ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಾನಸಿಕ ಅನಾರೋಗ್ಯ

ಮಾನಸಿಕ ಅಥವಾ ವರ್ತನೆಯಲ್ಲಿನ ಅವ್ಯವಸ್ಥೆಯು, ಸಾಂಸ್ಕೃತಿಕ ನಂಬುಗೆ ಮತ್ತು ನಿಯಮಗಳಿಗೆ ಅನುಸಾರವಾಗಿರದಂತಹ ಆಲೋಚನೆಗಳು, ಮನೋಧರ್ಮಗಳ ವ್ಯತ್ಯಾಸ ಅಥವಾ ವರ್ತನೆಗಳಲ್ಲಿನ ಬದಲಾವಣೆ ಇವುಗಳನ್ನು ಒಳಗೊಂಡಿರುತ್ತದೆ.

ಮಾನಸಿಕ ಅನಾರೋಗ್ಯದ ಲಕ್ಷಣಗಳೇನು

ಮಾನಸಿಕ ಅಥವಾ ವರ್ತನೆಯಲ್ಲಿನ ಅವ್ಯವಸ್ಥೆಯು, ಸಾಂಸ್ಕೃತಿಕ ನಂಬುಗೆ ಮತ್ತು ನಿಯಮಗಳಿಗೆ ಅನುಸಾರವಾಗಿರದಂತಹ ಆಲೋಚನೆಗಳು, ಮನೋಧರ್ಮಗಳ ವ್ಯತ್ಯಾಸ ಅಥವಾ ವರ್ತನೆಗಳಲ್ಲಿನ ಬದಲಾವಣೆ ಇವುಗಳನ್ನು ಒಳಗೊಂಡಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅದರ ಲಕ್ಷಣಗಳು ಖಿನ್ನತೆ ಮತ್ತು ವೈಯುಕ್ತಿಕ ಕೆಲಸಕಾರ್ಯಗಳಲ್ಲಿ ಅಡಚಣೆಯಾಗುವಿಕೆಯೊಂದಿಗೆ ಹೊಂದಿಕೊಂಡಿರುತ್ತದೆ.

ಸಂವೇದನೆಯ ಸಮಸ್ಯೆ

 • ಏಕಾಗ್ರತೆಯ ತೊಂದರೆ, ಮತ್ತು ಸುಲಭವಾಗಿ ಗಲಿಬಿಲಿಯಾಗುವುದು.
 • ಮಾಹಿತಿಯ ನೆನಪಿರದಿರುವುದು.
 • ಮಾಹಿತಿಯ ಪ್ರಕ್ರಿಯೆ ನಿದಾನ ಮತ್ತು ಗೊಂದಲಮಯ.
 • ಸಮಸ್ಯೆಯ ಪರಿಹಾರಕ್ಕೆ ಬಹು ಕಷ್ಟ ಪಡಬೇಕು.
 • ಅಮೂರ್ತ ಆಲೋಚನೆ ಮಾಡಲಾಗದು.

ಆಲೋಚನಾ ಸಮಸ್ಯೆಗಳು

 • ಯೋಚನೆಗಳು ಅತಿ ವೇಗ ಮತ್ತು ಅತಿ ನಿಧಾನವಾದಂತೆ ಭಾಸವಾಗುವುದು
 • ಯೋಚನೆಗಳು ಒಂದು ವಿಷಯದಿಂದ ಇನ್ನೊಂದಕ್ಕೆ ಅರ್ಥ ಹೀನವಾಗಿ ಹಾರಾಡುವವು.
 • ನಿಘಂಟಿನಲ್ಲೂ ಇಲ್ಲದ ಹೊಸ ಪದಗಳು ಮತ್ತು ಧ್ವನಿಗಳನ್ನು ಬಳಸುವುದು.
 • ಹೊರಗಿನ ಪ್ರಭಾವದಿಂದ ಅವನಿಗೆ ಮಾತ್ರ ಸಾದ್ಯವಿರುವ ವಿಚಿತ್ರ ಯೋಚನೆಗಳು, ವರ್ತನೆಗಳು .

ಗ್ರಹಿಕೆಯ ಸಮಸ್ಯೆಗಳು

 • ವಿಕೃತ ಗ್ರಹಿಕೆ, ಅಸಮಾನ್ಯವಾದ ದಟ್ಟ ಬಣ್ಣಗಳು ಅಥವಾ ಧ್ವನಿಗಳು.
 • ಇಲ್ಲದಿರುವ ಶಬ್ದ ಕೇಳಿಸಿಕೊಳ್ಳುವುದು, ಯಾರೂ ಇಲ್ಲದೆ ಇದ್ದರೂ ತನ್ನಷ್ಟಕ್ಕೆ ತಾನೆ ಮಾತನಾಡಿಕೊಳ್ಳುವುದು, ನಗುವುದು
 • ಹಳೆಯ ಪರಿಸ್ಥಿತಿಗಳನ್ನೇ ವಿಚಿತ್ರವಾಗಿ ಹೊಸದಾದವು ಎಂದು ಭಾವಿಸುವುದು.
 • ಟಿವಿ, ರೇಡಿಯೋ ಅಥವ ಸಾರ್ವಜನಿಕ ಸಾರಿಗೆಯಲ್ಲಿ ರಹಸ್ಯ ಸಂದೇಶವಿದೆ ಎಂದುಕೊಳ್ಳುವುದು.

ಭಾವನೆಯ ಸಮಸ್ಯೆ

 • ಬೆಲೆ ಇಲ್ಲದ, ಭರವಸೆ ಇಲ್ಲದ ನಿಸ್ಸಹಾಯಕ ಭಾವನೆ.
 • ಚಕ್ಕಪುಟ್ಟ ವಿಷಯಗಳಿಗೂ ಅಪರಾಧಿ ಭಾವನೆ.
 • ಸಾವು ಮತ್ತು ಆತ್ಮಹತ್ಯೆಯ ಬಗ್ಗೆ ಅಸಹಜ ಯೋಚನೆ.
 • ಬಹುತೇಕ ಎಲ್ಲ ವಿಷಯಗಳ್ಲೂ ನಿರಾಸಕ್ತಿ ಮತ್ತು ಅಸಂತೋಷ.
 • ಸಾಮರ್ಥ್ಯ,ನಿಪುಣತೆ, ಶ್ರೀಮಂತಿಕೆ ಮತ್ತು ರೂಪ-ಇವುಗಳ ಕುರಿತು ಅತಿ ವಿಶ್ವಾಸ ಮತ್ತು ಉಡಾಫೆ.
 • ಅತೀವ ಸಾಮರ್ಥ್ಯ ಮತ್ತು ಕಡಿಮೆ ನಿದ್ರೆಯ ಅಗತ್ಯ.
 • ಶೀಘ್ರ ಕಿರಿಕಿರಿ ಮತ್ತು ಕೋಪಗೊಳ್ಳುವುದು.
 • ಯಾವುದೇ ಪ್ರಚೋದನೆ ಇಲ್ಲದೆ ತೀವ್ರ ಭಾವೋದ್ವೇಗ.
 • ಅತಿ ವಿಶ್ವಾಸ ಮತ್ತು ಇತರರಿಗೆ ಹಾನಿ ಮಾಡುವುದು
 • ಬಹುತೇಕ ಸಮಯ ಅತಿ ಜಾಗ್ರತೆ ಮತ್ತು ಎಚ್ಚರಿಕೆ.
 • ದೈನಂದಿನ ಘಟನೆಗಳ ಬಗ್ಗೆ ಭಯ, ಚಿಂತೆ ಮತ್ತು ಯೋಚನೆ
 • ಭಯದಿಂದ ಸಾಮಾನ್ಯ ಚಟುವಟಿಕೆಗಳನ್ನೂ ಮಾಡದಿರುವುದು ( ಬಸ್ಸು ಹಿಡಿಯುವುದು, ಕಿರಾಣಿ ಖರೀದಿ, ಇತ್ಯಾದಿ).
 • ಜನರೊಡನೆ ಆರಾಮಾಗಿ ಇರದೆ ಇರುವುದು.
 • ಕಡ್ಡಾಯವಾದ ಆಚರಣೆಗಳು ಅಥವಾ ಪುನರಾವರ್ತಿತ ವರ್ತನೆಗಳು.
 • ಹಳೆಯ ಘಟನೆಗಳ ಅಸಂಬದ್ಧ ನೆನಪುಗಳು ಅಥವಾ ದುಃಸ್ವಪ್ನಗಳು..

ಸಮಾಜೀಕರಣದ

 • ಆತ್ಮೀಯ ಗೆಳೆಯರು ಕಡಿಮೆ.
 • ಸಾಮಾಜಿಕ ಸಂದರ್ಭಗಳೆಂದರೆ ಗಾಬರಿ ಮತ್ತು ಭಯ
 • ಮಾತು ಮತ್ತು ದೈಹಿಕವಾಗಿ ವರ್ತನೆಯಲ್ಲಿ ಆಕ್ರಮಣ ಶೀಲತೆ
 • ಸಂಬಂಧಗಳಲ್ಲಿ ಗೊಂದಲ. ಅತಿ ಟೀಕೆ, ಅತಿ ಗೌರವ
 • ಇತರರೊಡನೆ ಬೆರೆಯುವುದು ಕಠಿನ
 • ಇತರರನ್ನು ಅರ್ಥ ಮಾಡಿಕೊಳ್ಳುವುದಿಲ್ಲ
 • ಅಸಹಜ ಅನುಮಾನ.

ಕಾರ್ಯ ನಿರ್ವಹಣೆಯ ಸಮಸ್ಯೆ

 • ಪದೇ ಪದೇ ಕೆಲಸ ಕಳೆದುಕೊಳ್ಳುವನು ಅಥವಾ ಬಿಡುವನು
 • ಕಛೇರಿಯಲ್ಲಿ, ಶಾಲೆಯಲ್ಲಿ ಅಥವಾ ಮನೆಯಲ್ಲಿ ಇತರರೊಡನೆ ಹೊಂದಿಕೆ ಇಲ್ಲ
 • ಏಕಾಗ್ರತೆ ಅಥವಾ ಪರಿಣಾಮಕಾರಿ ಕೆಲಸ ಸಾಧ್ಯವಿಲ್ಲ

ಮನೆಯಲ್ಲಿ ಸಮಸ್ಯೆ

 • ಇತರರ ಅಗತ್ಯಗಳಿಗೆ ಗಮನ ಇಲ್ಲ
 • ಮನೆಕೆಲಸ ಮತ್ತು ಇತರೆ ಕಾರ್ಯಗಳ ಕುರಿತು ಅತಿಯಾದ ಆಲಸ್ಯ ಭಾವನೆ
 • ಮನೆಗೆಲಸ ಮಾಡಲು ಆಗದಿರುವುದು
 • ಕುಟುಂಬದಲ್ಲಿ ನೇರವಾಗಿ ಇಲ್ಲವೆ ಪರೋಕ್ಷವಾಗಿ ಜಗಳವಾಡುವುದು ಇಲ್ಲವೆ ಕಾರಣವಾಗುವುದು

ಸ್ವ ಆರೈಕೆಯ ಸಮಸ್ಯೆ

 • ಶುಚಿತ್ವ ಮತ್ತು ಅಲಂಕಾರದ ಬಗ್ಗೆ ಅಸಡ್ಡೆ
 • ತಿನ್ನುವುದೇ ಇಲ್ಲ ಅಥವಾ ಅತಿಯಾಗಿ ತಿನ್ನುವುದು
 • ನಿದ್ರಾ ಹೀನತೆ, ಅತಿನಿದ್ದೆ ಅಥವಾ ಹಗಲಿನಲ್ಲಿ ನಿದ್ರೆ
 • ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ

ದೈಹಿಕ ಲಕ್ಷಣಗಳ ಸಮಸ್ಯೆ

 • ವಿವರಣೆಗೆ ಸಿಗದ ದೈಹಿಕ ಲಕ್ಷಣಗಳು
 • ಆಗಾಗ ತಲೆನೋವು, ದೇಹದ ನೋವು, ಬೆನ್ನು ನೋವು ಮತ್ತು ಕತ್ತು ನೋವ
 • ದೈಹಿಕ ಬಹುಬಾಧೆಗಳು, ಒಂದೇ ಸಲ ಅನೇಕ ಲಕ್ಷಣಗಳು

ಅಭ್ಯಾಸದ ಸಮಸ್ಯೆ

 • ದೈನಂದಿನ ಕೆಲಸಗಳಿಗೆ ಅಡ್ಡಿಯಾಗುವ, ಯಾವುದೇ ಅತಿಯಾದ, ಅನಿಯಂತ್ರಿತ ಅಭ್ಯಾಸ
 • ಮಾದಕದ್ರವ್ಯ ಮತ್ತು/ಮದ್ಯದ ವ್ಯಸನಿಯಾಗಿರುವುದು
 • ಬೆಂಕಿ ಹಚ್ಚಲು ಅನಿಯಂತ್ರಿತ ಆಸೆ
 • ಅನಿಯಂತ್ರಿತ ಜೂಜುಕೋರತನ
 • ಅನಿಯಂತ್ರಿತ ಖರೀದಿ ಹಂಬಲ

ಮಕ್ಕಳಲ್ಲಿ ಸಮಸ್ಯೆ

 • ಮಾದಕದ್ರವ್ಯ ಅಥವಾ ಮದ್ಯದ ವ್ಯಸನಿಯಾಗಿರುವುದು
 • ದೈನಂದಿನ ಚಟುವಟಿಕೆ ಮತ್ತು ಸಮಸ್ಯೆ ನಿಭಾಯಿಸಲು ಅಸಮರ್ಥತೆ
 • ಆಹಾರ ಮತ್ತು ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆ
 • ದೈಹಿಕ ಸಮಸ್ಯೆಗಳ ಬಗ್ಗೆ ಅತಿಯಾದ ದೂರು
 • ಅಧಿಕಾರವನ್ನು ಪ್ರಶ್ನಿಸುವುದು, ಶಾಲೆಗೆ ಚಕ್ಕರ್, ಕಳ್ಳತನ, ಅಥವಾ ಆಸ್ತಿ ಪಾಸ್ತಿಯನ್ನು ಹಾಳುಮಾಡುವುದು
 • ತೂಕ ಹೆಚ್ಚಳದ ಬಗ್ಗೆ ಅತಿ ಭಯ
 • ಹಸಿವು ಇಲ್ಲ ಮತ್ತು ಪದೆ ಪದೇ ಸಾವಿನ ಯೋಚನೆ, ಬಹುಕಾಲದ ವರೆಗಿನ ನಕಾರಾತ್ಮಕ ಭಾವನೆಗಳು
 • ಆಗಾಗ ಕೋಪ ಸ್ಫೋಟಗೊಳ್ಳುವುದ
 • ಶಾಲಾ ಸಾಧನೆಯಲ್ಲಿ ಬದಲಾವಣೆ
 • ಕಠಿನ ಪರಿಶ್ರಮ ಹಾಕಿದರೂ ಕಳಪೆ ಸಾಧನೆ
 • ಅತಿಯಾದ ಚಿಂತೆ ಮತ್ತು ಗಾಬರಿ
 • ಅತಿ ಚಟುವಟಿಕೆ
 • ಪದೇ ಪದೇ ದುಃಸ್ವಪ್ನಗಳು

ಮೂಲ: ಪೋರ್ಟಲ್ ತಂಡ

3.05882352941
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top