ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಒಟ್ಟಾಗಿ ಊಟ

ಮನೆ ಜನರೆಲ್ಲ ಸೇರಿ ಊಟ ಮಾಡುವುದರಿಂದ ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ ನಿವಾರಣೆಯಾಗು ತ್ತದೆಯಂತೆ.

ಮನೆ ಜನರೆಲ್ಲ ಸೇರಿ ಊಟ ಮಾಡುವುದರಿಂದ ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ ನಿವಾರಣೆಯಾಗು ತ್ತದೆಯಂತೆ. ಅಷ್ಟೇ ಅಲ್ಲ, ಹೀಗೆ ಕುಟುಂಬದ ಜನರೆಲ್ಲರ ಜೊತೆ ಕೂತು ಊಟ ಮಾಡುವುದರಿಂದ ಭಾವನಾತ್ಮಕ ಬೆಸುಗೆ ಸೃಷ್ಟಿಯಾಗುತ್ತದೆ. ಮನಸ್ಸು ನಿರಾಳವಾಗಿದ್ದಾಗ, ನೆಮ್ಮದಿಯಿಂದಿದ್ದಾಗ ತಿಂದ ಆಹಾರ ಬೇಗನೇ ಜೀರ್ಣವಾಗುತ್ತದೆಯಂತೆ. ಆಹಾರ ಬೇಗನೇ ಜೀರ್ಣವಾದಷ್ಟೂ ದೇಹ ಸುಸ್ಥಿತಿಯಲ್ಲಿರುತ್ತದೆ ಮತ್ತು ಬೊಜ್ಜು ಶೇಖರಣೆಯಾಗುವುದು ನಿಲ್ಲುತ್ತದೆ.

ಈ ಎಲ್ಲ ಕಾರಣಗಳಿಂದಲೇ ಹಿಂದಿನ ಕಾಲದಲ್ಲಿ ಮನೆಜನರೆ ಲ್ಲರೂ ಒಟ್ಟಿಗೆ ಕುಳಿತೇ ಊಟ ಮಾಡಬೇಕೆಂಬ ಪದ್ಧತಿಯಿತ್ತು. ಯಾರೋ ಒಬ್ಬರು ಊಟಕ್ಕೆ ಬರುವುದು ಸ್ವಲ್ಪ ತಡವಾದರೂ ಉಳಿದವರೆಲ್ಲ ಅವರಿಗಾಗಿ ಕಾಯುವ ಪರಿಪಾಠವಿತ್ತು. ಅದು ಕೌಟುಂಬಿಕ ನೆಮ್ಮದಿಯನ್ನೂ, ಕೂಡಿ ಬಾಳುವ ಸುಖವನ್ನೂ ಹೆಚ್ಚಿಸುತ್ತಿತ್ತು. ಕಷ್ಟ ಸುಖ ಹಂಚಿಕೊಳ್ಳುತ್ತ, ದೇಹದ ಸ್ವಾಸ್ಥ್ಯಕ್ಕೆ ಅಗತ್ಯವಾದ ಆಹಾರವನ್ನೇ ತಿನ್ನುತ್ತ, ಮಕ್ಕಳಿಗೂ ಅಂಥ ಸ್ವಾಸ್ಥ್ಯಪೂರ್ಣ ಆಹಾರಗಳ ಬಗ್ಗೆ ತಿಳಿ ಹೇಳುತ್ತ ಊಟ ಮಾಡುತ್ತಿದ್ದ ಹಿರಿಯರು ಮಕ್ಕಳ ದೇಹಾರೋಗ್ಯ ಎಂದಿಗೂ ಚೆನ್ನಾಗಿಯೇ ಇರುವಂತೆ ನೋಡಿಕೊಳ್ಳಲು ಸಫಲರಾಗಿದ್ದರು. ಆದರೆ ಇಂದು ಹಾಗಿಲ್ಲ. ಮೊದಲೆಲ್ಲ ಮನೆಯಲ್ಲಿ ಐವತ್ತು ಜನರಿದ್ದರೂ ಬಡಿಸುವ ನಾಲ್ಕೈದು ಜನರನ್ನು ಬಿಟ್ಟು ಒಂದೇ ಪಂಕ್ತಿಯಲ್ಲಿ ಮುಗಿಯುತ್ತಿದ್ದ ಊಟ, ಇಂದು ಮನೆಯ ನಾಲ್ಕು ಜನರಿಗೆ ನಾಲ್ಕು ಪಂಕ್ತಿಯಾಗಿ ಬದಲಾಗಿದೆ. ಇದರಿಂದಾಗಿ ಕುಟುಂಬದ ಜನರೊಂದಿಗೆ ಬೆರೆಯುವ ಮನಸ್ಥಿತಿ ಉಳಿದಿಲ್ಲ. ಇದು ಕೇವಲ ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ದೈಹಿಕ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.


ಇತ್ತೀಚೆಗೆ ನ್ಯೂಯಾರ್ಕಿನಲ್ಲಿ 2000ಕ್ಕೂ ಹೆಚ್ಚು ಮಕ್ಕಳನ್ನು ಸಂಪರ್ಕಿಸಲಾಯಿತು. ಆ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದ ಹಲವು ಮಕ್ಕಳನ್ನು ಮಾತನಾಡಿಸಿದಾಗ ಅವರ ಊಟದ ಶೈಲಿಯನ್ನು ವಿಚಾರಿಸಲಾಯಿತು. ಆಗ ಮಕ್ಕಳೆಲ್ಲರೂ ನೀಡಿದ ಉತ್ತರವೆಂದರೆ ತಾವು ಊಟ ಬೇಕೆನ್ನಿಸಿದಾಗ ಹೋಗಿ ಊಟ ಮಾಡುತ್ತೇವೆ, ಅದಕ್ಕೆ ಸಮಯವೇ ಇಲ್ಲ. ಎಂದಿಗೂ ತಂದೆ-ತಾಯಿ ಅಥವಾ ಕುಟುಂಬದ ಜನರಿಗಾಗಿ ಕಾಯುವುದಿಲ್ಲ ಎಂದು! ಆದರೆ ಬೊಜ್ಜಿನ ಸಮಸ್ಯೆಯಿಲ್ಲದೆ, ಚಟುವಟಿಕೆಯಿಂದಿರುವ ಮಕ್ಕಳನ್ನು ವಿಚಾರಿಸಿದಾಗ ಅವರು ಮನೆ ಜನರೊಂದಿಗೆ ಕೂಡಿಕೊಂಡೇ ಊಟ ಮಾಡುವುದಾಗಿ ಹೇಳಿದರು. 
ಅಂದರೆ ಪಾಶ್ಚಾತ್ಯ ರಾಷ್ಟ್ರಗಳು ಸಹ ಭಾರತೀಯ ಪುರಾತನ ಊಟದ ಶೈಲಿಯನ್ನು ಒಪ್ಪಿಕೊಂಡಿದ್ದು ಸಾಬೀತಾಗುತ್ತದೆ. ನಮ್ಮ ಪೂರ್ವಜರ ಪ್ರತಿಯೊಂದು ನಡೆಯ ಹಿಂದೆಯೂ ಸಕಾರಣವಿತ್ತು ಎಂಬುದಕ್ಕೆ ಇದೊಂದು ಸಾಕ್ಷಿ.

ಮೂಲ: ವಿಕ್ರಮ

2.87654320988
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top