অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೋಗದ ಹೆಸರು ಮತ್ತು ವ್ಯಾಖ್ಯಾಯನಗಳು

ರೋಗದ ಹೆಸರು ಮತ್ತು ವ್ಯಾಖ್ಯಾಯನಗಳು

ರೋಗದ ಹೆಸರು

ವ್ಯಾಖ್ಯಾಯನಗಳು

ಆಲ್ಜೀಮರ್ ನ ರೋಗ: ಮಿದುಳು ರೋಗದ ಒಂದು ರೂಪ.

ಯಾರಿಗೂ ನಿಖರವಾದ ಕಾರಣ ತಿಳಿದಿರುವುದಿಲ್ಲ, ಆದರೆ ಮಿದುಳಿನಲ್ಲಿ ಜೀವಕೋಶಗಳ ನಿಜವಾದ ಸಾವು ಸಂಭವಿಸುವುದು. ಇದಕ್ಕೆ ಚಿಕಿತ್ಸೆ ಇರುವುದಿಲ್ಲ, ಆದರೆ ಉತ್ತಮ ಪೌಷ್ಠಿಕತೆಯಿಂದ ಜೀವನಶೈಲಿಯ ಈ ರೋಗದ ಪ್ರಗತಿಯನ್ನು ನಿಧಾನಿಸಬಹುದಾಗಿದೆ.

ನೆತ್ತರುನಾಳದ ಗಡಸು: ಶೂದ್ಧರಕ್ತನಾಳದ ಗೋಡೆಯು ಗಟ್ಟಿಯಾಗಿ ತನ್ನ ಆಕಾರವನ್ನು ಕಳೆದುಕೊಳ್ಳುವಲ್ಲಿ ಕಾರಣವಾಗುವ ಹಲವು ರೋಗಗಳು. ಅಪಧಮನಿಕಾಠಿನ್ಯವು ನಾಳೀಯ ಅತಿ ಸಾಮಾನ್ಯ ಹಾಗೂ ಗಂಭೀರ ರೋಗವಾಗಿದೆ.

ಹೃದಯ ರೋಗ, ಎದೆ ನೋವು (ಗಂಟಲೂತ / ಗಂಟಲು ನೋವು ಪೆಕ್ಟೋರಿಸ್), ಹೃದಯ ಆಘಾತಗಳು, ಮತ್ತು ರಕ್ತಪರಿಚಲನೆ ಗೆ ಸಂಬಂಧಿತ ಇತರೆ ರೋಗಗಳಿಗೆಮುಖ್ಯ ಕಾರಣಗಳೆಂದರೆ ಅಪಧಮನಿ ಭಿತ್ತಿಯ ಮೇಲಿನ ಕೊಬ್ಬಿನ ಶೇಖ್ರಣೆಗಳು (ಎಥಿರೋಮಾಸ್). ಎಥೆರೋಕ್ಲೆರೋಸಿಸ್ ಸಾಮಾನ್ಯವಾಗಿ ವಯಸ್ಸಾದಲ್ಲಿ ಸಂಭವಿಸುತ್ತದೆ. ಇದು, ಹೆಚ್ಚಿನ ತೂಕ, ರಕ್ತದ ಅತಿ ಒತ್ತಡ, ಮತ್ತು ಮಧುಮೇಹಕ್ಕೆ ಸಂಬಂಧಿಸಿದೆ.

ಕ್ಯಾಂಸರ್: ಜೀವಕೋಶಗಳ ಅನಿಯಂತ್ರಿತ ಹಾಗೂ ಅಸಾಮಾನ್ಯ ಬೆಳವಣಿಗೆಯಿಂದ ಕೂಡಿದ ರೋಗಗಳು

ನಾಗರೀಕತೆಯ ಪ್ರಥಮ ದರ್ಜೆಯ ರೋಗವಾಗಿ ಕ್ಯಾಂಸರ್ ಗೆ ಪರಿಗಣಿಸಲಾಗಿದೆ. 150 ಕ್ಕಿಂತ ಹೆಚ್ಚಿನ ವಿಧಗಳ ಕ್ಯಾಂಸರ್ ನ್ನು ನಾವು ಕಾಣಬಹುದು ಮತ್ತು ಅವುಗಳಿಗೆ ಬೇರೆ-ಬೇರೆ ಕಾರಣಗಳಿರುವವು.

05 ಉನ್ನತ ಕ್ಯಾಂಸರ್ ಗಳು

ಪುರುಷರು

  1. ಪ್ರಾಸ್ಟೇಟ್ (28%)
  2. ಶ್ವಾಸಕೋಶ (17%)
  3. ಕೋಲೋರೆಕ್ಟಲ್ (12%)
  4. ಚೀಲ (07%)
  5. ನಾನ್-ಹಾಡ್ಜಕಿನ್ಸ್ ಲಿಂಫೋಮ (04%)

ಮಹಿಳೆಯರು

  1. ಸ್ತನ (30%)
  2. ಶ್ವಾಸಕೋಶ (13%)
  3. ಕೋಲೋರೆಕ್ಟಲ್ (12%)
  4. ಗರ್ಭಕೋಶ (06%)
  5. ಅಂಡಾಶಯ (04%)

ದೀರ್ಘಕಾಲದ ಪಿತ್ತಜನಕಾಂಗ ಖಾಯಿಲೆ / ಯಕೃತ್ತಿನ ತೀವ್ರ ರೋಗ: ಪಿತ್ತಜನಕಾಂಗದ ಖಾಯಿಲೆಗಳ ಗುಂಪಿನ ಯಾವುದೇ ಅಸ್ವಸ್ಥತೆ.

ಯಕೃತ್ತಿನ ರೋಗದ ಲಕ್ಷಣಗಳೆಂದರೆ ಕಾಮಾಲೆ, ಹಸಿವು ಇಲ್ಲದಿರುವುದು, ಯಕೃತ್ತು ಹಿಗ್ಗುವಿಕೆ, ದ್ರವದ ಸಂಗ್ರಹಣೆ, ಮತ್ತು ದುರ್ಬಲಗೊಂಡ ಅರಿವು.

ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ರೋಗ (ಸಿ.ಓ.ಪಿ.ಡಿ): ನಿಧಾನಗತಿಯಲ್ಲಿ ಬೆಳವಣಿಗೆ ಹೊಂದುವ ಹಾಗೂ ಗಾಳಿದಾರಿಯನ್ನು ಬದಲಾಯಿಸಲಾಗದ ಅಡಚಣೆಯಿಂದ ಕೂಡಿರುವ ಒಂದು ರೋಗ.

ರೋಗ ಲಕ್ಷಣಗಳೆಂದರೆ ವ್ಯಾಯಾಮ ಮಾಡುವಾಗ ಉಸಿರಾಟದಲ್ಲಿ ಸಮಸ್ಯೆಗಳು, ಆಳವಾಗಿ ಉಸಿರು ತೆಗೆದುಕೊಳ್ಳು ಮತ್ತು ಹೊರ ಬಿಡಲು ಕಷ್ಟಕರ, ಮತ್ತು ಕೆಲವೊಮ್ಮೆ ದೀರ್ಘಕಾಲದ ಕೆಮ್ಮು. ದೀರ್ಘಕಾಲದ ಶ್ವಾಸನಾಳದ ಒಳಪೊರೆಯ ಉರಿಯೂತ, ಶ್ವಾಸಕೋಶದ ವಾಯುಕೋಶಗಳ ಉಬ್ಬು, ದಮ್ಮು, ಅಥವ ದೀರ್ಘಕಾಲಕ ಬ್ರಾಂಕಿಯೋಲೈಟಿಸ್ ನ ಪರಿಣಾಮದಿಂದ ಈ ಸ್ಥಿತಿಯು ಉಂಟಾಗುವುದು. ಧೂಮಪಾನ ಮತ್ತು ವಾಯು ಪ್ರದೂಶನದಿಂದ ಸ್ಥಿತಿಯಿಂದ ಆರೋಗ್ಯ ಇನ್ನು ಕೆಡಬಹುದು.

ಮಧುಮೇಹ: ದೇಹವು ಉಪಯೋಗಿಸುವ ಸಕ್ಕರೆಗಳ ಮೇಲೆ ಪರಿಣಾಮ ಬೀರುವ ಒಂದು ರೋಗ.

ಮಧುಮೇಹದಲ್ಲಿ ನಾಲ್ಕು ಮುಖ್ಯ ಪ್ರಕಾರಗಳಿವೆ. ಮೊದಲನೆ ಪ್ರಕಾರದ ಮಧುಮೇಹಕ್ಕೆ ಇನ್ಸುಲಿನ್ ಅವಲಂಬಿತ ಮಧುಮೇಹವೆಂದು ಗುರುತಿಸಲಾಗುವುದು, ತಾರುಣ್ಯದಲ್ಲಿ ಪ್ರಾರಂಭವಾಗುವುದು, ಸುಲಭವಾದ ಮಧುಮೇಹ, ಅಥವ ಕೀಟೋಸಿಸ್ ಹೆಚ್ಚಳದಿಂದಾಗುವ ಮಧುಮೇಹ. ಎರಡನೆ ಪ್ರಕಾರದ ಮಧುಮೇಹಕ್ಕೆ ಇನ್ಸುಲಿನ್ ಮೇಲೆ ಅವಲಂಬಿತವಲ್ಲದ ಮಧುಮೇಹ ಎಂದು ಸಹ ಕರೆಯಲಾಗುವುದು, ವಯಸ್ಕ ಆರಂಭವಾಗುವಮಧುಮೇಹ, ಕೀಟೋಸಿಸ್ ನಿರೋಧಕ ಮಧುಮೇಹ, ಅಥವ ಸ್ಥಿರ ಮಧುಮೇಹ. ಎರಡನೆ ಪ್ರಕಾರದ ಮಧುಮೇಹ ಸಾಮಾನ್ಯವಾಗಿ ಅತಿಯಾದ ತೂಕ ಹೊಂದಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವುದು. ಮೂರನೆ ಪ್ರಕಾರಕ, ಅಥವ ಅರ್ಭಧಾರಣೆ ಮಧುಮೇಹ, ಕೆಲವು ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಕಂಡುಬರುವುದು. ನಾಲ್ಕನೆಯ ಪ್ರಕಾರದಲ್ಲಿ, ಮಧುಮೇಹದ ಇತರೆ ಪ್ರಕಾರಗಳು ಒಳಗೊಂಡಿರುವುದು. ಮೇದೋಜ್ಜೀರಕ ಗ್ರಂಥಿಯ ರೋಗಗಳಿಗೆ, ಹಾರ್ಮೋನುಗಳಲ್ಲಿ ಬದಲಾವಣೆ, ಔಷಧಿಗಳ ಅಡ್ಡ ಪರಿಣಾಮ, ಅಥವ ವಂಶವಾಹಿನಿಯ ದೋಷಗಳಿಗೆ ಇವುಗಳು ಸಂಬಂಧಿಸಿವೆ.

ಹೃದಯ ರೋಗ: ಹೃದಯದ ಸ್ನಾಯು ಅಥವ ಹೃದಯದ ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಹಲವಾರು ಅಸಾಮಾನ್ಯತೆಗಳಲ್ಲಿ ಒಂದು.

ಹೃದಯದ ಸ್ನಾಯು ಅಥವ ಹೃದಯದ ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಹಲವಾರು ಅಸಾಮಾನ್ಯತೆಗಳಲ್ಲಿ ಒಂದು.
ಜೀವನಶೈಲಿಯ ಈ ರೋಗದ ಇನ್ನು ಹಲವು ಪ್ರಕಾರಗಳಿವೆ. ಹೃದಯ ರೋಗ ಮತ್ತು ಹೃದಯರಕ್ತನಾಳದ ಇತರೆ ಪ್ರಕಾರಗಳ ರೋಗಗಳು ರಕ್ತಸಂಚಯನದಿಂದಾಗುವ ಹೃದಯ ಆಘಾತಕ್ಕೆ ಕಾರಣವಾಗುವುದು. ಈ ಸ್ಥಿತಿಯಲ್ಲಿ ಹೃದಯವು ದೇಹದ ಬೇಡಿಕೆಯನ್ನು ಪೂರೈಸಲು ಸಾಕಷ್ಟು ರಕ್ತವನ್ನು ಪೂರೈಸಲು ಸಾಧ್ಯವಾಗುವುದಿಲ್ಲ.

ಮೂತ್ರಪಿಂಡದ ಉರಿಯೂತ / ಸಿ.ಆರ್.ಎಫ್: ಬಾವು ಮತ್ತು ಅಸಹಜ ಕ್ರಿಯೆಯಿಂದ ಗುರುತಿಸಲಾಗುವ ಮೂತ್ರಪಿಂಡದ ಯಾವುದೇ ರೋಗ.

ಮೂತ್ರಪಿಂಡ ರೋಗದ ಗುಣಲಕ್ಷಣಗಳೆಂದರೆ ರಕ್ತಮಯ ಮೂತ್ರ, ಮೂತ್ರದಲ್ಲಿ ಸತತ ಪ್ರೋಟೀನ್ ಅಂಶಗಳು, ಮೂತ್ರದಲ್ಲಿ ಕೀವು, ಮೂತ್ರ ವಿಸರ್ಜನೆಯಲ್ಲಿ ಕಷ್ಟ ಮತ್ತು ಬೆನ್ನು ನೋವು.

ಹೊಡೆತ / ಆಘಾತ: ಮೆದುಳಿಗೆ ಆಮ್ಲಜನಕದ ಕೊರತೆಯಿಂದ ಬದಲಾಯಿಸಲಾಗುವ ಅಥವ ಬದಲಾಯಿಸಲಾಗದ ಪಾರ್ಶ್ವವಾಯುಗೆ ಕಾರಣವಾಗುವ ಸ್ಥಿತಿ.

ಹೆಚ್ಚಿದ / ಮುಂದುವರೆದ ವಯಸ್ಸು, ಅತಿ ಹೆಚ್ಚಿನ ರಕ್ತದ ಒತ್ತಡ, ಕಳಪಡ ರಕ್ತ ಚಲಾವಣೆಯ ಹಿಂದಿನ ಆಘಾತಗಳು, ಧೂಮಪಾನ, ಹೃದಯ ರೋಗಗಳು, ರಕ್ತದ ಗೆಡ್ಡೆ, ಆಘಾತಗಳಲ್ಲಿ ಕೌಟುಂಬಿಕ ಹಿನ್ನಲೆ, ಗರ್ಭನಿರೋಧಕ ಮಾತ್ರೆಗಳ ಸೇವನೆ, ಮಧುಮೇಹ, ವ್ಯಾಯಾಮದ ಕೊರತೆ, ಹೆಚ್ಚಿನ ತೂಕ, ಅತಿಯಾದ ಕೊಲೆಸ್ಟ್ರಾಲ್, ಇತ್ಯಾದಿಗಳಿಗೆ ಹೊಡೆತ / ಆಘಾತವು ಸಂಬಂಧಿಸಿದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/7/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate