ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಬುದ್ದಿಜೀವಿಗಳ ಮಗ್ಗುಲಲ್ಲಿ ..
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬುದ್ದಿಜೀವಿಗಳ ಮಗ್ಗುಲಲ್ಲಿ ..

' ನೀರು ಎಷ್ಟು ಗಲೀಜಾಗಿದೆ,ಎಷ್ಟು ಕೆಟ್ಟ ವಾಸನೆ, ಹೇಗೆ ಹೋಗೆ ಉಗುಳುತಾ ಇದೆ ನೋಡಿ , ಎಲ್ಲಿ ನೋಡಿದರು ಪೋಲ್ಲುಶನ್ '

' ನೀರು ಎಷ್ಟು ಗಲೀಜಾಗಿದೆ,ಎಷ್ಟು ಕೆಟ್ಟ ವಾಸನೆ, ಹೇಗೆ ಹೋಗೆ ಉಗುಳುತಾ ಇದೆ ನೋಡಿ , ಎಲ್ಲಿ ನೋಡಿದರು ಪೋಲ್ಲುಶನ್ '  ನಾನು ಆಫೀಸ್ಸಾ ತಲುಪಿದರೆ ಸಾಕು, ಎ ಸಿ ರೋಮ್ ಒಳಗೆ ಆರಾಮಾಗಿ ಯಾವುದೇ  ಮಾಲಿನ್ಯದ ಭಯವಿಲ್ಲದೇ ಕೆಲಸ ಮಾಡಬಹುದು ಅಂತ ವೃತ್ತಿಪರರ ಹೇಳಿಕೆಯನ್ನು ನೀವು ಕೇಳಿದ್ದಿರ ಅಲ್ವೇ. ಹಾಗೆ ಹಳ್ಳಿಯವರು ಪ್ರತಿದಿನ ಮೈ ಬಗ್ಗಿಸಿ ಕೆಲಸ ಮಾಡೋ ಕೊಲಿಯವರನ್ನು ನೀವು ನೋಡಿರುವಿರಿ. ಇಬ್ಬರಲ್ಲಿ ಯಾರು ಸದೃಡರು ಅನ್ನುವ ಪ್ರಶ್ನೆ ನಮ್ಮ ಮುಂದಿದೆ. ಅದಕ್ಕೆ ಎ ಸಿ ರೋಮಿನ ಮಂದಿ ನಾವೇ ಅಂತ ಹೇಳಿದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಸತ್ಯ ಎಂದಿಗೂ ಕಹಿನೇ. ಬನ್ನಿ ಅ ಸತ್ಯವನ್ನು ವಿಶ್ಲೇಷಿಸೋಣ.ಹಿಂದೆ ಚಿಕ್ಕ ಮಕ್ಕಳನ್ನು ಮಿಠಾಯಿ , ಬಿಸ್ಕತ್ತು , ಚಾಕ್ಲೇಟ್ , ಹಣ್ಣು, ಕೋಸುಮರಿ,ಆಟಿಕೆ,  ಬೈಕ್ ರೈಡ್... ಇತ್ಯಾದಿ ಇತ್ಯಾದಿ ಆಸೆ/ಆಮಿಷ/ಪ್ರಯೋಗಗಳನ್ನು ಮಾಡಿ ಒಲಿಸಿಕೊಳ್ಳಬೇಕಿತ್ತು. ಹಾಗೆ ಮಕ್ಕಳನ್ನು ಸಮಾಧಾನ ಮಾಡಲು ಸಹ ಇದೆ ವಿಧಾನವನ್ನು  ಬಳಸಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ  ಒಂದೇ ಒಂದು ವಸ್ತು ಇದ್ದರೆ ಸಾಕು ಮಕ್ಕಳನ್ನು ಒಲಿಸಿಕೊಳ್ಳುವುದಕ್ಕೆ, ಒಂದು ಒಳ್ಳೆ ಸ್ಮಾರ್ಟ್ ಫೋನ್ ಇಲ್ಲ ಟ್ಯಾಬ್ಲೆಟ್ ಇದ್ದರೆ ಸಾಕು ಮಕ್ಕಳು ತರಲೆ ಮಾಡದೇ ಸುಮ್ಮನೆ ಗೇಮ್ ಆಡಿಕೊಂಡು ಇದ್ದುಬಿಡುತ್ತವೆ. ನೋಡಿ ಒಂದು ಡಿವೈಸ್ ಎಷ್ಟು ಲಾಭ ಮಾಡಿದೆ ಅದಕ್ಕೆ ಸ್ಮಾರ್ಟ್ ಅಂತ ನೀವು ನಾವು ಕರೀತಿವಿ. ಇಂದಿನ ಎಲೆಕ್ಟ್ರೋನಿಕ್ ಉಪಕರಣಗಳು ಕೇವಲ ಸ್ಮಾರ್ಟ್ ಅಲ್ಲ, ವೆರೀ ಡೆಂಜರಸ್ ಕೊಡ.

ನಿಮಗೆ ಗೊತ್ತಿದೆಯೋ ಇಲ್ಲ್ವೋ ಎಲೆಕ್ಟ್ರೋ ಮಗ್ನೇಟಿಕ್ ರೇಡಿಯೇಶನ್ಗಳು ಸದಾ ನಮ್ಮನ್ನು ಸುತ್ತುವರೆದಿರುತ್ತವೆ. ಮನೆಯ ಎಲೆಕ್ಟ್ರಿಕ್ ವೈರ್, ಟೀವಿ , ಫ್ರಿಡ್ಜ್ , ಮೈಕ್ರೋ ಓವನ್, ಮೊಬೈಲ್ , ಕಂಪ್ಯೂಟರ್, ಟ್ಯಾಬ್ಲೆಟ್ ಇತ್ಯಾದಿಗಳು ಬಳಕೆಯಲ್ಲಿದ್ದಾಗ ಸತತವಾಗಿ ವಿಕಿರಣಗಳನ್ನೂ ಹೊರಹಾಕುತ್ತಿರುತ್ತವೆ. ಇವುಗಳ ಪ್ರಭಾವ ಹೆಚ್ಚಾದಾಗ ತಲೆ ನೋವು, ತುರಿಕೆ, ಅಲರ್ಜಿ, ಕ್ಯಾನ್ಸರ್ ಯಿಂದ ಹಿಡಿದು ಬ್ರೈನ್ ಟ್ಯುಮರ್ ವರೆಗೆ ರೋಗಗಳನ್ನು ನಮಗೆ ಉದಾರವಾಗಿ ದೇಣಿಗೆ ನೀಡುತ್ತದೆ.

ಇಂದು ನಾವೆಲ್ಲರೂ ಹೆಚ್ಚುಕಮ್ಮಿ ಮೊಬೈಲ್  ಜಾಸ್ತಿ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಮೊಬೈಲ್ ಫೋನ್ ಅತಿ ಹೆಚ್ಚು ನಾನ್ ಅಯೋನೈಸಿಂಗ್ ವಿಕಿರಣಗಳನ್ನು ಸೂಸುತ್ತದೆ. ಇದರ ಅರಿವು ನಾವು ವೈದ್ಯರ ಹತ್ತಿರ ಚೆಕ್ ಅಪ್ಗೆ ಹೋದಾಗ ಮಾತ್ರ ಅರಿವಾಗುತ್ತದೆ. ನಾವು ಹೇಗೆ ಬದುಕಲು ಉಸಿರಾಡುತ್ತೇವೆ ಹಾಗೆ ಮೊಬೈಲ್ ಸಹ ಬದುಕಲು ಸತತವಾಗಿ ತನ್ನ ಬೇಸ್ ಸ್ಟೇಷನ್ ಜೊತೆ ಸಂಪರ್ಕದಲ್ಲಿ ಇರಲು ಸಿಗ್ನಲ್ ರವಾನೆ ಮಾಡುತ್ತಿರುತ್ತದೆ. ಅಪ್ ಲಿಂಕ್ ಮತ್ತು ಡೌನ್ ಲಿಂಕ್ ಫ್ರಿಕ಼್ವೆನ್ಸಿಗಳು ಸತತವಾಗಿ ಬದಲಾಗುತ್ತಿರುತ್ತವೆ. ಹೀಗಾಗಿರುವಾಗ ಮೊಬೈಲ್ ಫೋನ್ ಸೂಸುವ ನಾನ್ ಅಯೋನೈಸಿಂಗ್ ವಿಕಿರಣಗಳನ್ನು ನಮ್ಮ ದೇಹದ ಕಣಗಳು ಹಿರಿಕೊಳ್ಳುತ್ತವೆ. ಇದರಿಂದಾಗುವ ಹಾನಿ ಊಹೆಗೂ ನಿಲುಕದ್ದು ಇದು ನಮ್ಮ ದೇಹದ ಜೀರ್ಣಾಂಗಗಳು, ಉಸಿರಾಟದ ಅಂಗಗಳ ಮೇಲೆ, ದೇಹದ ಗ್ರಂಥಿಗಳ ಭಾರಿ ಪರಿಣಾಮವನ್ನು ಮಾಡುತ್ತವೆ.  ನಮ್ಮದು ಉತ್ತಮ ನೆಟ್ವರ್ಕ್  ಇದೆಯೆಂದು ತಮ್ಮ ಸಿಮ್ ಮಾರುವ ಟೆಲಿಕಾಂ ಕಂಪನಿಗಳ ಬಗ್ಗೆ ಜಾಗೃತರಾಗಿರುವುದು ಅವಶ್ಯಕತೆ ನಮಗಿದೆ. ಯಾಕಂದರೆ ಡೌನ್ ಲಿಂಕ್ ಫ್ರೀಕ್ವೆನ್ಸಿ ೪೦dbಗಿಂತ ಕಡಿಮೆ ಇದ್ದರೆ ಹಾನಿಕಾರಕ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವಾಗ ಆಫ್ ಲೈನ್ ಮೋಡ್ ನಲ್ಲಿಟ್ಟು ಕೊಡಿ ಇಲ್ಲದಿದ್ದರೆ ಕೊಡಲೇ ಬೇಡಿ. ಮೊಬೈಲ್ ಉಪಯೋಗಿಸದೆ ಇರದಿರುವಾಗ ಮೊಬೈಲ್ ಇಂದ ಸ್ವಲ್ಪ ಅಂತರದಲ್ಲಿ ಇರಿ. ಹೆಡ್ ಫೋನ್ ಬಳಸಿ, ಮೊಬೈಲ್ ಫೋನ್ ನಲ್ಲಿ ಬ್ಯಾಟರಿ ಕಡಿಮೆ ಇದ್ದಾಗ ಹಾಗು ನೆಟ್ವರ್ಕ್ ಸಿಗ್ನಲ್  ಕಡಿಮೆ ಇದ್ದಾಗ ಅಗತ್ಯವಿದ್ದಲ್ಲಿ ಮಾತ್ರ ಒಂದು ನಿಮಿಷಕ್ಕಿಂತ ಕಡಿಮೆ ಸಮಯ  ಉಪಯೋಗಿಸಿ ಇಲ್ಲದಿದ್ದರೆ ಫೋನ್ ಬಳಸಬೇಡಿ. ಯಾಕೆಂದರೆ ಫೋನ್ ಬಹಳ ಒತ್ತಡದಲ್ಲಿರುತ್ತದೆ(ಅಪ್ಲಿಂಕ್ ಮತ್ತು ಡೌನ್ ಲಿಂಕ್ ಫ್ರೀಕ್ವೆನ್ಸಿ ಜಾಸ್ತಿ ಇರುತ್ತದೆ) . ಗಂಟೆಗಟ್ಟಲೆ ಫೋನಿನಲ್ಲಿ ಹರಟುವಾಗ ಹೆಡ್ ಫೋನ್ ಬಳಸಿ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.

ಇನ್ನು ನಮ್ಮ ಗಣಕ ಯಂತ್ರ ಸೂಸುವ ವಿಕಿರಣ ಕಡಿಮೆಯೇನಲ್ಲ, ಹಳೆ ಸಿ. ಆರ್. ಟಿ ಮಾನಿಟರ್ (ಕ್ಯಾಥೋಡ್ ರೇ ಟ್ಯೂಬ್) ಇರುವ ಗಣಕ ಯಂತ್ರವು 30 ಸೆಂ.ಮೀ ನಲ್ಲಿ 3 ಮಿಲಿಗಾಸ್ ನಷ್ಟು ಹಾಗೂ ಬದಿಗಳಲ್ಲಿ 4 ಮಿಲಿಗಾಸ್ ನಷ್ಟು ಹೆಚ್ಚಿನ ಪ್ರಮಾಣದ ವಿಕಿರಣವನ್ನು ಹೊರಸೂಸುತ್ತದೆ. ಅಧ್ಯಯನಗಳ ಪ್ರಕಾರ ಪರದೆಗೆ ಹೋಲಿಸಿದರೆ ಕಂಪ್ಯೂಟರಿನ ಹಿಂಭಾಗ ಅತಿ ಹೆಚ್ಚಿನ ವಿಕಿರಣವನ್ನು ಸೂಸುತ್ತದೆ. ಅದ್ದರಿಂದ ಕಂಪ್ಯೂಟರ್ ನ ಹಿಂಭಾಗ ಇನ್ನೊಬ್ಬರು ಕೂರುವ ಸ್ಥಳಕ್ಕೆ ಮುಖಮಾಡಿರಬಾರದು. ಇದಲ್ಲದೇ ಮೋಡೆಮ್, ವೈ ಫೈ ರೂಟರ್, ಪ್ರಿಂಟರ್,  ನೆಟ್ವರ್ಕ್ ಕೇಬಲ್, ಎಲೆಕ್ಟ್ರಿಕ್ ಕೇಬಲ್, ಎಸಿ,  ಬಲ್ಬ್ಗಳು , ಪ್ರೊಜೆಕ್ಟರ್  ಸಹ ವಿಕಿರಣವನ್ನು  ಸೂಸುತ್ತವೆ. ಇಂತಹ ಪರಿಸರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅಪಾಯದ ಅರಿವೇ ಇರುವುದಿಲ್ಲ.  ಇದರಿಂದ ಐಟಿ ಉದ್ಯೋಗಿ ಆಸ್ಪತ್ರೆಯ ಖಾಯಂ ಗಿರಾಕಿಯಗಿರುವುದರಲ್ಲಿ ಅನುಮಾನವಿಲ್ಲ.

ಇದಕ್ಕೆಲ್ಲ ಪರಿಹಾರವಿದೆ ಹಳೇಯ  ಸಿ ಆರ್ ಟಿ ಮಾನಿಟರ್ಗೆ ವಿದಾಯ ಹೇಳಿ, ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಚಿಕ್ಕಚಿಕ್ಕ ಗಿಡಗಳನ್ನು ಹೆಚ್ಚಾಗಿ ಬೆಳೆಸಿ, ಗಿಡ ಮರಗಳಿಗೆ ವಿಕಿರಣವನ್ನು ಕಡಿಮೆ ಮಾಡುವ ಶಕ್ತಿಯಿದೆ. ಅಧ್ಯಯನಗಳ ಪ್ರಕಾರ ಪಾಪಸು ಕಳ್ಳಿಯ ಗಿಡಗಳು ವಿಕಿರಣವನ್ನು ಹೀರುವ ಸಾಮರ್ಥ್ಯವನ್ನು ಹೊಂದಿವೆ ಅದ್ದರಿಂದ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಪಾಪಸು ಕಳ್ಳಿ ಇದ್ದರೆ ಉತ್ತಮ.  ಗಾಳಿ ಬೆಳಕು ಹೆಚ್ಚಾಗಿ ಸಂಚಾರವಿರುವಂತಹ   ಸ್ಥಳವನ್ನು ಆಯ್ಕೆ ಮಾಡಿ ಕೊಳ್ಳಿ.  ಕಂಪ್ಯೂಟರ್ ಮಾನಿಟರ್ ಗೆ  ಫಿಲ್ಟರ್ ಅಳವಡಿಸಿ ಇದರಿಂದ ಸಹ ವಿಕಿರಣವನ್ನು ತಡೆಗಟ್ಟಬಹುದು. ಯಾವುದೇ ಲೋಹದ ವಸ್ತುವನ್ನು ನಿಮ್ಮ ಕಂಪ್ಯೂಟರನ  ಬಳಿ ಇಡಬೇಡಿ. ಅವುಗಳು ವಿದ್ಯುತ್ಕಾಂತೀಯ ಅಲೆಗಳನ್ನು ಪ್ರತಿಫಲಿಸುವ ಗುಣವನ್ನು ಹೊಂದಿರುತ್ತವೆ. ನಿಮ್ಮ ಸುತ್ತ ಮುತ್ತ ಪರಿಸರದಲ್ಲಿ  ಮರದಿಂದ ಮಾಡಿದ ಪಿಠೋಪಕರಣಗಳನ್ನು ಬಳಸಿ ಇವು ಸಹ ವಿಕಿರಣಗಳನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿವೆ.

ಇದಲ್ಲದೇ ಇವುಗಳ ಇ-ತ್ಯಾಜ್ಯಗಳ ವಿಲೇವಾರಿ ಸಮಯದಲ್ಲಿ, ವಿಲೇವಾರಿ ಸರಿಯಾಗಿ ಮಾಡದಿದ್ದಲ್ಲಿ ಸಹ ವಿಕಿರಣಗಳನ್ನು ಹೊರ ಸೂಸುತ್ತವೆ.  ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಚಿನ್ನ,  ಪ್ಲಾಟಿನಂ , ಬೆಳ್ಳಿ ಹಾಗು ಇತರೆ ಬೆಲೆಬಾಳುವ ಲೋಹಗಳನ್ನು ಬಳಸಿರುತ್ತಾರೆ. ಇವುಗಳನ್ನು ಸಂಸ್ಕರಿಸಿ ಪಡೆಯಲು ಬಳಸುವ ವಿಧಾನ ಸಹ ಸರಿಯಾಗಿ ಇರದಿದ್ದಲ್ಲಿ ಲೋಹಗಳು ವಿಕಿರಣಗಳನ್ನು ಹೊರಸುಸುತ್ತವೆ. ವಿಲೇವಾರಿ ಸಹ ಸರಿಯಾದ ರೀತಿಯಲ್ಲಿ ಆಗಬೇಕು ಇಲ್ಲದಿದ್ದರೆ ಅಪತ್ತು ಕಟ್ಟಿಟ್ಟ ಬುತ್ತಿ.

೨೦೦೧ ೯/೧೧ ದಾಳಿಯ ನಂತರ ಅಮೇರಿಕ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ  ಕಬ್ಬಿಣ ಮತ್ತು ಇತರೆ ಲೋಹಗಳನ್ನು ಭಾರತಕ್ಕೆ ಮೂರು ಹಡಗುಗಳಲ್ಲಿ ರವಾನಿಸಿತು. ಅ ಲೋಹಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಭಾರಿ ಅಪಾಯಕಾರಿ ವಿಕಿರಣಗಳು ಪತ್ತೆಯಾದವು.

ಇತ್ತೀಚಿನ ಸರ್ವೇ ಪ್ರಕಾರ ಬೆಂಗಳೂರಿನ ಅಂತರ್ಜಲದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಉಂಟು ಮಾಡುವ ಅಪಾಯಕಾರಿ ರೇಡಾನ್ ಅಣುವಿಕಿರಣ ಅನಿಲ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆರೆತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದರ ಪ್ರಮಾಣ ಇನ್ನು ಹೆಚ್ಚಬಹುದು.

ಸರ್ಕಾರ ಮೊಬೈಲ್‌ಫೋನುಗಳಿಂದ ಆಗುವ ಹಾನಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ ಆರು ನಿಮಿಷ ಮೊಬೈಲ್‌ಫೋನು ಬಳಸಿದರೆ ಅದರಿಂದ ಹೊರ ಹೊಮ್ಮುವ ವಿಕಿರಣ ಮನುಷ್ಯನ ಅಂಗಾಂಶದ 1.6 ವಾಟ್‌ಮೀರಬಾರದು ಎಂದು ಹೇಳುವ ಮೊಬೈಲ್‌ಗ‌ಳ ವಿಕಿರಣ ನಿಯಮ ಸೆ.1 ೨೦೧೩ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಆದರೆ   ಈ ಆದೇಶವನ್ನು ಯಾರು ಸರಿಯಾಗಿ ಪರಿಪಾಲಿಸುತ್ತಿಲ್ಲ.

೨೦೧೩  ಅಂತರರಾಷ್ಟ್ರೀಯ ಒಪ್ಪಂದದ ಪ್ರಕಾರ ಇ- ತ್ಯಾಜ್ಯವನ್ನು ಮತ್ತೊಂದು ದೇಶಕ್ಕೆ ಮಾರುವ ಹಾಗಿಲ್ಲ, ಇದೊಂದು ಉತ್ತಮ ಬೆಳವಣಿಗೆ ಆದರೆ ಇವೆಲ್ಲವೂ ಅಧಿಕಾರಿ ಶಾಹಿಗಳ  ಕೈ ಕೆಳಗೆ ಇವೆ.

ವಿಕಿರಣಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ ಆದರೆ ಪರಿಣಾಮಗಳು ಮಾತ್ರ ಘೋರ. ನಾವು ಭಾರಿ ಬುದ್ಧಿ ಜೀವಿಗಳೆಂದು ಎ ಸಿ ರೂಂನಲ್ಲಿ ಮೈಮರೆಯುವ ಕಾಲ ಇನ್ನಿಲ್ಲ.

ನಿಮಗೆ ಗೊತ್ತ ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಅಂತರಾಷ್ಟ್ರೀಯ ಸಂಕೇತ ಯಾವುದೆಂದು?  ಸೂರ್ಯಕಾಂತಿ ಹೂ ,
ಸೂರ್ಯ ಕಾಂತಿಯು  ವಿಕಿರಣ ಮಾಲಿನ್ಯವನ್ನು ತನ್ನ ಬೇರುಗಳಿಂದ ಹೀರಿಕೊಂಡು ಕಾಂಡ ಮತ್ತು ಎಲೆಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ.ಅದ್ದರಿಂದ  ವಿಕಿರಣ ತ್ಯಾಜ್ಯ ಸ್ವಚ್ಛಗೊಳಿಸಲು ಬಳಸಲಾಗುತ್ತದೆ.

ಅದ್ದರಿಂದ ಮುಂದಾಗುವ ಅಪಾಯವನ್ನು ತಡೆಗಟ್ಟುವ ಹಾಗು ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗ ಬೇಕು.

ಇಂದು ಜೂನ್  ೫ ವಿಶ್ವ ಪರಿಸರ ದಿನಾಚರಣೆ, ನಾವು ಕಣ್ಣಿಗೆ ಕಾಣುವ ಮಾಲಿನ್ಯದ ಕಡೆಗೆ ಎಷ್ಟು ಮುತುವರ್ಜಿ ವಹಿಸುತ್ತೆವೋ ಅಷ್ಟೇ ಮುತುವರ್ಜಿಯನ್ನು ಕಣ್ಣಿಗೆ ಕಾಣದ ಮಾಲಿನ್ಯದ ಕಡೆಗೂ ವಹಿಸಬೇಕಾದ ಅಗತ್ಯತೆ ಇದೆ . ತಡ ಮಾಡಬೇಡಿ ನಿಮ್ಮ ಮನೆಯ ಮುಂದೆ ಒಂದು ಸಸಿ ನೆಟ್ಟು ನೀರೆರೆದರೂ ಸಾಕು ಅದು ಯಾವುದೇ ಅಪೇಕ್ಷೆಯಿಲ್ಲದೆ ತನ್ನ ಒಡೆಯನ ಹಿತ ಕಾಪಾಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಕೊಡುಗೆದಾರರು : ಮಧು ಚಂದ್ರ

2.92134831461
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top