ತಲೆನೋವು: ಯಾವಾಗಲಾದರೊಮ್ಮೆ ಬಹಳಷ್ಟು ಜನರಿಗೆ ತಲೆನೋವು ಕಾಣಿಸಿಕೊಂಡಿರುತ್ತೆ. ಕೆಲವು ತಲೆನೋವು ತುಂಬ ತ್ರಾಸದಾಯಕವಾಗಿರುತ್ತದೆ. ಬಹುತೇಕ ತಲೆನೋವುಗಳು ತಾತ್ಕಾಲಿಕ.ಸಾಮಾನ್ಯವಾಗಿ ತಲೆನೋವು ತಾತ್ಕಾಲಿಕವಾದದ್ದು ಮತ್ತು ತನ್ನಷ್ಟಕ್ಕೆ ತಾನೆ ಗುಣವಾಗುವಂತಹದ್ದು. ತಲೆನೋವು ನಿಮ್ಮನ್ನು ತುಂಬ ಕಾಡುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಲು ಹಿಂಜರಿಕೆ ಬೇಡ. ಜ್ವರದೊಂದಿಗೆ ಪದೇಪದೇ ತೀವ್ರವಾದ ತಲೆನೋವು ಬರುತ್ತಿದ್ದರೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವುದು ಒಳಿತು.
ತಲೆನೋವನ್ನು ಗಂಭೀರವಾಗಿ ಪರಿಗಣಿಸಬೇಕಾದದ್ದು ಯಾವಾಗ
ಪ್ರತಿ ತಲೆನೋವಿಗೂ ವೈದ್ಯರ ಮಧ್ಯಪ್ರವೇಶ ಅಗತ್ಯವಿಲ್ಲ. ಕೆಲವು ತಲೆನೋವುಗಳು ಊಟಮಾಡದೇ ಇರುವುದರಿಂದ ಅಥವಾ ಸ್ನಾಯು ಸೆಳೆತದಿಂದ ಉಂಟಾಗಿರಬಹುದು. ಅವುಳಿಗೆ ಮನೆಯಲ್ಲೇ ಶುಶ್ರೂಷೆ ಮಾಡಿಕೊಳ್ಳಬಹುದು. ಬೇರೆ ತಲೆನೋವುಗಳು ಗಂಭೀರ ಸ್ವರೂಪದ ಕಾಯಿಲೆಯ ಚಿಹ್ನೆಗಳು. ಅವುಗಳಿಗೆ ತಕ್ಷಣವೇ ವೈದ್ಯಕೀಯ ನೆರವು ಅಗತ್ಯ. ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ನೀವು ತುರ್ತು ವೈದ್ಯಕೀಯ ನೆರವು ಪಡೆಯಬೇಕು. ಕಾರಣ ತಿಳಿಯದ ತೀವ್ರ, ಹಠಾತ್ ತಲೆನೋವು, ‘ಇಂತಹ ತಲೆನೋವು ನನ್ನ ಜೀವನದಲ್ಲೇ ಬಂದಿಲ್ಲ’ ಅಂತೀರಲ್ಲ ಅಂತಹ ತಲೆನೋವು.
ತಲೆನೋವಿನ ಈ ಲಕ್ಷಣಗಳೂ ಕಂಡುಬಂದರೆ ನೀವು ತಕ್ಷಣ ವೈದ್ಯರ ನೆರವು ಪಡೆಯಬೇಕು:
ರೋಗಪತ್ತೆ
ಬಹುತೇಕ ತಲೆನೋವುಗಳು ಗಂಭೀರ ಕಾರಣಗಳಿಂದ ಉಂಟಾದವುಗಳಲ್ಲ. ಸುಲಭವಾಗಿ ಲಭ್ಯವಿರುವ ಔಷಧಗಳಿಂದಲೇ ಅವುಗಳಿಗೆ ಚಿಕಿತ್ಸೆ ನೀಡಬಹುದು. ಮೈಗ್ರೇನ್ ಮತ್ತಿತರ ತಲೆನೋವುಗಳಿಗೆ ಮಾತ್ರ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುವುದು ಉತ್ತಮ.
ತಲೆನೋವಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ
ಉದ್ವೇಗದ ತಲೆನೋವು
ಸೈನಸ್ ತೊಂದರೆಗಳು
ಸೈನಸ್ ಅಲರ್ಜಿ ಅಥವಾ ಸೋಂಕಿನಿಂದ ಸೈನಸ್ ತಲೆನೋವು ಬರಬಹುದು. ಸಾಮಾನ್ಯವಾಗಿ ಶೀತ ಅಥವಾ ಫ್ಲೂ ಬಂದಾಗ ಸೈನಸ್ ತಲೆನೋವು ಬರಬಹುದು. ನಿಮ್ಮ ಮೂಗಿನ ಹಿಂಭಾಗದ ವಾಯು ಕುಹರ ಮತ್ತು ಸೈನಸ್ ನಾಳದಲ್ಲಿನ ಉರಿಯೂತದಿಂದ ಈ ತಲೆನೋವು ಬರುತ್ತದೆ. ಸೈನಸ್ ನಾಳವು ಮುಚ್ಚಿದಾಗ ಅಥವಾ ಸೋಂಕಿಗೀಡಾದಾಗ ಒತ್ತಡ ಹೆಚ್ಚಿ ತಲೆನೋವಿಗೆ ಕಾರಣವಾಗುತ್ತದೆ. ಸೈನಸ್ ತಲೆನೋವು ಸಾಮಾನ್ಯವಾಗಿ ಸತತವಾಗಿ ಮತ್ತು ತೀವ್ರವಾಗಿರುತ್ತದೆ. ಬೆಳ್ಳಂಬೆಳಿಗ್ಗೆಯೇ ಶುರುವಾಗುವ ಈ ನೋವು ಮುಂದಕ್ಕೆ ಬಾಗಿದರೆ ತಲೆಭಾರವಾಗಿ ನೋವು ಜಾಸ್ತಿಯಾಗುತ್ತದೆ.
ಸಾಮಾನ್ಯ ಸೈನಸ್ ತಲೆನೋವಿನ ಲಕ್ಷಣಗಳು:
ಮೈಗ್ರೇನ್ ತಲೆನೋವು
ಮೈಗ್ರೇನ್ ತಲೆನೋವಿನ ಲಕ್ಷಣಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗುತ್ತವೆ. ಆದರೆ ಅವು ಸಾಮಾನ್ಯವಾಗಿ ಅರೆ ತಲೆನೋವು ಮತ್ತು ಪೂರ್ಣತಲೆನೋವು ಮತ್ತಿತರೆ ಲಕ್ಷಣಗಳನ್ನು ಹೊಂದಿರುತ್ತದೆ. ವಾಕರಿಕೆ ಮತ್ತು ವಾಂತಿಯೂ ಕೂಡ ಹೊಂದಿರಬಹುದು. ಕಣ್ಣು ಕತ್ತಲಿಡುವುದು, ಜ್ವರ ಮತ್ತು ಚಳಿ ಕಣ್ಣು ಕುಕ್ಕುವುದು ಮುಂತಾದ ಲಕ್ಷಣಗಳಿರುತ್ತವೆ.
ಸಾಮಾನ್ಯ ಮೈಗ್ರೇನ್ ಲಕ್ಷಣಗಳು:
ಗಮನಿಕೆ: ತಲೆನೋವು ವಿಪರೀತ ಇದ್ದರೆ, ಅದರ ಲಕ್ಷಣಗಳು, ತಲೆನೋವಿನ ತೀವ್ರತೆ ಮತ್ತು ನೀವು ತಲೆನೋವನ್ನು ಹೇಗೆ ನಿಭಾಯಿಸಿದಿರಿ ಎಂಬುದನ್ನು ನೆನಪಿಟ್ಟುಕೊಳ್ಳಿ ಅಥವಾ ಒಂದು ಕಡೆ ನಮೂದಿಸಿಕೊಳ್ಳಿ ವೈದ್ಯರ ಬಳಿ ಹೋಗುವಾಗ ಅದನ್ನು ನಿಮ್ಮೊಂದಿಗೆ ಒಯ್ಯಿರಿ.
ಕೂದಲು ಉದುರುವಿಕೆ
ಹಾಗೆಂದರೇನು
ಕೂದಲು ಉದುರುವಿಕೆಯ ತೀವ್ರತೆಯನ್ನು ಎರಡು ರೀತಿಯಲ್ಲಿರಬಹುದು. ದಿನದಿಂದ ದಿನಕ್ಕೆ ಸ್ವಲ್ಪ ತೆಳುವಾಗುವುದರಿಂದ ಹಿಡಿದು ಸಂಪೂರ್ಣ ಬೊಕ್ಕತಲೆಯಾಗಬಹುದು. ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ:
ಲಕ್ಷಣಗಳು
ಸಾಮಾನ್ಯವಾಗಿ ಪ್ರತಿದಿನ ೫೦ ರಿಂದ ೧೦೦ ಕೂದಲು ಉದುರುತ್ತವೆ. ಇದಕ್ಕಿಂತ ಹೆಚ್ಚು ಉದುರಿದರೆ ಅದರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಾದದ್ದು ಅಗತ್ಯ. ಕೂದಲು ತೆಳುವಾಗಿರಬಹುದು ಅಥವಾ ಅಲ್ಲಲ್ಲಿ ಬೊಕ್ಕತಲೆ ಕಾಣುತ್ತಿರಬಹುದು.
ತಡೆಗಟ್ಟವಿಕೆ
ಒತ್ತಡ ಕಡಿಮೆ ಮಾಡಿಕೊಳ್ಳುವುದು, ಆರೋಗ್ಯಪೂರ್ಣ ಆಹಾರ ಸೇವನೆ, ಕೂದಲು ಉದುರುವಿಕೆಗೆ ಕಾರಣವಾದ ಔಷಧವನ್ನು ಬದಲಿಸುವುದು ಮುಂತಾದ ಕ್ರಮಗಳಿಂದ ಸ್ವಲ್ಪಪ್ರಮಾಣದ ಕೂದಲು ಉದುರುವಿಕೆಯನ್ನು ತಡಗಟ್ಟಬಹುದು. ಕೂದಲನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರಿಂದ, ಒಬ್ಬರ ಟೋಪಿ, ಬಾಚಣಿಗೆ ಅಥವಾ ಬ್ರಷ್‌ಗಳನ್ನು ಮತ್ತೊಬ್ಬರು ಬಳಸದೇ ಇರುವುದರಿಂದ, ಫಂಗಲ್ ಸೋಂಕಿನಿಂದ ಉಂಟಾಗುವ ಕೂದಲು ಉದುರುವಿಕೆಯನ್ನು ತಡೆಯಬಹುದು. ವಂಶಪಾರಂಪರ್ಯವಾಗಿ ಉಂಟಾಗುವ ಕೂದಲು ಉದುರುವಿಕೆಯನ್ನು ಔಷಧ ನೀಡಿಕೆಯಿಂದ ತಡೆಗಟ್ಟಬಹುದು.
ಸಾಮಾನ್ಯ ಶೀತ ಹರಡುವುದು ಹೇಗೆ ಸಾಮಾನ್ಯ ಶೀತವು ಕೈಯಿಯ ಸಂಪರ್ಕದಿಂದ ಬರುತ್ತದೆ. ಉದಾಹರಣೆಗೆ ಮೂಗನ್ನು ಸೀದುವಾಗ ತನ್ನ ಮೂಗನ್ನು ಮುಟ್ಟಿದ ವ್ಯಕ್ತಿಯು ಅದೇ ಕೈಯಿಂದ ಮತ್ತೊಬ್ಬರನ್ನು ಮುಟ್ಟಿದಾಗ ವೈರಸ್ ಹರಡುತ್ತದೆ. ಅಲ್ಲದೆ, ಪೆನ್, ಬುಕ್ ಮತ್ತು ಕಾಫಿ ಕಪ್‌ಗಳಂತಹ ವಸ್ತುಗಳ ಮೇಲೆ ಈ ವೈರಸ್ ಗಂಟೆ ಗಟ್ಟಲೆ ಜೀವಂತವಾಗಿರುತ್ತದೆ. ಹಾಗಾಗಿ ಇಂತಹ ವಸ್ತುಗಳಿಂದಲೂ ಕೂಡ ಸೋಂಕು ಉಂಟಾಗುತ್ತದೆ. ಕೆಮ್ಮು ಮತ್ತು ಸೀನುವಿಕೆಯಿಂದ ಸಾಮಾನ್ಯವಾಗಿ ಶೀತ/ನೆಗಡಿ ಹರಡುತ್ತದೆ ಎಂದು ಎಲ್ಲರ ಅನಿಸಿಕೆ ಆದರೆ ಇವುಗಳಿಂದ ಹರಡುವುದು ತೀರ ಅಪರೂಪ.ಶೀತ ಹವಾಮಾನಕ್ಕೆ ತೆರೆದುಕೊಳ್ಳುವುದರಿಂದ ಶೀತವಾಗುತ್ತದೆಯೇ ತಣ್ಣಗಿನ ವಾತಾವರಣದಲ್ಲಿ ಹೊರಗೆ ಹೋಗುವುದರಿಂದ ಶೀತವಾಗುವುದಿಲ್ಲ. ಚಳಿಗಾಲ ಮತ್ತು ತಣ್ಣಗಿನ ದಿನಗಳಲ್ಲಿ ಜನರು ಮನೆಯೊಳಗೇ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆದರೆ. ಹೊರಗಿನ ತಂಪಾದ ಹವೆಗಿಂತ, ಜನರೊಡನೆ ಹೆಚ್ಚು ಬೆರೆಯುವುದು, ಮನೆಯೊಳಗೇ ಇರುವುದೇ ಶೀತಕ್ಕೆ ಕಾರಣ. ಹಾಗಾಗಿ ಡೇಕೇರ್ ಮತ್ತು ಕಿಂಡರ್‌ಗಾರ್ಡನ್‌ಗೆ ಶಾಲೆಗೆ ಹೋಗುವ ಮಕ್ಕಳಿಗೆ ನೆಗಡಿಯಾಗುವುದು ಹೆಚ್ಚು.
ಶರೀರದಲ್ಲಿ ಹರಿಯುತ್ತಿರುವ ರಕ್ತವು ರಕ್ತ ನಾಳಗಳ ಗೋಡೆಯ ಮೇಲೆ ಹಾಕುವ ಒತ್ತಡಕ್ಕೆ ರಕ್ತದೊತ್ತಡ ಎನ್ನುತ್ತಾರೆ. ಅಪಧಮನಿಗಳು ಪಂಪ್ ಮಾಡುವ ರಕ್ತವು ಹೃದಯದಿಂದ ದೇಹದ ಎಲ್ಲ, ಅಂಗಾಂಶಗಳಿಗೆ, ಅಂಗಗಳಿಗೆ ರಕ್ತವನ್ನು ಒಯ್ಯುತ್ತವೆ. ಹೃದಯವು ಅಪಧಮನಿಗಳಿಗೆ ಪಂಪುಮಾಡುವುದರಿಂದ ರಕ್ತದ ಒತ್ತಡ ಉಂಟಾಗುತ್ತದೆ. ಅಪಧಮನಿಗಳಲ್ಲಿ ಹರಿಯುವ ರಕ್ತದ ಪ್ರತಿಕ್ರಿಯೆಯು ಅದನ್ನು ನಿಯಂತ್ರಿಸುವುದು. ಸಾಂಪ್ರದಾಯಿಕವಾಗಿ ರಕ್ತದ ಒತ್ತಡವು ೧೨೦/೮೦ ಎಂದು ಗುರುತಿಸಲಾಗುವುದು. ಉದಾ: ಒಬ್ಬ ವ್ಯಕ್ತಿಯ ರಕ್ತದ ಒತ್ತಡವನ್ನು ಸಿಸ್ಟೊಲಿಕ್ /ಡಯಸ್ಟಾಲಿಕ್ ಎಂದು ಹೇಳುವರು. ಉದಾ:. ೧೨೦/೮೦. ಸಿಸ್ಟೊಲಿಕ್ ರಕ್ತದ ಒತ್ತಡವು (ಮೇಲಿನದು) ಅಪಧಮನಿಗಳಲ್ಲಿನ ಒತ್ತಡವನ್ನು ಹೃದಯದ ಸ್ನಾಯುಗಳು ಸಂಕುಚಿತಗೊಂಡು ಅವುಗಳಲ್ಲಿ ರಕ್ತವನ್ನು ಪಂಪು ಮಾಡಿದಾಗ ಉಂಟಾಗುವುದು. ಡಯಸ್ಟಾಲಿಕ್ ರಕ್ತದ ಒತ್ತಡವು (ಕೆಳಗಿನ ಸಂಖ್ಯೆ) ಅಪಧಮನಿಗಳಲ್ಲಿ ಹೃದಯವು ವಿಕಸನಗೊಂಡಾಗಿನ ಒತ್ತಡವನ್ನು ಸೂಚಿಸುವುದು. ರಕ್ತದ ಒತ್ತಡವು ಹೃದಯವು ಪಂಪು ಮಾಡುವಾಗ, ರಿಲ್ಯಾಕ್ಸ ಆದಾಗಿನಕ್ಕಿಂತ ಹೆಚ್ಚಿರುವುದು.ಸಿಸ್ಟೊಲಿಕ್ ರಕ್ತದ ಒತ್ತಡವು ಆರೋಗ್ಯವಂತ ವಯಸ್ಕನಲ್ಲಿ 90 ಮತ್ತು 120 ಮಿಲಿಮೀಟರ್ ಪಾದರಸದ ಮಟ್ಟ ಇರುವುದು. ಸಾಧಾರಣ ಡಯಸ್ಟಾಲಿಕ್ ರಕ್ತದ ಒತ್ತಡವು 60 ಮತ್ತು 80 ಮಿ ಮಿ ಪಾದರಸದ ಮಟ್ಟದ ನಡುವೆ ಇರುವುದು. ಇತ್ತೀಚಿನ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಕ್ತದೊತ್ತಡವು 120/80 (mm Hg) ಗಿಂತ ಕಡಿಮೆ ಇರಬೇಕು.
ಕಡಿಮೆ ರಕ್ತದ ಒತ್ತಡ ಎಂದರೇನು
ಕಡಿಮೆ ರಕ್ತದ ಒತ್ತಡ (ಹೈಪೊ ಟೆನಷನ್) ಒತ್ತಡವು ಅತಿ ಕಡಿಮೆಯಾಗಿ ರಕ್ತದ ಪ್ರವಾಹವು ಅಪಧಮನಿ ಮತ್ತು ಅಭಿದಮನಿಗಳಲ್ಲಿ ರಕ್ತದ ಪ್ರವಾಹವು ಕಡಿಮೆಯಾಗಿ ಈ ಚಿಹ್ನೆಗಳನ್ನು, ಲಕ್ಷಣಗಳನ್ನು ತೋರಿಸುವುದು. ರಕ್ತದ ಹರಿಯುವಿಕೆಯು ತುಂಬ ಕಡಿಮೆ ಆದಾಗ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಅತಿ ಮುಖ್ಯ ಅಂಗಗಳಾದ, ಮೆದುಳು, ಹೃದಯ, ಮೂತ್ರಪಿಂಡಗಳಿಗೆ ಒದಗಿಸುವಲ್ಲಿ ವಿಫಲವಾಗುವುದು. ಆ ಅಂಗಗಳು ಸಾಮನ್ಯವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಮತ್ತು ಅವು ಶಾಶ್ವತವಾಗಿ ಹಾಳಾಗಬಹುದು.ಕಡಿಮೆ ರಕ್ತದ ಒತ್ತಡವು, ಹೆಚ್ಚಿದ ರಕ್ತದ ಒತ್ತಡದಂತೆ ಅಲ್ಲ. ಅದು ಮುಖ್ಯವಾಗಿ ಚಿಹ್ನೆ ಮತ್ತು ಲಕ್ಷಣಗಳಿಂದ ಗೋಚರವಾಗುವುದು. ನಿರ್ಧಿಷ್ಟ ಒತ್ತಡದ ಸಂಖ್ಯೆಯಿಂದ ಅಲ್ಲ. ಕೆಲವು ಜನರ ರಕ್ತದ ಒತ್ತಡವು 90/50ಇದ್ದರೂ ಯಾವುದೆ ಲಕ್ಷಣ ಕಾಣದೇ ಇರಬಹುದು. ಇನ್ನು ಕೆಲವರಲ್ಲಿ ಹೆಚ್ಚಿದ ರಕ್ತದ ಒತ್ತಡದವರಲ್ಲಿ ಒತ್ತಡವು 100/60 ಆದಾಗ ಕಡಿಮೆ ರಕ್ತದ ಒತ್ತಡದ ಲಕ್ಷಣಗಳನ್ನು ತೋರಬಹುದು. .ತಲೆ ಹಗುರವಾದಂತಾಗುವುದು, ತಲೆ ಸುತ್ತುವುದು, ಅಥವ ನಿಂತಾಗ ಎಚ್ಚರ ತಪ್ಪುವುದು ಕಡಿಮೆ ರಕ್ತದ ಒತ್ತಡದಿಂದ ಆದ ಆರ್ಥೋ ಸ್ಟಾಟಿಕ್ ಹೈಪರ್ ಟೆನ್ಷನ್ ಎನ್ನುವರು. ಸಾಮಾನ್ಯ ಜನರು ನಿಂತಾಗ ಆಗುವ ಕಡಿಮೆ ರಕ್ತದ ಒತ್ತಡದ ಪ್ರಭಾವದಿಂದ ಬೇಗ ಹೊರಬರುವರು. ಕಾರೊನರಿ ಅಪಧಮನಿಗೆ ರಕ್ತ ಸರಬರಾಜು ಮಾಡಲು ಸಾಕಷ್ಟು ಒತ್ತಡವಿರದಿದ್ದರೆ (ಹೃದಯದ ಸ್ನಾಯುಗಳಿಗೆ ರಕ್ತ ಸರಬರಾಜು ಮಾಡುವ ಅಪಧಮನಿಗಳು), ಆ ವ್ಯಕ್ತಿಗೆ ಎದೆ ನೋವು ಬರವುದು ಅಥವ ಕೆಲವು ಸಲ ಹೃದಯಾಘಾತ ಆಗಬಹುದು. ಮೂತ್ರ ಪಿಂಡಗಳಿಗೆ ರಕ್ತದ ಕೊರತೆ ಆದರೆ, ಅವುಗಳು ವಿಫಲವಾಗುವವು. ಅವು ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲಾರವು. ಉದಾ: ಯೂರಿಯಾ, ಕ್ರಿಯಾಟಿನೈನ್ ಗಳು. ರಕ್ತದಲ್ಲಿ ಅವುಗಳ ಮಟ್ಟ ಹೆಚ್ಚಾಗುವುದು. ಅದರಿಂದ ಜೀವಕ್ಕೆ ಅಪಾಯ ತರುವ ಷಾಕ್ ಅಗುವುದು. ಸತತ ಕಡಿಮೆ ರಕ್ತದ ಒತ್ತಡವು ಮೂತ್ರ ಪಿಂಡಗಳು, ಪಿತ್ತಜನಕಾಂಗ, ಶ್ವಾಸ ಕೋಶ, ಮತ್ತು ಮೆದುಳು ವೈಫಲ್ಯಕ್ಕೆ ಕಾರಣವಾಗುವುದು
ಹೆಚ್ಚಿದ ರಕ್ತದ ಒತ್ತಡ ಎಂದರೇನು
ರಕ್ತದ ಒತ್ತಡವು130/80 ಕ್ಕೂ ಹೆಚ್ಚಾಗಿದ್ದರೆ ಹೆಚ್ಚಿದ ರಕ್ತದ ಒತ್ತಡ (hbp)ಅಥವಾ ಹೈಪರ್ ಟೆನಷನ್ ಎನ್ನುವರು. ಹೆಚ್ಚಿದ ರಕ್ತದ ಒತ್ತಡ ಎಂದರೆ ಅಪಧಮನಿಗಳಲ್ಲಿ ಹೆಚ್ಚಿದ ಒತ್ತಡ. ಹೆಚ್ಚಿದ ರಕ್ತದ ಒತ್ತಡ ಎಂದರೆ ಹೆಚ್ಚಾದ ಮಾನಸಿಕ ಒತ್ತಡ ಅಲ್ಲ. ಆದರೂ ಮಾನಸಿಕ ಒತ್ತಡವು ತಾತ್ಕಾಲಿಕವಾಗಿ ರಕ್ತದ ಒತ್ತಡವನ್ನು ಹೆಚ್ಚಿಸುವುದು. ಸಾಧಾರಣ ರಕ್ತದ ಒತ್ತಡವು 120/80 ಗಿಂತ ಕಡಿಮೆ ಇರುವುದು. 120/80 ಮತ್ತು 139/89 ನಡುವೆ ಇದ್ದರೆ “ಪ್ರಿ-ಹೈಪರ್ ಟೆನಷನ್“ ಹಂತ ಎನ್ನುವರು. ರಕ್ತದ ಒತ್ತಡವು 140/90 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಏರಿದ ರಕ್ತದ ಒತ್ತಡ ಎನ್ನುವರು. ಹೆಚ್ಚಿದ ರಕ್ತದ ಒತ್ತಡವು ಹೃದಯ ರೋಗ, ಮೂತ್ರ ಪಿಂಡಗಳ ವ್ಯಾಧಿ, ಅಪಧಮನಿಗಳು ಗಡುಸಾಗುವುದು, ಕಣ್ಣುಗಳು ಹಾಳಾಗುವುದು ಮತ್ತು ಮೆದುಳು ಹಾಳಾಗಬಹುದು. ಹೆಚ್ಚಿದ ರಕ್ತದ ಒತ್ತಡವನ್ನು ಪತ್ತೆ ಮಾಡುವುದು ಬಹಳ ಮುಖ್ಯ. ಅದರಿಂದ ಹೆಚ್ಚಿದ ರಕ್ತದ ಒತ್ತಡವನ್ನು ಸಾಧಾರಣ ಮಟ್ಟಕ್ಕೆ ತರಲು ಪ್ರಯತ್ನಿಸಬಹುದು ಮತ್ತು ಸಮಸ್ಯೆಗಳನ್ನು ನಿವಾರಿಸಬಹುದು..
ಥೈರಾಯಿಡ್ ಅನ್ನು ಅರಿಯುವುದು
ಥೈರಾಯಿಡ್ ಒಂದು ಚಿಕ್ಕ ಗ್ರಂಥಿ. ಮಧ್ಯ ಮತ್ತು ಕೆಳ ಕುತ್ತಿಗೆಯ ಮೇಲೆ ಕುಳಿತ ಚಿಟ್ಟೆಯ ಆಕಾರದಲ್ಲಿದೆ. ಇದರ ಪ್ರಮುಖ ಕೆಲಸವೆಂದರೆ ದೇಹದ ಮೆಟಾಬಲಿಸಂ ಅನ್ನು ನಿಯಂತ್ರಿಸುವುದು (ಬದುಕಲು ಅಗತ್ಯವಾದ ಚಟುವಟಿಕೆಗಳನ್ನು ಜೀವ ಕೋಶಗಳು ನಡೆಸುವ ದರ). ಮೆಟಾಬಲಿಸಂ ಅನ್ನು ನಿಯಂತ್ರಿಸಲು ಥೈರಾಯಿಡ್ ಹಾರ್ಮೋನುಗಳನ್ನು ಉತ್ಪಾದಿಸುವುದು. ಅವು ದೇಹದ ಜೀವಕೋಶಗಳಿಗೆ ಎಷ್ಟು ಶಕ್ತಿಯನ್ನು ಉಪಯೋಗಿಸಬೇಕೆಂದು ತಿಳಿಸುವವು.
ಕ್ರಮವಾಗಿ ಕೆಲಸ ಮಾಡುವ ಥೈರಾಯಿಡ್ ಸರಿಯಾದ ಪ್ರಮಾಣದ ಹರ್ಮೋನುಗಳನ್ನು ಬಿಡುಗಡೆ ಮಾಡಿ ದೇಹದ ಮೆಟಾಬಲಿಸಂ ತೃಪ್ತಿಕರವಾಗಿ ಕೆಲಸಮಾಡುವಂತೆ ನೊಡಿಕೊಳ್ಳುವುದು. ರಕ್ತ ಪ್ರವಾಹದಲ್ಲಿನ ಹರ್ಮೋನುಗಳ ಪ್ರಮಾಣವನ್ನು ಪಿಟ್ಯುಟರಿ ಗ್ರಂಥಿಯು ನಿಯಂತ್ರಣ ಮತ್ತು ಮೇಲುಸ್ತುವಾರಿ ಮಾಡುವುದು. ಅದು ತಲೆ ಬುರುಡೆಯಲ್ಲಿ ಮೆದುಳಿನ ಕೆಳಗೆ ಇದೆ. ಅದು ಥೈರಾಯಿಡ್ ಹಾರ್ಮೋನ್ ಕೊರತೆ ಅಥವಾ ಹೆಚ್ಚಾಗಿರುವುದನ್ನು ಗುರುತಿಸಿ ತನ್ನಲ್ಲಿನ ಹಾರ್ಮೋನ್ ಅನ್ನು(ಟಿ. ಎಸ್ ಎಚ್) ಹೊಂದಾಣಿಕೆ ಮಾಡಿಕೊಂಡು ಸ್ರವಿಸುವುದು. ಅದು ಥೈರಾಯಿಡ್ ಗೆ ಹೋಗಿ ಏನು ಮಾಡಬೇಕೆಂದು ತಿಳಿಸುವುದು.
ಥೈರಾಯಿಡ್ ವ್ಯಾಧಿ ಯಾವುದು ಮತ್ತು ಅದು ಯಾರನ್ನು ಬಾಧಿಸುವುದು
ಥೈರಾಯಿಡ್ ಅತಿ ಹೆಚ್ಚು ಹಾರ್ಮೋನನ್ನು ಸ್ರವಿಸಿದರೆ ದೇಹವು ಶಕ್ತಿಯನ್ನು ವೇಗವಾಗಿ ಬಳಸುವುದು ಇದನ್ನು ಹೈಪರ್ ಥೈರಾಯಿಡಿಸಮ್ ಎನ್ನುವರು ಥೈರಾಯಿಡ್ ಅಗತ್ಯಕ್ಕಿಂತ ಕಡಿಮೆ ಹಾರ್ಮೋನನ್ನು ಸ್ರವಿಸಿದರೆ, ದೇಹವು ಶಕ್ತಿಯನ್ನು ಬಳಸುವ ವೇಗ ಕಡಿಮೆ ಆಗುವುದು. ಇದನ್ನು ಹೈಪೋ ಥೈರಾಯಿಡಿಸಂ ಎನ್ನುವರು.
ಎಲ್ಲ ವಯಸ್ಸಿನ ಜನರು ಥೈರಾಯಿಡ್ ವ್ಯಾಧಿ ಪೀಡಿತರಾಗಬಹುದು. ಆದರೂ ಹೆಂಗಸರು ಗಂಡಸರಿಗಿಂತ ಏಳರಿಂದ ಎಂಟು ಪಟ್ಟು ಹೆಚ್ಚು ಥೈರಾಯಿಡ್ ಸಮಸ್ಯೆಗೆ ಈಡಾಗುವ ಸಂಭವ ಇದೆ.
ಥೈರಾಯಿಡ್ ವ್ಯಾಧಿಗೆ ಏನು ಕಾರಣ ?
ಥೈರಾಯಿಡ್ ವ್ಯಾಧಿಗೆ ಅನೇಕ ಕಾರಣಗಳಿವೆ.ಹೈಪೊ ಥೈರಾಯಿಡಿಸಂಗೆ ಕಾರಣಗಳು ಹೀಗಿವೆ:
ಈ ಕೆಳಗಿನವು ಹೈಪರ್ ಥೈರಾಯಿಡಿಸಂಗೆ ಕಾರಣವಾಗುವು., ಗ್ರೇವ್ಸ್ ವ್ಯಾಧಿಯಿಂದಾಗಿ ಥೈರಾಯಿಡ್ ಗ್ಲಾಂಡ್ ಹೆಚ್ಚು ಚುರುಕಾಗಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾರ್ಮೋನನ್ನು ಸ್ರವಿಸುತ್ತದೆ.
ಹೈಪೊ ಥೈರಾಯಿಡಿಸಮ್ ಮತ್ತು ಹೈಪರ್ ಥೈರಾಯಿಡಿಸಮ್ ಲಕ್ಷಣಗಳಾವು?
ಕೆಳಗಿನವುಗಳು ಹೈಪರ್ಥೈರಾಯಿಡಿಸಮ್ ನ ಲಕ್ಷಣಗಳು :
ಥೈರಾಯಿಡ್ ವ್ಯಾಧಿ ಬಂದಾಗ ಬೇಗನೆ ಗಮಿನಿಸಿ , ಲಕ್ಷಣಗಳು ಇಲ್ಲದಿದ್ದಾಗ ಚಿಕಿತ್ಸೆಮಾಡಿ ಹತೋಟಿಯಲ್ಲಿ ಇಡಬಹುದು. ಥೈರಾಯಿಡ ಜೀವಮಾನ ಪೂರ್ತಿ ಇರುವುದು. ಥೈರಾಯಿಡ ವ್ಯಾಧಿ ಇರುವವರು ಆರೋಗ್ಯ ಪೂರ್ಣ ಸಾಮಾನ್ಯ ಜೀವನ ನೆಡೆಸಬಹುದು.
ಮಧುಮೇಹ
ದೇಹವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಪ್ರಕ್ರಿಯೆ ಮತ್ತು ಮಧು ಮೇಹ ಬಂದ ಮೇಲಿನ ಬದಲಾವಣೆಗಳನ್ನು ಈಕೆಳಗೆ ವಿವರಿಸಿದೆ.
ಆಹಾರವು ಗ್ಲೂಕೋಸ್ ಆಗಿ ಬದಲಾಗುವುದು: ಜಠರವು ನಾವು ತಿಂದ ಆಹಾರವನ್ನು ಗ್ಲೂಕೋಸ್ ಎಂಬ ಇಂಧನವಾಗಿ ಬದಲಾಯಿಸುವುದು. ಗ್ಲೂಕೋಸು ರಕ್ತಪ್ರವಾಹದಲ್ಲಿ ಸೇರಿ ದೇಹದಲ್ಲಿನ ಮಿಲಿಯನ್ ಗಟ್ಟಲೆ ಜೀವ ಕೋಶಗಳಿಗೆ ತಲಪುವುದು.
ಗ್ಲುಕೋಸು ಜೀವಕೋಶದಲ್ಲಿ ಪ್ರವೇಶಿಸುವುದು. : ಮೇದೋಜೀರಕವು ಇನಸುಲಿನ್ ಎಂಬ ರಸಾಯನಿಕವನ್ನು ಉತ್ಪಾದಿಸುವುದು. ಇನಸುಲಿನ್ ಸಹಾ ರಕ್ತ ಪ್ರವಾಹದಲ್ಲಿ ಸೇರಿ ಜೀವ ಕೋಶಗಳನ್ನು ತಲುಪುವುದು. ಅಲ್ಲಿ ಗ್ಲೂಕೋಸನ್ನು ಭೇಟಿಯಾಗಿ ಅದು ಜೀವಕೋಶವನ್ನು ಸೇರಲು ಸಹಾಯ ಮಾಡುವುದು.
ಜೀವ ಕೋಶಗಳು ಗ್ಲೂಕೋಸನ್ನು ಶಕ್ತಿಯಾಗಿ ಪರಿವರ್ತಿಸುವವು.: ಜೀವ ಕೋಶಗಳು ಗ್ಲುಕೋಸನ್ನು ಉರಿಸಿ ದೇಹಕ್ಕೆ ಶಕ್ತಿಯನ್ನು ಕೊಡುವವು.
ಮಧು ಮೇಹ ಬಂದಾಗ ಆಗುವ ಬದಲಾವಣೆಗಳು
ಮಧುಮೇಹದಿಂದ ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪಡೆಯುವುದು ಕಷ್ಟವಾಗುವುದು.
ಆಹಾರವು ಗ್ಲೂಕೋಸ್ ಆಗಿ ಬದಲಾಗುವುದು :ಜಠರವು ಆಹಾರವನ್ನು ಗ್ಲುಕೋಸಾಗಿ ಬದಲಾಯಿಸುವುದು. ಗ್ಲುಕೋಸು ರಕ್ತ ಪ್ರವಾಹದಲ್ಲಿ ಹೋಗುವುದು. ಆದರೆ ಹೆಚ್ಚಿನ ಪಾಲು ಜೀವ ಕೋಶವನ್ನು ಪ್ರವೇಶಿಸಲು ಸಾಧ್ಯವಾಗದೆ ಇರಬಹುದು. ಏಕೆಂದರೆ:
ಜೀವ ಕೋಶಗಳು ಗ್ಲೂಕೋಸನ್ನು ಶಕ್ತಿಯಾಗಿ ಪರಿವರ್ತಿಸುವುದಿಲ್ಲ : ಹೆಚ್ಚಿನ ಗ್ಲೂಕೋಸು ರಕ್ತ ಪ್ರವಾಹದಲ್ಲೆ ಉಳಿದುಬಿಡುವವು.ಇದನ್ನೆ ಹೈಪರ್ ಗ್ಲಿಸಿಮಿಯಾಎನ್ನುವರು ( ಹೆಚ್ಚಿದ ರಕ್ತದ ಸಕ್ಕರೆ ಅಥವ ಹೆಚ್ಚಿದ ರಕ್ತದ ಗ್ಲೂಕೋಸು ಎಂದೂ ಕರೆಯುವುರು). ಜೀವ ಕೋಶದಲ್ಲಿ ಸಾಕಷ್ಟು ಗ್ಲೂಕೋಸು ಇಲ್ಲದಿದ್ದರೆ ಜೀವಕೋಶಗಳು ದೇಹದ ಸುಗಮ ಚಲನವಲನಕ್ಕೆ ಅಗತ್ಯವಾದ ಶಕ್ತಿಯನ್ನು ಉತ್ಪಾದಿಸಲಾಗುವುದಿಲ್ಲ.
ಮಧು ಮೇಹದ ಲಕ್ಷಣಗಳು.
ಮಧು ಮೇಹ ಇರುವವರು ವಿಭಿನ್ನ ಲಕ್ಷಣಗಳನ್ನು ಹೊಂದಿರುವರು. ಅವುಗಳಲ್ಲಿ ಕೆಲವು-
ರಕ್ತದ ಸಕ್ಕರೆಯನ್ನು ಏಕೆ ನಿಯಂತ್ರಿಸಬೇಕು ?
ಬಹು ಕಾಲದ ವರೆಗಿ ರಕ್ತದಲ್ಲಿನ ಏರಿದ ಸಕ್ಕರೆಯ ಮಟ್ಟವು
ರಕ್ತದ ಒತ್ತಡದ ಬಗ್ಗೆ ಹೆಚ್ಚಿನ ಮಾಹಿತಿ
ಹೃದಯವು ಮಿಡಿದಾಗ ಅದು ರಕ್ತವನ್ನು ರಕ್ತನಾಳಗಳಿಗೆ ಪಂಪು ಮಾಡುವುದು ಮತ್ತು ಅಲ್ಲಿ ಒತ್ತಡವನ್ನು ಉಂಟುಮಾಡುವುದು. ಆರೋಗ್ಯವಂತರ ರಕ್ತನಾಳಗಳು ಸ್ಥಿತಿ ಸ್ಥಾಪಕ ಗುಣವನ್ನು ಹೊಂದಿರುತ್ತವೆ. ಹೃದಯವು ರಕ್ತವನ್ನು ಅವುಗಳಲ್ಲಿ ಪಂಪು ಮಾಡಿದಾಗ ಅವು ವಿಕಸನ ಹೊಂದುವವು. ಸಾಮಾನ್ಯ ಪರಿಸ್ಥಿತಿಯಲ್ಲಿ ಹೃದಯದ ಬಡಿತವು ನಿಮಿಷಕ್ಕೆ 60 ರಿಂದ 80 ಇರುವುದು. ರಕ್ತದ ಒತ್ತಡವು ಎದೆ ಬಡಿತದೊಂದಿಗೆ ಏರುವುದು ಮತ್ತು ವಿಶ್ರಾಂತಿ ಪಡೆದರೆ ಕಡಿಮೆಯಾಗುವುದು. ರಕ್ತದ ಒತ್ತಡವು ಎದೆ ಬಡಿತದೊಂದಿಗೆ ಬದಲಾಗುವುದು. ಅದು ನಿಮಿಷ ನಿಮಿಷಕ್ಕೂ ಬದಲಾಗುವ ಸಾಧ್ಯತೆ ಇದೆ. ಬದಲಾದ ಭಂಗಿಗೆ ಅನುಗುಣವಾಗಿ, ವ್ಯಾಯಾಮ ಮಾಡಿದಾಗ, ನಿದ್ರೆಯಲ್ಲಿ ಬದಲಾವಣೆ ಆಗುವುದು. ವಯಸ್ಕನಲ್ಲಿ 130/80 ಗಿಂತ ಕಡಿಮೆ ಇರಬೇಕು. ಇದಕ್ಕಿಂತ ಹೆಚ್ಚು ಇರುವುದು ಏರಿದ ರಕ್ತದೊತ್ತಡ. ಏರಿದ ರಕ್ತದ ಒತ್ತಡಕ್ಕೆ ಯಾವುದೇ ಲಕ್ಷಣಗಳು ಕಾಣುವುದಿಲ್ಲ. ಅನೇಕರಿಗೆ ಬಹಳ ವರ್ಷಗಳಿಂದ ಅವರಿಗೆ ಗೊತ್ತಿಲ್ಲದೆ ಏರಿದ ರಕ್ತದ ಒತ್ತಡವಿರುವುದು. ಅದಕ್ಕೂ ಆವೇಶ, ಗಾಬರಿ ಹೈಪರ್ ಆಕ್ಟೀವ್ ಅಗಿರುವುದಕ್ಕೆ ಸಂಬಂಧವಿಲ್ಲ. ನೀವು ತುಂಬ ನೆಮ್ಮದಿಯವರಾಗಿದ್ದರೂ, ಆರಾಮಾಗಿದ್ದರೂ ರಕ್ತದ ಒತ್ತಡ ಹೆಚ್ಚಿರಬಹುದು. ಅನಿಯಂತ್ರಿತ ರಕ್ತದ ಒತ್ತಡದಿಂದ ಮಾರಣಾಂತಿಕವಾದ (ಪಾರ್ಶವವಾಯು)ಲಕ್ವ, ಹೃದಯಾಘಾತ, ಹೃದಯ ವೈಫಲ್ಯ, ಮೂತ್ರ ಪಿಂಡಗಳ ವೈಫಲ್ಯ ಆಗಬಹುದು. ಇವೆಲ್ಲವುಗಳಿಂದ ಪ್ರಾಣಾಪಾಯದ ಸಾಧ್ಯತೆಯಿದೆ. ಅದಕ್ಕಾಗಿಯೇ ಏರು ರಕ್ತದ ಒತ್ತಡವನ್ನು “ಮೌನ ಕೊಲೆಗಾರ” ಎನ್ನುವರು.
ಕೊಲೆಸ್ಟರಲ್ ಹೆಚ್ಚಿ ಮಾಹಿತಿ
ದೇಹದಲ್ಲಿನ ಏರಿದ ಕೊಲೆಸ್ಟ್ರಾಲ್ ಮಟ್ಟವು ಹೃದಯಾಘಾತದ ಅವಕಾಶವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ. ರಕ್ತದ ಪ್ರವಾಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಆಟ್ರಿಯಾಗಳ ಗೋಡೆಗಳ ಮೇಲೆ ದಪ್ಪನಾದ ಪೆಡುಸಾದ ಮೇಲ್ ಮೈ ಉಂಟಾಗುವಂತೆ ಮಾಡುವುದು. ಇದರಿಂದ ಅವು ಪೆಡುಸಾಗಿ ತಮ್ಮ ಸ್ಥಿತಿಸ್ಥಾಪಕತೆಯನ್ನು ಕಳೆದುಕೊಳ್ಳುವವು. ಹೃದಯಕ್ಕೆ ಹರಿಯುವ ರಕ್ತವು ನಿಧಾನವಾಗುವುದು. ಹಲವು ಸಲ ನಿಂತು ಬಿಡುವುದು. ರಕ್ತದ ಪ್ರವಾಹವು ಕಡಿಮೆಯಾದಾಗ ಎದೆ ನೋವು, ಅಂಜಿನಾ ಉಂಟಾಗಬಹುದು. ರಕ್ತ ಪ್ರವಾಹವು ಪೂರ್ಣವಾಗಿ ನಿಂತರೆ ಹೃದಯಘಾತ ಆಗುವುದು. ರಕ್ತದ ಏರು ಒತ್ತಡದ ಜೊತೆ ಹೆಚ್ಚಿದ ಕೊಲೆಸ್ಟ್ರಾಲ್, ಮಧುಮೇಹವೂ ಇದ್ದರೆ ಹೃದಯಾಘಾತದ ಮತ್ತು ಲಕ್ವದ ಸಂಭವನೀಯತೆಯ ಗಂಡಾಂತರ ಹದಿನಾರು ಪಟ್ಟು ಹೆಚ್ಚಾಗುವುದು.
ಮಧು ಮೇಹದ ನಿರ್ವಹಣೆ
ಪಥ್ಯ, ವ್ಯಾಯಾಮ, ವೈಯುಕ್ತಿಕ ಆರೋಗ್ಯ ಮತ್ತು ಇನ್‌ಸುಲಿನ್ ಇಂಜೆಕಷನ್ ಅಥವಾ ಮಾತ್ರೆಗಳು (ವೈದ್ಯರ ಸಲಹೆಯ ಮೇರೆಗೆ) ಇವುಗಳು ಮಧುಮೇಹದಿಂದ ಬರಬಹುದಾದ ಸಮಸ್ಯೆಗಳನ್ನು ತಡೆಯಬಹುದು.
ವ್ಯಾಯಾಮ :ವ್ಯಾಯಾಮವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು. ದೇಹವು ಸಕ್ಕರೆಯನ್ನು ಬಳಸುವ ಶಕ್ತಿಯನ್ನು ಹೆಚ್ಚಿಸುವುದು. ಗಂಟೆಗೆ 6 ಕಿ. ಮೀ ನಂತೆ ನೆಡೆಯುವುದರಿಂದ 135 ಕ್ಯಾಲೋರಿ ಶಕ್ತಿಯನ್ನು 30 ನಿಮಿಷದಲ್ಲಿ ಉರಿಸಬಹುದು. ಅದೇ ಸೈಕಲ್ಲು ಹೊಡೆದರೆ 200 ಕ್ಯಾಲೋರಿ ಬಳಕೆಯಾಗುವುದು.
ಮಧು ಮೇಹಿಗಳಲ್ಲಿ ಚರ್ಮದ ಅರೈಕೆ : ಚರ್ಮದ ಆರೈಕೆಯು ಮಧು ಮೇಹವಿರುವವರಲ್ಲಿ ಅತಿ ಅಗತ್ಯ. ಹೆಚ್ಚಿನ ಪ್ರಮಾಣದ ಗ್ಲೂಕೋಸು ಬ್ಯಾಕ್ಟಿರಿಯ ಮತ್ತು ಫಂಗೈಗಳಿಗೆ ಮಧುಮೇಹಿಗಳು ಫಲವತ್ತಾದ ಭೂಮಿ. ಪರಿಚಲನೆಯು ಕಡಿಮೆ ಇರುವುದರಿಂದ ದೇಹವು ಅಪಾಯಕಾರಿ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಪಡೆಯಲು ಆಗುವುದಿಲ್ಲ. ದೇಹದ ರಕ್ಷಕ ಕೋಶಗಳು ಅಪಾಯಕಾರಿ ಬ್ಯಾಕ್ಟಿರಿಯಾಗಳನ್ನು ನಾಶಮಾಡಲು ಆಗುವುದಿಲ್ಲ. ಹೆಚ್ಚಿದ ಗ್ಲೂಕೋಸು ಚರ್ಮವನ್ನು ಒಣಗಿಸುವುದು ಆಗ ತುರಿಕೆಯನ್ನು ಹೆಚ್ಚಿಸುವುದು.
ದೇಹವನ್ನು ನಿಯಮಿತವಾಗಿ ಪರಿಶೀಲಿಸಿ, ಕೆಳಗಿನವುಗಳು ಕಂಡುಬಂದರೆ ವೈದ್ಯರಿಗೆ ವರದಿ ಮಾಡಿ
ಚರ್ಮದ ರಕ್ಷಣೆಗೆ ಸೂಕ್ತ ಸಲಹೆಗಳು
ಗಾಯಕ್ಕೆ ಆರೈಕೆ :
ಆಗೀಗ ಕತ್ತರಿಸಿಕೊಳ್ಳುವುದು, ತೆರಚುಗಾಯ ಮಾಡಿಕೊಳ್ಳದೆ ಇರುವುದು ಆಗದ ಮಾತು. ಮಧುಮೇಹ ಇರುವವರು ಚಕ್ಕ ಪುಟ್ಟ ಗಾಯಗಳಾದರೂ ಹೆಚ್ಚಿನ ಕಾಳಜಿ ವಹಿಸಬೇಕು. ಸೋಂಕು ತಗುಲದಂತೆ ಎಚ್ಚರವಹಿಸಬೇಕು. ಅವುಗಳಿಗೆ ತಕ್ಷಣ ಚಿಕಿತ್ಸೆ ಮಾಡಬೇಕು:
ನಿಮಗೇನಾದರೂ ಹೀಗೆ ಆದರೆ ವೈದ್ಯರನ್ನು ಕೂಡಲೆ ಸಮಪರ್ಕಿಸಿ,
ಮಧು ಮೇಹದಲ್ಲಿ ಪಾದಗಳ ಅರೈಕೆ : ಮಧು ಮೇಹವಿದ್ದಾಗ ರಕ್ತದಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಇದ್ದರೆ ನರಗಳಿಗೆ ಹಾನಿಯಾಗಿರುವುದು. ಅದರಿಂದ ಪಾದದಲ್ಲಿ ಸ್ಪರ್ಶ ಜ್ಞಾನವೆ ಇರುವುದಿಲ್ಲ. ಪಾದಗಳ ಆರೈಕೆಗೆ ಇಲ್ಲಿ ಕೆಲವು ಸರಳ ಕ್ರಮಗಳನ್ನು ತೀಳಿಸಿದೆ:
ಪಾದಗಳನ್ನು ನಿಯಮಿತವಾಗಿ ಪರೀಕ್ಷಿಸಿ: ಸಾಕಷ್ಟು ಬೆಳಕಿನಲ್ಲಿ ಪ್ರತಿ ದಿನ ನಿಮ್ಮ ಪಾದಗಳನ್ನು ಗಮನಿಸಿ. ಅಲ್ಲಿ ಏನಾದರು ತೆರದ, ಕತ್ತರಿಸಿದ ಗಾಯಗಳಿವೆಯಾ ಎಂದು ನೋಡಿ, ಚರ್ಮದ ಸೀಳು, ಗುಳ್ಳೆಗಳು, ಕೆಂಪು ಮಚ್ಚೆಗಳು,ಬಾವು ಇತ್ಯಾದಿ.. ಹೆಬ್ಬಿರಳಿನ ಸಂದಿ ಮತ್ತು ಉಂಗುಷ್ಟಗಳ ಕೆಳಗೆ ಮತ್ತು ಮಧ್ಯ ನೋಡಲು ಮರೆಯ ಬೇಡಿ..
ಪಾದಗಳನ್ನು ನಿತ್ಯ ತೊಳೆದುಕೊಳ್ಳಿ : ಪಾದಗಳನ್ನು ಮೃದು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆದು ಕೊಳ್ಳಿ.
ಹೆಬ್ಬೆರಳಿನ ಉಗುರು ನಿಯಮಿತವಾಗಿ ಕತ್ತರಿಸಿಕೊಳ್ಳಿ.
ಸೂಕ್ತವಾದ ಪಾದರಕ್ಷೆ ಧರಿಸಿ ಪಾದವನ್ನು ರಕ್ಷಿಸಿ ಕೊಳ್ಳಿ.
ಬಾಯಿಯ ಆರೋಗ್ಯ
ದೈನಂದಿನ, ವ್ಯವಸ್ಥಿತವಾದ ಮನೆಯಲ್ಲಿನ ಆರೈಕೆಯಿಂದ ಹಲ್ಲುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.ಹಲ್ಲುಜ್ಜುವುದು: ನಿಮ್ಮ ಬ್ರಷ್ಷು ಹೇಗಿದೆ ? ಗಟ್ಟಿ ಹಾಗೂ ಒರಟಾಗಿದೆಯಾ ? ಅವು ದವಡೆಗಳಿಗೆ ಹಾನಿ ಮಾಡಬಹುದು. ತಕ್ಷಣ ಮೃದುವಾದುದಕ್ಕೆ ಬದಲಾಯಿಸಿ.
ಉಜ್ಜುವ ತಂತ್ರಗಳು :
ಈ ಕೆಳಗಿನ ಅಂಶಗಳೇನಾದರೂ ನಿಮಗಿದ್ದರೆ ದಂತವೈದ್ಯರನ್ನು ಭೇಟಿ ಮಾಡಿ
ಕಣ್ಣಿನ ಪೊರೆ (ಕ್ಯಾಟರಾಕ್ಟ) ಅಥವಾ ಗ್ಲೂಕೋಮಾ ಬರುವ ಸಾಧ್ಯತೆ ಆರೊಗ್ಯವಂತರಿಗೆ ಹೋಲಿಸಿದಾಗ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಎರಡು ಪಟ್ಟು ಹೆಚ್ಚು. ತುಂಬ ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆ ಅಂಶದ ಪ್ರಮಾಣ ಹೆಚ್ಚಿದ್ದರೆ ಕಣ್ಣಿನಲ್ಲಿರುವ ಸೂಕ್ಷ್ಮ ರಕ್ತನಾಳಗಳಿಗೆ ಧಕ್ಕೆಯಾಗುತ್ತದೆ. ಇದು ಡಯಾಬೆಟಿಕ್ ರೆಟಿನೋಪತಿಗೆ ಕಾರಣವಾಗಬಹುದು. ಮಧುಮೇಹದಿಂದ ಬಳಲುತ್ತಿರುವರು ದೃಷ್ಟಿಹೀನರಾಗುವುದಕ್ಕೆ ಡಯಾಬಿಟಿಕ್ ರೆಟಿನೋಪತಿಯೇ ಪ್ರಮುಖ ಕಾರಣ.ಮಧುಮೇಹ ಇರುವುದು ತಿಳಿದ ಕೂಡಲೇ ಪ್ರತಿವರ್ಷ ಸಂಪೂರ್ಣ ಕಣ್ಣಿನ ಆರೋಗ್ಯದ ತಪಾಸಣೆ ಮಾಡಿಸುವುದು ಅತ್ಯಗತ್ಯ. ಕೆಳಗಿನ ಲಕ್ಷಣಗಳಿದ್ದರೆ ವೈದ್ಯರನ್ನು ಭೇಟಿ ಮಾಡಿ
ನಿಮಟೋಡ್ ಸೋಂಕು ಎಂದೂ ಕರೆಯಲಾಗುತ್ತದೆ ವಿವರ
ಲಕ್ಷಣಗಳು ಜಂತುಹುಳಗಳು ಎಲ್ಲಿವೆ ಎಂಬುದನ್ನು ಆಧರಿಸಿ ಕೆಲವು ಲಕ್ಷಣಗಳು ಕಂಡುಬರುತ್ತವೆ.
ಸರಳ ಪರಿಹಾರಗಳು
ನಿರ್ಜಲಿಕರಣ ಎಂದರೇನು?ನಿರ್ಜಲಿಕರಣವನ್ನು ಈ ರೀತಿ ನಿರೂಪಿಸಬಹುದು, "ದೇಹದಿಂದ ಅತಿ ಹೆಚ್ಚಿನ ಪ್ರಮಾಣದ ನೀರನ್ನು ಕಳೆದು ಕೊಳ್ಳುವುದು " ನಮ್ಮ ದೇಹವು ಕೆಲಸ ಮಾಡಲು ನಿಗದಿತ ಅಳತೆಯ ದ್ರವವನ್ನು ದೈನಂದಿನ ಲೆಕ್ಕದಲ್ಲಿ ತೆಗೆದುಕೊಳ್ಳಲೇ ಬೇಕು; ಕನಿಷ್ಠ ಎಂದರೆ 8 ಲೋಟ (ಒಂದು ಲೀಟರ್ ಅಥವ ಒಂದು ಕ್ವಾರ್ಟ) ಅಗತ್ಯವು. ಇದು ಚಟುವಟಿಕೆ ಮತ್ತು ವಯಸ್ಸಿನಂತೆ ಬದಲಾಗಬಹುದು. ಬಹಳ ಟುವಟಿಕೆಯಿಂದ ಇರುವವರು ಮೂಲ ಅವಶ್ಯಕತೆಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು ನೀರನ್ನು ತೆಗೆದುಕೊಳ್ಳ ಬೇಕು. ಮೂಲ ದ್ರವ ಸೇವನೆಯು ನಮ್ಮ ದೇಹವು ದೈನಂದಿನ ಕಾರ್ಯನಿರ್ವಹಿಸಲು ಅಗತ್ಯವಾದದುದನ್ನು ಮರು ಪೂರಣ ಮಾಡುವುದು. ನಾವು ಅಗತ್ಯಕ್ಕಿಂತ ಕಡಿಮೆ ದ್ರವವನ್ನು ತೆಗೆದುಕೊಂಡರೆ ಇಲ್ಲವೆ ಹೆಚ್ಚು ದ್ರವವನ್ನು ಕಳೆದುಕೊಂಡರೆ. ಆಗುವ ಪರಿಣಾಮವೆ ನಿರ್ಜಲತೆ.ನಿರ್ಜಲತೆಗೆ ಕಾರಣ ವೇನು? ಕರುಳು ಉರಿಯೂತವಾದಾಗ–ಅಥವ ಹಾನಿಯಾದಾಗ ಕರುಳಿನ ದಾರಿಯ ಮೂಲಕ ಅತಿ ಹೆಚ್ಚು ದ್ರವವು ನಷ್ಟವಾಗಬಹುದು. ಇಲ್ಲವೆ ಬ್ಯಾಕ್ಟೀರಿಯಾ ಇಲ್ಲವೆ ವೈರಸ್‌ಗಳು ಕರುಳಿನ ಒಳ ಗೋಡೆಯ ಮೇಲ್ ಮೈ ಹೆಚ್ಚು ದ್ರವಗಳನ್ನು ಹೀರುವುದಕ್ಕಿಂತ ಹೆಚ್ಚು ಉತ್ಪಾದಿಸಿದರೆ ಬಾಯಿಯ ಮೂಲಕ ದ್ರವವನ್ನು ತೆಗೆದು ಕೊಳ್ಳುವ ಪ್ರಮಾಣವು ವಾಕರಿಕೆ ಇಲ್ಲವೆ ವಾಂತಿಯಿಂದ ಅಥವ ಹಸಿವಿನ ಕೊರತೆಯಿಂದ ಕಡಿಮೆ ಆಗಬಹುದು.ನಿರ್ಜಲೀಕರಣದ ಚಿಹ್ನೆ ಮತ್ತು ಲಕ್ಷಣಗಳೇನು ನಿರ್ಜಲೀಕರಣದ ಮುಖ್ಯವಾದ ನಂಬಲರ್ಹವಾದ ಚಿಹ್ನೆ ಎಂದರೆ ಕೆಲವೇ ದಿನಗಳಲ್ಲಿ (ಕೆಲವೇ ಗಂಟೆಗಳಲ್ಲಿ) ತೂಕ ಅತಿ ತೀವ್ರವಾಗಿ ಕಡಿಮೆಯಾಗುವುದು. ಬೇಗನೆ 10% ನಷ್ಟು ತೂಕವು ಕಡಿಮೆಯಾದರೆ ಅದನ್ನು ಗಂಭೀರವಾಗಿ ಪರಿಗಣಿಸಬಹುದು. ಈ ಚಿಹ್ನೆಗಳು ಮೂಲ ಅನಾರೋಗ್ಯಕ್ಕಿಂತ ವಿಭಿನ್ನವಾಗಿರುವುದನ್ನು ಗುರುತಿಸುವುದ ಕಷ್ಟ. ಆದರೆ ಸಾಮಾನ್ಯವಾಗಿ ಕೆಳಗಿನ ಕೆಲ ಚಿಹ್ನೆಗಳು ನಿರ್ಜಲೀಕರಣವನ್ನು ಸೂಚಿಸುತ್ತವೆ. ಅತಿ ನೀರಡಿಕೆ, ಬಾಯಿ ಒಣಗುವುದು, ದುರ್ಬಲತೆ, ತಲೆ ಸುತ್ತುವುದು (ಅದೂ ನಿಂತು ಕೊಂಡಾಗ ಹೆಚ್ಚಾಗುವುದು), ಮೂತ್ರವು ಕಪ್ಪಾಗುವುದು, ಅಥವ ಕಡಿಮೆಯಗುವುದು. ತೀವ್ರವಾದ ನಿರ್ಜಲೀಕರಣವು ದೇಹದ ರಸಾಯನಿಕತೆಯನ್ನೆ ಬದಲಾಯಿಸುವುದು. ಮೂತ್ರಪಿಂಡ ವಿಫಲತೆಯಿಂದ ಪ್ರಾಣಾಪಾಯ ಉಂಟು ಮಾಡಬಹುದು .
ಮಲಬದ್ದತೆ ಎಂದರೇನು? ಮಲಬದ್ದತೆಯು ಮಲ ವಿಸರ್ಜನೆಯ ಅಭ್ಯಾಸದಲ್ಲಿನ ಬದಲಾವಣೆ., ಆಗ ಮಲದ ಪ್ರಮಾಣ ಕಡಿಮೆ ಯಾಗುವುದು. ಮಲವಿಸರ್ಜನೆಗೆ ಹೋಗುವುದು ಕಡಿಮೆ ಮತ್ತು ಆ ಸಮಯದಲ್ಲಿ ಕಷ್ಟವಾಗುವುದು. ಸಾಮಾನ್ಯವಾಗಿ ಮಲವಿಸರ್ಜನೆಗೆ ಹೊಗುವ ಸಂಖ್ಯೆ ಮತ್ತು ಅದರ ವಿಧಾನವು ಒಬ್ಬರಿಂದ ಒಬ್ಬರಿಗೆ ಬೇರೆಯಾಗಿರುವುದು. (ವಾರಕ್ಕೆ ಮೂರರಿಂದ ಹನ್ನೆರಡು ಸಲ ಮಲವಿಸರ್ಜನೆ ಮಾಡುವುದು ಸಾಮಾನ್ಯ)ಲಕ್ಷಣಗಳು ಹೊಟ್ಟೆಯ ಅಸೌಖ್ಯ ಅಥವ ಉಬ್ಬರಕಾರಣಗಳು
ಸರಳ ಪರಿಹಾರಗಳು
ಸಮಸ್ಯೆಯು ಮುಂದುವರೆದರೆ ವೈದ್ಯರನ್ನು ಸಂಪರ್ಕಿಸಿ
ಸ್ಥೂಲಕಾಯ ಎಂದರೆ ದೇಹದಲ್ಲಿ ಅತಿ ಹೆಚ್ಚು ಕೊಬ್ಬು ಅಡಿಪೋಸ್ ಅಂಗಾಂಶಗಳಲ್ಲಿ ಸಂಗ್ರಹವಾಗಿರುವುದು. ಅದರಿಂದ ದೇಹವು ಇರಬೇಕಾದುದಕ್ಕಿಂತ 20% ಹೆಚ್ಚು ತೂಕ ಹೊಂದಿರುವುದು.
ದಪ್ಪಗಾಗಿರಲು ಕಾರಣ
ಆದರ್ಶ ದೇಹದ ತೂಕ ತರುಣ ವಯಸ್ಕರು ದೈಹಿಕವಾಗಿ ಆರೊಗ್ಯ ಪೂರ್ಣರಾಗಿದ್ದಾಗ ಇರಬಹುದಾದ ಎತ್ತರಕ್ಕೆ ಅನುಗುಣವಾದ ತೂಕ ವನ್ನೆ ಆದರ್ಶ ದೇಹದ ತೂಕ ಎನ್ನುವರು. ಇದನ್ನು ಸಾಮಾನ್ಯವಾಗಿ ಅಳೆಯುವುದು ದೇಹ ತೂಕ ಸೂಚಿ (ಬಾಡಿ ಮಸ್ ಇಂಡೆಕ್ಸ (ಬಿ ಎಂ. ಐ). ಅನ್ನು ಕಿಲೋ ಗ್ರಾಮುಗಳಲ್ಲಿನ ತೂಕವನ್ನು ಮೀಟರುಗಳಲ್ಲಿ ನ ವರ್ಗದಿಂದ ಭಾಗಿಸಿ ಲೆಕ್ಕ ಮಾಡುವರು.( ತೂಕ ಕಿ.ಗ್ರಾಂ) /(ಎತ್ತರ x ಎತ್ತರ )ಮೀಟರು
ಬಿ ಎಮ ಐ (BMI) 18.5 : ಅಪೌಷ್ಟಿಕತೆ. 25 : ಹೆಚ್ಚು ತೂಕ 30 : ಸ್ಥೂಲಕಾಯ ತೂಕ ಇಳಿಸುವುದು ಹೇಗೆ ?
ಮಾನವನ ದೇಹದ ಉಷ್ಣತೆ ಸಾಧಾರಣವಾಗಿ 37oC ಅಥವ 98.6 F. . ದೇಹದ ಉಷ್ಣತೆಯು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೆ ಜ್ವರ ಬಮದಿದೆ ಎನ್ನುವರು ಜ್ವರವು ಒಂದು ರೋಗವಲ್ಲ. ಅದು ರೋಗ ಲಕ್ಷಣ ಮಾತ್ರ. ಅದು ಯಾವುದೇ ರೀತಿಯ ಸೋಂಕಿಗೆ ದೇಹದ ಪ್ರತಿಕ್ರಿಯೆ. ಉಷ್ಣತೆಯ ಹೆಚ್ಚಿನ ಮಟ್ಟವು ರೋಗದ ತೀವ್ರತೆಯನ್ನು ಸೂಚಿಸುವುದು.ಕಾರಣಗಳು ಕೆಳಗಿನ ಕಾಣಿಸಿದ ರೋಗಗಳು ಜ್ವರಕ್ಕೆ ಕಾರಣ ವಾಗಿರಬಹುದು 1. ಮಲೇರಿಯಾ 2. ಟೈಫಾಯಿಡ್3.ಕ್ಷಯ 4. ರುಮ್ಹಾಟಿಕ್ ಜ್ವರ 5. ಮೀಸಲ್ಸ 6. ಮಂಗನ ಬಾವು( ಮಂಪ್ಸ) 7. ಉಸಿರಾಟದ ಸೋಂಕುಗಳಾದ ನ್ಯುಮೋನಿಯಾ, ಶೀತ , ನೆಗಡಿ, ಕೆಮ್ಮು ಟಾನ್ಸಿಲ್ಸ್, ಬ್ರಾಂಕೃಟಿಸ್ ಇತರೆ. 8. ಮೂತ್ರ ಸೊಂಕು ಜ್ವರದ ಸಾಮನ್ಯ ಲಕ್ಷಣಗಳು:
ಅನುಸರಿಸಬೇಕಾದ ಸರಳ ಸಲಹೆಗಳು
ಜ್ವರ ಬಂದಾಗ ಸೇವಿಸಬಹುದಾದ ಆಹಾರ
ಅಲ್ಸರ್ ಎಂದರೇನು? ಅಲ್ಸರ್ ಜೀರ್ಣನಾಳದ ಲೈನಿಂಗ್ ಮೇಲಿನ ಹುಣ್ಣುಗಳು. ಅಲ್ಸರುಗಳು ಸಾಮಾನ್ಯವಾಗಿ ಡಯೊಡಿನಮ್ (ಕರುಳಿನ ಮೊದಲ ಭಾಗದಲ್ಲಿ ಹೆಚ್ಚಾಗುವುದು. ಗ್ಯಾಸಟ್ರಿಕ್ ಅಲ್ಸರ್ನಿಂದ ಬಳಲುವವರು ಎರಡನೇ ಸ್ಥಾನದಲ್ಲಿದ್ದಾರೆ.ಅಲ್ಸರ್‌ಗೆ ಕಾರಣ ವೇನು?
ಅಲ್ಸರ್ ನ ಸಾಧ್ಯತೆಯ ಚಿಹ್ನೆಗಳು
ನಿರ್ವಹಣೆಗೆ ಸರಳ ಸಲಹೆಗಳು
ತಂಬಾಕು ಸೇವನೆಯ ದುಷ್ಪರಿಣಾಮಗಳು
ತಂಬಾಕು ದೇಹದ ವಿವಿಧ ಭಾಗಗಳಾದ ಬಾಯಿ, ಗಂಟಲು, ಶ್ವಾಸ ಕೋಶ,. ಜಠರ, ಮೂತ್ರ ಪಿಂಡ, ಬ್ಲಾಡರ್, ಕ್ಯಾನ್ಸರಿಗೆ ಕಾರಣವಾಗುವುದು
ಬೆಂಬಲಿಸುವ ಸತ್ಯಾಂಶಗಳು
ತಂಬಾಕು ಹೃದಯ ಮತ್ತು ರಕ್ತನಾಳಗಳ ರೋಗಕ್ಕೆ ದಾರಿ ಮಾಡುವುದು. ಹೃದಯಾಘಾತ, ಎದೆ ನೋವು ಹಠಾತ್ ಹೃದಯಘಾತದಿಂದ ಸಾವು, ಲಕ್ವ , ಹೊರ ರಕ್ತನಾಳಗಳ ವ್ಯಾಧಿ, ಕಾಲಿನ ಗ್ಯಾಂಗ್ರಿನ್ .
ಬೆಂಬಲಿಸುವ ಸತ್ಯಾಂಶಗಳು
ಪ್ರತಿ 8 ಸೆಕೆಂಡಿಗೆ ತಂಬಾಕಿಗೆ ಸಂಬಂಧಿಸಿದ 'ಒಂದು' ಸಾವು ಆಗುವುದು
ಬೆಂಬಲಿಸುವ ಸತ್ಯಾಂಶಗಳು
ಧೂಮಪಾನ/ ತಂಬಾಕು ಪುರುಷರ ಮತ್ತು ಮಹಿಳೆಯರ ಮೇಲೆ ಮ ಬೀರುವವು.
ಬೆಂಬಲಿಸುವ ಸತ್ಯಾಂಶಗಳು
ತಂಬಾಕು ತ್ಯಜಿಸುವುದರ ಲಾಭಗಳು
ತಂಬಾಕು ತ್ಯಜಿಸುವುದರ ದೈಹಿಕ ಲಾಭಗಳು:
ತಂಬಾಕು ತ್ಯಜಿಸುವುದರ ಸಾಮಾಜಿಕ ಲಾಭಗಳು:
ಬಿಡುವುದು ಯಾವಾಗಲೂ ತಡವಲ್ಲ
ಚಿಕ್ಕವಯಸ್ಸಿನಲ್ಲಿಯೇ ಬಿಟ್ಟರೆ ಇನ್ನೂ ಅಧಿಕ ಲಾಭವಾಗುವುದು.
ಧೂಮಪಾನ ಕೂಡದು
ನಿಮಗೆ ಅಸೌಖ್ಯವಾಗಿರುವುದರ ಎಚ್ಚರಿಕೆಯ ಚಿಹ್ನೆಗಳು
ಪ್ರಾಣಿಗಳ ಕಡಿತದಿಂದ ಸರಳ ಗಾಯ ಅಥವ ಪ್ರಾಣಕ್ಕೆ ಗಂಡಾಂತರಕಾರಿಯಾದ ಸೊಂಕು ತರಬಹುದು.
ಕಾರಣ
ಹೆಚ್ಚು ಕಚ್ಚುವ ಪ್ರಾಣಿ ಎಂದರೆ ನಾಯಿ, ಎರಡನೆ ಸ್ಥಾನ ಬೆಕ್ಕಿನದು. ನಾಯಿಯ ಕಡಿತಕ್ಕಿಂತ ಬೆಕ್ಕು ಕಚ್ಚಿದಾಗಿನ ಸೋಂಕಿನ ಗಂಡಾಂತರ ಹೆಚ್ಚು. ಹಾವು ಮತ್ತು ಕೋತಿ, ಪ್ರಾಣಿಗಳು ಕಚ್ಚಿದಾಗಿನ ಪ್ರಮುಖ ಕಾಳಜಿ ಎಂದರೆ ರೇಬೀಸ . ನಾಯಿಯ ಕಡಿತವು ರೇಬಿಸನ ಹರಡಿಕೆಗೆ ಪ್ರಮುಖ ಕಾರಣ.
ಲಕ್ಷಣಗಳು
ಕಡಿತದಿಂದ ಚರ್ಮಕ್ಕೆ ಹಾನಿಯಾಗದಿದ್ದರೂ ಅದು ಕೆಳಗಿರುವ ಮೂಳೆಗೆ, ಮಾಂಸ ಖಂಡಗಳಿಗೆ, ಲಿಗ್ಮೆಂಟುಗಳಿಗೆ, ಟೆಂಡನ್, ನರಗಳಿಗೆ ಹಾನಿಯಾಗಿರಬಹುದು. ಚರ್ಮವೂ ಸೀಳಿದ್ದರೆ ಸೊಂಕಿನ ಅಪಾಯ ಇನ್ನೂ ಹೆಚ್ಚು ಸೊಂಕಿನ ಚಿಹ್ನೆಗಳು ಹೀಗಿರುವವು:
ಟೆಂಡನ್ ಗಳಿಗೆ ಅಥವ ನರಗಳಿಗೆ ಹಾನಿಯಾದಾಗಿನ ಚಿಹ್ನೆಗಳು ಬೆರಳನ್ನು ಮಡಚಲು ಅಥವ ನೇರಮಾಡಲು ಅಸಾಧ್ಯವಾಗುವುದು. ಕೈಬೆರಳ ತುದಿಯಲ್ಲಿ ಸ್ಪರ್ಶ ಜ್ಞಾನ ಇರುವುದಿಲ್ಲ.
ತತಕ್ಷಣದ ಪ್ರಥಮ ಚಿಕೆತ್ಸೆ
ಕಚ್ಚಿದ ಭಾಗವನ್ನು ಬಾಯಲ್ಲಿ ಇಟ್ಟುಕೊಳ್ಳಬಾರದು. ಬಾಯಿಯಲ್ಲಿರುವ ಬ್ಯಾಕ್ಟಿರಿಯಾಗಳಿಂದ ಸೋಂಕು ಆಗಬಹುದು.
ಮೇಲು ಮೇಲಿನ ಗಾಯಕ್ಕೆ ಸೋಪು ನೀರು ಅಥವ ಪುತಿನಾಶಕಗಳಾದ ಹೈಡ್ರೊಜೆನ್ ಪೆರಾಕ್ಸೈಡು, ಅಲ್ಕೊಹಾಲು . ಹಾಕಿ ತೊಳೆಯಬೇಕು. ಆಂಟಿಸೆಪ್ಟಿಕ್ ಆಯಿಂಟಮೆಂಟ ಹಚ್ಚಬೇಕು. ಗಾಯವನ್ನು ಅಂಟದ ಬ್ಯಾಂಡೇಜಿನಿಂದ ಕಟ್ಟಬೇಕು.. ಆ ಸ್ಥಳವನ್ನು ಎಚ್ಚರಿಕೆಯಿಂದ ಗಮನಿಸಿ.ಟೆಂಡನ್ ಅಥವ ನರಗಳಿಗೆ ಪೆಟ್ಟು ಬಿದ್ದಿರಬಹುದು. ಆಗ ಬಾವು ಬರಬಹುದು ಗಾಯವು ೧೦ ದಿನಗಳಲ್ಲಿ ಮಾಯುವುದು. . ಇಲ್ಲವಾದರೆ ವೈದ್ಯರಲ್ಲಿಗೆ ಹೊಗಿ.
ಗಾಯದ ಮೇಲೆ ಸ್ವಚ್ಛ ಒಣ ಬಟ್ಟೆಯಿಂದ ಭದ್ರವಾಗಿ ಮುಚ್ಚಿ ,ಎತ್ತರಿಸಿ ಹಿಡಿಯಬೇಕು. ಗಾಯದಿಂದ ರಕ್ತ ಸುರಿಯುತ್ತಿಲ್ಲವಾದರೆ ಗಾಯವನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಗಾಯವನ್ನು ಸ್ಟರೈಲ್ ಮಾಡಿದ ವಸ್ತುಗಳಿಂದ ಡ್ರೆಸಿಂಗ್ ಮಾಡಬೇಕು. ತಕ್ಷಣ ವೈದ್ಯರ ನೆರವು ಪಡೆಯಬೇಕು. ಮುಖ, ತಲೆ ಅಥವಾ ಕುತ್ತಿಗೆಗಳಿಗೆ ಗಾಯಗಳಾಗಿದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ.
ಹಾವುಗಳು ಶೀತರಕ್ತ ಪ್ರಾಣಿಗಳು. ಅವು ತಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಿಕೊಳ್ಳಲಾರವು ಹೊರಗೆ ತಣ್ಣಗೆ. ಇದ್ದಾಗ ಚುರುಕಾಗಿರುವವು. ಅವು 25-32°C ಉಷ್ಣತೆಯಲ್ಲಿ ತುಂಬ ಚುರುಕಾಗಿರುವವು.
ಯಾವ ಹಾವುಗಳು ಕಚ್ಚುತ್ತವೆ: ಮನುಷ್ಯರಿಗೆ ಅತ್ಯಂತ ವಿಷಕಾರಕವಾಗಿರುವ ಹಾವುಗಳೆಂದರೆ ಕೊಬ್ರಾ ನಾಗರಹಾವು ಮತ್ತು ವೈಪರ್ಸ್.
ಹಾವು ಕಚ್ಚಿರುವ ಲಕ್ಷಣಗಳು
ವಿಷಕಾರಿ ಹಾವುಗಳು ಕಚ್ಚಿದಾಗ ಬೇರೆಬೇರೆ ಪರಿಣಾಮಗಳು ಉಂಟಾಗುತ್ತವೆ. ಸಾಮಾನ್ಯ ಚುಚ್ಚು ಗಾಯದಿಂದ ಹಿಡಿದು ಜೀವಕ್ಕೆ ಕುತ್ತು ತರಬಹುದು ಇಲ್ಲವೇ ಸಾವು ಸಂಭವಿಸಬಹುದು. ಹಾವು ಕಚ್ಚಿರುವ ಬಗ್ಗೆ ಖಚಿತ ಲಕ್ಷಣಗಳಿರುವುದಿಲ್ಲ. ಅವು ನಿಮ್ಮನ್ನು ತಪ್ಪುದಾರಿಗೆ ಎಳೆಯಬಹುದು. ಆರಂಭದಲ್ಲಿ ಯಾವುದೇ ಬಗೆಯ ಮಹತ್ವದ ಲಕ್ಷಣಗಳು ಕಂಡುಬರದೇ ಇರಬಹುದು. ಹಠಾತ್ತಾಗಿ ಉಸಿರಾಟದಲ್ಲಿ ತೊಂದರೆ ಮತ್ತು ಷಾಕ್‌ಗೆ ಒಳಗಾಗಬಹುದು ವಿಷಕಾರಿ ಹಾವು ಕಡಿತದ ಚಿಹ್ನೆಗಳು ಮತ್ತು ಲಕ್ಷಣಗಳನ್ನು ಕೆಲವು ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದು:ಸ್ಥಳೀಯ ಪರಿಣಾಮಗಳೂ:ವೈಪರ್ ಮತ್ತು ನಾಗರಹಾವಿನ ಕಡಿತವು ನೋವಿನಿಂದ ಕೂಡಿರುತ್ತದೆ ಮತ್ತು ಕಡಿದ ಸ್ಥಳವು ಮೃದುವಾಗಿರುತ್ತದೆ. ಅವು ತೀವ್ರವಾಗಿ ಊದಿಕೊಂಡಿರಬಹುದು ಮತ್ತು ಗಾಯದಿಂದ ರಕ್ತ ಸುರಿಯುತ್ತಿರಬಹುದು. ಕಡಿದ ಸ್ಥಳದ ಸುತ್ತ ಇರುವ ಅಂಗಾಂಶದ ಸಾವಿಗೆ ಕಾರಣವಾಗುತ್ತದೆ.
ವೈದ್ಯಕೀಯ ಆರೈಕೆ ಯಾವಾಗ ಬೇಕು ?
ಹಾವು ಕಡಿದ ಯಾವುದೇ ವ್ಯಕ್ತಿಯು ತಕ್ಷಣ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಧಾವಿಸಬೇಕು. ಆ ಹಾವು ವಿಷದ ಹಾವಲ್ಲ ಎಂದು ಖಚಿತವಾದರೆ ವಿನಾಯತಿ ಇದೆ. ಹಾವನ್ನು ತಪ್ಪಾಗಿ ಗುರತಿಸುವುದು ಸಾವಿಗೆ ಕಾರಣವಾಗಬಹುದು ಎಂಬುದು ನೆನಪಿರಲಿ.ವಿಷಕಾರಿಯಲ್ಲದ ಹಾವಿನ ಕಡಿತದ ಗಾಯಕ್ಕೂ ಸೂಕ್ತ ಉಪಚಾರ ಅಗತ್ಯ. ಕಳೆದ ಐದುವರ್ಷದಲ್ಲಿ ಅವರು ಟಿಟನಸ್ ತೆಗೆದು ಕೊಂಡಿರದಿದ್ದರೆ ಟೆಟಿನಸ್ ಬೂಸ್ಟರ ತೆಗೆದುಕೊಳ್ಳಬೇಕು.
ರೇಬೀಸ್ ತಡೆ
ಹರಡುವಿಕೆ
ಪಥೋಜೆನಿಸಿಸ್ಕಡಿತದ ಮೂಲಕ ದೇಹ ಸೇರಿದ ವೈರಸ್ ಸ್ಥಳೀಯವಾಗಿ ಸ್ನಾಯು ಫೈಬರ್ಗಳಲ್ಲಿ ಬೆಳೆಯುತ್ತ ಹೋಗುವುದು. ನ್ಯೂರೋ ಮಸ್ಕ್ಯಲರ್ ಮತ್ತು ನ್ಯೂರೋ ಟೆಂಡಿಯಲ್ ಸ್ಪಿಂಡಲ್ ಗಳಲ್ಲಿ ಸಂಗ್ರಹವಾಗುತ್ತಾ ಹೋಗುವುದು. ಕೆಲ ದಿನಗಳ ಅಥವ ವಾರಗಳ ಅವಧಿಯ ನಂತರ ಪೆರಿಫೆರಲ್ ನರಗಳನ್ನು ಸೇರುವುದು. ಅಂತಿಮವಾಗಿ ಸಿ ಎಸ್ ಎಫ್ ಮೂಲಕ ಎನ್ ಎಸ್ ಗೆ ಹೋಗುವುದು ಡಾರಸಲ್ ರೂಟ್ ಗ್ಯಾಂಗ್ಲಿನ ಹೊರತು ಪಡಿಸಿ, ಪೆರಿಫೆರಲ್ ನರಗಳನ್ನು ಪ್ರವೇಶಿಸಿದ ನಂತರ ರೇಬೀಸ್ ವೈರಸ್ ಆಂಟಿಬಾಡಿಗಳಿಗೆ ದೊರೆಯುವುದಿಲ್ಲ.ವೈದ್ಯಕೀಯ ಲಕ್ಷಣಗಳು :ಇನ್ ಕ್ಯುಬೇಷನ್ ಅವಧಿಯು 4 ದಿನಗಳಿಂದ ಅನೇಕ ವರ್ಷಗಳವರೆಗೆ ಇರಬಹುದು. ಸರಾಸರಿ 90% ಪ್ರಕರಣಗಳಲ್ಲಿ 30-.9೦ ದಿನಗಳಲ್ಲಿ ಹೊರಬೀಳುವುದು. ಮುಖಕ್ಕೆ ಕಚ್ಚಿದ್ದರೆ ಅವಧಿಯು ತುಂಬ ಕಡಿಮೆ ಇರುವುದು ( ಸರಸರಿ35 ದಿನ) , ಕೈಕಾಲಿಗೆ ಆದರೆ ( ಸರಾಸರಿ52 ದಿನ).ಲಕ್ಷಣಗಳು ಫ್ಯೂರಿಯಸ್ ಅಥವ ಫ್ರಾಂಕ್ ರೇಬೀಸ್ ಇದು ಅತಿ ಸಾಮನ್ಯವಾದ ರೇಬೀಸ್. ಇದರಲ್ಲಿ ಹೆಚ್ಚಿದ ಚಲನಾ ಚಟುವಟಿಕೆ, ನಡುಕ, ಸೆಳತ ಮತ್ತು ಉಸಿರಾಡಲು ತೊಂದರೆ ಕಾಣುವುದು. ಗಲೆಟ್ನ ಸೆಳೆತದಿಂದ ರೋಗಿಗೆ ನುಂಗುವುದೆ ಅಸಾಧ್ಯವಾಗುವುದು. ಹೈಡ್ರೊ ಫೊಬಿಯಾ ನಂತರ ಎರೋ ಫೋಬಿಯಾ ಬಂರುವುದು ಜೊಲ್ಲು ಸುರಿಯುವುದು ಹೆಚ್ಚಾಗುತ್ತದೆ.ಪೆರಲಿಟಿಕ್ ಅಥವ ಡಂಬ್ ರೇಬೀಸ ಈ ವಿಧದ ರೇಬೀಸ್ ೨೦ % ಪ್ರಕರಣಗಳಲ್ಲಿ ಕಂಡುಬರುವುದು. ಕಚ್ಚಿದ ಭಾಗದಿಂದ ಮೊದಲಾಗಿ ಕ್ರಮವಾಗಿ ದೇಹದ ಇತರ ಅಂಗಾಂಗಗಳು ನಿಶ್ಚಲವಾಗುವುದು ಎದ್ದು ಕಾಣುವ ಲಕ್ಷಣ. ಇದುನ್ನು ಅನೇಕ ಬಾರಿ ಎನ್ಸೈಫೆಲಿಟಿಸ್ ಪ್ರಕರಣ ಎಂದು ತಪ್ಪಾಗಿ ಗುರುತಿಸುವ ಸಂಭವ ಇದೆ.ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ವಯಸ್ಸಾಗುವಿಕೆ ಪ್ರಕ್ರಿಯೆಯು ಮನಷ್ಯನು ಹುಟ್ಟಿದಾಗಲೆ ಮೊದಲಾಗುವುದು. ಮಗುವ ಬೆಳೆದು ವಯಸ್ಕನಾಗುವುದು ಅದರಿಂದಲೆ. ಇದು ಕ್ರಮವಾಗಿ ಇಳಿಮುಖವಾಗುತ್ತ ಅಂತಿಮವಾಗಿ ಸಾವಿನಲ್ಲಿ ಕೊನೆಗೊಳ್ಳುವುದು. ಈ ಹಂತವನ್ನೆ ವಯಸ್ಸಾಗುವುದು ಎನ್ನುವರು. ವಯಸ್ಸಾಗುವಾಗಿನ ಕೆಲ ಬದಲಾವಣೆಗಳು ಮೆದುಳು ಮತ್ತು ನರಮಂಡಲ ಜನರಿಗೆ ವಯಸ್ಸಾದಂತೆ ಮೆದುಳಿನಲ್ಲಿನ ನರ ಕೋಶಗಳು ತುಸುವೆ ಕಡಿಮೆಯಾಗುತ್ತ ಹೋಗುತ್ತವೆ. ಅನೇಕ ವಿಷಯಗಳು ಇದಕ್ಕೆ ಪೂರಕವಾಗುವವು. ವಯಸ್ಸಾಗುವುದರಿಂದ ಮೆದುಳಿನ ಕಾರ್ಯ ಸ್ವಲ್ಪ ಕುಂದಬಹುದು.. ಆದುದರಿಂದ ವಯಸ್ಸಾದವರು ಪ್ರತಿಕ್ರಿಯಿಸುವುದರಲ್ಲಿ ನಿದಾನ ಮಾಡುವರುಗುವುದು. ಶಬ್ದಗಳ ಕೊರತೆ, ಮರೆವು, ಹೊಸದನ್ನುಕಲಿಯುವ ಸಾಮರ್ಥ್ಯದ ಅಭಾವ, ಮತ್ತು ಮಾತುಗಳನ್ನು ನೆನಪಿಸಿಕೊಳ್ಳುವುದು ಕಡಿಮೆಯಾಗುವುದು. ವಯಸ್ಸು 60, ಆದಮೇಲೆ ಬೆನ್ನುಹುರಿಯಲ್ಲಿನ ನರಕೋಶಗಳು ಕಡಿಮೆಯಾಗುತ್ತ ಹೋಗುವವು. ಅದರಿಂದ ಅವರಿಗೆ ಸ್ಪರ್ಶ ಜ್ಞಾನ ಕಡಿಮೆಯಾಗಿ ಗಾಯ ಮತ್ತು ಇತರೆ ತೊಂದರೆಗಳು ಆಗುವ ಸಂಭವ ಇದೆ.ರೋಗನಿರೋಧಕ ವ್ಯವಸ್ಥೆ ವಯಸ್ಸಾದಂತೆ ರೋಗನಿರೋಧಕ ವ್ಯವಸ್ಥೆಯು ಕುಂದುವುದು. ಇದು ಅನೇಕ ರೋಗಗಳಿಗೆ, ಕ್ಯಾನ್ಸರ್ ಸೋಂಕುಗಳು, ನ್ಯುಮೊನಿಯಾ, ಇನಫ್ಲುಯಂಜಾ ಇತ್ಯಾದಿಗಳಿಗೆ ಕಾರಣ ವಾಗಬಹುದು..
ಸನ್ ಸ್ಟ್ರೋಕ್ ಎಂದರೇನು ?
ಸನ್ ಸ್ಟ್ರೋಕ್ ಅನ್ನು ಶಾಖಾಘಾತ ಎಂದೂ ಕರೆಯುವರು ಇದು ಪ್ರಾಣ ಹಾನಿ ಮಾಡಬಹುದಾದ ಪರಿಸ್ಥತಿ, ಧೇಹವನ್ನು ಅತಿ ಹೆಚ್ಚಿನ ಉಷ್ಣತೆಗೆ ಒಡ್ಡಿಕೊಂಡಾಗ ಅದರ ಶಾಖ ನಿಯಂತ್ರಣ ವ್ಯವಸ್ಥೆಯು ವಿಫಲವಾಗುವುದು. ದೇಹವು ಅತಿ ಹೆಚ್ಚಿನ ಚಟುವಟಿಕೆಯಿಂದ ಅಥವ ಹೊರಗಿನ ಅತಿ ಹೆಚ್ಚಿದ ಉಷ್ಣತೆಯಿಂದ ದೇಹದ ಪ್ರಮುಖ ಅಂಗಗಳು ವಿಫಲವಾಗುವವು. . ಶಾಖಾಘಾತವು ಉಷ್ಣ ಸಂಬಂಧಿ ಸಮಸ್ಯೆಗಳಲ್ಲಿ ಅತಿ ಗಂಭೀರವಾದುದು. ತುಂಬ ಉಷ್ಣತೆಯ ಪರಿಸರದಲ್ಲಿ ವ್ಯಾಯಾಮ ಮಾಡುವುದು, ಶ್ರಮದ ಕೆಲಸ ಮಾಡುವುದು, ಜತೆಗೆ ದ್ರವ ಸೇವನೆಯ ಕೊರತೆಯು ಇದಕ್ಕೆ ಕಾರಣ.
ಸನ್ ಸ್ಟ್ರೋಕ್ ಯಾರಿಗೆ ಆಗುವುದು?
ಯಾರಿಗಾದರೂ ಸನ್ ಸ್ಟ್ರೋಕು ಆಗಬಹುದು. ಆದರೆ ಕೆಲವರಿಗೆ ಬೇಗ ಅಗುವುದು. ಮಕ್ಕಳು, ಕ್ರಿಡಾ ಪಟುಗಳು, ಮಧುಮೇಹಿಗಳು ಹೆಚ್ಚು ಉಷ್ಣದ ಅಭ್ಯಾಸವಿಲ್ಲದವರು, ಕೆಲವು ಔಷಧಿಗಳು ಕೂಡಾ ವ್ಯಕ್ತಿಯು ಬೇಗಬಳಲುವಂತೆ ಮಾಡುತ್ತವೆ. .
ಸನ್ ಸ್ಟ್ರೋಕಿನ ಲಕ್ಷಣಗಳೇನು?
ಸನ್ ಸ್ಟ್ರೋಕಿನ ಮುಖ್ಯ ಲಕ್ಷಣ ಏರಿದ ದೇಹದ ಉಷ್ಣತೆ, ಗೊಂದಲ, ಕೋಮಾ. ಚರ್ಮವು ಬಿಸಿಯಾಗಿ ಮತ್ತು ಒರಟಾಗುವುದು. ಬಿಸಿಲ ಆಘಾತವು ಹೆಚ್ಚು ಶ್ರಮದಿಂದ ಆಗಿದ್ದರೆ , ಚರ್ಮವು ಒದ್ದೆಯಾಗಿರುವುದು . ಇದರ ಚಿಹ್ನೆ ಮತ್ತುಲಕ್ಷಣಗಳು ಹೀಗಿವೆ:
ಎಚ್ಚರ ತಪ್ಪುವುದು ವಯಸ್ಸಾದವರಲ್ಲಿನ ಮೊದಲ ಲಕ್ಷಣ ಸನ್ ಸ್ಟ್ರೋಕ್ ಮುಂದುವರೆದರೆ ಕೆಳಗಿನ ಗಂಭೀರ ಲಕ್ಷಣಗಳು ಕಾಣಬಹುದು
ಸನ್ ಸ್ಟಟ್ರೋಕ್ ಅನ್ನು ತಡೆಯುವುದು ಹೇಗೆ?
ಸನ್ ಸ್ಟಟ್ರೋಕ್ಅನ್ನು ತಡೆಯಲು ಹೆಚ್ಚು ಹೆಚ್ಚು ದ್ರವ ಸೇವಿಸಿ ಮತ್ತು ಹೊರಗೆ ಕೆಲಸಮಾಡುವಾಗ ದೇಹವನ್ನು ಸಾಮಾನ್ಯ ಉಷ್ಣತೆಯಲ್ಲಿ ಇರಿಸಿ. ಮದಕ ದ್ರವ್ಯ, ಕೆಫಿನ್ ಸೇವಿಸಬೇಡಿ. ಅವು ದೇಹವನ್ನು ನಿರ್ಜಲಗೊಲಳಿಸುತ್ತವೆ . ತಿಳಿಬಣ್ಣದ ಸಡಿಲವಾದ ಉಡುಪು ಧರಿಸಿ. ಕೆಲಸದ ನಡುವೆ ವಿಶ್ರಾಂತಿ ತೆಗೆದು ಕೊಳ್ಳಿ. ದೇಹದಲ್ಲಿನ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಿ.
ಮೂಲ: ಮೆಯೊ ಕ್ಲಿನಿಕ್.ಕಾಮ್
ಕೊನೆಯ ಮಾರ್ಪಾಟು : 5/27/2020
ಈ ರೋಗ ಹರಡುವ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಚಿಕಿತ್ಸ...
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಹಂದಿಜ್ವರಕ್ಕೆ ತುತ್ತಾದವರ ವಿವರಗಳು ಪತ್ರಿಕೆಗಳ ಮುಖಪುಟವನ್...
ಕೊಬ್ಬು ಕರಗಿಸಲು ಶಕ್ತವಾಗಿರುವ ಕಾಫಿ ನಿಮ್ಮ ನಿತ್ಯದ ವ್ಯಾಯ...