ಡಯಾಬೆಟಿಸ್ ಮೆಲಿಟಿಸ್ ಒಂದು ಅಸಹಜತೆ ಅದರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ( ಗ್ಲೂಕೋಸ್) ತುಂಬ ಹೆಚ್ಚಿರುವುದು ಏಕೆಂದರೆ ದೇಹವು ಸಾಕಷ್ಟು ಇನಸುಲಿನ್ ಅನ್ನು ಉತ್ಪಾದಿಸುವುದಿಲ್ಲ.ಇನಸುಲಿನ್ ಪ್ಯಾಮಕ್ರಿಯಾಸನಿಂದ ಬಿಡುಗಡೆಯಾಗುವ ಒಂದು ಹಾರ್ಮೋನು. ಅದು ರಕ್ತದಲ್ಲಿ ನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವುದು.
ಮಗುವಿಗೆ ಡಯಾಬೆಟಿಸ್ ಇದ್ದರೆರಕ್ತದಲ್ಲಿ ಸಕ್ಕರೆಯಮಟ್ಟ ಅತಿಹೆಚ್ಚಿರುವುದು . ಅದಕ್ಕೆ ಕಾರಣ ಪ್ಯಾಮಕ್ರಿಯಾಸ್ ಇನಸುಲಿನ್ ಅನ್ನು ಬಿಡುಗಡೆ ಮಾಡುವುದಿಲ್ಲ ( ಟೈಪ್ I ಡಯಾಬೆಟಿಸ್ ಮೊದಲು ಅದನ್ನುಬಾಲ್ಯದಲ್ಲಿ ಮೊದಲಾದ ಡಯಾಬೆಟಿಸ್ ಎನ್ನುತ್ತಿದ್ದರು).ಅಥವ ದೇಹವು ಬಿಡುಗಡೆಯಾದ ಇನಸುಲಿನ ಪ್ರಮಾಣಕ್ಕೆ ಸಂವೇದಿಯಾಗಿರುವುದಿಲ್ಲ.(ಟೈಪ್ 2 ಡಯಾಬೆಟಿಸ್) ಟೈಪ್ 1 ಡಯಾಬೆಟಿಸ್ ಬಾಲ್ಯದಲ್ಲಿ ಯವಾಗಲಾದರೂ ಬರಬಹುದು, ಶಿಶುವಿದ್ದಾಗಲೇ ಬರಬಹುದುಆದರೆ ಅದು ಸಾಧಾರಣವಾಗಿ 6ಮತ್ತು 13 ವರ್ಷಗಳಲ್ಲಿ ಬರುವುದು.ಟೈಪ್ 2 ಡಯಾಬೆಟಿಸ್ ಬರುವುದ ಹೆಚ್ಚಾಗಿ ಹದಿ ಹರೆಯದವರಲ್ಲಿ . ಇದುಸ್ಥೂಲಕಾಯದವರಲ್ಲಿ ಮತ್ತು ಅತಿ ಹೆಚ್ಚಿನ ತೂಕದ ಮಕ್ಕಳಲ್ಲಿ ಬರುವುದು.
ಮಕ್ಕಳು ಮತ್ತು ಹದಿಹರೆಯದವರು ಈ ಕೆಳಗಿನೆಂತಿದ್ದರೆ ಪ್ರತಿ 2 ವರ್ಷಕೊಮ್ಮೆ 10 ನೇ ವಯಸ್ಸಿನಿಂದಲೇಹಸಿದಾಗಿನ ರಕ್ತದ ಸಕ್ಕರೆಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು ಅತಿ ಹೆಚ್ಚುತೂಕವಿರುವುದು (ತನ್ನ ವಯಸ್ಸಿನ ಮಕ್ಕಳಿಗಿಂತ 85% ಹೆಚ್ಚು ತೂಕವಿದ್ದರೆ, ತನ್ನ ವಯಸ್ಸಿನ, ಲಿಂಗದ , ಎತ್ತರದ ಮಕ್ಕಳ ಇರಬೇಕಾದುದಕ್ಕಿಂತ 120% ಹೆಚ್ಚಿದ್ದರೆ)
ಹದಿ ಹರೆಯದವರಿಗೆ ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನಿರ್ಧಿಷ್ಟ ಸಮಸ್ಯೆಗಳಿವೆ ಏಕೆಂದರೆ
ಲಕ್ಷಣಗಳು ಟೈಪ್ 1 ಡಯಾಬೆಟಿಸ್ನಲ್ಲ ಬೇಗನೆ ಕಣಿಸಿಕೊಳ್ಳುವವು. ಸರಿ ಸುಮಾರು 2 ರಿಂದ 3 ವಾರಗಳಲ್ಲಿ ಹೊರನೋಟಕ್ಕೆ ಗೊತ್ತಾಗುವುದು. ರಕ್ತದಲ್ಲನ ಹೆಚ್ಚಿದ ಸಕ್ಕರೆಯಮಟ್ಟವು ಮಗುವು ಪದೇ ಪದೇ ಮೂತ್ರ ವಿಸರ್ಜನೆಗೆ ಹೊಗವಂತೆ ಮಾಡುವುದು.ಅದರಿಂದ ನೀರಡಿಕೆ ಹೆಚ್ಚುವುದು.ದ್ರವಪದಾರ್ಥದ ಅಗತ್ಯಬೀಳುವುದು. ಕೆಲಮಕ್ಕಳು (ಡಿಹೈಡ್ರೇಟ್) ನಿರ್ಜಲರಾಗುವರು.ಅದರಿಂದ ಸುಸ್ತು,, ಆಲಸ್ಯ ಹೆಚ್ಚಿದ ನಾಡಿಬಡಿತ,ದೃಷ್ಟಿ ಮಸಕಾಗುವುದು.,ಮಕ್ಕಳಲ್ಲಿ ಟೈಪ್ 2 ಡಯಬೆಟಿಸ್ ನ ಚಿಹ್ನಗಳು ಟೈಪ್ 1 ಡಯಬೆಟಿಸ್ ನಷ್ಟು ತೀವ್ರವಾಗಿರುವುದಿಲ್ಲ. ಅದು ಸಾವಕಾಶವಾಗಿ ಹೆಚ್ಚುತ್ತಾ ಹೋಗುವುದು.- ವಾರಗಳು , ತೀಂಗಳುಗಳೇ ಆಗಬಹುದು. ತಾಯಿತಂದೆ ಮಗುವಿನ ಹೆಚ್ಚಿದ ನೀರಡಿಕೆ ಮತ್ತು ಮಾತ್ರವಿಸರ್ಜನೆ ಗಮನಿಸಬಹುದು. ಆದರೆ ಅವು ಅಸ್ಪಷ್ಟ ಚಿಹ್ನೆಗಳು. ಅದರಲ್ಲೂ ಟೈಪು 2 ನವರಲ್ಲಿ ಸುಸ್ತು ಕಾಣುವುದು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 5/25/2020
3 ಮಗುವಿನ ರಕ್ಷಣೆಯ ವಿಷಯ ಮತ್ತು ಪ್ರತಿಯೊಬ್ಬ ಶಿಕ್ಷಕರು ತಿ...
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...
ಆರೋಗ್ಯವಂತ ತಾಯಿಗೆ ಆರೋಗ್ಯವಂತ ಮಗು ಕುರಿತಾದ ಮಾಹಿತಿ ಇಲ್ಲ...
ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮ...