ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಉರಿಮೂತ್ರ ತೊಂದರೆಗೆ ರಾಮಬಾಣ ಕಲ್ಲಂಗಡಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಉರಿಮೂತ್ರ ತೊಂದರೆಗೆ ರಾಮಬಾಣ ಕಲ್ಲಂಗಡಿ

ಉರಿಮೂತ್ರ ತೊಂದರೆಗೆ ರಾಮಬಾಣ ಕಲ್ಲಂಗಡಿ

ಬೇಸಿಗೆಯಲ್ಲಿ  ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಬಳಸುವುದು ಉತ್ತಮ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿ ಇವೇ ಮೊದಲಾದ ಹಣ್ಣು ತರಕಾರಿಗಳು ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತವೆ.

ಕಲ್ಲಂಗಡಿ ಬೇಸಿಗೆಯ ಅವಧಿಯಲ್ಲಿ ಹೆಚ್ಚು ದೊರೆಯುವುದರಿಂದ ಹಾಗೂ ಬೆಲೆಯೂ ಕಡಿಮೆ ಇರುವುದರಿಂದ ಇದನ್ನು  ಹೆಚ್ಚೆಚ್ಚು ಬಳಸುವುದು ಒಳ್ಳೆಯದು. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿಸುವ ಕಲ್ಲಂಗಡಿಯಲ್ಲಿ ಅನೇಕ ಔಷಧೀಯ  ಗುಣಗಳು ಕೂಡ ಇವೆ.

# ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯು (ಉರಿಮೂತ್ರ  ತೊಂದರೆ) ಕಂಡುಬಂದರೆ, ಕಲ್ಲಂಗಡಿ ಹಣ್ಣಿನ ರಸವನ್ನು ಮಜ್ಜಿಗೆಯ ಜೊತೆ ಸಮನಾಗಿ ಸೇರಿಸಿ, ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯುವುದರಿಂದ ತೊಂದರೆಯು  ಗುಣವಾಗುತ್ತದೆ.

# ಒಂದು  ಬಟ್ಟಲು ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸೇವಿಸುವುದರಿಂದ ಜಲಾಂಶದ ಕೊರತೆಯು ನಿವಾರಣೆಯಾಗುತ್ತದೆ.

# ಮಲಬದ್ಧತೆಯ ತೊಂದರೆ ಇರುವವರು ಕಲ್ಲಂಗಡಿ ಹಣ್ಣು ಹಾಗೂ ಕಲ್ಲಂಗಡಿ ಹಣ್ಣಿನ  ಜ್ಯೂಸನ್ನು ಸೇವಿಸುವುದರಿಂದ ತೊಂದರೆಯು ಕಡಿಮೆಯಾಗುತ್ತದೆ.

ಮೂಲ : ಕನ್ನಡಿಗ ವರ್ಲ್ಡ್

2.95652173913
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top