অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮ್ಯೆದಾಹಿಟ್ಟು- ಒ೦ದು ಚಿ೦ತನೆ

ಮ್ಯೆದಾಹಿಟ್ಟು- ಒ೦ದು ಚಿ೦ತನೆ

ಮೂಲ ಆಹಾರ ಧಾನ್

ಗೋಧಿ ಒ೦ದು ಮೂಲ ಆಹಾರ ಧಾನ್ಯ. ಮೊಟ್ಟಮೊದಲಿಗೆ “ಟೈಗ್ರಿಸ್”ನದಿಯ ದ೦ಡೆಯ ಮೇಲೆ ಹುಲ್ಲಿನ೦ತೆ ಬೆಳೆದಿದ್ದು, “ಈನ್ಕಾರ್ನ” ಎ೦ದು ಆಫ್ರಿಕಾದಬುಡಕಟ್ಟುಜನರುಉಲ್ಲೇಖಿಸಿಬಳಸಲಾರಂಭಿಸಿದ್ದರು.  ಧಾನ್ಯವನ್ನು ಕಲ್ಲುಗಳ ಮೇಲೆ ಕುಟ್ಟಿ, ಹಾಗೆಯೆ ಬಿಟ್ಟು, ನ೦ತರ ತಾನಾಗಿಯೇ ಹುದುಗಿ, ಬಿಸಿಲಿನಲ್ಲಿ ಬೆ೦ದ೦ತಾಗಿದ್ದನ್ನು ಸೇವಿಸಿದ್ದರು. ನ೦ತರ ಇದನ್ನೇ ಒ೦ದು ವಿಧಾನವಾಗಿ ಬಳಸಿ, ಕಲ್ಲುಗಳಿ೦ದಲೇ ಉಜ್ಜಿ, ಒಣಕಡ್ಡಿಎಲೆಗಳನ್ನೇ ಸೇರಿಸಿ ಉರಿಬೆ೦ಕಿಯ ಆಧಾರವಾಗಿ, ಮೇಲೆ ಕಲ್ಲಿನ ಚಪ್ಪಡಿಯಿರಿಸಿ, ಕಾದನ೦ತರ “ಈನಕಾರ್ನ” ಹುದುಗಿದತಿರುಳನ್ನೇತಟ್ಟಿ,ಮೊದಲಬಾರಿಗೆಚಪ್ಪಟೆಬ್ರೆಡ್ಬೇಯಿಸಿ ಸೇವಿಸಲಾರ೦ಭಿಸಿದರು.

ಅಭಿವೃದ್ದಿಯಾದ೦ತೆ ಜ್ಞಾನವಿಜ್ಞಾನ ಮು೦ದುವರೆದು ಕೌಶಲ್ಯಸೂಕ್ಷ್ಮತೆಬೆಳೆದು, ಇ೦ದಿನ ಮ್ಯೆದಾಬ್ರೆಡ, ಕೇಕ, ಬಿಸ್ಕತ್ತು, ಫಿಝಾ ಎಲ್ಲವೂ ಬೆಳೆದು ನಿ೦ತಿವೆ. ಗೋಧಿ ಪ್ರಪ೦ಚವನ್ನೇ ವ್ಯಾಪಿಸಿಕೊ೦ಡಿದೆ. ಗೋಧಿಮತ್ತುಇದರ ಭಾಗಾ೦ಶಗಳಾದ ಗೋಧಿಹಿಟ್ಟು, ಮ್ಯೆದಾಹಿಟ್ಟು, ಗೋಧಿಹೊಟ್ಟು, ಗೋಧಿಜರ್ಮ, ಗೋಧಿಜರ್ಮಎಣ್ಣೆ,ಹೀಗೆನಾನಾರೀತಿಯಲ್ಲಿಕೈಗಾರಿಕೋದ್ಯಮೆಬೆಳೆದಿದೆ. ಇನ್ನೊ೦ದೆಡೆ, ಈ ಗೋಧಿಪದಾರ್ಥಗಳನ್ನುಮೂಲಕಚ್ಚಾಪದಾರ್ಥವಾಗಿಬಳಸಿನೆಲೆಯಾಗಿರುವ “ಬೇಕರಿಕೈಗಾರಿಕೋದ್ಯಮ” ಪ್ರಪ೦ಚವನ್ನೇ ಆವರಿಸಿನೆಲೆಯೂರಿದೆ. ಇನ್ನೊ೦ದೆಡೆ ಭಾರತದಲ್ಲಿಬೇಕರಿಅಷ್ಟೇಅಲ್ಲದೆಗೋಧಿಆಧಾರಿತ ಮ್ಯೆದಾಹಿಟ್ಟು “ಹೋಟೆಲ್ಉದ್ದಿಮೆ”ಯಲ್ಲೂಅನೇಕಆಕರ್ಷಿತಊಟಉಪಹಾರಗಳಮೂಲಸಾಮಗ್ರಿಯಾಗಿಬಿಟ್ಟಿದೆ.

ಮ್ಯೆದಾಹಿಟ್ಟು ಆಘಾತಕಾರಿಯೆ

ಇತ್ತೀಚೆಗೆ ಪ್ರಚಲಿತವಾಗಿ ವ್ಯಾಪಿಸುತ್ತಿರುವ “ಮ್ಯೆದಾಹಿಟ್ಟು ಆಘಾತಕಾರಿಯೆ? ಅಲ್ಲವೆ?  ಎನ್ನುವ ಭಯ ಬಳಕೆದಾರರಿಗೂ ಉದ್ದಿಮೆದಾರರಿಗೂ ಸವಾಲಾಗಿದೆ, ಶಾಖ್ ನೀಡಿದೆ. ಅನಾರೋಗ್ಯಹಾಗೂ ರೋಗಾವಸ್ತೆಯಿ೦ದ ಚೇತರಿಸುಕೊಳ್ಳುತ್ತಿರುವವರಿಗೆಯಾವಆಹಾರತಿನ್ನಬೇಕು/ ತಿನ್ನಿಸಬೇಕುಎನ್ನುವಪಶ್ನೆಉದ್ಭವವಾಗಿದೆ.

ಒ೦ದೆಡೆ “ಮ್ಯೆದಾಹಿಟ್ಟು” ಆರೊಗ್ಯಬಾಧಕ ಎನ್ನುವ ಪ್ರಶ್ನೆ, ಮತ್ತೊ೦ದೆಡೆ ಇದನ್ನುಆಧರಿಸಿರುವ ಜೀವನಾಧಾರ ಉದ್ದಿಮೆದಾರರಿಗೆ ಪರಿಹಾರವೇನು ಎನ್ನುವುದು. ಆದರೆ, ಇದು ಒ೦ದು ಸಮಸ್ಯೆಯೇ ಅಲ್ಲ. ಸರಿಯಾವುದೆ೦ಬುದನ್ನು ಅರಿತು,ಸರಿಯಾಗಿಮಿಶ್ರಮಾಡಿ, ಸರಿಯಾಗಿ ಸ೦ಸ್ಕರಿಸುವ ಪರಿಜ್ಞಾನಅಗತ್ಯವಿದೆ.

ಮೂಲತಃ “ಮ್ಯೆದಾಹಿಟ್ಟು” ಗೋಧಿ ಆಧಾರಿತ. ಇದರಲ್ಲಿಶೇಕಡ ೧೦-೧೨ ರಷ್ಟುಪ್ರೋಟೀನು; ೭೦.೦ ರಷ್ಟುಶರ್ಕರ;ಅಲ್ಪಪ್ರಮಾಣದಲ್ಲಿಬಿ-ಜೀವಸತ್ವಹಾಗೂ ಖನಿಜಾ೦ಶಗಳನ್ನೂ ಒದಗಿಸುತ್ತದೆ, ಆದರೆ ನಾರಿನ೦ಶವಿರುವುದಿಲ್ಲಾ. ಹುದುಗು ಬರಿಸಿ ತಯಾರಿಸಿದ ಬ್ರೆಡ್, ಬನ್, ಪಿಝಾ, ರಸ್ಕ್, ಸೂಪ್ ಸ್ಟಿಕ್ ಸ೦ಸ್ಕರಣೆಯ ಹ೦ತದಲ್ಲಿ ಜ್ಯೆವಿಕ ಕ್ರಿಯೆಗೆ ಒಳಗಾಗಿರುವ ಕಾರಣ, ಸುಲಭವಾಗಿ ಜೀರ್ಣವಾಗಿ ಶಕ್ತಿ ಒದಗಿಸುತ್ತದೆ. ತೀವ್ರರೋಗ

ಸ್ಥಿತಿ, ಅನಾರೋಗ್ಯದಿ೦ದ ಚೇತರಿಸಿಕೊಳ್ಳುತ್ತಿರುವಾಗ,ಅಧಿಕಕ್ಯಾಲೋರಿಶಕ್ತಿಅಗತ್ಯವಿರುವಸಮಯದಲ್ಲಿಇವು ಖ೦ಡಿತಾ ಉತ್ತಮವಾಗಿರುತ್ತವೆ. ಆದರೆ ಯಾವುದೇ ರಾಸಾಯನಿಕ ಪ್ರಚೋದಕಗಳು ಹಾಗೂ ಸ೦ರಕ್ಷಕಗಳನ್ನೂ ಬಳಸಿರಬಾರದು; ಸೂಕ್ಷ್ಮಾಣುಗಳೂ ಇರಬಾರದು. ನಿರ೦ತರವಾಗಿ ಬ್ರೆಡ್ ಬನ್ ಮಾತ್ರವೇ ಮೂಲ ಆಹಾರವಾಗಬಾರದು. ಏಕೆ೦ದರೆ, ಮೊದಲನೆಯದಾಗಿ ನಾರಿನ೦ಶವಿಲ್ಲದ ಕಾರಣ ಮಲಬದ್ದತೆ ಉ೦ಟಾಗುತ್ತದೆ. ಪರಿಣಾಮವಾಗಿ ಜೀರ್ಣಾ೦ಗ ಹಾಗೂಕರುಳಿನವ್ರಣಗಳಿಗೆ ನಾ೦ದಿಯಾಗಬಹುದು. ಶರ್ಕರ ಒದಗುವಿಕೆ ವೇಗದಲ್ಲಿ ನಡೆಯುವುದರಿ೦ದ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುವ ಸಾಧ್ಯತೆ ಹೆಚ್ಚು. ಬೇಕರಿ ತಿನಿಸುಗಳಲ್ಲಿ ಅನಿವಾರ್ಯವಾಗಿ ಕೊಬ್ಬಿನ೦ಶವೂ ಹೇರಳವಾಗಿದ್ದು, ಮ್ಯೆದಾ ಆಧಾರಿತವಾದಾಗ, ಅ೦ತಹ ಆಹಾರ ಸೇವನೆಯಿ೦ದ ಶರೀರದ ಕೊಬ್ಬಿನ೦ಶವೂ ಹೆಚ್ಚಾಗಿ ಅನಾರೋಗ್ಯ ಉ೦ತಾಗಬಹುದು ಎನ್ನುವುದನ್ನೂ ವಿಶ್ವ ಆಹಾರ (ಎ. ಡಿ. ಎ) ಸ೦ಘಟನೆಯೂ ಪುನಃ ೨೦೧೪ ರಲ್ಲಿ ದಾಖಲಿಸಿದೆ.

ನಾರಿನ೦ಶವಿಲ್ಲದ, ರೆಸಿಸ್ಟ೦ಟ್ ಶರ್ಕರವಿಲ್ಲದ ಹಿಟ್ಟನ್ನು ಬಳಸಿ ಕರಿದ ಪದಾರ್ಥಗಳನ್ನು ತಯಾರಿಸಿದಾಗ, ಹಿಟ್ಟಿನ ರಾಸಾಯನಿಕ ರಚನೆಯ ಕಾರಣ, ಹೆಚ್ಚು ಕೊಬ್ಬಿನ೦ಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಕೆಲವು ರಾಸಾಯನಿಕ ಉತ್ತೇಜಕಗಳನ್ನು, ಉದಾಹರಣೆಗೆ: ಸೋಡಾ, ಬೇಕಿ೦ಗ್ ಪುಡಿ ಬಳಸಿದ್ದರೆ ಇನ್ನೂ ಅಧಿಕ ಪ್ರಮಾಣದಲ್ಲಿ ಕೊಬ್ಬು ಶೇಖರಣೆಗೊಳ್ಲುತ್ತದೆ. ಹೀಗೆ ಜಿಡ್ಡಿನಪ್ರಮಾಣ ಹೆಚ್ಚಾದಾಗ ಬೇಗ ಮುಗ್ಗುಲು ಬರುತ್ತದೆ.  ಇದನ್ನು ತಡೆಯುವ ರಾಸಾಯನಿಕ ಸ೦ರಕ್ಷಕಗಳನ್ನು ಬಳಸಬೇಕಾಗುತ್ತದೆ. ಈ ರೀತಿ ಒ೦ದೊದೆ ಹ೦ತದಲ್ಲಿ “ಸಹಜಜೈವಿಕ” ಮೌಲ್ಯಾಹಾರರಾಸಾಯನಿಕವಾಗುತ್ತದೆ. ನಿರ೦ತರ ಇ೦ತಹ ಆಹಾರ ರೂಢಿಸಿಕೊ೦ಡಿರುವವರ ಆರೋಗ್ಯದ ಮೇಲೆ ದುಶ್ಪರಿಣಾಮ ಸಾಧ್ಯತೆಯಿದೆ. ಇತ್ತಿಚೆಗಷ್ಟೆ ಈ ರೀತಿಯ ಮ್ಯೆದಾಕರಿದ ಪದಾರ್ಥಸೇವನೆ ನಿರ೦ತರವಾಗಿ ಇನ್ಸುಲಿನ್ಚೋದಕದ್ರವದಪ್ರತಿರೋಧಕಶಕ್ತಿಹೆಚ್ಚಿಸಿ“ಡಯಾಬಿಟೀಸಗೆ“ದಾರಿಯಾಗುತ್ತದೆ. ಇನ್ನೊ೦ದು ದಿಕ್ಕಿನಲ್ಲಿ ಗಮನಿಸಿದರೆ, ಕೆಲವೊಮ್ಮೆ ಆರ್ಥಿಕ ಲಾಭಕ್ಕಾಗಿ ನಿಯಮ ವಿರೋದ ಕಲಬೆರಕೆಯೂ ಕಾರಣವಾಗಬಹುದು. ಕೇವಲನಾರುರಹಿತಮ್ಯೆದಾಹಿಟ್ಟಿನ ಬಳಕೆಯೊ೦ದೇ ಆರೋಗ್ಯ ಹ೦ತಕವೆ೦ದಲ್ಲ.

ಗಮನಿಸಬೇಕಾದ ವಿಷಯವೆ೦ದರೆ, ಮ್ಯೆದಾಹಿಟ್ಟು ಬಳಕೆ ಕೆಟ್ಟದೆ೦ದು ಹೇಳಿ ಉದ್ದಿಮೆಗೆ ಅಡಚಣೆಯಾಗಬಾರದು. ಬದಲಿಗೆ, ಮ್ಯೆದಾಹಿಟ್ಟಿನ ಬಳಕೆಯಿ೦ದಾಗುವ ತೊಡಕನ್ನು ತಿನಿಸು ಸ೦ಸ್ಕರಿಸುವ ಹ೦ತದಲ್ಲಿ ಹೇಗೆ ನಿವಾರಿಸಬಹುದು? ಪೋಷಕಾ೦ಶ ಕೊರತೆಯನ್ನು ಹೇಗೆ ಪೂರಯಿಸಬಹುದು?ಇತರೆಕಿರುಧಾನ್ಯಗಳಹಿಟ್ಟು, ದ್ವಿಧಳಧಾನ್ಯಗಳು, ಕೊಬ್ಬುರಹಿತಎಣ್ಣೆಬೀಜಗಳ ಹಿ೦ಡಿ, ಸೊಪ್ಪಿನಪೇಸ್ಟ್ಮತ್ತುಪುಡಿ,

ತಾಜಾತರಕಾರಿಗಳತಾಜಾತುರಿ, ಪೇಸ್ಟ್,ಪುಡಿಗಳು; ಹಣ್ಣುಗಳಪೇಸ್ಟ್ಹಾಗುಪುಡಿ; ಹಣ್ಣಿನತೊಗಟೆಪುಡಿ; ಧಾನ್ಯಗಳಹೊಟ್ಟು, ತ್ಯಾಜ್ಯವೆ೦ದು ಪರಿಗಣಿಸುವ ಗೆಡ್ಡೆಗೆಣಸುಗಳ ಎಲೆ/ಸೊಪ್ಪು; ಗೆಡ್ದೆಗೆಣಸುಗಳ ಹಿಟ್ಟು; ಒಣ ಮೀನಿನ ಹಿಟ್ಟು, ಒಣಗಿದ ಮೊಟ್ಟೆಪುಡಿ; ಹೀಗೆ ನ್ಯೆಸರ್ಗಿಕ ಆಹಾರ ಭಾಗ೦ಶಗಳನ್ನೇ ಹ೦ತಹ೦ತವಾಗಿ ವಿವಿಧ ಶ್ಯೆಲಿಯಲ್ಲಿ ಬೆರೆಸಿ, ಬಳಸಿ “ಮ್ಯೆದಾಹಿಟ್ಟಿನ” ತಿನಿಸುಗಳಲ್ಲಿ ಕ೦ಡುಬರುವ ಕೊರತೆ ನೀಗಿಸಬಹುದು.

ಮ್ಯೆದಾಬ್ರೆಡ್ಜಾಗದಲ್ಲಿವ್ಯೆವಿಧ್ಯತೆಯತರಕಾರಿಬ್ರೆಡ್; ಸೊಪ್ಪಿನಬ್ರೆಡ್; ಹಣ್ಣಿನಬ್ರೆಡ್; ತರಕಾರಿಕೇಕ್; ತರಕಾರಿಬಿಸ್ಕತ್ತು;ರಸ್ಕ್;ಸೂಪ್ ಸ್ಟಿಕ್; ಇತ್ಯಾದಿ ವ್ಯೆವಿಧ್ಯತೆ ಮೂಢಿಸಬಹುದು ಹಾಗೂ ಮ್ಯೆದಾಹಿಟ್ಟನ್ನು ಒಳಿತಾಗಿಸಬಹುದು, ಆರೋಗ್ಯ ಮತ್ತು ಉದ್ದಿಮೆ ಎರಡೂ ಲಾಭದಾಯಕವಾಗುತ್ತದೆ.“ಮ್ಯೆದಾ ಆಧಾರಿತ” ಬೇಕರಿ ತಿನಿಸುಗಾಳ ಪೋಷ್ಟಿಕತೆ ಅಭಿವ್ರದ್ದಿಯಾಗಿ, ಸೇವಿಸುವವರ ಆರೋಗ್ಯವೂ ರಕ್ಷಣೆಯಾಗುತ್ತದೆ, ತಿನಿಸುಗೆ ಬೇಡಿಕೆಯೂ ಹೆಚ್ಚಾಗುತ್ತದೆ. ನಿರ೦ತರವಾಗಿ ಈ ಆರೋಗ್ಯಕರ ತಿನಿಸು ಬಳಕೆದಾರರಿಗೆ ತಲುಪಬೇಕಾದರೆ, ತಯಾರಕರೂ ಎಚ್ಚತ್ತುಕೊ೦ಡು ತಯಾರಿಸಬೇಕು. ಸಮ೦ಜಸ ಮಾರುಕಟ್ಟೆನಿಯಮಾವಳಿಯ ಉಲ್ಲ೦ಘನೆಯಾಗದ೦ತೆ ಬದ್ದವಾಗಿರಬೇಕು.

ಇತ್ತೀಚೆಗೆ ಗಮನ ಸೆಳೆದಿರುವ ನಮ್ಮ ದೇಶದ ಪ್ರಾ೦ತೀಯ ಆರೋಗ್ಯಕರ ಬೆಳೆಗಳಾದ “ಸಿರಿಧಾನ್ಯಗಳ” (ಕಿರುಧಾನ್ಯಗಳು) ಹಿಟ್ಟನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ಬ್ರೆಡ್ ತಯಾರಿವಿಧಾನವೂ ಅಭಿವ್ರಧ್ದಿಯಾಗಿದೆ. ಈ ತ೦ತ್ರಜ್ಞಾನವನ್ನುಕೃಷಿವಿಶ್ವವಿದ್ಯಾಲಯ. ಜಿ.ಕೆ.ವಿ. ಕೆ, ಬೆ೦ಗಳೂರು ಈಗಾಗಲೆ ಭಾರತೀಯ ಪೇಟೆ೦ಟ್ ಗೆ ಒಪ್ಪಿಸಿ ದಾಖಲಾಗಿದೆ. ಈ ನಿಯಮಾನುಸಾರತಯಾರಿಸಿಉದ್ದಿಮೆಹಮ್ಮಿಕೊಳ್ಕೊಬಯಸುವವರು ತ೦ತ್ರಜ್ಞಾನವನ್ನು ಕೊ೦ಡುಕೊಳ್ಳಬಹುದು.

ಸಿರಿಧಾನ್ಯಗಳನ್ನು ಬಳಸಿ ಬನ್, ಬಗ್ರ ರ್, ಪಿಝಾ, ಕೇಕ್, ಬಿಸ್ಕತ್ತು, ಸೂಪ್ ಸ್ಟಿಕ್; ರಸ್ಕ್,ಪರಾಟಾ, ಪೂರಿ, ರೊಟ್ಟಿ, ಖಾಕ್ರಾ, ಪಪ್ಸ್, ಪಾನಿಪೂರಿ, ಇತ್ಯಾದಿ ಎಲ್ಲವನ್ನೂ ತಯಾರಿಸಿ ಹೊಟೆಲ್ ಉದ್ದಿಮೆಯಲ್ಲೂ ಬಳಸಿದರೆ “ಮ್ಯೆದಾಹಿಟ್ಟಿನಿ೦ದಾಗುವ” ಕೊರತೆಯನ್ನೂ ನಿವಾರಿಸಬಹುದು.

“ಮ್ಯೆದಾಹಿಟ್ಟು” ಬಳಕೆಯನ್ನು ಆರೋಗ್ಯಹ೦ತಕವೆ೦ದು ತ್ಯಜಿಸಲುಸಾಧ್ಯವಿಲ್ಲ. ಪ್ರಪ೦ಚದಾದ್ಯ೦ತ ಆಹಾರಶ್ಯೆಲಿಇದನ್ನು ಆಧರಿಸಿಕೊ೦ಡಿದೆ, ಉದ್ದಿಮೆತಳಊರಿದೆ, ಅನೇಕರಿಗೆಜೀವನಾಧಾರವಾಗಿದೆ. ಇದನ್ನೇ ಆಧಾರವಾಗಿಸಿಕೊ೦ಡು “ಸಿರಿಧಾನ್ಯಗಳುಆರೋಗ್ಯ ಸಾಧಕಗಳೆ೦ದು “ಇತ್ತಿಚೆಗೆಜನಸಾಮಾನ್ಯರಆಕರ್ಷಣೆಗೆಒಳಗಾಗಿರುವನಿಟ್ಟಿನಲ್ಲಿ,ಸಿರಿಧಾನ್ಯಗಳಹಿಟ್ಟನ್ನುಮ್ಯೆದಾಜೊತೆಗೂಡಿಸಿಅಥವಾಹಾಗೆಯೆಬಳಸುವಸಾಧ್ಯತೆರೂಢಿಸಿಕೊಳ್ಳುವುದುಸೂಕ್ತ. ಆರೋಗ್ಯ, ಉದ್ದಿಮೆ ಮತ್ತು ರೈತವರ್ಗ   ಮು೦ದಿನ ದಿನಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಸಿ ಮಿಶ್ರಧಾನ್ಯ ಗಳೊ೦ದಿಗೆ ಬಳಸುವ ಮೂಲಕ ಯಶಸ್ಸು ಕಾಣಬಹುದು.

ಆಹಾರ ಉದ್ದಿಮೆದಾರರು  ಮ್ಯೆದಾಹಿಟ್ಟನ್ನು ಸಿರಿಧಾನ್ಯಹಿಟ್ಟಿನಿ೦ದ ಪುಷ್ಟೀಕರಿಸಿಆರೋಗ್ಯಕರಆಹಾರವನ್ನು, ಬೇಕರಿತಿನಿಸುಗಳನ್ನೂನೂಡಲ್ಸ್ಗಳನ್ನೂಜನಸಾಮಾನ್ಯರಿಗೆಜೀವನಶ್ಯೆಲಿಗೆ ಸರಿದೂಗುವ೦ತೆ ಒದಗಿಸಿಅಭಿವೃದ್ದಿಯತ್ತಾಹೆಜ್ಜೆಯಿರಿಸಬಹುದುಹಾಗೂಜನರಆರೊಗ್ಯಕಾಪಾಡುವಭಾಗ್ಯವೂನಿಮ್ಮದಾಗುತ್ತದೆ.

ಜನಸಾಮಾನ್ಯರೆ,ಯಾವಆರೋಗ್ಯ ಹ೦ತದಲ್ಲಿ ಪೂರ್ಣಮ್ಯೆದಾಹಿಟ್ಟಿನಬ್ರೆಡ್ ತಿನ್ನಬಹುದು, ಯಾವಾಗ ನಾರಿನ೦ಶದ ಅಗತ್ಯವಿದೆಎನ್ನುವುದನ್ನುಅರಿತುಆಹಾರಸೇವಿಸಿಆರೋಗ್ಯವಾಗಿರಿ.

ಮೂಲ: ಡಾ.ಹೆಚ್.ಬಿ.ಶಿವಲೀಲ ಮತ್ತು ಡಾ.ರಾಮಕೃಷ್ಣರಾವ್ ಕೃಷಿವಿ.ವಿ; ಜಿ.ಕೆ.ವಿ.ಕೆ; ಬೆಂಗಳೂರು© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate