ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಅಪೌಷ್ಟಿಕತೆಯ ಚಿಹ್ನೆಗಳು, ಪರಿಣಾಮ ಹಾಗೂ ತಡೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅಪೌಷ್ಟಿಕತೆಯ ಚಿಹ್ನೆಗಳು, ಪರಿಣಾಮ ಹಾಗೂ ತಡೆ

ಅಪೌಷ್ಟಿಕತೆಯ ಚಿಹ್ನೆಗಳು, ಪರಿಣಾಮ ಹಾಗೂ ತಡೆ

ಅಪೌಷ್ಟಿಕತೆಯ ಚಿಹ್ನೆಗಳು, ಪರಿಣಾಮ ಹಾಗೂ ತಡೆ

ಅಪೌಷ್ಟಿಕತೆಯ ಚಿಹ್ನೆಗಳು

ಯಾವಾಗಲೂ ಅನಾರೋಗ್ಯ ಹೊಂದಿರುವ, ಸುಲಭವಾಗಿ ಆಯಾಸಗೊಳ್ಳುವ ಮತ್ತು ನಿಧಾನವಾಗಿ ಅರ್ಥಮಾಡಿಕೊಳ್ಳುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರಬಹುದು.ಒಂದು ಮಗು ಹುಟ್ಟಿದ ಸಮಯದಿಂದ ಎರಡು ವರ್ಷಗಳ ವಯಸ್ಸಿನವರೆಗೆ ಅಪೌಷ್ಟಿಕತೆಯ ಅಪಾಯಗಳಿಗೆ ವಿಶೇಷವಾಗಿ ಗುರಿಯಾಗಬಹುದಾಗಿದೆ.ಇದು ಒಟ್ಟಾರೆ ದೀರ್ಘಾವಧಿಯ ಬೆಳವಣಿಗೆಗೆ ಬಹಳ ಪ್ರಮುಖವಾದ ಕಾಲವಾಗಿದೆ.ದುರ್ಬಲ ಪೋಷಣೆ ಹುಟ್ಟಿನ ಮೊದಲು ಪ್ರಾರಂಭವಾಗುತ್ತದೆ, ಸಾಮಾನ್ಯವಾಗಿ ಹದಿಹರೆಯದಲ್ಲಿ ಮತ್ತು ದೊಡ್ಡವರಾದ ಮೇಲೂ ಮುಂದುವರಿಯುತ್ತದೆ ಮತ್ತು ತಲೆಮಾರುಗಳ ಕಾಲ ಹರಡಬಹುದು. ಸಾಮಾನ್ಯವಾಗಿ ಇದನ್ನು ಗುಣಪಡಿಸಲಾಗುವುದಿಲ್ಲ.ತಾಯಿಯ ಆರೋಗ್ಯ, ಮಕ್ಕಳ ಆರೋಗ್ಯ ಮತ್ತು ಬದುಕುಳಿಯುವ ಸಾಧ್ಯತೆಯನ್ನು ಕಡಿಮೆ ಮಾಡುವ ಗುಣಪಡಿಸಲಾಗದ ಒಟ್ಟುಗೂಡಿದ ಬೆಳವಣಿಗೆಯ ಮತ್ತು ಅಭಿವೃದ್ಧಿಯ ಕೊರತೆಗಳನ್ನು ತಪ್ಪಿಸಲು, ಆರಂಭದಲ್ಲೇ ಸಾಧ್ಯವಾದಷ್ಟು ಬೇಗ ಸಂಪೂರ್ಣ ಜೀವನಕಾಲಕ್ಕೆ ಅಪೌಷ್ಟಿಕತೆಯನ್ನು ತಡೆಯುವುದು ಮುಖ್ಯವಾಗಿದೆ.ಒಂದು ಸತ್ತ ಸಸ್ಯವು ಸಮೃದ್ಧ ಮರವಾಗಿ ಬೆಳೆಯಲು ಮತ್ತು ಮಣ್ಣು, ನೀರು, ತಾಜಾ ಗಾಳಿಯಂಥ ಸರಿಯಾದ ಪಾಲನೆ ಮತ್ತು ಪೋಷಣೆಯಿಲ್ಲದೆ ಸಾಮಾನ್ಯವಾಗಿ ಬೆಳೆಯಲು ಸಾಧ್ಯವಿಲ್ಲದಿರುವ ಹಾಗೆ ಒಂದು ಮಗುವೂ ಸರಿಯಾದ ಪಾಲನೆ ಮತ್ತು ಪೋಷಣೆಯಿಲ್ಲದೆ ಒಬ್ಬ ಆರೋಗ್ಯಕರ ವಯಸ್ಕನಾ(ಳಾ) ಬೆಳೆಯಲು ಸಾಧ್ಯವಿಲ್ಲ.ಹಾಳಾದ ಮಣ್ಣಿನ ಮಡಕೆಯನ್ನು ಒಣಗಿಸಿದ ನಂತರ ಸರಿಪಡಿಸಲು ಸಾಧ್ಯವಿಲ್ಲದಿರುವಂತೆ, ಜೀವನದ ಮೊದಲ ಹಂತಗಳಲ್ಲಿ ಅಪೌಷ್ಟಿಕತೆಯ ಬಲಿಪಶುವಾದ ಮಗುವಿನ ಆರೋಗ್ಯವನ್ನು ಸರಿಪಡಿಸಲು ಸಾಧ್ಯವಿಲ್ಲ.

ಪರಿಣಾಮ ಹಾಗೂ ತಡೆ

ಈ ವೀಡಿಯೊದ ಉದ್ದೇಶ ಅಪೌಷ್ಟಿಕತೆಯ ಚಿಹ್ನೆಗಳು ಮತ್ತು ಅಪಾಯಕಾರಿ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಮುದಾಯಗಳಿಗೆ ಕ್ರಮ ತೆಗೆದುಕೊಳ್ಳಲು ಉತ್ತೇಜನ ನೀಡುವುದಾಗಿದೆ ಹಾಗೂ ಇದು ಅಪೌಷ್ಟಿಕತೆಯನ್ನು ತಡೆಗಟ್ಟಲು ಮಾಡಬಹುದಾದ ಸರಳ ವಿಷಯಗಳ ಬಗ್ಗೆ ವಿವರಿಸುತ್ತದೆ.
ಇದು ಸಮುದಾಯದವರಿಗಾಗಿ ಉದ್ದೇಶಿಸಲಾಗಿದೆ.ನಿರ್ಮಿಸಿದವರು: ಯುನಿಸೆಫ್ ಮತ್ತು ಇತರ ಅಭಿವೃದ್ಧಿ ಪಾಲುದಾರರ ಸಕ್ರಿಯ ಬೆಂಬಲದ ಜೊತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ.

ಮೂಲ : ಹೆಲ್ತ್ ಫೋನ್

2.83333333333
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top