ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್. ಆರ್. ಹೆಚ್. ಎಂ)
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್. ಆರ್. ಹೆಚ್. ಎಂ) ಯು ರಾಷ್ಟ್ರಾದ್ಯಂತ ಗ್ರಾಮೀಣ ಪ್ರದೇಶದ ಜನರಿಗೆ ಪರಿಣಾಮಕಾರಿ ಆರೋಗ್ಯಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಸುತ್ತಿದ್ದು, ಮುಖ್ಯವಾಗಿ ಸಾರ್ವಜನಿಕ ಆರೋಗ್ಯ ಸೂಚಕಗಳಲ್ಲಿ ಮತ್ತು / ಅಥವ ಸಾರ್ವಜನಿಕ ಆರೋಗ್ಯ ಮೂಲಭೂತ ವ್ಯವಸ್ಥೆಯಲ್ಲಿ ದುರ್ಬಲತೆವಿರುವ 18 ರಾಜ್ಯಗಳಿಗೆ ಕೇಂದ್ರಿಕರಿಸುತ್ತಿದೆ. ಅಭಿಯಾನದ ಅವಧಿ 2005 ರಿಂದ 2012 ವಾಗಿದೆ.
ಮುಖ್ಯ ಕೇಂದ್ರಿಕ್ರತ ರಾಜ್ಯಗಳು
ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ್, ಛತ್ತೀಸ್ಘಡ್, ಹಿಮಾಚಲ ಪ್ರದೇಶ, ಝಾರ್ಖಂಡ್, ಜಮ್ಮು ಮತ್ತು ಕಾಶ್ಮೀರ್, ಮಣಿಪುರ್, ಮಿಝೊರಂ, ಮೇಘಾಲಯ, ಮಧ್ಯ ಪ್ರದೇಶ, ನಾಗಲ್ಯಾಂಡ್, ಒರಿಸ್ಸಾ, ರಾಜಸ್ಥಾನ್, ಸಿಕ್ಕಿಂ, ತ್ರಿಪುರ, ಉತ್ತರಾಂಚಲ್ ಮತ್ತು ಉತ್ತರ ಪ್ರದೇಶ.
ಗುರಿಗಳು
- ಶಿಶು ಮರಣ ಪ್ರಮಾಣ (IMR)ಹಾಗೂ ತಾಯಿಯ ಮರಣ ಪ್ರಮಾಣ (MMR) ವನ್ನು ಕ್ಷೀಣಿಸುವುದು.
- ಸಾರ್ವಜನಿಕ ಆರೋಗ್ಯ ಸೇವೆಗಳಾದಂತಹ ಮಹಿಳಾ ಆರೋಗ್ಯ, ಮಗುವಿನ ಆರೋಗ್ಯ, ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ, ಚುಚ್ಚುಮದ್ದು, ಹಾಗೂ ಆಹಾರ / ಪೋಷಣೆ ಗಳ ಸಾರ್ವತ್ರಿಕ ಲಭ್ಯತೆ.
- ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳ, ಸ್ಥಳೀಯವಾಗಿ ಉದ್ಭವವಾಗುವ ರೋಗಗಳನ್ನು ಒಳಗೊಂಡಂತೆ, ನಿಯಂತ್ರಣ ಹಾಗೂ ತಡೆಗಟ್ಟುವಿಕೆ.
- ಪೂರ್ಣ ಹಾಗೂ ವ್ಯಾಪಕ ಪ್ರಾಥಮಿಕ ಆರೊಗ್ಯ ಸೇವೆಗಳ ಸಮಗ್ರ ಸುಲಭಗಮ್ಯತೆ.
- ಜನಸಂಖ್ಯೆಯಲ್ಲಿ ಸ್ಥಿರತೆ, ಲಿಂಗತ್ವ ಮತ್ತು ಜನವಿವರಣೆಯಲ್ಲಿ ಸಮತೋಲನ.
- ಪ್ರಾದೇಶಿಕ ಆರೋಗ್ಯ ಪದ್ಧತಿಗಳನ್ನು ಪುನಃಸತ್ವಯುತೆಗೊಳಿಸುವುದು ಹಾಗೂ ಆಯೂಶ್ - ಆಯುರ್ವೇದ, ಯೂನಾನಿ, ಶುಶ್ರತ ಮತ್ತು ಹೋಮಿಯೋಪತಿ, (AYUSH) ಗೆ ಮುಖ್ಯವಾಹಿನಿಯಲ್ಲಿ ಪ್ರಚಲಿತಗೊಳಿಸುವುದು.
- ಆರೋಗ್ಯಕರ ಜೀವನ ವಿಧಾನಗಳನ್ನು ಪ್ರೋತ್ಸಾಹಿಸುವುದು
ಕಾರ್ಯ ತಂತ್ರಗಳು
- ಮುಖ್ಯ ಕಾರ್ಯತಂತ್ರಗಳು
- ಸಾರ್ವಜನಿಕ ಆರೋಗ್ಯ ಸೇವೆಗಳ ಮಾಲಿಕತ್ವ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಪಂಚಾಯ್ತಿ ರಾಜ್ ಸಂಸ್ಥೆಗಳಿಗೆ (ಪಿ. ಆರ್. ಐ ಗಳು) ತರಬೇತಿ ಮತ್ತು ಸಾರ್ಮಥ್ಯ ವರ್ಧನೆ.
- ಮಹಿಳ ಆರೋಗ್ಯ ಕಾರ್ಯಕರ್ತೆ (ಆಶಾ ಕಾರ್ಯಕರ್ತೆ) ಮುಖಾಂತರ ಮನೆಮಟ್ಟದಲ್ಲಿ ಅಭಿವ್ರದ್ಧಿಗೊಂಡ ಆರೋಗ್ಯ ಸೇವೆಗಳ ಲಭ್ಯತೆಗಾಗಿ ಪ್ರೋತ್ಸಾಹ.
- ಪಂಚಾಯ್ತಿಯ ಗ್ರಾಮ ಆರೋಗ್ಯ ಸಮಿತಿ ಮುಖಾಂತರ ಪ್ರತಿ ಗ್ರಾಮಕ್ಕೂ ಆರೋಗ್ಯ ಯೋಜನೆ.
- ಸ್ಥಳೀಯ ಯೋಜನೆ ತಯಾರಿಕೆ ಮತ್ತು ಅವುಗಳ ಕಾರ್ಯಗತಕ್ಕಾಗಿ ಮತ್ತು ಹಿಚ್ಚಿನ ಬಹು ಉದ್ದೇಶಿತ ಕಾರ್ಯಕರ್ತ (ಮಲ್ಟಿ ಪರ್ಪಜ್ ವರ್ಕರ್ಸ್) (MPWs) ರಿಗಾಗಿ ಬಿಡುಗಡೆ ಮಾಡಿದ ನಿಧಿ ಮೂಲಕ ಉಪ ಕೇಂದ್ರಗಳ ಬಲಪಡಿಸುವಿಕೆ.
- ಅಸ್ತಿತ್ವದಲ್ಲಿರುವ ಪಾರ್ಥಮಿಕ ಆರೋಗ್ಯ ಕೇಂದ್ರಗಳ (PHCs) ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ (CHCs) ಬಲವರ್ಧನೆ ಮತ್ತು ಪ್ರಮಾಣಕ ದರ್ಜೆಗಳುಳ್ಳ (ಸಿಬ್ಬಂಧಿ, ಸಾಧನ ಸಲಕರಣೆ ಹಾಗೂ ನಿರ್ವಹಣೆ ಸ್ಪಷ್ಟಿಕರಿಸಿದ ಭಾರತೀಯ ಸಾರ್ವಜನಿಕ ಆರೋಗ್ಯ ದರ್ಜೆಗಳು) ಉತ್ತಮ ಪಡಿಸಿದ ರೋಗಶಮಕ ಸೇವೆಗಳನ್ನು ಒದಗಿಸಲು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 30-50 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳ ವ್ಯವಸ್ಥೆ.
- ಕುಡಿಯು ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ ಹಾಗೂ ಪೋಷಣೆಗೊಳಗೊಂಡ ಜಿಲ್ಲಾ ಆರೋಗ್ಯ ಅಭಿಯನದಿಂದ ತಯಾರಿಸ್ಪಟ್ಟ ವಿವಿಧ ಇಲಾಖೆಗಳನ್ನೊಳಗೊಂಡ (ಅಂತರ ವಿಭಾಗೀಯ) ಜಿಲ್ಲಾ ಆರೋಗ್ಯ ಯೋಜನೆಯ ತಯಾರಿಕೆ ಹಾಗೂ ಅನುಷ್ಠಾನ.
- ಜಿಲ್ಲಾ, ವಿಭಾಗೀಯ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಆರೋಗಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅದ್ಯಂತ ಸಂಘಟನೆ.
- ಸಾರ್ವಜನಿಕ ಆರೋಗ್ಯ ನಿರ್ವಹಣೆಗಾಗಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನಗಳಿಗೆ ತಾಂತ್ರಿಕ ನೆರವು.
- ಸ್ಪಷ್ಟತೆ ಆಧಾರಿತ ಯೋಜನೆಯ ರೂಪರೇಷೆ, ಮೇಲ್ವಿಚಾರಣೆ ಮತ್ತು ಮೇಲುಸ್ತುವಾರಿಗಾಗಿ ದತ್ತಾಂಶ ಸಂಗ್ರಹಣೆ, ಅಳೆಯುವಿಕೆ ಮತ್ತು ಪನಃ ಪರಿಶೀಲನೆ ಯಲ್ಲಿ ಸಾಮರ್ಥ್ಯ ವರ್ಧನೆ.
- ಆರೋಗ್ಯಕ್ಕಾಗಿ ಮಾನವ ಸಂಪನ್ಮೂಲಗಳ ಜೀವನೋಪಾಯ ಅಭಿವ್ರದ್ಧಿ ಮತ್ತು ಕಾರ್ಯಾಚರಣೆಗಾಗಿ ಪಾರದರ್ಶಕ ನೀತಿಗಳ ಸೂತ್ರ ನಿರೂಪಣೆ.
- ಆರೋಗ್ಯಕರ ಜೀವನ ಶೈಲಿಗಳ ಪ್ರೋತ್ಸಾಹ, ತಂಬಾಕು ಮತ್ತು ಮಧ್ಯಪಾನ ಸೇವನೆಯಲ್ಲಿ ಕಡತ, ಇತ್ಯಾದಿ, ಗಳನ್ನು ಉತ್ತೇಜಿಸಲು ಎಲ್ಲಾ ಮಟ್ಟದಲ್ಲಿ ಮುಂಜಾಗ್ರತ ಆರೋಗ್ಯ ಸೇವೆಗಾಗಿ ಸಾಮರ್ಥ್ಯ ಅಭಿವ್ರದ್ಧಿ.
- ನಿರ್ದಿಷ್ಠವಾಗಿ ಹಿಂದುಳಿದ ಪ್ರದೇಶಗಳಲ್ಲಿ ಲಾಭರಹಿತ ಕ್ಷೇತ್ರಗಳಿಗೆ ಪ್ರೋತ್ಸಾಹ.
- ಪೂರಕ ಕಾರ್ಯತಂತ್ರಗಳು
- ಸಮಂಜಸ ಬೆಲೆಯಲ್ಲಿ ಗುಣಾತ್ಮಕ ಸೇವೆಗಳ ಲಭ್ಯತೆ ಖಾತ್ರಿಪಡಿಸುವಂತೆ ಅನೌಪಚಾರಿಕ ಗ್ರಾಮೀಣ ವೈದ್ಯರು ಸೇರಿದಂತೆ ಖಾಸಾಗಿ ಕ್ಷೇತ್ರಕ್ಕೆ ನಿಯಂತ್ರಣ.
- ಸಾರ್ವಜನಿಕ ಆರೊಗ್ಯ ಗುರಿಗಳನ್ನು ಸಾಧಿಸಲು ಸಾರ್ವಜನಿಕ ಹಾಗೂ ಖಾಸಾಗಿ ಕ್ಷೇತ್ರಗಳ ಸಹಭಾಗಿತ್ವಕ್ಕೆ ಪ್ರೋತ್ಸಾಹ.
- ಆಯೂಶ್ - ಆಯುರ್ವೇದ, ಯೂನಾನಿ, ಶುಶ್ರತ ಮತ್ತು ಹೋಮಿಯೋಪತಿ, (AYUSH) ಗೆ ಮುಖ್ಯವಾಹಿನಿಯಲ್ಲಿ ಪ್ರಚಲಿತಗೊಳಿಸುವುದು – ಸ್ಥಳೀಯ ಆರೋಗ್ಯ ಪದ್ಧತಿಗಳನ್ನು ಪುನಃಚೈತನ್ಯಗೊಳಿಸುವುದು.
- ವೈದ್ಯಕೀಯ ಸೇವೆ ಮತ್ತು ವೈದ್ಯಕೀಯ ನೈತಿಕತೆಯ ನಿಯಂತ್ರಣದ ಜೊತೆಯಲ್ಲಿ ಗ್ರಾಮೀಣ ಆರೋಗ್ಯ ಸಮಸ್ಯಗಳಿಗೆ ನೆರವು ನೀಡುವಂತೆ ವೈದ್ಯಕೀಯ ಶಿಕ್ಷಣಕ್ಕೆ ಹೊಸ ನಿದರ್ಶನ.
ಸಾಂಸ್ಥಿಕ ವ್ಯವಸ್ಥೆಗಳು
- ಪಂಚಾಯ್ತಿ ಪ್ರತಿನಿಧಿ / ಗಳು, ಎ. ಎನ್. ಎಂ / ಎಂ. ಪಿ. ಡಬ್ಲ್ಯೂ, ಅಂಗನವಾಡಿ ಕಾರ್ಯಕರ್ತೆ, ಶಿಕ್ಷಕಿ / ಕ, ಆಶಾ ಕಾರ್ಯಕರ್ತೆ, ಸಮುದಾಯ ಕಾರ್ಯಕರ್ತೆಗಳೊಳಗೊಂಡ ಗ್ರಾಮ ಮಟ್ಟದಲ್ಲಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ರಚನೆ.
- ಸಾರ್ವಜನಿಕ ಆಸ್ಪತ್ರೆಗಳ ಸಮುದಾಯಿಕ ನಿರ್ವಹಣೆಗಾಗಿ ರೋಗಿ ಕಲ್ಯಾಣ ಸಮಿತಿ (ಅಥವ ಸಮಾನ) ಯ ರಚನೆ.
- ಎಲ್ಲಾ ಸಂಬಂಧಪಟ್ಟ ಇಲಾಖೆಗಳಿಂದ, ಸ್ವಯಂ ಸೇವಾ ಸಂಸ್ಥೆಗಳ, ಖಾಸಾಗಿ ವ್ರತ್ತಿಪರರಿಂದ ಪ್ರತಿನಿಧಿತ್ವ ಪಡೆದ ಹಾಗೂ ಜಿಲ್ಲಾ ಆರೋಗ್ಯ ಮುಖ್ಯಸ್ಥನಿಂದ ಸಂಚಾಲಿತ ಜಿಲ್ಲಾ ಪರಿಷದ್ ನೇತ್ರತ್ವದಲ್ಲಿ ಜಿಲ್ಲಾ ಆರೋಗ್ಯ ಅಭಿಯಾನದ ರಚನೆ.
- ಮುಖ್ಯ ಮಂತ್ರಿಗಳ ಅಧ್ಯಕ್ಷತೆ ಹಾಗೂ ಆರೋಗ್ಯ ಮಂತ್ರಿಯ ಸಹ-ಅಧ್ಯಕ್ಷತೆಯಲ್ಲಿ ರಾಜ್ಯ ಆರೊಗ್ಯ ಕಾರ್ಯದರ್ಶಿ ಸಂಚಾಲಿತ ರಾಜ್ಯ ಆರೋಗ್ಯ ಅಭಿಯಾನದ ರಚನೆ. ಸಂಬಂಧಪಟ್ಟ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳು, ಖಾಸಾಗಿ ವ್ರತ್ತಿಪರರು, ಇತ್ಯಾದಿ, ಇದರಲ್ಲಿ ಪ್ರತಿನಿಧಿಸುತ್ತಾರೆ.
- ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಮನ್ವಯತೆ.
- ಅಭಿಯಾನಕ್ಕೆ ನೈತಿಕ ನೆರವು ಮತ್ತು ಮಾರ್ಗದರ್ಶನ ನೀಡಲು ರಾಷ್ಟ್ರೀಯ ಅಭಿಯಾನ ನಿಯಂತ್ರಣ ತಂಡದ ರಚನೆ. ಇದರ ಅಧ್ಯಕ್ಷತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೇಂದ್ರ ಸಚಿವರು ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರು ವಹಿಸುತ್ತಾರೆ. ಪಂಚಾಯ್ತಿ ರಾಜ್ ಮತ್ತು ಗ್ರಾಮೀಣಾಭಿವ್ರದ್ಧಿ ಸಚಿವರು, ಮಾನವ ಸಂಪನ್ಮೂಲ ಅಭಿವ್ರದ್ಧಿ ಸಚಿವರು ಮತ್ತು ಸಾರ್ವಜನಿಕ ಆರೋಗ್ಯ ವ್ರತ್ತಿಪರರು ಇದರ ಸದಸ್ಯರಾಗಿರುತ್ತಾರೆ.
- ಅಭಿಯಾನದ ಆಡಳಿತಾಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಧಿಕಾರ ಪಡೆದ ಕಾರ್ಯಕ್ರಮ ಸಮಿತಿಯ ರಚನೆ.
- ಗೌರವಾನ್ವಿತ ಸಲಹೆಗಾರರ ತಂಡದಿಂದ ಆಶಾ ಯೋಜನೆ ಅನುಷ್ಠಾನಕ್ಕೆ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನ.
- ಆಯ್ದ ಕಾರ್ಯಗಳಿಗೆ ಕಾರ್ಯಪಡೆಗಳ (ಸಮಯ ಬದ್ಧ) ರಚನೆ.
ಹಣಕಾಸು ವ್ಯವಸ್ಥೆಗಳು
- ಈ ಅಭಿಯಾನವು ರಕ್ಷಣಾ ಕಾರ್ಯಕ್ರಮವನ್ನಾಗಿ ನಿರೂಪಿಸ್ಪಟ್ಟು, ಚಾಲನೆಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಸಂತಾನೊತ್ಪತ್ತಿ ಮತ್ತು ಶೀಶು ಆರೋಗ್ಯ - II (RCH II), ಚಳಿ ಜ್ವರ (ಮಲೇರಿಯಾ), ಕ್ಷಯ (TB), ಕಾಲಾ ಅಜರ್, ಫೈಲೇರಿಯ, ಅಂಧತ್ವ ಮತ್ತು ಅಯೋಡೀನ್ ಕೊರತೆ ಹಾಗೂ ಸಮಗ್ರ ರೋಗ ನಿಗಾ ಕಾರ್ಯಕ್ರಮಗಳನ್ನು ಒಳಗೊಂಡಿದೆ.
- 2005-06 ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (NRHM) ವು ಮಾಡಿದ ವೆಚ್ಚ ರೂ. 6,700/- ಕೋಟಿಗಳು. ರಾಷ್ಟ್ರೀಯ ಸಮಸ್ತ ಕನಿಷ್ಠ ಕಾರ್ಯಕ್ರಮ (National Common Minimum Programme) ದ ಅಡಿಯಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ 0.9% ನಿಂದ 2-3% ಸಮಗ್ರ ಅಂತರ್ದೇಶೀಯ ಉತ್ಪಾದನೆ (ಜಿ.ಡಿ.ಪಿ) ಹೆಚ್ಚಳದ ಅಧಿಕ್ರತ ಆದೇಶ ಪೂರೈಕೆಗಾಗಿ ಅಭಿಯಾನವೂ ಪ್ರಸ್ತುತ ವಾರ್ಷಿಕ ಹಣಕಾಸಿನ ಬಂಡವಾಳಕ್ಕೆ ಅಧಿಕ್ರತ 30% ಸೇರಿಸಲು ಗಮನಹರಿಸಬೇಕಾಗುತ್ತದೆ.
- ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (NRHM) ದ ಬಂಡವಾಳ / ವೆಚ್ಚ ವಾರ್ಷಿಕ ಆಯಾವ್ಯಯದ ಕಾರ್ಯಸಮಯದಲ್ಲಿ ನಿರ್ಧರಿಸಲಾಗುತ್ತದೆ.
- ಅಭಿಯಾನದ ಕಾರ್ಯಗಳ ನೆರವಿಗಾಗಿ, ಸಾರ್ವಜನಿಕ ಆರೋಗ್ಯ ಆಯಾವ್ಯಯಕ್ಕೆ, ವಾರ್ಷಿಕ ಕನಿಷ್ಠ 10% ವಂತಿಗೆ ಸಂಗ್ರಹಣೆ ರಾಜ್ಯಗಳಿಂದ ನಿರೀಕ್ಷಿಸಲಾಗಿದೆ.
- ಸ್ಕೋವ (SCOVA) ಮುಖಾಂತರ ರಾಜ್ಯಗಳಿಗೆ ಹಣಕಾಸು ಬಿಡುಗಡೆ ಮಾಡಲಾಗಿದ್ದು, 18 ಮುಖ್ಯ ಕೆಂದ್ರಿಕ್ರತ ರಾಜ್ಯಗಳಿಗೆ ಒತ್ತು ನೀಡಿ ಸಮಗ್ರ ವಿತ್ತೀಯ / ಹಣಕಾಸಿನ ಹೊದಿಕೆ ರೂಪದಲ್ಲಿ ವಿತರಣೆ ಮಾಡಲಾಗುವುದು.
ಫಲಿತಾಂಶಗಳು
- ರಾಷ್ಟ್ರೀಯ ಮಟ್ಟದಲ್ಲಿ:
- ಶಿಶು ಮರಣ ಪ್ರಮಾಣ (IMR) ದಲ್ಲಿ 30 / 1000 ಪ್ರತಿ ಜೀವಂತ ಜನನ ಕ್ಕೆ ಕ್ಷೀಣಿತೆ.
- ತಾಯಿಯ ಮರಣ ಪ್ರಮಾಣ (MMR)100 / 100,000 ಗೆ ಇಳಿಕೆ.
- 2.1 ಕ್ಕೆ ಸಮಗ್ರ ಫಲವಂತಿಕೆ ಪ್ರಮಾಣದಲ್ಲಿ ಇಳಿತ.
- ಮಲೇರಿಯಾ ಮರಣ ಪ್ರಮಾಣದಲ್ಲಿ ಕ್ಷೀಣಿತೆ – 2010 ರ ವರಗೆ 50%, ಅಧಿಕ್ರತ 10% 2012 ರ ವರೆಗೆ.
- ಕಾಲ ಅಜರ್ ಮರಣ ಪ್ರಮಾಣದಲ್ಲಿ ಇಳಿತ: 2010 ರ ವರೆಗೆ 100% ಹಾಗೂ 2012 ರ ವರೆಗೆ ಸೊಂಪೂರ್ಣ ನಿಮೂರ್ಲನೆಗಾಗಿ ಬೆಂಬಲ.
- ಫೈಲೇರಿಯ / ಚಿಕ್ಕಣಿ ಫೈಲೇರಿಯ ಕಡಿತದ ಪ್ರಮಾಣ: 2010 ರ ವರೆಗೆ 70%, 2012 ರ ವರೆಗೆ 80% ಮತ್ತು 2015 ರ ವರೆಗೆ ಅದರ ನಿರ್ಮೂಲನೆ.
- ಡೇಂಗ್ಯೂ ಮರಣ ಪ್ರಮಾಣದಲ್ಲಿ ಕಡಿತ: 2010 ರ ವರೆಗೆ 50% ಮತ್ತು 2012 ರ ವರೆಗೆ ಇದೆ ಪ್ರಮಾಣ ಮಟ್ಟದ ಪುಷ್ಠಿ.
- ಜಾಪಾನಿಯ ಎನ್ಸೆಫಲೈಟಿಸ್ ಮರಣ ಪ್ರಮಾಣದ ಕಡಿತ: 2010 ರ ವರೆಗೆ 50% ಮತ್ತು 2012 ರ ವರೆಗೆ ಇದೆ ಪ್ರಮಾಣ ಮಟ್ಟದ ಪುಷ್ಠಿ.
- ಪರೆ (ಕ್ಯಾಟರ್ಯಾಕ್ಟ) ಶಸ್ತ್ರ ಚಿಕಿತ್ಸೆ: 2012 ರ ವರೆಗೆ ಪ್ರತಿ ವರ್ಷ 46 ಲಕ್ಷಕ್ಕೆ ಹೆಚ್ಚಳ.
- ಕುಷ್ಠ ರೋಗ (ಲೆಪ್ರಸಿ) ಹರಡಿಕೆಯ ಪ್ರಮಾಣ: 2005 ರಲ್ಲಿ 1.8 / 10, 1000 ದಿಂದ 1 / 10, 000 ಕ್ಕಿಂತ ಕಡಿಮೆಗೆ ಇಳಿತ.
- ಕ್ಷಯ ರೋಗ (ಟಿ. ಬಿ) ಯ ಡಾಟ್ಸ್ (DOTS) ಸೇವೆಗಳು: ಸಂಪೂರ್ಣ ಅಭಿಯಾನ ಕಾಲದಲ್ಲಿ 85% ರ ರೋಗಪರಿಹಾರಕ ಪ್ರಮಾನವನ್ನು ಉಳಿಸಿಕೊಳ್ಳುವುದು.
- ಭಾರತೀಯ ಸಾರ್ವಜನಿಕ ಆರೋಗ್ಯ ದರ್ಜೆಗಳಿಗೆ ಸಮುದಾಯ ಆರೋಗ್ಯ ಕೇಂದ್ರಗಳ ಉನ್ನತೀಕರಣ.
- 20% ಕ್ಕಿಂತ ಕಡಿಮೆಯಿಂದ 75% ಕ್ಕೆ ಪ್ರಥಮ ನಿದರ್ಶನ ಘಟಕಗಳ ಬಳಕೆ ಪ್ರಮಾಣದಲ್ಲಿ ಹೆಚ್ಚಳ.
- 2,50,000 ಮಹಿಳಾ ನಿಯುಕ್ತ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರನ್ನು (ಆಶಾ ಕಾರ್ಯಕರ್ತೆಯರನ್ನು) 10 ರಾಜ್ಯಗಳಲ್ಲಿ ನೇಮಿಸಲಾಗುತ್ತದೆ.
- ಸಮುದಾಯ ಮಟ್ಟದಲ್ಲಿ:
- ಸಾರ್ವತ್ರಿಕ ಅಸ್ವಸ್ಥತೆಗಳಿಗಾಗಿ ಔಷಧಿ ಪೆಟ್ಟಿಗೆಯೊಂದಿಗೆ ಗ್ರಾಮ ಮಟ್ಟದಲ್ಲಿ ಸುಕ್ಷಿತ ಸಮುದಾಯ ಮಟ್ಟದ ಕಾರ್ಯಕರ್ತರ ಅಭ್ಯತೆ.
- ಪೋಷಣೆ ಸೇರಿದಂತೆ ಚುಚ್ಚುಮದ್ದು, ಪ್ರಸವ ಪೂರ್ವ / ಪ್ರಸವ ನಂತರ ದ ತಪಾಸಣೆ ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯ ಪೋಷಣೆಗಳನ್ನು ಒದಗಿಸುವುದಕ್ಕಾಗಿ ನಿರ್ದಿಷ್ಟ ದಿನ / ತಿಂಗಳಲ್ಲಿ ಅಂಗನವಾಡಿ ಮಟ್ಟದಲ್ಲಿ ಆಯೋಗ್ಯ ದಿನಾಚರಣೆ.
- ಆಸ್ಪತ್ರೆ ಹಾಗೂ ಉಪ ಕೇಂದ್ರ ಮಟ್ಟದಲ್ಲಿ ಸಾಮಾನ್ಯ ಖಾಯಿಲೆಗಳಿಗೆ ಸಾರ್ವತ್ರಿಕ ಔಷಧಿಗಳ ಲಭ್ಯತೆ.
- ಪ್ರಾಥಮಿಕ ಆರೋಗ್ಯ ಕೇಂದ್ರ (PHC) / ಸಮುದಾಯ ಆರೋಗ್ಯ ಕೇಂದ್ರ (CHC) ಮಟ್ಟದಲ್ಲಿ ನಿಶ್ಚಿತವಾದ ವೈದ್ಯರ, ಔಷಧಿಗಳ ಹಾಗೂ ಗುಣಮಟ್ಟ ಸೇವೆಗಳ ಲಭ್ಯತೆ ಮುಖಾಂತರ ಉತ್ತಮ ಆಸ್ಪತ್ರ ನಿಗಾವಹಿಸುವಿಕೆ.
- ಕಾರ್ಯಕ್ರಮದಡಿಯಲ್ಲಿ ಉತ್ತಮಗೊಳಿಸಿದ ಸಂಘಟಿತ (ಸಂಚಾರಿ) ಸೇವೆಗಳ, ಪರ್ಯಾಯ / ಬದಲಿ ಲಸಿಕೆ ವಿತರಣೆ ಯ ಮತ್ತು ಸ್ವಯಂ ದುರ್ಬಗೊಳ್ಳುವ ಸೂಜಿ (ಸಿರಿಂಜ್) ಗಳ ಪ್ರತಿಷ್ಠಾಪನೆಯಿಂದ ಸುಧಾರಿಸಿದ ಸಾರ್ವತ್ರಿಕ ಚುಚ್ಚುಮದ್ದಿನ ಲಭ್ಯತೆ.
- ಬಡತನ ರೇಖೆಗಿಂತ ಕಡಿಮೆ ಇರುವ (BPL) ಕುಟುಂಬಗಳಿಗೆ ಜನನಿ ಸುರಕ್ಷ ಯೋಜನೆಯಡಿಯಲ್ಲಿ (JSY) ಅನುದಾನಿತ ದರದಲ್ಲಿ ಉತ್ತಮಗೊಳಿಸಿದ ಆಸ್ಪತ್ರೆ ಸೇವೆ (ಆರೈಕೆ), ಮಾರ್ಗದರ್ಶನ (ಬೆಂಗಾವಲು), ವಾಹನ (ಸಾರಿಗೆ) ಸೌಲಭ್ಯ ಮತ್ತು ತಜ್ಞರ ಸಲಹೆ ಪಡೆಯುವ ವ್ವಯಸ್ಥೆ ಗಳ ಮೂಲಕ ಸಾಂಸ್ಥಿಕ ಪ್ರಸವ / ಹೆರಿಗೆ ಗಾಗಿ ಉತ್ತಮ ಪಡಿಸಿದ ಸೌಲಭ್ಯಗಳು.
- ಅಭಿಯಾನದ ಅಡಿಯಲ್ಲಿ ಪ್ರಾಯೋಗಿಕ ಸಮುದಾಯ ಆರೋಗ್ಯ ವಿಮೆ ಮುಖಾಂತರ ಕಡಿಮೆ ದರದಲ್ಲಿ (ಆರ್ಥಿಕ ಸಷ್ಟದೊಂದಿಗೆ) ಸುರಕ್ಷಿತ ಆರೋಗ್ಯ ಸೇವೆ (ಆರೈಕೆ) ಗಳಲಭ್ಯತೆ.
- ಗ್ರಹ ಆಧಾರಿತ / ಕೌಟುಂಬಿಕ ಶೌಚಾಲಗಳನ್ನು ಒದಗಿಸುವುದು.
- ಜಿಲ್ಲಾ ಮಟ್ಟದಲ್ಲಿ ಸಂಚಾರಿ ವೈದ್ಯಕೀಯ ಘಟಕಗಳೊಂದಿಗೆ ಉತ್ತಮ ಪಡಿಸಿದ ಸಮುದಾಯಕ್ಕೆ ತಲುಪುವ ಸೇವೆಗಳು.
ಗ್ರಾಮೀಣ ಪ್ರದೇಶಗಳಲ್ಲಿ ಜನನಿ ಸುರಕ್ಷ ಯೋಜನೆ
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (NRHM) ದ ಭಾಗ – ಅ ವಾಗಿ ರಚಿಸಲಾಗಿರುವ ಸಂತಾನೋತ್ಪತ್ತಿ ಹಾಗೂ ಶಿಶು ಆರೋಗ್ಯ ಯೋಜನೆ - II ರ ಅಡಿಯಲ್ಲಿ ಸುರಕ್ಷಿತ ತಾಯಿತನ ಮತ್ತು ಸುರಕ್ಷಿತ ಜನನ ಫಲಿತಾಂಶಗಳ ಉತ್ತೇಜನಕ್ಕಾಗೆ ಭಾರತ ಸರ್ಕಾರವು ಜನನಿ ಸುರಕ್ಷ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಈ ಯೋಜನೆ ಅಡಿಯಲ್ಲಿ, ರಾಜ್ಯದಲ್ಲಿನ ಪ್ರರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHCs) ಮತ್ತು ಸರ್ಕಾರಿ ಆಸ್ಪತ್ರಗಲ್ಲಿ ಪ್ರಸವ / ಹೆರಿಗೆ ಗೊಳಗೊಂಡ ಬಡತನ ರೇಖೆಗಿಂತ ಕಡಿಮೆ ಇರುವ ಗರ್ಭಿಣಿ ಮಹಿಳೆಯರಿಗೆ ರೂ. 700/- ನಗದು ಭತ್ಯಯನ್ನು ನೀಡಲಾಗುವುದು. ಗರ್ಭಿಣಿ ಮಹಿಳೆ ಹಾಗೂ ಆಕೆಯ ಜೊತೆಯಲ್ಲಿ ಬರುವ ಒಬ್ಬ ಅಥವ ಇಬ್ಬರು ಕುಟುಂಬದ ಸದಸ್ಯರುಗಳಿಗೆ ಆಸ್ಪತ್ರೆ ಪಟ್ಟಣಕ್ಕೆ ಪ್ರಯಾಣ ಭತ್ಯ ನೀಡುವುದು, ಗರ್ಭಿಣಿ ಮಹಿಳೆಯ ಜೊತೆಗೊಂಡ ಕುಟುಂಬದ ಸದಸ್ಯರ ಎರಡರಿಂದ ಮೂರು ದಿನಗಳ ಕೂಲಿ ಸಷ್ಟಕ್ಕೆ ಪರಿಹಾರ, ಅವರ ಊಟ ಹಾಗೂ ಇತರೆ ಸಂಬವನೀಯ ವೆಚ್ಚವನ್ನು ಭರಿಸುವುದು, ಇತ್ಯಾದಿ, ಮುಖಾಂತರ ಗ್ರಾಮೀಣ ಬಡವರಲ್ಲಿ ಸಾಂಸ್ಥಿಕ ಪ್ರಸವ / ಹೆರಿಗೆಗಳನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ಮೂಲ: ನ್ಯಾಷನಲ್ ರೂರಲ್ ಹೆಲ್ತ್ ಮಿಷನ್