ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಕಿವಿಗೆ ಡ್ರಾಪ್ಸ್ ಬಳಕೆಯ ಸುರಕ್ಷಿತತೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕಿವಿಗೆ ಡ್ರಾಪ್ಸ್ ಬಳಕೆಯ ಸುರಕ್ಷಿತತೆ

ಕಿವಿಗೆ ಡ್ರಾಪ್ಸ್ ಬಳಕೆಯ ಸುರಕ್ಷಿತತೆ

ಡಾ:ಜಿ.ಕೆ ಹೆಬ್ಬಾರ್

ಕಿವಿ ಮೂಗು ಗಂಟಲು ತಜ್ಞರು(ENT)

ಮಂಗಳೂರು.

(ಸಂಗ್ರಹ: ಅಬ್ದುಲ್ ನಾಸಿರ್ ಕೈರಳಿ)

ನಮ್ಮಲ್ಲಿ ಹೆಚ್ಚಿನವರು ವೈದ್ಯರು ಒಮ್ಮೆ ನೀಡಿದ ಶಿಫಾರಸ್ಸು ಪತ್ರದ ಔಷಧಿಯನ್ನೆ ಪದೇ ಪದೇ ಸಿಫಾರಸ್ಸು ಪತ್ರವನ್ನು ತೋರಿಸದೆ ಔಷಧಿ ಅಂಗಡಿಯಿಂದ

ಮದ್ದನ್ನು ಖರೀದಿಸುತ್ತಾರೆ. ಸ್ವ ಔಷಧೋಪಚಾರ ಮತ್ತು ಧೀರ್ಘ ಕಾಲದ ತನಕ ಒಂದೇ ಔಷಧಿಯನ್ನು ಬಳಕೆ ಮಾಡುವುದು ನಮ್ಮಲ್ಲಿ ಹೆಚ್ಚಿನವರು

ಮಾಡುತ್ತಿರುತ್ತಾರೆ. ವಿಶೇಷವಾಗಿ ಕಿವಿ, ಮೂಗುಗಳ ಅಸ್ವಾಸ್ಥ್ಯ ನಿವಾರಣೆಗೆ ಬಳಸುವ ಡ್ರಾಪ್ಸ್ ಗಳು ಈ ರೀತಿಯಲ್ಲಿ ಪದೇ ಪದೇ ತಿಂಗಳುಗಟ್ಟಲೆ,

ವರ್ಷಗಳ ತನಕವೂ ಬಳಸಲ್ಪಡುತ್ತದೆ. ಆದರೆ ಈ ರೀತಿ ದೀರ್ಘಕಾಲಿಕವಾಗಿ ವೈದ್ಯರ ಸಲಹೆ ಇಲ್ಲದೇ, ಕಿವಿ,ಮೂಗುಗಳ ಚಿಕಿತ್ಸೆಗೆ ಶಿಫಾರಸ್ಸು ಮಾಡುವ

ಡ್ರಾಪ್ಸ್ ಗಳನ್ನು ಬಳಸುತ್ತಿರುವುದು ಎಷ್ಟು ಸುರಕ್ಷಿತ.?

ಸಾಮಾನ್ಯವಾಗಿ ಕಿವಿ ಡ್ರಾಪ್ಸ್ ಗಳನ್ನು ENT ಸರ್ಜನ್ ಗಳು ಕಿವಿ ಸೋಂಕುಗಳ ಚಿಕಿತ್ಸೆಗೆ ಶಿಫಾರಸ್ಸು ಮಾಡುತ್ತಾರೆ. ಅದು ಹೊರ ಕಿವಿಯು

ಸೋಂಕಿಗೊಳಗಾಗಿದ್ದರೆ ಕಿವಿಯ ತಮಟೆಗೆ ಯಾವುದೇ ಹಾನಿಯಾಗಬಾರದು. ಮಧ್ಯ ಕಿವಿಯು ಸೋಂಕಿಗೊಳಗಾಗಿದ್ದರೆ ಅಲ್ಲಿ ಕೀವು ದ್ರವವು ಪ್ರಾರಂಭವಾಗಿ

ಅದು ಕಿವಿ ತಮಟೆಯಲ್ಲಿ ರಂಧ್ರವನ್ನು ಮಾಡಿ ಹೊರ ಬರುತ್ತದೆ.

ಸಾಮಾನ್ಯ ವ್ಯಕ್ತಿಗಳಲ್ಲಿ ಅಂದರೆ ಕಿವಿ ತಮಟೆಯು ತೂತಾಗದ ಸಂದರ್ಭಗಳಲ್ಲಿ,ಹೊರ ಕಿವಿಗೂ ಮಧ್ಯ ಕಿವಿಗೂ ಯಾವುದೇ ಸಂಪರ್ಕವು ಇರುವುದಿಲ್ಲ.

ಮಧ್ಯ ಕಿವಿಯು ಕಾಕ್ಲಿಯ (ಒಳ ಕಿವಿಯಲ್ಲಿರುವ ಶಂಖಾಕಾರದ ತಿರುಪು ನಾಳ ಅಥವಾ ಕರ್ಣಶಂಖ) ಅಥವಾ ಒಳ ಕಿವಿಯಲ್ಲಿರುವ ದುಂಡಗಿನ ಕಿಂಡಿಯ

ಪದರದ (Round Window Membrane) ಮುಖಾಂತರ ಸಂಪರ್ಕಿಸುತ್ತದೆ.ಮಧ್ಯ ಕಿವಿ ಮತ್ತು ಕಾಕ್ಲಿಯದ ಮಧ್ಯೆ ಬಲೆಯ ತರಹದ ತೆಳು ಪರದೆಯ ತರಹ

ಇರುತ್ತದೆ ಕಾಕ್ಲಿಯದ ಸುತ್ತ ಸೂಕ್ಷ್ಮವಾದ ಕೂದಲಿನ ಅಂಗಗಳು ಇದ್ದು ಇದು ಶ್ರವಣ ನರಗಳಿಗೆ ಪ್ರವಹಿಸುತ್ತದೆ.ಒಳ ಕಿವಿಯ ಪೆರಿಲಿಂಪ್ಸ್ ಮತ್ತು ಎಂಡೋಲಿಂಪ್ಸ್

ಎಂಬ ದ್ರವವು ತುಂಬಿರುತ್ತದೆ.

ಕಿವಿ ನಂಜು (Ototoxicity)ಎಂಬುದು ತೆಗೆದುಕೊಂಡ ಔಷಧಿಯು ಕಿವಿಯ ಕೇಳುವಿಕೆಯ ಮತ್ತು ಸಂಬಂಧಿತ ವ್ಯವಸ್ಥೆಗೆ ಹಾನಿಯುಂಟುಮಾಡಿ ಶ್ರವಣ ನಷ್ಟ ಅಥವಾ

ಶ್ರವಣ ವ್ಯತ್ಯಾಸವಾಗಲು ಕಾರಣವಾಗುತ್ತದೆ.ಕೆಲವೊಓದು ನಿರ್ಧಿಷ್ಟ ವರ್ಗದ ಔಷಧಗಳು ಕಿವಿಯ ನಂಜನ್ನು ಉಲ್ಭಣಗೊಳಿಸುತ್ತವೆ ಎಂಬುದು ಪರೀಕ್ಷೆಗಳಿಂದ ತಿಳಿದು

ಬಂದಿದೆ. ಕಿವಿಯ ನಂಜಿತ್ವದಿಂದ ಸಾಮಾನ್ಯವಾಗಿ ಎರಡೂ ಪಕ್ಕದ ನರ ಸಂಬಂಧಿತ ಶ್ರವಣ ನಷ್ಟ ಮತ್ತು ಕಿವಿಯೊಳಗೆ ಗುಂಯ್ ಗುಡುವಿಕೆ ಉಂಟಾಗಬಹುದು.

ಶ್ರವಣ ನಷ್ಟವು ತಾತ್ಕಾಲಿಕವಾಗಬಹುದು.,ಆದರೆ ಇದು ಸಾಮಾನ್ಯವಾಗಿ ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ಸಾಮಾನ್ಯವಾಗಿ ಜೀವನಿರೋಧಕ (Antibiotic)

ಔಷದಿಗಳಿಂದ ಉಂಟಾದ ಕಿವಿ ನಂಜು ಸಮರೂಪದ ಅಥವಾ ವ್ಯತ್ಯಾಸ ರೂಪದ ಹಾನಿ ಮಾಡಬಹುದು.

ಇದರ ಗೋಚರತೆಯನ್ನು ನಿರ್ಧಿಷ್ಟವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ ಮತ್ತು ಶ್ರವಣ ನಷ್ಟವು ಒಂದೇ ಬಾರಿ ಬಳಕೆ ಮಾಡಿದಾಗಲೂ ಉಂಟಾಗಬಹುದು.

ಆದಾಗ್ಯೂ ಶ್ರವಣ ನಷ್ಟವೆಂಬುದು ಬಾರದೆಯೂ ಇರಬಹುದು ಅಥವಾ ಬಳಕೆ ಮಾಡಿದ ವಾರಗಳು, ತಿಂಗಳು ಕಳೆದ ನಂತರವೂ ತೋರಿಕೆಗೆ ಬರಬಹುದು.

1944 ರ ತರುವಾಯ ಔಷಧ ಚಿಕಿತ್ಸೆಯಲ್ಲಿ ಬಹುಸ್ತರದ ಅಮೈನೋ ಗ್ಲೈಕೋಸೈಡ್ ತಯಾರಿಕೆಗಳು ಪರಿಚಯಿಸಲ್ಪಟ್ಟಿವೆ.

ಇವು ಸ್ಟ್ರೆಪ್ಟೋಮೈಸಿನ್, ಡಿಹೈಡ್ರೂ ಸ್ಟ್ರೆಪ್ಟೋಮೈಸಿನ್,ಕನ್ನಾಮೈಸಿನ್,ಜೆಂಟಾಮೈಸಿನ್,ನಿಯೋಮೈಸಿನ್, ಟೊಬ್ರಾಮೈಸಿನ್, ನೆಟಲ್ಮೈಸಿನ್, ಮತ್ತು ಅಮಿಕಾಸಿನ್,

ಎಂಬ ಹೆಸರಿನ ಜೀವನಿರೋಧಕಗಳಾಗಿ ಲಭ್ಯವಿದೆ.

ಅಮೈನೋ ಗ್ಲೈಕೋಸೈಡ್ ಗಳನ್ನು ಅಂತರ್ಭಾಗಗಳಿಗೆ ಬಳಸವುದರಿಂದ ಸರಿಪಡಿಸಲಾಗದ ನರ ಸಂಬಂಧಿತ ಶ್ರವಣ ನಷ್ಟ ಉಂಟಾಗುವ ಸಾಧ್ಯತೆಗಳಿವೆ.

ಶಬ್ದರೂಪದ ರಚನಾ ಶಾಸ್ತ್ರದ ಅಧ್ಯಯನಗಳು ಹೇಳುವಂತೆ ಕಾಕ್ಲಿಯದ ಹೊರಗಡೆಯ ಕೂದಲಿನ ಅಂಗಗಳ ಒಳಗಿನ ಭಾಗವು ಮೊದಲು ಘಾಸಿಗೊಳ್ಳುತ್ತದೆ.

ನಂತರ ಉಳಿದ ಎರಡು ಸಾಲುಗಳು ಮತ್ತು ಒಳಕೂದಲಿನ ಅಂಗಗಳು ಘಾಸಿಗೊಳ್ಳುತ್ತವೆ. ಇದರಿಂದಾಗಿ ನರ ಸಂಬಂಧಿ ಕಿವುಡುತನ ಉಂಟಾಗುತ್ತದೆ.

ಈ ಬಗ್ಗೆ ನಡೆಸಿದ ಅಧ್ಯಯನಗಳಂತೆ ಕಂಡುಬರುವ ಹಾನಿಯ ಪ್ರಮಾಣವು 4%ರಿಂದ 24%ದಷ್ಟು ಇರುತ್ತದೆ.ಇತ್ರ ಜೀವನಿರೋಧಕಗಳಿಗಿಂತ ಅಮೈನೋ

ಗ್ಲೈಕೋಸೈಡ್ ಗಳಿಗೆ ಅಲರ್ಜಿಯಂತಹ ಅಡ್ಡಪರಿಣಾಮಗಳು ಇಲ್ಲದಿರುವುದರಿಂದ ಈಗಲೂ ಸಹ ಇದರ ಬಳಕೆ ಚಾಲ್ತಿಯಲ್ಲಿದೆ.

ಈ ಅಮೈನೋ ಗ್ಲೈಕೋಸೈಡ್ ಗಳಲ್ಲಿ ಮುಖ್ಯವಾಗಿ ಜೆಂಟಾಮೈಸಿನ್, ನಿಯೋಮೈಸಿನ್ ಮತ್ತು ಟೊಬ್ರಾಮೈಸಿನ್ ಗಳೆಂಬ ತಯಾರಿಕೆಗಳು ವಿಶೇಷವಾಗಿ

ಕಿವಿ ಸೋಂಕಿನ ಔಷಧೋಪಚಾರಗಳಿಗಾಗಿ, ವಿಶೇಷವಾಗಿ ಹೊರ ಮತ್ತು ಮಧ್ಯ ಕಿವಿಯ ಸೋಂಕುಗಳ ಚಿಕಿತ್ಸೆಗಾಗಿ ತಯಾರಿಸಲಾಗುತ್ತದೆ.

ಪ್ರಾರಂಭದಲ್ಲಿ ಈ ಅಮೈನೊ ಗ್ಲೈಕೋಸೈಡ್ ತಯಾರಿಕೆಗಳಿಂದ ಕಿವಿಯ ನಂಜತ್ವವು ಅದನ್ನು ನರಗಳ ಮೂಲಕ ನೀಡಿದಾಗ ಮಾತ್ರ ಉಂಟಾಗುತ್ತದೆ

ಎಂದು ತಿಳಿಯಲಾಗಿತ್ತು. ಇತ್ತೆಚೆಗೆ ತಿಳಿದು ಬಂದಂತೆ ಕಿವಿಯ ಚಿಕಿತ್ಸೆಗೆ ಬಳಸುವ ಅಮೈನೊಗ್ಲೈಕೋಸೈಡ್ ತಯಾರಿಕೆಗಳನ್ನು ಮಧ್ಯ ಕಿವಿಗೆ ಬಳಸಿದಾಗ

ಅದು ಅಲ್ಲಿನ ದುಂಡಗಿನ ಕಿಂಡಿಯಂತಹ ಪರದೆಯೊಂದಿಗೆ (Round win-dow membranes) ಸೇರಿ ನಂತರ ಅದು ಪೆರಿಲಿಂಫ್ ನೊಂದಿಗೆ ಮಿಶ್ರಣಗೊಡು

ಕ್ರಮೇಣ ಅದು ಒಳ ಕಿವಿಯ ಸೂಕ್ಶ್ಮ ಕೂದಲಿನ ಅಂಗಗಳಿಗೆ ತಲುಪಿ ಹಾನಿಯನ್ನು ಉಂಟು ಮಾಡುತ್ತದೆ.

ಈ ರೀತಿಯಲ್ಲಿ ಉಂಟಾದ ಹಾನಿಯು ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ಬೇರೆ ಮಾತಿನಲ್ಲಿ ಹೇಳುವುದಾದರೆ ಅಮೈನೊ ಗ್ಲೈಕೊಸೈಡ್ ವರ್ಗದ ಜೀವನಿರೋಧಕಗಳ

ನಂಜತ್ವವು ಮತ್ತು ಅಡ್ಡ ಪರಿಣಾಮಗಳು ಕಿವಿಯ ಒಳಭಾಗಕ್ಕೂ ಮತ್ತು ಹೊರ ಭಾಗಕ್ಕೂ ತೊಂದರೆಯನ್ನುಂಟುಮಾಡುತ್ತದೆ.

ಜೆಂಟಾಮೈಸಿನ್ ಮತ್ತು ಸ್ಟೆಪ್ಟೋಮೈಸಿನ್ ಗಳು ಒಳಕಿವಿಯ ಸಮತೋಲನದ ಮೇಲೆ ವಿಷಕಾರಿ ಪರಿಣಾಮವನ್ನು ಉಂಟು ಮಾಡುತ್ತದೆ.

ನಿಯೋಮೈಸಿನ್ ಗಳು ಒಳಕಿವಿಯ ಕೇಳುವ ಭಾಗಕ್ಕೆ ತೀರಾ ವಿಷಕಾರಿ. ಕೆಲವೊಂದು ದ್ರವ ರೂಪದ ಜೀವನಿರೋಧಕ ತಯಾರಿಕೆಗಳೂ ಸಹ ಕಿವಿಗೆ

ನಂಜನ್ನು ಉಂಟುಮಾಡುತ್ತದೆ. ನಿಯೋಮೈಸಿನ್ ಯುಕ್ತ ಜೀವನಿರೋಧಕಗಳನ್ನು ದೀರ್ಘಕಾಲದ ತನಕ ಕಿವಿಯ ತಮಟೆಯಲ್ಲಿ ತೂತಿರುವವರು ಬಳಸಿದಾಗ

ಅಂತಹವರಿಗೆ ಕಿವಿಯ ನಂಜತ್ವ ಉಂಟಾಗುತ್ತದೆ. ಆದ್ರೆ ಯಾರು ಹೊರ ಕಿವಿಯ ಸಮಸ್ಯೆಯನ್ನು ಹೊಂದಿದ್ದು,ತಮಟೆಯು ಯಾವುದೇ ರಂಧ್ರಗಳಿಲ್ಲದೆ

ಸುಸ್ಥಿತಿಯಲ್ಲಿದ್ದರೆ,ಅಂತಹವರು ಬಳಕೆ ಮಾಡಬಹುದು.

ಮನುಷ್ಯನಲ್ಲಿ ನಂಜತ್ವವು ನಿರೀಕ್ಷಿಸಿದಷ್ಟು ವೇಗವಾಗಿ ಉಂಟಾಗುವುದಿಲ್ಲ. ಮಧ್ಯ ಕಿವಿಯ ದುಂಡಗಿನ ಕಿಂಡಿಯ ಪದರದಲ್ಲಿ (Round window membranes)
ನ್ಯೂನತೆಗಳಿದ್ದಲ್ಲಿ ಇದು ಕಿವಿಯೊಳಗೆ ತಲುಪಿ ಸಮಸ್ಯೆಗಳುಂಟಾಗಬಹುದು. ಮನುಷ್ಯರಲ್ಲಿ ದುಂಡಗಿನ ಕಿಂಡಿಯ ಪರದೆಗೆ ತಾಗಿಕೊಂಡು ಮತ್ತೊಂದು
ಪದರವು 20% ಜನರಿಗೆ ಇರುತ್ತದೆ. 11% ಜನರಲ್ಲಿ ಕೊಬ್ಬುಯುಕ್ತ ಪದರವು ಈ ದುಂಡಗಿನ ಕಿಂಡಿಯನ್ನು ಆವರಿಸಿರುತ್ತದೆ.
ಮನುಷ್ಯರಲ್ಲಿ ಈ ದುಡಗಿನ ಕಿಂಡಿ ಪದರವು ಸಾಮಾನ್ಯವಾಗಿ ದಪ್ಪವಾಗಿಯೆ ಇರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಕಿವಿಗೆ ಹಾಕುವ ಡ್ರಾಪ್ಸ್ ಗಳ
ವಿಷಕಾರಿತ್ವವು ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೂ ಅಧ್ಯಯನಗಳಿಂದ ತಿಳಿದು ಬಂದಂತೆ ಈ ಜೀವ ನಿರೋಧಕ ದ್ರಾಪ್ಸ್ ಗಳ ನಂಜತ್ವವು ಅದನ್ನು
ಎರಡು ವಾರಗಳಿಗೂ ಅಧಿಕ ಕಾಲ ಬಳಸಿದಾಗ ಉಂಟಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಕಿವಿಗೆ ಹಾಕುವ ಡ್ರಾಪ್ಸ್ ಗಳು ನಾವೆಲ್ಲಾ ತಿಳಿದುಕೊಂಡಂತೆ
ಸುರಕ್ಷಿತವಲ್ಲ.
ಅದರಲ್ಲೂ ವೈದ್ಯರು ಹಿಂದೆ ಯಾವುದೋ ಒಂದು ಕಿವಿಯ ಸಮಸ್ಯೆಗೆ ಸಲ್ಹೆ ಮಾಡಿದ ಔಷಧಿಯನ್ನು ಮತ್ತೊಂದು ಅಸ್ವಾಸ್ಥ್ಯಕ್ಕೆ ಬಳಸಲೇಬಾರದು.
ಕೆಲವೊಂದು ವರ್ಗದ ಕಿವಿಯ ಡ್ರಾಪ್ಸ್ ಗಳನ್ನು ದೀರ್ಘ ಕಾಲದ ತನಕ ಬಳಸುತ್ತಿದ್ದರೆ ಕಿವಿಗೆ ನಂಜುತನವು ಉಂಟಾಗುತ್ತದೆ. ವಿಶೇಷವಾಗಿ ಕಿವಿಯ
ತಮಟೆಯಲ್ಲಿ ತೂತಿರುವವರಂತೂ ಇದನ್ನು ಬಳಸಲೇಬಾರದು.ಯಾವುದಕ್ಕೂ ಕಿವಿ ಡ್ರಾಪ್ಸ್ ಗಳ ಬಳಕೆಗೆ ವೈದ್ಯರ ಸಲಹೆಯನ್ನು ಪಡೆಯುವುದು ಅತ್ಯವಶ್ಯಕ.

ಮೂಲ : ಮೀಡಿಯಾ ನೈನ್

2.98958333333
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top