ಗಳ ಸಂಬಂಧ ಹೇಗೆ ?

ಕ್ಷಯದ ಸೋಂಕು ಯಾರಿಗಾದರೂ ಬರಬಹುದು. ಆದರೆ ಎಚ್ ಐವಿ ಮತ್ತು ಕ್ಷಯದ ಸೊಂಕು ಇದ್ದವರಿಗೆ ಬರಿ ಕ್ಷಯ ಇರುವವರಿಗಿಂತ ಹೆಚ್ಚಿನ ಅಪಾಯವಿದೆ.

ನಿಮಗೆ ಬರಿ ಕ್ಷಯ ಮಾತ್ರ ಇದ್ದರೂ, ಬ್ಯಾಕ್ಟೀರಿಯಾ ದೇಹದಲ್ಲಿ ಇದ್ದೆ ಇರುತ್ತದೆ ಮತ್ತು ಅದರ ಭಯ ತಪ್ಪಿದ್ದಲ್ಲ. ಎಚ್ ಐವಿ ಯಿಂದ ನಿಮ್ಮ ನಿರೋಧಕ ವ್ಯವಸ್ಥೆಯು ದುರ್ಬಲವಾದಾಗ ಬ್ಯಾಕ್ಟೀರಿಯಾಗಳು ಬೆಳೆಯತೊಡಗುತ್ತವೆ. ನಂತರ ಅದೆ ಕ್ಷಯಕ್ಕೆ ತಿರುಗುವುದು

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate