ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಕ್ಕಳ ಆರೋಗ್ಯ / ಸ್ತನ್ಯಪಾನದ ಉಪಯೋಗಗಳು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸ್ತನ್ಯಪಾನದ ಉಪಯೋಗಗಳು

ಇದು ನವಜಾತ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಸ್ತನ್ಯಪಾನದ ರಕ್ಷಣೆ, ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯವನ್ನು ಒತ್ತಿ ಹೇಳುತ್ತವೆ.

ಎದೆಹಾಲೂಡಿಸುವ ಉಪಯೋಗಗಳು

 • ಎದೆಹಾಲು ಪೌಷ್ಟಿಕ ಆಹಾರವಷ್ಟೇ ಅಲ್ಲ- ಅದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ:
 • ಮಗುವಿನ ಮೊದಲ ಆರು ತಿಂಗಳ ಕಾಲ ಕೇವಲ ನಿಮ್ಮ ಎದೆಹಾಲನ್ನಷ್ಟೇ ನೀಡುವುದು ಒಳ್ಳೆಯದು. ಇದು ವಾಂತಿ ಬೇಧಿ ಸಮಸ್ಯೆಯಿಂದ ಮಗುವನ್ನು ರಕ್ಷಿಸುತ್ತದೆ. ಅದನ್ನು ಜೀರ್ಣಿಸಿಕೊಳ್ಳುವುದು ಸುಲಭ. ಇದರಿಂದ ಮಲಬದ್ಧತೆಯುಂಟಾಗುವುದಿಲ್ಲ. ಅಲ್ಲದೆ ಮಗುವನ್ನು ವಾಂತಿಬೇಧಿಯಿಂದ ರಕ್ಷಿಸುತ್ತದೆ.
 • ಎದೆ ಹಾಲೂಡಿಸುವುದರಿಂದ ಅದು ಅಸ್ತಮಾ ಮತ್ತು ಕಿವಿಯ ಸೋಂಕಿನಿಂದ ಮಗುವನ್ನು ರಕ್ಷಿಸುತ್ತದೆ—ಮೂಗು ಮತ್ತು ಬಾಯಿಯಲ್ಲಿ ಲೋಳೆ ಪದರವನ್ನು ಸೃಷ್ಟಿ ಮಾಡುವ ಮೂಲಕ ಅದು ಸೋಂಕನ್ನು ದೂರವಿಡುತ್ತದೆ.
 • ಹಸುವಿನ ಹಾಲು ಅನೇಕ ಮಕ್ಕಳಲ್ಲಿ ಅಲರ್ಜಿಗೆ ಕಾರಣವಾಗಬಹುದು. ಎದೆಹಾಲು ನೂರಕ್ಕೆ ನೂರರಷ್ಟು ಸುರಕ್ಷಿತ.
 • ಎದೆ ಹಾಲು ಕುಡಿದ ಮಕ್ಕಳು ಮುಂದಿನ ವರ್ಷಗಳಲ್ಲಿ ಧಡೂತಿ ದೇಹದವರಾಗುವ ಸಾಧ್ಯತೆ ಕಡಿಮೆ- ತಮಗೆ ಬೇಕಾದಷ್ಟನ್ನು ಮಾತ್ರ ಕುಡಿದು ಚಿಕ್ಕ ವಯಸ್ಸಿನಿಂದಲೇ ಹೆಚ್ಚಿನ ತೂಕವನ್ನು ಹೊಂದುವುದಿಲ್ಲ.
 • ಸ್ತನ್ಯಪಾನ ಮಾಡಿದ ಮಕ್ಕಳಲ್ಲಿ ಮುಂದಿನ ಜೀವನದಲ್ಲಿ ರಕ್ತ ಕ್ಯಾನ್ಸರ್‌, ಟೈಪ್‌ ೧ ಡಯಾಬಿಟಿಸ್‌ ಮತ್ತು ಏರು ರಕ್ತದೊತ್ತಡಗಳಿಂದ ಬಳಲುವುದು ಕಡಿಮೆ.ಎದೆಹಾಲಿನಿಂದ ಮಕ್ಕಳ ಬುದ್ದಿಮತ್ತೆ ಹೆಚ್ಚಾಗತ್ತ, ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕ ಬೆಸುಗೆಯಾಗುವುದಂರಿ ಹೀಗಾಗುತ್ತದೆ. ಅಲ್ಲದೆ ಅನೇಕ ಬಗೆಯ ಫ್ಯಾಟಿ ಆಸಿಡ್‌ಗಳು ಮಗುವಿನ ಬುದ್ದಿಮತ್ತೆ ಬೆಳೆಯಲು ಕಾರಣವಾಗತ್ತೆ..
 • ಗರ್ಭಧಾರಣೆಯ ಅವಧಿಯಲ್ಲಿ ತೂಕ ಹೆಚ್ಚಾಗಿದ್ದ ಮಹಿಳೆಯು ಮಗುವಿಗೆ ಹಾಲೂಡಿಸುವುದರಿಂದ ಸಾಮಾನ್ಯ ಸ್ಥಿತಿಗೆ ಬರುತ್ತಾರೆ. ಅಲ್ಲದೆ ಸ್ಟ್ರಸ್‌ ಮತ್ತು ಹೆರಿಗೆಯನಂತರದ ರಕ್ತಸ್ರಾವವನ್ನು ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ.
 • ಸ್ತನ ಮತ್ತು ಅಂಡಾಣು ಕ್ಯಾನ್ಸರ್‌ ಗಳ ಅಪಾಯವನ್ನು ಕಡಿಮೆ ಮಾಡತ್ತೆ.
 • ಎದೆಹಾಲೂಡಿಸುವುದು ಕಡಿಮೆ ಖರ್ಚಿನ, ಅನುಕೂಲಕರವಾದ ವಿಧಾನ ದುಬಾರಿ ಫರ್ಮುಲಾಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಖರ್ಚಿನದ್ದು ಎದೆಹಾಲು. ಮಗುವಿನೊಂದಿಗೆ ತಾಯಿಗೆ ಭಾವನಾತ್ಮಕ ಅನುಬಂಧ ಬೆಳೆಯುತ್ತದೆ.
 • ಮಗುವಿನ ದೈಹಿಕ ಸಂಪರ್ಕದಿಂದ ಮಗುವಿಗೆ ಆನಂದವಾಗುತ್ತದೆ.

ಮಗುವಿಗೆ ಎಂದಿನಿಂದ ಎದೆಹಾಲೂಡಿಸಲು ಆರಂಭಿಸಬೇಕು ?

ಮಗು ಹುಟ್ಟಿದ ತಕ್ಷಣವೇ ಮಗುವಿಗೆ ಎದೆಹಾಲೂಡಿಸಲು ಆರಂಭಿಸಬೇಕು. ಮಗುವನ್ನು ಬಟ್ಟೆಯಿಂದ ಸುತ್ತುವ ಮೊದಲೇ (ಮಗುವನ್ನು ಒರೆಸಿದ ನಂತರ ತಾಯಿಯ ಎದೆಯ ಹತ್ತಿರ ಹಿಡಿಯ ಬೇಕು, ತಾಯಿ ಮಗುವಿನ ನಡುವೆ ಸಂಪರ್ಕವೇರ್ಪಡಬೇಕು. ಇದು ಎದೆಹಾಲು ಸರಾಗವಾಗಿ ಹರಿಯುವುದನ್ನು ಪ್ರಚೋದಿಸುತ್ತದೆ. ಅಲ್ಲದೆ ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ನಂಟು ಬೆಳೆಯಲು ಸಹಾಯಕವಾಗುತ್ತದೆ.

ಮಗುವಿಗೆ ಎದೆಹಾಲೂಡಿಸುವುದನ್ನು ಬೇಗ ಆರಂಭಿಸಬೇಕು ಏಕೆ?

ಅದಕ್ಕೆ ನಾಲ್ಕು ಪ್ರಮುಖ ಕಾರಣಗಳಿವೆ:

 • ಮಗುವು ಮೊದಲ ೩೦ ರಿಂದ ೬೦ ನಿಮಿಷಗಳ ಕಾಲ ಅತ್ಯಂತ ಚಟುವಟಿಕೆಯಿಂದ ಇರುತ್ತದೆ
 • ಈ ಸಮಯದಲ್ಲಿ ಮಗುವಿನ ಹೀರುವಿಕೆಯ ಪ್ರತಿಕ್ರಿಯೆ ಅತ್ಯಂತ ಹೆಚ್ಚಿರುತ್ತದೆ.
 • ಬೇಗ ಶುರುಮಾಡಿದಷ್ಟು ಯಶಸ್ವಿ ಎದೆಹಾಲೂಡಿಸುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕೊಲಸ್ಟ್ರ, ಅಂದರೆ ಮೊದಲ ಹಾಲು ಎದೆಯಿಂದ ಬರುವ ಹಳದಿ ದ್ರವಕ್ಕೆ ಸೋಂಕುಗಳಿಂದ ಮಗುವನ್ನು ರಕ್ಷಿಸುವ ಶಕ್ತಿಯಿದೆ. ಇದು ಬಹುತೇಕ ರೋನಿರೋಧಕ ಲಸಿಕೆ ಇದ್ದಂತೆ.
 • ಇದರಿಂದ ಎದೆ ಬಾವು, ನೋವು ಬರುವುದಿಲ್ಲ ಮತ್ತು ಹೆರಿಗೆಯ ನಂತರದ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.

ಸಿಸೇರಿನ್‌ ಸೆಕ್ಷನ್‌ ಹೆರಿಗೆಯಾದ ಮಹಿಳೆಯರು ಮಗುವಿಗೆ ಎದೆಹಾಲೂಡಿಸಬಹುದೇ ?

ಸಿಸೇರಿನ್‌ ಸೆಕ್ಷನ್‌ ಹೆರಿಗೆಯಾದ ಮಹಿಳೆಯರು ಮಗುವಿಗೆ ಎದೆಹಾಲೂಡಿಸಬಹುದೇ?

 • ಶಸ್ತ್ರಚಿಕಿತ್ಸೆಯಾದ ನಾಲ್ಕುತಾಸುಗಳ ನಂತರ ಎದೆಹಾಲೂಡಿಸಬೇಕು ಅಥವಾ ಅರವಳಿಕೆಯ ಪ್ರಭಾವ ಕಡಿಮೆಯಾದ ನಂತರ ಹಾಲೂಡಿಸಿ
 • ನೀವು ಮಲಗಿಯೇ ಒಂದು ಕಡೆ ಹೊರಳಿ ಮತ್ತು ಹಾಲೂಡಿಸಲು ಪ್ರಾರಂಭಿಸಿ, ಅಥವಾ ನಿಮ್ಮ ಹೊಟ್ಟೆಯ ಮೇಲೆ ಮಲಗಿಸಿಕೊಂಡು ಹಾಲೂಡಿಸಿ.
 • ಸಿಸರಿನ್‌ ಸೆಕ್ಷನ್‌ ಹೆರಿಗೆಯಾದ ಎಲ್ಲ ಮಹಿಳೆಯರು ಯಶಸ್ವಿಯಾಗಿ ಹಾಲೂಡಿಸಬಹುದು.

ಮಗುವಿಗೆ ಎಷ್ಟು ಕಾಲದವರೆಗೆ ಹಾಲೂಡಿಸಬೇಕು ?

ಮಗುವಿಗೆ ಆರು ತಿಂಗಳು ತುಂಬುವವರೆಗೆ ಬರಿ ಎದೆಯ ಹಾಲನ್ನೇ ಕುಡಿಸಬೇಕು. ನಂತರ ಮಗುವಿಗೆ ಎರಡು ವರ್ಷಗಳು ಅಥವಾ ಅದಕ್ಕೂ ಹೆಚ್ಚುಕಾಲ ಎದೆಹಾಲೂಡಿಸಬಹುದು.

ಮಗುವಿಗೆ ಹಾಲೂಡಿಸಿದ ಮೇಲೂ ಹಾಲು ಸೋರುತ್ತಿದ್ದರೆ ಏನು ಮಾಡಬೇಕು ?

ಇದು ಅತ್ಯಂತ ಸಹಜ ಮತ್ತು ತಾತ್ಕಾಲಿಕವಾದ ಸಮಸ್ಯೆ. ಹಾಗೊಂದು ವೇಳೆ ಸೋರುತ್ತಿದ್ದರೆ ನಿಮ್ಮ ಭುಜವನ್ನು ಎದೆಯ ಹೊರವಲಕ್ಕೆ ಒತ್ತಿಕೊಳ್ಳಿ. ಇದರಿಂದ ಹಾಲು ಸೋರುವುದು ಕಡಿಮೆಯಾಗಬಹುದು.

ತಾನು ಅನಾರೋಗ್ಯಪೀಡಿತಾಗಿದ್ದಾಗ್ಯೂ ಕೂಡ ತಾಯಿ ಮಗುವಿಗೆ ಹಾಲೂಡಿಸಬಹುದೇ ?

ಹೌದು. ಬಹುತೇಕ ರೋಗಗಳು ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ. ಟೈಫಾಯ್ಡ್‌, ಮಲೇರಿಯಾ, ಕ್ಷಯ, ಜಾಂಡೀಸ್‌ ಅಥವಾ ಕುಷ್ಠರೋಗಗಳಿದ್ದಾಗಲೂ ಎದೆಹಾಲೂಡಿಸುವುದನ್ನು ನಿಲ್ಲಿಸುವ ಅಗತ್ಯವಿಲ್ಲ.

ವಿಶ್ವಸ್ತನ್ಯಪಾನ ಸಪ್ತಾಹ (೧-೭ನೇ ಆಗಸ್ಟ್‌ ೨೦೦೯)

ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಮಕ್ಕಳ ಆರೋಗ್ಯವನ್ನು ವಿಶ್ವದ ೧೨೦ಕ್ಕೂ ಹೆಚ್ಚು ದೇಶಗಳಲ್ಲಿ ಆಗಸ್ಟ್‌ ೧-೭ನೇ ತಾರೀಖಿನಂದು ಜಾಗತಿಕ ಸ್ತನ್ಯಪಾನ ಸಪ್ತಾಹ ವನ್ನು ಆಚರಿಸಲಾಗುತ್ತದೆ. ಸ್ತನ್ಯಪಾನದ ರಕ್ಷಣೆ, ಪ್ರೋತ್ಸಾಹ ಮತ್ತು ಬೆಂಬಲಿಸಲು ೧೯೯೦ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ನ ನೀತಿನಿರೂಪಕರು ಹೊರಡಿಸಿದ ಘೋಷಣೆಯ ಸ್ಮರಣಾರ್ಥ ಈ ಸಪ್ತಾಹವನ್ನು ಆಚರಿಸಲಾಗುತ್ತದೆ. ’

ನವಜಾತ ಶಿಶುಗಳಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನೂ ಕೊಡುವ ಅತ್ಯತ್ತಮ ವಿಧಾನ ಎದೆಹಾಲೂಡಿಸುವುದು. ನವಜಾತ ಶಿಶುವಿಗೆ ಆರುತಿಂಗಳಾಗುವವರೆಗೆ ಎದೆಹಾಲನ್ನು ಮಾತ್ರವಷ್ಟೆ ನೀಡುವಂತೆ ಡಬ್ಲ್ಯುಎಚ್‌ಒ ಹೇಳುತ್ತದೆ. ನಂತರವೂ ಹೆಚ್ಚುವರಿ ಆಹಾರವನ್ನು ನೀಡುತ್ತಾ ಎದೆಹಾಲು ನೀಡುವುದನ್ನು ಮಗುವಿಗೆ ಎರಡು ವರ್ಷಗಳಾಗುವವರೆಗೆ ಅಥವಾ ಅದಕ್ಕಿಂತಲೂ ಹೆಚ್ಚುಕಾಲ ಮುಂದುವರಿಸಬಹುದು.

೨೦೦೯ ಸ್ತನ್ಯಪಾನ ಸಪ್ತಾಹದ ವಿಷಯವೆಂದರೆ “ಸ್ತನ್ಯಪಾನ- ಒಂದು ಪ್ರಮುಖ ತುರ್ತು ಪ್ರತಿಕ್ರಿಯೆ. ನೀವು ಸಿದ್ಧರಿದ್ದೀರಾ” ಇದು ನವಜಾತ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಸ್ತನ್ಯಪಾನದ ರಕ್ಷಣೆ, ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯವನ್ನು ಒತ್ತಿ ಹೇಳುತ್ತವೆ.

ಅತಿಸಾರ ಮತ್ತು ನ್ಯಮೊನಿಯಾದಂತಹ ರೋಗಗಳಲ್ಲಿ ಎಳೆಯ ಮಕ್ಕಳು ಅತ್ಯಂತ ಅಪಾಯಕ್ಕೊಳಪಡುತ್ತಾರೆ. ತುರ್ತು ಸಮಯದಲ್ಲಿ

ತುರ್ತು ಪರಿಸ್ಥಿತಯಲ್ಲಿ ಕೇಳದೆ ಅಥವ ನಿಯಂತ್ರಣವಿರದ ದಾನ ಬಂದ ಎದೆಹಾಲಿನ ಪರ್ಯಾಯಗಳು ಎದೆಹಾಲು ನೀಡುವುದನ್ನು ನಗಣ್ಯ ಮಾಡಬಹುದು. ಅಂಥಹವನ್ನು ನಿವಾರಿಸಿ

ಹೆಚ್ಹಿನ ಮಾಹಿತಿಗಾಗಿ : http://worldbreastfeedingweek.org

3.03846153846
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top