ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಾಲಕಿಯರಲ್ಲಿ ಸ್ವಚ್ಛತೆ

ಸಾಮಾನ್ಯವಾಗಿ ಸಣ್ಣಪುಟ್ಟಗಳಲ್ಲಿ ಮತ್ತು ನಗರಗಳಲಿ ವಾಸಮಾಡುವ ತರುಣಿಯರು, ತಮಗೆ ಕೊಳ್ಳಲು ಸಾಧ್ಯವಾದರೆ, ಋತುಸ್ರಾವದ ಅವಧಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸುತ್ತಾರೆ. ಇವು ಸಿದ್ಧಪಡಿಸಿದ ಚೃದುವಾದ ಹತ್ತಿಯ ಪ್ಯಾಡ್‍ಗಳು.

ಸಾಮಾನ್ಯವಾಗಿ ಸಣ್ಣಪುಟ್ಟಗಳಲ್ಲಿ ಮತ್ತು ನಗರಗಳಲಿ ವಾಸಮಾಡುವ ತರುಣಿಯರು, ತಮಗೆ ಕೊಳ್ಳಲು ಸಾಧ್ಯವಾದರೆ, ಋತುಸ್ರಾವದ ಅವಧಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸುತ್ತಾರೆ. ಇವು ಸಿದ್ಧಪಡಿಸಿದ ಚೃದುವಾದ ಹತ್ತಿಯ ಪ್ಯಾಡ್‍ಗಳು. ಒಳ ಉಡುಪಿನ ಒಳಗೆ ಧರಿಸುವ ಇವು ಯೋನಿಯಿಂದ ಸ್ರವಿಸುವ ರಕ್ತವನ್ನು ಹೀರಿಕೊಳ್ಳುತ್ತವೆ. ಈ ಪ್ಯಾಡ್‍ಗಳನ್ನು ಒಂದು ಸಲ ಉಪಯೋಗಿಸಿದ ಮೇಲೆ ಪುನಃ ಉಪಯೋಗಿಸಬಾರದು. ಕೆಲವು ತರುಣಿಯರು ಮಡಿಸಿದ ಬಟ್ಟೆ ಅಥವಾ ಹತ್ತಿಯ ಪಟ್ಟಿಗಳಿಂದ ತಮ್ಮದೇ ಪ್ಯಾಡ್‍ಗಳನ್ನು ಮಾಡಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಈ ಪ್ಯಾಡ್‍ಗಳು ಯಾವಾಗಲೂ ಶುಚಿಯಾಗಿರಬೇಕು ಮತ್ತು ಧರಿಸಿದಾಗ ಒಣಗಿರಬೇಕು ಒಂದು ದಿನದಲ್ಲಿ ಅವನ್ನು ಅನೇಕ ಬಾರಿ ಬದಲಾಯಿಸಬೇಕು ಮತ್ತು ಹೊರಾಂಗಣದಲ್ಲಿ ದೊಡ್ಡ ಖಾಲಿ ಡಬ್ಬದಲ್ಲಿ ಹಾಕಿ ಸುಡುವ ಮೂಲಕ ವಿಲೇವಾರಿ ಮಾಡಬೇಕು. ಬಟ್ಟೆಯನ್ನು ಉಪಯೋಗಿಸಿದರೆ ಸೋಪು ಮತ್ತು ನೀರನ್ನು ಬಳಸಿ ಚೆನ್ನಾಗಿ ಒಗೆಯಬೇಕು ಮತ್ತು ಬಿಸಿಲಿನಲ್ಲಿ ಞಣಗಿಸಬೇಕು ಸೂರ್ಯನ ಬಿಸಿಲು ಪ್ರಕೃತಿಯಲ್ಲಿ ಲಭ್ಯವಾಗಿರುವ ಅತ್ಯಂತ ಅಗ್ಗದ ಸೋಂಕು ನಿವಾರಕ. ಗ್ರಾಮಗಳಲ್ಲಿ ಮುಟ್ಟಿನ ಸಮಯದಲ್ಲಿ ಹದಿಹರೆಯದವರ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲಾಗುತ್ತದೆ. ಹಾನಿಕಾರಕವಾದ ಅಂತಹ ನಿರ್ಬಂಧಗಳನ್ನು (ಮಾಡಬಾರದು ಎಂದು ಹೇಳುವುದನ್ನು), ಅಂದರೆ ಮುಟ್ಟಿನ ಸಮಯದಲ್ಲಿ ಸ್ನಾನ ಮಾಡಬಾರದು ಅಥವಾ ಯಾವುದೇ ದೈಹಿಕ ಕೆಲಸವನ್ನು ಮಾಡಬಾರದು ಎನ್ನುವುದನ್ನು ಪ್ರೋತ್ಸಾಹಿಸಬಾರದು.

ಪ್ರತಿದಿನ ಜನನಾಂಗದ ಹೊರಭಾಗವನ್ನು ಉಳಿದಿರಬಹುದಾದ ರಕ್ತದ ಕಲೆಯನ್ನು ತೆಗೆಯಲು, ಚೆನ್ನಾಗಿ ನೀರಿನಿಂದ ತೊಳೆಯಬೇಕು.

ರಕ್ತ ಸ್ರಾವದಲ್ಲಿ ಬದಲಾವಣೆಗಳು

ಕೆಲವು ಸಲ ಅಂಡಾಶಯವು ಅಂಡಾಣುವನ್ನು ಬಿಡುಗಡೆ ಮಾಡುವುದಿಲ್ಲ. ಹೀಗಾದಾಗ ದೇಹವು ಕಡಚೆ ಹರ್ಮೋನುಗಳನ್ನು ಸೃಷ್ಟಿಸುತ್ತದೆ. ಇದು ಮಹಿಳೆಯ ರಕ್ತಸ್ರಾವದ ಅಂತರ ಮತ್ತು ಪ್ರಮಾಣದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ. ಮಾಸಿಕ ಋತುಸ್ರಾವ ಈಗಷ್ಟೇ ಪ್ರಾರಂಭವಾಗಿರುವ ತರುಣಿಯರು ಅಥವಾ ಮೊಲೆ ಉಣಿಸುವದನ್ನು ಇತ್ತೀಚೆಗೆ ನಿಲ್ಲಿಸಿರುವ ಸ್ತ್ರೀಯರು ಕೆಲವು ತಿಂಗಳಿಗೊಮ್ಮೆ ಮುಟ್ಟಾಗಬಹುದು. ಅಥವಾ ಅಲ್ಪ ಪ್ರಮಾಣದ ಇಲ್ಲವೇ ಅತಿಯಾದ ರಕ್ತಸ್ರಾವವನ್ನು ಮಾಡಬಹುದು. ಕಾಲಾನಂತರದಲ್ಲಿ ಅವರ ಆವರ್ತಗಳು ಹೆಚ್ಚು ಸಕ್ರಮವಾಗುತ್ತವೆ. ಹರ್ಮೋನಿನ ಕುಟುಂಬ ಯೋಜನೆಯನ್ನು ಅನುಸರಿಸುವ ಮಹಿಳೆಯರಲ್ಲಿ ಕೆಲವು ಸಲ ತಿಂಗಳ ಮಧ್ಯಭಾಗದಲ್ಲಿ ರಕ್ತ ಸ್ರಾವವಾಗಬಹುದು. ವಯಸ್ಸಾದ ಮಹಿಳೆಯರಲ್ಲಿ ಇನ್ನು ಮುಟ್ಟುನಿಲ್ಲದಿದ್ದರೆ ಅತಿಯಾದ ರಕ್ತಸ್ರಾವವಾಗಬಹುದು ಅಥವಾ ಅವರು ಚಿಕ್ಕವಯಸ್ಸಿನಲ್ಲಿವಾಗುತ್ತಿದ್ದುದಕ್ಕಿಂತ ಹೆಚ್ಚು ಸಲ ರಕ್ತಸ್ರಾವವಾಗಬಹುದು. ಋತು ಶಾಶ್ವತವಾಗಿ ನಿಲ್ಲುವುದಕ್ಕೆ ಸಮೀಪಿಸುತ್ತಿದ್ದಂತೆ ಅವರಲ್ಲಿ ಮಾಸಿಕ ಋತುಸ್ರಾವ ಕೆಲವು ತಿಂಗಳು ನಿಲ್ಲಬಹುದು ಹಾಗೂ ಮತ್ತೆ ಅದು ಪ್ರಾರಂಭವಾಗಬಹುದು.

ಮಾಸಿಕ ಋತು ಸ್ರಾವದೊಡನೆ ನೋವು

ಮಾಸಿಕ ಋತು ಸ್ರಾವದಲ್ಲಿ ಒಳಪದರವನ್ನು ಹೊರನೂಕಲು ಗರ್ಭಕೋಶವು ಕಿವಿಚುತ್ತದೆ. ಈ ಕಿವಿಚುವಿಕೆಯು ಕೆಳಕಿಬ್ಬೊಟ್ಟೆ ಅಥವಾ ಕೆಳಭಾಗದ ಬೆನ್ನಿನಲ್ಲಿ ನೋವನ್ನು ಉಂಟು ಮಾಡುತ್ತದೆ. ಇದನ್ನು ಕೆಲವು ಸಲ ಗರ್ಭಕೋಶದ ನುಲಿಯುವುದು (ಕ್ರಾಂಪ್) ಎಂದು ಕರೆಯುತ್ತಾರೆ. ರಕ್ತಸ್ರಾವ ಪ್ರಾರಂಭವಾಗುವುದಕ್ಕೆ ಮೊದಲು ನೋವು ಪ್ರಾರಂಭವಾಗಬಹುದು ಅಥವಾ ನಂತರ ನೋವು ಪ್ರಾರಂಭವಾಗಬಹುದು.

 • ಯೋಗಕ್ಷೇಮ ನೋಡಿಕೊಳ್ಳಲು ಸೂಚನೆಗಳು
 • ವ್ಯಾಯಾಮ ಮಾಡಿ, ನೆಡೆದಾಡಿ ಮತ್ತು ಓಡಿ.
 • ಕಿಬ್ಬೊಟ್ಟೆಯನ್ನು ಉಜ್ಜಿ, ಬಿಗಿದುಕೊಂಡ ಮಾಂಸಖಂಡಗಳು ಸಡಿಲವಾಗಲು ಇದು ಸಹಾಯ ಮಾಡುತ್ತದೆ.
 • ಪ್ಲಾಸ್ಟಿಕ್ ಬಾಟಲ್ ಅಥವಾ ಬೇರೆ ಡಬ್ಬಿಯಲ್ಲಿ ಬಿಸಿನೀರು ತುಂಬಿ ಕಿಬ್ಬೊಟ್ಟೆ ಅಥವಾ ಬೆನ್ನಿನ ಕೆಳಭಾಗದಲ್ಲಿ ಇರಿಸಿ ಅಥವಾ ಬಿಸಿನೀರಿನಲ್ಲಿ ನೆನೆಸಿದ ದಪ್ಪ ಬಟ್ಟೆಯಿಂದ ಕಾವುಕೊಡಿ.
 • ಶುಂಠೀ ಹಾಕಿದ ಟೀ ಕುಡಿಯಿರಿ. ನಿಮ್ಮ ಪ್ರದೇಶದಲ್ಲಿರುವ ಇತರ ಮಹಿಳೆಯರಿಗೆ ಈ ರೀತಿಯ ನೋವಿಗೆ ಶಮನ ನೀಡುವ ಇತರ ವಿಧಾನಗಳು ತಿಳಿದಿರಬಹುದು.
 • ಡಾಕ್ಟರ ಸಲಹೆ ಪ್ರಕಾರ ನೋವಿಗೆ ಸೌಮ್ಯವಾದ ಒಂದು ಔಷಧವನ್ನು ತೆಗೆದುಕೊಳ್ಳಿ.

ಋತುಸ್ರಾವ ಪೂರ್ವದ ಲಕ್ಷಣಗಳು (ಪಿಎಂಎಸ್)

ಕೆಲವು ಮಹಿಳೆಯರು ಮತ್ತು ಬಾಲಕಿಯರು ಮಾಸಿಕ ಋತುಸ್ರಾವಕ್ಕೆ ಒಂದು ಅಥವಾ ಎರಡು ವಾರಗಳಿಗೆ ಮುಂಚಿತವಾಗಿಯೇ ಅಹಿತಕರವಾದ ಭಾವನೆಯನ್ನು ಅನುಭವಿಸುತ್ತಾರೆ. ಋತುಸ್ರಾವ ಪೂರ್ವದ ಲಕ್ಷಣಗಳು (ಪಿಎಂಎಸ್) ಎಂದು ಕರೆಯಲಾಗುವ ಲಕ್ಷಣಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಲಕ್ಷಣಗಳು ಅವರಲ್ಲಿ ಕಾಣಿಸಿಕೊಳ್ಳಬಹುದು. ಪಿಎಂಎಸ್ ಇರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದಾದ ಲಕ್ಷಣಗಳು.

 • ಸ್ತನಗಳಲ್ಲಿ ನೋವು
 • ಕಿಬ್ಬೊಟ್ಟೆಯಲ್ಲಿ ಏನೋ ತುಂಬಿರುವಂತಹ ಭಾವನೆ
 • ಮಲಬದ್ಧತೆ
 • ಹೆಚ್ಚು ಸುಸ್ತು
 • ಮಾಂಸಖಂಡಗಳ ನೋವು, ವಿಶೇಷವಾಗಿ ಬೆನ್ನಿನ ಕೆಳಭಾಗ ಅಥವಾ ಹೊಟ್ಟೆಯಲ್ಲಿ
 • ಯೋನಿಯ ಸ್ರಾವದಲ್ಲಿ ವ್ಯತ್ಯಾಸ.

ಮುಖದ ಮೇಲೆ ಎಣ್ಣೆ ಅಥವಾ ಮೊಡವೆಗಳು

ತೀವ್ರವಾದ ಅಥವಾ ತಡೆಯಲಾಗದ ಭಾವನೆಗಳು

ಕೆಲವು ಬಗೆಯ ಆಹಾರಗಳನ್ನು ತಿನ್ನುವ ಬಯಕೆ ಮತ್ತು ಹಸಿವು ಹಾಗೂ ಬಾಯಾರಿಕೆಯಲ್ಲಿ ಹೆಚ್ಚಳ. ಅಣೆಖ ಸ್ತ್ರೀಯರು ಪ್ರತಿತಿಂಗಳೂ ಮೇಲೆ ಹೇಳಿದ ಲಕ್ಷಣಗಳಲ್ಲಿ ಕನಿಷ್ಠಪಕ್ಷ ಒಂದನ್ನಾದರೂ ಹೊಂದಿರುತ್ತಾರೆ. ಕೆಲವರಿಗೆ ಇವು ಎಲ್ಲವೂ ಕಾಣಿಸಿಕೊಳ್ಳಬಯುದು. ಒಬ್ಬ ಮಹಿಳೆಗೆ ಈ ತಿಂಗಳ ಲಕ್ಷಣಗಳಿಗೂ ಮುಂದಿನ ತಿಂಗಳ ಲಕ್ಷಣಗಳಿಗೂ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಅನೇಕ ಮಹಿಳೆಯರಿಗೆ ಋತುಸ್ರಾವ ಪ್ರಾರಂಭವಾಗುವುದಕ್ಕೆ ಒಂದು ದಿನ ಮುಂದೆ ತಳಮಳವಾಗುತ್ತಿರುತ್ತದೆ. ಆದರೆ ಕೆಲವು ಮಹಿಳೆಯರು ಆ ಸಮಯದಲ್ಲಿ ಹೆಚ್ಚು ಸೃಷ್ಟಶೀಲರೂ, ಕೆಲಸವನ್ನು ಮಾಡಲು ಸಮರ್ಥರೂ ಆಗಿರುತ್ತಾರೆಂದು ಹೇಳುತ್ತಾರೆ. ಋತುಸ್ರಾವ ಪ್ರಾರಂಭವಾದ ಒಂದೆರಡು ದಿನಗಳಲ್ಲಿಯೇ ಈ ಲಕ್ಷಣಗಳು ಮಾಯವಾಗುತ್ತವೆ.

ಮೂಲ: ಪೋರ್ಟಲ್ ತಂಡ

2.87341772152
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top