অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಾಯಿಕೆಮ್ಮು

ಇದು ಒಂದು ಬ್ಯಾಕ್ಟೀರಿಯಲ್ ಸೋಂಕು. ಮೂಗು ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಧಾರಣವಾಗಿ 2 ವರ್ಷದೊಳಗಿನ ಮಕ್ಕಳ ಶ್ವಾಸ ನಾಳದ ಮೇಲೆ ಪರಿಣಾಮ ಬೀರುವುದು. ಈ ರೋಗ ಬಂದಾಗ ಉಸಿರು ಎಳೆದೊಕೊಳ್ಳುವಾಗ ಬರುವ ಶಬ್ದದಿಂದ ಈ ಹೆಸರು ಬಂದಿದೆ.

ಕಾರಣಗಳುಬ್ಯಾಕ್ಟೀರಯಂ, ಬೊಡೆಟೆಲ್ಲ ಪರ್ಟಸಿಸ್ ಎಂಬ ರೋಗಾಣು ಇದಕ್ಕೆ ಕಾರಣ. ಇದು ಜನರ ನಡುವೆ ಉಸಿರಾಟದ ಸಮಯದಲ್ಲಿ ತುಂತುರಾಗಿ ಹರಡುವುದು. ಸೋಂಕಿತ ಜನರು ಕೆಮ್ಮಿದಾಗ ಮತ್ತು ಸೀನಿದಾಗ ಹರಡುವುದು. ಇದು ಸೋಂಕಿತ ಜೀವದ್ರವಗಳ ಮೂಗಿನ ಸ್ರಾವದ ಸಂಪರ್ಕದಿಂದಲೂ ಬರಬಹುದು

ಲಕ್ಷಣಗಳು

  • ಬ್ಯಾಕ್ಟೀರಿಯಾ ಸೋಂಕು ತಗುಲಿದ 7-17 ದಿನಗಳಲ್ಲಿ ಲಕ್ಷಣಗಳು ಕಾಣುತ್ತವೆ
  • ಲಕ್ಷಣ ಕಾಣಿಸಿದ ರೋಗಿಗಳಲ್ಲಿ ಬಹತೇಕರು 2 ವರ್ಷದ ಒಳಗಿನವರು
  • ಲಕ್ಷಣಗಳು ಕಾಣಲು ಸಾಧಾರಣವಾಗಿ 6 ವಾರ ಬೇಕು, ಅದು ಮೂರು ಹಂತದಲ್ಲಿರುವುದು:

ಹಂತ 1 : ಸೀನುವುದು, ಕಣ್ಣಲ್ಲಿ ನೀರು ಬರುವುದು, ಮೂಗುಸೋರುವುದು ,ಹಸಿವೆ ಇಲ್ಲದಿರುವುದು, ಶಕ್ತಿ ನಷ್ಟ, ರಾತ್ರಿಯಲ್ಲಿ ಕೆಮ್ಮು ಗಳಂತಹ ಲಕ್ಷಣಗಳನ್ನು ಕಾಣಬಹುದಾಗಿದೆ.

ಹಂತ 2 : ಜೋರಾದ ತಡೆರಹಿತ ಕೆಮ್ಮು ಜೊತೆಗೆ ಗಾಳಿ ಒಳಗೆ ತೆಗೆದುಕೊಂಡಾಗ ಸೆಳೆವ ಶಬ್ದ.

ಹಂತ 3 :ಸುಧಾರಣೆಯ ಹಂತ ಕೆಮ್ಮು ಮೊದಲಿನಷ್ಟು ತೀವ್ರ ವಲ್ಲ, ಜಾಸ್ತಿಯೂ ಇಲ್ಲ. ಈ ಹಂತವು ಸಾಧಾರಣ ವಾಗಿ 4ನೆ ವಾರದ ನಂತರ ಬರುವುದು.

  • ಎಳೆಯ ರೋಗಿಗಳಲ್ಲಿ ಕೆಮ್ಮು 2 ವಾರಕ್ಕಿಂತ ಹೆಚ್ಚು ಮುಂದುವರೆದರೆ ನಾಯಿಕೆಮ್ಮು ಎಂದು ಅನುಮಾನ ಪಡಬಹುದು.

ತಡೆಗಟ್ಟುವಿಕೆ

  • ಪರ್ಟುಸಿಸ್ ವ್ಯಾಕ್ಸನ್ನಿಂದ ಇಮ್ಯುನೈಜೇಷನ್ ಎಲ್ಲ ಶಿಶುಗಳಿಗೂ ಮಾಡಿಸಬೇಕು. ಇದು ಸಾಧಾರಣವಾಗಿ DTP (ಡಿಫ್ತೀರಿಯಾ,ಟೆಟನಸ್, ಮತ್ತು ಪರ್ಟಸಿಸ್) ಒಟ್ಟಾದ ವ್ಯಾಕ್ಸಿನ್.
  • ಮೊದಲು ನೀಡಿದ ವ್ಯಾಕ್ಸಿನ್ ಆಗಲಿ ಇಲ್ಲವೆ ಈಗಾಗಲೇ ಬಂದಿರುವ ಸೋಂಕಾಗಲಿ ಆಜೀವ ನಿರೋಧತೆ ನೀಡುವುದಿಲ್ಲ‘. ಆದರೂ 6 ವರ್ಷದ ನಂತರ ಇದನ್ನು ಕೊಡಬಾರದು. ಸೋಂಕು ತಗುಲಿದ್ದರೆ ವಿನಾಯತಿ ಇದೆ,
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate