অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಧನುರ್ವಾಯು (ಟೆಟನಸ್)

ಧನುರ್ವಾಯು (ಟೆಟನಸ್) ಸೋಂಕಿನ ರೋಗ. ಅದು ಮಣ್ಣಿನಲ್ಲಿನ ಬ್ಯಾಕ್ಟೀರಿಯಾ, ಮಲಿನವಾದ ಗಾಯಕ್ಕೆ ಸೋಂಕು ತಗುಲಿಸುವುದು. ಇದಕ್ಕೆ ಕಾರಣವಾದ ಬ್ಯಾಕ್ಟೀರಿಯಂ ಕ್ಲೊಸ್ಟ್ರಿಡಿಯಮ್ ಟೆಟೆನಿ ಬಹು ಬಾಳಿಕೆಯ ಜೀವಾಣು. ಅದು ಮಣ್ನಿನಲ್ಲಿ ಸ್ಪೋರ್ ರೂಪದಲ್ಲಿ ಅನೇಕ ವರ್ಷ ಜೀವಿಸಬಲ್ಲದು.

ಗಾಯವು ಬ್ಯಾಕ್ಟೀರಿಯಲ್ ಸ್ಪೋರುಗಳಿಂದ ಮಲಿನವಾದಾಗ ಧನುರ್ವಾಯು (ಟೆಟನಸ್) ಸೋಂಕು ತಗುಲುವುದು. ಸೂಕ್ಷ್ಮಜೀವಿಗಳು (ಸ್ಪೋರುಗಳು) ಸಕ್ರಿಯವಾದಾಗ ಮತ್ತು ಅವು ಗ್ರಾಂ ಪಾಜಿಟಿವ್ ಬ್ಯಾಕ್ಟೀರಿಯಾ ಆದಾಗ ಅವು ವೃದ್ಧಿಯಾಗಿ, ಬಹು ಶಕ್ತಿಯುತವಾದ ಟಾಕ್ಸಿನ್ (ವಿಷ) ಉತ್ಪಾದನೆಯಾಗುವುದು. ಅದು ಸ್ನಾಯುಗಳ ಮೇಲೆ ಪರಿಣಾಮ ಮಾಡುತ್ತವೆ. ಧನುರ್ವಾಯು ಸೂಕ್ಷ್ಮಜೀವಿಗಳು (ಟೆಟನಸ್ ಸ್ಪೋರುಗಳು) ಪರಿಸರದಲ್ಲಿ ಎಲ್ಲ ಕಡೆ ಹರಡಿವೆ. ಸಮಾನ್ಯವಾಗಿ ಮಣ್ಣೂ, ಧೂಳು ಮತ್ತು ಪ್ರಾಣಿಗಳ ಮಲದಲ್ಲಿರುತ್ತವೆ. ಅವುಗಳಿಗೆ ದೇಹದ ಒಳಗೆ ಸೇರಲು ಗಾಯದ ತೆರೆದ ಭಾಗ ಪ್ರಶಸ್ತವಾಗಿದೆ. ತುಕ್ಕು ಹಿಡಿದ ಮೊಳೆ, ಲೋಹದ ಚೂರು ಅಥವ ಕೀಟಗಳ ಕಡಿತ, ಸುಟ್ಟ ಗಾಯ, ಬಿರಿದ ಚರ್ಮದ ಗಾಯಗಳು ಅವಕಾಶ ನೀಡುತ್ತವೆ.

ರೋಗವು ನಾಲಕ್ಕು ವಿಧದಲ್ಲಿ ಹೊರಬರಬಹುದು

  • ಸಾಮಾನ್ಯವಾದ ಟೆಟನಸ್ ಅಸ್ಥಿ ಪಂಜರದ ಎಲ್ಲ ಸ್ನಾಯುಗಳ ಮೇಲೆ ಪರಿಣಾಮ ಬೀರುವುದು. ಇದು ಸರ್ವ ಸಾಮಾನ್ಯವಾದದು ಅದರೆ ಇದು ನಾಲ್ಕರಲ್ಲಿ ಅತಿ ಅಪಾಯಕಾರಿ.
  • ಸ್ಥಳಿಯ ಟೆಟನಸ್ ಸೋಂಕಿತ ಗಾಯದ ಸುತ್ತಲಿನ ಸ್ನಾಯುಗಳ ಮೇಲೆ ಪರಿಣಾಮ ಬೀರುವುದು. ಅವುಗಳ ಸೆಳೆತಕ್ಕೆ ಕಾರಣ ವಾಗುವುದು.
  • ಸೆಫಾಲಿಕ್ ಟೆಟನಸ್ ಮುಖದ ಒಂದು ಅಥವ ಹೆಚ್ಚು ಸ್ನಾಯುಗಳ ಮೇಲೆ ಪರಿಣಾಮ ಬೀರುವುದು. ಮುಖದ ಇಲ್ಲವೆ ಕಿವಿಯ ಗಾಯವಾದರೆ ಬಹು ಬೇಗ (ಒಂದೆರಡು ದಿನಗಳಲ್ಲಿ) ಪರಿಣಾಮ ಬಿರುವುದು.
  • ನವಜಾತ (ನಿಯೋ ನೇಟಲ್) ಟೆಟನಸ್ ಸಹಾ ಸಾಮಾನ್ಯ ಟೆಟನಸ್ ನಂತೆಯೆ ಇರುವುದು/. ಆದರೆ ಇದು ಒಂದು ತಿಂಗಳಿಗೂ ಕಡಿಮೆ ವಯಸ್ಸಿನ ಮಗುವಿಗೆ ಬರುವುದು. ಇದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿರಳ.

ಟೆಟನಸ್ ಕಾರಣಗಳು

  • ಕ್ಲೊಸ್ಟ್ರಿಡಿಯಮ್ ಟೆಟನಿ ಬ್ಯಾಕ್ಟೀರಿಯಾವು ಈ ರೋಗಕ್ಕೆ ಕಾರಣ. ಈ ಬ್ಯಾಕ್ಟೀರಿಯಾವು ಎರಡು ರೂಪದಲ್ಲಿರುವುದು: ಸ್ಪೋರ್ (ಗುಪ್ತ) ಅಥವ ಹೆಚ್ಚಳವಾಗ ಬಹುದಾದ ಜೀವ ಕೋಶ (ಸಕ್ರಿಯ)
  • ಸ್ಪೋರುಗಳು ಮಣ್ಣಿನಲ್ಲಿ , ಧೂಳು ಮತ್ತು ಪ್ರಾಣಿಗಳ ಮಲದಲ್ಲಿ ಇರುತ್ತವೆ. ಅತಿ ವ್ಯತ್ಯಾಸ ವಿರುವ ಉಷ್ಣತೆಗೂ ನಿರೋಧತೆ ಹೊಂದಿವೆ.
  • ಗಾಯವು ಸ್ಪೋರಗಳಿಂದ ಮಲಿನ ವಾಗುವುದು ಬಹು ಸಾಮಾನ್ಯ. ಆದರೆ ಸ್ಪೋರುಗಳು ಮೊಳಕೆಯೊಡೆದು ಸಕ್ರಿಯವಾದಾಗ ಮಾತ್ರ ಟೆಟನಸ್ ಬರುವುದು
  • ಸಕ್ರಿಯವಾದ ಬ್ಯಾಕ್ಟೀರಯಾ ಸೆಲ್ ಗಳು ಟೆಟನೊಲೈಸಿನನ್ ಮತ್ತು ಟೆಟನೊ ಸ್ಪಾಸಿನ್ ಎಂಬ ಎರಡು ರೀತಿ ಎಕ್ಸೊ ಟಾಕ್ಸಿನ್ ಗಳ ಬಿಡುಗಡೆ ಮಾಡುತ್ತವೆ. ಟೆಟನೊಲೈಸಿನ ಕಾರ್ಯ ಇನ್ನೂ ಸ್ಪಷ್ಟವಾಗಿಲ್ಲ. ಟೆಟನೊ ಸ್ಪಾಸಿನ್ ರೋಗಕ್ಕೆ ಕಾರಣ ವಾಗಿದೆ.
  • ಈ ರೋಗವು ತೀವ್ರ ಗಾಯವಾದಾಗ ಚರ್ಮಸೀಳಿದಾಗ ಬರುವುದು. ಹರಿದ ,ಕತ್ತರಿಸಿದ, ತೆರೆದ ಗಾಯದ ಪರಿಣಾಮವಾಗಿ ಟೆಟನೆಸ್ ಬರಬಹುದು.
  • ಇತರೆ ಟೆಟನಸ್ ಬರಬಹುದಾದ ಗಾಯಗಳಲ್ಲಿ ಕೆಳಗಿನವೂ ಸೇರಿವೆ:
  • ಶಸ್ತ್ರ ಚಿಕಿತ್ಸೆ,
  • ಜಜ್ಜಿದ ಗಾಯ
  • ಕುರು,
  • ಹೆರಿಗೆ, ಮತ್ತು
  • ಮಾದಕ ವಸ್ತು ಬಳಕೆದಾರರು (ಸೂಜಿ ಚುಚ್ಚುವ ಸ್ಥಳ).
  • ಮೃತ ಅಂಗಾಂಶಗಳಿಂದಾದ ಗಾಯ (ಉದಾಹರಣರಣೆ: ಸುಟ್ಟಗಾಯ,ಅಥವ ಜಜ್ಜಿದ ಗಾಯ) ಅಥವ ಅನ್ಯ ವಸ್ತುಗಳು (ಕಲ್ಮಶಯುಕ್ತ) ಟೆಟನಸ್ ಬರಲು ಅವಕಾಶ ನೀಡುತ್ತವೆ.
  • ಯಾರು ನಿರೋಧತೆ ಯ ನ್ನು ಪಡೆದಿರುವುದಿಲ್ಲವೋ ಅವರಲ್ಲಿ ಟೆಟನಸ್ ಬರುವುದು ಅಥವ ಸಾಕಷ್ಟು ನಿರೋಧತೆಗಾಗಿ ಸಕ್ರಿಯವಾದ ವ್ಯಾಕ್ಸಿನ್ ಬೂಸ್ಟರ್ ಡೋಜು ಪಡೆಯದವರು ಟೆಟನಸ್ ಗೆ ಗುರಿಯಾಗುವರು.

ಟೆಟನಸ್ ಲಕ್ಷಣಗಳು

ಸಾಮಾನ್ಯವಾದ ಟೆಟನಸ್ ನ , ಪ್ರಾರಂಭಿಕ ಲಕ್ಷಣಗಳು ಹೀಗಿರುತ್ತವೆ

  • ಕಿರಿಕಿರಿ, ಸ್ನಾಯು ಸೆಳೆತ, ಸ್ನಾಯು ನೋವು, ಸುಸ್ತು ಅಥವ ನುಂಗುವಾಗ ತೊಂದರೆ ಸಾಮನ್ಯ ಲಕ್ಷಣಗಳು.
  • ಮುಖದ ಸ್ನಾಯುಗಳು ಮೊದಲು ಬಲಿಯಾಗುತ್ತವೆ. ಟ್ರಿಸ್ಮಸ್ ಅಥವ ಹಿಡಿದ ದವಡೆ ಸಾಮಾನ್ಯ. ಈ ಪರಿಸ್ಥಿತಿಗೆ ಅಗಿಯಲು ಬಳಸುವ ದವಡೆಯ ಸ್ನಾಯುಗಳ ಸೆಳೆತ ಕಾಣಬಹುದು .
  • ಸ್ನಾಯು ಸೆಳೆತವು ಕ್ರಮವಾಗಿ ಹೆಚ್ಚುತ್ತಾ ಹೋಗುವುದು. ಅದು ಬೆನ್ನು ಬಿಲ್ಲಿನಂತೆ ಬಾಗುವ ಅಪಿಸ್ತೊಟೊನಸ್ ರೋಗಕ್ಕೆ ಕಾರಣವಾಗುವುದು. ಸ್ನಾಯು ಸೆಳೆತವು ಬಹು ತೀವ್ರವಾಗಿರುತ್ತವೆ. ಅದರಿಂದ ಮೂಳೆ ಮುರಿತ ಮತ್ತು ಕೀಲು ತಪ್ಪುವ ಸಂಭವ ಇದೆ.
  • ತೀವ್ರವಾದ ಸೆಳೆತದಿಂದ ಧ್ವನಿ ತಂತುಗಳು ಅಥವ ಉಸಿರಾಟಕ್ಕೆ ಸಂಬಂಧಿಸಿದ ಸ್ನಾಯುಗಳು ತೊಂದರೆಗೆ ಈಡಾಗಬಹುದು.
  • ಸೆಫಲಿಕ್ ಟೆಟನಸ್ ಆದಾಗ ದವಡೆ ಲಾಕ್ ಅಗುವುದಲ್ಲದೆ ಇನ್ನೂ ಒಂದು ಸ್ನಾಯು ತೊಂದರೆಗೆ ಒಳಗಾಗಬಹುದು. ಬಹು ಪಾಲ ಅದು ಸಾಮಾನ್ಯ ಟೆಟನಸ್ ಆಗಬಹುದು.
  • ಸ್ಥಳೀಯ ಟೆಟನ ಸ್ ನಲ್ಲಿ, ಗಾಯದ ಹತ್ತಿರವಿದ್ದ ಸ್ನಾಯು ಸೆಳೆತ ಪೂರ್ತಿ ದೇಹವನ್ನು ವ್ಯಾಪಿಸಬಹುದ. .
  • ನವಜಾತ (ನಿಯೋ ನೇಟಲ್) ಟೆಟನಸ್ ಸಾಮಾನ್ಯ ಟೆಟನಸ್ ನಂತೆಯೆ ಇರುವುದು. ಆದರೆ ಇದು ಶಿಶುಗಳಿಗೆ ಸೀಮಿತ. ಇದರಿಂದ ಮಕ್ಕಳಿಗೆ ಕಿರಕಿರಿ ಮತ್ತು ಹಾಲು ಹೀರಲು ಮತ್ತು ನುಂಗಲು ತೊಂದರೆಯಾಗುವುದು).

ಟೆಟನಸ್ ತಡೆಗಟ್ಟುವಿಕೆ.

  • ಟೆಟನಸ್ಅನ್ನು ಸಕ್ರಿಯ ಚುಚ್ಚುಮದ್ದು (ಇಮ್ಯುನೈಜೇಷನ್) ನಿಂದ ತಡೆಯಬಹುದು . ಟೆಟನಸ್ ಟೆಕ್ಸಾಯಿಡ್ ಸುರಕ್ಷಿತ ಎಂದು 1920ರಲ್ಲಿ ಅದನ್ನು ಕಂಡುಹಿಡಿದಾಗಿನಿಂದ ಸಿದ್ಧವಾಗಿದೆ. ಟೆಟನಸ್ ಟೆಕ್ಸಾಯಿಡ್ ನಲ್ಲಿ ಕ್ರಿಯಾಶೀಲವಲ್ಲದ ಟೆಟನಸ್ ಟಾಕ್ಸಿನ್ಅನ್ನು ರಸಾಯನಿಕಗಳೊಂದಿಗೆ ಬೆರಸಿ ಅಥವ ಬಿಸಿ ಮಾಡಿ ಅದರ ಪರಿಣಾಮವನ್ನು ಕಡಿಮೆ ಮಾಡಿರುವರು. ಆದರೆ ಅದರ ಆಂಟಿಜನಿಕ್ ಪರಣಾಮ ಇರುವುದು.
  • ಟೆಟನಸ್ ಟಕ್ಸಾಯಿಡ್ ತನ್ನಿಂದ ತಾನೆ ಸಿಗುತ್ತದೆ ಅಥವ ಮೂರು ವ್ಯಾಕ್ಸಿನುಗಳಲ್ಲಿನ ಒಂದು ಅಂಶವಾಗಿರುವುದು. ಇದನ್ನು ಡಿಫ್ತಿರಿಯಾ ಟಕ್ಸಾಯಿಡ್ ಮತ್ತು ಪೆರಟುಸಿಸ್ ವ್ಯಾಕ್ಸಿನ ಗಳ(DTP) ಜತೆ ಸೇರಿಸಿ ಮಕ್ಕಳ ಪ್ರಥಮ ಇಮ್ಯುನೈಜೇಷನ್ ಗೆ ನೀಡುವರು. ಮತ್ತು ಡಿಫ್ತಿರಿಯಾ ಟಕ್ಸಾಯಿಡ್ಕಡಿಮೆ ಮಾಡಿ ವಯಸ್ಕರಿಗೆ ಮತ್ತು ಮಕ್ಕಳಿಗೆ ಇಮ್ಯುನೈಜೇಷನ್ ಗಾಗಿ ಕೊಡುವರು .
  • ವಯಸ್ಕರಿಗೆ ಪ್ರಥಮ ಇಮ್ಯುನೈಜೇಷನ್ ಮಾಡಲು ಟೆಟನಸ್ ಟಕ್ಸಾಯಿಡ್ ಅನ್ನು ಎರಡು ಡೋಜುಗಳಲ್ಲಿ 4 ರಿಂದ 6 ವಾರಗಳ ಅಂತರದಲ್ಲಿ ನೀಡುವರು, ಮುರನೆ ಡೋಜನ್ನು 6 ರಿಂದ 12 ತಿಂಗಳ ತರುವಾಯ ನೀಡುವರು. ಬೂಷ್ಟರ್ ಡೊಜನ್ನು ಪ್ರತಿ 10 ವರ್ಷ ಗಳಿಗೊಮ್ಮೆ ನೀಡಿದರೆ ರಕ್ಷಣೆ ನೀಡುವ ಆಂಟಿ ಟಾಕ್ಸಿನ್ ಮಟ್ಟವು ಸರಿಯಾಗಿರುವುದು.
  • ಇಮ್ಯುನೈಜೇಷನ್ ಅನ್ನು ವಿಶೇಷವಾಗಿ 50 ವರ್ಷ ಮತ್ತು ಹೆಚ್ಚಿನ ವಯೋಮಾನದವರಿಗೆ ನೀಡಬೇಕು. ಇತ್ತೀಚೆಗೆ ಹೆಚ್ಚಿನ ಟೆಟನೆಸ್ ಪ್ರಕರಣಗಳು ಈ ವಯೋ ಮಾನದವರಲ್ಲಿ ಕಂಡು ಬಂದಿದೆ. ಟೆಟನಸ್‌ ಅನ್ನು ಕೆಳಕಂಡ ಸಂದರ್ಬದಲ್ಲಿ ಹಾಕಿಸಬೇಕು:
  1. ಪ್ರಾಥಮಿಕ ಬೂಷ್ಟರುಗಳ ಸರಣಿ ಹಾಕಿಸಿಕೊಂಡ ಬಗ್ಗೆ ಅನುಮಾನವಿರುವವರಿಗೆ
  2. ಬಿಸಿಯಾದ ಮತ್ತು ಶುಷ್ಕತೆಯ ಹವಾಮಾನದ ದೇಶಗಳಲ್ಲಿನ ವಿದೇಶಿ ಪ್ರಯಾಣಿಕರಿಗೆ
  3. ಮಣ್ಣು ಮತ್ತು ಗೊಬ್ಬರದಲ್ಲಿ ಕೆಲಸಮಾಡುವ ಕೃಷಿಕಾರ್ಮಿಕರಿಗೆ
  4. ಗಾಯವಾಗುವ, ತೆರಚುವ ಅಪಾಯವಿದ್ದಲ್ಲಿನ ಕೆಲಸಗಾರರಿಗೆ

ಇಮ್ಯುನೈಜೇಷನ್ ಅಗಿರದ ಗರ್ಭೀಣಿ ,ಅಶುಚಿಯಾದ ಜಾಗದಲ್ಲಿ ಹೆರಿಗೆಯಾಗುವ ಸಂಭವವಿರುವ ಮಹಿಳೆಯರಿಗೆ, ಇಮ್ಯುನೈಜೇಷನ್ ಆದ ಮೇಲೆ ಆಂಟಿಬಾಡಿಗಳು ತಾಯಿಯಿಂದ ಭ್ರೂಣಕ್ಕೆ ಮಾಸದ ಮೂಲಕ ದೊರೆಯುವುದು.

ಮೂಲ : ಈಮೆಡಿಸೀನ್ ಹೆಲ್ತ್

ಕೊನೆಯ ಮಾರ್ಪಾಟು : 2/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate