ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಹಣ್ಣಿನ ರಸ ಸೇವನೆಗೂ ಮಿತಿಯಿರಲಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹಣ್ಣಿನ ರಸ ಸೇವನೆಗೂ ಮಿತಿಯಿರಲಿ

ಹಣ್ಣಿನ ರಸ ಸೇವನೆಗೂ ಮಿತಿಯಿರಲಿ ಕುರಿತಾದ ಮಾಹಿತಿ

ಆಯಾ ಕಾಲಕ್ಕೆ ಸಿಗುವ ಹಣ್ಣಿನ ರಸ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ಕೇಳಿದ್ದೇವೆ. ಆದರೆ ಪ್ರತಿದಿನವೂ ಹಣ್ಣಿನ ರಸ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಬಹುದು ಮತ್ತು ಇದರಿಂದ ಹೃದಯದ ಆರೋಗ್ಯಕ್ಕೂ ತೊಂದರೆಯಾಗಬಹುದು ಎನ್ನುತ್ತದೆ ಇತ್ತೀಚಿನ ಒಂದು ಸಂಶೋಧನೆ. 
ಹಣ್ಣಿನ ರಸದಲ್ಲಿರುವ ಅತಿ ಹೆಚ್ಚಿನ ಸಕ್ಕರೆ ಅಂಶ ಮತ್ತು ಅತಿಕಡಿಮೆ ಫೈಬರ್ ಅಂಶ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅವುಗಳಲ್ಲಿ ಸಾಕಷ್ಟು ವಿಟಾಮಿನ್‌ಗಳು ಮತ್ತು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿದ್ದರೂ ಅಷ್ಟೇ ಪ್ರಮಾಣದ ಸಕ್ಕರೆ ಅಂಶ ಮತ್ತು ಕಡಿಮೆ ಫೈಬರ್ ಅಂಶ ಇರುತ್ತದೆ. ಆದ್ದರಿಂದ ಎರಡು ದಿನಕ್ಕೊಮ್ಮೆಯೋ, ವಾರಕ್ಕೊಮ್ಮೆಯೋ ಹಣ್ಣಿನ ರಸ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.


ಹಣ್ಣಿನ ರಸ ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದ್ದರೂ ಇದರ ನಿಯಮಿತ ಸೇವನೆ ಮಾತ್ರ ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ. ದಣಿದಾಗ ದೇಹಕ್ಕೆ ಶಕ್ತಿಯನ್ನು ನೀಡುವ ಹಣ್ಣಿನ ರಸ ದೇಹದ ಆರೋಗ್ಯವನ್ನೇ ಹದಗೆಡಿಸುವ ಗುಣವನ್ನೂ ಹೊಂದಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಕೆಲವರಿಗೆ ಪ್ರತಿದಿನವೂ ಒಂದಿಲ್ಲೊಂದು ಹಣ್ಣಿನ ರಸ ಕುಡಿದು ಅಭ್ಯಾಸವಿರುವುದು ಸುಳ್ಳಲ್ಲ. ಅಂಥವರು ತಮ್ಮ ಅಭ್ಯಾಸವನ್ನು ಬದಲಿಸಿಕೊಂಡು ವಾರಕ್ಕೊಮ್ಮೆಯೋ, ನಾಲ್ಕುದಿನಕ್ಕೊಮ್ಮೆಯೋ ಹಣ್ಣಿನ ರಸ ಸೇವಿಸುವುದು ಒಳಿತು.


ಅದರಲ್ಲೂ ಹೊರಗಡೆ ಖರೀದಿಸುವ ಜ್ಯೂಸ್‌ಗಳಲ್ಲಿ ಹೆಚ್ಚು ಸಕ್ಕರೆಯನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ ಇದು ಮತ್ತಷ್ಟು ಹಾನಿಯನ್ನು ಉಂಟು ಮಾಡುತ್ತದೆ. ಅತಿಯಾದ ಜ್ಯೂಸ್ ಸೇವನೆ ರಕ್ತದೊತ್ತಡವನ್ನು ಹೆಚ್ಚಿಸಿ, ಹೃದಯಾಘಾತವಾಗುವಂತೆ ಮಾಡಬಹುದು ಎನ್ನುತ್ತದೆ ಸಂಶೋಧನೆ. 
ಹಾಗೆಂದು ರೋಗಿಗಳು, ಅಥವಾ ಸುಸ್ತಿನಿಂದ ಬಳಲುತ್ತಿರು ವವರು ದಿನವೂ ಹಣ್ಣಿನ ರಸ ಸೇವಿಸುವುದರಿಂದ ಸಮಸ್ಯೆಯೇನಿಲ್ಲ. ಆದರೆ ಅದೊಂದು ಅಭ್ಯಾಸವಾಗಬಾರದು ಅಷ್ಟೆ. ಪ್ರತಿ ದಿನ ರಾತ್ರಿ ಆಯಾ ಕಾಲದಲ್ಲಿ ದೊರಕುವ ಹಣ್ಣುಗಳನ್ನೇ ತಿನ್ನಬಹುದು.


ಆದರೆ ಅದನ್ನು ಜ್ಯೂಸ್ ಮಾಡಿಕೊಂಡು ಸೇವಿಸುವುದರಿಂದ ನೇರವಾಗಿ ಹಣ್ಣನ್ನೇ ತಿನ್ನುವಾಗ ದೇಹಕ್ಕೆ ಸೇರುವ ಸಕ್ಕರೆ ಪ್ರಮಾಣಕ್ಕಿಂತ ಹೆಚ್ಚು ಸಕ್ಕರೆ ದೇಹವನ್ನು ಸೇರುತ್ತದೆ. ಅಲ್ಲದೆ ಇದು ರಕ್ತದೊತ್ತಡ ಸಮತೋಲನದಲ್ಲಿರುವಂತೆ ನೋಡಿಕೊಳ್ಳದೆ ಅದು ಏರುಪೇರಾಗುವಂತೆ ಮಾಡುತ್ತದೆ. 
ಈ ಎಲ್ಲಾ ಕಾರಣಗಳಿಂದ ಹಣ್ಣಿನ ರಸ ಸೇವನೆಗಿಂತ ಹೆಚ್ಚು ಹಣ್ಣುಗಳನ್ನು ಹಾಗೆಯೇ ಸೇವಿಸಿ ಎಂದು ವೈದ್ಯರು ಸೂಚನೆ ನೀಡುತ್ತಾರೆ. ಜ್ಯೂಸ್ ಸೇವಿಸಲೇ ಬೇಕೆಂದಿದ್ದರೆ ಅದಕ್ಕೂ ಒಂದು ಮಿತಿ ಇರಲಿ ಎಂಬುದು ಅವರ ಅಭಿಪ್ರಾಯ.

ಮೂಲ: ವಿಕ್ರಮ

2.94382022472
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top