ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿಷಗಳು

ಯಾವುದೆ ವಸ್ತು ಅಥವ ಅನಿಲವು ಸಾಕಷ್ಟು ಪ್ರಮಾಣದಲ್ಲಿ ದೇಹದಲ್ಲಿ ಸೇರಿದಾಗ ಅದರಿಂದ ಹಾನಿ ಅಥವಾ ಜೀವ ನಷ್ಟವಾದರೆ ಅವುಗಳನ್ನು ವಿಷಗಳು ಎನ್ನುವರು.

ಯಾವುದೆ ವಸ್ತು ಅಥವ ಅನಿಲವು ಸಾಕಷ್ಟು ಪ್ರಮಾಣದಲ್ಲಿ ದೇಹದಲ್ಲಿ ಸೇರಿದಾಗ ಅದರಿಂದ ಹಾನಿ ಅಥವಾ ಜೀವ ನಷ್ಟವಾದರೆ ಅವುಗಳನ್ನು ವಿಷಗಳು ಎನ್ನುವರು. ಅವು ದೇಹವನ್ನು ಮೂರು ವಿಧಾನ ದಲ್ಲಿ ಸೇರಬಹುದು:

 • ಶ್ವಾಸಕೋಶಗಳ ಮೂಲಕ
 • ಚರ್ಮದ ಮೂಲಕ
 • ಬಾಯಿಯ ಮೂಲಕ

ಶ್ವಾಸಕೋಶಗಳ ಮೂಲಕ

ಶ್ವಾಸಕೋಶಗಳ ಮೂಲಕ ವಿಷಸೇರುವುದನ್ನು ಉಸಿರಾಟದ ಅಡಿಯಲ್ಲಿ ಪರಿಶೀಲಿಸಬಹುದು. ಇಲ್ಲಿ ನಾವು ಚರ್ಮದ ಮತ್ತು ಬಾಯಿಯಮೂಲಕ ದೇಹವನ್ನು ಸೇರುವ ವಿಷದ ಬಗ್ಗೆ ಮಾತ್ರ ಪರಿಶೀಲಿಸೋಣ. ಆಕಸ್ಮಿಕವಾಗಿ ಅಥವ ಉದ್ದೇಶ ಪೂರ್ವಕವಾಗಿ ಆಗುವ ವಿಷಸೇವನೆಯು , ಕೆಲವು ಕೃಷಿ ಮತ್ತು ತೋಟಗಾರಿಕೆ ಕೀಟನಾಶಕಗಳೀಂದಲೇ ಅಗಿರುತ್ತವೆ. ಆ ಸಂದರ್ಭದಲ್ಲಿ ನೀಡಬೇಕಾದ ಚಿಕಿತ್ಸೆಯನ್ನು ಸೇರಿಸಲಾಗಿದೆ. ಬಹುತೇಕ ವಿಷಪ್ರಾಶನವು ಆಕಸ್ಮಿಕವಾಗಿರುತ್ತವೆ. ಈ ರೀತಿಯ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ತೆಗೆದು ಕೊಳ್ಳುವುದು ಬಹು ಮುಖ್ಯ.

ಇವುಗಳನ್ನು ಮಾಡಲೇಬೇಡಿ

 • ಎಂದೂ ಮಾತ್ರೆಗಳನ್ನು ಮತ್ತು ಔಷಧಿಗಳನ್ನು ಮಕ್ಕಳಿಗೆ ಸಿಗುವಂತೆ ಇಡಬೇಡಿ. ಅವುಗಳನ್ನು ಬೀಗ ಹಾಕಿದ ಕ್ಯಾಬಿನೆಟ್ ನಲ್ಲಿ ಮಕ್ಕಳ ಕೈಗೆ ಎಟುಕದಂತೆ ಇರಿಸಿ.( ವಾರ್ಡರೋಬ್ ನ ಮೇಲಿನ ಖಾನೆಯಲ್ಲಿ)
 • ಯಾವತ್ತೂ ಮಾತ್ರೆಗಳನ್ನು ಅಥವ ಔಷಧಿಗಳನ್ನು ಹೆಚ್ಚು ಕಾಲ ಸಂಗ್ರಹಿಸಿ ಇಡಬೇಡಿ . ಅದರಿಂದ ಅವು ಹಾಳಾಗುತ್ತವೆ. ಚಿಕೆತ್ಸೆ ಮುಗಿದ ಮೇಲೂ ಹೆಚ್ಚಿದ್ದ ಔಷಧಿಯನ್ನು ಪೂರೈಕೆದಾರರಿಗೆ ಅಥವಾ ವೈದ್ಯರಿಗೆ ಹಿಂದಿರುಗಿಸಿ. ಇಲ್ಲವಾದರೆ ಕಕ್ಕಸಿನಲ್ಲಿ ಹಾಕಿ ಫ್ಲಷ್ ಮಾಡಿ.
 • ಕತ್ತಲಲ್ಲಿ ಔಷಧ ತೆಗೆದು ಕೊಳ್ಳಬೇಡಿ. ಔಷಧ ತೆಗೆದು ಕೊಳ್ಳುವಾಗ ಇಲ್ಲವೆ ಕೊಡುವಾಗ ತಪ್ಪದೆ ಲೇಬಲ್ ಮೇಲಿನ ಸೂಚನೆ ನೋಡಿ.
 • ಕತ್ತಲಲ್ಲಿ ಔಷಧ ತೆಗೆದು ಕೊಳ್ಳಬೇಡಿ. ಔಷಧ ತೆಗೆದು ಕೊಳ್ಳುವಾಗ ಇಲ್ಲವೆ ಕೊಡುವಾಗ ತಪ್ಪದೆ ಲೇಬಲ್ ಮೇಲಿನ ಸೂಚನೆ ನೋಡಿ.
 • ಅಪಾಯಕಾರಿ ದ್ರವಗಳನ್ನು ತಂಪು ಪಾನೀಯದ ಬಾಟಲಿಯಲ್ಲಿ ಹಾಕಬೇಡಿ. ಮಕ್ಕಳು ಬಾಟಲಿ ನೋಡಿ ಪಾನೀಯ ಎಂದು ಭಾವಿಸಿ ಕುಡಿಯಬಹುದು.
 • ಮನೆ ಶುಚಿಮಾಡುವ ದ್ರವ ಮತ್ತು ಡಿಟರ್ಜೆಂಟ್ ಗಳನ್ನು ಮಕ್ಕಳಿಗೆ ಸಿಗುವಹಾಗೆ ಇಡಬೇಡಿ (ಅಂದ ಹಾಗೆ ಬ್ಲೀಚಿಂಗ ಪೌಡರ್ ಮತ್ತು ಟಾಯಿಲೆಟ್ ಕ್ಲೀನರ್ ಗಳನ್ನು ಸೇರಿಸಿ ಬಳಸಬೇಡಿ . ಅವು ವಿಷಾನಿಲವನ್ನು ಹೊರ ಸೂಸಬಹುದು)
 • ಬಾಧಿತನಿಗೆ ಹೆಚ್ಚು ನೀರು ಕೊಡಬೇಡಿ ಅವನು ವಾಂತಿ ಮಾಡಬಾರದು
 • ಬಾಧಿತನಿಗೆ ಬಾಯಿ ಮೂಲಕ ಏನ್ನನು ನೀಡದಿರಿ (ಬಾಯಿ ಸುಟ್ಟು ಹೋದಲ್ಲಿ ಮತ್ತು ಬಾಧಿತನು ಪ್ರಜ್ಞವಂತನಾಗಿದ್ದಲ್ಲಿ)
 • ಅವನು ಪ್ರಜ್ಞಾಹೀನನಾಗಿದ್ದರೆ ಬಲವಂತವಾಗಿ ಆಹಾರ ನೀಡಬೇಡಿ
 • ಬಾಧಿತನು ಪೆಟ್ರೋಲಿಯಂ ಉತ್ಪನ್ನ ಸೆವಿಸಿದ್ದರೆ, ವಾಂತಿ ಮಾಡಿಕೊಳ್ಳಲು ಕಾಯುವ ಅಗತ್ಯವಿಲ್ಲ. ಅವನನ್ನು ಸುಧಾರಿತ ಭಂಗಿಯಲ್ಲಿ ಕೂಡಿಸಿ. ತಲೆಯು ಹೃದಯಕ್ಕಿಂತ ಕೆಳ ಮಟ್ಟದಲ್ಲಿ ಇರಲಿ

ಸಾಮಾನ್ಯ ವಿಷಗಳು

ದೈನಂದಿನ ಜೀವನದಲ್ಲಿ ನಾವು ಕಾಣುವ ಸಾಮಾನ್ಯ ವಿಷಕಾರಿ ವಸ್ತುಗಳು ಹೀಗಿವೆ:

 • ಬೆರ್ರೀಗಳು ಮತ್ತು ಬೀಜಗಳು
 • ಫಂಗೈಗಳು
 • ಹಳಸಿದ ಆಹಾರ
 • ಪ್ರಬಲ ರಸಾಯನಿಕಗಳು : ಪ್ಯಾರಾಫಿನ್, ಪೆಟ್ರೋಲ್ ಬ್ಲೀಚುಗಳು, ಕೀಟ ನಾಶಕಗಳು, ರಸಾಯನಿಕ ಗೊಬ್ಬರಗಳು
 • ಔಷಧಗಳು: ಆಸ್ಪಿರಿನ್, ನಿದ್ರಾಮಾತ್ರೆಗಳು, ಕಬ್ಬಿಣಾಂಶದ ಮಾತ್ರೆಗಳು, ಶಮನಕಾರಿಗಳು
 • ಪ್ರಾಣಿಗಳ ನಾಶಕ್ಕೆ ಬಳಸುಯವ ಇಲಿಪಷಾಣ
 • ಮದ್ಯ
 • ಹಸಿರು ಆಲೂ ಗಡ್ಡೆ. ( ಇದು ವಾಂತಿ ,ವಿರೇಚನ, ಸುಸ್ತು ಉಂಟು ಮಾಡುವುದು)

ಸಾಮಾನ್ಯ ಚಿಕಿತ್ಸೆ

ಬಾಧಿತ ಎಚ್ಚರವಿರಬಹುದು ಇಲ್ಲವೆ ಪ್ರಜ್ಞೆ ತಪ್ಪಿರಬಹುದು ಅವನಿಗೆ ಎಚ್ಚರವಿದ್ದರೆ ನಿಮ್ಮಕೆಲಸ ತುಸು ಹಗುರ.

 1. ಬಾಧಿತನಿಗೆ ಎಚ್ಚರವಿದ್ದರೆ ಏನು ನುಂಗಿದ , ಎಷ್ಟು ನುಂಗಿದ , ಯಾವಾಗ ನುಂಗಿದ ಎಂಬುದನ್ನು ಅವನಿಂದ ಕೇಳಿ ತಿಳಿಯಿರಿ.
 2. ಅವನ ಹತ್ತಿರದಲ್ಲಿರುವ ಖಾಲಿ ಶೀಸೆ, ಡಬ್ಬಿ, ಇದ್ದರೆ ಅವುಗಳನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಡಿ. ಅದು ಸೇವಿಸಿದ ವಿಷ ಯಾವುದು ಎಂದು ಪತ್ತೆ ಹಚ್ಚಲು ಸಹಾಯ ಮಾಡುವುದು.
 3. ಬಾಧಿತನ ಬಾಯಿಯನ್ನು ಗಮನಿಸಿ. ಸುಟ್ಟ ಗಾಯವಿದ್ದರೆ ಅವನು ಕುಡಿದಷ್ಟು ಹಾಲು ನೀರು ಕೊಡಿ
 4. ಅವನು ವಾಂತಿ ಮಾಡಿದರೆ ಅದನ್ನು ಪಾತ್ರೆಯಲ್ಲಿ ಇಲ್ಲವೆ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿ. ಆಸ್ಪತ್ರೆಯಲ್ಲಿ ಏನು ಕುಡಿದ ಎಂದು ಪತ್ತೆ ಮಾಡಬಹುದು.
 5. ಬಾಧಿತನು ಎಚ್ಚರ ತಪ್ಪಿದ್ದರೆ ತಕ್ಷಣ ಆಸ್ಪತ್ರೆಗೆ ಸೇರಿಸಿ
 • ಮೊದಲು ಅವನ ಉಸಿರಾಟವನ್ನು ಗಮನಿಸಿ. ಹೃದಯ ಬಡಿತ ನಿಂತಿದ್ದರೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟಕ್ಕೆ ಉತ್ತೇಜಿಸಿ
 • ಅವನು ಉಸಿರಾಡುತ್ತಿದ್ದರೆ ಸುಧಾರಿಸುವ ಭಂಗಿಯಲ್ಲಿ ಮಲಗಿಸಿ.ಅವನ ತಲೆ ತುಸು ಕೆಳಗಿರಲಿ (ಮಗುವಾಗಿದ್ದರೆ ನಿಮ್ಮ ಮೊಣಕಾಲ ಮೇಲೆ ಹಗುರವಾಗಿ ತಲೆ ಕೆಳಗಾಗಿ ಮಲಗಿಸಿ ಕೊಂಡು) ಆಸ್ಪತ್ರೆಗೆ ಕರೆದು ಕೊಂಡು ಹೋಗಿ
 • ಬಾಧಿತನ ಉಸಿರಾಟವನ್ನು ಗಮನಿಸುತ್ತಿರಿ. ಅನೇಕ ವಿಷಗಳು ಉಸಿರಾಟವನ್ನು ನಿಲ್ಲಿಸುತ್ತವೆ
 • ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ
 • ಅವನ ದೇಹವನ್ನು ತಂಪಾಗಿ ಇಡಿ. ಹಣೆ, ಬೆನ್ನು ಹುರಿ, ಕತ್ತು, ದೇಹವನ್ನು ತಣ್ಣೀರು ಬಟ್ಟೆ ಯಿಂದ ಒರಸಿ
 • ಅವನಿಗೆ ಹೆಚ್ಚು ತಂಪು ಪಾನೀಯ ಕುಡಿಯಲು ಉತ್ತೇಜಿಸಿ
 • ಸೆಳೆತ ಮತ್ತು ಅಪಸ್ಮಾರದ ಲಕ್ಷಣ ಗಮನಿಸಿ
 • ಅವನು ಎಚ್ಚರ ತಪ್ಪಿದರೆ ಸುಧಾರಿತ ಭಂಗಿಯಲ್ಲಿ ಕೂಡಿಸಿ.
 • ವಿಷದ ಪಾತ್ರೆಯನ್ನು , ಬಾಟಲಿಯನ್ನು ಜೊತೆಯಲ್ಲಿ ಕೊಂಡು ಹೋಗಿ. ವೈದ್ಯರು ಅದನ್ನು ನೋಡಿದರೆ ಚಕಿತ್ಸೆ ನೀಡಲು ಅದು ಸಹಾಯಕವಾಗುವುದು.

ಚರ್ಮದ ಮೂಲಕ ವಿಷ

ಇತ್ತೀಚಿನ ದಿನಗಳಲ್ಲಿ ಅನೇಕ ಕೀಟನಾಶಕಗಳ, ವಿಶೇಷವಾಗಿ ನರ್ಸರಿಗಳಲ್ಲಿನ ಕೃಷಿಕರು ಮತ್ತು ಕೆಲಸ ಗಾರರು ಬಳಸುವ ರಸಾಯನಿಕಗಳ( ಮೆಲಾಥೀನ್), ಸಂಪರ್ಕಕ್ಕೆ ಚರ್ಮ ಬಂದರೆ , ಅದು ದೇಹದಲ್ಲಿ ಪ್ರವೇಶಿಸಿ ಅಪಾಯ ಉಂಟು ಮಾಡುವುದು.

ಸುಳಿವುಗಳು

 • ಕೀಟನಾಶಕದ ಅಥವ ಕಲಬೆರಕೆಯ ನೇರ ಸಂಪರ್ಕ
 • ಚಳಿ ,ಕೈಕಾಲುನಡುಕ , ಅಪಸ್ಮಾರ
 • ಬಾಧಿತನು ಕ್ರಮೇಣ ಪ್ರಜ್ಞಾಹೀನನಾಗುವನು

ಆರೈಕೆ

 • ಕಲುಷಿತವಾದ ಜಾಗವನ್ನು ತಣ್ಣೀರಿನಿಂದ ತೊಳೆಯಿರಿ
 • ಕಲುಷಿತವಾದ ಉಡುಪನ್ನು, ರಸಾಯನಿಕವು ನಿಮಗೆ ತಗುಲದಂತೆ ಎಚ್ಚರಿಕೆಯಿಂದ ತೆಗೆಯಿರಿ
 • ಅವನಲ್ಲಿ ಭರವಸೆ ಮೂಡಿಸಿ. ಕೆಳಗೆ ಮಲಗಿಸಿ. ಅಲುಗಾಡದಂತೆ ಸುಮ್ಮನೆ ಇರಲಿ
 • ಆಸ್ಪತ್ರೆಗೆ ಆದಷ್ಟು ಬೇಗ ಸಾಗಿಸಲು ವ್ಯವಸ್ಥೆಮಾಡಿ
 • ಅವನನ್ನು ತಂಪಾಗಿ ಇಡಿ. ಹಣೆಯ ಮೇಲೆ ತಂಪಿನ ಚೀಲ ಇಡಿ, ಕತ್ತಿನ ಹಿಂಭಾಗ ಬೆನ್ನು ಮೂಳೆಗೆ ಒದ್ದೆ ಬಟ್ಟೆಯಿಂದ ಒರಸಿ.
 • ಹೆಚ್ಚು ಹೆಚ್ಚು ತಂಪಾದ ಪಾನಿಯ ಕುಡಿಯಲು ಉತ್ತೇಜಿಸಿ
 • ಕೈಕಾಲು ನಡುಕ, ಅಪಸ್ಮಾರದ ಬರುವಿಕೆಯನ್ನು ಗಮನಿಸಿ
 • ಅವನು ಎಚ್ಚರ ತಪ್ಪಿದರೆ ಸುಧಾರಿತ ಭಂಗಿಯಲ್ಲಿ ಕೂಡಿಸಿ.
 • ವಿಷದ ಪಾತ್ರೆ, ಬಾಟಲಿಯನ್ನು ಜೊತೆಯಲ್ಲಿ ಕೊಂಡು ಹೋಗಿ. ವೈದ್ಯರು ಅದನ್ನು ನೋಡಿದರೆ, ಚಕಿತ್ಸೆ ನೀಡಲು ಅದು ಸಹಕಾರಿಯಾಗುವುದು.

ಮೂಲ: ಪೋರ್ಟಲ್ ತಂಡ

3.03571428571
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top