ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಕ್ಕಳ ಆರೋಗ್ಯ / ಮಕ್ಕಳ ಬೆಳವಣಿಗೆಯ ಮೈಲುಗಲ್ಲುಗಳು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಕ್ಕಳ ಬೆಳವಣಿಗೆಯ ಮೈಲುಗಲ್ಲುಗಳು

ಮಕ್ಕಳ ಬೆಳವಣಿಗೆಯ ಮೈಲುಗಲ್ಲುಗಳ ಬಗ್ಗೆ ಇಲ್ಲಿ ವಿವರಿಸಿಲಾಗಿದೆ.

ಮಗುವಿನ ಬೆಳವಣಿಗೆ ಸಂಕೀರ್ಣವಾದ ಹಾಗೂ ಸತತವಾದ ಪ್ರಕ್ರಿಯೆ. ಅವರು ಕೆಲ ನಿರ್ದಿಷ್ಟ ಕಾರ್ಯಗಳನ್ನು ಕೆಲ ನಿರ್ದಿಷ್ಟ ವಯಸ್ಸಿನಲ್ಲಿ ಮಾಡಬೇಕು. ಅವುಗಳನ್ನು ಬೆಳವಣಿಗೆಯ ಮೈಲುಗಲ್ಲುಗಳು ಎಂದು ಕರೆಯಲಾಗುತ್ತದೆ. ಇಬ್ಬರೂ ಏಕಕಾಲಕ್ಕೆ ಒಂದೇ ತೆರನಾಗಿ ಬೆಳೆಯುವುದಿಲ್ಲ ಎಂಬುದನ್ನು ಪೋಷಕರಾಗಿ ನೀವು ಮೊದಲು ಅರಿಯಬೇಕು. ಹಾಗಾಗಿ ಪಕ್ಕದ ಮನೆಯ ಮಗು, ಅದು ಮಾಡುತ್ತದೆ, ಇದು ಮಾಡುತ್ತದೆ, ಆದರೆ, ನಮ್ಮದೇನೂ ಮಾಡುವುದಿಲ್ಲ ಎಂದು ಕೊರಗುವುದರಲ್ಲಿ ಅರ್ಥವಿಲ್ಲ. ವಯಸ್ಸಿಗನುಗುಣವಾಗಿ ಮಕ್ಕಳು ಮಾಡಬಹುದಾದ ಚಟುವಟಿಕೆಯನ್ನು ನೀಡಲಾಗಿದೆ, ಮಗುವನ್ನು ಗಮನಿಸಿ.


ಮಕ್ಕಳ ಬೆಳವಣಿಗೆಯ ಮೈಲುಗಲ್ಲುಗಳು

ಕೆಲ ತಿಂಗಳು ಕಳೆದರೂ, ಸೂಚಿಸಲಾದ ನಿರ್ದಿಷ್ಟ ಚಟುವಟಿಕೆಯಲ್ಲಿ ಮಗುವು ತೊಡಗದಿದ್ದರೆ, ಮಕ್ಕಳ ತಜ್ಞರನ್ನು ಸಂಪರ್ಕಿಸಿ. ನಿಮ್ಮ ಮಗುವು ಭಿನ್ನವಾಗಿ ವರ್ತಿಸಲು ಕಾರಣ ಅದರ ಅನಾರೋಗ್ಯ ಕಾರಣ ಇರಬಹುದು. ಕೆಲ ಸಂದರ್ಭಗಳಲ್ಲಿ ಅದೇ ವಯಸ್ಸಿನ ಇತರ ಮಕ್ಕಳಿಗಿಂತ ನಿಮ್ಮ ಮಗುವು ಕೆಲವೊಂದು ಕ್ಷೇತ್ರಗಳಲ್ಲಿ ನಿಧಾನ ವಾಗಿರಬಹುದು, ಆದರೆ ಇತರ ಚಟುವಟಿಕೆಗಳಲ್ಲಿ ಅದು ಬೇರೆ ಮಕ್ಕಳಿಗಿಂತ ಮುಂದಿರಬಹುದು. ಮಗು ಸಿದ್ಧವಾಗಿಲ್ಲದೇ ಇರುವಾಗ, ಅದನ್ನು ನಡೆಯಲು ಕಲಿಯುವಂತೆ ಬಲವಂತ ಪಡಿಸುವುದು, ಅಷ್ಟೇನೂ ಪ್ರಯೋಜನಕಾರಿಯಲ್ಲ.

ಬೆಳವಣಿಗೆಯ ಊನತೆಗೆ ಕ್ಷಿಪ್ರ ಪ್ರದರ್ಶನ

 • 2 ತಿಂಗಳು –ಸಾಮಾಜಿಕ ಮುಗುಳ್ನಗು
 • 4 ತಿಂಗಳು –ಕತ್ತು ಸ್ಥಿರವಾಗುವುದು
 • 8 ತಿಂಗಳು –ಯಾವುದೇ ಆಧಾರವಿಲ್ಲದೇ ಕುಳಿತುಕೊಳ್ಳುವುದು
 • 12 ತಿಂಗಳು -ನಿಂತುಕೊಳ್ಳುವುದು

ಜನನದಿಂದ 6 ವಾರಗಳ ವರೆಗೆ

 • ಅಂಗಾತ ಮಲಗಿರುವ ಮಗು ಒಂದು ಬದಿಗೆ ತನ್ನ ಕತ್ತನ್ನು ಹೊರಳಿಸಬಲ್ಲದು
 • ಇದ್ದಕ್ಕಿದ್ದ ಹೊರಹೊಮ್ಮುವ ಸದ್ದಿಗೆ ಮಗು ಚಕಿತಗೊಂಡು ದೇಹವನ್ನು ಬಿಗಿಗೊಳಿಸುತ್ತದೆ
 • ಮುಷ್ಠಿಯನ್ನು ಗಟ್ಟಿಯಾಗಿ ಹಿಡಿಯುತ್ತದೆ
 • ಯಾವುದೇ ವಸ್ತುವನ್ನು ಸ್ಪರ್ಶಿಸಿದಾಗ ಅದನ್ನು ಬಿಗಿಯಾಗಿ ಅಂಗೈಯಿಂದ ಹಿಡಿಯಬಲ್ಲದು. ಇದನ್ನು ಬಿಗಿತದ ಪ್ರತಿಸ್ಪಂದನೆ ಎನ್ನಲಾಗುತ್ತದೆ.

6 ರಿಂದ 12 ವಾರಗಳು

 • ಶಿರವನ್ನು ಸ್ಥಿರವಾಗಿರಲು ಕಲಿಯುತ್ತದೆ
 • ವಸ್ತುಗಳ ಮೇಲೆ ದೃಷ್ಟಿಸಿ ನೋಡಬಲ್ಲದು

3 ತಿಂಗಳು

 • ಅಂಗಾತ ಮಲಗಿದಾಗ ಶಿಶುವು ತನ್ನೆರಡೂ ಕೈ ಹಾಗೂ ಕಾಲುಗಳನ್ನು ಜೋರಾಗಿ ಚಲಿಸಬಲ್ಲದು. ಈ ಚಲನೆ ತಳ್ಳಿದಂತೆ ಅಥವಾ ನೂಕಿದಂತೆ, ಅನಿಯಂತ್ರಿತವಾಗಿರುವುದಿಲ್ಲ. ಅಳುವುದಷ್ಟೇ ಅಲ್ಲ, ಸಂತಸದಿಂದ ಗಂಟಲಲ್ಲಿ ಗುಳು ಗುಳು ಸದ್ದನ್ನೂ ಹೊರಡಿಸಬಲ್ಲದು.
 • ಮಗುವು ತಾಯಿಯನ್ನು ಗುರುತಿಸಬಲ್ಲದು ಮತ್ತು ಆಕೆಯ ಧ್ವನಿಗೆ ಪ್ರತಿಸ್ಪಂದಿಸುವುದು
 • ಮಗುವಿನ ತೋಳುಗಳು ಸದಾ ತೆರೆದಿರುತ್ತವೆ.
 • ಮಗುವನ್ನು ಎತ್ತಿ ಹಿಡಿದಾಗ, ಮಗುವು ತನ್ನ ಶಿರವನ್ನು ಕೆಲ ಕಾಲ ಸ್ಥಿರವಾಗಿ ಹಿಡಿದಿಡಬಲ್ಲದು.

6 ತಿಂಗಳು

 • ಮಗು ತನ್ನ ಕೈಗಳೊಂದಿಗೇ ಆಟವಾಡುತ್ತದೆ. ಅವುಗಳನ್ನು ಜೊತೆಗೆ ತರುವುದು, ಒಂದನ್ನೊಂದು ಮುಟ್ಟಿಸುತ್ತಾ ಆಡುತ್ತದೆ.
 • ತನ್ನ ಸುತ್ತಮುತ್ತಲಿಂದ ಕೇಳಿ ಬರುವ ಶಬ್ದಗಳಿಗೆ ಪ್ರತಿಕ್ರಿಯಿಸುತ್ತದೆ. ಸದ್ದು ಬಂದ ಕಡೆ ತನ್ನ ತಲೆ ಹೊರಳಿಸುತ್ತದೆ.
 • ಮಗುವು ಬೋರಲು ಬೀಳಲಾರಂಭಿಸುತ್ತದೆ
 • ಸೂಕ್ತ ಆಧಾರದೊಂದಿಗೆ ಕೆಲ ಕ್ಷಣಗಳವರೆಗೆ ಕುಳಿತುಕೊಳ್ಳುತ್ತದೆ.
 • ಮಗುವನ್ನು ಎತ್ತಿ ಹಿಡಿದಾಗ, ಕಾಲುಗಳ ಮೇಲೆ ಭಾರ ಹಾಕಲು ಕಲಿಯುತ್ತದೆ
 • ಬೋರಲು ಬಿದ್ದಾಗ ಮಗುವು, ಕೈ ಚಾಚುವುದರ ಮೂಲಕ, ದೇಹಕ್ಕೆ ಆಧಾರ ಕಲ್ಪಿಸಿಕೊಳ್ಳಬಲ್ಲದು.

9 ತಿಂಗಳು

 • ಮಗುವು ಯಾವುದೇ ಆಧಾರವಿಲ್ಲದೇ ಸ್ವತಂತ್ರವಾಗಿ ಕುಳಿತುಕೊಳ್ಳಬಲ್ಲದು
 • ಮೊಳಕಾಲು ಹಾಗೂ ಕೈಗಳನ್ನು ಬಳಸಿ ತೆವಳ ಬಲ್ಲದು.

12 ತಿಂಗಳು

 • ಮಗು ಎದ್ದು ನಿಲ್ಲಲು ಪ್ರಯತ್ನಿಸುತ್ತದೆ.
 • “ಅಮ್ಮ” ಎನ್ನಲು ಆರಂಭಿಸುತ್ತದೆ.
 • ಪೀಠೋಪಕರಣಗಳನ್ನು ಹಿಡಿಕೊಂಡು ನಡೆಯಲು ಮಗು ಯತ್ನಿಸುತ್ತದೆ.

18 ತಿಂಗಳು

 • ಬಟ್ಟಲನ್ನು ಭದ್ರವಾಗಿ ಹಿಡಿಯುವುದರ ಜೊತೆಗೆ ಅದರಿಂದ ಚೆಲ್ಲದಂತೆ ಕುಡಿಯ ಬಲ್ಲದು.
 • ಮಗುವು ಯಾವುದೇ ನೆರವಿಲ್ಲದೇ, ಸಮತೋಲನ ತಪ್ಪದೇ, ಬೀಳದೇ, ದೊಡ್ಡ ಕೋಣೆಯಲ್ಲಿ ನಡೆಯಬಲ್ಲದು
 • ಮಗು ಎರಡೆರಡು ಪದಗಳನ್ನು ಉಚ್ಛರಿಸಬಲ್ಲದು
 • ಮಗುವು ತನಗೆ ಬೇಕಿರುವುದನ್ನು ತಿನ್ನಬಲ್ಲದು

2 ವರ್ಷ

 • ಮಗುವು ಕೆಲ ಉಡುಪುಗಳನ್ನು (ಪೈಜಾಮಾದಂಥ) ಬಿಚ್ಚ ಬಲ್ಲದು
 • ಬೀಳದೇ, ಓಡಬಲ್ಲದು
 • ಚಿತ್ರಗಳ ಪುಸ್ತಕದಲ್ಲಿನ ಚಿತ್ರಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳುತ್ತದೆ
 • ತನಗೆ ಬೇಕಿರುವುದನ್ನು ಹೇಳ ಬಲ್ಲದು.
 • ಬೇರೆಯವರು ಹೇಳಿದ್ದನ್ನು ಕೇಳಿದ ಮಗು ಅದನ್ನು ಪುನರಾವರ್ತಿಸಬಲ್ಲದು.
 • ತನ್ನ ದೇಹದ ಕೆಲ ಭಾಗಗಳನ್ನು ತೋರಿಸಬಲ್ಲದು.

3 ವರ್ಷಗಳು

 • ಮಗುವು ಚೆಂಡನ್ನು ನೇರವಾಗಿ ಎಸೆಯಬಲ್ಲದು.
 • “ನೀನು ಹುಡುಗನೋ ಹುಡುಗಿಯೋ?” ಎಂಬಂಥ ಸರಳ ಪ್ರಶ್ನೆಗಳಿಗೆ ಮಗು ಉತ್ತರಿಸಬಲ್ಲದು.
 • ಮಗು ಕೆಲ ಸಾಮಾನುಗಳು ಚಲ್ಲಾಪಿಲ್ಲಿ ಮಾಡಬಲ್ಲದು.
 • ಕೊನೇ ಪಕ್ಷ ಒಂದು ಬಣ್ಣವನ್ನು ಹೆಸರಿಸಬಲ್ಲದು

4 ವರ್ಷಗಳು

 • ಮೂರುಗಾಲಿಯ ಸೈಕಲ್ಲನ್ನು ತುಳಿಯಬಲ್ಲದು.
 • ಪುಸ್ತಕ ಅಥವಾ ನಿಯತಕಾಲಿಕೆಯಲ್ಲಿ ಚಿತ್ರಗಳನ್ನು ಹೆಸರಿಸಬಲ್ಲದು.

5 ವರ್ಷಗಳು

 • ತನ್ನ ಉಡುಪಿನ ಕೆಲ ಗುಂಡಿಗಳನ್ನು ಹಾಕಿಕೊಳ್ಳ ಬಲ್ಲ.
 • ಕೊನೇ ಪಕ್ಷ ಮೂರು ಬಣ್ಣಗಳನ್ನು ಹೆಸರಿಸಬಲ್ಲದು.
 • ತನ್ನ ಪಾದಗಳನ್ನು ಬದಲಿಸುತ್ತಾ, ಮೆಟ್ಟಿಲುಗಳನ್ನಿಳಿಯಬಲ್ಲ.
 • ತನ್ನೆರಡೂ ಪಾದಗಳನ್ನು ದೂರ ಮಾಡಿ, ಹಾರಬಲ್ಲ.

ಮೂಲ:ಡಾಕ್ಟರ್ ಎನ್ ಡಿಟಿವಿ

3.0350877193
ಸೋಹನ್ Feb 06, 2020 09:37 AM

ನಮಗೆ ಇನ್ನೂ ಸಲಹೆಗಳು ನೀಡಬಹುದಾ?

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top