ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮನೆ ಮದ್ದು

ಕೆಲವು ಮನೆ ಮದ್ದುಗಳು

ಚೇಳು ಕಚ್ಚಿದರೆ
1. ಬೆಳ್ಳುಳ್ಳಿ ಜಜ್ಜಿ ಕಚ್ಚಿದ ಜಾಗಕ್ಕೆ ಹಚ್ಚಿದರೆ ಶಮನವಾಗುವುದು.
2. ಕಚ್ಚಿದ ಜಾಗಕ್ಕೆ ತುಳಸಿ ಬೇರನ್ನು ನಿಂಬೆರಸದಲ್ಲಿ ತೇದು ಲೇಪಿಸುವುದು.
3. ಹುಣಸೆ ಬೀಜವನ್ನು ಕಲ್ಲಿನಲ್ಲಿ ತೇದು ಕಚ್ಚಿದ ಭಾಗಕ್ಕೆ ಹಚ್ಚಿದರೆ ಹಿಡಿದುಕೊಳ್ಳುತ್ತದೆ. ವಿಷ ಇಳಿದ ನಂತರ ಬೀಳುತ್ತದೆ.
4. ಏಲಕ್ಕಿ ಬೀಜವನ್ನು ತಿಂದು ಕಿವಿಯಲ್ಲಿ ಬೀಜದ ಸುವಾಸನೆಯನ್ನು ಊದಿದರೆ ವಿಷ ಇಳಿಯುವುದು.
5. ಕಚ್ಚಿದ ಜಾಗಕ್ಕೆ ದೇಶಿ ಆಕಳ ಸಗಣಿ ಲೇಪಿಸಿದರೆ ನೋವು ಕಡಿಮೆ ಆಗುತ್ತದೆ.
(ಸೂಚನೆ: ಮಾದಕ ಪದಾರ್ಥ ಸೇವಿಸಿದವರಿಗೆ ಔಷಧ ತೀವ್ರ ಪರಿಣಾಮ ಮಾಡುವುದಿಲ್ಲ)
ನೆನಪಿನ ಶಕ್ತಿ ವೃದ್ದಿಗೆ
ಯಾವುದು ಪ್ರಯೋಜನಕ್ಕೆ ಬರುವುದಿಲ್ಲವೋ ಅದನ್ನೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳುವುದರಿಂದ ಹಾಗೂ ಮಾದಕ ಪದಾರ್ಥಗಳ ಸೇವನೆಯಿಂದ, ದಿನಾಲು ಸ್ನಾನ ಮಾಡದೇ ಇರುವುದರಿಂದ, ನಿಸ್ಸತ್ವ ಆಹಾರ ಸೇವನೆಯಿಮದ, ದೊಡ್ಡ ದಿಂಬು ಇಡುವುದರಿಂದ , ಹೆಚ್ಚು ಮಾನಸಿಕ ಒತ್ತಡದಿಂದ ಬಳಲುವುದರಿಂದ, ನಿತ್ಯ ವ್ಯಾಯಾಮ ಮಾಡದೇ ಇರುವುದರಿಂದ ನೆನಪಿನ ಶಕ್ತಿ ಕುಂದುತ್ತದೆ.
ಶಕ್ತಿ ಹೆಚ್ಚಿಸಲು ಮನೆ ಮದ್ದು
1. ದಿನಾಲು ಸರ್ವಾಂಗಾಸನ – ಶೀರ್ಷಾಸನ ಮಾಡುವುದು.
2. ದಿನಾಲು ತಲೆ ಸ್ನಾನ ಮಡುವುದು (ತಣ್ಣೀರಿಂದ)
3. 1 ಲೋಟ ಸೋರೆಕಾಯಿ ರಸ ಸೇವಿಸುವುದು.
4. ಬೂದುಕುಂಬಳ ಕಾಯಿ ರಸ 1 ಲೋಟ ಸೇವಿಸುವುದು.
5. ಭ್ರಾಮರಿ ಪ್ರಾಣಾಯಾಮ ಮಾಡುವುದು.
6. ದೇಶಿ ಆಕಳ ಹಾಲು 1 ಲೋಟ + 1 ಚಮಚ ಜೇನು ದಿನಾಲು ಸೇವಿಸುವುದು.
7. ದಿನಾಲು ಜೀರಿಗೆ ಕಷಾಯ ಸೇವಿಸುವುದು.
8. ವಾರಕ್ಕೊಮ್ಮೆ ಎಣ್ಣೆ ಸ್ನಾನ ಮಾಡುವುದು.
9. ದಿಂಬು ದೊಡ್ಡದು ಇಟ್ಟುಕೊಳ್ಳಬಾರದು.
10. ಮಾವಿನ ಹಣ್ಣಿನ ರಸ 1 ಲೋಟ + 1 ಚಮಚ ಜೇನು ಹಾಕಿ ಸೇವಿಸುವುದು.
11. ಬಿಳಿ ಈರುಳ್ಳಿ ದಿನಾಲು ಸೇವಿಸುವುದು.
ಸೂಚನೆ: ಈ ಮೇಲೆ ಹೇಳಿದ ನಿಸರ್ಗ ಕ್ರಮವನ್ನು ಕಡ್ಡಾಯ ಅನುಸರಿಸಬೇಕು. ಔಷಧ ಕ್ರಮವನ್ನು ಯಾವುದಾದರೂ ಒಂದನ್ನು ಅನುಸರಿಸುವುದು.

ಮೂಲ: ವಿಕ್ರಮ

2.875
ರವಿ ಕುಮಾರ್ Dec 24, 2016 09:33 PM

ದಯವಿಟ್ಟು ಮೂಡವೆ ಕಡಿಮೆಯಾಗಲು ಮನೆ ಮದ್ದು ತಿಳಿಸಬೇಕಾಗಿ ವಿನಂತಿ
.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top