" ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ"
ಕರ್ನಾಟಕದಲ್ಲಿ ಸುಭದ್ರವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಅರಸರು ನಂತರ ಚುನಾಯಿತ ಸರ್ಕಾರಗಳು ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಿರುವುದು ನಮ್ಮವರ ಬದ್ಧತೆಯನ್ನು ತೋರಿಸುತ್ತದೆ.
ಸಾರ್ವಜನಿಕೆ ವ್ಯವಸ್ಥೆಯಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯು ಮೂಲಾಧಾರವಾದುದು. ಎಲ್ಲರಿಗೂ ಆರೋಗ್ಯ ಅಂದರೆ ಮೂಲಭೂತವಾದಂತಹ ಆರೋಗ್ಯದ ಮಾಹಿತಿ ಹಾಗೂ ಸೇವೆಗಳು ಬಡವ - ಬಲ್ಲಿದ, ಹಿಂದುಳಿದವರು – ಮುಂದುವರಿದವರು, ಗಂಡು-ಹೆಣ್ಣು ಎನ್ನುವ ಭೇದವಿಲ್ಲದೆ ಎಲ್ಲರಿಗೂ ಸುಲಭವಾಗಿ ಸಿಗುವಂತಾಗಬೇಕು.
ಇದನ್ನೇ “ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ” ಅಥವಾ Health for All Health Everywhere ಎನ್ನುತ್ತೇವೆ. ಆರೋಗ್ಯ ಸೇವೆಗಳ ವ್ಯವಸ್ಥೆ:
ಜನ ಸಾಮಾನ್ಯರಿಗೆ ಮೂಲಭೂತವಾದಂತಹ ಕನಿಷ್ಠ ಆರೋಗ್ಯ ಸೇವೆಗಳನ್ನು ನೀಡುವುದೇ ಪ್ರಾಥಮಿಕ ಆರೋಗ್ಯ ಸೇವೆ. ಪ್ರಾಥಮಿಕ ಆರೋಗ್ಯ ಸೇವೆಗಳ ಪ್ರಮುಖ ಅಂಶಗಳೂ ಕೆಳಕಂಡಂತಿವೆ. ಆರೋಗ್ಯದ ಬಗ್ಗೆ ಮಾಹಿತಿ, ಸಾಂಕ್ರಾಮಿಕೆ ರೋಗಗಳ ನಿಯಂತ್ರಣ, ಪರಿಸರ ಮತ್ತು ವೈಯುಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಪೌಷ್ಠಿಕ ಆಹಾರ ಮತ್ತು ಸಣ್ಣಪುಟ್ಟ ರೋಗ-ರುಜಿನಗಳಿಗೆ ಚಿಕಿತ್ಸೆಗಳು, ಕುಟುಂಬ ಕಲ್ಯಾಣ ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು.
ಸುಮಾರು 4-5 ಸಾವಿರ ಜನಸಂಖ್ಯೆಗೆ ಒಂದು ಆರೋಗ್ಯ ಉಪಕೇಂದ್ರ. ಈ ಉಪಕೇಂದ್ರಕ್ಕೆ ಒಬ್ಬ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಒಬ್ಬ ಪುರಷ ಆರೋಗ್ಯ ಸಹಾಯಕರು. ಉಪಕೇಂದ್ರಕ್ಕೆ ಮೇಲ್ಪಟ್ಟು, ಸರಾಸರಿ 20 ಸಾವಿರ ಜನಸಂಖ್ಯೆಗೆ ಒಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು. ಈ ಕೇಂದ್ರಗಳಲ್ಲಿ ವೈದ್ಯರು, ಪ್ರಯೋಗ ಶಾಲೆ ಹೆರಿಗೆ ಕೋಣೆ ಹಾಗೂ ತುರ್ತು ಸಂದರ್ಭದಲ್ಲಿ ಒಳರೋಗಿ ಸೇವೆ ನೀಡುವ ವ್ಯವಸ್ಥೆ.
ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಆಸ್ಪತ್ರೆಗಳು ಮತ್ತು ಹೋಬಳಿ ಮಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು. ಇಲ್ಲಿ ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಮುಂತಾದ ತಜ್ಞರ ಸೇವೆ ಲಭ್ಯವಿದ್ದು ಶಸ್ತ್ರಚಿಕಿತ್ಸೆಗಳನ್ನು ಮಾಡುವುದಕ್ಕೂ ವ್ಯವಸ್ಥೆ.
ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತವಾದ ಎಲ್ಲಾ ಬಗೆಯ ಸೇವೆ ದೊರೆಯುವ ಜಿಲ್ಲಾ ಆಸ್ಪತೆಗಳು.
ಸುಮಾರು 8,870 ಕ್ಕೂ ಹೆಚ್ಚು ಉಪಕೇಂದ್ರಗಳು. 2357 ಪ್ರಾಥಮಿಕ ಆರೋಗ್ಯ ಕೇಂದ್ರಗಳು. 326 ಸಮುದಾಯ ಆರೋಗ್ಯಕೇಂದ್ರಗಳು. ತಾಲ್ಲೂಕಿಗೊಂದರಂತೆ ತಾಲ್ಲೂಕು ಆಸ್ಪತ್ರೆಗಳು. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಆಸ್ಪತ್ರೆಗಳು.
ಇದಲ್ಲದೆ ನಗರಗಳಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆರಿಗೆ ಆಸ್ಪತ್ರೆಗಳು, ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಕುಟುಂಬ ಕಲ್ಯಾಣಕೇಂದ್ರಗಳು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವು ಕರ್ನಾಟಕದಲ್ಲಿ 2005 ಏಪ್ರಿಲ್ ನಿಂದ ಜಾರಿಯಲ್ಲಿದೆ. ಅಭಿಯಾನದ ಮೊದಲನೇ ಹಂತ 2012 ರವರೆಗೆ ಅನುಷ್ಠಾನವಾಗಿದ್ದು ಈಗ ಎರಡನೇ ಹಂತ ಜಾರಿಯಲ್ಲಿದೆ. ಇದು 2017 ರವರೆಗೆ ಇರುತ್ತದೆ.
ಗ್ರಾಮೀಣ ಜನತೆಗೆ ಅದರಲ್ಲೂ ವಿಶೇಷವಾಗಿ ದುರ್ಬಲ ವರ್ಗದವರಿಗೆ ಕೈಗೆಟುಕುವಂತೆ ಗುಣಾತ್ಮಕ ಆರೋಗ್ಯ ಸೇವೆಯನ್ನು ನೀಡುವುದು. ಶಿಶು ಮರಣ ದರ ಮತ್ತು ತಾಯಂದಿರ ಮರಣ ದರವನ್ನು ಕಡಿಮೆಗೊಳಿಸುವುದು. ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವುದು.
ಒಟ್ಟು ಫಲವತ್ತತೆಯ ದರವನ್ನು ತಗ್ಗಿಸಿ ಜನಸಂಖ್ಯಾ ಸ್ಥಿರತೆಯನ್ನು ಸಾಧಿಸುವುದು.
ಮಾನವ ಸಂಪನ್ಮೂಲದ ಬೆಂಬಲ ಮತ್ತು ನಿರ್ವಹಣೆಯಲ್ಲಿ ನಾವೀನ್ಯತೆ ಸಾಧಿಸುವುದು. ವಿವಿಧ ರೀತಿಯ ಕೌಶಲ್ಯ ಹೊಂದಿದ ಸಿಬ್ಬಂದಿ ದೊರಕುವಂತೆ ಮಾಡುವುದು.
ಸಮುದಾಯದ ಭಾಗವಹಿಸುವಿಕೆ ಮತ್ತು ಜವಾಬ್ದಾರಿ, ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಠಿಕ ಸಮಿತಿಯ ಸಬಲೀಕರಣ. ಗ್ರಾಮಆರೋಗ್ಯ ನೈರ್ಮಲ್ಯ ಪೌಷ್ಠಿಕಸಮಿತಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆರೋಗ್ಯ ರಕ್ಷಾಸಮಿತಿಗಳಿಗೆ ಮುಕ್ತ ನಿಧಿ
ಸೇವೆಗಳ ಸಮೀಕ್ಷೆ ಹೆಚ್ಎಂನಐಎಸ್ ಮಾಪನದೊಡನೆ ನಿಗಧಿಪಡಿಸುವುದು. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸ್ವತಂತ್ರ ಉಸ್ತುವಾರಿ ಸಮಿತಿ ರಚಿಸುವುದು.
ವಿವಿಧ ಹಂತಗಳಲ್ಲಿ ಮುಕ್ತ ನಿಧಿಯನ್ನು ನೀಡುವುದು.
ನಿರ್ವಹಣಾ ಕೌಶಲ್ಯ ಹೊಂದಿರುವ ತಾಲ್ಲೂಕು ಮತ್ತು ಜಿಲ್ಲಾ ಅಧಿಕಾರಿಗಳು
ಉದ್ದೇಶ: ಕಡು ಬಡವರ್ಗಕ್ಕೆ ಸೇರಿದ ಗರ್ಭಿಣಿಯರು ಸರ್ಕಾರಿ ಆರೋಗ್ಯ ಕೇಂದ್ರ/ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು. ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯವನ್ನು ಕಾಪಾಡುವುದು. ತಾಯಂದಿರ ಮತ್ತು ಶಿಶುಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವುದು. ಫಲಾನುಭವಿಗಳು: ಬಡತನ ರೇಖೆಗಿಂತ ಕೆಳಗಿರುವವರು/ ಪರಿಶಿಷ್ಟ ಜಾತಿ ಮತ್ತು ಪಂಗಡದವರು,ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿರುವವರು.
ತಾಯಿ ಕಾರ್ಡ್: ಗರ್ಭಿಣಿ ಹಾಗೂ ಶಿಶುವಿಗೆ ನೀಡಿದ ಸೇವೆಗಳ ಹಾಗೂ ಸೌಲಭ್ಯಗಳ ಸಮಗ್ರ ಮಾಹಿತಿಯನ್ನು ದಾಖಲಿಸುವ ಹಾಗೂ ಗರ್ಭಿಣಿ ಹಾಗೂ ಶಿಶುವಿನ ಸಮಗ್ರ ಮೂಲ ಮಾಹಿತಿಯನ್ನು ಹೊಂದಿರುವ ತಾಯಿ ಕಾರ್ಡ್ನ್ನುಾ ಗರ್ಭಿಣಿಯರಿಗೆ ನೀಡಲಾಗುವುದು. ಜನನಿ ಸುರಕ್ಷಾ ಯೋಜನೆ, ಮಡಿಲು ಯೋಜನೆ, ಪ್ರಸೂತಿ ಆರೈಕೆ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ತಾಯಿ ಕಾರ್ಡ್ನ್ನುಿ ಪ್ರತಿ ಗರ್ಭಿಣಿಯರು ಪಡೆಯಬೇಕಾಗಿರುತ್ತದೆ.
ಪ್ರಸೂತಿ ಆರೈಕೆ : ಪ್ರಸೂತಿ ಆರೈಕೆ ಯೋಜನೆಯು ರಾಜ್ಯ ಸರ್ಕಾರದ ತಾಯಿ ಭಾಗ್ಯ ಯೋಜನೆಯ ಪ್ರಮುಖ ಭಾಗವಾಗಿದೆ.ಗರ್ಭಿಣಿ ಮಹಿಳೆಯರು ಉತ್ತಮ ಪೌಷ್ಠಿಕ ಆಹಾರ ಪಡೆದು ಆರೋಗ್ಯವಂತಳಾಗಿದ್ದು, ಸುಸೂತ್ರವಾಗಿ ಹೆರಿಗೆ. ಸುಸೂತ್ರವಾಗಿ ಹೆರಿಗೆ ಯಾಗಬೇಕೆನ್ನುವುದು ಇದರ ಉದ್ದೇಶ. 6 ರಿಂದ 9 ನೇ ತಿಂಗಳ ಗರ್ಭಾವಸ್ಥೆಯಲ್ಲಿರುವಾಗ ರೂ 1೦೦೦.೦೦ ವನ್ನು ಮೊದಲ ಕಂತು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಗರ್ಭಾವಸ್ಥೆಯಲ್ಲಿರುವಾಗ ಮೊದಲ ಕಂತು 48 ಗಂಟೆಯೊಳಗಾಗಿ ಎರಡನೇ ಕಂತು ರೂ. 1000.00 ಗಳಂತೆ (ಜನನಿ ಸುರಕ್ಷಾ ಯೋಜನೆಯ ಸೌಲಭ್ಯ ಒಳಗೊಂಡಂತೆ) ಒಟ್ಟು ಎರಡು ಸಾವಿರಗಳ ಆರ್ಥಿಕ ಸಹಾಯಧನ ನೀಡಲಾಗುವುದು
ತಾಯಿ ಕಾರ್ಡ್ನ್ನುು ನೀಡಿ ವಿವರಗಳನ್ನು ಬರೆಯಲಾಗುತ್ತದೆ ಹಾಗೂ ಜನನಿ ಸುರಕ್ಷಾ ಯೋಜನೆ/ ಪ್ರಸೂತಿ/ ಮಡಿಲು ಯೋಜನೆಗೆ ಅರ್ಹರೇ ಎಂಬುದನ್ನು ನಿಶ್ಚಯಿಸಲಾಗುತ್ತದೆ. ಸಾಮಾನ್ಯ ಗರ್ಭಿಣಿಯರಿಗೆ ಕನಿಷ್ಠ ಮೂರು ಬಾರಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಅಪಾಯಕಾರಿ ಚಿಹ್ನೆಗಳಿರುವ ಗರ್ಭಿಣಿಯರಿಗೆ ಕನಿಷ್ಠ ಐದು ಬಾರಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಪ್ರತಿ ತಾಯಿ ಕಾರ್ಡ್ನಿಲ್ಲಿ ವಿಶಿಷ್ಠ ಗುರುತಿನ ಸಂಖ್ಯೆ ಇರುತ್ತದೆ. ರಾಜ್ಯದ ಯಾವುದೇ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲೂ ಈ ಕಾರ್ಡ್ನಿ ಸೌಲಭ್ಯ ಬಳಸಿಕೊಳ್ಳಬಹುದು.
ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಸಮುದಾಯ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದದ್ದು.ಈ ಉದ್ದೇಶ ಸಾಧನೆಗಾಗಿ ಜನನಿ ಸುರಕ್ಷಾ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿ ಹೆರಿಗೆಗಾಗಿ ಆರ್ಥಿಕ ಸಹಾಯ ನೀಡಲಾಗುತ್ತದೆ. ಆರ್ಥಿಕ ಸಹಾಯದ ಮೊತ್ತ
ಜನನಿ-ಶಿಶು ಸುರಕ್ಷಾ ಕಾರ್ಯಕ್ರಮ: ಈ ಕಾರ್ಯಕ್ರಮದಲ್ಲಿ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಸಂಪೂರ್ಣವಾಗಿ ಉಚಿತ ಸೇವೆಯನ್ನು ನೀಡಲಾಗುತ್ತದೆ. ಜನನಿ-ಶಿಶು ಸುರಕ್ಷಾ ಕಾರ್ಯಕ್ರಮದಲ್ಲಿ ಸಾರ್ವತ್ರಿಕವಾಗಿ ಎಲ್ಲಾ ಗರ್ಭಿಣಿಯರಿಗೆ (ಬಿಪಿಎಲ್ ಹಾಗೂ ಎಪಿಎಲ್) ಮತ್ತು 30 ದಿವಸಗಳವರೆಗೆ ನವಜಾತ ಶಿಶುಗಳಿಗೆ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ಉಚಿತ ಸೇವೆ ನೀಡಲಾಗುತ್ತದೆ.
ಸಾಮಾನ್ಯ ಹೆರಿಗೆ ಅಥವಾ ಸಿಜೇರಿಯನ್ ಹೆರಿಗೆ ಸಂಪೂರ್ಣ ಉಚಿತ. ಯಾವುದೇ ಔಷಧ ಅಥವಾ ವೈದ್ಯಕೀಯ ಬಳಕೆಯ ವಸ್ತುಗಳು ಉಚಿತ. ನವಜಾತ ಶಿಶುಗಳಿಗೆ 30 ದಿನಗಳವೆರೆಗೆ ಏನೇ ತೊಂದರೆ ಬರಲಿ ಎಲ್ಲಾ ಸೇವೆಗಳು, ಔಷಧಿಗಳು ಸಂಪೂರ್ಣವಾಗಿ ಉಚಿತ. ಗರ್ಭಿಣಿ ಮತ್ತು ನವಜಾತ ಶಿಶುವಿಗೆ 30 ದಿನಗಳವರೆಗೆ ಪ್ರಯೋಗಾಲಯ ಪರೀಕ್ಷೆಗಳು ಉಚಿತ. ಯಾವುದೇ ಗರ್ಭಿಣಿ ಒಳರೋಗಿಯಾಗಿ ಆಸ್ಪತ್ರೆಗೆ ಗರ್ಭಿಣಿ ಒಳರೋಗಿಯಾಗಿ ಆಸ್ಪತ್ರೆಗೆ ಸೇರಿದರೆ ಆಕೆಗೆ ಉಚಿತವಾಗಿ ಪೌಷ್ಠಿಕವಾಗಿರುವ ಊಟ-ತಿಂಡಿ ವ್ಯವಸ್ಥೆ. ಸಾಮಾನ್ಯ ಹೆರಿಗೆಯಾದಾಗ ಎರಡು ದಿನ ಮತ್ತು ಸಿಜೇರಿಯನ್ ಹೆರಿಗೆಯಾದರೆ ಏಳು ದಿನ ಉಚಿತವಾಗಿ ಆಹಾರ. ಮೆನಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಕಾರಣಾಂತರದಿಂದ ದೊಡ್ಡ ಆಸ್ಪತ್ರೆಗೆ ಹೋಗಬೇಕಾದರೆ ಉಚಿತ ವಾಹನ ವ್ಯವಸ್ಥೆ. ಬಾಣಂತಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಸುರಕ್ಷಿತವಾಗಿ ಮನೆಗೆ ಕಳುಹಿಸುವುದಕ್ಕೂ ಉಚಿತ ವಾಹನ ವ್ಯವಸ್ಥೆ.
ಬಾಣಂತಿಯರಿಗೆ ಆಸ್ಪತೆ ವಾಸ್ತವ್ಯದಲ್ಲಿ ಆಹಾರ ನೀಡಿಕೆ: 24X7 ಆಸ್ಪತ್ರೆಗಳಲ್ಲಿ ಹಾಗೂ ಎಫ್.ಆರ್.ಯುಗಳಲ್ಲಿ ಹೆರಿಗೆ ಮಾಡಿಸಿಕೊಂಡ ನಂತರ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ವಾಸ್ತವ್ಯವಿರುವ ಬಾಣಂತಿಗೆ ಎರಡು ದಿನಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ ಮಡಿಲು: ಬಾಣಂತನ, ತಾಯಿ ಹಾಗೂ ಮಗಿವಿನ ಆರೋಗ್ಯ ಮಟ್ಟವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದ್ದರಿಂದ ತಾಯಿ-ಮಗುವಿಗೆ ಆರೋಗ್ಯಕರ ಬಾಣಂತನ ದೊರೆಕಿಸಿಕೊಡಲು ಹಾಗೂ ಸಾಂಸ್ಥಿಕ ಹೆರಿಗೆಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಮಡಿಲು ಎಂಬ ಅಪೂರ್ವ ಯೋಜನೆಯನ್ನು ಜಾರಿಗೊಳಿಸಿದೆ. ಬಾಣಂತನಕ್ಕೆ ಬೇಕಾದ 19 ವಸ್ತುಗಳಿರುವ ಮಡಿಲು ಕಿಟ್ನ್ನುನ ಹೆರಿಗೆಯ ನಂತರ ತಾಯಿಗೆ ನೀಡಲಾಗುವುದು.
ಗೃಹ ಆಧಾರಿತ ನವಜಾತ ಶಿಶು ಆರೈಕೆ : ನವಜಾತ ಶಿಶು ಮತ್ತು ಹೆರಿಗೆ ನಂತರ ತಾಯಂದಿರಿಗೆ ಆರೈಕೆಯನ್ನು ಮನೆಯಲ್ಲಿಯೇ ನೀಡುವುದು. ಆಶಾ ಕಾರ್ಯಕರ್ತೆಯರು, ಎ.ಎನ್.ಎಂ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮಾರ್ಗಸೂಚಿ ಅನ್ವಯ ಅವಶ್ಯಕತೆಯಿರುವ ವೈದ್ಯಕೀಯ ಸೇವೆಯನ್ನು ನೀಡುವರು. ನವಜಾತ ಶಿಶುಗಳ ಆರೋಗ್ಯದಲ್ಲಿ ಕಂಡುಬರುವ ವ್ಯತ್ಯಾಸವನ್ನು ಕೂಡಲೇ ಗುರುತಿಸಿ ಮೇಲ್ಮಟ್ಟದ ಆರೋಗ್ಯ ಸಂಸ್ಥೆಗಳಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗುವುದು. ಈ ಕಾರ್ಯಕ್ರಮದಿಂದ ಹೆರಿಗೆ ನಂತರದ ತಾಯಂದಿರ ಮರಣ ಮತ್ತು ನವಜಾತ ಶಿಶುಗಳ ಮರಣವನ್ನು ತಡೆಗಟ್ಟಬಹುದಾಗಿದೆ.
ಆರೋಗ್ಯ ಕವಚ 108 : ರಾಜ್ಯದ ಜನರಿಗೆ ತುರ್ತು ನಿರ್ವಹಣಾ ಪ್ರತಿಕ್ರಿಯೆ ಸೇವೆಯನ್ನು (EMRI - Emergency Management Response Service) ಒದಗಿಸಲು ರಾಜ್ಯ ಸರ್ಕಾರ ಆರೋಗ್ಯ ಕವಚ “108” ಎಂಬ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಿದೆ.ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಮೊಬೈಲ್ ಅಥವಾ ಸ್ಥಿರ ದೂರವಾಣಿ ಮೂಲಕ 108 ಕರೆಮಾಡಬೇಕು. ಈ ಕರೆಯು ಉಚಿತವಾಗಿರುತ್ತದೆ.ಈ ಸೇವೆಯು ದಿನದ 24 ಗಂಟೆಗಳು, ವಾರದ ಏಳು ದಿನಗಳೂ ದೊರೆಯುತ್ತದೆ.ಆಂಬ್ಯುಲೆನ್ಸ್ನುಲ್ಲಿ ತುರ್ತು ಪ್ರಥಮೋಪಚಾರ ನೀಡುವ ಸಿಬ್ಬ್ಬಂದಿಗಳು ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಆಸ್ಪತ್ರೆ ಪೂರ್ವ ಚಿಕಿತ್ಸೆಯನ್ನು ವಾಹನದಲ್ಲಿಯೇ ನೀಡುತ್ತಾ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ. ಈ ಆಂಬ್ಯುಲೆನ್ಸ್ನೋಲ್ಲಿ ಅವಶ್ಯಕ ಜೀವ ಕಾಪಾಡುವ BLS (Basic Life Support) ಹಾಗೂ ಕೆಲವು ಆಧುನಿಕ ಉಪಕರಣಗಳ ಸೌಲಭ್ಯವಿರುವ (BLS ನೊಂದಿಗೆ ventilator ಮತ್ತು defibrilator) ಇರುವ ALS (Advance Life Support) ಆಂಬ್ಯುಲೆನ್ಸ್ಗeಳಿರುತ್ತವೆ. ALS ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸೌಲಭ್ಯದ ಆಂಬ್ಯುಲೆನ್ಸ್ ಆಗಿರುತ್ತದೆ. ಜನನಿ ಸುರಕ್ಷಾ ವಾಹಿನಿ: ತುರ್ತು ಹೆರಿಗೆ ಸೇವೆಗಾಗಿ ಮೀಸಲಿಟ್ಟ ಆಂಬ್ಯುಲೆನ್ಸ್. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಲಭ್ಯವಿದೆ. ಗ್ರಾಮಾಂತರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ಯಲಾಗುವುದು.
ಸಂಚಾರಿ ವೈದ್ಯಕೀಯ ಘಟಕಗಳು: ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಸಂಚಾರಿ ವೈದ್ಯಕೀಯ ಘಟಕವನ್ನು ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಅತಿ ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ, ಆರೋಗ್ಯ ಸೇವೆ ಮತ್ತು ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ತಲುಪಿಸಲು ಸ್ಥಾಪಿಸಲಾಗಿದೆ.
ಆರೋಗ್ಯ ಸೇವೆಗಳು ದೊರೆಯದೇ ಇರುವ ಪ್ರದೇಶಗಳಲ್ಲಿನ ಜನತೆಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು.ಸಣ್ಣಪುಟ್ಟ ರೋಗಗಳಿಗೆ ಚಿಕಿತ್ಸೆ ನೀಡುವುದು. ಸಂತಾನೋತ್ಪತ್ತಿ ಮತ್ತು ಮಕ್ಕಳ ಸೇವೆಗಳ ಕಾರ್ಯನಿರ್ವಹಣೆ. ಮೇಲ್ದರ್ಜೆ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡುವುದು.
24x7 ಪ್ರಾಥಮಿಕ ಆರೋಗ್ಯ ಕೇಂದ್ರ: ಸಮುದಾಯಕ್ಕೆ ಹೆರಿಗೆ ಸೇವೆಗಳನ್ನು ನಿರಂತರವಾಗಿ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುಮಾರು ಶೇ. 50 ಕೇಂದ್ರಗಳನ್ನು ದಿನದ 24 ಗಂಟೆಯೂ ಹಾಗೂ ವಾರದ 7 ದಿವಸಗಳು ಉತ್ತಮ ಗುಣಮಟ್ಟದ ಸೇವೆ ಒದಗಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆ ಆಸ್ಪತ್ರೆಗಳಲ್ಲಿ ಎಂ.ಬಿ.ಬಿ.ಎಸ್ ವೈದ್ಯರು, 3 ಪಾಳಿಯಲ್ಲಿ ಕೆಲಸ ಮಾಡಲು ಶುಶ್ರೂಷಕಿಯರು, ರಾತ್ರಿ ಶುಶ್ರೂಷಕಿಯರ ಜೊತೆಗೆ ತರಬೇತಿ ಹೊಂದಿದ ದಾಯಿ, ಫಾರ್ಮಸಿಸ್ಟ್ ಮತ್ತು ಪ್ರಯೋಗಶಾಲಾ ತಂತ್ರಜ್ಞರನ್ನು ಹೆರಿಗೆ ಸೇವೆಯನ್ನು ನಿರಂತರವಾಗಿ ಒದಗಿಸಲು ನಿಯುಕ್ತಿಗೊಳಿಸಲಾಗಿದೆ. ಸುಸಜ್ಜಿತವಾದ ಹೆರಿಗೆ ಕೋಣೆ, ವಾರ್ಡ್, ನವಜಾತ ಶಿಶುಗಳ ಆರೈಕೆಗೆ ವಿಶೇಷ ಉಪಕರಣಗಳು ಅವಶ್ಯವಿರುವ ಎಲ್ಲಾ ಔಷಧಿಗಳನ್ನು ಹೊಂದಿರುವ ಈ ಆಸ್ಪತ್ರೆಗಳು ಮನರಂಜನೆಗೆಗಾಗಿ ಟಿ.ವಿ., ಬಿಸಿ ನೀರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿ ಸೌಕರ್ಯದೊಂದಿಗೆ ಜನಸ್ನೇಹಿ ಆರೋಗ್ಯ ಸಂಸ್ಥೆಗಳಾಗಿ ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.
24x7 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ, ವಾರದ 7 ದಿವಸವೂ ಹೆರಿಗೆ, ನವಜಾತ ಶಿಶುವಿನ ಆರೈಕೆ ಹಾಗೂ ಯಾವುದೇ ತುರ್ತು ಪರಿಸ್ಥಿತಿಗೆ ಚಿಕಿತ್ಸೆ ಲಭ್ಯವಿದೆ. ಸಹಜ ಹೆರಿಗೆಯನ್ನು ನಿರ್ವಹಿಸಲಾಗುವುದು ಹಾಗೂ ಕ್ಲಿಷ್ಟಕರ ಹೆರಿಗೆಗಳನ್ನು ಶೀಘ್ರವಾಗಿ ಮೇಲ್ಮಟ್ಟದ ಆಸ್ಪತ್ರೆಗೆ ರವಾನಿಸಲಾಗುವುದು. ನವಜಾತ ಶಿಶುವಿನ ನಿರ್ವಹಣೆ ಮಾಡಲಾಗುವುದು ಹಾಗೂ ತೀವ್ರತರವಾದ ತೊಂದರೆಯಿದ್ದಲ್ಲಿ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು.
ಎಫ್.ಆರ್.ಯುಗಳು: ರಾಜ್ಯದ ಒಟ್ಟು 326 ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ (ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಸೇರಿ 192 ಕೇಂದ್ರಗಳನ್ನು ಎಫ್ಆಾರ್ಯುದ ಆಗಿ ಪರಿವರ್ತಿಸಿದ್ದು, ದಿನದ 24 ಗಂಟೆಗಳ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿವೆ.
ತಾಯಿ ಭಾಗ್ಯ ಮತ್ತು ತಾಯಿ ಭಾಗ್ಯ ಪ್ಲಸ್: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರ ಸೇವೆಯನ್ನು ಪಡೆದು, ಸಾರ್ವಜನಿಕರಿಗೆ ತಜ್ಞ ಪ್ರಸೂತಿ ಸೇವೆಯ ಸೌಲಭ್ಯಗಳನ್ನು ಒದಗಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಅನುಷ್ಠಾನÀಗೊಳಿಸಲಾಗಿದೆ. ಈ ಯೋಜನೆಯನ್ನು ಹಿಂದುಳಿದ 8 ಜಿಲ್ಲೆಗಳಾದ ಗುಲ್ಬರ್ಗ, ಯಾದಗಿರಿ, ಕೊಪ್ಪಳ, ಬಿಜಾಪುರ, ರಾಯಚೂರು, ಬೀದರ್, ಬಾಗಲಕೋಟೆ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಯೋಗದಲ್ಲಿ ತಾಯಿ ಭಾಗ್ಯ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಸಂಪೂರ್ಣ ನಗದು ರಹಿತ (Totally Cashless Treatment) ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ದೊರಕಿಸುವಂತೆ ರೂಪಿಸಲಾಗಿದೆ. ತಾಯಿಭಾಗ್ಯ ಪ್ಲಸ್ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ರೂ. 1,000/- ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೇಲ್ಪಟ್ಟು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಆಸ್ಪತ್ರೆಗಳು ಮತ್ತು ಹೋಬಳಿ ಮಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಮುಂತಾದ ತಜ್ಞರ ಸೇವೆ ಲಭ್ಯವಿದ್ದು ಶಸ್ತ್ರಚಿಕಿತ್ಸೆಗಳನ್ನು ಮಾಡುವುದಕ್ಕೂ ವ್ಯವಸ್ಥೆ ಇರುತ್ತದೆ. ಜಿಲ್ಲಾಮಟ್ಟದಲ್ಲಿ ಸುಸಜ್ಜಿತವಾದ ಎಲ್ಲಾ ಬಗೆಯ ಸೇವೆ ದೊರೆಯುವ ಜಿಲ್ಲಾ ಆಸ್ಪತ್ರೆಗಳಿವೆ. ನವಜಾತ ಶಿಶುಗಳ ಆರೈಕೆಗೆ ವಿಶೇಷ ಸೇವೆಗಳು: ಶಿಶು ಜನನದ ನಂತರದ 48 ಗಂಟೆಗಳು ಅತ್ಯಂತ ನಿರ್ಣಾಯಕವಾಗಿರುತ್ತದೆ. ನವಜಾತ ಶಿಶುಗಳ ಸಾಮಾನ್ಯ ಸಮಸ್ಯೆಗಳಾದ ಉಸಿರುಗಟ್ಟುವಿಕೆ. ದೇಹದ ಉಷ್ಣತೆಯನ್ನು ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳನ್ನು ನಿರ್ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ನಿರ್ವಹಣೆಗೆ 24x7 ಸೇವೆ ಸಲ್ಲಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 994 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನವಜಾತ ಶಿಶುಗಳನ್ನು ಬೆಚ್ಚಗಿಡುವುದಕ್ಕಾಗಿಯೇ ಮೊದಲನೇ ಮಟ್ಟದ ರಕ್ಷಣೆ ನೀಡಲು ರೇಡಿಯಂಟ್ ವಾರ್ಮರ್ಗಕಳನ್ನು ಪೂರೈಸಲಾಗಿದೆ. ರಾಜ್ಯಾದ್ಯಂತ ಈಗಾಗಲೇ ಎಫ್.ಆರ್.ಯು ಪ್ರಥಮ ಮೇಲ್ಮಟ್ಟದ ಆಸ್ಪತ್ರೆ ಎಂದು ಪರಿಗಣಿಸಲಾಗಿದೆ. ಎರಡನೇ ಮಟ್ಟದ ರಕ್ಷಣೆ ನೀಡಲು 194 ಘಟಕಗಳಿಗೆ ರೇಡಿಯಂಟ್ ವಾರ್ಮರ್ಗ ಳು ಹಾಗೂ ಫೋಟೊ ಥೆರಪಿ ಘಟಕಗಳನ್ನು ಹೆರಿಗೆ ಕೋಣೆಯ ಪಕ್ಕದಲ್ಲೇ ಸ್ಥಾಪಿಸಲಾಗಿದೆ. 17 ಜಿಲ್ಲಾ ಆಸ್ಪತ್ರೆಗಳೂ ಒಳಗೊಂಡಂತೆ, ದೊಡ್ಡ ಆಸ್ಪತ್ರೆಗಳು ಹಾಗೂ ಮೆಟರ್ನಿಟಿ ಆಸ್ಪತ್ರೆಗಳಲ್ಲಿ ರೋಗಗ್ರಸ್ತ ನವಜಾತ ಶಿಶುಗಳ ರಕ್ಷಣೆಗಾಗಿ 33 ರೋಗಗ್ರಸ್ತ ನವಜಾತ ಶಿಶು ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಜಿಲ್ಲಾ ಮಟ್ಟದಲ್ಲಿ ಮತ್ತು ಕೆಲವು ತಾಲ್ಲೂಕುಗಳಲ್ಲಿ ಪುರ್ನಚೇತನ ಪೌಷ್ಠಿಕ ಆಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪಾಲಕರಿಂದ ಮಗುವಿಗೆ ಹೆಚ್.ಐ.ವಿ. ಸೋಂಕು ಹರಡದಂತೆ ತಡೆಗಟ್ಟುವ (ಪಿ.ಪಿ.ಟಿ.ಸಿ.ಟಿ) ಕಾರ್ಯಕ್ರಮ: ಎಲ್ಲಾ ಗರ್ಭಿಣಿಯರಿಗೆ ಮನವೊಲಿಸಿ ಹೆಚ್.ಐ.ವಿ. ಪರೀಕ್ಷೆ ನಡೆಸಿ ಸುರಕ್ಷಿತ ಹೆರಿಗೆ ಸೇವೆ ನೀಡುವುದು. ತಾಯಿಯಿಂದ ಮಗುವಿಗೆ ಹೆಚ್.ಐ.ವಿ. ಸೋಂಕು ಹರಡದಂತೆ ತಡೆಗಟ್ಟಲು ಹೆರಿಗೆ ಸಮಯದಲ್ಲಿ ನೆವಿರಪೈನ್ ದ್ರಾವಣವನ್ನು 72 ಗಂಟೆಗಳ ಒಳಗಾಗಿ ನೀಡುವ ವ್ಯವಸ್ಥೆಯನ್ನು ರಾಜ್ಯಾಂದ್ಯಂತ ಮಾಡಲಾಗಿದೆ.
ತಾಯಿ ಮಕ್ಕಳ ಅನುಸರಣೆಗೆ ತಂತ್ರಜ್ಞಾನ ಬಳಕೆ (MCTS): ಗರ್ಭಿಣಿಯರನ್ನು ಶೀಘ್ರವಾಗಿ ದಾಖಲಿಸಿಕೊಂಡು ವಿಶಿಷ್ಠವಾದ ಸಂಖ್ಯೆಯಳ್ಳ ತಾಯಿ ಕಾರ್ಡ್ನ್ನು ನೀಡಿ ಕಾಲಕಾಲಕ್ಕೆ ತಾಯಿ ಮತ್ತು ಮಕ್ಕಳು ಪಡೆಯಬೇಕಾದ ಸೇವೆಯನ್ನು ಮೊಬೈಲ್ ಸಂದೇಶದ ಮೂಲಕ ತಿಳಿಸುವುದು. ಗರ್ಭಿಣಿ ಹಾಗೂ ಕುಟುಂಬ ವರ್ಗದವರಿಗೆ ಹಾಗೂ ಆರೋಗ್ಯ ಸೇವಾಕರ್ತರಿಗೆ ಎಸ್.ಎಂ.ಎಸ್ ಕಳುಹಿಸುವ ಮುಖಾಂತರ ಅನುಸರಣೆ ಮಾಡುವ ವಿಶಿಷ್ಟ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ನವಜಾತ ಶಿಶುಗಳಲ್ಲಿ ಅಂಧತ್ವವನ್ನು ತಡೆಗಟ್ಟುವ ಯೋಜನೆ: ಅವಧಿಗಿಂತ ಮೊದಲೇ ಜನಿಸುವ ಮತ್ತು ಕಡಿಮೆ ತೂಕ ಇರುವ ನವಜಾತ ಶಿಶುಗಳ ಕಣ್ಣುಗಳಲ್ಲಿ ಅಕ್ಷಿಪಟ ನಾಶವಾಗಿ ಅಂದರಾಗುವುದನ್ನು ತಪ್ಪಿಸಲು, ವೈದ್ಯಕೀಯ ಪರೀಕ್ಷೆಗೆ ಅಳವಡಿಸಿ ಅವಶ್ಯಕತೆಯಿದ್ದಲ್ಲಿ ಲೇಸರ್ ಚಿಕಿತ್ಸೆ ನೀಡಲು ರಾಜ್ಯದ ಹಿಂದುಳಿದ 12 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಾರ್ವಜನಿಕರಿಗೆ ಈ ಸೇವೆ ನೀಡಲಾಗುತ್ತದೆ.
ನವಜಾತ ಶಿಶುವಿಗೆ ಬಿಸಿಜಿ ಹೆಪಿಟೈಟಿಸ್-ಬಿ (Birth dose) ಪೋಲಿಯೋ ಹನಿ
ರಾಷ್ಟ್ರೀಯ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ: ಶಿಶುಗಳಿಗೆ 9 ಮಾರಕ ಕಾಯಿಲೆಗಳ ವಿರುದ್ಧ ಲಸಿಕೆಗಳನ್ನು ನೀಡಲಾಗುತ್ತದೆ. ಪ್ರತಿ ಗುರುವಾರ ಆಸ್ಪತ್ರೆಗಳಲ್ಲಿ ಹಾಗೂ ನಿಗಧಿತ ದಿನಾಂಕಗಳಂದು ಹೊರವಲಯಗಳಲ್ಲಿ (ಗ್ರಾಮ ಹಾಗೂ ಉಪಕೇಂದ್ರಗಳಲ್ಲಿ) ಲಸಿಕೆಗಳನ್ನು ನೀಡಲಾಗುತ್ತದೆ.
ಹದಿಹರೆಯದವರ ಆರೋಗ್ಯ ಮತ್ತು ಸ್ನೇಹಾ ಕ್ಲಿನಿಕ್: ದೇಶದ ಒಟ್ಟು ಜನಸಂಖ್ಯೆಯಲ್ಲಿ ಹದಿಹರೆಯದವರ (10 ರಿಂದ 19 ವರ್ಷ) ಪ್ರಮಾಣ ಪ್ರತಿಶತ 22 ರಷ್ಟು ಇರುತ್ತದೆ. ಹದಿಹರೆಯದ ಗುಂಪಿನವರೆಗೆ ವಿಶೇಷ ಮಹತ್ವ ನೀಡಿ ಇವರುಗಳಿಗೆ ಅವಶ್ಯವಾದ ಹಾಗೂ ಆರೋಗ್ಯಕರವಾದ ನಡವಳಿಕೆ ಮೂಡಿಸಲು ವಿವಿಧ ಆರೋಗ್ಯ ಶಿಕ್ಷಣ ಚಟುವಟಿಕೆ ನಡೆಸಿ ತನ್ಮೂಲಕ ಅರಿವು ಮೂಡಿಸುವುದು ಮಾತ್ರವಲ್ಲದೆ ಅದರ ಜೊತೆಯಲ್ಲಿಯೇ ಸೇವಾ ಸೌಲಭ್ಯವನ್ನು ಒದಗಿಸಲಾಗುತ್ತದೆ.10 ರಿಂದ 19 ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಒಂದು ಅಂದಾಜಿನಂತೆ ಪ್ರತಿಶತ 70% ರಷ್ಟು ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ಇದೆ. ದೇಶದಲ್ಲಿ ವರದಿಯಾದ ಒಟ್ಟು ಎಚ್.ಐ.ವಿ/ಏಡ್ಸ್ ಪ್ರಕರಣಗಳಲ್ಲಿ ಪ್ರತಿಶತ 35% ರಷ್ಟು ಪ್ರಕರಣಗಳು 15 ರಿಂದ 24 ವಯಸ್ಸಿನವರಾಗಿದ್ದಾರೆ. ಹದಿಹರೆಯದ ಗುಂಪಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ವಿವಿಧ ಅನಾರೋಗ್ಯ ಮತ್ತು ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಗುರುವಾರ ಅಪರಾಹ್ನ 3 ರಿಂದ 5 ಗಂಟೆಯವರೆಗೆ ಹದಿಹರೆಯದವರಿಗೋಸ್ಕರವಾಗಿಯೇ ವಿಶೇೀಷವಾಗಿ “ಸ್ನೇಹಾ ಕ್ಲಿನಿಕ್” ನಡೆಸಲಾಗುತ್ತಿದೆ.
ವೈದ್ಯಾಧಿಕಾರಿಗಳು ಹಾಗೂ ಕೆಲವು ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚಕರು (ICTC) ಗಳಿದ್ದಾರೆ. ಆರೋಗ್ಯ ಶಿಕ್ಷಣ ಚಟುವಟಿಕೆ, ಕೌನ್ಸಿಲಿಂಗ್ (ಆಪ್ತ ಸಮಾಲೋಚನೆ) ಹಾಗೂ ಅವÀಶ್ಯಕತೆ ಇರುವವರಿಗೆ ಔಷಧೋಪಚಾರವನ್ನು ನೀಡಲಾಗುತ್ತಿದೆ.
ಸಾಪ್ತಾಹಿಕ ಕಬ್ಬಿಣ (ಧಾತು ರೂಪದಲ್ಲಿ) ಮತ್ತು ಫೋಲಿಕ್ ಆಮ್ಲ ಪೂರೈಕೆ ಕಾರ್ಯಕ್ರಮ: ಹದಿ ಹರೆಯದವರಲ್ಲಿ ರಕ್ತ ಹೀನತೆ ಕಡಿಮೆ ಮಾಡಲು ವಾರದಲ್ಲಿ 100 ಮಿಲಿಗ್ರಾಂ ಕಬ್ಬಿಣ ಮತ್ತು 500 ಯುಜಿ ಫೋಲಿಕ್ ಆಮ್ಲ ಮಾತ್ರೆಗಳನ್ನು ಶಾಲೆಯಲ್ಲ್ಲಿರುವ. ಈ ವಯೋಮಾನದ ಎಲ್ಲಾ ಮಕ್ಕಳಿಗೂ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ನೀಡಲಾಗುತ್ತಿದೆ.
ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ: ಸರ್ಕಾರಿ, ಅನುದಾನಿತ ಹಾಗೂ ಅನುದಾನದ ರಹಿತ ಖಾಸಗಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳ ವೈದ್ಯಕೀಯ ತಪಾಸಣೆ ನಡೆಸಿ ಸಣ್ಣ ಪುಟ್ಟ ಆರೋಗ್ಯ ತೊಂದರೆಗಳಿಗೆ ಶಾಲೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಗಳಿಗೆ ರಾಜ್ಯ ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಯಶಸ್ವಿನಿ ನೆಟ್ವಗರ್ಕ್ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಶಾಲಾ ಮಕ್ಕಳ ಆರೋಗ್ಯ ತಪಾಸಣೆಯನ್ನು ಶಾಲಾ ತಪಾಸಣಾ ತಂಡಗಳಿಂದ ತಪಾಸಣೆ ನಡೆಸಲಾಗುವುದು.ಆರೋಗ್ಯ ಸಮಸ್ಯೆಗಳಿರುವ ಎಲ್ಲಾ ಮಕ್ಕಳಿಗೆ ಸಮಸ್ಯೆಯ ತೀವ್ರತೆಯ ಅನುಸಾರವಾಗಿ ವಿವಿಧ ಹಂತದ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲಾಗುವುದು. ತೀವ್ರ ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗೆ ರಾಜ್ಯದಾದ್ಯಂತ ಇರುವ 454 ಯಶಸ್ವಿನಿ ನೆಟ್ವಗರ್ಕ್ ಆಸ್ಪತ್ರೆಗಳಲ್ಲ್ಲಿ 850 ಕ್ಕೂ ಹೆಚ್ಚು ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗಿ ಬರಲು ವಿದ್ಯಾರ್ಥಿ ಹಾಗೂ ಅವರ ಪೋಷಕರಿಗೆ ಗರಿಷ್ಠ ರೂ. 1,000 ಗಳ ಪ್ರಯಾಣ ಭತ್ಯೆಯನ್ನು ನೀಡಲಾಗುವುದು.
ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ: ಜ್ವರಪೀಡಿತ ವ್ಯಕ್ತಿಗಳಿಂದ ರಕ್ತ ಲೇಪನ ತೆಗದು, ರೋಗ ಪತ್ತೆ ಹಚ್ಚಿದ ಸ್ಥಳದಲ್ಲೇ ಕ್ಲೋರೋಕ್ವಿನ್ ಮಾತ್ರೆಗಳನ್ನು ವಯಸ್ಸಿಗೆ ಅನುಗುಣವಾಗಿ ನೀಡಲಾಗುತ್ತಿದೆ. ಪ್ರಯೋಗಾಲಯದಲ್ಲಿ ರಕ್ತ ಲೇಪನ ಪರೀಕ್ಷೆ ನಡೆಸಿ, ವ್ಯಕ್ತಿಗೆ ಮಲೇರಿಯಾ ಬಂದಿರುವುದು ದೃಢಪಟ್ಟಲ್ಲಿ ಚಿಕಿತ್ಸೆಯಾಗಿ ಪ್ರೈಮಾಕ್ವಿನ್ ಮಾತ್ರೆಗಳನ್ನು ನೀಡಿ ರೋಗ ವಾಸಿಮಾಡಲಾಗುತ್ತಿದೆ.ಮಲೇರಿಯಾ ನಿಯಂತ್ರಣಕ್ಕೆ ಪರಿಸರ ನೈರ್ಮಲ್ಯ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು, ವೈಯಕ್ತಿಕ ರಕ್ಷಣೆ ಇನ್ನು ಮುಂತಾದವುಗಳ ಬಗ್ಗೆ ಜನರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಸೊಳ್ಳೆ ಲಾರ್ವಾಹಾರಿ ಮೀನುಗಳಾದ ಗ್ಯಾಂಬೂಸಿಯಾ ಹಾಗೂ ಗಪ್ಪಿ ಮೀನುಗಳನ್ನು ಸೊಳ್ಳೆ ಉತ್ಪತ್ತಿ ತಾಣಗಳಾದ ಹೊಂಡ, ಕೆರೆಗಳಲ್ಲಿ ಬಿಟ್ಟು ಲಾರ್ವ ನಿಯಂತ್ರಣ ಮಾಡಲಾಗುತ್ತಿದೆ.
ಡೆಂಗ್ಯೂ-ಚಿಕುನ್ ಗುನ್ಯಾ ನಿಯಂತ್ರಣ ಕಾರ್ಯಕ್ರಮ: ಡೆಂಗ್ಯೂ ಹಾಗೂ ಚಿಕುನ್ ಗುನ್ಯಾ, ಈಡೀಸ್ ಜಾತಿಯ ಸೊಳ್ಳೆಗಳಿಂದ ಪ್ರಸಾರವಾಗುವ ವೈರಲ್ ಸೋಂಕುಗಳಾಗಿವೆ. ರೋಗ ಚಿಹ್ನೆಗಳ ಆಧಾರದ ಮೇಲೆ ಚಿಕಿತ್ಸೆ ನೀಡಿ ಜ್ವರ ಹಾಗೂ ನೋವುಗಳನ್ನು ಉಪಶಮನಗೊಳಿಸಲಾಗುತ್ತಿದೆ. ರೋಗ ಹರಡದಂತೆ ತಡೆಯುವುದೆ ಬಹಳ ಮುಖ್ಯವಾದ ಅಂಶವಾಗಿದ್ದು ಡೆಂಗ್ಯೂ ಹಾಗೂ ಚಿಕುನ್‍ಗುನ್ಯ ವೈರಲ್ ಸೋಂಕು ಹೊಂದಿರುವ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರಲ್ಲಿ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಸಿಮೆಂಟ್ ನೀರಿನ ತೊಟ್ಟೆಗಳು, ಬ್ಯಾರೆಲ್‍ಗಳು, ಫ್ರಿಜ್‍ಗಳು, ಹೋವಿನ ಕುಂಡಗಳು, ಮನೆಯ ಹೊರಗಡೆ ಬಿಸಾಡಿರುವ ತೆಂಗಿನ ಚಿಪ್ಪುಗಳು, ಒಡೆದ ಬಾಟಲಿಗಳು, ಟಯರ್‍ಗಳು, ಮಡಕೆಗಳು, ಪ್ಲಾಸ್ಟಿಕ್‍ವಸ್ತುಗಳು, ಒಳಕಲ್ಲು ಇನ್ನು ಮುಂತಾದವುಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿ ರೋಗ ಹರಡಲು ಕಾರಣವಾಗುತ್ತದೆ.ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಲಾರ್ವ ಸಮೀಕ್ಷೆ ನಡೆಸಿ ಮನೆ ಒಳಗಡೆ ಹಾಗೂ ಹೊರಗಡೆಯ ನೀರಿನ ಸಂಗ್ರಹಗಳಲ್ಲಿ ಕಂಡು ಬಂದ ಲಾರ್ವಾಗಳನ್ನು ನಾಶಪಡಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.ಅಲ್ಲದೆ ವಾರದಲ್ಲಿ ಎರಡು ಸಲ ನೀರಿನ ಸಂಗ್ರಹ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಒಂದು ದಿನ ಒಣಗಿಸಿ ನಂತರ ನೀರು ತುಂಬಿಸಿ ನೀರಿನ ಸಂಗ್ರಹಗಳನ್ನು ಮುಚ್ಚಿಟ್ಟುಕೊಳ್ಳಲು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ.
ರಾಷ್ಟ್ರೀಯ ಪರಿಷ್ಕ್ರತ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮಗಳು: ಕ್ಷಯ ರೋಗ ಖಚಿತ ಪಟ್ಟಿ ರೋಗಿಗಳನ್ನು ಚಿಕಿತ್ಸೆ ದೃಷ್ಠಿಯಿಂದ ಚಿಕಿತ್ಸಾ ಗುಂಪು-1 ಚಿಕಿತ್ಸಾ ಗುಂಪು-2 ಎಂದು ವರ್ಗೀಕರಿಸಿ ಕನಿಷ್ಠ 6 ತಿಂಗಳಿಂದ ಗರಿಷ್ಠ 8 ತಿಂಗಳವರೆಗೆ ಡಾಟ್ಸ್ ಕೇಂದ್ರಗಳ ಮೂಲಕ ಉಚಿತ ಚಿಕಿತ್ಡೆ ನೀಡಲಾಗುವುದು. ಅಂಗನವಾಡಿ ಕೇಂದ್ರ, ಆಶಾ ಕಾರ್ಯಕರ್ತೆಯರು, ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತೆರೆದಿರುವ ನೇರ ನಿಗಾವಣೆ ಕೇಂದ್ರ (DOTS) ಮೂಲಕ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸಂಶಯಾಸ್ಪದ ಕ್ಷಯ ರೋಗಿಗಳಿಗೆ ಉಚಿತವಾಗಿ ಕಫ ಹಾಗೂ ಎಕ್ಸ್‍ರೇ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕ್ಷಯ ರೋಗಿಗಳ ಚಿಕಿತ್ಸೆ ಕಾರ್ಯನುಸರಣೆ ಮಾಡಿ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ.
ಜನ ಸಾಮಾನ್ಯರ ಆರೋಗ್ಯದಲ್ಲಿ ಜನಪ್ರತಿನಿಧಿಗಳ ಪಾತ್ರ
ಸಮುದಾಯದ ಮಾಲೀಕತ್ವ ಹಾಗೂ ಪಂಚಾಯಿತಿರಾಜ್ ವ್ಯವಸ್ಥೆಯಲ್ಲಿ ವಿಲೀನತೆ:
“ಆಶಾ” : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜನ ಸಮುದಾಯದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುವ “ಆಶಾ” ಕಾರ್ಯಕರ್ತೆಯರು (Accredited Social Health Activist). ಸಮುದಾಯದ ಆರೋಗ್ಯವನ್ನು ಉತ್ತಮಪಡಿಸುವ ಮಹತ್ತರ ಜವಾಬ್ದಾರಿಯನ್ನು ಇವರು ಹೊತ್ತಿದ್ದಾರೆ ಬಹಳ ಮುಖ್ಯವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ ತಾಯಂದಿರು ಹಾಗೂ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಆಶಾಗಳ ಪಾತ್ರ ಅತಿ ಮುಖ್ಯವಾಗಿದೆ. ಸಮುದಾಯದೊಳಗೇ ಇದ್ದು ಅವರ ರೀತಿ, ರಿವಾಜು ತಿಳಿದುಕೊಂಡಿರುವ ಸ್ವಯಂಸೇವಕರು ಇವರು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅನುಷ್ಠಾನದ ಯಶಸ್ಸಿನಲ್ಲಿ ಇವರದು ಪ್ರಮುಖ ಪಾತ್ರ.
ಸ್ಥಳೀಯ ಸಮುದಾಯದಿಂದಲೇ ಒಬ್ಬ ಮಹಿಳೆಯನ್ನ ಆಶಾ ಕಾರ್ಯಕರ್ತೆಯನ್ನಾಗಿ ನೇಮಕ ಮಾಡಲಾಗಿದೆ. ಪ್ರತಿ ಗ್ರಾಮ ಅಥವಾ 1000 ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆಯರು ಇದ್ದು, ಈಗ ರಾಜ್ಯದಲ್ಲಿ ಸುಮಾರು 35,000 ಆಶಾ ಕಾರ್ಯಕರ್ತೆಯರಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಸಮುದಾಯದ ಆರೋಗ್ಯ ಸುಧಾರಣೆಯಲ್ಲಿ “ಆಶಾ”ಗಳ ಪಾತ್ರವನ್ನು ಮನಗಂಡ ರಾಜ್ಯ ಸರ್ಕಾರ ಅವರಿಗೆ ಕೇಂದ್ರ ಸರ್ಕಾರ ನೀಡುತ್ತಿರು ಪ್ರೋತ್ಸಾಹ ಧನದ ಜೊತೆಗೆ ಅಷ್ಟೇ ಮೊತ್ತದ ಪ್ರೋತ್ಸಾಹ ಧನವನ್ನು ನೀಡಲು ಒಪ್ಪಿದೆ.
ಉದ್ದೇಶ: ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವುದು.ಸಮುದಾಯದ ರೀತಿ, ರಿವಾಜು ತಿಳಿದಿರುವ ಸ್ವಯಂ ಸೇವಕರಿಂದ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ತಲುಪಿಸುವುದು. ಆರೋಗ್ಯ ಇಲಾಖೆ ಹಾಗೂ ಸಮುದಾಯದ ನಡುವೆ ಕೊಂಡಯಂತೆ ಕೆಲಸ ನಿರ್ವಹಿಸಿ, ಸಮುದಾಯದ ಆರೋಗ್ಯ ಉತ್ತಮಪಡಿಸುವುದು. ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ ತಾಯಂದಿರ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ಸಮಿತಿಗಳು ಹಾಗೂ ಸಂಸ್ಥೆಗಳಿಗೆ ವಾರ್ಷಿಕವಾಗಿ ನೀಡುವ ವಾರ್ಷಿಕ ಮುಕ್ತನಿಧಿ ವಿವರ ಹೀಗಿದೆ.
ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ - ರೂ. 10,000/- ಮುಕ್ತ ನಿಧಿ.
ಉಪಕೇಂದ್ರ - ರೂ. 10,000/- ಮುಕ್ತ ನಿಧಿ ಮತ್ತು ಉಪಕೇಂದ್ರ ಕಟ್ಟಡವಿದ್ದಲ್ಲಿ ಕಟ್ಟಡ ನಿರ್ವಹಣಾ ನಿಧಿ ರೂ. 10,000/-.
ಪ್ರಾಥಮಿಕ ಆರೋಗ್ಯ ಕೇಂದ್ರ - ರೂ. 25,000/- ಮುಕ್ತ ನಿಧಿ, ರೂ. 50,000/- ವಾರ್ಷಿಕ ನಿರ್ವಹಣಾ ನಿಧಿ ಹಾಗೂ ಒಂದು ಲಕ್ಷ ರೂಪಾಯಿ ಆರೋಗ್ಯ ರಕ್ಷಾ ಸಮಿತಿ ನಿಧಿ.
ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು - ರೂ. ಒಂದು ಲಕ್ಷ ಆರೋಗ್ಯ ರಕ್ಷಾ ಸಮಿತಿ ನಿಧಿ. ರೂ. 50,000/- ಮುಕ್ತ ನಿಧಿ ಹಾಗೂ ರೂ. 75,000/- ಕಟ್ಟಡ ನಿರ್ವಹಣಾ ನಿಧಿ.
ತಾಲ್ಲೂಕು ಆಸ್ಪತ್ರೆ - ರೂ. ಒಂದು ಲಕ್ಷ ಆರೋಗ್ಯ ರಕ್ಷಾ ಸಮಿತಿ ನಿಧಿ, ರೂ. 50,000/- ಮುಕ್ತ ನಿಧಿ ಹಾಗೂ ರೂ. 75,000/- ಕಟ್ಟಡ ನಿರ್ವಹಣಾ ನಿಧಿ.
ಜಿಲ್ಲಾ ಆಸ್ಪತ್ರೆ - 5,00,000/- ಆರೋಗ್ಯ ರಕ್ಷಾ ಸಮಿತಿ ಮೂಲನಿಧಿ.
ವಿವಿಧ ಸಮಿತಿಗಳು ಹಾಗೂ ಅವುಗಳ ಅಧ್ಯಕ್ಷರು
ಗ್ರಾಮ ಮಟ್ಟದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗೆ ಗ್ರಾಮ ಪಂಚಾಯಿತ ಅಧ್ಯಕ್ಷರು / ಸದಸ್ಯರು ಅಧ್ಯಕ್ಷರು
ಗ್ರಾಮ ಪಂಚಾಯಿತಿ ಮಟ್ಟದಲ್ಲಿ – ಉಪ ಆರೋಗ್ಯ ಕೇಂದ್ರ
ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ – ಆ ಸ್ಥಳದ GP ಅಧ್ಯಕ್ಷರು ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರು
ತಾಲ್ಲೂಕು ಆಸ್ಪತ್ರೆ – ಆರೋಗ್ಯ ರಕ್ಷಾ ಸಮಿತಿ - ಶಾಸಕರು ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರು
ಜಿಲ್ಲಾ ಆಸ್ಪತ್ರೆ – ಆರೋಗ್ಯ ರಕ್ಷಾ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅಧ್ಯಕ್ಷರು
ಜಿಲ್ಲಾ ಆರೋಗ್ಯ ಅಭಿಯಾನ – ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅಧ್ಯಕ್ಷರು
ರಾಜ್ಯ ಆರೋಗ್ಯ ಅಭಿಯಾನ ಮಾನ್ಯ ಮುಖ್ಯ ಮಂತ್ರಿಗಳು – ಅಧ್ಯಕ್ಷರು
ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ - ಆರೋಗ್ಯ ವ್ಯವಸ್ಥೆಯಲ್ಲಿ ಜನರ ಒಡೆತನವಿದ್ದರೆ ಅವರಲ್ಲಿ ಮತ್ತು ಇಲಾಖೆಗಳ ಅಧಿಕಾರಿಗಳು ಮತ್ತು ಕಾರ್ಯಕರ್ತರಲ್ಲಿ ಜವಾಬ್ದಾರಿ ಹುಟ್ಟುತ್ತದೆ. ಆರೋಗ್ಯ ಸೇವೆಯಲ್ಲಿ ಜನರು ಭಾಗವಹಿಸಿದರೆ ಅದರ ಉಪಯೋಗವನ್ನು ಪರಿಣಾಮಕಾರಿಯಾಗಿ ಪಡೆಯಲು ಸಾಧ್ಯವಾಗುತ್ತದೆ. ಈ ಉದ್ದೇಶದಿಂದ ಗ್ರಾಮ ಆರೋಗ್ಯ ನೈರ್ಮೆಲ್ಯ ಮತ್ತು ಪೌಷ್ಠಿಕ ಸಮಿತಿಗಳನ್ನು ರಚಿಸಲಾಗಿದೆ.ಪ್ರತಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ, ಪೌಷ್ಠಿಕ ಸಮಿತಿಗೆ ರೂ. 10,000.00 ಗಳ ಮುಕ್ತ ನಿಧಿಯನ್ನು ನೀಡಲಾಗುತ್ತಿದೆ.
ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ, ಪೌಷ್ಠಿಕ ಸಮಿತಿಗಳ ಮೂಲಕ ಜನರಿಗೆ ಸರಕಾರದಿಂದ ಸಿಗಬೇಕಾದ ಸೇವೆಗಳ ಕುರಿತು ತಿಳಿವಳಿಕೆ ಮೂಡಿಸುವುದು.ಒಂದು ಗ್ರಾಮದ ಒಟ್ಟು ಆರೋಗ್ಯ ಸುಧಾರಿಸಲು ಹಲವಾರು ಸಂಸ್ಥೆಗಳು ಇಲಾಖೆಗಳು ಜೊತೆಗೂಡಿ ಕೆಲಸ ಮಾಡುವುದು.ಗ್ರಾಮದ ಪ್ರತಿ ಕುಟುಂಬಗಳು ಶೌಚಾಲಯ ಹೊಂದುವಂತೆ ಮಾಡುವುದು.ಸಾರ್ವಜನಿಕ ಚರಂಡಿ ಬಾವಿಗಳು, ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮಾತ್ರ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳಿಗೆ ಮುಕ್ತನಿಧಿ ಬಳಕೆಯ ಮಾರ್ಗಸೂಚಿ: ಪ್ರತಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗೆ ತಲಾ ಹತ್ತು ಸಾವಿರ ರೂಪಾಯಿಗಳ ಮುಕ್ತನಿಧಿಯನ್ನು ಕೊಡಲಾಗಿದೆ. ಈ ನಿಧಿಯನ್ನು ಈ ಕೆಳಗಿನ ಚಟುವಟಿಕೆಗಳಿಗೆ ಬಳಸಬಹುದಾಗಿದೆ.
ಆರೋಗ್ಯ ರಕ್ಷಾ ಸಮಿತಿ - ಆರೋಗ್ಯ ರಕ್ಷಾ ಸಮಿತಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ರಚಿಸಲಾಗಿರುತ್ತದೆ. ಆರೋಗ್ಯ ರಕ್ಷಾ ಸಮಿತಿಯಲ್ಲಿ ಈ ಕೆಳಕಂಡ ಸದಸ್ಯರನ್ನು ಒಳಗೊಂಡಿದೆ:
ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಥಾನದ ಗ್ರಾಮ ಪಂಚಾಯಿತಿ ಅಧ್ಯಕ್ಷರು - ಅಧ್ಯಕ್ಷರು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮಹಿಳಾ - ಸದಸ್ಯರು. ಹಿಂದುಳಿದ /ಅಲ್ಪ ಸಂಖ್ಯಾತ ಮಹಿಳಾ ಪ್ರತಿನಿಧಿ- ಸದಸ್ಯರು. ಅಂಗನವಾಡಿ ಮೇಲ್ವಿಚಾರಕಿ - ಸದಸ್ಯರು ಪ್ರಾಥಮಿಕ/ ಪ್ರೌಢ ಶಾಲೆಯ ಮುಖ್ಯೋಪಧ್ಯಾಯರು - ಸದಸ್ಯರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ- ಸದಸ್ಯ ಕಾರ್ಯದರ್ಶಿ.
ಸಮಿತಿಯ ಜವಾಬ್ದಾರಿಗಳು: ಆಸ್ಪತ್ರೆಯ ಒಳ ಮತ್ತು ಹೊರ ಆವರಣವನ್ನು ಶುಚಿಯಾಗಿಡುವ ಎಲ್ಲಾ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಆಸ್ಪತ್ರೆಯ ಆವರಣದಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ಆಸ್ಪತ್ರೆಗೆ ಆಗಮಿಸುವ ರೋಗಿಗಳು ಮತ್ತವರ ಸಂಬಂಧಿಕರಿಗೆ ಅತ್ಯಾವಶ್ಯಕವಾದ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಮಾಡಬೇಕು. ಆಸ್ಪತ್ರೆಯ ಸುಧಾರಣೆ ಮತ್ತು ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ಯೋಜನೆ ಮತ್ತು ಕೆಲಸಕ್ಕಾಗಿ ವಾರ್ಷಿಕ ನಿರ್ವಹಣಾ ವೆಚ್ಚ ಮತ್ತು ಮುಕ್ತನಿಧಿಯನ್ನು ಕ್ರಮವರಿತು ಬಳಸಬೇಕು. ಪ್ರತಿ ತಿಂಗಳೂ ಆಸ್ಪತ್ರೆಯಲ್ಲಿ ಕ್ಯಾಟರಾಕ್ಟ್ ತಪಾಸಣಾ ಶಿಬಿರವನ್ನು ಏರ್ಪಡಿಸಬೇಕು. ಇದಕ್ಕಾಗಿ ನುರಿತ ತಜ್ಞರನ್ನು ಹತ್ತಿರದ ತಾಲ್ಲೂಕು ಆಸ್ಪತ್ರೆ ಅಥವಾ ಖಾಸಗಿ ಚಿಕಿತ್ಸಾಲಯಗಳಿಂದ ಬರಮಾಡಿಕೊಳ್ಳುವುದು. ಆರೋಗ್ಯ ರಕ್ಷಾ ಸಮಿತಿಗಳು ಇತರ ಸಂಸ್ಥೆಗಳಿಂದ, ಪಂಚಾಯತಿಯಿಂದ, ದಾನಿಗಳಿಂದ ನಗದು ಅಥವಾ ವಸ್ತುಗಳ ರೂಪದಲ್ಲಿ ವಂತಿಗೆ/ದೇಣಿಗೆಯನ್ನು ಸಂಗ್ರಹಿಸಬಹುದು ಮತ್ತು ಅವುಗಳನ್ನು ಸಾರ್ವಜನಿಕ ಆರೋಗ್ಯ ಸುಧಾರಣೆಗಾಗಿ ಬಳಸತಕ್ಕದ್ದು.
“104” ಆರೋಗ್ಯ ವಾಣಿ : ರಾಜ್ಯದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೊಬ್ಬರು ಒಂದು ದೂರವಾಣಿ ಕರೆಯ ಮೂಲಕ ತಮಗೆ ಬೇಕಾದ ತುರ್ತು ಆರೋಗ್ಯ ಮಾಹಿತಿಯನ್ನು ಪಡೆಯಬಹುದಾದ ವಿನೂತನ ಯೋಜನೆಯೇ “104” ಆರೋಗ್ಯ ವಾಣಿ. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು. ಸಕಾಲದಲ್ಲಿ ಇವರು ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗದಿರಬಹುದು. ಅಂತಹ ಸಂದರ್ಭಗಳಲ್ಲಿ ಇವರು ದೂರವಾಣಿ ಮುಖಾಂತರ ತಜ್ಞ ವೈದ್ಯರ ಸಲಹೆ ಪಡೆಯಲು 104 ಆರೋಗ್ಯ ವಾಣಿ ನೆರವಾಗುತ್ತಿದೆ. ಆರೋಗ್ಯ ಸಲಹೆ, ಆಪ್ತ ಸಮಾಲೋಚನೆ ಸೇವಾ ಸೌಲಭ್ಯಗಳ ಬಗೆಗೆ ಮಾಹಿತಿ. ಆರೋಗ್ಯ ಸಂಸ್ಥೆ ಅಥವಾ ಸಿಬ್ಬಂದಿಯ ವಿರುದ್ಧ ದೂರು ದಾಖಲು - ಹೀಗೆ ಅನೇಕ ಸೌಲಭ್ಯಗಳನ್ನು ಈ ಸೇವೆಯಿಂದ ಪಡೆಯಬಹುದು. ಸಾರ್ವಜನಿಕ ಆರೋಗ್ಯ ವಾಣಿಗೆ ಕರೆ ಮಾಡಲು ತಮ್ಮ ದೂರವಾಣಿಯಿಂದ “104” ಸಂಖ್ಯೆಗೆ ಕರೆಮಾಡಬೇಕು. ಇದು ಯಾವುದೇ ಶುಲ್ಕವಿಲ್ಲದ ಉಚಿತ ಕರೆಯಾಗಿರುತ್ತದೆ. ದಿನದ 24 ಗಂಟೆಗಳು ಹಾಗೂ ವರ್ಷದ 365 ದಿನಗಳೂ ಈ ಸೇವೆಯ ಸೌಲಭ್ಯ ಲಭ್ಯವಿರುತ್ತದೆ. ರಾಜ್ಯದ ಯಾವುದೇ ಆರೋಗ್ಯ ಸಂಸ್ಥೆ ಅಥವಾ ಸಂಸ್ಥೆಯ ಸಿಬ್ಬಂದಿಯ ಬಗ್ಗೆ ದೂರುಗಳನ್ನೂ ಸಹ ಸಾರ್ವಜನಿಕರು ಇಲ್ಲಿ ದಾಖಲಿಸಬಹುದು.
ವಾಜಪೇಯಿ ಆರೋಗ್ಯಶ್ರೀ: ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಬಡವರ ಪಾಡು ಅನುಭವಿಸಿದವರಿಗೇ ಗೊತ್ತು. ಸಾಮಾನ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯದ ಹಲವು ಆಘಾತಕಾರಿ ಕಾಯಿಲೆಗಳಿಗೆ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿಲ್ಲದವರಿಗೆ ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಮೂಲಕ ಅವರ ಕುಟುಂಬವನ್ನು ಸುರಕ್ಷಿತಗೊಳಿಸುವ ಕಾರ್ಯಕ್ರಮ ವಾಜಪೇಯಿ ಆರೋಗ್ಯಶ್ರೀ. ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ತೊಂದರೆ, ಸುಟ್ಟಗಾಯ, ಅಪಘಾತ ಹಾಗೂ ನವಜಾತ ಶಿಶುಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಈ ಕಾರ್ಯಕ್ರಮದಡಿ ಚಿಕಿತಸೆ ಹಾಗೂ ಆರೈಕೆಯ ಸೌಲಭ್ಯ ಒದಗಿಸಲಾಗುತ್ತದೆ. ಈ ಏಳು ಕಾಯಿಲೆಗಳಿಗೆ ಅಗತ್ಯವಾಗಿ ಬೇಕಾದ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಗುರುತಿಸಿ ಒಂದು ಆಸ್ಪತ್ರೆ ಜಾಲ ನಿರ್ಮಿಸಲಾಗಿದೆ. ರೋಗಿಗಳು ದುಡ್ಡು ನೀಡದೇ ಆಸ್ಪತ್ರೆಯಿಂದ ಆರೋಗ್ಯ ಪಡೆದುಕೊಂಡು ಹೋಗುವ ಕಾರ್ಯಕ್ರಮವಿದು. ಸ್ಪೆಷಾಲಿಟಿ ಆಸ್ಪತ್ರೆಗಳು ಚಿಕಿತ್ಸೆ ಮತ್ತು ಆರೈಕೆ ಒದಗಿಸುತ್ತವೆ. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ರೋಗಪತ್ತೆಯಿಂದ ಕಾಯಿಲೆ ಗುಣವಾಗುವವರೆಗೆ ಎಲ್ಲಾ ಪರೀಕ್ಷೆ, ಚಿಕಿತ್ಸೆ, ಔಷಧಿ, ಊಟೋಪಚಾರ ಹಾಗೂ ಪ್ರಯಾಣ ಉಚಿತವಾಗಿರುತ್ತದೆ. ಪ್ರತಿ ಬಿಪಿಎಲ್ ಕುಟುಂಬಕ್ಕೆ ಒಂದು ವರ್ಷಕ್ಕೆ ರೂ. 1.50 ಲಕ್ಷ ಮೌಲ್ಯದ ಚಿಕಿತ್ಸೆ ದೊರೆಯುತ್ತದೆ. ಈ ಮೊತ್ತ ಕುಟುಂಬದ ಯಾವುದೇ 5 ಜನರಿಗೆ ಸಲ್ಲುತ್ತದೆ. ಇದಕ್ಕಿಂತಲೂ ಹೆಚ್ಚಿನ ಮೊತ್ತದ ಅಗತ್ಯವಿರುವ ಪ್ರಕರಣಗಳಲ್ಲಿ ಪರಿಶೀಲನೆಯ ನಂತರ ಹೆಚ್ಚುವರಿಯಾಗಿ ರೂ. 50,000/- ವರೆಗೂ ನೀಡಲಾಗುತ್ತದೆ. ಕಾರ್ಯಕ್ರಮದ ಸೌಲಭ್ಯ ಪಡೆಯಲು ಖಾಯಂ ಬಿಪಿಎಲ್ ಪಡಿತರ ಚೀಟಿ ಹೊಂದಿರಲೇಬೇಕು.
ರಾಷ್ಟ್ರೀಯ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕಾರ್ಯಕ್ರಮ : ಹೆಚ್.ಐ.ವಿ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿನಿ ಕಾರ್ಡ್ ನೀಡಲಾಗುತ್ತಿದೆ ಹಾಗೂ ಯಶಸ್ವಿನಿ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಲಾಗುತ್ತಿದೆ. ಹೆಚ್.ಐ.ವಿ ಸೋಂಕಿತ ಗರ್ಭಿಣಿಯರ ಹೆರಿಗೆಗಾಗಿ ಸಾಮಾನ್ಯ ಹೆರಿಗೆಗೆ ರೂ. 5,500/- ಸಿಜೇರಿಯನ್ ಹೆರಿಗೆಗೆ ರೂ. 10,000/- ಗಳನ್ನು ಯಶಸ್ವಿನಿ ನೆಟ್‍ವರ್ಕ್ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ. ಎಲ್ಲಾ ಗರ್ಭಿಣೀಯರು ಹಾಗೂ ಕ್ಷಯರೋಗಿಗಳನ್ನು ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹೆಚ್.ಐ.ವಿ ಸೋಂಕು ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಆಸ್ಪತ್ರೆಗಳಲ್ಲಿರುವ ಐ.ಸಿ.ಟಿ.ಸಿ (ಸಮಗ್ರ ಆಪ್ತ ಸಮಾಲೋಚನೆ ಹಾಗೂ ರಕ್ತ ಪರೀಕ್ಷೆ ಕೇಂದ್ರ) ಗಳಲ್ಲಿ ಸ್ವಯಂ ಪ್ರೇರಿತರಾಗಿ ಬಂದವರಿಗೆ ಹೆಚ್.ಐ.ವಿ. ಸೋಂಕು ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಹೆಚ್.ಐ.ವಿ ಸೋಂಕಿರುವ ವ್ಯಕ್ತಿಯನ್ನು ಸಿಡಿ-4 ಸಂಖ್ಯೆ ಪರೀಕ್ಷೆಗೆ ಒಳಪಡಿಸಿ, ಈ ಸಂಖ್ಯೆ 250 ಕ್ಕಿಂತ ಕಡಿಮೆ ಇದ್ದಲ್ಲಿ ಎ.ಆರ್.ಟಿ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ, ತಾಯಂದಿರ ಸಭೆಗಳಲ್ಲಿ, ಗುಂಪು ಸಭೆಗಳಲ್ಲಿ, ಸ್ತ್ರೀಶಕ್ತಿ ಸಂಘಗಳಲ್ಲಿ, ಯುವಕ-ಯುವತಿ ಮಂಡಳಿಗಳಲ್ಲಿ ವಿವಿಧ ಆರೋಗ್ಯ ಶಿಕ್ಷಣ ವಿಧಾನಗಳ ಮೂಲಕ ಹೆಚ್.ಐ.ವಿ ಸೋಂಕಿನ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ, ಬೆಂಗಳೂರು
ವಿಭಾಗದ ಮುಖ್ಯ ಉದ್ದೇಶ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೇಯು ರಾಜ್ಯ ಮಟ್ಟದಲ್ಲಿ ತರಬೇತಿ ಮುಂತಾದವುಗಳನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಿಗೆ ಅಂಗ ಸಂಸ್ಥೆಯಾಗಿ ಕೆಲಸ ಮಾಡುವುದು. ಈ ಸಂಸ್ಥೆಯು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದಂತೆ ತರಬೇತಿಗಳನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ. ತರಬೇತಿಗಳನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ 19 ಜಿಲ್ಲಾ ತರಬೇತಿ ಕೇಂದ್ರಗಳು, 4 ಆರೋಗ್ಯ ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಮತ್ತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆಗಳಲ್ಲಿ ತರಬೇತಿಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕೈಗೊಳ್ಳಲಾಗುತ್ತದೆ.
ಮಾಹಿತಿ ಶಿಕ್ಷಣ ಮತ್ತು ಸಂವಹನ: ಆರೋಗ್ಯ ಸೇವೆಗಳಿಗೆ ಬೇಡಿಕೆ ಹಾಗೂ ಜನರ ಆರೋಗ್ಯ ಸಂಬಂಧಿ ವರ್ತನಾ ಬದಲಾವಣೆಗೆ ಮಾಹಿತಿ ಶಿಕ್ಷಣ ಹಾಗೂ ಸಂವಹನವನ್ನು ಚುರುಕುಗೊಳಿಸಲಾಗಿದೆ. ಲಭ್ಯವಿರುವಂತಹ ಎಲ್ಲಾ ಮಾಧ್ಯಮಗಳ ಮೂಲಕ ಅರಿವು ಮೂಡಿಸುವಂತಹ ಪ್ರಯತ್ನವನ್ನು ಮಾಡಲಾಗುತ್ತಿದೆ.
ದೂರದರ್ಶನ, ಆಕಾಶವಾಣಿ, ಪತ್ರಿಕಾ ಮಾಧ್ಯಮ ಇಂತಹವುಗಳ ಮೂಲಕ ವೈವಿಧ್ಯಮಯವಾದಂತಹ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜನರಿಗೆ ಇರುವಂತಹ ಅಪನಂಬಿಕೆ, ತಪ್ಪು ತಿಳುವಳಿಕೆಗಳನ್ನು ಬಗೆಹರಿಸಿ ಸರಿಯಾದ ಮಾಹಿತಿ ನೀಡುವ ಕೆಲಸವನ್ನು ಕ್ಷೇತ್ರ ಸಿಬ್ಬಂದಿಗಳಾದ ಆರೋಗ್ಯ ಸಹಾಯಕರು, ಆಶಾ ಸ್ವಯಂ ಸೇವಕರು, ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಾರೆ. ಕಾಲಕಾಲಕ್ಕೆ ಇಲಾಖೆಯ ಕಾರ್ಯಕ್ರಮಗಳು, ಸೇವೆಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಇಲಾಖೆಯಿಂದ ಫ್ಲಿಪ್ ಪುಸ್ತಕಗಳು, ಕೈಪಿಡಿಗಳನ್ನು ತಯಾರಿಸಿ ಈ ಕಾರ್ಯಕರ್ತರಿಗೆ ನೀಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ಸಾಕಷ್ಟು ಜನ ಅನಕ್ಷರಸ್ತರಿದ್ದಾರೆ. ಇಂತಹವರನ್ನು ತಲುಪುವುದಕ್ಕೆ ಜಾನಪದ ಮಾಧ್ಯಮವನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಪ್ರಚಾರ ಫಲಕ, ವಸ್ತು ಪ್ರದರ್ಶನ, ಭಿತ್ತಿಪತ್ರಗಳ ಪ್ರದರ್ಶಮ, ಪತ್ರಿಕಾ ಜಾಹೀರಾತು - ಪ್ರಕಟಣೆ, ಗೋಡೆ ಬರಹ, ಚಲನಚಿತ್ರ ಪ್ರದರ್ಶನ ವಿವಿಧ ಗುಂಪುಗಳಿಗೆ ಸೆನ್ಸಿಟೈಸೇಷನ್ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಆರೋಗ್ಯ ಮತ್ತು ಪೌಷ್ಠಿಕ ದಿನಾಚರಣೆಗಳು, ಸಮುದಾಯ ಆರೋಗ್ಯ ದಿನಗಳು, ಇಲಾಖೆ ಹಾಗೂ ಜನಸಮುದಾಯದ ನಡುವೆ ಸಂವಾದ ವೇದಿಕೆಗಳಾಗಿವೆ.
ಉಚಿತ ಔಷಧಿಗಳ ಲಭ್ಯತೆ: ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಔಷಧಿಗಳ ಲಭ್ಯತೆ ರಾಜ್ಯದ ಧ್ಯೇಯವಾಗಿರುತ್ತದೆ. ಸರ್ಕಾರಿ ಆರೋಗ್ಯ ಸೇವೆಯನ್ನು ಪಡೆಯಲಿಚ್ಛಿಸುವ ಎಲ್ಲಾ ನಾಗರೀಕರಿಗೆ ಈ ಸೇವೆಯನ್ನು ನೀಡಲಾಗುತ್ತಿದೆ.
ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆ : ಶಿಶುವಿನ ಅಂಗವಿಕಲತೆಯನ್ನು ಪತ್ತೆ ಹಚ್ಚುವ ಸಲುವಾಗಿ ಉಪಯೋಗವಾಗುತ್ತಿದ್ದ ತಂತ್ರಜ್ಞಾನವು ಹೆಣ್ಣು-ಗಂಡಿನ ಲಿಂಗ ನಿರ್ಧಾರ ಮಾಡುವಲ್ಲಿ ದುರುಪಯೋಗ ಮಾಡಲಾಗುತ್ತಿದೆ. ಇದರಿಂದ ಲಿಂಗಾನುಪಾತದಲ್ಲಿ ವ್ಯತ್ಯಾಸ್ವಾಗುತ್ತಿದ್ದು ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಆತಂಕಕಾರಿ ಬೆಳವಣಿಗೆಯನ್ನು ಮನಗಂಡು 2003 ರಲ್ಲಿ ಗರ್ಭಪೂರ್ವ ಪ್ರಸವಪೂರ್ವ ಲಿಂಗ ಪತ್ತೆತಡೆ ಕಾಯ್ದೆ ಜಾರಿಗೊಳಿಸಲಾಗಿದೆ. ಇದರ ಮುಖ್ಯ ಉದ್ದೇಶವು ತಾಂತ್ರಿಕತೆಯನ್ನು ಲಿಂಗ ಪತ್ತೆಗೆ ನಿಷೇಧಿಸುವುದಾಗಿದೆ. ಈ ಕಾಯ್ದೆಯಡಿಯಲ್ಲಿ ಲಿಂಗ ಪತ್ತೆ ಕೇಂದ್ರಗಳ ನೋಂದಾವಣಿ, ನಿಷೇಧ, ದಾಖಲೆಗಳು, ದಾಳಿ ಮತ್ತು ಮುಟ್ಟಗೋಲುಗಳ ಬಗ್ಗೆ ವಿವರಗಳಿವೆ. ಈ ಕಾಯ್ದೆಯ ಉಲ್ಲಂಘನೆಯ Cognizable Non-bailable, Non-compoundable. Offence ಆಗಿರುತ್ತದೆ. ಸದರಿ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಕ್ಷಮ ಪ್ರಾಧಿಕಾರಗಳನ್ನು ಹಾಗೂ ಸಲಹಾ ಮಂಡಳಿಗಳನ್ನು ರಚಿಸಲಾಗಿದೆ.
ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರ ; ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರವು ಸ್ವಾಯುತ್ತ ಮತ್ತು ಸ್ವತಂತ್ರ ಸಂಸ್ಥೆಯಾಗಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳನ್ನು ಉತ್ತಮಗೊಳಿಸಲು ತಾಂತ್ರಿಕ ಅಂಶಗಳನ್ನು ಶಿಫಾರಸ್ಸು ಮಾಡುತ್ತದೆ. ಆರೋಗ್ಯ ಸುಧಾರಣೆಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ, ಸಮಸ್ಯೆಗಳನ್ನು ಮತ್ತು ನ್ಯೂನತೆಗಳನ್ನು ಗುರುತಿಸಿ ಪರಿಹರಿಸುವ ಪ್ರಯತ್ನ ಮಾಡುತ್ತಿದೆ ಹಾಗೂ ಕಾರ್ಯನಿರ್ವಾಹಣ ಮಾರ್ಗದರ್ಶನಗಳನ್ನು ರೂಪಿಸುತ್ತಿವೆ. ಅಲ್ಲದೆ ರಾಜ್ಯ ಮತ್ತು ಜಿಲ್ಲಾ ಆರೋಗ್ಯ ಆಡಳಿತಗಳಿಗೆ ತಾಂತ್ರಿಕ ಬೆಂಬಲವನ್ನು ಒದಗಿಸುವುದಲ್ಲದೆ, ವಿವಿಧ ಆರೋಗ್ಯ ಅಂಶಗಳ ತ್ವರಿತ ಸಾಂಧರ್ಭಿಕ ವಿಶ್ಲೇಷಣೆ ನಡೆಸುತ್ತದೆ.
ಆಯುಷ್ ಸೇವೆಗಳು : ಆಯುಷ್ ಇಲಾಖೆಗೆ ಸೇರಿದಂತೆ 103 ಸುಸಜ್ಜಿತ ಆಯುಷ್ ಆಸ್ಪತ್ರೆಗಳು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ: ಆಯುರ್ವೇದದ 76 ಆಸ್ಪತ್ರೆಗಳು ಯುನಾನಿಯ 11 ಆಸ್ಪತ್ರೆಗಳು, ಹೋಮಿಯೋಪತಿಯ 10 ಆಸ್ಪತ್ರೆಗಳು, ಯೋಗಪದ್ಧತಿಯ 3 ಆಸ್ಪತ್ರೆಗಳು, 3 ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳು ದಿನದ 24 ಘಂಟೆಗಳ ಕಾಲವೂ ಜನಸಾಮಾನ್ಯರಿಗೆ ಉತ್ತಮವಾದ ಸೇವೆಯನ್ನು ಉಚಿತವಾಗಿ ನೀಡುತ್ತಿವೆ. ಆಯುಷ್ ಪದ್ಧತಿಯ ಚಿಕಿತ್ಸಾಲಯಗಳು ಗ್ರಾಮಾಂತರ ಪ್ರದೇಶಗಳಲ್ಲಿನ ಜನರ ಸೇವೆಗಾಗಿ ಸ್ಥಾಪಿಸಲಾಗಿದೆ. 561 ಆಯುರ್ವೇದದ ಚಿಕಿತ್ಸಾಲಯಗಳನ್ನು 50 ಯುನಾನಿಯ ಚಿಕಿತ್ಸಾಲಯಗಳನ್ನು 43 ಹೋಮಿಯೋಪತಿಯ ಚಿಕಿತ್ಸಾಲಯಗಳನ್ನು, 05 ಪ್ರಕೃತಿ ಚಿಕಿತ್ಸಾಲಯಗಳನ್ನು ಹೊಂದಿದೆ. ಜಿಲ್ಲಾ ಮಟ್ಟದ ಆಯುಷ್ ಅಧಿಕಾರಿಗಳ ಕಾರ್ಯಾಡಳಿತಕ್ಕ ಒಳಪಟ್ಟಿರುವ ಈ ಎಲ್ಲಾ ಚಿಕಿತ್ಸಾಲಯಗಳಲ್ಲಿಯೂ ತಜ್ಞವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಅವರ ಕಾರ್ಯದಕ್ಷತೆಯನ್ನು ಉತ್ತಮ ಪಡಿಸುವ ದೃಷ್ಠಿಯಿಂದ ಕಾಲಕಾಲಕ್ಕೆ ಅವರಿಗೆ ಔಷಧೀದ್ರವ್ಯಗಳ, ಪಂಚಕರ್ಮ ಚಿಕಿತ್ಸಾ ವಿಧಾನಗಳ, ಕ್ಷಾರಸೂತ್ರ ಪ್ರಯೋಗಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಅಲ್ಲದೆ, ಗ್ರಾಮಾಂತರ ಜನರ ಚಿಕಿತ್ಸಾ ಸೌಕರ್ಯಕ್ಕಾಗಿ ಈ ಚಿಕಿತ್ಸಾಲಯಗಳ ಮೂಲ ಸೌಕರ್ಯಗಳನ್ನೂ ಉತ್ತಮ ಪಡಿಸಲಾಗಿದ್ದು ವರಷದಲ್ಲಿ ಸರಾಸರಿ 45 ರಿಂದ 50 ಲಕ್ಷ ಜನರು ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಂದ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಆಯುಷ್ ಪುಷ್ಠಿ : ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆ ಕಾಣುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಲಿದೆ. ಸನ್ಮಾನ್ಯ ಪ್ರಧಾನಮಂತ್ರಿಗಳು ಈ ನಿಟ್ಟಿನಲ್ಲಿ ಈ ಅಪೌಷ್ಠಿಕತೆಯ ನಿವಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳಿಂದ ಹಮ್ಮಿಕೊಳ್ಳಲು ನಿರ್ದೇಶಿಸಿದ್ದಾರೆ. ಈ ಅಪೌಷ್ಠಿಕತೆಯ ಮಕ್ಕಳಲ್ಲಿ ಕೇವಲ ದೈಹಿಕವಾಗಿ ಹಿನ್ನೆಡೆಯಷ್ಟೆ ಅಲ್ಲದೇ ಮಾನಸಿಕವಾಗಿಯೂ ವಿಕಸನವನ್ನು ಕುಂಠಿತಗೊಳಿಸುತ್ತದೆ. ಈ ಅಪೌಷ್ಠಿಕತೆಯಿಂದಾಗಿ ಹಲವಾರು ವಿಟಮಿನ್ ಕಾಯಿಲೆಗಳು ಕಾಣುವುದರೊಂದಿಗೆ ಹಲವಾರು ರೋಗ ನಿರೋಧಕ ಶಕ್ತಿಹೀನ ಕಾಯಿಲೆಗಳು ಕಾಣುವುದುಂಟು. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿ ಕರ್ನಾಟಕ ರಾಜ್ಯದ ಆಯುಷ್ ಇಲಾಖೆಯು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಯುರ್ವೇದದ ಗಿಡಮೂಲಿಕೆಗಳಿಂದ ತಯಾರಿಸಿದ “ಆಯುಷ್ ಪುಷ್ಠಿ” ಎಂಬ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.
ಇತರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು
ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮ
ಆಯೋಡಿನ್ ಕೊರತೆ ರೋಗಗಳ ನಿಯಂತ್ರಣ
ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮ
ತೀವ್ರ ಶ್ವಾಸಕೋಶ ರೋಗಗಳ ನಿಯಂತ್ರಣ ಕಾರ್ಯಕ್ರಮ
ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮ
ಹದಿಹರೆಯದವರ ಸಂತಾನೋತ್ಪತ್ತಿ ಹಾಗೂ ಲೈಂಗಿಕ ಆರೋಗ್ಯ ಕಾರ್ಯಕ್ರಮ
ಮಾನಸಿಕ ಆರೋಗ್ಯ ಕಾರ್ಯಕ್ರಮ
ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ
ಅಂಧತ್ವ ನಿಯಂತ್ರಣ ಕಾರ್ಯಕ್ರಮ
ಮಧುಮೇಹ ಕ್ಯಾನ್ಸರ್, ರಕ್ತದೊತ್ತಡ ನಿಯಂತ್ರಣ ಕಾರ್ಯಕ್ರಮ
ಪ್ಯಾಲಿಯೇಟಿವ್ ಕೇರ್ ಕಾರ್ಯಕ್ರಮ
ಫ್ಲೋರೋಸಿಸ್ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯಕ್ರಮ
ರಕ್ತ ಸುರಕ್ಷತಾ ಕಾರ್ಯಕ್ರಮ - ಬ್ಲಡ್ ಬ್ಯಾಂಕ್
ಈ ಎಲ್ಲಾ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಅನುಷ್ಠಾನಗೊಂಡಿದೆ.
ಕೊನೆಯ ಮಾರ್ಪಾಟು : 6/22/2020
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...
ಎಲ್ಲ ವರ್ಗದ ಹೆಣ್ಣು ಮಕ್ಕಳು ಹೆಚ್ಚು ಅಸಾಹಾಯಕ.ಮಕ್ಕಳ ಶೋಷಣ...
ಅಶಿಸ್ತಿನಿಂದ ವರ್ತಿಸುವ ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬ...
ಜಾರ್ಜ್ ಬರ್ನಾಡ್ ಷಾ ರವರ ಹೆಸರಾಂತ ಹೇಳಿಕೆಯನ್ನು ನೀವು ಕೇ...