ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ತಂಪು ಪಾನೀಯ

ತಂಪು ಪಾನೀಯ ಕುರಿತಾದ ಮಾಹಿತಿ

ಸುಂದರ ನಗು ಎಂದರೆ ಅಲ್ಲಿ ಹಲ್ಲಿನದೇ ಪ್ರಮುಖ ಪಾತ್ರ. ಒಪ್ಪವಾಗಿ ಜೋಡಿಸಿರುವ ದಾಳಿಂಬೆ ಹಣ್ಣಂತೆ ಕಾಣುವ ಹಲ್ಲುಗಳು ಬೆಳ್ಳಗಿದ್ದರಂತೂ ಇನ್ನೂ ಆಕರ್ಷಕ. ಆದರೆ ಈ ಹಲ್ಲನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಸುಲಭದ ವಿಷಯವಲ್ಲ. ಈಗೆಲ್ಲ ಚಿಕ್ಕ ಚಿಕ್ಕ ಮಕ್ಕಳಲ್ಲೇ ಹಲ್ಲುನೋವು ಶುರುವಾಗುತ್ತದೆ. ಜೀವನ ಶೈಲಿಯಲ್ಲಿ ಬದಲಾವಣೆ, ಆಹಾರ ಕ್ರಮ ಮುಂತಾದವುಗಳು ನಮ್ಮ ದೇಹಾರೋಗ್ಯವನ್ನು ಏರುಪೇರು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹಲ್ಲಿನ ವಿಷಯದಲ್ಲೂ ಅಷ್ಟೇ. ಚಿಕ್ಕ ಮಕ್ಕಳು ಎಡಬಿಡದೆ ಸೇವಿಸುವ ಚಾಕೋಲೇಟ್‌ಗಳು, ಐಸ್‌ಕ್ರೀಮ್‌ಗಳು ಹಲ್ಲಿನ ಆರೋಗ್ಯವನ್ನು ಹದಗೆಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರೆ, ತಂಪು ಪಾನೀಯಗಳು ಸಹ ಹಲ್ಲನ್ನು ಹಾಳು ಮಾಡುತ್ತವೆ ಎಂಬುದನ್ನು ಇತ್ತೀಚಿನ ಸಂಶೋಧನೆ ಬಯಲಿಗೆಳೆದಿದೆ.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚಿರುವ ಹಲ್ಲಿನ ಸಮಸ್ಯೆಗೆ ಹೆಚ್ಚು ತಂಪು ಪಾನೀಯಗಳೇ ಕಾರಣವಂತೆ. ಇವುಗಳಲ್ಲಿ ಹೆಚ್ಚಿರುವ ಆಮ್ಲೀಯ ಗುಣಗಳು ಹಲ್ಲು ಗಟ್ಟುಮುಟ್ಟಾಗಿರದಂತೆ ಮಾಡುತ್ತವೆ. ಹೆಚ್ಚು ಹೆಚ್ಚು ಹುಳಿ ಪದಾರ್ಥಗಳನ್ನು ತಿಂದಷ್ಟೂ ಹಲ್ಲಿನ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ. ಹಲ್ಲುಗಳ ಶಕ್ತಿಯನ್ನು ಕ್ಷೀಣಿಸುತ್ತದೆ. ಅಲ್ಲದೆ, ಪ್ರತಿದಿನ ಎರಡು ಬಾರಿ ಹಲ್ಲುಜ್ಜದಿರುವುದು, ಮಲಗುವ ಮೊದಲು ಸಿಹಿ ಪದಾರ್ಥಗಳನ್ನು ಸೇವಿಸಿ, ಬಾಯಿ ತೊಳೆಯದೆ ಮಲಗುವುದು ಇತ್ಯಾದಿ ಕಾರಣಗಳಿಂದ ಹಲ್ಲಿನ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ.

ಹಲ್ಲಿನ ಸಮಸ್ಯೆ ಉಲ್ಬಣವಾದ ನಂತರ ಹಲ್ಲನ್ನು ಕೀಳದೆ ಬೇರೆ ಮಾರ್ಗವೇ ಇರುವುದಿಲ್ಲ. ಆ ಹಲ್ಲಿಗೆ ಬೇರೆ ಬೇರೆ ಚಿಕಿತ್ಸೆ ಮಾಡಬಹುದಾದರೂ ಅದು ಶಾಶ್ವತ ಪರಿಹಾರವಾಗಲಾರದು. ಏಕೆಂದರೆ ಒಂದು ಹಲ್ಲು ಹಾಳಾದರೆ ಅದು ಇತರ ಹಲ್ಲುಗಳಿಗೂ ರೋಗಾಣುಗಳನ್ನು ಸರಬರಾಜು ಮಾಡುತ್ತದೆ. ಹೀಗೆ ಹಲ್ಲುಗಳೆಲ್ಲವೂ ಹಾಳಾಗಬಹುದಾದ ಸಾಧ್ಯತೆಗಳೂ ಇರುತ್ತವೆ.

ಇತ್ತೀಚೆಗೆ ಹಲ್ಲಿನ ಸಮಸ್ಯೆಯಿಂದಲೇ ಹಲವರು ಬಾಯಿಯ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ತಿಳಿದುಬಂದಿದೆ. ತೀರಾ ಸಣ್ಣ ಸಮಸ್ಯೆಯೆಂದು ನಿರ್ಲಕ್ಷ್ಯಿಸಿದರೆ ಮುಂದೊಮ್ಮೆ ನಾವೇ ಅದಕ್ಕೆ ಬೆಲೆ ತೆರಬೇಕಾಗುತ್ತದೆ.

ಹಲ್ಲಿನ ಸಮಸ್ಯೆ ಹೆಚ್ಚಿದಷ್ಟೂ ಮಾತನಾಡುವಾಗ ಬಾಯಿಯಿಂದ ದುರ್ವಾಸನೆಯೂ ಬರಲು ಶುರುವಾಗುತ್ತದೆ. ಇದು ಇತರರೆದುರು ನಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಈ ಎಲ್ಲಾ ಕಾರಣಗಳಿಂದ ಹಲ್ಲಿನ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ ಎಂಬುದು ತಜ್ಞ ದಂತವೈದ್ಯರ ಸಲಹೆ.

ಅಲ್ಲದೆ, ಆದಷ್ಟು ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು ಎಂದೂ ತಜ್ಞರು ಅಭಿಪ್ರಾಯಪಡುತ್ತಾರೆ.

ಮೂಲ: ವಿಕ್ರಮ

2.96052631579
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top