ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹೆಚ್ಚು ಬದುಕಬೇಕಾ

ಹೆಚ್ಚು ಬದುಕಬೇಕಾ ಕುರಿತಾದ ಮಾಹಿತಿ

ವ್ಯಕ್ತಿ ತನ್ನ ಜೀವನ ಕ್ರಮದಲ್ಲಿ ಕೆಲ ಬದಲಾವಣೆಯನ್ನು ತಂದುಕೊಂಡರೆ ಈಗಿರುವ ವಯೋಮಾನಕ್ಕಿಂತ ಹತ್ತು ವರ್ಷ ಹೆಚ್ಚೇ ಬದುಕಬಹುದು ಎನ್ನುತ್ತದೆ ಹೊಸ ಸಂಶೋಧನೆ. ನೀವು ಮದ್ಯವ್ಯಸನ, ಧೂಮಪಾನ ಇನ್ನಿತರ ಯಾವುದೇ ಚಟ ಹೊಂದಿದ್ದರೂ ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಅವನ್ನೆಲ್ಲ ಬಿಟ್ಟು ಉತ್ತಮ ಜೀವನಶೈಲಿಯನ್ನು ಬೆಳೆಸಿಕೊಂಡರೆ ಆರೋಗ್ಯ ಸುಧಾರಣೆ ಸಾಧ್ಯ ಎಂದಿದೆ ಈ ಸಂಶೋಧನೆ. 65 ವರ್ಷದ ವೃದ್ಧರೊಬ್ಬರ ಮೇಲೆ ಪ್ರಯೋಗ ಮಾಡಲಾಗಿ, ಅವರು ಇನ್ನೂ 10 ವರ್ಷ ಹೆಚ್ಚು ಬದುಕಬಲ್ಲಷ್ಟು ಆರೋಗ್ಯ ಪಡೆದದ್ದು ಸ್ಪಷ್ಟವಾಯಿತು. ಮದ್ಯಪಾನ ಮತ್ತು ಧೂಮಪಾನವನ್ನು ಕಡ್ಡಾಯವಾಗಿ ತ್ಯಜಿಸುವಂತೆ ಹೇಳಲಾಯಿತು. ಪ್ರತಿದಿನ ಬೆಳಗ್ಗೆ ಎದ್ದೊಡನೆ ಹತ್ತಿರದ ಉದ್ಯಾನವನಕ್ಕೆ ವಾಕಿಂಗ್ ಹೋಗುವುದನ್ನು ಕಡ್ಡಾಯಗೊಳಿಸಲಾಯಿತು. ಉದ್ಯಾನದ ಶುದ್ಧ ಹವೆಯಿಂದಾಗಿ ಉಸಿರಾಟ ಸರಾಗವಾಗಿದ್ದಲ್ಲದೆ, ದೇಹಕ್ಕೆ ಸೇರುವ ಗಾಳಿಯೂ ಶುದ್ಧವಾದದ್ದಾದ್ದರಿಂದ ಶ್ವಾಸಕೋಶ ಸಂಬಂಧೀ ಸಮಸ್ಯೆಗಳು ಕ್ರಮೇಣ ದೂರವಾದವು. ಆದಷ್ಟು ಮನೆಯಲ್ಲಿ ತಯಾರಿಸಿದ ತಿನಿಸುಗಳನ್ನೇ ತಿನ್ನುವಂತೆ ಸಲಹೆ ನೀಡಲಾಯಿತು. ಎಣ್ಣೆ ಪದಾರ್ಥ, ಬೇಕರಿ ತಿನಿಸು, ಹೆಚ್ಚು ಗಟ್ಟಿಯಾಗಿರುವ ಆಹಾರ, ಮಾಂಸಾಹಾರ, ಮಸಾಲೆ ಹೆಚ್ಚಿರುವ ಆಹಾರಗಳನ್ನು ತ್ಯಜಿಸುವಂತೆ ಹೇಳಲಾಯಿತು. ಏಕೆಂದರೆ ಈ ವಯಸ್ಸಿನಲ್ಲಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ ಘನ ಆಹಾರಗಳನ್ನೂ, ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ ಎಂಬುದು ಅವರ ನಿಲುವಾಗಿತ್ತು.

ಪ್ರತಿ ದಿನವೂ ಮನೆಯ ಜನರೊಂದಿಗೆ ಖುಷಿಯಿಂದ ಬೆರೆಯುವುದಲ್ಲದೆ, ಮೊಮ್ಮಕ್ಕಳೊಟ್ಟಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮಾನಸಿಕವಾಗಿಯೂ ವ್ಯಕ್ತಿ ಲವಲವಿಕೆಯಿಂದಿರುವುದು ಕಂಡುಬಂತು. ಒಂದಷ್ಟು ಸಮಯ ಧ್ಯಾನ, ಸರಳ ಯೋಗಾಸನಗಳಿಗಾಗಿ ಮೀಸಲಿಡುವಂತೆ ಹೇಳಲಾಯಿತು. ಇವೆಲ್ಲವೂ ದಿನೇ ದಿನೇ ಆತನ ದೇಹದ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರತೊಡಗಿದವು. ಅನಿಯಂತ್ರಿತ ಮಧುಮೇಹ, ರಕ್ತದೊತ್ತಡ ಸಮಸ್ಯೆಗಳು ಆಶ್ಚರ್ಯಕರವೆಂಬಂತೆ ಹತೋಟಿಗೆ ಬಂದವು. ಇವೆರಡು ಸಮಸ್ಯೆಗಳು ನಿಯಂತ್ರಣಕ್ಕೆ ಬಂದವೆಂದರೆ ಬೇರೆಲ್ಲವನ್ನೂ ಹಂತಕ್ಕೆ ತರುವುದು ದೊಡ್ಡದಲ್ಲ. ಪ್ರತಿದಿನವೂ ಇದೇ ಜೀವನಶೈಲಿಯನ್ನು ರೂಢಿಸಿಕೊಂಡ ವ್ಯಕ್ತಿ ವಯಸ್ಸಾಗುತ್ತಿದ್ದರೂ ಯುವಕರಷ್ಟೇ ಚಟುವಟಿಕೆಯಿಂದಿರತೊಡಗಿದ. ವ್ಯಕ್ತಿಯ ಜೀವನ ಶೈಲಿ ಆತನ ಇಡೀ ಕುಟುಂಬದ ಮೇಲೂ ಪರಿಣಾಮ ಬೀರತೊಡಗಿತು. ಅಪ್ಪನ ಆರೋಗ್ಯ ಸುಧಾರಿಸಿದ್ದನ್ನು ಕಂಡ ಮಗನೂ ಚಟಗಳನ್ನೆಲ್ಲ ತ್ಯಜಿಸತೊಡಗಿದ. ತಾನೂ ವಾಕಿಂಗಿಗೆ ಹೊರಟ. ಅಪ್ಪ-ಅಜ್ಜಂದಿರನ್ನು ನೋಡಿದ ಮೊಮ್ಮಗನೂ ಆಹಾರ ಶೈಲಿಯಲ್ಲಿ ಶಿಸ್ತನ್ನು ರೂಢಿಸಿಕೊಂಡ… 65 ವರ್ಷಕ್ಕೆ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದ ವ್ಯಕ್ತಿಇನ್ನೂ ಹತ್ತು ವರ್ಷ ಯಾವ ಸಮಸ್ಯೆಯೂ ಇಲ್ಲದೆ ಬದುಕಬಲ್ಲ ಎಂಬುದೀಗ ದೃಢವಾಗಿದೆ.
ಯಾವ ಔಷಧವೂ ಮಾಡದ ಕೆಲಸವನ್ನು ಬದಲಾದ ಜೀವನಶೈಲಿ ಮಾಡಬಲ್ಲದು ಎನ್ನುತ್ತದೆ ಈ ಸಂಶೋಧನೆ.

ಮೂಲ: ವಿಕ್ರಮ

2.9696969697
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top