- ಪ್ರತಿದಿನವೂ ಒಂದೇ ಶಿಸ್ತುಬದ್ಧ ದಿನಚರಿ ಇರುವಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು.
- ದಿನಂಪ್ರತಿ ಬೇಗ ಮಲಗಿ ಬೇಗ ಏಳಬೇಕು, ಮಲಗುವಾಗ ಎಡಮಗ್ಗುಲಿನಿಂದ ಮಲಗಿ ಬಲ ಮಗ್ಗುಲಿನಿಂದಲೇ ಏಳಬೇಕು.
- ಹಾಸಿಗೆ ತುಂಬಾ ದಪ್ಪವಿರದೇ ದಿಂಬು ತೆಳ್ಳಗಿರಬೇಕು. ತುಂಬಾ ಹೊದ್ದು ಮಲಗಬಾರದು.
- ಬೆಳಗ್ಗೆ ಎದ್ದು ತಕ್ಷಣ ಬಾಯಿತೊಳೆದು ಒಂದು ಲೋಟ ತ್ರಾಮದ ಪಾತ್ರೆಯಲ್ಲಿ ನೀರು ಸೇವಿಸಿರಿ.
- ಮಲಮೂತ್ರ ವಿಸರ್ಜನೆ ನಂತರ ಕನಿಷ್ಠ ಅರ್ಧ ಗಂಟೆಯಿಂದ 1 ಗಂಟೆಯವರೆಗೆ ವೈಯಕ್ತಿಕ ಅಥವಾ ಸಾಮೂಹಿಕ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ ಹಾಗೂ ಸೂರ್ಯ ನಮಸ್ಕಾರ ಮಾಡುವುದು ಒಳಿತು.
- ಶಾರೀರಿಕ ಕ್ರಿಯೆಯ ನಂತರ ಸ್ನಾನ ಕಡ್ಡಾಯ. ಸ್ನಾನವನ್ನು ನಿತ್ಯ ತಲೆಯಿಂದಲೇ ಮಾಡಬೇಕು. ತುಂಬಾ ಬಿಸಿ ನೀರು ಮಾಡಬಾರದು. ಸ್ನಾನಕ್ಕೆ ಕಡಲೆಹಿಟ್ಟು, ಹೆಸರು ಹಿಟ್ಟು, ಹಾಗೂ ಅಕ್ಕಿಹಿಟ್ಟು ತುಂಬಾ ಒಳ್ಳೆಯದು ತಲೆಗೆ ಶೀಗೇಕಾಯಿ ಚೂರ್ಣ ಉಪಯೋಗಿಸಿ.
- ವಾರಕ್ಕೊಮ್ಮೆ ಅಭ್ಯಂಗ ಸ್ನಾನ ತುಂಬಾ ಒಳ್ಳೆಯದು. ಮಾಲಿಷ್ಗೆ ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಬದಾಮಿ ಎಣ್ಣೆ, ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆ ಕೂಡ ಉಪಯೋಗಿಸಬಹುದು. ತಲೆಗೆ ಕೊಬ್ಬರಿ ಎಣ್ಣೆ, ಬದಾಮೆಣ್ಣೆ, ಎಳ್ಳೆಣ್ಣೆ ಹಾಗೂ ಆಕಳ ತುಪ್ಪವನ್ನು ಹಚ್ಚಬಹುದು.
- ಸ್ನಾನದ ನಂತರ ಮೈಯನ್ನು ಹತ್ತಿಯಿಂದ ತಯಾರಿಸಿದ ಉರುಟಾದ ವಸ್ತು ಉಪಯೋಗಿಸಿ ಒರೆಸಿಕೊಳ್ಳುವುದು. ಮೈಗೆ ಪೂರ್ಣ ಹತ್ತಿಯಿಂದ ತಯಾರಿಸಿದ ನೈಸರ್ಗಿಕ ಬಣ್ಣದ ಮೃದುವಾದ ಸಾಂಪ್ರದಾಯಿಕ ಬಟ್ಟೆ ಉಪಯೋಗಿಸುವುದು.
- ಒತ್ತಡ ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆಯಿಂದ ರಾತ್ರಿವರೆಗೆ ಎಲ್ಲ ಕೆಲಸಗಳ ಪಟ್ಟಿ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಮಾಡಿ ಮಲಗುವುದು.
- ಎಲ್ಲ ಕೆಲಸಗಳ ಮಧ್ಯೆ ಸಮಯಕ್ಕೆ ಸರಿಯಾಗಿ ಶಾಂತರೀತಿಯಿಂದ ಊಟ ಮಾಡುವುದು. ಮೊದಲ ತುತ್ತನ್ನು ದೇಶಿ ಆಕಳ ತುಪ್ಪದೊಂದಿಗೆ ಸೇವಿಸುವುದು. ಊಟದ ಮಧ್ಯೆ ಹೆಚ್ಚು ನೀರು ಸೇವಿಸಬಾರದು. 20 ನಿಮಿಷದ ನಂತರ ಹೆಚ್ಚು ನೀರು ಸೇವಿಸಬೇಕು. ಊಟಕ್ಕೆ ಮೊದಲು ನೀರು ಸೇವಿಸಬಾರದು. ಪ್ರತಿ ಊಟದ ಮೊದಲು ಸಾಧ್ಯವಾದರೆ ಹಣ್ಣೂ ಸೇವಿಸುವುದು ತುಂಬಾ ಒಳ್ಳೆಯದು. ಊಟದಲ್ಲಿ ಶೇಕಡಾ 35ರಷ್ಟು ರಸ ಆಹಾರವಿರುವುದು ಒಳ್ಳೆಯದು.
- ವಿಶೇಷ ಸೂಚನೆ: ಬೆಳಿಗ್ಗೆ – ಉಪ್ಪಿನಂಶ, ಮಧ್ಯಾಹ್ನ – ಹುಳಿ ಅಂಶ, ರಾತ್ರಿ – ಸಿಹಿ ಅಂಶದ ಆಹಾರ ಹೆಚ್ಚಾಗಿರಬೇಕು. ಬೆಳಿಗ್ಗೆ ನೀರು, ಮಧ್ಯಾಹ್ನ ಮಜ್ಜಿಗೆ, ರಾತ್ರಿ ಹಾಲು ಹೆಚ್ಚಿಗೆ ಸೇವಿಸಬೇಕು.
- ಊಟಕ್ಕೆ ಆರು (ಷಡ್ರಸ) ರುಚಿಗಳಿರುತ್ತವೆ ಅದರಲ್ಲಿ
(ಲವಣ) ಉಪ್ಪು – ಸೈಂಧ್ರ ಲವಣ ಉಪಯೋಗಿಸುವುದು.
(ತಿಕ್ತ) ಕಾರ – ಕಾಳು ಮೆಣಸು ತುಂಬಾ ಒಳ್ಳೆಯದು.
(ಆಮ್ಲ) ಹುಳಿ – ನಿಂಬೆ ಹಣ್ಣು ಉಪಯೋಗಿಸುವುದು.
(ಮಧುರ) ಸಿಹಿ – ಬೆಲ್ಲ ಉಪಯೋಗಿಸುವುದು
(ಕಟು) ಕಹಿ – ಹೆಚ್ಚು ಬಳಸಬೇಕು
ಒಗಚು ವಗರು – ಹೆಚ್ಚು ಬಳಸಬೇಕು
ಉದಾ; ಇಂಗು, ಮೆಂತ್ಯೆ, ಹಾಗಲಕಾಯಿ, ಕರಿಬೇವು, ಕಷಾಯ ಇತ್ಯಾದಿ.
- ಅತ್ಯುತ್ತಮ ಆರೋಗ್ಯಕ್ಕಾಗಿ ರಾಸಾಯನಿಕ ಮುಕ್ತ ಆಹಾರ ಬಳಸಬೇಕು. ದೇಶಿ ಆಕಳ ಹಾಲು, ಮೊಸರು, ತುಪ್ಪ ಉಪಯೋಗಿಸುವುದು.
- ಹೆಚ್ಚು ಬೇಯಿಸದೇ ಇರುವ ಆಹಾರ ಉಪಯೋಗಿಸುವುದು ಒಳ್ಳೇಯದು. ಉದಾ; ಹಸಿರುತರಕಾರಿ, ಮೊಳಕೆಕಾಳು, ಕಾಯಿತರಕಾರಿಗಳು, ಹಣ್ಣು.
- ಮನುಷ್ಯನ ರೋಗಕ್ಕೆ ಒಟ್ಟು ಏಳು ಕಾರಣಗಳು
- ಅತಿ ಒತ್ತಡ
- ಅತಿ ಶ್ರಮ
- ಅತಿ ಲಂಘನ
- ಅತಿ ಮೈಥುನ
- ಅಜಾಗರೂಕತೆ
- ದುಶ್ಚಟ ವ್ಯಸನ
- ಅತಿ ವಿರಾಮ
- ಅತಿಯಾದ ನಿಷ್ಪ್ರಯೋಜಕ ಸಂಗತಿಗಳ ಮೇಲೆ ಮನಸ್ಸು ತೊಡಗಿಸಿ ಒತ್ತಡಕ್ಕೆ ಒಳಗಾಗುವುದು ನಿಲ್ಲಿಸಿ, ಚಿಂತೆ ಬಿಟ್ಟು ಉತ್ತಮ ಚಿಂತನೆ ಮಾಡುವುದು.
- ಶರೀರ ಶಕ್ತಿಗಿಂತ ಹೆಚ್ಚು ಶ್ರಮ ವಹಿಸಿ ವಿಶ್ರಾಂತಿ ಇಲ್ಲದೆ ದುಡಿಯುವುದನ್ನು ಬಿಟ್ಟು, ಅರಿತು ಹಿತ ಮಿತವಾಗಿ ಪರಿಶ್ರಮದಿಂದ ಕೆಲಸ ಮಾಡುವುದು.
- ಅತಿಯಾದ ನಿಯಮವಿಲ್ಲದ ಉಪವಾಸ ಮಾಡುವುದು ಬಿಟ್ಟು, ಸಮಯಕ್ಕೆ ಸರಿಯಾಗಿ ಕ್ರಮಬದ್ಧ ಉಪವಾಸದಿಂದ ಮಾತ್ರ ‘‘ಲಘನಂ ಪರವೌಷಧಂ’’ 18. ಅತಿಯಾದ ನಿಯಮವಿಲ್ಲದ ಭೋಗಾಪೇಕ್ಷೆಯಿಂದ ಆರೋಗ್ಯ ಕೆಟ್ಟು ಜೀವನದಲ್ಲಿ ಸ್ವಾರಸ್ಯವಿಲ್ಲದಂತಾಗುತ್ತದೆ.ಆದ್ದರಿಂದ ಅದರ ಬಗ್ಗೆ ಅರಿತು ಆರೋಗ್ಯವಂತರಾಗುವುದು.
- ಅಜಾಗರೂಕತೆಯಿಂದ ಅಪಘಾತಗಳು ದುರಂತಗಳು ಹೆಚ್ಚಾಗಿವೆ. ಜಾಗೃತಿ ಒಳ್ಳೆಯದು.
- ದುಶ್ಚಟವು ಒಂದು ‘‘ಮಹಾರೋಗ’’ ಮಾನಸಿಕ ದೌರ್ಬಲ್ಯ. ಇದರಿಂದ ಅಕಾಲದಲ್ಲಿ ನಿಶ್ಯಕ್ತಿ ಹಾಗೂ ಮಹಾರೋಗಕ್ಕೆ ತುತ್ತಾಗದೆ, ದುಶ್ಚಟದಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳುವುದು.
ವಿಶೇಷ ಸೂಚನೆ: ಬೆಳಿಗ್ಗೆ – ಉಪ್ಪಿನಂಶ, ಮಧ್ಯಾಹ್ನ – ಹುಳಿ ಅಂಶ, ರಾತ್ರಿ – ಸಿಹಿ ಅಂಶದ ಆಹಾರ ಹೆಚ್ಚಾಗಿರಬೇಕು. ಬೆಳಿಗ್ಗೆ ನೀರು, ಮಧ್ಯಾಹ್ನ ಮಜ್ಜಿಗೆ, ರಾತ್ರಿ ಹಾಲು ಹೆಚ್ಚಿಗೆ ಸೇವಿಸಬೇಕು.
ಹೆಚ್ಚು ವಿಶ್ರಾಂತಿ ಅಂದರೆ ಒಂದು ಅರ್ಥದಲ್ಲಿ ದಾರಿದ್ರ್ಯವೇ ಎನಿಸುತ್ತದೆ. ನಾವು ಯಾವಾಗಲು ನಮಗೆ ಶಕ್ತಿ ಇರುವಷ್ಟು ಮನಸಿಗೆ ಹಿಡಿಸುವ ಕೆಲಸವನ್ನು ಮಾಡುತ್ತಾ ಹಿತಮಿತವಾದ ವಿಶ್ರಾಂತಿ ಪಡೆಯುತ್ತಿರುವುದು ಒಳ್ಳೆಯ ಆರೋಗ್ಯ ನೀಡುತ್ತದೆ.
- ನಿತ್ಯವು ಶರೀರ ವಿಶ್ರಾಂತಿಗೆ ನಿದ್ದೆ, ಮನಸ್ಸಿನ ವಿಶ್ರಾಂತಿಗೆ ಧ್ಯಾನ, ಕರುಳಿನ ವಿಶ್ರಾಂತಿಗೆ ಉಪವಾಸವನ್ನು ನಿಯಮಿತವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ.
- ತುಳಸಿ ಕಷಾಯ, ಅಮೃತಬಳ್ಳಿ ಕಷಾಯವನ್ನು ಆಗಾಗ ಸೇವಿಸುವುದರಿಂದ ಯಾವುದೇ ಮಾರಕ ಹಾಗೂ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ. 24. ನಿತ್ಯ ಹಾಲು, ಜೇನು ಬಳಸುವುದರಿಂದ ನೆನಪಿನ ಶಕ್ತಿ ಹಾಗೂ ಸಂಪೂರ್ಣ ಆರೋಗ್ಯ ನಮ್ಮದಾಗುತ್ತದೆ.
- ನಿತ್ಯ ಗರಿಕೆ ರಸವನ್ನು ಸೇವಿಸುವುದರಿಂದ ಮುಪ್ಪು ಆವರಿಸುವುದಿಲ್ಲ.
- ಮನೆಯ ವಾತಾವರಣ ಚೆನ್ನಾಗಿರಿಸಲು ಮನೆಯಲ್ಲಿ ಸಮಯಕ್ಕೆ ಸರಿಯಾಗಿ ತಿಳಿದುಕೊಂಡು ‘‘ಅಗ್ನಿಹೋತ್ರ’’ ಮಾಡುವುದು.
- ನೀರನ್ನು ಯಾವಾಗಲು ಎಂಟು ಪದರ ಬಟ್ಟೆಯಲ್ಲಿ ಸೋಸಿ ಕುಡಿಯುವುದು.
- ಬರಿಯ ನೆಲದ ಮೇಲೆ ಕೂರಬಾರದು. ಮಲಗುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.
- ತುಂಬಾ ಹಸಿವೆ ಆದಾಗ ಅಥವಾ ಊಟವಾದ ತಕ್ಷಣ, ಶ್ರಮದ ಕೆಲಸ ಅಥವಾ ವ್ಯಾಯಾಮ ಮಾಡಬಾರದು.
- ಮಲ ಮೂತ್ರಾದಿಗಳನ್ನು ತಡೆಯಬಾರದು.
- ಹೊಟ್ಟೆ ಬಿರಿಯುವಷ್ಟು ಊಟವು ಆರೋಗ್ಯವನ್ನು ಕೆಡಿಸುತ್ತದೆ.
- ಊಟ ಮಾಡುವಾಗ ದುಃಖ, ಚಿಂತೆ, ಭಯ, ಆಕ್ರೋಶ, ಖಿನ್ನತೆ, ಆತುರ ಹಾಗೂ ಮೊಬೈಲ್ ಬಳಕೆ ಕೂಡ ಮಾಡಬಾರದು.
- ಕೈ ಉಗುರುಗಳನ್ನು ಹಲ್ಲಿನಿಂದ ಕಡಿದುಕೊಳ್ಳಬಾರದು.
- ಬೆತ್ತಲೆಯಾಗಿ ಸ್ನಾನ ಮಾಡಬಾರದು.
- ಸ್ನಾನದ ನಂತರ ಒದ್ದೆಬಟ್ಟೆಯಲ್ಲಿ ಇರಬಾರದು ಮತ್ತು ಮೈಲಿಗೆ ಬಟ್ಟೆಯನ್ನು ಹಾಕಿಕೊಳ್ಳಬಾರದು.
- ಅಶ್ಲೀಲ ಹಾಗೂ ದುರಾಲೋಚನೆ ಮಾಡುವುದರಿಂದ ಆರೋಗ್ಯ ಕೆಡುತ್ತದೆ.
- ನಿತ್ಯ ಕನಿಷ್ಟ ಅರ್ಧಗಂಟೆಯಾದರೂ ಉತ್ತಮ ಪುಸ್ತಕಗಳನ್ನು ಓದುವುದು ಒಳ್ಳೆಯದು.
- ಶಕ್ತಿಗನುಗುಣವಾಗಿ ದಾನ -ಧರ್ಮಗಳನ್ನು ಮಾಡಿ ಪುಣ್ಯ ಸಂಚಯ ಮಾಡಿಕೊಳ್ಳುವುದು.
- ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಕೆಲಸ ಆಗಬಾರದು. ಉತ್ತಮ ಆರೋಗ್ಯ ಹೊಂದುವುದೇ ರಾಷ್ಟ್ರಕಾರ್ಯಕ್ಕೆ ಮುಡಿಪಾಗಿರಲು.
ವಿಶೇಷ ಸೂಚನೆ: ಬೆಳಿಗ್ಗೆ – ಉಪ್ಪಿನಂಶ, ಮಧ್ಯಾಹ್ನ – ಹುಳಿ ಅಂಶ, ರಾತ್ರಿ – ಸಿಹಿ ಅಂಶದ ಆಹಾರ ಹೆಚ್ಚಾಗಿರಬೇಕು. ಬೆಳಿಗ್ಗೆ ನೀರು, ಮಧ್ಯಾಹ್ನ ಮಜ್ಜಿಗೆ, ರಾತ್ರಿ ಹಾಲು ಹೆಚ್ಚಿಗೆ ಸೇವಿಸಬೇಕು.
ಮೂಲ: ವಿಕ್ರಮ