অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಕ್ತ ಸ್ರಾವ

ಪರಿಚಲನಾ ಅಂಗವ್ಯೂಹದಿಂದ ರಕ್ತ ನಷ್ಟವಾದರೆ ಅದನ್ನು ರಕ್ತಸ್ರಾವ ಎನ್ನುವರು. ರಕ್ತಸ್ರಾವವು ದೇಹದ ಒಳ ಭಾಗದಲ್ಲೂ ಆಗಬಹುದು. ರಕ್ತವು ರಕ್ತನಾಳಗಳಲ್ಲಿಂದ ಒಸರಬಹುದು. ಅದು ದೇಹದ ಒಳಗೆ ಅಥವಾ ಹೊರಗೆ ಆಗಿರಬಹುದು.ಇಲ್ಲವೇ ನೈಸರ್ಗಿಕವಾಗಿ ತೆರೆದಿರುವ ಯೋನಿ, ಬಾಯಿ, ಮೂಗು, ಅಥವಾ ಚರ್ಮಲ್ಲಿರುವ ಬಿರುಕಿನಿಂದ ಹೊರಬರಬಹುದು.

ಗಾಯದಲ್ಲಿ ಅನ್ಯ ವಸ್ತು ಇದ್ದರೆ

ಅನ್ಯ ವಸ್ತುವು, ಉದಾಹರಣೆಗೆ, ಗಾಜಿನ ಚೂರು, ಕಟ್ಟಿಗೆ ಅಥವಾ ಲೋಹವಾಗಿರಬಹುದು. ಗಾಯದ ತುದಿಯಲ್ಲಿ ಬೆರಳಿನಿಂದ, ಇಲ್ಲವೆ ಹೆಬ್ಬೆರಳಿನಿಂದ ಒತ್ತಡಹಾಕಿ. ಆ ಅನ್ಯವಸ್ತುವು ಗಾಯದಲ್ಲಿ ಇರುವ ಸ್ಥಳದಲ್ಲಿಯೇ ಇರಲಿ.

ಅದನ್ನು ಹೊರಗೆ ತೆಗೆಯಬಾರದು. ಗಾಯದ ಅಂಚಿನಲ್ಲಿ ಬಿಗಿಯಾದ ಬ್ಯಾಂಡೇಜು ಹಾಕಿ, ಆಗಲೂ ಅದು ಮೊದಲಿನ ಸ್ಥಳದಲ್ಲೇ ಇರಲಿ.

ಗಾಯವು ಕೈ ಅಥವಾ ಕಾಲಿನಲ್ಲಿ ಆಗಿದ್ದರೆ, ರಕ್ತ ಸ್ರಾವವು ಅಧಿಕವಾಗಿದ್ದರೆ, ಆ ವ್ಯಕ್ತಿಯನ್ನು ಮಲಗಿಸಿ ಕೈ ಅಥವಾ ಕಾಲನ್ನು ಹೃದಯಕ್ಕಿಂತ ಎತ್ತರದಲ್ಲಿ ಇರುವಂತೆ ಎತ್ತಿ ಹಿಡಿಯಬೇಕು.

ಆಂಬುಲೆನ್ಸ್ ವ್ಯವಸ್ಥೆ ಮಾಡಿ ಅಥವ ಅಪಘಾತದ ವ್ಯಕ್ತಿಗೆ ಕಾರಿನ ಸಹಾಯದಿಂದ ಆಸ್ಪತ್ರೆಗೆ ಕರೆದೊಯಿರಿ.

ಕೆಮ್ಮಿನಲ್ಲಿ ರಕ್ತ

ಕೆಮ್ಮಿದಾಗ ರಕ್ತ ಬಂದರೆ(ಚಿಕ್ಕ ಕಪ್ಪಿನಷ್ಟು ಹೆಚ್ಚು) ಸಾಮಾನ್ಯವಾಗಿ ಆಗುವ ಘಟನೆ ಅಲ್ಲ. ಆದರೆ ಇದು ಅದಾಗ ರೋಗಿ ಮತ್ತು ಅವನ ಬಂಧುಗಳಿಗೆ ಗಾಬರಿ ಉಂಟು ಮಾಡುತ್ತದೆ. ಇದು ಶ್ವಾಸ ಕೋಶದ ರೋಗದ ಪರಿಣಾಮ. ಶ್ವಾಸಕೋಶದ ಕ್ಯಾನ್ಸರ್, ತೀವ್ರ ಕ್ಷಯ ಅಥವ ಶ್ವಾಸಕೋಶಕ್ಕೆ ಯಾವುದೆ ಗಾಯದಿಂದ ಆದ ರಂಧ್ರಗಳಿಂದಾಗಿ ಆಗಬಹುದು

ಆರೈಕೆ

  • ಅವನನ್ನು ತಲೆ ಮತ್ತು ಎದೆ ತುಸು ಎತ್ತರದಲ್ಲಿರುವಂತೆ ಗಾಯವಾದ ಕಡೆ ವಾಲಿಸಿ ಮಲಗಿಸಿ.
  • ಬಾಯಿಯಿಂದ ಯಾವುದೆ ಆಹಾರ ಅಥವಾ ದ್ರವ ಸೇವಿಸಲು ಬಿಡಬೇಡಿ

ಶ್ವಾಸಕೋಶದ ರಕ್ತ ಸ್ರಾವವು ಎದೆಗಾದ ಗಾಯದಿಂದ ಆಗಿದ್ದರೆ ಆಗ ದೃಢವಾದ ಪ್ಯಾಡ್ ನಿಂದ ಕೂಡಿದ ಪಾಲಿಥೀನ ನಿಂದ ಆವೃತವಾದ ಬ್ಯಾಂಡೇಜನ್ನು ಗಾಯದ ಮೇಲೆ ಸಾಧ್ಯವಾದಷ್ಟು ಗಟ್ಟಿಯಾಗಿ ಹಾಕಬೇಕು. ಗಾಯವು ಗಾಳಿಯನ್ನು ಹೀರುವುದನ್ನು ಅದು ತಡೆಯಬೇಕು ಗಾಳಿಯು ಎದೆಯ ಕುಹುರದಲ್ಲಿ ಹೋದರೆ ಇತರ ಸಮಸ್ಯೆ ತಲೆ ದೋರಬಹುದು.

ಜಠರ ದಿಂದ ರಕ್ತ ವಾಂತಿ ಯಾಗುವುದು

ಇದು ಸಾಧಾರಣವಾಗಿ ಹೊಟ್ಟೆಯಲ್ಲಿನ ಅಲ್ಸರಿನಿಂದ ಆಗುವುದು. ಹೊಟ್ಟೆಯು ರಕ್ತದಿಂದ ತುಂಬಿದಾಗ , ಅದು ಒಮ್ಮಿಂದೊಮ್ಮೆ ಸಂಕುಚಿತ ಗೊಂಡು ಎಲ್ಲ ರಕ್ತವೂ ಹೊರಬರಬಹುದು. ಅದು ಸುಮಾರು ಒಂದು ಲೀಟರ್ ವರೆಗೆ ಇರಬಹುದು.

ಆರೈಕೆ

  • ರೋಗಿಯನ್ನು ಕಾಲು ಮತ್ತು ಪಾದಗಳು ಮೇಲಿರುವಂತೆ ಮಲಗಿಸಿ
  • ರೋಗಿಯ ದೇಹದ ಉಷ್ಣತೆ ಸಾಧಾರಣ ಮಟ್ಟದಲ್ಲಿರಲಿ. ಅವನಿಗೆ ಹೆಚ್ಚು ಹೊದಿಕೆ ಹೊದಿಸಿ. ದೇಹವನ್ನು ಹೆಚ್ಚು ಬಿಸಿ ಮಾಡಬೇಡಿ. ಅವನು ಬೆಚ್ಚಗೆ ಇರಲಿ. ಅವನು ಚಳಿಯಿಂದ ನಡುಗುವುದು ಬೇಡ.
  • ಯಾವುದೆ ಆಹಾರ ಅಥವಾ ಪಾನೀಯಗಳನ್ನು ಬಾಯಿಯ ಮೂಲಕ ಕೊಡಬೇಡಿ
  • ಬಾಯಿಯನ್ನು ನೀರಿನಿಂದ ತೊಳಸಿ. ಆದರೆ ನೀರನ್ನು ಕುಡಿಯದಂತೆ ಎಚ್ಚರವಹಿಸಿ.
  • ವೈದ್ಯರಿಗೆ ತಕ್ಷಣ ಕರೆ ಮಾಡಿ. ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿ

ಅವನು ಪ್ರಜ್ಞೆ ತಪ್ಪಿದ್ದರೆ, ತಕ್ಷಣ ಅವನನ್ನು ಸುಧಾರಿಸಿಕೊಳ್ಳಲು ಒಂದು ಪಕ್ಕಕ್ಕೆ ತಿರುಗಿಸಿ . ಆಗಲೂ ಕಾಲು ಮತ್ತು ಪಾದಗಳು ಸ್ವಲ್ಪ ಎತ್ತರದಲೇ ಇರಲಿ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate