অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಟ್ರೈಗ್ಲಿಜರೈಡ್ಸ್ ಮತ್ತು ಕೊಲೆಸ್ಟ್ರಾಲ್ ಮಟ್ಟ

ಟ್ರೈಗ್ಲಿಜರೈಡ್ಸ್ ಮತ್ತು ಕೊಲೆಸ್ಟ್ರಾಲ್ ಮಟ್ಟ

ಟ್ರೈಗ್ಲಿಜರೈಡ್ಸಗಳು ದೇಹದಲ್ಲಿನ ಮತ್ತು ನಾವು ಸೇವಿಸುವ ಆಹಾರದಲ್ಲಿನ ಕೊಬ್ಬುಗಳ ಒಂದು ರಸಾಯನಿಕ ರೂಪ. ನಾವು ಆಹಾರ ಸೇವಿಸಿದಾಗ ಅದನ್ನು ದೇಹವು ಟ್ರೈಗ್ಲಿಜರೈಡ್ ಆಗಿ ಪರಿವರ್ತಿಸುವುದು , ಅದನ್ನು ದೇಹಕ್ಕೆ ಅಗತ್ಯಬಿದ್ದಾಗ ಬಳಸಲು ಸಂಗ್ರಹಿಸುವುದು. ದೇಹಕ್ಕೆ ಶಕ್ತಿಯ ಅಗತ್ಯಬಿದ್ದಾಗ ಟ್ರೈಗ್ಲಿಜರೈಡುಗಳು ಬಿಡುಗಡೆಯಾಗಿ , ಉರುವಲಾಗಿ ಉರಿದು ನಮಗೆ ಅಗತ್ಯವಾದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ.

ನೀವು ಸಾಮಾನ್ಯವಾಗಿ ಮಾಡಿಸುವ ತಪಾಸಣೆಯ ಅಂಗವಾಗಿ , ವೈದ್ಯರು ರಕ್ತದಲ್ಲಿನ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಪ್ರಮಾಣದ ಪರೀಕ್ಷೆ ಮಾಡಿಸುವರು. ಹಲವರಿಗೆ ಅವುಗಳ ಮಟ್ಟ ಸರಿಯಾಗಿರುವುದು. ಆದರೆ ಹಲವರಿಗೆ ಅವರ ಪಥ್ಯಾಹಾರ, ತೆಗೆದುಕೊಳ್ಳುವ ಔಷಧಿ ಮತ್ತು ಅನುವಂಶೀಯತೆಯ ಪರಿಣಾಮವಾಗಿ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಪ್ರಮಾಣವು ದೇಹದ ಅಗತ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಬಹುದು. ದುರದೃಷ್ಟವಶಾತ್ ಹೆಚ್ಚಾಗಿದ್ದರೆ ಅದು ಒಳ್ಳೆಯದಲ್ಲ.ನಿಜವಾಗಿಯೂ ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಪ್ರಮಾಣ ಅಧಿಕವಾಗಿದ್ದರೆ ನಿಮ್ಮ ಆರೋಗ್ಯಕ್ಕೆ ಅದು ಅಪಾಯಕರ. ಸಾಮಾನ್ಯ ಮಟ್ಟಕ್ಕಿಂತ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಪ್ರಮಾಣವು ಅಧಿಕವಾಗಿರಲು ಕೆಳಕಂಡ ಅಂಶಗಳು ಕಾರಣ :

  • ಎದೆನೋವು ಮತ್ತು ಹೃದಯಾಘಾತದಂತೆ ಕಾಣುವ ಲಕ್ಷಣಗಳು
  • ಪರಿಧಿ ರಕ್ತನಾಳಗಳ ರೋಗ (ಕಾಲಿನಲ್ಲಿ ಕಟ್ಟಿಕೊಂಡ ಅಪಧಮನಿಗಳು)
  • ತಲೆ ಮತ್ತು ಕತ್ತಿನಲ್ಲಿ ಕಟ್ಟಿಕೊಂಡ ಅಪಧಮನಿಗಳ ಪರಿಣಾಮವಾಗಿ ಬರುವ ಪಾರ್ಶ್ವ ವಾಯು

ಪ್ಯಾಂಕ್ರಿಯಾಟಿಟಿಸ್ ಮತ್ತು ಲಿಪೊಡಿಸ್ಟರೋಫಿ

ಕೊಲೆಸ್ಟ್ರಾಲ್ ಮಟ್ಟದ ಮೇಲೆ ಪರಿಣಾಮ ಬೀರುವ ಅಂಶಗಳಾವು ?

ಕೊಲಸ್ಟ್ರಾಲ್ ಮಟ್ಟದ ಮೇಲೆ ಪರಿಣಾಮ ಬೀರುವ ಅಂಶಗಳು ಹಲವಾರು. ಅವುಗಳಲ್ಲಿ ಹಲವು ನಮ್ಮ ನಿಯಂತ್ರಣದಲ್ಲಿ ಇಲ್ಲ.ಉದಾ: ಅನುವಂಶಿಯ( ಕುಟುಂಬದಲ್ಲೆ ಇರುವವು)ವಾಗಿ ಹೆಚ್ಚು ಕೊಲೆಸ್ಟ್ರಾಲ್ ಇರುಬಹುದಾದವು. ಆದರೆ ಅನೇಕ ಅಂಶಗಳನ್ನು ನಾವು ನಿಯಂತ್ರಿಸಬಹುದು. ಉದಾ:

  • ಕೊಲೆಸ್ಟ್ರಾಲ್/ ಕಾರ್ಬೊ ಹೈಡ್ರೇಟ್ ( ಸಕ್ಕರೆ) ಅಧಿಕವಿರುವ ಆಹಾರ.
  • ವ್ಯಾಯಾಮದ ಕೊರತೆ
  • ಎಚ್ ಐ ವಿ ನಿಯಂತ್ರಣಕ್ಕೆ ಬಳಸುವವೂ ಸೇರಿದಂತೆ ಕೆಲವು ಔಷಧಿಗಳು

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate