ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಇನ್ನಿತರ ಯೋಜನೆಗಳು

ಸಾರ್ವತಿಕ ಲಸಿಕಾ ಕಾರ್ಯಕ್ರಮ,ಜನನಿ ಸುರಕ್ಷಾ ಯೋಜನೆ,ತಾಯಿ ಭಾಗ್ಯ ಯೋಜನೆ, ಆರೋಗ್ಯ ಕವಚ 108.

ಸಾರ್ವತಿಕ ಲಸಿಕಾ ಕಾರ್ಯಕ್ರಮ :

ಈ ಕಾರ್ಯಕ್ರಮದಡಿಯಲ್ಲಿ 0 ವರ್ಷದಿಂದ 5 ವರ್ಷಗೊಳಗಿನ ಮಕ್ಕಳಿಗೆ ತಗಲಬಹುದಾದ ರೋಗಗಳ ವಿರುದ್ಧ ಪ್ರಾಥಮಿಕ ಹಂತದಲ್ಲಿ ಬಿ.ಸಿ.ಜಿ. ಪೋಲಿಯೋ ಹನಿ, ಡಿ.ಟಿ.ಪಿ. ಇತ್ಯಾದಿ ಲಸಿಕೆಗಳನ್ನು ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ಹಾಗೂ ಪ್ರತಿವರ್ಷ ಜನವರಿ ಹಾಗೂ ಫೆಬ್ರವರಿ ಮಾಹೆಗಳಲ್ಲಿ 0 ವರ್ಷದಿಂದ 5 ವರ್ಷಗೊಳಗಿನ ಎಲ್ಲಾ ಮಕ್ಕಳಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಹಮ್ಮಿಕೊಳ್ಳಲಾಗುವುದು.

ಜನನಿ ಸುರಕ್ಷಾ ಯೋಜನೆ :


ಜನನಿ ಸುರಕ್ಷಾ ಯೋಜನೆಯಡಿ ಮನೆಯಲ್ಲಿ ಹೆರಿಗೆ ಆದರೆ ರೂ.500-00 ಪ್ರೋತ್ಸಾಹಧನ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆದಲ್ಲಿ ರೂ. 700-00 ಹಾಗೂ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆ ಆದಲ್ಲಿ ಕ್ರಮವಾಗಿ ರೂ. 600-00 ಹಾಗೂ ರೂ. 700-00 ಹಾಗೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಹೆರಿಗೆಯಾದಲ್ಲಿ ರೂ. 1500-00 ಗಳನ್ನು ಪ್ರೋತ್ಸಾಹಧನವನ್ನಾಗಿ ನೀಡಲಾಗುವುದು.

ತಾಯಿ ಭಾಗ್ಯ ಯೋಜನೆ

ತಾಯಿ ಭಾಗ್ರ ಕಾರ್ಯಕ್ರಮವು 2009-10 ನೇ ಸಾಲಿನಲ್ಲಿ ಪ್ರಾರಂಭವಾಗಿದೆ ಸರ್ಕಾರಿ ಆಸ್ಪತ್ರೆ ಹಾಗೂ ಅನುದಾನಿತ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ನುರಿತ ಹೆರಿಗೆ ತಜ್ಞರಿಂದ ಸಾಂಸ್ಥಿಕ ಹೆರಿಗೆಗಳನ್ನು ಹೆಚ್ಚಿಸುವುದು ಮತ್ತು ಯೋಜನೆ ಅನುಷ್ಠಾನದಿಂದ ತಾಯಿಮರಣ ಹಾಗೂ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.

ಆರೋಗ್ಯ ಕವಚ 108.

ನಮ್ಮ ಜಿಲ್ಲೆಯಲ್ಲಿ ಫೆಬ್ರವರಿ 2009 ರಿಂದ 108 ಆರೋಗ್ಯ ಕವಚ ಕಾರ್ಯವನ್ನು ಆರಂಬಿಸಲಾಗಿದ್ದು, ಜನರಿಗೆ ತುರ್ತು ಸೇವೆಯನ್ನು ಒದಗಿಸಿ ಪ್ರಾಣ ಹಾನಿಯನ್ನು ತಡೆಗಟ್ಟಲು ಇದರ ಗುರಿಯಾಗಿದೆ.

3.02
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top