ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಆಸನಗಳನ್ನು ಮಾಡಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಸನಗಳನ್ನು ಮಾಡಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳು

ಆಸನಗಳನ್ನು ಮಾಡಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳು ಅಥವಾ ಪಾಲಿಸಬೇಕಾದ ನಿಯಮಗಳು

ಆಸನಗಳನ್ನು ಮಾಡಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳು ಅಥವಾ ಪಾಲಿಸಬೇಕಾದ ನಿಯಮಗಳು :

 • ಯೋಗಾಸನಗಳನ್ನು ಮಾಡಲು ಸಂಧ್ಯಾಕಾಲ ಪ್ರಶಸ್ತವಾದ ಸಮಯ ಅದರಲ್ಲೂ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಸೂರ್ಯೋದಯಕ್ಕಿಂತ 96 ನಿಮಿಷಗಳ ಮೊದಲಿನ ಅವಧಿಯು ಯೋಗಾಸನಗಳ ಅಭ್ಯಾಸಕ್ಕೆ  ಅತ್ಯಂತ ಶ್ರೇಷ್ಠವಾದ ಸಮಯ.
 • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು. ಆಕಸ್ಮಾತ್À ಬೆಳಿಗ್ಗೆ ಮಾಡಲಿಕ್ಕಾಗದೆ ಸಂಜೆ ಮಾಡುವುದಾದಲ್ಲಿ ಊಟವಾದ  21/2-3 ಗಂಟೆಗಳ ನಂತರ ಅಭ್ಯಾಸ ಮಾಡಬೇಕು. ಆದರೆ ಬೆಳಗಿನ ಸಮಯ ಸೂಕ್ತ.
 • ಆಸನಗಳನ್ನು ಅಭ್ಯಾಸಮಾಡುವ ವಾತಾವರಣ ಶುದ್ಧವಾಗಿರಬೇಕು.
 • ಅಭ್ಯಾಸಮಾಡುವ ಕೊಠಡಿ ಚೊಕ್ಕಟವಾಗಿರಬೇಕು ಹಾಗೂ ಗಾಳಿ ಬೆಳಕು ಇರಬೇಕು.
 • ಆಸನಗಳನ್ನು ಅಭ್ಯಾಸ ಮಾಡುವಾಗ ಶುಭ್ರವಾದ ಹಾಗೂ ಸಡಿಲವಾದ ಉಡುಪುಗಳನ್ನು ಧರಿಸಬೇಕು.
 • ಪ್ರತಿಯೊಂದು ಆಸನವನ್ನು ನಿಧಾನವಾಗಿ ಉಸಿರಾಟದ ಜೊತೆಜೊತೆಗೆ ಅಭ್ಯಾಸಮಾಡಬೇಕು. ಇದರಿಂದಾಗಿ ಬರೀ ಆಸನದ ಪರಿಣಾಮವಲ್ಲದೇ ಪ್ರಾಣಾಯಾಮದ ಪರಿಣಾಮವೂ ಬೀರುವುದರಿಂದ ದೇಹ ಹಾಗೂ ಮನಸ್ಸು ಶುಚಿಗೊಳುತ್ತವೆ.
 • ನೀವು ಮಾಡುವ ಪ್ರತಿಯೊಂದು ಭಂಗಿಯ ಮೇಲೂ ನಿಮ್ಮ ಸಂಪೂರ್ಣ ಗಮನವನ್ನು ಹರಿಸಬೇಕು.
 • ಯೋಗ ಮಾಡುವಾಗ ಹಾಸಿನ ಮೇಲೆ (ಮ್ಯಾಟ್) ಮಾಡಬೇಕು.
 • ಯೋಗ ಮಾಡುವ ಪ್ರದೇಶದಲ್ಲಿ ಅಭ್ಯಾಸಕ್ಕೆ ಅಡಚಣೆಯಾಗುವ ವಸ್ತುಗಳಿದ್ದರೆ ಅವುಗಳನ್ನ ಬದಿಗೆ ಸರಿಸಿ ಇಡಬೇಕು.
 • ಅಭ್ಯಾಸವು ಪ್ರಯಾಸಕರವಾದಲ್ಲಿ ಮುಂದುವರಿಸದೇ ಅಲ್ಲಿಗೇ ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳಬೇಕು.
 • ಪ್ರತಿಯೊಂದು ಆಸನದ ಅಭ್ಯಾಸದ ನಂತರ ಚಿಕ್ಕ ವಿರಾಮವನ್ನ ತೆಗೆದುಕೊಳ್ಳಬೇಕು.
 • ಅಭ್ಯಾಸ ಸಂಪೂರ್ಣ ಮುಗಿದ ಮೇಲೆ ಧೀರ್ಘ ವಿಶ್ರಾಂತಿ ಕ್ರಿಯೆಯನ್ನು ಆಚರಿಸಿಯೇ ಮೇಲೇಳಬೇಕು.
 • ಸೂರ್ಯ ನಮಸ್ಕಾರ ಮಾಡುವಾಗ ಪ್ರತಿ ಹಂತದಲ್ಲಿ ಆಯಾ ಶ್ಲೋಕವನ್ನು ಹೇಳಿಕೊಂಡರೆ ಒಳ್ಳೆಯದು.
 • ಶರೀರದಲ್ಲಿ ಯಾವುದೇ ತೀವ್ರತರವಾದ ವ್ಯಾಧಿಯಿದ್ದಾಗ ಅಭ್ಯಾಸ ಬೇಡ.
 • ಆಸನಗಳನ್ನು ಕೊನೆಯ ಹಂತದಲ್ಲಿ ಹೇಗೆ ಹಿಡಿದಿಟ್ಟುಕೊಳ್ಳುತ್ತೀರೋ, ಆ ಕೊನೆಯ ಹಂತಕ್ಕೆ ಮುಟ್ಟುವುದು ಹಾಗೂ ಪುನಃ ಸ್ಥಿತಿಗೆ ಮರಳುವುದು ಅಷ್ಟೇ ಪ್ರಾಮುಖ್ಯತೆ ವಹಿಸುತ್ತದೆ. ಹಾಗಾಗಿ ಅಭ್ಯಾಸಗಳನ್ನು ಶುರುವಿನಿಂದ ಪೂರ್ಣಗೊಳ್ಳುವವರೆಗೂ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು.

ಮೂಲ: ಡಾ|| ವೆಂಕಟ್ರಮಣ ಹೆಗಡೆ

2.86301369863
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top