ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ನಮ್ಮ ಆರೋಗ್ಯ ನಮ್ಮ ಕೈಯಲ್ಲಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ

ಆಹಾರವೇ ಔಷಧವಾಗಿರಲಿ – ಔಷಧ ಆಹಾರವಾಗದಿರಲಿ.

ಆಹಾರವೇ ಔಷಧವಾಗಿರಲಿ – ಔಷಧ ಆಹಾರವಾಗದಿರಲಿ.
ಸೃಷ್ಟಿಯ ಉತ್ಪತ್ತಿಯ ನಂತರ ಉತ್ಪತ್ತಿಯಾಗಿರುವುದೇ ಆಹಾರ. ಆಹಾರದ ನಂತರ ಜೀವ ಸಂಕುಲ. ಜೀವ ಸಂಕುಲಕ್ಕೆ ಬೇಕಾದ ಎಲ್ಲ ಪೌಷ್ಠಿಕಾಂಶ ಹಾಗೂ ಔಷಧ ಗುಣಗಳನ್ನು ಆಹಾರವೇ ಹೊಂದಿದೆ. ಈ ಆಹಾರದಲ್ಲಿಯೇ ರೋಗ ಮುಂಜಾಗ್ರತೆ ಹಾಗೂ ರೋಗ ನಿರ್ಮೂಲನೆಯ ಶಕ್ತಿ ಇದೆ. ಈ ಆಹಾರದಲ್ಲಿ ವನಸ್ಪತಿಗಳಿವೆ. ವನಸ್ಪತಿಗಳಲ್ಲಿ ರೋಗ ನಿರ್ಮೂಲನೆಯ ಶಕ್ತಿ ಇದೆ. ಅದನ್ನು ತಿಳಿದುಕೊಂಡು ಸರಿಯಾಗಿ ಸೇವಿಸುವ ಕ್ರಮವನ್ನು ನಮ್ಮ ಹಿರಿಯರು ಅನುಸರಿಸುತ್ತಿದ್ದರು ಸಂಪೂರ್ಣವಾಗಿ ಈಗ ರಾಸಾಯನಿಕ ಬಳಕೆಯಿಂದ ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಅದಕ್ಕಾಗಿ ರಾಸಾಯನಿಕ ಔಷಧ ಬಳಸಿ ಮತ್ತಷ್ಟು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಶುದ್ಧ ಆಹಾರ ಹಾಗೂ ವನಸ್ಪತಿಗಳಲ್ಲಿ ರೋಗ ನಿರ್ಮೂಲನೆಯ ಶಕ್ತಿ ಅರಿತು ತೆಗೆದುಕೊಳ್ಳುವುದೇ ‘ಮನೆ ಮದ್ದು’ ಎನಿಸಿಕೊಳ್ಳುತ್ತದೆ. ದೇಹಕ್ಕೆ ಬರುವ ಬಹುತೇಕ ಖಾಯಿಲೆಗಳನ್ನು ಮನೆ ಮದ್ದಿನ ಮೂಲಕ ನಿಯಂತ್ರಿಸಬಹುದು ಹಾಗೂ ಸತತ ಸೇವಿಸುವ ಮೂಲಕ ನಿರ್ಮೂಲನ ಮಾಡಬಹುದು. ತಲೆಯಿಂದ ಪಾದದವರೆಗೆ ಬರುವ ನೂರಾರು ರೋಗಕ್ಕೆ ಮನೆ ಮದ್ದಿನಿಂದ ಗುಣ ಪಡಿಸುವ ಎಲ್ಲ ಕ್ರಮಗಳನ್ನು ಒಂದೊಂದಾಗಿ ಗಮನಿಸಿ ಅನುಸರಿಸಿದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.
ಪ್ರತಿ ಅಂಗಕ್ಕೆ ರೋಗಗಳಿಗೆ ಮನೆ ಮದ್ದು ಸೂಚಿಸಲಾಗುವುದು. ಅದರಲ್ಲಿ ನಮಗೆ ಸುಲಭವಾಗಿ ದೊರೆಯುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು. ಮನೆ ಮದ್ದಿನಿಂದ ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲ. ನಿಧಾನವಾಗಿ ಗುಣವಾಗುವುದರಿಂದ ತಾಳ್ಮೆಯಿಂದ ಚಿಕಿತ್ಸೆ ಮುಂದುವರೆಸಿ ರೋಗ ನಿರ್ಮೂಲನ ಮಾಡಬಹುದು. ಮನೆ ಮದ್ದಿನೊಂದಿಗೆ ಮನೆಯಲ್ಲಿ ಮಾಡಬಹುದಾದ ಪ್ರಕೃತಿ ಕ್ರಮಗಳನ್ನು ತಿಳಿಸಲಾಗಿದೆ ಹಾಗೂ ಪಥ್ಯ ಕ್ರಮಗಳನ್ನು ಅನುಸರಿಸಬೇಕು.

ಮೂಲ: ವಿಕ್ರಮ

3.0202020202
ಶರಣಯ್ಯ ಮಠ Dec 30, 2016 09:13 PM

ಊಟ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top