ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಗುಳಿಗೆಯೇ ಕುಣಿಕೆಯಾದೀತು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಗುಳಿಗೆಯೇ ಕುಣಿಕೆಯಾದೀತು

ಸಾಮಾನ್ಯವಾಗಿ ಆರೋಗ್ಯಕ್ಕೆ ಏನಾದರೂ ಸಮಸ್ಯೆಯಾದರೆ ಗುಳಿಗೆ ತೆಗೆದುಕೊಳ್ಳುವ ಪದ್ಧತಿ ಇದೆ. ಆದರೆ ಈ ಗುಳಿಗೆಯೇ ಕುಣಿಕೆಯಾದರೆ..?! ಹೌದು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅನೇಕ ಗುಳಿಗೆಗಳು ಆರೋಗ್ಯಕ್ಕೆ ಕುತ್ತು ತರುತ್ತಿವೆ.

ಸಾಮಾನ್ಯವಾಗಿ ಆರೋಗ್ಯಕ್ಕೆ ಏನಾದರೂ ಸಮಸ್ಯೆಯಾದರೆ ಗುಳಿಗೆ ತೆಗೆದುಕೊಳ್ಳುವ ಪದ್ಧತಿ ಇದೆ. ಆದರೆ ಈ ಗುಳಿಗೆಯೇ ಕುಣಿಕೆಯಾದರೆ..?! ಹೌದು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅನೇಕ ಗುಳಿಗೆಗಳು ಆರೋಗ್ಯಕ್ಕೆ ಕುತ್ತು ತರುತ್ತಿವೆ. ಅವುಗಳಲ್ಲಿ ದೇಹದ ತೂಕ ಹೆಚ್ಚಿಸಿಕೊಳ್ಳಲು ಮತ್ತು ತೂಕ ಇಳಿಸಲು ತೆಗೆದುಕೊಳ್ಳುವ ಮಾತ್ರೆ ನಿಜಕ್ಕೂ ಅಪಾಯಕಾರಿ ಎಂಬ ಅಂಶವನ್ನು ಇತ್ತೀಚಿನ ಹಲವು ಸಂಶೋಧನೆಗಳು ಬಯಲಿಗೆಳೆದಿವೆ. ದಿಢೀರ್ ತೆಳ್ಳಗಾಗುವ ಆಸೆಯಿಂದ ತೆಗೆದುಕೊಳ್ಳುವ ಔಷಧಗಳು ವ್ಯಕ್ತಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಇತ್ತೀಚೆಗೆ ದೂರದರ್ಶನ, ಪತ್ರಿಕೆಗಳಲ್ಲಿ ಎಲ್ಲೆಲ್ಲೂ ಹೀಗೆ ದಿಢೀರ್ ತೆಳ್ಳಗಾಗುವ, ತೂಕ ಹೆಚ್ಚಿಸಿಕೊಳ್ಳುವ ಜಾಹೀರಾತುಗಳೇ ರಾರಾಜಿಸುತ್ತಿವೆ. ಆದರೆ ಈ ಮಾತ್ರೆಗಳು ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ನೀಡಲು ವಿಫಲವಾಗುತ್ತಿವೆ, ಮತ್ತು ದೇಹದ ಆರೋಗ್ಯ ಮತ್ತಷ್ಟು ಹದಗೆಡುವಂತೆ ಮಾಡುತ್ತಿವೆ ಎಂದು ತಜ್ಞ ವೈದ್ಯರೇ ಹೇಳುತ್ತಾರೆ. ಅಷ್ಟೇ ಅಲ್ಲ, ಈ ಮಾತ್ರೆಗಳಿಂದ ಅಡ್ಡಪರಿಣಾಮ ಹೆಚ್ಚು. ದಿಢೀರ್ ತೆಳ್ಳಗಾಗುವುದಕ್ಕಾಗಲೀ, ದಪ್ಪಗಾಗುವುದಕ್ಕಾಗಲೀ ಸುಲಭ ಮಾರ್ಗಗಳಿಲ್ಲ. ಆಹಾರದಲ್ಲಿ ಪಥ್ಯ, ಶಿಸ್ತುಕ್ರಮ ರೂಢಿಸಿಕೊಂಡು ಪ್ರತಿದಿನ ವ್ಯಾಯಾಮ, ಯೋಗಾಸನಗಳನ್ನು ಮಾಡುತ್ತಿದ್ದರೆ ದೇಹದ ತೂಕವನ್ನು ಸಮಸ್ಥಿತಿಯಲ್ಲಿಡಲು ಸಾಧ್ಯ. ಪಥ್ಯ, ವ್ಯಾಯಾಮವಿಲ್ಲದೆ ಕೇವಲ ಮಾತ್ರೆಯನ್ನಷ್ಟೇ ಸೇವಿಸಿ ಸುಮ್ಮನಾಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಹಾಗೆಯೇ ದೇಹದ ತೂಕ ಹೆಚ್ಚಿಸುವ ಮಾತ್ರೆಗಳು ಶರೀರದಲ್ಲಿ ಬೇರೆ ಬೇರೆ ರೀತಿಯ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತವೆ. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಲ್ಲದೇ ಈ ಮಾತ್ರೆಗಳನ್ನು ಒಮ್ಮೆ ತೆಗೆದುಕೊಳ್ಳುವುದಕ್ಕೆ ಆರಂಭಿಸಿದರೆ ಬಿಡುವಂತಿಲ್ಲ. ಬಿಟ್ಟರೆ ಮತ್ತೆ ಮೊದಲಿನ ಸ್ಥಿತಿಗೇ ಬರಬೇಕಾಗುತ್ತದೆ. ನಿಯಮಿತವಾದ ವ್ಯಾಯಾಮ ಮತ್ತು ಪಥ್ಯ ಮಾತ್ರವೇ ದೇಹದ ತೂಕ ಕಡಿಮೆ ಮಾಡಲು ಸಹಕಾರಿ. ಅಲ್ಲದೆ ದೇಹದ ತೂಕ ಹೆಚ್ಚಿಸುವುದಕ್ಕೆ ಪೌಷ್ಟಿಕ ಆಹಾರ, ಒಣ ಹಣ್ಣುಗಳು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಅನಿವಾರ್ಯ. ದೇಹಕ್ಕೆ ಅಗತ್ಯವಿರುವಷ್ಟು ಊಟ, ದೇಹ ಪ್ರಕೃತಿಗೆ ಅವಶ್ಯವಿರುವಷ್ಟು ಪೋಷಕಾಂಶಯುಕ್ತ ಆಹಾರ ಸೇವನೆ… ಇವಿಷ್ಟಿದ್ದರೆ ದೇಹದ ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಯಾವ ಮಾತ್ರೆಯೂ ಬೇಕಿಲ್ಲ. ಶೀಘ್ರ ಸಣ್ಣಗಾಗುವುದಕ್ಕೆ ಅಥವಾ ದಪ್ಪವಾಗುವುದಕ್ಕೆ, ಒಟ್ಟಿನಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳುವುದಕ್ಕಾಗಿ ತೆಗೆದುಕೊಳ್ಳುವ ಔಷಧಗಳು ಆರೋಗ್ಯಕ್ಕೇ ಮಾರಕವಾಗಬಾರದಲ್ಲ! ಇಂಥ ಮಾತ್ರೆ ತೆಗೆದುಕೊಳ್ಳುವವರಿಗೊಂದು ಕಿವಿಮಾತು: ಗುಳಿಗೆಯೇ ಕುಣಿಕೆಯಂತಾದೀತು…

ಮೂಲ: ವಿಕ್ರಮ

2.95294117647
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top