ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪ್ರಥಮ ಚಿಕಿತ್ಸೆ

ಪ್ರಥಮ ಚಿಕಿತ್ಸೆ ಎಂದರೆ, ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂಬುದಾಗಿ ವ್ಯಾಖ್ಯಾನಿಸಬಹುದು.

ನಿತ್ಯ ಜೀವನದಲ್ಲಿ  ಸ್ವತಃ ನಮಗೆ ಅಥವಾ ಇನ್ನೊಬ್ಬರಿಗೆ, ನಮ್ಮ ಮನೆಯಲ್ಲಿ ಅಥವಾ ಹೊರಗಡೆ, ಸಣ್ಣ-ಪುಟ್ಟ ನೋವು, ಹೊಡೆತ, ಜಖಂ, ಅವಘಡಗಳು ಆಗುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಈ ಅವಘಡಗಳು ಸಣ್ಣ ಪುಟ್ಟ ಗಾಯಗಳ ರೂಪದಲ್ಲಿ  ಇರಬಹುದು, ಅಥವಾ ದೊಡ್ಡ ರೀತಿಯ ಜಖಂ, ಸುಟ್ಟ ಗಾಯ, ಬಿಸಿ ನೀರು, ಬಿಸಿ ಗಾಳಿ, ವಿದ್ಯುತ್‌ ಅಥವಾ ರಾಸಾಯನಿಕಗಳು, ಮುರಿತಗಳಿಂದ ಆಗುವ ಗಾಯಗಳು, ಪ್ರಾಣಿಗಳ ಇರಿತ, ಕಡಿತ ಅಥವಾ ವಿಷದಿಂದಲೇ ಆಗಿದ್ದಿರಬಹುದು. ಈ ಎಲ್ಲಾ ಅವಘಡಗಳ ಸಂದರ್ಭಗಳಲ್ಲಿ  ಆಗಬಹುದಾದ ಶಾಶ್ವತ ವೈಕಲ್ಯಗಳು ಅಥವಾ ಮರಣದಂತಹ ಪರಿಣಾಮಗಳನ್ನು ತಡೆಯಲು, ಸಂದರ್ಭಗಳನ್ನು ತಕ್ಷಣವೇ ಸರಿಯಾಗಿ ಹಾಗೂ ಸುಸೂತ್ರವಾಗಿ ನಿಭಾಯಿಸುವುದು ಅತ್ಯವಶ್ಯಕ. ಹೆಚ್ಚಾಗಿ ಮರಣಾಂತಿಕವಾದ ಈ ಎಲ್ಲಾ ಸಂದರ್ಭಗಳಲ್ಲಿ, ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವುದು ಸ್ವಲ್ಪ  ಸಮಯ ತೆಗೆದುಕೊಳ್ಳುತ್ತದೆ. ರೋಗಿ ಘಟನಾ ಸ್ಥಳದಿಂದ ಆಸ್ಪತ್ರೆಗೆ ವರ್ಗಾವಣೆಗೊಳ್ಳುವ ಮಧ್ಯದ ಕಾಲಾವ—ಯಲ್ಲಿ  ಗಾಯಾಳುವಿಗೆ ಒದಗಿಸಬಹುದಾದ ತುರ್ತು ಸೇವೆಯ ಬಗ್ಗೆ, ಅಂದರೆ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರೂ ತರಬೇತಿ ಪಡೆಯಬೇಕಾದುದು, ಅಥವಾ ಎಲ್ಲರಿಗೂ ಅದರ ಬಗ್ಗೆ ಅರಿವಿರಬೇಕಾದುದು ಅತ್ಯವಶ್ಯಕ.

ಪ್ರಥಮ ಚಿಕಿತ್ಸೆ  ಎಂದರೆ,  ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂಬುದಾಗಿ ವ್ಯಾಖ್ಯಾನಿಸಬಹುದು. ಸಾಮಾನ್ಯವಾಗಿ, ಈ ಆರೈಕೆಯನ್ನು ತಜ್ಞರಲ್ಲದ, ಆದರೆ ತರಬೇತಾದ ವೃತ್ತಿಪರ ವ್ಯಕ್ತಿಗಳು ರೋಗಿಗೆ ಅಥವಾ ಗಾಯಾಳಿಗೆ, ಸರಿಯಾದ ವೈದ್ಯಕೀಯ ಚಿಕಿತ್ಸೆ  ದೊರೆಯುವವರೆಗೆ ಒದಗಿಸುತ್ತಾರೆ. ಪ್ರಥಮ ಚಿಕಿತ್ಸೆ  ಎಂಬುದು ಕೆಲವು ಸಂದರ್ಭಗಳಲ್ಲಿ  ಸರಳ ಚಿಕಿತ್ಸೆಗಳ ಸರಣಿಯಾಗಿದ್ದರೆ, ಇನ್ನು ಕೆಲವು ಸಂದರ್ಭಗಳಲ್ಲಿ  ಮಹತ್ವದ ಜೀವರಕ್ಷಕ ತಂತ್ರವಾಗಿರುತ್ತದೆ. ತರಬೇತಾದ ಒಬ್ಬ ವ್ಯಕ್ತಿಯು, ಲಭ್ಯವಿರುವ ಕೆಲವು ಉಪಕರಣಗಳ ಮೂಲಕ ಈ ಚಿಕಿತ್ಸೆಯನ್ನು ರೋಗಿ ಅಥವಾ ಗಾಯಾಳುವಿಗೆ ಒದಗಿಸಿ, ಆ ಅಮೂಲ್ಯ ಜೀವವನ್ನು ರಕ್ಷಿಸಬಲ್ಲ.


ಪ್ರಥಮ ಚಿಕಿತ್ಸೆಯ ವಿಧಾನವು 1859ರಲ್ಲಿ  ಆರಂಭವಾಯಿತು. ಯುದ್ಧ ಭೂಮಿಯ ಭಯಾನಕತೆಯನ್ನು ಕಂಡು ಹೆನ್ರಿ ಡ್ಯುನಾಂಟ್‌ ಎಂಬವರು ರೆಡ್‌ಕ್ರಾಸ್‌ ಸಂಸ್ಥೆಯನ್ನು ಆರಂಭಿಸಿದಾಗ, ಪ್ರಥಮ ಚಿಕಿತ್ಸೆಯ ಪ್ರಕ್ರಿಯೆಯೂ ಸಹ ಅದರೊಂದಿಗೇ ಆರಂಭಗೊಂಡಿತು. ವೈದ್ಯಕೀಯ ಅರಿವಿನ ಅಭಿವೃದ್ಧಿ ಆದಂತೆಲ್ಲಾ, ಜಗತ್ತಿನ ಅನೇಕ ಕಡೆಗಳಲ್ಲಿ  ಪ್ರಥಮ ಚಿಕಿತ್ಸೆಯ ತರಬೇತಿಯು ದೊರಕುವಂತಾಯಿತು.
ಪ್ರಥಮ ಚಿಕಿತ್ಸೆ ಯ ಮೂರು  ಪ್ರಮುಖ ಉದ್ಧೇಶಗಳು ಅಂದರೆ:

 • ಜೀವವನ್ನು ಉಳಿಸುವುದು ಹಾಗೂ ಕಾಪಾಡುವುದು.
 • ಅವಘಡಕ್ಕೆ ಕಾರಣವಾಗಿರುವ ಪರಿಸ್ಥಿತಿಯಿಂದ ಗಾಯಾಳನ್ನು ಸಂರಕ್ಷಿಸುವುದು ಅಥವಾ ದೂರವಿರಿಸುವುದು, ಆಗಿರುವ ಅವಘಡವು ತೀವ್ರವಾಗದಂತೆ  ತಡೆಯುವುದು, ಅಂದರೆ ಉದಾಹರಣೆಗೆ ಗಾಯವಾಗಿ ತೀವ್ರ ರಕ್ತ ಸ್ರಾವವಾಗುತ್ತಿದ್ದರೆ, ರಕ್ತಸ್ರಾವವನ್ನು ತಡೆಯುವ ಚಿಕಿತ್ಸೆ ನೀಡುವುದು.
 • ಉಪಶಮನ ಕಾರ್ಯ ಕೈಗೊಳ್ಳುವುದು, ಅಂದರೆ ಗಾಯಗಳಿಗೆ ಬ್ಯಾಂಡೇಜ್‌ ಸುತ್ತುವುದು, ಮೂಳೆ ಮುರಿತವಾಗಿದ್ದರೆ ಆಧಾರವಾಗಿ ಅದಕ್ಕೆ ದಬ್ಬೆ ಕಟ್ಟುವುದು... ಇತ್ಯಾದಿ.

ಪ್ರಥಮ ಚಿಕಿತ್ಸೆಯ ಪ್ರಮುಖ ಕೌಶಲ್ಯಗಳಿಗೆ ಎಂದು ಹೆಸರು. ಇವು ಜೀವ ರಕ್ಷಕ ತಂತ್ರಗಳಾಗಿದ್ದು, ವ್ಯಕ್ತಿಗೆ ಆರೈಕೆಯನ್ನು ನೀಡುವ ಮೊದಲು, ಕಡಿಮೆ ಗಂಭೀರ ಗಾಯಗಳಾಗಿರುವ ವ್ಯಕ್ತಿಯನ್ನು ಜೀವ ಸಹಿತ ಕಾಪಾಡುವುದು ಇದರ ಉದ್ಧೇಶ. ವಿಶೇಷವಾಗಿ, ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ನಾವು ಹೀಗೆ ಮಾಡಬಹುದು:

 • ನಾಡಿಬಡಿತವನ್ನು ಪರೀಕ್ಷಿಸಿ, ಒಂದು ವೇಳೆ ರಕ್ತ ಪರಿಚಲನೆ ನಿಂತು ಹೋಗಿದ್ದರೆ, ಹೃದಯದಿಂದ ರಕ್ತವು ಹೊರಹೋಗಲು ಅನುಕೂಲವಾಗುವಂತೆ, ಕೂಡಲೇ ಎದೆಯನ್ನು ದಬ್ಬಿ, ಒಂದು ವೇಳೆ ಆಘಾತಕ್ಕೊಳಗಾದ ವ್ಯಕ್ತಿಯು ಉಸಿರಾಡುತ್ತಿಲ್ಲವಾದರೆ, ತಕ್ಷಣವೇ ಎದೆಯನ್ನು ದಬ್ಬಲು ಆರಂಭಿಸಬೇಕು.
 • ಶ್ವಾಸನಾಳವನ್ನು ತೆರವುಗೊಳಿಸಿ, ನಾಲಗೆ, ರಕ್ತಸ್ರಾವ, ಲಾಲಾರಸ... ಇತ್ಯಾದಿಗಳಿಂದಾಗಿ ಶ್ವಾಸನಾಳದಲ್ಲಿ  ಅಡಚಣೆ ಉಂಟಾಗಿ, ಉಸಿರುಗಟ್ಟುವುದನ್ನು ತಪ್ಪಿಸಿ. ಬಿದ್ದು ಏಟಾಗಿದ್ದರೆ ಅಥವಾ ರಸ್ತೆ ಅಪಘಾತವಾಗಿದ್ದರೆ, ವ್ಯಕ್ತಿಯ ಕತ್ತಿನ ಮೂಳೆ ಮುರಿದಿಲ್ಲ  ಎಂಬುದನ್ನು ಖಚಿತಪಡಿಸಿಕೊಂಡು, ಶ್ವಾಸನಾಳವನ್ನು ತೆರವುಗೊಳಿಸಲು, ಆತನ ದವಡೆಯನ್ನು ಮೇಲಕ್ಕೆ ಎಳೆಯಿರಿ.
 • ಸಾಕಷ್ಟು  ಪ್ರಮಾಣದ ಉಸಿರಾಟ ಇದೆಯೇ ಗಮನಿಸಿ. ಅಗತ್ಯವಿದ್ದರೆ,  ಸಂರಕ್ಷಕ ಉಸಿರಾಟವನ್ನು ಒದಗಿಸಿ.


ಅದೇ ಸಮಯದಲ್ಲಿ , ವೈದ್ಯಕೀಯ ಸೇವೆಯನ್ನು ಪಡೆಯಲು ಹತ್ತಿರದ ಆಸ್ಪತ್ರೆಯಿಂದ ಅಂಬ್ಯುಲೆನ್ಸ್‌ ತರಿಸಲು, ಫೋನ್‌ ಮಾಡುವಂತೆ ಯಾರಲ್ಲಾದರೂ ಹೇಳಿ. ಆಘಾತಗೊಂಡ ವ್ಯಕ್ತಿಯ ನಾಡಿಬಡಿತ, ಉಸಿರಾಟ ಹಾಗೂ ಪ್ರತಿಕ್ರಿಯೆಗಳು ಮತ್ತೆ ಆರಂಭಗೊಂಡರೆ, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ.

ವಿಶೇಷ ಸಂದರ್ಭಗಳಲ್ಲಿ  ಪ್ರಥಮ


ಚಿಕಿತ್ಸೆ ಗಾಯಗಳು


ಗಾಯಗಳಾದಾಗ ಒತ್ತಡ ಕ್ರಮದ ಮೂಲಕ ರಕ್ತ ಸ್ರಾವವನ್ನು ತಡೆಯಿರಿ. ಆಮೇಲೆಯೂ ರಕ್ತ ಸ್ರಾವ ನಿಲ್ಲದಿದ್ದರೆ, ಗಾಯವನ್ನು ಹೃದಯದ ಮಟ್ಟಕ್ಕಿಂತಲೂ ಎತ್ತರಿಸಿ. ಒಂದು ಸಲ ರಕ್ತ ಸ್ರಾವ ನಿಂತ ಬಳಿಕ, ಗಾಯವನ್ನು ಸೋಪು ಹಾಗೂ ನೀರಿನಲ್ಲಿ  ಅಥವಾ ಬರೀ ನೀರಿನಲ್ಲಿ  ಹದವಾಗಿ ತೊಳೆಯಿರಿ. ಈ ಸಂದರ್ಭದಲ್ಲಿ  ಗಾಯವು ರೋಗಾಣು ಹಾಗೂ ಕೊಳೆಯಿಂದ ಮುಕ್ತವಾಗುವುದು ಆವಶ್ಯಕ. ಶುದ್ಧವಾದ ಬಟ್ಟೆ  ಅಥವಾ ಬ್ಯಾಂಡೇಜ್‌ನಿಂದ ಗಾಯವನ್ನು  ಸುತ್ತಿ, ಆದರೆ ಬಿಗಿಯಾಗಿ ಸುತ್ತಬೇಡಿ, ಮಧ್ಯೆ ರಕ್ತ ಪರಿಚಲನೆಗೆ ಅವಕಾಶವಿರಲಿ.
ಸುಟ್ಟ ಗಾಯಗಳು


ವ್ಯಕ್ತಿಯ ಮೈಮೇಲೆ ಬೆಂಕಿ ಉರಿಯುತ್ತಿದ್ದರೆ ಅದನ್ನು ನಂದಿಸಿ. ಗಾಯಾಳುವನ್ನು ಬೆಂಕಿಯ ಜ್ವಾಲೆಗಳಿರುವಲ್ಲಿಂದ ಅಥವಾ ಬೆಂಕಿಗೆ ಕಾರಣವಾದ ವಸ್ತು ಅಥವಾ ಸ್ಥಳದಿಂದ ಈಚೆಗೆ ತನ್ನಿ. ಸುಟ್ಟ ಗಾಯದ ಉರಿಯನ್ನು ಶಮನಗೊಳಿಸಲು, ಗಾಯದ ಮೇಲೆ ಯಥೇತ್ಛವಾಗಿ ನೀರನ್ನು ಹಾಯಿಸಿ. ಆದರೆ, ಯಾವತ್ತೂ ಮಂಜುಗಡ್ಡೆಯನ್ನು ಉಪಯೋಗಿಸಬಾರದು. ಆ ಮೇಲೆ ಗಾಯಕ್ಕೆ ಸೋಂಕು ಆಗುವುದನ್ನು ತಡೆಯಲು ಹಾಗೂ ನೋವನ್ನು ತಗ್ಗಿಸಲು, ಸುಟ್ಟ ಗಾಯವನ್ನು ಒಣ ಬಟ್ಟೆಯಿಂದ ಸಡಿಲವಾಗಿ ಸುತ್ತಿ. ಈ ಸಂದರ್ಭದಲ್ಲಿ  ಯಾವುದೇ ರೀತಿಯ ಔಷ—ಗಳು ಅಥವಾ ಮನೆ ಮದ್ದನ್ನು ಸುಟ್ಟ ಗಾಯಕ್ಕೆ ಹಚ್ಚಬಾರದು. ಸುಟ್ಟ ಗಾಯದ ಗುಳ್ಳೆಗಳನ್ನು ಒಡೆಯಬಾರದು. ಸುಟ್ಟ ಗಾಯಗಳು ಬಹಳ ಗಂಭೀರ ರೂಪದಲ್ಲಿದ್ದರೆ, ಗಾಯಾಳಿಗೆ ಉಸಿರಾಡಲು ತೊಂದರೆಯಾಗುತ್ತಿದ್ದರೆ, ಆತ ಅಥವಾ ಆಕೆಯನ್ನು ನೆಲದ ಮೇಲೆ ಮಲಗಿಸಿ. ನಂತರ ವ್ಯಕ್ತಿಗೆ ತುರ್ತಾಗಿ ವೈದ್ಯಕೀಯ ಆರೈಕೆಯನ್ನು ಒದಗಿಸಿ.

ರಾಸಾಯನಿಕಗಳ ಕಾರಣದಿಂದಾಗಿ ಸುಟ್ಟ ಗಾಯಗಳಾಗಿದ್ದರೆ, ಯಥೇತ್ಛವಾಗಿ ನೀರನ್ನು ಹಾಯಿಸಿ, ವ್ಯಕ್ತಿಯ ಮೈ-ಕೈ ಅಥವಾ ಕಣ್ಣಿನಲ್ಲಿರುವ ರಾಸಾಯನಿಕಗಳನ್ನು ನಿವಾರಿಸಿ. ಗಾಯಾಳುವಿನ ಮೈಮೇಲೆ ಇರುವ ರಾಸಾಯನಿಕವಿರುವ ಬಟ್ಟೆಯನ್ನು ತೆಗೆದು ಹಾಕಿ. ರಾಸಾಯನಿಕವು ದೇಹದ ಇತರ ಭಾಗಗಳಿಗೆ ಅಥವಾ ಸ್ವತಃ ನಿಮಗೆ ತಗಲದಂತೆ ಎಚ್ಚರಿಕೆ ವಹಿಸಿ.

ವಿದ್ಯುತ್‌ ಆಘಾತವಾಗಿದ್ದರೆ, ವಿದ್ಯುತ್‌ ಪ್ರವಾಹವು ನಿಂತು ಹೋಗಿರುವುದು ಖಚಿತವಾಗು ವವರೆಗೂ, ಆಘಾತವಾಗಿರುವ ವ್ಯಕ್ತಿಯ ಹತ್ತಿರ ಹೋಗಬಾರದು. ಆಘಾತವಾಗಿರುವ ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ, ಆತನ ಉಸಿರಾಟ ಹಾಗೂ ನಾಡಿಬಡಿತವನ್ನು ಪರೀಕ್ಷಿಸಿ. ಬೇರೆ ಯಾವುದಾದರೂ ಗಾಯಗಳಾಗಿವೆಯೇ ಎಂದು ಪರೀಕ್ಷಿಸಿ. ಆತನ ಬೆನ್ನೆಲುಬಿಗೆ ಏಟಾಗಿರುವ ಸಾಧ್ಯತೆಗಳಿರುವುದರಿಂದ, ವ್ಯಕ್ತಿಯನ್ನು ಅತ್ತಿತ್ತ ಅಲುಗಾಡಿಸದಿರಿ. ವಿದ್ಯುತ್‌ ಆಘಾತದಿಂದ ಆದ ಸುಟ್ಟ ಗಾಯವನ್ನು ಒಣ, ಕ್ರಿಮಿಮುಕ್ತ (ಛry, sಠಿಛಿrಜಿlಛಿ ಛrಛಿssಜಿnಜ) ಬಟ್ಟೆಯಿಂದ ಸುತ್ತಿ. ಗಾಯದ ಮೇಲೆ ಮಂಜುಗಡ್ಡೆ  ಇರಿಸಬೇಡಿ. ವ್ಯಕ್ತಿಗೆ ಥಂಡಿಯಾಗದಂತೆ ನೋಡಿಕೊಳ್ಳಿ. ಆ ವ್ಯಕ್ತಿಯ ಮೈಮೇಲೆ ಒಂದು ಕಡೆ ವಿದ್ಯುತ್‌ ಆಘಾತವಾಗಿರುವ ಹಾಗೂ ಮತ್ತೂಂದು ಕಡೆಯಲ್ಲಿ  ದೇಹದಿಂದ ವಿದ್ಯುತ್‌ ಹೊರಬಂದಿರುವ, ಹೀಗೆ ಎರಡು ಗಾಯಗಳಿರುವ ಸಾಧ್ಯತೆಗಳಿವೆ. ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ.


ಮುರಿತಗಳು


ತೀವ್ರ ಮೂಳೆ ಮುರಿತವಾಗಿರುವ ಸಂದರ್ಭಗಳಲ್ಲಿ , ಅನಗತ್ಯವಾಗಿ ವ್ಯಕ್ತಿಯನ್ನು ಅತ್ತಿತ್ತ ಅಲುಗಾಡಿಸಬಾರದು. ಮುರಿದಿರುವ ಮೂಳೆಯ ಎರಡೂ ಬದಿಗಳಿಗೆ ಮಡಚಿದ ಪತ್ರಿಕೆ, ಕಾರ್ಡ್‌ಬೋರ್ಡ್‌, ಕರವಸ್ತ್ರŒ ಅಥವಾ ಲೋಹದ ತಂತಿಗಳನ್ನು ಉಪಯೋಗಿಸಿಕೊಂಡು ಆಧಾರ ದಬ್ಬೆಯನ್ನು ಕಟ್ಟಿ ಅಥವಾ ದಬ್ಬೆಯು ಹಾನಿಯಾದ ಕೈಯ ಭಾಗಗಳಿಗೆ ಆಧಾರವನ್ನು ನೀಡುವಂತೆ ತ್ರಿಕೋನಾಕೃತಿಯ ಬ್ಯಾಂಡೇಜ್‌ ಅನ್ನು ಕಟ್ಟಿ. ದಬ್ಬೆಯನ್ನು ತೀರಾ ಬಿಗಿಯಾಗಿರದಂತೆ, ಸುರಕ್ಷಿತವಾಗಿ ಕಟ್ಟಿ.

ಸಾಕಷ್ಟು  ವಿಶ್ರಾಂತಿ ತೆಗೆದುಕೊಳ್ಳುವುದು, ಮುರಿದ ಜಾಗದಲ್ಲಿ  ಮಂಜುಗಡ್ಡೆ ಇರಿಸುವುದು ಹಾಗೂ ಆ ಭಾಗವನ್ನು ಎತ್ತರಿಸಿ ಇರಿಸುವುದು, ಇವು ಮೂಳೆ ಮುರಿತವಾದಾಗ ಮಾಡಬಹುದಾದ ಪ್ರಮುಖ ಆರೈಕೆಗಳು. ವ್ಯಕ್ತಿಯನ್ನು ಸಾಧ್ಯವಾದಷ್ಟು  ಆರಾಮದಾಯಕ ಸ್ಥಿತಿಯಲ್ಲಿ ಇರಿಸಿ. ನೋವು ಹಾಗೂ ಬಾವನ್ನು ತಗ್ಗಿಸಲು, ಏಟು ಬಿದ್ದಿರುವ ಜಾಗಕ್ಕೆ ಮಂಜುಗಡ್ಡೆಯನ್ನು ಇರಿಸಬೇಕು. ಏಟಾಗಿರುವ ಭಾಗವನ್ನು ಸಾಧ್ಯವಾದಷ್ಟು  ಅತ್ತಿತ್ತ ಅಲುಗಾಡಿಸದೆ ಇರಬೇಕು, ಆ ಭಾಗದ ಕೆಳಗಡೆ ಆಧಾರಕ್ಕೆ ತಲೆದಿಂಬನ್ನು ಇರಿಸಬಹುದು.


ಉಸಿರುಗಟ್ಟುವಿಕೆ


ವ್ಯಕ್ತಿಯು ತನ್ನ ಎರಡೂ ಅಂಗೈಗಳಿಂದ ಗಂಟಲಿನ ಭಾಗವನ್ನು ಹಿಡಿದುಕೊಂಡಿದ್ದರೆ, ಆ ವ್ಯಕ್ತಿಯು ಉಸಿರುಗಟ್ಟಿರುವುದನ್ನು ಸೂಚಿಸುತ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು. ಇದು ಉಸಿರುಗಟ್ಟಿರುವುದನ್ನು ತೋರಿಸುವ ಒಂದು ಸಾಮಾನ್ಯ ಸನ್ನೆ. ವ್ಯಕ್ತಿಯು ಕೆಮ್ಮುತ್ತಿದ್ದರೆ ಅಥವಾ ಮಾತನಾಡುತ್ತಿದ್ದರೆ, ಆತನನ್ನು ಕೆಮ್ಮುತ್ತಾ ಇರಲು ಉತ್ತೇಜಿಸಿ. ವ್ಯಕ್ತಿ ಕೆಮ್ಮುವುದನ್ನು ನಿಲ್ಲಿಸಿದಾಗ, ಆತನ ಶ್ವಾಸನಾಳದ ಅಡಚಣೆಯನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ನೀವು ಆರಂಭಿಸಬಹುದು. ಇದಕ್ಕೆ   ಏಛಿಜಿಞlಜಿcಜ ಞಚnಛಿuvಛಿr, ಅಥವಾ ಹೊಟ್ಟೆಯನ್ನು ಒಳಕ್ಕೆ ತಳ್ಳುವ ಕಾರ್ಯಾಚರಣೆ ಎಂದು ಹೇಳುತ್ತಾರೆ. ಉಸಿರುಗಟ್ಟಿರುವ, ಪ್ರಜ್ಞಾವಸ್ಥೆಯಲ್ಲಿರುವ, ವಯಸ್ಕ ವ್ಯಕ್ತಿಯ ಹಿಂಭಾಗದಲ್ಲಿ  ನಿಂತು, ಆತನ ಎದೆಯ ಸುತ್ತಲೂ ನಿಮ್ಮ  ಕೈಗಳನ್ನು ಸುತ್ತಿಕೊಳ್ಳಿ. ಒಂದು ಕೈಯನ್ನು ಮುಷ್ಟಿ  ಹಿಡಿಯಿರಿ. ಮುಷ್ಟಿಯನ್ನು ಉಸಿರುಗಟ್ಟಿರುವ ವ್ಯಕ್ತಿಯ ಹೊಟ್ಟೆಯ ಹಿಂಭಾಗದಲ್ಲಿ , ಅಂದರೆ ಹೊಕ್ಕುಳು ಹಾಗೂ ಎದೆಗೂಡಿನ ಮಧ್ಯೆ ಭಾಗದಲ್ಲಿ  ಹಿಡಿಯಿರಿ, ಮತ್ತೂಂದು ಕೈಯನ್ನು ಮುಷ್ಟಿಯ ಮೇಲ್ಭಾಗದಲ್ಲಿ  ಇಟ್ಟು, ಕೂಡಲೇ ವ್ಯಕ್ತಿಯ ಹೊಟ್ಟೆಯನ್ನು  ಮೇಲ್ಮುಖವಾಗಿ ತಳ್ಳಿ. ಶ್ವಾಸನಾಳದಲ್ಲಿ  ಅಡಚಣೆ ಉಂಟು ಮಾಡುತ್ತಿರುವ ವಸ್ತು ಅಥವಾ ಅಂಶವು ತೆರವಾಗುವವರೆಗೆ ಅಥವಾ ವ್ಯಕ್ತಿಯು ಪ್ರಜ್ಞಾಹೀನನಾಗುವವರೆಗೆ ನಿರಂತರವಾಗಿ ಹೀಗೆಯೇ ಮಾಡುತ್ತಿರಬೇಕು. ಇದಕ್ಕೆ ವ್ಯಕ್ತಿಯು ಪ್ರತಿಕ್ರಿಯಿಸದಿದ್ದರೆ, “ಇಅಆs’’ ಅನ್ನು ಅನುಸರಿಸಬೇಕು.


ವಿಷಸೇವನೆ

ವ್ಯಕ್ತಿಯ ಉಸಿರಾಟ ಹಾಗೂ ರಕ್ತ ಪರಿಚಲನೆಗಳು ಸರಿಯಾಗಿವೆ ಎಂದು ಗೊತ್ತುಪಡಿಸಿಕೊಂಡು, ವಿಷ ಸೇವಿಸಿದ ವ್ಯಕ್ತಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕು. ವ್ಯಕ್ತಿ ಸೇವಿಸಿರುವ ವಿಷದ ಪಾತ್ರೆ, ಬಾಟಲಿ ಇತ್ಯಾದಿಗಳೇನಾದರೂ ಸಿಕ್ಕಿದ್ದರೆ, ಅದನ್ನೂ ಸಹ ಜೊತೆಗೇ ಒಯ್ಯಬೇಕು. ವಿಷದ ಹಾವು ಹಾಗೂ ಇನ್ನಿತರ ಪ್ರಾಣಿಗಳು ಕಚ್ಚಿದಾಗಲೂ ಸಹ ಇದೇ ಕ್ರಮವನ್ನು ಅನುಸರಿಸಬೇಕು.


ವ್ಯಕ್ತಿಯನ್ನು ತುರ್ತಾಗಿ ಆಸ್ಪತ್ರೆಗೆ


ಸಾಗಿಸಬೇಕಾದ ಸಂದರ್ಭಗಳು


 • ಗಾಯಾಳು ಪ್ರತಿಕ್ರಿಯಿಸದಿದ್ದರೆ,
 • ತಲೆ, ಕುತ್ತಿಗೆ ಹಾಗೂ ಬೆನ್ನಿನಲ್ಲಿ  ತೀವ್ರ ಗಾಯಗಳಾಗಿದ್ದರೆ,
 • ಉಸಿರಾಡಲು ಕಷ್ಟವಾಗುತ್ತಿದ್ದರೆ,
 • ಗಾಯವಾದ ಭಾಗವನ್ನು ಉಪಯೋಗಿಸಲು ನೋವಾಗುತ್ತಿದ್ದರೆ ಅಥವಾ ಅತ್ತಿತ್ತ ಚಲಿಸುವಾಗ ನೋವು ಇದ್ದರೆ,
 • ತೀವ್ರ ಮೂಳೆ ಮುರಿತದ ರೀತಿಯ ಗಾಯವಾಗಿದ್ದರೆ.

ಪ್ರಥಮ ಚಿಕಿತ್ಸೆಯ ಸರ್ಟಿಫಿಕೇಟ್‌ ಕೋರ್ಸ್‌ನಲ್ಲಿ  ಭಾಗವಹಿಸಿ, ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆಯಬಹುದು. ವಿಧಾನ ಹಾಗೂ ನಿಯಮಾವಳಿಗಳು ಬದಲಾಗುತ್ತಿರುವ ಕಾರಣದಿಂದಾಗಿ, ಪ್ರಸಕ್ತ ಸಂದರ್ಭಗಳಿಗೆ ಅನುಗುಣವಾಗುವಂತೆ, ಕೌಶಲಗಳನ್ನು ಕಾಪಾಡಿಕೊಳ್ಳಲು ಪುನಃಶ್ಚೇತನಾ ಕೋರ್ಸ್‌ಗಳಿಗೆ ಸೇರುವುದು ಅಥವಾ ಮರು ತರಬೇತಿಯನ್ನು ಪಡೆಯುವುದು ಆವಶ್ಯಕ. ರೆಡ್‌ಕ್ರಾಸ್‌ ಹಾಗೂ ಸೈಂಟ್‌ ಜಾನ್ಸ್‌ ಅಂಬುಲೆನ್ಸ್‌  ಸಂಸ್ಥೆಯ ಮೂಲಕ ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆಯಬಹುದು ಅಥವಾ ಕೆಲವು ವಾಣಿಜ್ಯ ಸಂಸ್ಥೆಗಳು ಶುಲ್ಕವನ್ನು ಪಡೆದು, ಜನರಿಗೆ ಈ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡುತ್ತವೆ.

ಪ್ರಥಮ ಚಿಕಿತ್ಸೆ  ಎಂಬ ಈ ಕೌಶಲವು ಯಾರಿಗಾದರೂ, ಎಲ್ಲಿಯಾದರೂ ಅಗತ್ಯ ಬೀಳಬಹುದು. ಸರಿಯಾಗಿ ಉಪಯೋಗಿಸಿಕೊಂಡಲ್ಲಿ , ಇದರಿಂದ ಮನುಷ್ಯ ಜೀವವನ್ನು ರಕ್ಷಿಸಬಹುದು. ಹಾಗಾಗಿ, ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆಯಬೇಕು ಎನ್ನುವುದು ನಮ್ಮ ಸಲಹೆ.

ಮೂಲ : ಅರೋಗ್ಯ ವಾಣಿ

3.01162790698
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top