ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ನೋವು ಸಹಿಸುವುದರಲ್ಲಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನೋವು ಸಹಿಸುವುದರಲ್ಲಿ

ನೋವು ಸಹಿಸುವುದರಲ್ಲಿ ಮಹಿಳೆಯರದೇ ಮೇಲುಗೈ!

ಹೌದು, ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ನೋವನ್ನು ಸಹಿಸುವ ಶಕ್ತಿ ಮಹಿಳೆ ಮತ್ತು ಪುರುಷರಲ್ಲಿ ಯಾರಿಗೆ ಹೆಚ್ಚು ಎಂಬುದನ್ನು ಅಭ್ಯಸಿಸಿತು. ಇದರಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದು, ಹಲವು ವಿಷಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದೆ ಎಂಬುದನ್ನು ಸಾಬೀತುಪಡಿಸಿತು. ಕಫ, ಕೆಮ್ಮು, ತಲೆನೋವು ಮುಂತಾದ ಸಾಮಾನ್ಯ ಸಮಸ್ಯೆಗಳನ್ನು ಪುರುಷರು ಎದುರಿಸುವ ರೀತಿಗೂ, ಮಹಿಳೆಯರು ಎದುರಿಸುವ ರೀತಿಗೂ ಅಜಗಜಾಂತರವಿದೆ ಎಂಬುದನ್ನು ಈ ಸಮೀಕ್ಷೆ ದೃಢಪಡಿಸಿದೆ.
ಆರೋಗ್ಯದಲ್ಲಿ ಸಣ್ಣ-ಪುಟ್ಟ ಏರುಪೇರುಗಳು ಸಂಭವಿಸಿದರೆ ಮಹಿಳೆಯರು ಅದನ್ನು ಮತ್ತೊಬ್ಬರಿಗೆ ಹೇಳಿಕೊಳ್ಳುವುದೇ ಇಲ್ಲವಂತೆ! ಸ್ವಯಂವೈದ್ಯಕೀಯದ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರಂತೆ. ಅವರಿಗೆ ಮತ್ತೊಬ್ಬರೆದುರು ಸಿಂಪತಿ ಗಿಟ್ಟಿಸಿಕೊಳ್ಳಲು ಇಷ್ಟವಾಗುವುದಿಲ್ಲವಂತೆ. ನೋವನ್ನು ಸಹಿಸುವ ಮಿತಿ ದಾಟಿದ ನಂತರವೇ ಅವರು ತಮ್ಮ ಆರೋಗ್ಯ ಸರಿಯಿಲ್ಲವೆಂದು ಮತ್ತೊಬ್ಬರೆದುರು ಹೇಳುತ್ತಾರಂತೆ. ಸೃಷ್ಟಿಯೇ ಪುರುಷನಿಗಿಂತ ಮಹಿಳೆಯರಿಗೇ ಹೆಚ್ಚು ಸಹಿಷ್ಣು ಶಕ್ತಿಯನ್ನು ನೀಡಿದೆ. ಮಾನಸಿಕ ಅಥವಾ ದೈಹಿಕ ನೋವನ್ನು ಪುರುಷನಿಗಿಂತ ಹೆಚ್ಚಾಗಿ ಮಹಿಳೆ ಸಹಿಸಿಕೊಳ್ಳುತ್ತಾಳೆ. ಪುರುಷರು ಸ್ವಲ್ಪವೇ ಹುಷಾರು ತಪ್ಪಿದರೂ, ಸಣ್ಣ ಪ್ರಮಾಣದ ತಲೆನೋವು ಕಾಣಿಸಿಕೊಂಡರೂ ಯಾವುದೋ ಬಹುದೊಡ್ಡ ಸಮಸ್ಯೆಯಾದಂತೆ ಗೋಳಿಡುತ್ತಾರೆ ಎಂದು ಈ ಅಧ್ಯಯನ ಹೇಳಿದೆ. ಹಾಗೆ ಹೇಳುವುದಕ್ಕೆ ಹೋದರೆ ಮಹಿಳೆಯರಿಗೆ ಪ್ರತಿದಿನವೂ ಒಂದಿಲ್ಲೊಂದು ದೈಹಿಕ ಸಮಸ್ಯೆಗಳಿರುತ್ತವೆ. ಆದರೆ ಅವರೆಂದಿಗೂ ಅದನ್ನು ವ್ಯಕ್ತಪಡಿಸುವುದಕ್ಕೆ ಹೋಗುವುದಿಲ್ಲ. ಒಂದರ್ಥದಲ್ಲಿ ಅವರು ಆ ಸಮಸ್ಯೆಗೆ ಒಗ್ಗಿಹೋಗಿಬಿಟ್ಟಿರುತ್ತಾರೆ. ಸದಾ ಕ್ರಿಯಾಶೀಲರಾಗಿ ಒಂದಿಲ್ಲೊಂದು ಯೋಚನೆಯಲ್ಲಿ ನಿರತರಾಗಿರುವುದರಿಂದ ಅವರಿಗೆ ದೇಹದ ನೋವು ಅಷ್ಟಾಗಿ ಮಹತ್ವದ್ದು ಎನ್ನಿಸುವುದಿಲ್ಲ ಎಂದು ಇದು ತಿಳಿಸಿದೆ. ತಜ್ಞ ವೈದ್ಯರ ಪ್ರಕಾರವೂ ಇದು ನಿಜವೇ. ಹೆರಿಗೆ, ಎಂದರೆ ಶಿಶುವಿಗೆ ಜನ್ಮವಾದರೆ, ತಾಯಿಗೆ ಪುನರ್ಜನ್ಮವೇ. ಋತುಚಕ್ರ, ಹೆರಿಗೆ ಮುಂತಾದ ಸಂದರ್ಭಗಳಲ್ಲಿ ಮಹಿಳೆ ಶಾರೀರಿಕವಾಗಿ ಬಹಳ ನೋವನುಭವಿಸುತ್ತಾಳಾದರೂ ಅವಳಿಗೆ ಅವನ್ನೆಲ್ಲ ಸಹಿಸಿಕೊಳ್ಳುವ ಶಕ್ತಿಯಿದೆ. ಈ ಎಲ್ಲ ಕಾರಣಕ್ಕಾಗಿ ಮಹಿಳೆ ಕೆಲವು ವಿಷಯಗಳಲ್ಲಿ ಪುರುಷನಿಗಿಂತ ಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತಾಳೆ ಎಂಬುದು ಸಮೀಕ್ಷೆಯ ಅಭಿಪ್ರಾಯ.

ಮೂಲ: ವಿಕ್ರಮ

2.97916666667
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top