ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಬಾಲಕಿಯರಲ್ಲಿ ಬದಲಾವಣೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಾಲಕಿಯರಲ್ಲಿ ಬದಲಾವಣೆಗಳು

ಹದಿಹರೆಯದಲ್ಲಿ ಬಾಲಕಿಯರಲ್ಲಿ ಬದಲಾವಣೆಗಳು

ಸ್ತನಗಳು : ಬಹುಪಾಲು ಬಲಕಿಯರಲ್ಲಿ ಪ್ರೌಢವಸ್ತೇಯ ಪ್‍ರಾರಂಭವಾಗುವುದು ಸ್ತನಗಳ ಬೆಳವಣಿಗೆಯೊಂದಿಗೆ ಸ್ತನಗಳು ಬೆಳೆಯತೊಡಗಿದಂತೆ ಒಂದು ಅಥವಾ ಎರಡೂ ಎದೆ ತೊಟ್ಟುಗಳ ಹಿಂದೆ ಚೃದುವಾದ ಪುಟ್ಟ ಉಬ್ಬುಗಳು ಕಾಣಿಸಿಕೊಳ್ಳುತ್ತವೆ. ಮುಂದಿನ ಕೆಲವು ವರ್ಷಗಳಲ್ಲಿ ಅವು ದೊಡ್ಡದಾಗುತ್ತವೆ. ಸ್ತನವು ಇನ್ನೊಂದಕ್ಕಿಂತ ದೊಡ್ಡದಾಗಿರುವುದು ಅಸಾಧಾರಣವೇನಲ್ಲ ಆದರೆ, ಅವು ಬೆಳೆದಂತೆ ಗಾತ್ರ ಮತ್ತು ಆಕಾರದಲ್ಲಿ ಏಕರೂಪವನ್ನೂ ತಳೆಯುತ್ತವೆ.

ಕೂದಲು : ಕಿಬ್ಬೊಟ್ಟೆಯ ಕೆಳಗಿನ ಪ್ರದೇಶದಲ್ಲಿ (ಎರಡು ಕಾಲುಗಳ ನಡುವಣ ಪ್ರದೇಶ) ಮೃದುವಾದ ಕೂದಲು ಬೆಳೆಯತೊಡಗುತ್ತದೆ. ಕಾಲಾನು ಕ್ರಮದಲ್ಲಿ ಈ ಕೂದಲು ಬೆಳೆಯತೊಡಗುತ್ತದೆ. ಕಾಲಾನುಕ್ರಮದಲ್ಲಿ ಈ ಕೂದಲು ಬಹಳ ದಟ್ಟವಾಗಿಯೂ ಗುಂಗುರಗಿಯೂ ಆಗುತ್ತದೆ. ಕಂಕುಳಲ್ಲಿ ಮತ್ತು ಕಾಲುಗಳ ಮೇಲೆಯೂ ಕೂದಲು ಬೆಳೆಯಲಾರಂಭಿಸುತ್ತದೆ.

ದೇಹದ ಆಕಾರ : ನಿಗಂಬಗಳು ವಿಶಾಲವಾಗುತ್ತವೆ, ಸೊಂಟವು ಸಣ್ಣಗಾಗುತ್ತದೆ. ದೇಹವು ಕೂಡ ಹೊಟ್ಟೆ, ಪಿರ್ರೆ ಮತ್ತು ಕಾಳುಗಳಲ್ಲಿ ಕೊಬ್ಬನ್ನು ತುಂಬಿಸಿಕೊಮಡು ಬೆಳೆಯತೊಡಗುತ್ತದೆ. ಇದು ಸಹಜವಾದದ್ದು ಮತ್ತು ದೇಹಕ್ಕೆ ಸ್ತ್ರೀಗೆ ವಿಶಿಷ್ಟವಾದ ಅಂಕುಡೊಂಕುಗಳನ್ನು ನೀಡುತ್ತದೆ.

ದೇಹದ ಗಾತ್ರ : ತೋಳುಗಳ, ಕಾಲುಗಳು, ಹಸ್ತಗಳು ಮತ್ತು ಪಾದಗಳು ದೇಹದ ಇತರ ಭಾಗಗಳಿಗಿಂತ ವೇಗವಾಗಿ ಬೆಳೆಯುತ್ತವೆ.

ಚರ್ಮ : ಚರ್ಮವು ಹೆಚ್ಚು ಎಣ್ಣೆ ಎಣ್ಣೇಯಾಗುತ್ತದೆ. ಇದು ಏಕೆಂದರೆ ಗ್ರಂಥಿಗಳು ಕೂಡಾ ಬೆಳೆಯುತ್ತಿವೆ. ಬಹುತೇಕ ಎಲ್ಲ ಹದಿವಯಸ್ಸಿನವರಿಗೆ ಒಂದಲ್ಲಾ ಒಂದು ಕಾಲದಲ್ಲಿ ಮೊಡವೆಗಳು ಏಳುತ್ತವೆ. ಚರ್ಮವು ಕಾಂತಿಯುತವಾಗಿ ಕಾಣುತ್ತದೆ.

ಋತುಸ್ರಾವ : ಈ ಅವಧಿಯಲ್ಲಿ ಋತುಸ್ರಾವ ಅಥವಾ ಮುಟ್ಟು ಪ್ರಾರಂಭವಾಗುತ್ತದೆ. ಬಹುಪಾಲು ಬಾಲಕಿಯರು 9 ರಿಂದ 16 ವರ್ಷದ ವಯೋಮಾನದಲ್ಲಿ ಋತುಮತಿಯರಾಗುತ್ತಾರೆ.

ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ

2.84782608696
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top