ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವೈಯಕ್ತಿಕ ಸ್ವಚ್ಛತೆ

ನಾವು ತಿನ್ನುವ ಆಹಾರ, ನಮ್ಮ ದೇಹವನ್ನು ನಾವು ಸ್ವಚ್ಛವಾಗಿಡುವ ರೀತಿ, ದೈಹಿಕ ವ್ಯಾಯಾಮ ಹಾಗೂ ಸುರಕ್ಷಿತ ಲೈಂಗಿಕ ಸಂಬಂಧ, ಇವೆಲ್ಲವೂ ನಮ್ಮ ದೇಹದ ಉತ್ತಮ ಆರೋಗ್ಯ ನಿರ್ವಹಣೆಯಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತವೆ.

ನಾವು ತಿನ್ನುವ ಆಹಾರ, ನಮ್ಮ ದೇಹವನ್ನು ನಾವು ಸ್ವಚ್ಛವಾಗಿಡುವ ರೀತಿ, ದೈಹಿಕ ವ್ಯಾಯಾಮ ಹಾಗೂ ಸುರಕ್ಷಿತ ಲೈಂಗಿಕ ಸಂಬಂಧ, ಇವೆಲ್ಲವೂ ನಮ್ಮ ದೇಹದ ಉತ್ತಮ ಆರೋಗ್ಯ ನಿರ್ವಹಣೆಯಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತವೆ. ಸ್ವಚ್ಛತೆಯ ಕೊರತೆಯಿಂದಾಗಿ ಹಲವಾರು ಖಾಯಿಲೆಗಳು ಹರಡುತ್ತವೆ. ಪರೋಪಜೀವಿಗಳು, ಹುಳುಗಳು, ತುರಿಗಜ್ಜಿ, ಹುಣ್ಣುಗಳು, ದಂತಕ್ಷಯ, ಅತಿಸಾರ ಮತ್ತು ರಕ್ತಬೇದಿ ವೈಯಕ್ತಿಕ ಸ್ವಚ್ಛತೆಯ ಕೊರತೆಯಿಂದ ಉಂಟಾಗುತ್ತವೆ. ಈ ಎಲ್ಲಾ ಖಾಯಿಲೆಗಳನ್ನು ಸ್ವಚ್ಛತೆಯ ಪಾಲನೆಯಿಂದ ತಡೆಗಟ್ಟಬಹುದು.

ತಲೆಯನ್ನು ಸ್ವಚ್ಛಗೊಳಿಸುವುದು

ವಾರಕ್ಕೆ ಒಮ್ಮೆ ಅಥವ ಎರಡು ಬಾರಿ ಶ್ಯಾಂಪೊ ಅಥವ ಇತರೆ ಸ್ವಚ್ಛಕಾರಕಗಳಿಂದ ತಲೆ ಸ್ನಾನ ಮಾಡಬೇಕು.

ಕಣ್ಣು, ಕಿವಿ ಹಾಗೂ ಮೂಗಿನ ಸ್ವಚ್ಛತೆ

 1. ಪ್ರತಿ ದಿನ ಸ್ವಚ್ಛ ನೀರಿನೀಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ.
 2. ಕಿವಿಯಲ್ಲಿ ಕೊಳೆ ಅಥವಾ ಕುಕುಣಿ ಕೂರುವುದರಿಂದ ಗಾಳಿಯ ಸರಾಗ ಹರಿದಾಟಕ್ಕೆ ಅಡ್ಡಿಯಾಗುತ್ತದೆ. ಇದು ನೋವನ್ನುಂಟು ಮಾಡುತ್ತದೆ. ಹಾಗಾಗಿ ವಾರಕ್ಕೊಮ್ಮೆ ಹತ್ತಿ ಬಡ್ಸ್ನಿಂದ ಕಿವಿಗಳನ್ನು ಸ್ವಚ್ಛಗೊಳಿಸಿರಿ.
 3. ಮೂಗು ಒಸರುವಿಕೆ ಒಣಗಿ ಕೊಟವಕಟ್ಟಿ ಮೂಗು ಕಟ್ಟುತ್ತದೆ.. ಹಾಗಾಗಿ ಬೇಕೆನಿಸಿದಾಗ ಮೂಗನ್ನು ಸ್ವಚ್ಛಗೊಳಿಸಿರಿ. ಮಕ್ಕಳಿಗೆ ಶೀತವಾಗಿ ಮೂಗು ಸೋರುತ್ತಿದ್ದರೆ ಮೆದು ಬಟ್ಟೆಯಿಂದ ಮೂಗನ್ನು ಸ್ವಚ್ಛಗೊಳಿಸಿರಿ.

ಬಾಯಿಯನ್ನು ಸ್ವಚ್ಛಗೊಳಿಸುವುದು

 • ಹಲ್ಲುಜ್ಜಲು ಮೆದು ಹಲ್ಲು ಪುಡಿ ಮತ್ತು ಪೇಸ್ಟ್ ಬಳಸುವುದು ಉತ್ತಮ. ಪ್ರತಿ ದಿನ ಎರಡು ಬಾರಿ ಹಲ್ಲನ್ನು ಉಜ್ಜಿರಿ – ಒಮ್ಮೆ ಬೆಳಿಗ್ಗೆ ಹಾಸಿಗೆಯಿಂದ ಎದ್ದ ಕೂಡಲೆ ಹಾಗೂ ಮಲಗುವ ಮುನ್ನ ಇನ್ನೊಮ್ಮೆ. ಇದ್ದಿಲು ಪುಡಿ, ಉಪ್ಪು, ಒರಟಾದ ಹಲ್ಲು ಪುಡಿ, ಇತ್ಯಾದಿ ಹಲ್ಲುಜ್ಜಲು ಬಳಸಿದಾಗ ಹಲ್ಲಿನ ಹೊರ ಪದರಿಗೆ ಹಾನಿಯಾಗುತ್ತದೆ.
 • ಯಾವುದೇ ಆಹಾರ ಪದಾರ್ಥ ತಿಂದ ನಂತರ ನಿಮ್ಮ ಬಾಯನ್ನು ಸ್ವಚ್ಛ ನೀರಿನಿಂದ ಬಾಯಿ ಮುಕ್ಕಳಿಸಿ. ಇದರಿಂದ ದುರ್ವಾಸನೆ ಉಂಟುಮಾಡಿ ಒಸಡನ್ನು ಕೆಡೆಸುವುದಲ್ಲದೆ ಹಲ್ಲಿನ ಕೊಳೆಯುವಿಕೆಗೆ ಕಾರಣವಾಗುವ ಹಲ್ಲಿನ ಸಂದಿಯಲ್ಲಿ ಆಹಾರ ಪದಾರ್ಥಗಳೂ ಸಿಕ್ಕಿಕೊಳ್ಳುವುದನ್ನು ತಡೆಯ ಬಹುದಾಗಿದೆ.
 • ಪೌಷ್ಟಿಕ ಆಹಾರವನ್ನು ಸೇವಿಸಿ. ಸಿಹಿ ತಂಡಿಗಳು, ಚಾಕಲೇಟ್, ಐಸ್ ಕ್ರೀಂ ಮತ್ತು ಕೇಕ್ ಗಳನ್ನು ಆದಷ್ಟು ಕಡಿಮೆ ಸೇವಿಸಿ.
 • ದಂತಕ್ಷಯದ ಲಕ್ಷಣ ಕಂಡು ಬಂದಲ್ಲಿತಕ್ಷಣ ದಂತ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.
 • ನಿಯಮಿತವಾಗಿ ಮತ್ತು ಸೂಕ್ತ ರೀತಿಯಲ್ಲಿ ಹಲ್ಲುಜ್ಜುವ ವಿಧಾನಗಳು ಹಲ್ಲಿನ ಮೇಲೆ ಕಿಟ್ಟ ನೆಲೆಗಟ್ಟುವಿಕೆ ತಡೆಯುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಹಲ್ಲಿನ ಶುಚಿತ್ವಕ್ಕಾಗಿ ಹಲ್ಲಿನ ವೈದ್ಯರನ್ನು ಸಂಪರ್ಕಿಸಿ.

ಚರ್ಮದ ಆರೈಕೆ

ಚರ್ಮವು ನಮ್ಮ ಸಂಪೂರ್ಣ ದೇಹವನ್ನು ಮುಚ್ಚಿ, ದೇಹದ ಅಂಗಗಳನ್ನು ಸಂರಕ್ಷಿಸುತ್ತದೆ ಹಾಗೂ ದೇಹದ ತಾಪವನ್ನು ಸುಸ್ಥಿತಿಯಲ್ಲಿರುವಂತೆ ನಿರ್ವಹಿಸುತ್ತದೆ.
2. ಚರ್ಮವೂ ದೇಹದಲ್ಲಿನ ಕೊಳೆಯನ್ನ ಬೆವರಿನ ಮುಖಾಂತರ ಹೊರಹಾಕುತ್ತದೆ. ದೊಷಯುಕ್ತ ಚರ್ಮದಲ್ಲಿ ಬೆವರಿನ ಗ್ರಂಥಿಗಳು ಮುಚ್ಚಿದಾಗ ಗಾಯಗಳು, ಕೀವುಗುಳ್ಳೆಗಳು, ಹಾಗೂ ಮೊಡವೆಗಳು ಉಂಟಾಗುತ್ತವೆ. 3. ನಿಮ್ಮ ಚರ್ಮವನ್ನು ಶುಚಿಯಾಗಿಡಲು ಪ್ರತಿನಿತ್ಯ ಸಾಬೂನು ಮತ್ತು ಸ್ವಚ್ಛ ನೀರಿನಿಂದ ಸ್ನಾನ ಮಾಡಿರಿ.

ಕೈ ತೊಳೆಯುವುದು

ಆಹಾರ ತಿನ್ನುವುದು, ಮಲ ವಿಸರ್ಜನೆಯ ನಂತರ ಸ್ವಚ್ಚಗೊಳಿಸುವುದು, ಮೂಗು ಸ್ವಚ್ಛಗೊಳಿಸುವುದು, ಸಗಣಿ ತೆಗೆಯುವುದು, ಇತ್ಯಾದಿ, ಚಟುವಟಿಗೆಗಳನ್ನು ನಾವು ನಮ್ಮ ಕೈಗಳನ್ನು ಬಳಸಿಕೊಂಡು ಮಾಡುತ್ತೇವೆ. ಈ ಚಟುವಟಿಕೆಯ ಸಮಯದಲ್ಲಿ ಹಲವಾರು ಖಾಯಿಲೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳು / ರೋಗಾಣುಗಳು ನಮ್ಮ ಉಗುರಿನಲ್ಲಿ ಉಳಿಯುತ್ತವೆ ಹಾಗೆಯೇ ಚರ್ಮದ ಮೇಲೆಯೂ ಇರುತ್ತವೆ. ಚಟುವಟಿಕೆ ಮುಗಿಸಿದ ನಂತರ ಮತ್ತು ಮುಖ್ಯವಾಗಿ ಅಡುಗೆ ಮಾಡುವ ಮುನ್ನ ಹಾಗೂ ಆಹಾರ ಸೇವನೆಯ ಮುನ್ನ ಸಾಬೂನು ಬಳಸಿ ಕೈಯನ್ನು ತೊಳೆಯುವುದರಿಂದ (ಕೈಯ ಹರಡುವ / ಮಣಿಕಟ್ಟಿನ ಮೇಲೆ, ಬೆರಳುಗಳ ಮಧ್ಯದಲ್ಲಿ ಮತ್ತು ಉಗುರುಗಳು) ಹಲವಾರು ಖಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯವಾಗುತ್ತದೆ.ನಿಯಮಿತವಾಗಿ ನಿಮ್ಮ ಉಗುರನ್ನು ಕತ್ತರಿಸಿ. ಹಲ್ಲು ಕಚ್ಚುವುದನ್ನು ಮತ್ತು ಮೂಗುಜ್ಜುವುದನ್ನು ಮಾಡದಿರಿ.

ಮಕ್ಕಳು ಮಣ್ಣಿನಲ್ಲಿ ಆಟವಾಡುತ್ತಾರೆ. ಅವರಿಗೆ ಊಟ ಮಾಡುವ ಮುನ್ನ ಕೈತೊಳೆಯುವುದನ್ನು ಕಲಿಸಿರಿ.

ರಕ್ತ, ಮಲ, ಮೂತ್ರ ಹಾಗೂ ವಾಂತಿಯ ಜೊತೆ ಸಂಪರ್ಕ ಮಾಡದಿರಿ / ತಡೆಯಿರಿ.

ಮಲವಿಸರ್ಜನೆ ಹಾಗೂ ಮೂತ್ರವಿಸರ್ಜನೆ ಸಂದರ್ಭದಲ್ಲಿ ಶುಚಿತ್ವ

ಮಲವಿಸರ್ಜನೆ ಹಾಗೂ ಮೂತ್ರವಿಸರ್ಜನೆ ನಂತರ, ಆ ಭಾಗವನ್ನು ಮುಂದಿನಿಂದ ಹಿಂದಕ್ಕೆ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ಮತ್ತು ಆ ಭಾಗವನ್ನು ಸ್ವಚ್ಛವಾಗಿರಿಸಿ. ಸಾಬೂನಿನಿಂದ ನಿಮ್ಮ ಕೈಯನ್ನು ತೊಳೆಯುವುದನ್ನು ಮರೆಯದಿರಿ.

ಶೌಚಾಲಯ, ಸ್ನಾನದ ಮನೆ ಮತ್ತು ಸುತ್ತಮುತ್ತ ಜಾಗ ಸ್ವಚ್ಛವಾಗಿಡಿ. ಬಯಲು ಮಲವಿಸರ್ಜನೆ ಮಾಡದಿರಿ.

ಪುನರೋತ್ಪತ್ತ ಅಂಗಗಳ ಶುಚಿತ್ವ

ಪುರುಷರು ಹಾಗೂ ಮಹಿಳೆಯರಿಬ್ಬರೂ ಸಹ ತಮ್ಮ ಪುನರೋತ್ಪತ್ತ ಅಂಗಗಳನ್ನು ಸದಾ ಸ್ವಚ್ಚವಾಗಿಡಬೇಕು.

 • ಮಹಿಳೆಯರು, ಮುಟ್ಟಿನ ಸಮಯದಲ್ಲಿ ಸ್ವಚ್ಛ, ಮೆದು ಬಟ್ಟೆ ಅಥವ ಸ್ಯಾನಿಟರಿ ಪ್ಯಾಡನ್ನು ಬಳಸಬೇಕು. ನ್ಯಾಪ್ಕಿನ್ / ಕರವಸ್ತ್ರವನ್ನು ದಿನಕ್ಕೆರಡು ಬಾರಿಯಾದರೂ ಬದಲಿಸಿರಿ.
 • ದುರ್ವಾಸನೆಯುಕ್ತ ಬಿಳಿಸ್ರಾವವಿರುವ ಮಹಿಳೆಯರು ಕೂಡಲೆ ವೈದ್ಯರನ್ನು ಸಂಪರ್ಕಿಸಬೇಕು.
 • ಮಲವಿಸರ್ಜನೆ ಹಾಗೂ ಮೂತ್ರವಿಸರ್ಜನೆ ನಂತರ, ಆ ಭಾಗವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿರಿ.
 • ಪುನರೋತ್ಪತ್ತಿ ಪ್ರದೇಶದಲ್ಲಿ ಸೋಂಕು ಕಂಡುಬಂದಲ್ಲಿ ಕೂಡಲೆ ವೈದ್ಯರನ್ನು ಸಂಪರ್ಕಿಸಿರಿ.
 • ಸುರಕ್ಷಿತ ಲೈಂಗಿಕತೆಗಾಗಿ ಕಾಂಡೂಂ ಬಳಸಿರಿ.
 • ಲೈಂಗಿಕ ಚಟುವಟಿಕೆಯ ಮುನ್ನ ಹಾಗೂ ನಂತರ ಪುನರೋತ್ಪತ್ತಿ ಭಾಗವನ್ನು ಸ್ವಚ್ಛ ನೀರಿನಿಂದ ತೊಳೆಯಿರಿ.

ಆಹಾರ ಮತ್ತು ಅಡುಗೆಯ ಶುಚಿತ್ವ

ಆಹಾರ ಕಲುಷಿತ, ಆಹಾರ ವಿಷಹಾರುವಿಕೆ ಮತ್ತು ಖಾಯಿಲೆಗಳ ಹರಡುವಿಕೆಯನ್ನು ತಡೆಗಟ್ಟಲು ಅಡುಗೆ ಮಾಡುವ ಸಮಯದಲ್ಲಿ ಶುಚಿತ್ವವನ್ನು ರೂಢಿಸಿಕೊಳ್ಳಿರಿ.

 • ಅಡುಗೆಯ ಪ್ರದೇಶ ಹಾಗೂ ಪಾತ್ರೆ ಸ್ವಚ್ಛವಾಗಿಡಿ.
 • ಸೊಂಕಿತ ಹಾಗೂ ಕೊಳೆತ ಆಹಾರ ಪದಾರ್ಥವನ್ನು ತಿನ್ನದಿರಿ.
 • ಆಹಾರ ತಯಾರಿಸುವ ಮುನ್ನ ಹಾಗೂ ಊಟ ಬಡಸುವ ಮುನ್ನು ನಿಮ್ಮ ಕೈಗಳನ್ನು ತೊಳೆಯಿರಿ.
 • ಉಪಯೋಗಿಸುವ ಮುನ್ನ ತರಕಾರಿಯಂತಹ ಆಹಾರ ಪದಾರ್ಥಗಳನ್ನು ತೊಳೆಯಿರಿ.
 • ಆಹಾರ ಪದಾರ್ಥಗಳನ್ನು ಸರಿಯಾಗೆ ದಾಸ್ತಾನಿಸಿ / ಸಂಗ್ರಹಿಸಿರಿ.
 • ಆಹಾರ ಪದಾರ್ಥಗಳನ್ನು ಖರೀದಿಸುವ ಸಮಯದಲ್ಲಿ “ಅತ್ಯೂತ್ತಮ ಮುಂಚಿತ ಅವಧಿ ” ತಿಳಿಯಲು ಲೇಬಲ್ಲು / ಹೆಸರು ಪಟ್ಟಿಯನ್ನು ಪರೀಕ್ಷಿಸಿರಿ.
 • ಅಡುಗ ಮನೆಯ ತ್ಯಾಜ್ಯವನ್ನು ಸರಿಯಾಗಿ ಎಸೆಯಿರಿ.

ವೈದ್ಯಕೀಯ ಸ್ವಚ್ಛತೆ

 • ಔಷಧಿಗಳನ್ನು ಖರೀದಿಸುವಾಗ ಅಂತ್ಯಾವಧಿ ದಿನಾಂಕ / ಎಕ್ಸ್ಪೈರಿ ಡೇಟ್ನ್ನು ಸರಿಯಾಗಿ ಪರಿಶಿಲಿಸಬೇಕು.ಬೇಡದೆಯಿರುವ / ಕೆಲಸಕ್ಕೆ ಬಾರದ ಔಷಧಿಗಳ ಸುರಕ್ಷಿತ ನಿರ್ವಹಣೆ ಮಾಡಬೇಕು.
 • ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಪಡೆಯಬೇಡಿ.

ಮೂಲ ಆರೋಗ್ಯಕರ ಗ್ರಾಮಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ಸಮುದಾಯಗಳಿಗೆ ಹಾಗೂ ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಒಂದು ಮಾರ್ಗದರ್ಶಿ

3.14432989691
ದೀಕ್ಷಾ Oct 29, 2018 06:20 PM

ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಇನ್ನೂ ಸ್ವಲ್ಪ ಇರಬೇಕು.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top