ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಾನಸಿಕ ಆರೋಗ್ಯ / ರಾಷ್ಟ್ರೀಯ ಕಾರ್ಯಕ್ರಮ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರಾಷ್ಟ್ರೀಯ ಕಾರ್ಯಕ್ರಮ

ಇದನ್ನು 1982 ರಲ್ಲಿ ಪ್ರಾರಂಭಿಸಲಾಯಿತು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ

ಇದನ್ನು 1982 ರಲ್ಲಿ ಪ್ರಾರಂಭಿಸಲಾಯಿತು. ದೇಶದಲ್ಲಿ ಮಾನಸಿಕ ಅನಾರೋಗ್ಯದ ಪ್ರಮಾಣ ಹಾಗೂ ಭಾರತದಲ್ಲಿ ಸಂಪನ್ಮೂಲ ಮತ್ತು ತರಬೇತಿ ಹೊಂದಿರುವ ಸಿಬ್ಬಂಧಿಯ ಅಭ್ಯತೆಯನ್ನು ಗಮನಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ (ಎನ್.ಎಂ.ಹೆಚ್.ಪಿ) ಯಲ್ಲಿ ಮೂರು ಅಂಶಗಳಿವೆ:

 1. ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ
 2. ಪುನರ್ವಸತಿ
 3. ತಡೆಗಟ್ಟುವಿಕೆ ಮತ್ತು ಸಕಾರಾತ್ಮಕ ಮಾನಸಿಕ ಆರೋಗ್ಯಕ್ಕೆ ಪ್ರೋತ್ಸಾಹ

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ – ಡಿ.ಎಂ.ಹೆಚ್.ಪಿ

ಕೇಂದ್ರ ಸರ್ಕಾರವು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (ಡಿ.ಎಂ.ಹೆಚ್.ಪಿ) ವನ್ನು ಅನುಷ್ಠಾನದ ಮೊದಲನೆ ಐದು ವರ್ಷಗಳಿಗೆ 100% ಕೇಂದ್ರೀಯ ಪ್ರಾಯೋಜಕತ್ವ ಯೋಜನೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಅನುಷ್ಠಾನ ಮಾಡಿತು. ಈ ಯೋಜನೆಯನ್ನು ಪ್ರಾಯೋಗಿಕ ಯೋಜನೆಯಾಗಿ 1996-97 ರ ಸಮಯದಲ್ಲಿ 09 ನೇ ಯೋಜನೆಯಲ್ಲಿ ಅನುಷ್ಠಾನ ಮಾಡಲಾಗಿದೆ.

ಉದ್ದೇಶ

 1. ಸಮುದಾಯಕ್ಕೆ ಮೂಲ ಸುಸ್ಥಿರ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಮತ್ತು ಈ ಸೇವೆಗಳನ್ನು ಇತರೆ ಆರೋಗ್ಯ ಸೇವೆಗಳೊಂದಿಗೆ ಸಮಗ್ರಗೊಳಿಸುವುದು.
 2. ಸಮುದಾಯದಲ್ಲಿಯೆ ರೋಗಿಗಳ ಮುಂಚಿತ / ಆರಂಭಿಕ ಪತ್ತೆ ಮತ್ತು ಚಿಕಿತ್ಸೆ.
 3. ಸಾರ್ವಜನಿಕ ಅರಿವು ಮೂಲಕ ಮಾನಸಿಕ ರೋಗಗಳತ್ತ ಕಳಂಕವನ್ನು ಕಡೆಮೆ ಮಾಡುವುದು.
 4. ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮತ್ತು ಅವರಿಗೆ ಸಮುದಾಯದೊಂದಿಗೆ ಪುನರ್ವಸತಿ ಕಲ್ಪಿಸುವುದು.

ಸೇವೆಗಳು

ಜಿಲ್ಲಾ ಮಾನಸಿಕ ಆರೋಗ್ಯ ತಂಡವು ಮಾಸನಿಕ ರೋಗಿ ಹಾಗೂ ಆತ / ಆಕೆ ಯ ಕುಟುಂಬದವರಿಗೆ ಕೆಳಗಿನ ಸೇವೆಗಳನ್ನು ಒದಗಿಸುವುದು:

 1. ಪ್ರತಿದಿನ ಹೊರ ರೋಗಿಗಳ (ಓ.ಪಿ.ಡಿ) ಸೇವೆಗಳು
 2. ಹತ್ತು ಹಾಸಿಗೆವುಳ್ಳ ಒಳ ರೋಗಿಗಳ (ಐ.ಪಿ.ಡಿ) ಸೇವೆಗಳ ಸೌಲಭ್ಯ
 3. ರೆಫರಲ್ ಸೇವೆ
 4. ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಹೆಚ್.ಸಿ) ದೊಂದಿಗೆ ಸಂಪರ್ಕ ಸ್ಥಾಪಿಸುವುದು
 5. ಅನುಸರಣೆ ಸೇವೆಯನ್ನು ಒದಗಿಸುವುದು
 6. ಉಪಯುಕ್ತವೆನಿಸಿದರೆ ಸಮುದಾಯ ಸಮೀಕ್ಷೆ ಮಾಡುವುದು
 7. ಸಮುದಾಯದಲ್ಲಿ ಅರಿವು ಮೂಡಿಸುವುದರ ಮೂಲಕ ಮಾನಸಿಕ ರೋಗಗಳತ್ತ ಕಳಂಕವನ್ನು ಹೋಗಲಾಡಿಸುವುದು
3.13913043478
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top