ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಫಿಟ್ನೆಸ್

ಫಿಟ್ನೆಸ್ ಸಾಧಿಸುವುದು ಹೇಗೆ?

ದೇಹದ ಫಿಟ್ನೆಸ್ ಒಂದು ಕಾಲದಲ್ಲಿ ಸಿನಿಮಾ ತಾರೆಯರಿಗಷ್ಟೇ ಸೀಮಿತವಾಗಿದ್ದ ಪದವಾಗಿತ್ತು. ಆದರೆ ಇಂದು ಹಾಗಿಲ್ಲ. ಹದಿಹರೆಯದ ಬಹುಪಾಲು ಜನರ ಮೊದಲ ಆದ್ಯತೆಯೇ ಇದಾಗಿದೆ. ಡಯೆಟ್ ಎಂಬ ಹೆಸರಿನಲ್ಲಿ ಹೊಟ್ಟೆತುಂಬ ಊಟವನ್ನೂ ಮಾಡದೆ, ಕೊನೆಗೆ ಹೊಸ ಹೊಸ ರೋಗಗಳಿಗೆ ಆಮಂತ್ರಣ ನೀಡುವುದಕ್ಕೆ ಕಾರಣ ಇದೇ ಫಿಟ್ನೆಸ್ ಭ್ರಮೆ. ದೇಹದ ಫಿಟ್ನೆಸ್ ಸಾಧಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಯಾವುದಾದರೂ ತಜ್ಞರಲ್ಲಿ ಕೇಳಿದರೆ ತಿನ್ನುವುದನ್ನು ಕಡಿಮೆ ಮಾಡಿ ಎಂದು ಯಾರೂ ಹೇಳುವುದಿಲ್ಲ. ಹೊಟ್ಟೆತುಂಬುವಷ್ಟು ಪೌಷ್ಟಿಕ ಆಹಾರ ದೇಹಕ್ಕೆ ಅತ್ಯಗತ್ಯವೂ ಹೌದು. ತಿಂದ ಆಹಾರ ಜೀರ್ಣವಾಗುವಷ್ಟು ಕೆಲಸ, ವ್ಯಾಯಾಮವೇ ಫಿಟ್ನೆಸ್‌ನ ಗುಟ್ಟು . ಸೌಂದರ್ಯದ ಉದ್ದೇಶದಿಂದ ಫಿಟ್ನೆಸ್ ಮಂತ್ರ ಪಠಿಸುವುದರಿಂದ ಆರೋಗ್ಯ ಹದಗೆಡುವುದು ಖಂಡಿತ. ದೇಹದ ಆರೋಗ್ಯದ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಫಿಟ್ನೆಸ್ ಮೊರೆಹೋಗುವುದು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಒಳ್ಳೆಯದು ಎನ್ನುತ್ತದೆ ಇತ್ತೀಚಿನ ಸಂಶೋಧನೆ. ಹೀಗೆ ಫಿಟ್ನೆಸ್ ಮೊರೆಹೋಗುವುದು ಮನುಷ್ಯನ ಸ್ಮರಣ ಶಕ್ತಿ ಮತ್ತು ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ ಎಂಬುದೂ ಈ ಸಂಶೋಧನೆಯಿಂದ ದೃಢವಾಗಿದೆ.
ದೇಹಕ್ಕೆ ಅಗತ್ಯವಾದಷ್ಟು ಪೌಷ್ಟಿಕ ಆಹಾರ ತಿನ್ನುವುದು, ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ದೇಹದ ಫಿಟ್ನೆಸ್ ಕಾಯ್ದುಕೊಳ್ಳುವುದಲ್ಲದೆ ಮನುಷ್ಯ ಮಾನಸಿಕವಾಗಿಯೂ, ದೈಹಿಕವಾಗಿಯೂ ಚಟುವಟಿಕೆಯಿಂದಿರುವಂತೆ ಮಾಡುತ್ತದೆ. ಸ್ಮರಣ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಯಾವುದೇ ರೀತಿಯ ಗುಳಿಗೆ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಆಹಾರ ಶೈಲಿಯಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದು ಕೇವಲ ದೇಹದ ಆರೋಗ್ಯಕ್ಕಷ್ಟೇ ಉಪಯುಕ್ತವಲ್ಲ, ಬುದ್ಧಿ ಮತ್ತು ಮನಸ್ಸಿನ ಆರೋಗ್ಯವನ್ನು ಕಾಯ್ದುಕೊಳ್ಳುವುದಕ್ಕೂ ಇದು ನೆರವಾಗುತ್ತದೆ ಎಂದಿದೆ ಈ ಸಂಶೋಧನೆ.
ಹೃದಯ ಸಂಬಂಧಿಕಾಯಿಲೆಗಳು ಅಲ್ಲದೆ, ಜೀವನಶೈಲಿಯಿಂದ ಉಂಟಾಗುವ ಹಲವು ಆಧುನಿಕ ಕಾಯಿಲೆಗಳಿಗೆ ಫಿಟ್ನೆಸ್ ಅತ್ಯಂತ ಉತ್ತಮ ಪರಿಹಾರವಾಗಿದೆ. ಫಿಟ್ನೆಸ್ ಹೊಂದಿರುವ ಹಲವು ವ್ಯಕ್ತಿಗಳನ್ನು ಸಂದರ್ಶಿಸಿದಾಗ ಅವರು ಕೆಲಸದಲ್ಲಿ ಹೆಚ್ಚು ಏಕಾಗ್ರತೆ ತೋರಿಸುವುದಲ್ಲದೆ, ಅವರ ವೈಚಾರಿಕತೆಯಲ್ಲೂ ಕ್ರಿಯಾಶೀಲತೆ ಇರುವುದು ಕಂಡುಬಂತು. ಅವರ ಸ್ಮರಣಶಕ್ತಿ ಉಳಿದವರಿಗೆ ಹೋಲಿಸಿದರೆ ಅತ್ಯುತ್ತಮವಾಗಿದಿದ್ದು ಅಚ್ಚರಿಯೆನ್ನಿಸಿತ್ತು. ಈ ಕಾರಣದಿಂದಲೇ ಸಂಶೋಧನೆ ಫಿಟ್ನೆಸ್ ಕೇವಲ ಸೌಂದರ್ಯಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ಅಗತ್ಯವೆಂದು ಹೇಳಿದೆ.

ಮೂಲ: ವಿಕ್ರಮ

2.93684210526
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top