ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಆರೋಗ್ಯ ಸೇವೆ ಮತ್ತು ಅರ್ಬುದ ಚಿಕಿತ್ಸೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರೋಗ್ಯ ಸೇವೆ ಮತ್ತು ಅರ್ಬುದ ಚಿಕಿತ್ಸೆ

ಆಧುನಿಕ ಭಾರತದ ಆರೋಗ್ಯ ಸೇವೆ ಮತ್ತು ಅರ್ಬುದ ಚಿಕಿತ್ಸೆಯಲ್ಲಿ ಪ್ರಗತಿದಾಯಕ

ಮೇ 31 ವಿಶ್ವ ತಂಬಾಕು ರಹಿತ ದಿನ. ತಂಬಾಕು ಸಂಬಂಧಿ ರೋಗಗಳಿಂದ ವಿಶ್ವದಲ್ಲಿ ಪ್ರತೀ ವರ್ಷ ಸಾವನ್ನಪ್ಪುವವರ ಸಂಖ್ಯೆ 54 ಲಕ್ಷ. ಪ್ರಪಂಚದಲ್ಲಿ  ಸಾವಿಗೆ ಕಾರಣವಾಗುವ ಪ್ರಮುಖ ಎಂಟು ಕಾರಣಗಳಲ್ಲಿ ತಂಬಾಕಿಗೆ ಆರನೇ ಸ್ಥಾನ ! ತಂಬಾಕಿನಿಂದ ಬರುವ ಬಾಯಿ ಕ್ಯಾನ್ಸರ್ ಗೆ ಹೆಚ್ಚಾಗಿ ತುತ್ತಾಗುತ್ತಿರುವವರು ಭಾರತೀಯರು. ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರುಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು, ಜಾಗೃತಿ ಮೂಡಿಸಲು ಪ್ರತೀ ವರ್ಷ ಈ ದಿನ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ 1987ರಿಂದ ವಿಶ್ವ ತಂಬಾಕು ರಹಿತ ದಿನ ಆದರಿಸುತ್ತಿದೆ.

ತಂಬಾಕು ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಲವು ದಶಕದಿಂದಲೂ ನಮ್ಮಲ್ಲಿ ಅನೇಕರು ಮಾತನಾಡಿದ್ದೇವೆ ಇಲ್ಲವೇ ಕೇಳಿದ್ದೇವೆ ಬಹುತೇಕ ಓದುಗರು ಏಕೆ ಈ ವೈದ್ಯರು ತಂಬಾಕು ಸೇವಿಸುವವರ ಬಗ್ಗೆ ಇಷ್ಟೊಂದು ಕಾಲಜಿ ವಹಿಸುತ್ತಾರೆ. ಆತಂಕ ಪಡುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣವಿದೆ, ತಂಬಾಕು ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿರುವವರ ಸಂಖ್ಯೆ ವರ್ಷದಲ್ಲಿ ನಿತ್ಯ 3 ಜಂಬೋ ಜೆಟ್ ವಿಮಾನಗಳ ದುರಂತದಿಂದ ಆಗುವ ಸಾವಿಗೆ ಸಮನಾಗಿದೆ. ಒಬ್ಬ ವೈದ್ಯ ತಂಬಾಕು ಸೇವನೆಯಿಂದ ಕಾಯಿಲೆಗೆ ತುತ್ತಾದ ವ್ಯಕ್ತಿಗಳಿಗೆ ಜೀವಮಾನ ಪರ್ಯಂತ ಚಿಕಿತ್ಸೆ ನೀಡುವುದಕ್ಕಿಂತ ತಂಬಾಕು ಸೇವನೆ ನಿಯಂತ್ರಣಕ್ಕೆ ಪ್ರೇರಣೆ ನೀಡುವ ಮೂಲಕ ಹೆಚ್ಚು ಪ್ರಾಣಗಳನ್ನು ಉಳಿಸಬಹುದಾಗಿದೆ. ತಂಬಾಕಿನಲ್ಲಿ ಸುಮಾರು 6000ಕ್ಕೂ ಹೆಚ್ಚು ರಾಸಾಯನಿಕಗಳಿವೆ. ಇವಗಳ ಪೈಕಿ  60ಕ್ಕೂ ಹೆಚ್ಚು ರಾಸಾಯನಿಕಗಳು ಮೊದಲು ಗುಂಪಿನ ವಿಷವಸ್ತುಗಳೆಂದು ಕ್ಯಾನ್ಸರ್ ಕುರಿತಂತೆ ಸಂಶೋಧನೆ ನಡೆಸಿರುವ ಅಂತಾರಾಷ್ಟ್ರೀಯ ಸಾಂಸ್ಥೆಗಳು ತಿಳಿಸಿವೆ ಅವುಗಳೆಂದರೆ.

೧. ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್ (ಪಿ.ಎ.ಎಚ್) ಬೆಂಜೋ (ಎ) ಪೆರೇನೆ.

೨. ಎನ್ ನೈಟ್ರೋಸಮೈನ್ಸ್- ನೈಟ್ರೋಸೊನೋರ್ ನೈಕೋಥೈನ್

೩. ಆರೋಮ್ಯಾಟಿಕ್ ಅಮೈನ್ಸ್-ನೆಪ್ತೋಲಮೈನ್

೪. ಅಲ್ದೆಹೈಡ್ಸ್ – ಫಾರ್ಸಮಾಲ್ದಹೈಡೆ

೫. ಬಾಷ್ಪವಾಗುವ ಹೈಡ್ರೋಕಾರ್ಬನ್ಸ್ – ಬೆನ್ ಜೇನ್

೬. ಲೋಹಗಳು ಮತ್ತು ಸಾವಯವವಲ್ಲದ ವಸ್ತುಗಲು – ಅರ್ಸೇನಿಕ್, ನಿಕಲ್, ಕ್ರೋಮಿಯಂ,ಕ್ಯಾಡ್ಮಿಯಂ, ಪೊಲೋನಿಯಂ 210.

ಭಾರತದಲ್ಲಿ ದೊರಕುವ ಅಗಿಯುವ ತಂಬಾಕು ಉತ್ಪನ್ನಗಳಲ್ಲಿ ನಿಗದಿ ಮಾಡಿರುವ ಪರಿಮಾಣಕ್ಕಿಂತ ಶೇಕಡ 30ರಷ್ಟು ಅಧಿಕ ಲೋಹಗಳು ಇರುವುದನ್ನು ಭಾರತೀಯ ಪರಿಸರ ವೈದ್ಯಕೀಯ ಸಂಸ್ಥೆಯ ಅಧ್ಯಯನ ದೃಢಪಡಿಸಿದೆ. ತಂಬಾಕು ಸೇವನೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ನಮ್ಮಲ್ಲಿ ಅಲೇಕರಿಗೆ ಅರಿವಿದ್ದರೂ ದೇಶದಲ್ಲಿ ತಂಬಾಕು ಸೇವನೆ ಮಾಡುವವರ ಸಂಖ್ಯೆ ಸುಮಾರು 300 ದಶಲಕ್ಷ ತಲುಪಿದೆ ಪ್ರತೀ ವರ್ಷ ದೇಶದಲ್ಲಿ 30 ರಿಂದ 40 ಲಕ್ಷ ಮಂದಿ ಈ ದುರಭ್ಯಾಸದ ಫಲವಾಗಿ ಹೃದಯ, ಶ್ವಾಸಕೋಶ ಅಥವಾ ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಗಿಯುವ ತಂಬಾಕು ಬಳಕೆಯಿಂದಾಗಿ ವಿಶ್ವದಲ್ಲೇ ಅತಿ ಹೆಚ್ಚು ಬಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವರ ಸಂಖ್ಯೆ ಭಾರತದಲ್ಲೇ ಹೆಚ್ಚಾಗಿದೆ. ದೇಶದ ಪ್ರಜ್ಞಾವಂತ ನಾಗರಿಕರಾಗಿ ಎಚ್ಚೇತ್ತುಕೊಳ್ಳಲು ಇಷ್ಟು ಅಂಕಿ ಅಂಶಗಳು ಸಾಕಲ್ಲವೇ ?

ಮೂಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

3.08988764045
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top