ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನಯನ

ಕಣ್ಣು… ದೇಹದ ಅತ್ಯಂತ ಮಹತ್ವದ ಅಂಗ. ಕೆಲವೇ ಹೊತ್ತು ಕಣ್ಣಿಗೆ ಬಟ್ಟೆಕಟ್ಟಿಕೊಂಡಿದ್ದರೆ ನಮ್ಮಿಂದ ಇರುವುದಕ್ಕಾಗುವುದಿಲ್ಲ.

ಕಣ್ಣು… ದೇಹದ ಅತ್ಯಂತ ಮಹತ್ವದ ಅಂಗ. ಕೆಲವೇ ಹೊತ್ತು ಕಣ್ಣಿಗೆ ಬಟ್ಟೆಕಟ್ಟಿಕೊಂಡಿದ್ದರೆ ನಮ್ಮಿಂದ ಇರುವುದಕ್ಕಾಗುವುದಿಲ್ಲ. ಏಕೆಂದರೆ ದೃಷ್ಟಿ ಶಕ್ತಿಯ ಮೇಲೆ ನಾವು ಆ ಪರಿ ಅವಲಂಬಿತರಾಗಿರುತ್ತೇವೆ. ಕಣ್ಣಿಗೆ ಸ್ವಲ್ಪವೇ ಸಮಸ್ಯೆಯಾದರೂ ಕಿರಿಕಿರಿ ಅನ್ನಿಸದಿರದು. ಅದರಲ್ಲೂ ಈಗಂತೂ ಬೇಸಿಗೆ ಶುರುವಾಗಿದೆ. ಕಣ್ಣಿನ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಕಾಳಜಿ ಬೇಕೇ ಬೇಕು. ರಸ್ತೆಯಲ್ಲಿರುವ ಧೂಳು, ಅತಿಯಾದ ಬಿಸಿಲು ಕಣ್ಣಿನ ಆರೋಗ್ಯವನ್ನು ಕೆಡಿಸುತ್ತದೆ. ಆದ್ದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಉಪಾಯಗಳು ಇಲ್ಲಿವೆ…

 • ಬೇಸಿಗೆ ಕಾಲದಲ್ಲಿ ತಲೆಗೆ ಎರಡು ದಿನಕ್ಕೊಮ್ಮೆಯಾದರೂ ಕೊಬ್ಬರಿ ಎಣ್ಣೆ ಹಾಕುವುದನ್ನು ಮರೆಯಬೇಡಿ. ವಾರಕ್ಕೊಮ್ಮೆ ಹರಳೆಣ್ಣೆಯನ್ನೂ ಹಾಕಿ. ಇದು ಕಣ್ಣನ್ನು ತಂಪಾಗಿರಿಸುತ್ತದೆ.
 • ಪ್ರತಿದಿನ ಮನೆಗೆ ಹೋಗುತ್ತಿದ್ದಂತೆಯೇ ಕೈ-ಕಾಲು ಮುಖ ತೊಳೆದ ನಂತರ ಒಂದು ಶುದ್ಧ ತಟ್ಟೆಯಲ್ಲಿ, ಶುದ್ಧ ನೀರನ್ನು ಹಾಕಿ ಅದರಲ್ಲಿ ಕಣ್ಣನ್ನು ಕೆಲವು ಸಲ ಅದ್ದಿ. ಇದರಿಂದ ಕಣ್ಣಿನಲ್ಲಿರುವ ಧೂಳು ಮುಂತಾದ ಸೂಕ್ಷ್ಮ ಕಣಗಳು ಹೊರಬರುತ್ತವೆ.
 • ತಾಜಾ ಹಸಿರು ಸೊಪ್ಪು, ತರಕಾರಿಗಳನ್ನೂ, ಹಣ್ಣನ್ನೂ ಹೆಚ್ಚು ಹೆಚ್ಚು ಸೇವಿಸಿ.
 • ಸಿಟ್ರಿಕ್ ಆಮ್ಲ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ.
 • ನೀವು ಧೂಮಪಾನ ಮಾಡುವವರಾಗಿದ್ದರೆ ಅದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಿ. ಇದು ಕಣ್ಣಿನ ಆರೋಗ್ಯವನ್ನು ಹದಗೆಡಿಸುತ್ತದೆ.
 • ಮನೆಯಿಂದ ಹೊರಗೆ ಹೋಗುವಾಗ ಅತಿಯಾದ ಬಿಸಿಲಿದ್ದರೆ ಕನ್ನಡಕ ಧರಿಸುವುದನ್ನು ಮರೆಯದಿರಿ.
 • ಕಂಪ್ಯೂಟರ್ ಮುಂದೆ ಸತತ ಮೂರ್ನಾಲ್ಕು ಗಂಟೆ ಕೂತಿರಬೇಕೆಂದರೆ ಆಗಾಗ ಮರೆಯದೇ ವಿಶ್ರಾಂತಿ ತೆಗೆದುಕೊಳ್ಳಿ. ಒಂದೇ ಸಮೆನೆ ಕಂಪ್ಯೂಟರ್ ನೋಡುತ್ತ ಕೂರುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
 • ಪ್ರತಿ 20 ನಿಮಿಷಕ್ಕೊಮ್ಮೆ ನಿಮ್ಮ ಕಣ್ಣಿಗೆ ವಿಶ್ರಾಂತಿ ಬೇಕೇ ಬೇಕು. ಆದ್ದರಿಂದ 20 ನಿಮಿಷದ ನಂತರ ನಿಮ್ಮಿಂದ 20 ಅಡಿ ದೂರದಲ್ಲಿರುವ ಯಾವುದಾದರೂ ವಸ್ತುವನ್ನು ನೋಡುತ್ತಿರಿ. ಅದರಿಂದ ಹತ್ತಿರದಿಂದ ಕಂಪ್ಯೂಟರ್ ನೋಡುತ್ತ ದಣಿದ ಕಣ್ಣಿಗೆ ಸ್ವಲ್ಪ ವಿರಾಮ ಸಿಕ್ಕಂತಾಗುತ್ತದೆ.
 • ರೆಪ್ಪೆ, ಕಣ್ಣಿನ ರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ. ರೆಪ್ಪೆಯನ್ನು ಪ್ರತಿ ಏಳು ಸೆಕೆಂಡಿಗೊಮ್ಮೆ ಮಿಟುಕಿಸಲೇಬೇಕು. ಅದು ಆರೋಗ್ಯವಂತ ಕಣ್ಣಿನ ಲಕ್ಷಣ. ಆದರೆ ಕಂಪ್ಯೂಟರ್, ಟಿವಿ ನೋಡುವ ಸಂದರ್ಭದಲ್ಲಿ ನಾವು ಕಣ್ಣನ್ನು ಮಿಟುಕಿಸುವುದನ್ನೇ ಮರೆತುಬಿಡುತ್ತೇವೆ. ಇದರಿಂದ ಕಣ್ಣಿನ ಆರೋಗ್ಯಕ್ಕೆ ಬಹಳವೇ ಸಮಸ್ಯೆಯಾಗುತ್ತದೆಂಬುದು ತಜ್ಞರ ಅಭಿಪ್ರಾಯ.
 • ಕ್ಯಾರೆಟ್‌ಅನ್ನು ಹೆಚ್ಚು ಸೇವಿಸಿ. ಇದರಲ್ಲಿರುವ ಎ ವಿಟಾಮಿನ್ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
 • ಕಣ್ಣು ಒಣಗುವುದಕ್ಕೆ ಮುಖ್ಯ ಕಾರಣ ದೇಹದ ಉಷ್ಣತೆ ಹೆಚ್ಚುವುದು. ಆದ್ದರಿಂದ ದೇಹದ ಉಷ್ಣತೆ ಸಮಸ್ಥಿತಿಯಲ್ಲಿರುವಂಥ ಆಹಾರವನ್ನೇ ಸೇವಿಸಿ.
 • ಮಂದ ಬೆಳಕಿನಲ್ಲಿ ಓದುವುದು ಒಳ್ಳೆಯದಲ್ಲ. ದೇಹಕ್ಕೆ ಅಗತ್ಯವಿರುವಷ್ಟು ನಿದ್ದೆ ಸಿಕ್ಕಿಲ್ಲವೆಂದರೆ ಕಣ್ಣಿನ ಆರೋಗ್ಯದ ಮೇಲೆ ಅದು ಗಂಭೀರ ಪರಿಣಾಮ ಬೀರುತ್ತದೆ.
 • ಮಧುಮೇಹ ರೋಗಿಗಳಂತೂ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರುವುದು ಅಗತ್ಯ.

ಮೂಲ: ವಿಕ್ರಮ

3.02298850575
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top