অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಗುವಿನ ಆರೋಗ್ಯದ ಸಮಸ್ಯೆಗಳು

ಮಗುವಿನ ಆರೋಗ್ಯದ ಸಮಸ್ಯೆಗಳು

ಸಾಮಾನ್ಯ ಮಗುವಿನ ಆರೋಗ್ಯ ಸಮಸ್ಯೆಗಳು ಈ ಕೆಳಕಂಡಂತಿರುತ್ತವೆ.

ಜನನ ಸಂದರ್ಭದಲ್ಲಿ ಕಡಿಮೆ ತೂಕ:

  • ದಷ್ಟಪುಷ್ಟ ತಾಯಂದಿರಿಗೆ ಜನಿಸಿದ ಶಿಶುವಿನ ತೂಕ ಸಾಮಾನ್ಯವಾಗಿ 3.5 ಕಿಲೋ. ಆದರೆ, ಭಾರತದಲ್ಲಿ ಜನಿಸುವ ಶಿಶುಗಳ ಸರಾಸರಿ ತೂಕ ಸುಮಾರು 2.7 ರಿಂದ 2.9 ಕಿಲೋ. ಜನನವಾದ ತಕ್ಷಣ ಶಿಶುವಿನ ತೂಕವನ್ನು ದಾಖಲಿಸುವುದು ಅತಿ ಅಗತ್ಯ.
    . ಇದು ಮಗುವಿನ ಬೆಳವಣಿಗೆ, ಹಾಗೂ ಅದರ ಬದುಕುಳಿಯುವ ಸಾಧ್ಯತೆಗಳನ್ನು ನಿರ್ಧರಿಸಲು ಅನುಕೂಲ. ಮಗುವಿನ ತೂಕ 2.5 ಕಿಲೋಕ್ಕಿಂತ ಕಡಿಮೆಯಿದ್ದಲ್ಲಿ, ಜನನ ಸಂದರ್ಭದಲ್ಲಿ ಕಡಿಮೆ ತೂಕ ಇರುವ ಶಿಶು ಎಂದು ವರ್ಗೀಕರಿಸಲಾಗುತ್ತದೆ. ಬದುಕಿನ ಮೊದಲ ಗಂಟೆಯಲ್ಲಿ, ಜನನಾನಂತರ ಆಗುವ ತೂಕ ನಷ್ಟಕ್ಕೆ ಮೊದಲು ಶಿಶುವಿನ ತೂಕವನ್ನು (ಅವಧಿ ಪೂರ್ವ ಅಥವಾ ಅವಧಿ ಪೂರ್ಣದ ಹೆರಿಗೆ) ಅಳತೆ ಮಾಡಬೇಕು.ಜನನದ ಸಂದರ್ಭದಲ್ಲಿ ಕಡಿಮೆ ತೂಕ ಹೊಂದಿರುವ ಶಿಶುಗಳಲ್ಲಿ ಎರಡು ಬಗೆ.
  • ಅವಧಿಪೂರ್ವ ಶಿಶುಗಳು:ಗರ್ಭಧಾರಣೆಯ 37 ವಾರಗಳಿಗೂ ಮುಂಚೆ ಜನಿಸುವ ಮಕ್ಕಳನ್ನು ಅವಧಿಪೂರ್ವ ಶಿಶುಗಳು ಎಂದು ಗುರುತಿಸಲಾಗುತ್ತದೆ. ಗರ್ಭಾಶಯದೊಳಗಿನ ಬೆಳವಣಿಗೆ ಅಂದರೆ, ತೂಕ, ಉದ್ದ ಮತ್ತು ಪ್ರಗತಿ ಸಾಮಾನ್ಯವಾಗಿರಬಹುದು ಮತ್ತು ಸೂಕ್ತ ಕಾಳಜಿ ವಹಿಸಿದಲ್ಲಿ 2-3 ವರ್ಷದೊಳಗೆ ಅವರು ಏಳಿಗೆ ಹೊಂದಬಲ್ಲರು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಜನನ ಸಂದರ್ಭದಲ್ಲಿ ಕಡಿಮೆ ತೂಕವಿರುವ ಮಕ್ಕಳು ಅವಧಿಪೂರ್ವ ಹುಟ್ಟುವಂಥವು. ಒಂದಕ್ಕಿಂತ ಹೆಚ್ಚು ಬಾರಿ ಗರ್ಭಧಾರಣೆ, ತೀವ್ರ ತೆರನಾದ ಸೋಂಕು, ಟೋಕ್ಸೆಮಿಯಾ, ಹದಿ ಹರೆಯದ ಗರ್ಭಧಾರಣೆ, ಕಠಿಣವಾದ ದೈಹಿಕ ಶ್ರಮ ಮತ್ತಿತರ ಕಾರಣಗಳಿಗಾಗಿ ಅವಧಿಪೂರ್ವ ಹೆರಿಗೆಯಾಗಲು ಸಾಧ್ಯ.
  • ಜನನಕ್ಕಿನ್ನೂ ಚಿಕ್ಕದು ಗರ್ಭಾಧಾರಣೆಯ ವಯಸ್ಸಿನ ಶೇ.10ಕ್ಕಿಂತ ಕಡಿಮೆ ತೂಕವಿರುವ ಶಿಶುಗಳು, ಅವಧಿ ಪೂರ್ವದ್ದೇ ಆಗಿರಲಿ, ಅಥವಾ ಅವಧಿ ಪೂರ್ಣದ್ದೇ ಆಗಿರಬಹುದು, ಇವುಗಳನ್ನು ಎಸ್ ಎಫ್ ಡಿ ಎಂದು ಗುರುತಿಸಲಾಗುತ್ತದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇಂತಹ ಮಕ್ಕಳು ಸಾಮಾನ್ಯ.
    ಜನನ ಸಂದರ್ಭದಲ್ಲಿ ತೂಕ ಕಡಿಮೆಯಿರಲು ಕಾರಣಗಳು ಅನೇಕ. ತಾಯಿಯೊಂದಿಗೆ ಸಂಬಂಧ, ಭ್ರೂಣ ಹಾಗೂ ಪ್ಲಾಸೆಂಟಾಗಳೂ ಕಾರಣವಾಗಿರಬಹುದು. ತಾಯಿಗೆ ಸಂಬಂಧಿಸಿದ ಕಾರಣಗಳೆಂದರೆ, ಅಪೌಷ್ಟಿಕತೆ, ತೀವ್ರ ಅನಿಮಿಯಾ, ತೀರಾ ಎಳೆ ವಯಸ್ಸು, ಸಣ್ಣ ಮೈಕಟ್ಟು, ಈ ಮುಂಚೆ ತಾಯಿ ಧರಿಸಿದ ಗರ್ಭಗಳು, ಹೆರಿಗೆ ಸಂದರ್ಭದಲ್ಲಿ ರಕ್ತದೊತ್ತಡ, ಟೋಕ್ಸೆಮಿಯಾ ಮತ್ತು ಮಲೇರಿಯಾ. ಈ ಸಮಸ್ಯೆಗಳು ಬಹುತೇಕ ಸಾಮಾಜಿಕ-ಆರ್ಥಿಕ ಹಾಗೂ ಶಿಕ್ಷಣದ ಕೆಳಸ್ತರದೊಂದಿಗೆ ನೇರ ಸಂಬಂಧ ಹೊಂದಿವೆ. ಭ್ರೂಣಕ್ಕೆ ಸಂಬಂಧಿದ ಕಾರಣಗಳೆಂದರೆ, ಬಹು ಗರ್ಭಧಾರಣೆ (ಅವಳಿ ಅಥವಾ ತ್ರಿವಳಿ), ಗರ್ಭಾಶಯದ ಸೋಂಕು, ಭ್ರೂಣದ ವೈಪರಿತ್ಯಗಳು ಹಾಗೂ ವರ್ಣತಂತುಗಳ ವೈಪರಿತ್ಯಗಳು. ಪ್ಲಾಸೆಂಟಾದ ಕೊರತೆ ಹಾಗೂ ಪ್ಲಾಸೆಂಟಾದ ವೈಪರಿತ್ಯಗಳೂ ಕಾರಣವಾಗಿರಬಹುದು.

ಜನನ ಸಂದರ್ಭದಲ್ಲಿ ಕಡಿಮೆ ತೂಕ ಇಂದಿನ ಜಾಗತಿ ಸಮಸ್ಯೆ. ಆದರೆ, ಈ ಸಮಸ್ಯೆಅಭಿವೃದ್ಧಿ ಹೊಂದಿದ ದೇಶಗಳಿಗೂ ಹೊಂದದ ದೇಶಗಳಿಗೂ ಅಪಾರವಾದ ವ್ಯತ್ಯಾಸ. ಇದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇ. 4ರಷ್ಟಿದ್ದರೆ, ಅಭಿವೃದ್ಧಿ ಹೊಂದದ ದೇಶಗಳಲ್ಲಿ ಅದು ಶೇ. 30. ಭಾರತದಲ್ಲಿ ಹುಟ್ಟುವ ಬಹುತೇಕ ಮಕ್ಕಳು ಜನನದ ಸಂದರ್ಭದಲ್ಲಿ ಕಡಿಮೆ ತೂಕ ಹೊಂದಿರುವುದು ಇಲ್ಲಿನ ಮಹಿಳೆಯರ ಆರೋಗ್ಯ, ಆರ್ಥಿಕ, ಸಾಮಾಜಿಕ ಮಟ್ಟವನ್ನು ಬಿಂಬಿಸುತ್ತದೆ.

ಈ ಕೆಳಕಂಡ ಕ್ರಮಗಳನ್ನು ಕೈಕೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು;

  • ಜನನಾನಂತರ ಸೂಕ್ತ ಕಾಳಜಿ ಮತ್ತು ಯೋಜಿತ ಮಧ್ಯಪ್ರವೇಶ
  • ಎಲ್ಲ ಗರ್ಭಿಣಿಯರನ್ನು ಆದಷ್ಟು ಬೇಗ ನೋಂದಾಯಿಸಿಕೊಂಡು, ಅದಷ್ಟು ಶೀಘ್ರವಾಗಿ ಅವರ ಸಮಸ್ಯೆಗಳನ್ನು ಗುರುತಿಸಬೇಕು.
  • ಸಮತೋಲನ ಹಾಗೂ ಪೌಷ್ಟಿಕ ಆಹಾರದ ನೀಡಿಕೆ, ಆಹಾರದೊಂದಿಗೆ ಹೆಚ್ಚುವರಿ ಶಕ್ತಿಯುತ ಆಹಾರ ನೀಡಿಕೆ, ಕಬ್ಬಿಣ, ಫೋಲಿಕ್ ಆಸಿಡ್ ಅಂಶಗಳನ್ನು ಒಳಗೊಂಡ ಮಾತ್ರೆಗಳ ನೀಡಿಕೆ.
  • ಅಸಾಂಕ್ರಾಮಿಕ ರೋಗಗಳ (ಡಯಾಬಿಟೀಸ್, ಹೈಪರ್ ಟೆನ್ಷನ್, ಇತ್ಯಾದಿ) ಶೀಘ್ರ ಪತ್ತೆ ಮಾಡಿ, ಚಿಕಿತ್ಸೆ ನೀಡಿ.
  • ಧೂಮಪಾನ, ಸ್ವಯಂ ವೈದ್ಯ ಹಾಗೂ ನಕಲಿ ವೈದ್ಯರಿಂದ ಚಿಕಿತ್ಸೆಗಳನ್ನು ನಿಷೇಧಿಸಿ
  • ಚಿಕ್ಕ ಕುಟುಂಬ ಪದ್ಧತಿ, ಗರ್ಭಧಾರಣೆಯ ಸೂಕ್ತ ಕಾಲಾವಧಿಗಳ ಪಾಲನೆಯನ್ನು ಪ್ರೋತ್ಸಾಹಿಸಿ
  • ಮಹಿಳೆಯ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಿ
  • ಲಿಂಗ ಸಂವೇದನೆಗೆ ಸ್ಪಂದಿಸುವಂತೆ ಮಾಡಿ.
  • ಜನನ ಸಂದರ್ಭದಲ್ಲಿ ಮಗುವಿನ ಕಡಿಮೆ ತೂಕದ ಮಾಹಿತಿ ನೀಡಿ, ಅದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಗಮನ ಕೊಡಿ.
    ಜನನ ಸಂದರ್ಭದಲ್ಲಿ ಕಡಿಮೆ ತೂಕವಿರುವ ಮಗುವಿನ ನಿರ್ವಹಣೆಯನ್ನು ಈ ಕೆಳಕಂಡಂತೆ ವ್ಯವಸ್ಥೆಗೊಳಿಸಬಹುದು.

ಸಾಂಸ್ಥಿಕ ಮಟ್ಟದಲ್ಲಿ:2 ಕಿಲೋಗಿಂತಲೂ ಕಡಿಮೆ ಇರುವ ಮಕ್ಕಳನ್ನು ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿಡುವುದರಿಂದ ಆಮ್ಲಜನಕದ ಸರಬರಾಜು, ಉಷ್ಣತೆ ಹಾಗೂ ತೇವಾಂಶವನ್ನು ನಿಯಂತ್ರಿಸಬಹುದು. ಆದ್ದರಿಂದ, ಇಂಥ ಮಕ್ಕಳನ್ನು ತತ್ ಕ್ಷಣ ಆಸ್ಪತ್ರೆಗೆ ಸೇರಿಸಬೇಕು.

ಮನೆಗಳಲ್ಲಿ:ಆರೋಗ್ಯ ಕಾರ್ಯಕರ್ತರ ಸೂಕ್ತ ಮೇಲ್ವಿಚಾರಣೆಯಲ್ಲಿ ಮನೆಗಳಲ್ಲಿಯೇ ಸುಮಾರು 2-2.5 ಕಿಲೋ ತೂಕದ ಮಕ್ಕಳನ್ನು ನಿರ್ವಹಿಸಬಹುದು. ಮಗುವನ್ನು ಬೆಚ್ಚಗಿರಿಸಬೇಕು. ಆಹಾರವನ್ನು ಅಗತ್ಯವಿದ್ದಷ್ಟು ಹಾಗೂ ಆಗಾಗ ನೀಡಬೇಕು ಹಾಗೂ ಯಾವುದೇ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು. ಇಂಥ ಮಕ್ಕಳ ಆರೈಕೆಗೆ ಮೊಲೆ ಹಾಲು ನೀಡುವುದು ಅತ್ಯುತ್ತಮ. ಅಲ್ಲದೇ, ಮಗುವಿನ ತೂಕವನ್ನು ಆಗಾಗ್ಗೆ ಗಮನಿಸುತ್ತಿರಬೇಕು. ಹೆಚ್ಚುತ್ತಿರುವ ಮಗುವಿನ ತೂಕ ಸಮಾಧಾನಕರ ಬೆಳವಣಿಗೆಯನ್ನು ಸೂಚಿಸುತ್ತದೆ.

ಅಪೌಷ್ಟಿಕತೆ: ಅಸಮತೋಲನ ಹಾಗೂ ಅಗತ್ಯಕ್ಕಿಂತ ಕಡಿಮೆ ಆಹಾರ ಸೇವನೆಯಿಂದ ಅಪೌಷ್ಠಿಕತೆಯುಂಟಾಗುತ್ತದೆ. ಪ್ರೋಟೀನ್ ಶಕ್ತಿಯ ಅಪೌಷ್ಟಿಕತೆ ಮಹತ್ವದ ಸಮಸ್ಯೆಗಳಲ್ಲೊಂದು. ಇದೂ ಕೂಡಾ ಜಾಗತಿಕ ಸಮಸ್ಯೆ. ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ಹಾಗೂ ಎನ್ಎಫ್ಎಚ್ಎಸ್ 1992-93ರ ಪ್ರಕಾರ, ಆರು ತಿಂಗಳಿನಿಂದ ಎರಡು ವರ್ಷದ ಮಕ್ಕಳು ಈ ಸಮಸ್ಯೆಗೆ ತುತ್ತಾಗುತ್ತಾರೆ.

ಅಪೌಷ್ಟಿಕತೆ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವುದಲ್ಲದೇ, ಸೋಂಕುಗಳನ್ನೂ ಉಂಟು ಮಾಡಬಲ್ಲದು. ಅಪೌಷ್ಟಿಕತೆಯು ಮಗುವಿನಲ್ಲಿ ಕುಂಠಿತ ಬೆಳವಣಿಗೆಗೆ ಕಾರಣವಾಗಬಲ್ಲದು. ಪೌಷ್ಟಿಕ ಕೊರತೆಯ ಸಮಸ್ಯೆ ಹಾಗೂ ಆ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸಲು ದುಬಾರಿಯಾದ ಚಿಕಿತ್ಸೆ ಅಗತ್ಯ

  1. ಮಗು ಕೇಳಿದಾಗಲೆಲ್ಲಾ, ಆರು ತಿಂಗಳವರೆಗೆ ಅದಕ್ಕೆ ಮೊಲೆವಾಲು ನೀಡುವುದು ಕಡ್ಡಾಯ.
  2. 5-6 ತಿಂಗಳ ಬಳಿಕ, ಮೊಲೆ ಹಾಲಿನ ಜೊತೆಗೆ ಹಣ್ಣು, ಮೆತ್ತಗಿನ ಅನ್ನ ಮತ್ತಿತ್ತರ ಧಾನ್ಯ, ಕಾಳುಗಳನ್ನೂ ನೀಡಬೇಕು. ಅಲ್ಲದೇ, ಮೊಲೆಹಾಲು ನೀಡಿಕೆಯನ್ನೂ ಮುಂದುವರಿಸಬೇಕು.
  3. ಧಾನ್ಯ, ಬೇಳೆ, ಕಾಳು, ತರಕಾರಿ, ಹಣ್ಣು, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನೂ ನೀಡಬೇಕು
  4. ಹೆಣ್ಣು ಮಗುವಾಗಿದ್ದಲ್ಲಿ, ಅದಕ್ಕೆ ಸೂಕ್ತ ಆಹಾರದ ಅಗತ್ಯಗಳನ್ನು ಗಮನಿಸಬೇಕು.
  5. ಗರ್ಭಧಾರಣೆಗೂ ಮುನ್ನವೇ ಸೂಕ್ತ ಹಾಗೂ ಪೌಷ್ಟಿಕ ಆಹಾರವನ್ನು ಒದಗಿಸಬೇಕು.
  6. ಯಾವುದೇ ಬಗೆಯ ಪೌಷ್ಟಿಕ ಕೊರತೆಯನ್ನು ಶೀಘ್ರ ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಬೇಕು.

ಸಾಂಕ್ರಾಮಿಕ ರೋಗಗಳು

ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳು ಹಲವಾರು ಸಾಂಕ್ರಾಮಿಕ ರೋಗಗಳಿದ್ದು, ಅನೇಕ ಸಂದರ್ಭಗಳಲ್ಲಿ ಅವು ಪ್ರಾಣಾಂತಿಕವೂ ಆಗಬಲ್ಲವು. ಬೇಧಿ, ಉಸಿರಾಟದ ತೊಂದರೆ, ಮೀಸಲ್ಸ್, ಪೆರ್ಟುಸಿಸ್ (ಕೆಮ್ಮು), ಢಿಪ್ತೀರಿಯಾ, ಪೋಲಿಯೋ ಮತ್ತು ಧನುರ್ವಾಯು. 1997ರ ಮಾಹಿತಿಯ ಪ್ರಕಾರ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಶೇ. 19ರಷ್ಟು ಮಕ್ಕಳು ಪ್ರಾಣ ಕಳೆದುಕೊಂಡಿದ್ದು ಬೇಧಿಗೆ ಸಂಬಂಧಿಸಿದ ಕಾಯಿಲೆಗಳಿಂದ ಹಾಗೂ ಶೇ. 13ರಷ್ಟು ಮಕ್ಕಳು ಪೋಲಿಯೋ ಕಾರಣದಿಂದ.
ಅಪಘಾತಗಳು ಹಾಗೂ ವಿಷ ಸೇವನೆ: ಅಪಘಾತಗಳು ಹಾಗೂ ವಿಷ ಸೇವನೆಗಳೂ ಮಕ್ಕಳ ವಿಷಯದಲ್ಲಿ ಸಾಮಾನ್ಯ. ಮನೆ, ರಸ್ತೆ, ಶಾಲೆಗಳಲ್ಲಿ ಇವು ಸಂಭವಿಸಬಹುದು. ಸುಟ್ಟಗಾಯ, ಗಾಯ, ಮುಳುಗುವಿಕೆ, ವಿಷ ಸೇವನೆ, ಬೀಳುವುದು ಎಲೆಕ್ಟ್ರಿಕ್ ಶಾಕ್, ರಸ್ತೆ ಅಪಘಾತಗಳಿಂದಲೂ ಮಗುವಿಗೆ ಹಾನಿಯುಂಟಾಗಬಹುದು

ಮಗುವಿನ ಆರೋಗ್ಯದ ಕಾಳಜಿ

ಗರ್ಭಧಾರಣೆಯಿಂದ ಹುಟ್ಟಿನವರೆಗೆ ಹಾಗೂ ಹುಟ್ಟಿನಿಂದ ಮಗುವಿಗೆ ಐದು ವರ್ಷವಾಗುವವರೆಗೆ ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸುವುದೇ ಮಗುವಿನ ಆರೋಗ್ಯ ಕಾಳಜಿ ಎಂದು ಹೇಳಲಾಗುತ್ತದೆ. ಐದು ವರ್ಷದ ಬಳಿಕ ಮಗುವಿನ ಆರೋಗ್ಯ ಕಾಳಜಿಯಲ್ಲಿ ಶಾಲೆಯ ಆರೋಗ್ಯ ಯೋಜನೆಯ ತಂಡವೂ ಭಾಗಿಯಾಗುತ್ತದೆ. ಮಕ್ಕಳ ಆರೋಗ್ಯ ಸಚಿವಾಲಯದ ಆರೋಗ್ಯ ಕಾರ್ಯಕರ್ತರು ಶಾಲೆಯ ಆರೋಗ್ಯ ತಂಡದ ಭಾಗವಾಗಿರಬಹುದು ಇಲ್ಲವೇ ಇರಲಿಕ್ಕಿಲ್ಲ.

ಮಗುವಿನ ಆರೋಗ್ಯ, ಆರಂಭವಾಗುವುದು ಹೆಣ್ಣು ಶಿಶು ಹುಟ್ಟಿದ ಬಳಿಕ. ಹೆಣ್ಣು ಶಿಶು ಭವಿಷ್ಯದ ತಾಯಿ ಎಂಬುದು ಗಮನದಲ್ಲಿರಲಿ. ಮಗುವಿನ ಆರೋಗ್ಯ ಕಾಳಜಿಯು ಜನನ ಪೂರ್ವದಲ್ಲೇ ಅಂದರೆ, ಭ್ರೂಣದ ಮೇಲೆ ಸೂಕ್ತ ನಿಗಾ ಇಡುವುದರ ಮುಖಾಂತರ ಆರಂಭವಾಗುತ್ತದೆ. 28 ದಿನಗಳ ವರೆಗೆ ನವಜಾತ ಶಿಶುಗಳ ಆರೋಗ್ಯ ರಕ್ಷಣೆ, ಒಂದು ತಿಂಗಳಿಂದ 12 ತಿಂಗಳವರೆಗಿನ ಮಕ್ಕಳ ಮೇಲಿನ ನಿಗಾ, ಒಂದರಿಂದ ಎರಡು ವರ್ಷಗಳವರೆಗಿನ ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಎರಡರಿಂದ ಶಾಲೆಗೆ ಹೋಗುವವರೆಗೆ ಮಕ್ಕಳನ್ನು ಆರೋಗ್ಯ ಗಮನಕ್ಕೆ ಸಂಬಂಧಿಸಿದಂತೆ ಕಾಳಜಿ ವಹಿಸುವುದೂ ಸೇರಿದೆ. ಮಗುವಿನ ಆರೋಗ್ಯ ಸೇವೆಗಳ ಗುರಿ, ಈ ಕೆಳಕಂಡ ಅಂಶಗಳನ್ನು ಖಾತರಿ ಪಡಿಸಿಕೊಳ್ಳುವುದೇ ಆಗಿದೆ.

  • ಪ್ರತಿ ಮಗುವೂ ಸೂಕ್ತ ಕಾಳಜಿ ಹಾಗೂ ಸೂಕ್ತ ಪೌಷ್ಟಿಕತೆಯನ್ನು ಪಡೆಯಬೇಕು
  • ಅವುಗಳ ಬೆಳವಣಿಗೆಯನ್ನು ಸಮಪರ್ಕವಾಗಿ ಗಮನಿಸಬೇಕು ಮತ್ತು ಯಾವುದೇ ವ್ಯತ್ಯಯವನ್ನು ತಕ್ಷಣ ಗುರುತಿಸಿ ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಬೇಕು.
  • ಯಾವುದೇ ಕಾಯಿಲೆಯನ್ನು ಯಾವುದೇ ವಿಳಂಬವಿಲ್ಲದೇ ಪತ್ತೆ ಹಚ್ಚಿ, ಚಿಕಿತ್ಸೆ ನೀಡಬೇಕು.
  • ತರಬೇತಿ ಹೊಂದಿದವರೇ ಚಿಕಿತ್ಸೆ ನೀಡಬೇಕು.
  • ಆರೋಗ್ಯದ ವಿಚಾರಗಳಲ್ಲಿ ತಾಯಿ ಮತ್ತು ಕುಟುಂಬ ಸದಸ್ಯರು ಸಾಕಷ್ಟು ಶಿಕ್ಷಣವನ್ನು ಪಡೆದು, ಮಗುವಿನ ಆರೋಗ್ಯವನ್ನು ರಕ್ಷಿಸಬೇಕು.

ಬಾಲ್ಯದ ವಿವಿಧ ಹಂತಗಳಲ್ಲಿ ಮಕ್ಕಳ ಆರೋಗ್ಯದ ಸಮಸ್ಯೆಗಳನ್ನು ಇಲ್ಲಿ ನೀಡಲಾಗಿದೆ.

ಭ್ರೂಣದ ಆರೈಕೆ

ಗರ್ಭಿಣಿಯರ ಆರೈಕೆಯ ಧ್ಯೇಯವೆಂದರೆ, ಆರೋಗ್ಯವಂತ, ಸಂಪೂರ್ಣವಾಗಿ ಬೆಳೆದ ಮತ್ತು ಜೀವಂತ ಮಗುವಿನ ಜನನವನ್ನು ಖಾತರಿ ಪಡಿಸಿಕೊಳ್ಳುವುದೇ ಆಗಿದೆ. ಭ್ರೂಣದ ಮೇಲೆ ಕಾಳಜಿ ವಹಿಸುವುದು ಕೇವಲ ತಾಯಂದಿರ ಆರೋಗ್ಯದ ಆರೈಕೆ ಮಾತ್ರವಲ್ಲ, ಅವರಲ್ಲಿ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಯುವುದೂ ಆಗಿದೆ. ಅಲ್ಲದೇ, ಇಂಥ ಕಾಳಜಿಯಿಂದ ಕಡಿಮೆ ತೂಕದ ಮಗುವಿನ ಜನನ, ಭ್ರೂಣದಲ್ಲಿನ ನ್ಯೂನತೆಗಳು, ನಿಯೋನಾಟಲ್ ಅಸ್ಫಿಕ್ಸಿಯಾ ಇತ್ಯಾದಿ ಸಮಸ್ಯೆಯನ್ನು ತಡೆಯಲೂ ಸಾಧ್ಯ. ಭ್ರೂಣದ ಮೇಲೆ ನಿಗಾ ಇಡುವುದು ಜನನ ಪೂರ್ವ ಮಕ್ಕಳ ಆರೋಗ್ಯ ಶಾಖೆಗೆ ಸಂಬಂಧಿಸಿದ್ದು. ಆಮ್ನಿಯೋಸೆಂಟೆಸಿಸ್, ಕೊರಿನ್ ಬಯಾಪ್ಸಿ, ಅಲ್ಟ್ರಾ ಸೋನೋಗ್ರಫಿ,
ಫೆಟೋಸ್ಕೋಪಿ ಮುಂತಾದ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳಿಂದ ಯಾವುದೇ ವೈಪರಿತ್ಯಗಳನ್ನು ಪತ್ತೆ ಹಚ್ಚಿ ಸಕಾಲಕ್ಕೆ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬಹುದು.

ಗರ್ಭದಲ್ಲಿದ್ದಾಗ ಸೂಕ್ತವಾದ ಕಾಳಜಿ ಹಾಗೂ ಪೌಷ್ಟಿಕ ಆಹಾರದ ಮೂಲಕ ಜನನದ ಸಂದರ್ಭದಲ್ಲಿ ಕಡಿಮೆ ತೂಕ ಹಾಗೂ ಇತರೇ ವೈಪರಿತ್ಯಗಳನ್ನು ತಡೆದು, ಸಹಜವಾದ ಬೆಳವಣಿಗೆಯನ್ನು ಸಾಧಿಸಬಹುದು. ಈ ಮುಂಚೆ ತಿಳಿಸಲಾಗಿರುವಂತೆ, ಕುಟುಂಬ ಯೋಜನೆಯಂತಹ ಕ್ರಮಗಳೂ ಸೇರಿದಂತೆ ಸೂಕ್ತವಾದ ನಿಗಾ ವಹಿಸುವುದು ನೆರವಾಗಬಲ್ಲದು.

ನವಜಾತ ಶಿಶುಗಳಲ್ಲಿ ಕಾಮಾಲೆ

ನಜವಾಜ ಶಿಶುಗಳ ಕಾಮಾಲೆಯ ವ್ಯಾಖ್ಯೆ

ಪಿತ್ತರಸದಿಂದಾಗಿ (ಬಿಲಿರುಬಿನ್) ಚರ್ಮ ಹಳದಿ ಬಣ್ಣಕ್ಕೆ ತಿರುವುದು ಹಾಗೂ ನವಜಾತ ಶಿಶುಗಳು ಬೆಳ್ಳಗಿರುವುದು ಸಾಧ್ಯ. ನವಜಾತ ಶಿಶುಗಳಲ್ಲಿ ಒಂದು ಹಂತದ ಕಾಮಾಲೆ ಸಾಮಾನ್ಯ. ಕೆಂಪುರಕ್ತ ಕಣಗಳ ಕಾರ್ಯ ವೈಫಲ್ಯದಿಂದಾಗಿ (ರಕ್ತದಲ್ಲಿ ಬಿಲಿರುಬಿನ್ ಬಿಡುಗಡೆ ಮಾಡುವುದು ಈ ಕಣಗಳೇ) ಹಾಗೂ ನವಜಾತ ಶಿಶುಗಳಲ್ಲಿ ಪಿತ್ತಕೋಶ ಸಮಪರ್ಕವಾಗಿ ಬೆಳವಣಿಗೆ ಹೊಂದದ ಪರಿಣಾಮವಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನವಜಾತ ಶಿಶುಗಳಲ್ಲಿ ಕಾಮಾಲೆಯು 2ರಿಂದ 5 ದಿನಗಳಲ್ಲಿ ಕಾಣಿಸಿಕೊಂಡು, ಕೆಲ ಕಾಲದ ನಂತರ ವಾಸಿಯಾಗುತ್ತದೆ.

ನವಜಾತ ಶಿಶುಗಳ ಕಾಮಾಲೆಯನ್ನು ನಿಯೋನಾಟಲ್ ಹೈಪರ್ಬಿಲಿರುಬಿನೆಮಿಯಾ ಮತ್ತು ನವಜಾತ ಶಿಶುಗಳ ಫಿಸಿಯೋಲಜಿಕ್ ಕಾಮಾಲೆ ಎಂದೂ ಕರೆಯಲಾಗುತ್ತದೆ.

ನವಜಾತ ಶಿಶುಗಳಲ್ಲಿನ ಈ ಕಾಮಾಲೆಯಿಂದ ಯಾವುದೇ ತೊಂದರೆಯಿಲ್ಲ. ಜನನದ ಎರಡನೇ ದಿನದಲ್ಲಿ ಆರಂಭವಾಗುವ ಈ ಕಾಯಿಲೆ ಸುಮಾರು 8 ದಿನಗಳ ವರೆಗೆ (ಅವಧಿಪೂರ್ವ ಮಕ್ಕಳಲ್ಲಿ 14 ದಿನ) ಕಾಡಬಲ್ಲದು.

ಬಿಲಿರುಬಿನ್ ಎಂಬ ವರ್ಣದ್ರವ್ಯವವನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಪಿತ್ತಕೋಶಕ್ಕೆ ಸಾಧ್ಯವಾಗದಿರುವುದೇ ಈ ಸಮಸ್ಯೆಗೆ ಕಾರಣ. ಬಿಲಿರುಬಿನ್ ಎಂಬುದು ಒಂದು ಹಳದಿ ವರ್ಣದ್ರವ್ಯ. ಕೆಂಪುರಕ್ತ ಕಣಗಳಿಂದ ಉತ್ಪತ್ತಿಯಾಗುವ ಇದನ್ನು ಪಿತ್ತಕೋಶ ಹಾಗೂ ಮೂತ್ರಪಿಂಡಗಳು ವಿಲೇವಾರಿ ಮಾಡುತ್ತವೆ. ಪಿತ್ತಕೋಶ ಇನ್ನೂ ಪೂರ್ಣಪ್ರಮಾಣದಲ್ಲಿ ಬೆಳೆದಿರುವುದಿಲ್ಲವಾದ್ದರಿಂದ, ಈ ವರ್ಣದ್ರವ್ಯದ ವಿಲೇವಾರಿ ಸಾಧ್ಯವಾಗದೇ, ದೇಹದಲ್ಲಿಯೇ ಸಂಗ್ರಹವಾಗುತ್ತದೆ. ಇದರಿಂದಾಗಿ, ಚರ್ಮ ಹಳದಿಯಾಗುತ್ತದೆ. ಜನನದ ಎರಡು ದಿನಗಳಿಗೆ ಹಳದಿ ಬಣ್ಣದ ಚರ್ಮ ಕಾಣಿಸಿಕೊಂಡರೆ ಗಾಬರಿಯಾಗಬೇಡಿ.

ಲಕ್ಷಣಗಳು

  • ಹಳದಿ ಚರ್ಮ
  • ಕಣ್ಣುಗಳ ಬಿಳಿ ಭಾಗದಲ್ಲಿ ಹಾಗೂ ಉಗುರಿನ ತಳಭಾಗದಲ್ಲಿ ಹಳದಿ ಬಣ್ಣ
  • ಜಾಸ್ತಿ ಹೊತ್ತು ನಿದ್ದೆ ಮಾಡುವ ಮಗು

ಚಿಕಿತ್ಸೆ

ಅಲ್ಪ ಪ್ರಮಾಣದ ಕಾಮಾಲೆಯಾಗಿದ್ದರೆ ಅದು ತನ್ನಷ್ಟಕ್ಕೆ ತಾನೇ ಕೇವಲ 10 ದಿನಗಳಲ್ಲಿ ವಾಸಿಯಾಗುತ್ತದೆ. ಆದರೆ, ಅದರ ತೀವ್ರತೆಯನ್ನು ತಗ್ಗಿಸಲು ಈ ಕೆಳಕಂಡ ಚಿಕಿತ್ಸೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು.

  • ಮಗುವಿಗೆ ಸಾಧ್ಯವಿದ್ದಷ್ಟೂ ಹೆಚ್ಚು ಬಾರಿ ಮೊಲೆಯುಣಿಸಿ
  • ಸೂರ್ಯನ ಅಪ್ರತ್ಯಕ್ಷ ಬೆಳಕಿಗೆ ಮಗುವನ್ನು ತೆರೆದಿಡಿ. ತೆಳುವಾದ ಪರದೆಯನ್ನು ಹೊಂದಿರುವ ಕಿಟಕಿಯ ಮಗ್ಗುಲಿಗೆ ಮಂಚದಲ್ಲಿಯಾದರೂ, ಅಥವಾ ತೊಟ್ಟಿಲಲ್ಲಿಯಾದರೂ ಮಗುವನ್ನು ಮಲಗಿಸಿ.
  • ಬಿಲಿರುಬಿನ್ ವಿಲೇವಾರಿ ಮಾಡುವಂಥ ಬಿಲಿ ಲೈಟ್ಸ್ ಕೆಳಗೆ ಮಗುವನ್ನು ಮಲಗಿಸಿ. ಸಾಮಾನ್ಯವಾಗಿ ನೀಲಿ ಬೆಳಕನ್ನು ಈ ಉದ್ದೇಶಕ್ಕೆ ಬಳಸಲಾಗುತ್ತದೆ. ಈ ಕೆಲಸಕ್ಕೆ ಹಸಿರು ಬೆಳಕೂ ಹೆಚ್ಚು ಸೂಕ್ತ. ಆದರೆ, ಈ ಬೆಳಕಿನಲ್ಲಿ ಮಕ್ಕಳು ರೋಗಗ್ರಸ್ತವಾಗಿ ಕಾಣುವುದರಿಂದ, ಇದನ್ನು ಸಾಮಾನ್ಯವಾಗಿ ಬಳಸುವುದಿಲ್ಲ.
  • ಕಾಮಾಲೆ ತೀವ್ರತಮವಾಗಿದ್ದರೆ, ರಕ್ತ ನೀಡಬೇಕಾಗಿ ಬರಬಹುದು.
  • ಪಿತ್ತಕೋಶವನ್ನು ಉತ್ತೇಜಿಸುವ ಕೆಲ ನಿರ್ದಿಷ್ಟ ಔಷಧಗಳನ್ನು ನೀಡಿ.

ಟಿಪ್ಪಣಿ:

ಕಾಮಾಲೆಯು ಎರಡು ವಾರಗಳಿಗೂ ಅಧಿಕ ಕಾಲಮುಂದುವರಿದರೆ, ಗ್ಯಾಲಕ್ಟೋಸೇಮಿಯಾ ಹಾಗೂ ಕಾಂಜಿನಿಚಲ್ ಹೈಪೋಥೈರಾಡಿಸಂಗಾಗಿ ನವಜಾತ ಶಿಶುವಿನ ಮೆಟಬಾಲಿಕ್ ಸ್ಕ್ರೀನ್ ತಪಾಸಣೆ ಮಾಡಬೇಕಾಗಬಹುದು. ಮಗುವಿನ ತೂಕದ ವಕ್ರರೇಖೆಯನ್ನು ಗಮನಿಸುವುದರ ಜೊತೆಗೆ ಕುಟುಂಬದ ಆರೋಗ್ಯ ಇತಿಹಾಸವನ್ನೂ ಗಮನಿಸಬೇಕಾಗುವುದು. ಮಲದ ಬಣ್ಣವನ್ನೂ ಗಮನಿಸಬೇಕು.

ಕೆಲ ಆಸಕ್ತಿದಾಯಕ ಅಂಶಗಳು

  • ಸಮೀಕ್ಷೆಯೊಂದರ ಪ್ರಕಾರ ಈ ಸಮಸ್ಯೆಯು ಹೆಣ್ಣು ಶಿಶುಗಳಿಗಿಂತ ಗಂಡು ಶಿಶುಗಳಲ್ಲೇ ಹೆಚ್ಚು. ಆದರೆ, ಇದು ಬಿಲಿರುಬಿನ್ ಉತ್ಪಾದನಾ ದರಕ್ಕೆ ಸಂಬಂಧಿಸಿದ್ದಲ್ಲ.
  • ಮಗುವನ್ನು ಪ್ರಖರವಾದ ಸೂರ್ಯನ ಬೆಳಕಿಗೊಡ್ಡುವುದರಿಂದ ಚರ್ಮದ ಮಚ್ಚೆ ಗಳುಂಟಾಗುತ್ತವೆ ಎಂದು ಫ್ರೆಂಚ್ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇವನ್ನು ಮೇಲನೋಸೈಟಿಕ್ ನೇವಿ (melanocytic naevi) ಎಂದು ವೈದ್ಯ ಪರಿಭಾಷೆಯಲ್ಲಿ ಹೇಳಲಾಗುತ್ತದೆ. ಹೀಗಾಗಿ ಬೆಳಕಿನ ಚಿಕಿತ್ಸೆಗೆ ಮಗುವನ್ನು ಒಳಪಡಿಸುವಾಗ ಸೂಕ್ತ ರಕ್ಷಣೆಯನ್ನು ಪೋಷಕರು ನೀಡಬೇಕು ಎಂದು ಸಂಶೋಧಕರು ಸಲಹೆ ನೀಡುತ್ತಾರೆ.
  • ಈ ಸಮಸ್ಯೆಗೆ ಕಾರಣವಾಗುವ ಬಿಲಿರುಬಿನ್ ಎಂಬ ವರ್ಣದ್ರವ್ಯ ಒಂದು ಬಲವಾದ ಆಂಟಿ ಆಕ್ಸಿಡೆಂಟ್ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸಾಬೀತು ಪಡಿಸಿದೆ. ಇದು ಮಕ್ಕಳ ಜೀವಕೋಶಗಳು ನಾಶವಾಗಂತೆ ತಡೆಯುತ್ತದೆ. ಆದ್ದರಿಂದ ಕಾಮಾಲೆಯು ಮಗುವಿನ ಜೀವಕೋಶಗಳ ನಾಶವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೂ, ಕಾಮಾಲೆಯನ್ನು ನಿರ್ಲಕ್ಷಿಸುವಂತಿಲ್ಲ.
  • ಜನನದ ಆರಂಭದ ದಿನಗಳಲ್ಲಿ ಮಗುವಿಗೆ ನೀರು ಕುಡಿಸಿದರೆ, ಕಾಮಾಲೆಯ ತೀವ್ರತೆ ಜಾಸ್ತಿಯಾಗುತ್ತದೆ. ಹಾಗಾಗಿ, ಮೊಲೆಯುಣಿಸುವುದೇ ಉತ್ತಮ.

Source : oneindia

ನವಜಾತ ಶಿಶುಗಳ ಕಾಳಜಿ

ಜನನವಾದ 28 ದಿನಗಳವರೆಗಿನ ಶಿಶುಗಳನ್ನು ನವಜಾತ ಶಿಶುಗಳೆನ್ನುತ್ತಾರೆ. ಈ ದಿನಗಳ ಕಾಳಜಿ ಬಲು ಮುಖ್ಯ. ಸೂಕ್ತ ಕಾಳಜಿಯು ಜನನಾನಂತರದ ಪ್ರಾಣಾಪಾಯವನ್ನು ತಪ್ಪಿಸಬಲ್ಲದು. ಈ ಕಾಳಜಿಯನ್ನು ಹೆರಿಗೆ ತಜ್ಞರು, ಮಕ್ಕಳ ತಜ್ಞರು ಹಾಗೂ ದಾದಿಯರ ತಂಡ ನೀಡಬಲ್ಲದು. ಶಿಶು ಜನನದ ಮೊದಲ ವಾರ ಅದರಲ್ಲೂ ವಿಶೇಷವಾಗಿ ಮೊದಲ 24-48 ಗಂಟೆ ತುಂಬಾ ಗಂಭೀರವಾದವು. ಈ ಅವಧಿಯಲ್ಲಿ ಸಂಭವಿಸುವ ಅಚಾತುರ್ಯಗಳು ಪ್ರಾಣಾಪಾಯದಂಥ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಲ್ಲವು. ಸರಿಯಾದ ಕಾಳಜಿಯು ಶೇ. 50-60 ಶಿಶು ಮರಣಗಳನ್ನು ತಪ್ಪಿಸಬಲ್ಲದು. ಜನನದ ಮೊದಲ ವಾರದಲ್ಲಿ ಸೂಕ್ತ ಕಾಳಜಿ ತೆಗೆದುಕೊಳ್ಳುವ ಮೂಲಕ ಶಿಶು ಮರಣದ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ (ಅರ್ಧಕ್ಕರ್ಧ) ತಗ್ಗಿಸಬಹುದು. ಜನನ ಪೂರ್ವ ಹಾಗೂ ಜನನಾನಂತರ ಮಗುವಿನ ಕಾಳಜಿಯನ್ನುಈಗಾಗಲೇ ಚರ್ಚಿಸಲಾಗಿದೆ.

ಶಿಶುಗಳು,ಮಕ್ಕಳು ಹಾಗೂ ಶಾಲಾಪೂರ್ವ ಮಕ್ಕಳ ಕಾಳಜಿ

ಶಿಶುಗಳು, ಮಕ್ಕಳು ಮತ್ತು ಶಾಲಾಪೂರ್ವ ಮಕ್ಕಳನ್ನು ಐದು ವರ್ಷಕ್ಕಿಂತ ಒಳಗಿನ ಮಕ್ಕಳ ಗುಂಪಿಗೆ ಸೇರಿಸಬಹುದು. ಇವು ಐದು ವರ್ಷದೊಳಗಿನ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯಯ ಪ್ರಮುಖ ಹಂತಗಳೂ ಹೌದು. ಈ ಗುಂಪಿನ ಎಲ್ಲ ಮಕ್ಕಳ ಆರೈಕೆಯನ್ನು ಅನುಕೂಲಕ್ಕಾಗಿ ಒಟ್ಟಿಗೆ ಚರ್ಚಿಸಲಾಗಿದೆ. ಆರೈಕೆಯು ಸತತವಾಗಿ ಒಂದು ಗುಂಪಿನಿಂದ ಇನ್ನೊಂದಕ್ಕೆ ಸಾಗವುದು. ಅರೈಕೆಯ ಅಂಶಗಳು ಒಂದೆ ಆಗಿರುವವು. ಅರೈಕೆಯನ್ನುಆರೋಗ್ಯ ಕೇಂದ್ರದಲ್ಲಿನ, ಕ್ಲಿನಿಕ್ ನಲ್ಲಿನ, ಆಸ್ಪತ್ರೆಯಲ್ಲಿನ ಒಂದೆ ತಂಡದ ಆರೋಗ್ಯ ಕಾರ್ಯಕರ್ತರು ನೀಡುವರು ಮತ್ತು ಐದು ವರ್ಷದ ಒಳಗಿನ ಮಕ್ಕಳ ಆರೈಕೆ ಎಂದೇ ಚರ್ಚಿಸಲಾಗುವುದು

ಬೆಳವಣಿಗೆ ಮತ್ತು ಅಭಿ ವೃದ್ದಿಯ ಮೇಲುಸ್ತುವಾರಿ

ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ದಿಯ ಮೇಲುಸ್ತುವಾರಿಯನ್ನು ನಿಯಮಿತವಾಗಿ ಮಾಡುವುದು ಅತಿ ಮುಖ್ಯ. ಅದು ಮಗುವಿನ ಆರೋಗ್ಯ ಮತ್ತು ಪೌಷ್ಟಿಕತೆಯ ಸ್ಥಿತಿಯನ್ನು ಸೂಚಿಸುವುದು. ಸಹಜ ಬೆಳವಣಿಗೆಮತ್ತು ಅಭಿವೃದ್ಧಿಗೆ ವ್ಯತಿರಿಕ್ತವಗಿದ್ದರೆ ಸೂಕ್ತ ಸಮಯದಲ್ಲಿ ಸರಿಪಡಿಸುವ ಕ್ರಮವನ್ನು ಕುಟುಂಬದಲ್ಲಿ ಇಲ್ಲವೆ ಅರೋಗ್ಯಕೇಂದ್ರದ ಮಟ್ಟದಲ್ಲಿ ತೆಗೆದು ಕೊಳ್ಳಬಹುದು

ಮಗುವಿನ ಬೆಳವಣಿಗೆ

ಮಗುವಿನ ಬೆಳವಣಿಗೆ ಅಂದರೆ ಮಗುವಿನ ದೇಹದ ಗಾತ್ರದಲ್ಲಿ ಆಗುವ ಬೆಳವಣಿಗೆ.ಅದನ್ನು ದೇಹದ ತೂಕ, ಎತ್ತರ (ಮಗುವಿನ ಉದ್ದ) ತಲೆ, ಕಾಲು, ಕೈ ಮತ್ತು ಎದೆಯ ಸುತ್ತಳತೆಗಳ ಮೂಲಕ ಅಳೆಯುವರು. ಈ ಅಳತೆಗಳನ್ನು ’ಅಂತ್ರೋ ಮೆಟ್ರಿಕ್ಸ’ ಅಳತೆ ಎನ್ನುವರು. ಈ ಅಳತೆಗಳನ್ನು ನಿಗದಿತ ಮಾಪನದೊಂದಿಗೆ ಹೋಲಿಸಿ ಅವು ಸಹಜ ಮಿತಿಯಲ್ಲಿ ಇರುವುದನ್ನು ಖಚಿತ ಪಡಿಸಿಕೊಳ್ಳಲಾಗುವುದು . ( + ಅಥವ-೨ ಸ್ಟ್ಯಾಂಡರ್ ಡೀವಿಯೇಷನ್) .ಅಳತೆಗಳ ನ್ನು ಪರಸೆಂಟೈಲ್ ಮೂಲಕವೂ ಅರಿಯಬಹುದು.ನಿಗದಿತ ಮಟ್ಟಕ್ಕಿಂತ ಕೆಳಗೆ ಇರುವ ಜನರ ಶೇಕಡಾ ಪ್ರಮಾಣದ ಮೂಲಕ ಗೊತ್ತಾಗುವುದು.ಉದಾ. ೫೦ ಪರಸೆಂಟೈಲನ ಮಿತಿಯು ೩ನೇ ಪರಸೆಂಟೈಲ್ ಮತ್ತು ೯೭ನೇ ಪರಸೆಂಟೈಲ ಆಗಿ ಪರಿಗಣಿಸಲಾಗಿದ. ಮಕ್ಕಳ ತೂಕವು ಈ ಎರಡು ಮಿತಿಗಳ ನಡುವೆ (೯೪%) ಇದ್ದರೆ ಅದನ್ನು ಸಹಜ ವ್ಯಾಪ್ತಿ ಯಲ್ಲಿದೆ ಎನ್ನಬಹುದು. ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್(ICMR) ವಿವಿಧ ಸ್ಥರಗಳ ಅಧ್ಯಯನದ ನಂತರ ಪರಾಮರ್ಶನಕ್ಕಾಗಿ ಪ್ರಮಾಣವನ್ನು ನಿಗದಿ ಪಡಿಸಿದೆ. WHO ಕೂಡಾ ಪರಾಮರ್ಶೆಯ ಪ್ರಮಾಣವನ್ನು ನಿಗದಿಪಡಿಸಿದೆ. ಅವನ್ನು ೫ ವರ್ಷದ ಮಕ್ಕಳಿಗಾಗಿ ಜಗತ್ತಿನ ಯಾವ ಭಾಗದಲ್ಲಾದರೂ ಬಳಸಬಹುದು

ಬೆಳವಣಿಗೆಯ ಛಾರ್ಟ ಅನೇಕ ಅನುಕೂಲಗಳನ್ನು ಹೊಂದಿದೆ. ಅದು ಈ ಕೆಳ ಕಂಡಂತೆ ಸಹಾಯಕವಾಗುವುದು. ನಿಯಮಿತವಾಗಿ ತೂಕವನ್ನು ದಾಖಲಿಸುವುದು ಮಗುವಿನ ಬೆಳವಣಿಗೆಯ ಮೆಲುಸ್ತುವಾರಿಗೆ ತಾಯಿಯ ಸಕ್ರಿಯ ಪಾಲುದಾರಿಕೆ ಪಡೆಯಲು ಸಹಾಯವಾಗುವುದು

  • ಮಕ್ಕಳಲ್ಲಿನ ಅಪೌಷ್ಟಿಕತೆಯ ಮಟ್ಟವನ್ನು ಗುರ್ತಿಸಲು
  • ನಿರ್ಧಿಷ್ಟ ಹಂತದ ಅಪೌಷ್ಟಿಕತೆಯ ನಿವಾರಣೆಗೆ ಶಿಫಾರ್ಸು ಮಾಡಿದ ಕ್ರಮ ತೆಗೆದು ಕೊಳ್ಳಲು ಸಹಾಯಕ.
  • ತಾಯಂದಿರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಿಯಮಿತ ತೂಕ ನೋಡುವುದರ ಪ್ರಾಮುಖ್ಯತೆ ಯ ಬಗ್ಗೆ ಶಿಕ್ಷಣ ನೀಡಿ ಅಪೌಷ್ಟಿಕತೆಯನ್ನು ತಡೆಯಲು ಮತ್ತು ನಿಯಂತ್ರಿಸಲು ಅನುಕೂಲ
  • ಮಕ್ಕಳಲ್ಲಿನ ಅಪೌಷ್ಟಿಕತೆಯ ಮಟ್ಟವನ್ನು ತಡೆಯುವ ಕ್ರಮಗಳು ಪರಿಣಾಮಕಾರಿಯಾಗಿವೆಯಾ ಎಂಬುದರ ಮೌಲ್ಯ ಮಾಪನ ಮಾಡಬಹು

ಬೆಳವಣಿಗೆಯ ಕ್ರಮ

ಮಕ್ಕಳ ಬೆಳವಣಿಗೆಯು ವಯೋಮಾನಕ್ಕೆ ಅನುಗುಣವಾಗಿ ವಿಭಿನ್ನ ರುವುದು ಮತ್ತು ಪ್ರತಿ ವಯಸಿನ ಗುಂಪಿಗೆ ಬೇರೆ ಆಗಿರಬಹುದು. ಅದು ದೇಹದ ಒಳಗಿನ ಮತ್ತು ಹೊರಗಿನ ಅಂಶಗಳ ಮೇಲೆ ಅವಲಂಬಿಸಿದೆ.ಮಕ್ಕಳ ಬೆಳವಣಿಗೆಯು ನಿರ್ಧಿಷ್ಟ ವಿನ್ಯಾಸ / ಕೋರ್ಸ ಅನ್ನು ಅಂತ್ರೋಪೊಮೆಟ್ರಿಕ್ ಮಾಪನಗಳ ಪ್ರಕಾರ ಅನುಸರಿಸಿರಬಹುದು.ಅದನ್ನು ಕೆಳಗೆ ಚಿಕ್ಕದಾಗಿ ಚರ್ಚಿಸಿದೆ. ಸಾಮಾನ್ಯ, ಆರೋಗ್ಯ ವಂತ,ಪುಷ್ಟಿಯಾದ ಮಕ್ಕಳಲ್ಲಿ ಬೆಳವಣಿಗೆಯು ಜೀವನದ ಮೊದಲ ವರ್ಷದಲ್ಲಿಯೇ ಶೀಘ್ರವಾಗಿ ಆಗುತ್ತದೆ

ತೂಕ : ಬಹುತೇಕ ಎಲ್ಲ ಮಕ್ಕಳು ಹುಟ್ಟಿದ ೩-೪ ದಿನಗಳಲ್ಲಿ ತೂಕ ಕಳೆದುಕೊಳ್ಳುತ್ತವೆ. ಮತ್ತು೭ರಿಂದ ೧೦ ದಿನಗಳಲ್ಲಿ ಪುನಃ ತೂಕ ಗಳಿಸುತ್ತವೆ. ಅವುಮೊದಲ ಮೂರು ತಿಂಗಳ ತನಕ ಗಳಿಸುವ ತೂಕ ದಿನಕ್ಕೆ ೨೫ರಿಂದ ೩೦ಗ್ರಾಂ ಆಗಿರುವುದು. ಸಾಮಾನ್ಯವಾಗಿ ಮಗುವಿನ ತೂಕ ೩ ತಿಂಗಳಲ್ಲಿ ಎರಡು ಪಟ್ಟು ಮತ್ತು ಒಂದು ವರ್ಷದಲ್ಲಿ ಮೂರು ಪಟ್ಟು ಆಗುವುದು.ಹುಟ್ಟಿದಾಗಲೆ ಕಡಿಮೆ ತೂಕವಿರುವ ಮಕ್ಕಳು ಮಾತ್ರ ಹಾಗಿರುವುದಿಲ್ಲ. ಹುಟ್ಟಿನಿಂದಲೆ ಕಡಿಮೆ ತೂಕದ ಮಕ್ಕಳ ತೂಕ ಬೇಗನೆ ಎರಡುಪಟ್ಟಾಗುವುದು. ಒಂದುವರ್ಷದಲ್ಲಿ ನಾಲಕ್ಕು ಪಟ್ಟಾಗುವುದು. ಒಂದು ವರ್ಷದ ನಂತರ ಬೆಳವಣಿಗೆಯ ವೇಗ ಕಡಿಮೆಯಾಗುವುದು.

ತೂಕದ ಗ್ರಾಫ್ ರೇಖೆಯು ಅನೇಕ ಮಕ್ಕಳಲ್ಲಿ ಮೊದಲ ೫-೬ ತಿಂಗಳಲ್ಲಿ ತುಂಬ ಚೆನ್ನಾಗಿರುವುದು.ತೂಕ ಆ ಅವಧಿಯಲ್ಲಿ ದ್ವಿಗುಣವಾಗುವುದು. ನಂತರ ಅದರಲ್ಲಿ ಅಡೆ ತಡೆ ಕಾಣುವುದು. ಇದಕ್ಕೆ ಕಾರಣ ಮಗುವಿಗೆ ಎದೆ ಹಾಲು ಸಾಕಾಗುವುದಿಲ್ಲ. ಅದರ ಜತೆ ಹೆಚ್ಚುವರಿ ಆಹಾರವನ್ನು ಈಗಾಗಲೇ ಚರ್ಚಿಸಿದಂತೆ ನೀಡಬೇಕಾಗುವುದು.
ಮಗುವಿನ ತೂಕವು ಅದರ ಎತ್ತರವನ್ನು ಅವಲಂಬಿಸಿದೆ. ಮಗುವಿನ ತೂಕವು ಸಹಜ ವ್ಯಾಪ್ತಿಯಲ್ಲಿ ಇದೆಯೋ ಇಲ್ವೋ ಎಂಬುದನ್ನು ಅರಿಯುವುದು ಅತಿ ಅಗತ್ಯ. ಅದರ ಎತ್ತರದ ಪ್ರಕಾರ ಮಗುವು ಹೆಚ್ಚು ತೂಕದ್ದಾಗಿರಬಹುದ ಇಲ್ಲವೇ ಕಡಿಮೆ ತೂಕದ್ದಾಗಿರಬಹುದು. ಅತಿ ಕಡಿಮೆ ತೂಕದ್ದಾಗಿದ್ದರೆ ಅದು ಅಪೌಷ್ಟಿಕ ಆಹಾರದ ಸೂಚಕವಾಗಿರುವುದು.

ಎತ್ತರ ಎತ್ತರವು ಮಗುವಿನ ಬೆಳವಣಿಗೆಯನ್ನು ಅರಿಯುವ ಒಂದು ಅಂಶವಾಗಿದೆ. ನವಜಾತ ಶಿಶುವಿನ ಎತ್ತರವು ೫೦ಸೆ. ಮೀ, ( ೨೦ ಇಂಚು) ಇರವುದು. ಮೊದಲ ವರ್ಷದಲ್ಲಿ ೨೫ಸೆ.ಮೀ, ಎರಡನೆ ವರ್ಷದಲ್ಲಿ ೧೨ ಸೆ.ಮೀ ಬೆಳೆಯುವುದು. ೩ನೇ, ೪ನೇ,ಮತ್ತು ೫ನೇ ವರ್ಷದಲ್ಲಿ ಕ್ರಮವಾಗಿ ೯ಸೆಂ.ಮಿ, ೭ಸೆಂ.ಮೀ ಮತ್ತು ೬ ಸೆಂ.ಮೀ.ಬೆಳೆಯಬೇಕು. ಎತ್ತರವು ವಯಸ್ಸಿಗೆ ಅನುಗುಣವಾಗಿಲ್ಲದಿದ್ದರೆ ಅದನ್ನು ಕುಂಠಿತ ಬೆಳವಣಿಗೆ ಎನ್ನುವರು. ಎತ್ತರವು ತೂಕದಂತೆ ಅಪೌಷ್ಟಿಕತೆಯಿಂದ ಭಾದಿತವಾಗುವುದಿಲ್ಲ. ದೀರ್ಘಕಾಲದ ಅಪೌಷ್ಟಿಕತೆಯು ಮಾತ್ರ ಪರಿಣಾಮ ಬೀರಬಹುದು. ಎತ್ತರವನ್ನು ಖಚಿತವಾಗಿ ದಾಖಲು ಮಾಡುವುದು ಅತಿ ಮುಖ್ಯ.

ತಲೆಯ ಸುತ್ತಳತೆ ಮತ್ತು ಎದೆಯ ಸುತ್ತಳತೆ ಇವು ಕೂಡಾ ಬೆಳವಣಿಗೆಯನ್ನು ಅಳೆಯುವ ಮಾಪಕಗಳು.ಹುಟ್ಟಿದಾಗ ತಲೆಯ ಸುತ್ತಳತೆಯು ಸುಮಾರು ೩೪ ಸೆಂ.ಮಿ (೧೪” )ಇರುವುದು. ಅದು ಎದೆಯ ಸುತ್ತಳತೆಗಿಂತ ೨ ಸೆಂ.ಮಿ ಹೆಚ್ಚಾಗಿರುವುದು. ಎದೆಯ ಸುತ್ತಳತೆಯು ಕ್ರಮೇಣ ಹೆಚ್ಚುತ್ತಾ ಹೋಗಿ ತಲೆಯ ಸುತ್ತಳತೆಗಿಂತ ಹೆಚ್ಚಾಗುವುದು. ಮಗುವಿಗೆ ಅಪೌಷ್ಟಿಕತೆ ಇದ್ದರೆ ಎದೆಯ ಸುತ್ತಳತೆಯು ತಲೆಯ ಸುತ್ತಳತೆಯನ್ನು ಮೀರಲು ೩-೪ ವರ್ಷ ತಡವಾಗಬಹುದು.

ಕೈ ಮಧ್ಯದ ಸುತ್ತಳತೆ ಇದು ಬಹು ಸರಳವಾದ ಮತ್ತು ಉಪಯಕ್ತವಾದ ಅಳತೆ ಕೈನ ಮೇಲ್ಭಾಗದ ಮಧ್ಯದ ಅಳತೆಯನ್ನು ಕೈಅನ್ನು ದೇಹದ ಪಕ್ಕದಲ್ಲಿ ಇಳಿಬಿಟ್ಟಾಗ ಮಾಡಬೇಕು. ಅಳತೆ ಟೇಪನ್ನು ಮೆತ್ತಗೆ ತೋಳಿನ ಮಧ್ಯಬಾಗದಲ್ಲಿ ಹಿಡಿದು ಅಳೆಯಬೇಕು. ಹುಟ್ಟಿದ ಮೊದಲವ ರ್ಷದಲ್ಲಿ ತೀವ್ರ ಬೆಳವಣಿಗೆ ಇರುವುದು. ಹೆಚ್ಚಳವು ೧೧-೧೨ ಸೆಂ.ಮಿ ಆಗಬಹುದು. ೫ ರ್ಷದವರೆಗೆ ಇದು ಆರೋಗ್ಯವಂತ ಮಗುವಿನಲ್ಲಿ೧೬-೧೭ ಸೆಂ.ಮಿ ಅಗುವುದು. ಈ ಅವಧಿಯಲ್ಲಿ ಶೈಶವದ ಕೊಬ್ಬಿನ ಬದಲಾಗಿ ಸ್ನಾಯುಗಳು ಬರುವವು. ಅಳತೆಯು ಸಹಜವಾದುದಕ್ಕಿಂತ ೮೦%ನ ಒಳಗೆ ಇದ್ದರೆ ಅಂದರೆ ೧೨.೮ ಸೆಂ.ಮಿ ಇದ್ದರೆ ಅದು ಸಾಧಾರಣ ದಿಂಧ ತೀವ್ರ ಅಪೌಔಷ್ಟಿಕತೆಯ ಸಂಕೇತ. ತೋಳಿನ ಸುತ್ತಳತೆ ಅಳೆಯಲು ಬಣ್ಣದ ಸ್ಟ್ರಿಪ್ ಸಿಗುತ್ತದೆ.

ಮಗುವಿನ ಅಭಿವೃದ್ಧಿ

ಮಗುವಿನ ಅಭಿವೃದ್ಧಿಯು ಬೌದ್ಧಿಕ, ಭಾವನಾತ್ಮಕ,ಮತ್ತು ಸಾಮಾಜಿಕ ಕೌಶಲ್ಯಗಳು ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಅದು ಮಾನಸಿಕ, ವರ್ತನೆಯ ಆಭಿವೃದ್ಧಿಯನ್ನು ಸೂಚಿಸುವುದು. ಅದ್ದರಿಂದ ಮಗುವಿನ ಬೆಳವಣಿಗೆಯ ವಿಧಾನವನ್ನು ಮೇಲು ಸ್ತುವಾರಿ ಮಾಡುವುದು ಮಾತ್ರ ಅಲ್ಲ ಅವರ ಅಭಿವೃದ್ಧಿಯನ್ನೂ ಗಮನಿಸಭೇಕು. ಅದಕ್ಕೆ ಅಭಿವೃದ್ಧಿಯ ಅತಿ ಪ್ರಮುಖ ಹೆಗ್ಗುರುತುಗಳ, ಮೈಲಿ ಕಲ್ಲುಗಳ ಪರಿಚಯ ಹೊಂದಿರುವುದು ಅಗತ್ಯ. ಸಾಧನೆಯ ಮೈಲುಗಲ್ಲುಗಳಿಗೂ ಒಂದು ಸಹಜ ವ್ಯಾಪ್ತಿ ಇದೆ. ಆದುದರಿಂದ ಸಾಧನೆಯ ಮೈಲುಗಳು ಮಕ್ಕಳಲ್ಲಿ ವಿಭಿನ್ನವಾಗಿರುತ್ತವೆ. ಆರೋಗ್ಯ ಕಾರ್ಯ ಕರ್ತರು ಬೆಳವಣಿಗೆ ಮತ್ತ್ತುಸಾಧನೆಯ ಮೈಲುಗಳಲ್ಲುಗಳನ್ನು ಪರಿಶೀಲಿಸ ಬೇಕು. ತಾಯಂದಿರಿಗೆ ಮತ್ತು ಕುಟುಂಬದ ಸದಸ್ಯರಿಗೆ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಶಿಕ್ಷಣ ನೀಡಬೇಕು. ಆಗ ಅವರೂ ಮಕ್ಕಳಲ್ಲಿ ಆರೋಗ್ಯಪೂರ್ಣ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮಾರ್ಗದರ್ಶನ ಮಾಡಬಹುದು.
ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯು ಅನೇಕ ಅಂಶಗಳಿಂದ ಪ್ರಭಾವಿತವಾಗುವುದು. ಆ ಅಂಶಗಳು ಹೀಗಿವೆ:

ಜೈವಿಕವಾಗಿ ಬಂದ ಜೆನೆಟಿಕ್ ಇನಹೆರಿರಟೆನ್ಸ, ವಯಸ್ಸು, ಲಿಂಗ, ತಾಯಿಯ ಪೌಷ್ಟಿಕತೆ,ಮತ್ತು ಜನನದ ನಂತರ ಮಗುವಿನ ಪೌಷ್ಟಿಕತೆ. ; ಭೌತಿಕ ಪರಿಸರಗಳಾದ, ಒಳ್ಳೆಯಗೃಹ ಪರಿಸ್ಥಿತಿ, ಬೆಳಕು, ಸುರಕ್ಷಿತಕುಡಿಯುವ ನೀರು, ಸೋಂಕುಗಳಾದ ವಿರೇಚನ ಮೊದಲಾದ ರೋಗಗಳ ತಡೆ ಮತ್ತು ನಿಯಂತ್ರಣ ಇತ್ಯಾದಿ . ಕುಟುಂಬ ಕಲ್ಯಾಣದ ಭಾಗಗಳಾದ ಕುಟುಂಬದ ಗಾತ್ರ, ಜನನದ ಕ್ರಮ, ಜನನದ ನಡುವಿನ ಅಂತರ, ಗರ್ಭಿಣಿಯ ಆರೈಕೆ ಇತ್ಯಾದಿ- ಬಹುಮಟ್ಟಿಗೆಈ ಎಲ್ಲ ಅಂಶಗಳು ಕುಟುಂಬದ, ವಿಶೇಷವಾಗಿ ಮಹಿಳೆಯ ಸಾಮಾಜಿಕ- ಆರ್ಥಿಕ ಸ್ಥಿತಿಯ ಪ್ರಭಾವದ ಅಡಿಯಲ್ಲಿ ಬರುತ್ತವೆ. ಸಹಜವಾದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಈ ಎಲ್ಲ ಅಂಸಗಳನ್ನೂ ಪರಿಗಣಿಸುವುದು ಅಗತ್ಯ. ಇವು ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ನೇರ ಪ್ರಭಾವ ಬೀರುತ್ತವೆ

ಮೂಲ:  ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate