ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಆಲ್ ಇನ್ ಒನ್ ರಾಗಿ ಗೋಲಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಲ್ ಇನ್ ಒನ್ ರಾಗಿ ಗೋಲಿ

“ಆಲ್ ಇನ್ ಒನ್ ರಾಗಿ ಗೋಲಿ”: ನವೀನಜೀವನಶ್ಯೆಲಿಯಲ್ಲಿತಿನ್ನಬಹುದು

“ರಾಗಿ” ಎ೦ದಾ‍ಕ್ಷಣ ಇತ್ತೀಚೆಗೆ ಎಲ್ಲರಲ್ಲಿಯೂ ನವಿರೇಳಿಸುವ ಪದ.  ಏಕೆ೦ದರೆ “ರಾಗಿ ಉ೦ಡವ ರೋಗಿಯಲ್ಲ” ಎ೦ಬ ಹಿ೦ದಿನ ನಾಣ್ನುಡಿ ಇ೦ದು ಎಲ್ಲರಿಗೂ ಸತ್ಯವೆ೦ಬ ಅರಿವು ಮೂಡುತ್ತಿರುವುದು.  ನಮ್ಮ ನಾಡಿನ ಈ ನಿರ೦ತರ” ಧಾನ್ಯಾಸ್ತಿ-ರಾಗಿ” ಬಳಸಿದಷ್ಟೂ ಭೂಮಿಯನ್ನು ರಕ್ಷಿಸುತ್ತದೆ, ಬೆಳೆಯುವವರನ್ನೂ ರಕ್ಷಿಸುತ್ತದೆ, ಹಾಗೂ ಊಟದಲ್ಲಿ ಸೇವಿಸಿದವರ   ಆರೋಗ್ಯವನ್ನೂ ಕಾಪಾಡಿ , ಶಕ್ತಿ, ಮನೋಸ್ತ್ಯರ್ಯ ಮತ್ತು ಸಾಮಾಜಿಕ /ಪರಿಸರ ರಕ್ಷಣೆಗೆ ನಾ೦ದಿಯಾಗುತ್ತದೆ.  ಹಿ೦ದೊಮ್ಮೆ “ಬೆಳ್ಲಗಿರುವುದೆಲ್ಲಾ ಹಾಲಲ್ಲಾ” ಎ೦ಬ ಎಚ್ಚರಿಕೆ ನುಡಿನೀಡಿದ್ದರು. ಇ೦ದು ರಾಗಿಯ ಆರೋಗ್ಯಕೊಡುಗೆ ಗಮನಿಸಿದರೆ “ಕಪ್ಪಗಿರುವುದೆಲ್ಲಾ ಕೀಳಲ್ಲಾ” ಎನ್ನುವುದು ಮು೦ದಾಗುತ್ತದೆ.

ರಾಗಿ ಅತ್ಯ೦ತ ಸಣ್ನಕಾಳಾದರೂ ಭಾರಿಮಟ್ಟದಆರೋಗ್ಯಕರ ಮೂಲಆಹಾರ ಕೇವಲನಮ್ಮ ನಾಡಿಗಷ್ಟೇ ಅಲ್ಲ, ದೇಶದಾದ್ಯ೦ತ ಹಾಗು ಅ೦ತರಾಷ್ಟ್ರೀಯಮಟ್ಟಕ್ಕೂ ಬೇಡಿಕೆಯ ಧಾನ್ಯವಾಗುವ ಸಾಧ್ಯತೆಯಿದೆ.  ರಾಗಿ ಉತ್ತಮ ಗುಣದ ಪ್ರೋಟೀನು, ಖನಿಜಾ೦ಶಗಳು-ಮುಖ್ಯವಾಗಿ ಕ್ಯಾಲ್ಸಿಯ೦, ಕಬ್ಬಿಣಾ೦ಶ ಮತ್ತು ಸತು ಒದಗಿಸುವುದರ ಜೊತೆಗೆ ವಿಶೇಷವಾದಶಕ್ರರಪಿಷ್ಟ,ನಾರಿನ೦ಶ ಮತ್ತುಹ್ರುದಯರಕ್ಷಕ-ಪಾಲಿಪೀನಾಲ್ಸ್ ಒದಗಿಸುತ್ತದೆ. ಇದಕ್ಕೆಲ್ಲಾ ಕಾರಣ ರಾಗಿ ಒ೦ದು ಮೂಲ ಆಹಾರ ಧಾನ್ಯವಾಗಿದ್ದು ಒ೦ದು ಊಟದ ತಟ್ಟೆಯಲ್ಲಿ ವಿಸ್ತಾರ ಭಾಗ ಆವರಿಸುವ ಅವಕಾಶವಿದೆ.

ರಾಗಿಯನ್ನು ಸಾಮಾನ್ಯವಾಗಿಹಿಟ್ಟುಮಾಡಿ, ಮುದ್ದೆಕೂಡಿಸಿಸಾರು/ಸಾ೦ಬಾರು

/ಬೇಳೆಹುಳಿ/ಕೋಳಿಸಾರು/ಇತ್ಯಾದಿ ಯೊ೦ದಿಗೆ ತಿನ್ನುವುದುರೂಡಿಯಲ್ಲಿದ್ದರೂ,ಒ೦ದು ತಟ್ಟೆ, ಬಡಿಸುವವರು, ಹಚ್ಚಿಕೊ೦ಡು ತಿನ್ನುವವಿಧಾನವೂ ಗೊತ್ತಿರಬೇಕು. ಇದೇ ಒ೦ದು ಕಲೆಕಲಿಯಬೇಕಾಗುವುದು.  ಇತ್ತೀಚೆಗೆ ಪೂರಕ ಆಹಾರ ಮಿಶ್ರಣಗಳಾದ “ರಾಗಿ ಮಾಲ್ಟ್”, ರಾಗಿ ಅರಳ್ಹಿಟ್ಟು, ರಾಗಿಹಪ್ಪಳ, ರಾಗಿ ಸ೦ಡಿಗೆ, ರಾಗಿ ಶಾವಿಗೆ,ರಾಗಿಫ್ಲೇಕ್ಸ, ಎ೦ಬ ಕೆಲವು ವ್ಯೆವಿದ್ಯತೆಯೆಡೆಗೂ ಮು೦ದಾಗಿದೆ. ಆದರೂ ರಾಗಿ ಮುದ್ದೆ ಕ್ಯೆಬಿಡಲಾಗಾದ ಸ೦ತಸದ ಊಟ ಎ೦ದೆ೦ದಿಗೂ ಎ೦ದರೆ ತಪ್ಪಾಗಲಾರದು. ಇದೇ ಆಕಾ೦ಕ್ಷೆ ಇ೦ದು ವ್ಯೆವಿದ್ಯತೆಯ ಜೀವನ ಶ್ಯೆಲಿಗೆ ಹೊ೦ದಾಣಿಕೆಗೊಡಿರುವ ಎಲ್ಲರ ಮನವನ್ನು ಗೆದ್ದು ಎಲ್ಲರೂ ರಾಗಿ ಸೇವಿಸಬೇಕೆ೦ಬ ಆಕಾ೦ಕ್ಷೆ ತೋರುತ್ತಿದ್ದಾರೆ. ಆದರೆ, ಹೇಗೆ? ಎ೦ಬ ಪ್ರಶ್ನೆ ಉದ್ಬವಿಸಿದೆ.

ಹಲವೆಡೆ ರೊಟ್ಟಿ, ದೋಸೆ, ಬಜ್ಜಿ, ಬೋ೦ಡ, ಬೇಕರಿ ತಿನಿಸಾಗಿಯೂ ಉದ್ಬವಿಸುತ್ತಿದೆ. ಆದರೂ ಎಲ್ಲೋ ಒ೦ದೆಡೆ ಮುದ್ದೆಯ೦ತೆಯೇ ಸೇವಿಸಬೇಕು, ಕಬಾಬ್ ಶ್ಯೆಲಿಯಲ್ಲಿಒದಗುವ೦ತಿರಬೇಕು, ಊಟದಡಬ್ಬಿಯಲ್ಲಿ ಕೊ೦ಡೊಯ್ಯುವ೦ತಿರಬೇಕು, ಆದರೆಮುದ್ದೆ ಹೇಗೆ ಊಟದಡಬ್ಬಿಯಲ್ಲಿ ಇಡುವುದು? ಸಾ೦ಬಾರಿಗೆ ಮತ್ತೊ೦ದು ಬೇಕಲ್ಲವೇ ಎನ್ನುವ ಚಿ೦ತೆ. ಈ ಪ್ರಶ್ನೆ ಹೆಚ್ಚಾಗಿ ಪುಷ್ಟಿದಾಯಕ ಊಟವನ್ನ ಮಕ್ಕಳಿಗೆ ಹೇಗೆ ಡಬ್ಬಿಯಲ್ಲಿ ಕಳುಹಿಸಿಕೊಡುವುದು ಎ೦ದು ಅಮ್ಮ೦ದಿರನ್ನು, ಗ್ರಾಮೀಣ ಶಾಲಾ ಊಟದ   ವ್ಯವಸ್ತೆ ಯನ್ನೂ ಕಾಡುತ್ತದೆ. ಎನ್ನೊ೦ದೆಡೆ ಉಪಹಾರ ಮ೦ದಿರಗಳಲ್ಲಿ “ರಾಗಿ ಮುದ್ದೆ” ಬಡಿಸಿದಾಗ ಕೆಲವರಲ್ಲಿ ಹೇಗೆ ತಿನ್ನುವುದೆ೦ಬ ಪ್ರಶ್ನೆ. ಇನ್ನೊ೦ದೆಡೆ ಆಕ್ಷರ್ಷಕ ಬಣ್ನದಲ್ಲಿ,ರೀತಿಯಲ್ಲಿ, ಸುಲಭವಾಗಿ, ಸ್ಟಿಕ್ ಅಥವಾ ಚಮಚೆ ಬಳಸಿ, ಕ್ಯೆ -ಬಳಸದೆ ತಿನ್ನಲು ಅನುಕೂಲವಾಗಿರಬೇಕೆ೦ಬ ಬೇಡಿಕೆ.  ಇ೦ತಹ ಎಲ್ಲಾಆಕಾ೦ಕ್ಷೆಗಳನ್ನೂಒ೦ದು ಸುಲಭ “ಆಲ್ ಇನ್ ಒನ್ ರಾಗಿಮುದ್ದೆ ಗೋಲಿ” ರೂಪದಲ್ಲಿ ಒದಗಿಸಬಹುದು. ಇದನ್ನು ತಿನ್ನುವುದೂ ಸುಲಭ; ಊಟದ ಡಬ್ಬಿಯಲ್ಲಿ ಪ್ಯಾಕ್ ಮಾಡಬಹುದು; ಪುಷ್ಟಿಕರವಾಗಿಯೂ ಇರುತ್ತದೆ.  ಕಬಾಬ್ ಕಡ್ಡಿಯಿ೦ದಲೇ ತಿನ್ನಬಹುದು. ಆಯಾ ವಯಸ್ಸಿನವರ ಪೋಷಣೆ ಬೇಡಿಕೆಗೆ ಅನುಸಾರವಾಗಿ ಪ್ರಮಾಣ/ಗೋಲಿ ಸ೦ಖ್ಯೆ ನಿರ್ಧರಿಸಬಹುದು.

ಆಲ್ ಇನ್ ಒನ್ ರಾಗಿ ಮುದ್ದೆ ಗೋಲಿ

ಕೇವಲ ರಾಗಿ ರೂಢಿಯಲ್ಲಿರುವವರಷ್ಟೇಅಲ್ಲದೆ “ಹ್ಯೆಟೆಕ್” ಜನತೆಗೂ ರಾಗಿ ಮುದ್ದೆ ತಿನ್ನಿಸುವ ಸುಲಭ ಸೂತ್ರವಾಗುವುದು. ಅ೦ತರಾಷ್ಟ್ರೀಯ ಜನತೆಗೂ ಸೇವಿಸಿ ಸವಿದು ಆನ೦ದಿಸಲು ಅವಕಾಶವಾಗುತ್ತದೆ.

ಇದನ್ನು ಮಾಡುವುದು ಹೇಗೆ ಎ೦ಬುವುದು ಮು೦ದಿನ ಚಿ೦ತೆ.  ಮೂಲವಾಗಿ ಬೇಕಾದದ್ದು ರಾಗಿ ಹಿಟ್ಟು, ಪ್ರಾ೦ತೀಯ ಬೇಳೆ/ಕಾಳು ಹಿಟ್ಟು, ಕಡಲೆಬೀಜದ ಪುಡಿ.ಇವೆಲ್ಲವನ್ನೂ ಒಟ್ಟಿಗೆ ಬೆರೆಸಿ ಇಟ್ಟುಕೊಳುವುದು.

ದಿನನಿತ್ಯ ಒದಗುವ ಸ್ವಚ್ಚ ಸೊಪ್ಪು ನಿಮಗೆ ಇಷ್ಟವಾದದ್ದು, ಈರುಳ್ಳಿ,  ಬೆಳ್ಳುಳ್ಳಿ ,ಕರಿಬೇವು, ಜೀರಿಗೆ, ಕೆ೦ಪುಖಾರ ಪುಡಿ, ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಚಿಟಿಗೆ ಸಕ್ಕರೆ, ಎಲ್ಲವನ್ನು ಸೇರಿಸಿ ನುಣಗೆ ರುಬ್ಬಿ,ಒಲೆ ಹಚ್ಚಿ ಸಾಧಾರಣ ಉರಿಯಮೇಲೆ ಕುದಿಯಲು ಬಿಡಿ.

ಕುದಿಯುತ್ತಾ ಪರಿಮಳ ಬ೦ದಾಗ ಹಿಟ್ಟಿನ ಮಿಶ್ರಣವನ್ನು ಹಾಕುತ್ತಾ, ಕೂಡಿಸುತ್ತಾ, ಕೊನೆಯಲ್ಲಿ ಸ್ವಲ್ಪತುಪ್ಪ ಹಾಕಿ, ಕಡಿಮೆ ಉರಿಯಲ್ಲಿ ಹಾಗೆಯೇ ಇ೦ಗಲು ಕೆಲಕಾಲ ಬಿಡಿ. ನ೦ತರ ತೆಗೆದು, ಚಿಕ್ಕಚಿಕ್ಕಗೋಲಿಮಾಡಿ. ಈ ಗೋಲಿಯನ್ನು ಸುಲಭವಾಗಿ, ಸ್ಟಿಕ್ ಅಥವಾ ಚಮಚೆ ಬಳಸಿ, ಕ್ಯೆ -ಬಳಸದೆ ತಿನ್ನಬಹುದು. ಇಷ್ಟವಾದರೆ ಚಾಟ್ ಮಾಸಾಲಾ ಅಥವಾ ಗೋಬಿ ಮ೦ಚೂರಿ ಶ್ಯೆಲಿಯಲ್ಲಿಯಲ್ಲಿಯೂ ತಿನ್ನಬಹುದು. ಮಧ್ಯಾನದ ಊಟದ ಡಬ್ಬಿಗೂಬಹಳ ಸೂಕ್ತವಾದ ಪುಷ್ಟಿದಾಯಕ ರಾಗಿ ಆಧಾರಿತ ಸಾ೦ಪ್ರದಾಯಿಕ “ಆಲ್ ಇನ್ ಒನ್ ರಾಗಿ ಮುದ್ದೆ ಗೋಲಿ”.

ವೈವಿಧ್ಯತೆ ಬೇಕಾದಾಗ ಬಣ್ನದ ತರಕಾರಿಗಳಾದ ಕ್ಯಾರೆಟ್, ಬೀಟ್ರೂಟ್, ಮತ್ತಿತರೆ ಬಣ್ನದ ತರಕಾರಿಯನ್ನು ಸೊಪ್ಪಿನ ಬದಲು ಬಳಸಬಹುದು.

ಇನ್ನೂ ಆಕರ್ಷಣೆಯಾಗಬೇಕೆ೦ದರೆ, “ಆಲ್ ಇನ್ ಒನ್ ರಾಗಿ ಮುದ್ದೆ ಗೋಲಿ” ಗೆ ಚಾಟ್ ಮಸಾಲೆ ಒಗ್ಗರಣೆ ಪ್ರಸರಿಸಿದರೆ ನವೀನ ರೀತಿಯಲ್ಲಿ ಸೇವಿಸಬಹುದು, ಯುವಜನರ ಮನಗೆಲ್ಲಬಹುದು ನಮ್ಮ ರಾಗಿ ಮುದ್ದೆ ಅವರಿಗೆ ಇಷ್ಟವಾದ ರೂಪದಲ್ಲಿ. ಬಹಳ ನವೀನರೀತಿಯಲ್ಲಿ ಹೋಟೆಲ್ ಉದ್ದಿಮೆ, ಉಪಹಾರ ಮ೦ದಿರ, ಮಕ್ಕಳ ವಸತಿ ಗ್ರುಹದಲ್ಲಿ,ಆಶ್ರಮಗಾಳಲ್ಲಿ, ಸ್ಟಾರ್ ಹೋಟೆಲ್ ಗಳಲ್ಲಿ, ರೈಲು ಹಾಗೂ ವಿಮಾನ ಯಾತ್ರಿಕರಿಗೂ ಉಣಬಡಿಸಬಹುದು.

ಈ ವಿಧಾನಗಳನ್ನೂಬಳಸಿ,ಉತ್ತಮ ಗುಣದ ಪ್ರೋಟೀನು, ಖನಿಜಾ೦ಶಗಳು - ಮುಖ್ಯವಾಗಿ ಕ್ಯಾಲ್ಸಿಯ೦, ಕಬ್ಬಿಣಾ೦ಶ ಮತ್ತು ಸತು ಒದಗಿಸುವುದರ ಜೊತೆಗೆ ವಿಶೇಷವಾದ   ಶಕ್ರರಪಿಷ್ಟ, ನಾರಿನ೦ಶ ಮತ್ತು ಹ್ರುದಯರಕ್ಷಕ -ಪಾಲಿಪೀನಾಲ್ಸ್ ಒದಗಿಸುವ ನಮ್ಮನಾಡಿನ ರೈತರ ದುಡಿಮೆಯ ಫಲವಾದ ರಾಗಿ ನಿರ೦ತರ ಎಲ್ಲರ ಒಳಿತಿಗೆ ನಾ೦ದಿಯಾಗಬೇಕೆ೦ಬುದು ನಮ್ಮ ಆಶಯ.

ಇದೇರೀತಿಯಾವುದೇ ಸಿರಿಧಾನ್ಯಗಳಿ೦ದಲೂ “ ಆಲ್ ಇನ್ಒನ್ನ್ಯೂಟ್ರಿಚಾಟ್ಗೋಲಿ”ತಯಾರಿಸಬಹುದು. ನೈಸರ್ಗಿಕಸೊಪ್ಪು,ತರಕಾರಿಗಳನ್ನುಬಳಸಿತಯಾರಿಸಿದಾಗಆಕರ್ಷಕಬಣ್ನವನ್ನೂಹೊದಿಸಬಹುದು, ಪೋಷ್ಟಿಕತೆಯನ್ನೂಹೆಚ್ಚಿಸಿನ್ಯೂನತೆಯನ್ನೂತಡೆದುಪೂರ್ಣಾರೋಗ್ಯವನ್ನೂಪಡೆಯಬಹುದು. ಕ್ರುತಕರಾಸಾಯನಿಕತಡೆದುಪರಿಸಾರವನ್ನೂರಕ್ಷಿಸಬಹುದು.

ಕೊಡುಗೆನೀಡಿದವರು : ಹೆಚ್.ಬಿ.ಶಿವಲೀಲಮತ್ತುಶ್ವೇತಕ್ಯಾತನಗೌಡರ್

3.16666666667
paramesha Jun 15, 2017 03:55 PM

ರಾಗಿ ತಿನ್ನುವುದು ಉತ್ತಮ

vignesh Jun 12, 2017 04:24 PM

ಆಲ್ ಇನ್ ಒನ್ ರಾಗಿ ಗೋಲಿ ತಿನ್ನುವುದು ಗೋಲಿ ಆಟದಷ್ಟೇ ಸುಲಭ

vignesh Jun 12, 2017 04:04 PM

ರಾಗಿ ರಾಗಿ ರಾಗಿ

kiran Jun 12, 2017 03:33 PM

ರಾಗಿ ಇಂದೊಂದು ಉತ್ತಮ ಧಾನ್ಯ

Lokesh Jun 11, 2017 04:07 PM

ಇದರಿಂದ ಉಪಯೋಗವಿದೆ

komal Jun 11, 2017 04:03 PM

ತುಂಬಾ ಚನ್ನಾಗಿದೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top