অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸ್ವಚ ಭಾರತ ಅಭಿಯಾನ

ಸ್ವಚ ಭಾರತ ಅಭಿಯಾನ

ಸ್ವಚ ಭಾರತ ಅಭಿಯಾನವು ಒಂದು ಬೃಹತ್ ಸಮೂಹ ಚಳುವಳಿ ಆಗಿದೆ ಇದು ೨೦೧೯ ನೇ ಇಸವಿಯ ಹೊತ್ತಿಗೆ ಭಾರತವನ್ನು ಸ್ವಚ ಭಾರತವನ್ನಾಗಿಸುವ ಗುರಿಹೊಂದಿದೆ.ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಯಾವಾಗಲು ಸ್ವಚತೆಯ ಬಗ್ಗೆ ಒತ್ತು ನೀಡುತ್ತಿದರು. ಸ್ವಚತೆ ಇಂದ ಜೀವನದಲ್ಲಿ ಅರೋಗ್ಯ ಮತ್ತು ಅಭಿವೃಧಿಯನ್ನು ಹೊಂದಬಹುದು ಎಂದು ನುಡಿಯುತ್ತಿದರು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು ೨೦೧೪ ರ ಅಕ್ಟೋಬರ್ ೨ ರಂದು ಸ್ವಚ ಭಾರತ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿತು.ಈ ಧ್ಯೇಯವು ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿರುತ್ತದೆ. ನಗರದಲ್ಲಿ ನಗರಾಭಿವೃದ್ಧಿ ಸಚಿವಾಲಯ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಕಾರ್ಯ ಗತಗೊಳಿಸುವ ಹೊಣೆಹೊತ್ತಿದೆ

ನಗರ ಪ್ರದೇಶದ ಸ್ವಚ್ಛ  ಭಾರತ ಅಭಿಯಾನ :

ಪ್ರತಿ ಪಟ್ಟಣವನ್ನು ಗಮನದಲ್ಲಿ ಇಟ್ಟುಕೊಂಡು  2.5 ಲಕ್ಷ ಸಾಮೂಹಿಕ ಶೌಚಾಲಯಗಳು , 2.6 ಲಕ್ಷ ಸಾರ್ವಜನಿಕ ಶೌಚಾಲಯಗಳು ಹಾಗೂ ಘನ ತ್ಯಾಜ್ಯ ನಿರ್ವಹಣೆ ಸೌಲಭ್ಯ , 1.04 ಕೋಟಿ ಕುಟುಂಬಗಳಿಗೆ ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ , ಸಮುದಾಯ ಶೌಚಾಲಯಗಳನ್ನು ಪ್ರತಿಮನೆಯಲ್ಲಿ ನಿರ್ಮಿಸಲು ಕಷ್ಟ ವಾಗಿರುವಂತಹ  ವಸತಿ ಪ್ರದೇಶಗಳಲ್ಲಿ ನಿರ್ಮಿಸಲಾಗುವುದು.ಸಾರ್ವಜನಿಕ ಶೌಚಾಲಯಗಳನ್ನು  ಸಹ ಪ್ರವಾಸಿ ಸ್ಥಳಗಳು, ಮಾರುಕಟ್ಟೆಗಳು , ಬಸ್ ನಿಲ್ದಾಣಗಳಲ್ಲಿ , ರೈಲು ನಿಲ್ದಾಣಗಳು , ಇತ್ಯಾದಿ ಮಾಹಿತಿ ಗೊತ್ತುಪಡಿಸಿದ ಸ್ಥಳಗಳಲ್ಲಿ ನಿರ್ಮಿಸಲಾಗುವುದು. ಸುಮಾರು 4.401 ಪಟ್ಟಣಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ನಡೆಸುವ ಯೋಜನೆ ಆಗಿದೆ. ಸುಮಾರು ೬೨,009 ಕೋಟಿ ರೂಪಯಿ ವೆಚ್ಹ ಆಗುವ ಸಾಧ್ಯತೆ ಇದೆ.ಕೇಂದ್ರವು  ರೂ 14.623 ಕೋಟಿ ಒದಗಿಸುವ ಸಾಧ್ಯತೆ ಇದೆ.ರೂ 14.623 ಕೋಟಿ ಕೇಂದ್ರದ ಪಾಲಿನಲ್ಲಿ  ರೂ 7.366 ಕೋಟಿ ಯನ್ನು,ಭಾರಿ ತ್ಯಾಜ್ಯ ವಿಲೇವಾರಿಗೆ,  ಮನೆಯ ಶೌಚಾಲಯಗಳಿಗೆ  ರೂ 4.165 ಕೋಟಿ, ಸಾರ್ವಜನಿಕ ಜಾಗೃತಿಗೆ1,828 ಕೋಟಿ  ಮತ್ತು ಸಮುದಾಯ ಶೌಚಾಲಯಗಳಿಗೆ ರೂ 655 ಕೋಟಿ .ಖರ್ಚು ಮಾಡಲಾಗುವುದು. ಈ ಯೊಜನೆಯು ಬಯಲು ಮಲವಿಸರ್ಜನೆಯನ್ನು ನಿಲ್ಲಿಸುವುದು, ಅನಾರೋಗ್ಯಕರ ಶೌಚಾಲಯಗಳ ಪರಿವರ್ತನೆ ಒಳಗೊಂಡಿದೆ.ಮಲಹೊರುವ ಪದ್ಧತಿ ಯನಿರ್ಮೂಲನೆ, ಘನ ತ್ಯಾಜ್ಯ ನಿರ್ವಹನೆ  ಮತ್ತು ಆರೋಗ್ಯಕರ ನೈರ್ಮಲ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಒಂದು ವರ್ತನೆಯ ಬದಲಾವಣೆ ತರುವ ಉದ್ದೇಶ ಹೊಂದಿದೆ.

ಗ್ರಾಮೀಣ ಪ್ರದೇಶದ ಸ್ವಚ್ಛ  ಭಾರತ ಅಭಿಯಾನ :

ನಿರ್ಮಲ ಭಾರತ ಅಭಿಯಾನವನ್ನು  ಸ್ವಚ ಭಾರತ ಅಭಿಯಾನ ( ಗ್ರಾಮೀಣ ) ಎಂದು  ಮರುರೂಪು ಮಾಡಲಾಗಿದೆ . ಐದು ವರ್ಷಗಳಲ್ಲಿ ಭಾರತವನ್ನು  ಒಂದು ಬಯಲು ಮಲವಿಸರ್ಜನೆ ರಹಿತ  ದೇಶವನ್ನಾಗಿ ಮಾಡಲು ಉದ್ದೇಶಿಸಿದೆ. ಒಂದು ಲಕ್ಷ ಮೂವತ್ತು ನಾಲ್ಕು ಸಾವಿರ ಕೋಟಿ ರೂಪಾಯಿ ಅನ್ನು ದೇಶದಲ್ಲಿ ಸುಮಾರು 11 ಕೋಟಿ 11 ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ಖರ್ಚು ಮಾಡಲಾಗುವುದು . ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ತ್ಯಾಜ್ಯವನ್ನು   ಜೈವಿಕ ಗೊಬ್ಬರ  ಮತ್ತು ಶಕ್ತಿಯ ವಿವಿಧ ರೂಪಗಳ ರೂಪಗಳಲ್ಲಿ ಪರಿವರ್ತಿಸಲು ಯೋಜಿಲಾಗಿದೆ. ದೇಶದಲ್ಲಿನ ಪ್ರತಿಯೊಂದು ಗ್ರಾಮ ಪಂಚಾಯತಿ, ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಗಳಲ್ಲಿ ತ್ವರಿತ ಗತಿ ಇಂದ ನಡೆಸಲು ಉದ್ದೆಶಿಸಿದೆ.ಈ ಪ್ರಯತ್ನದಲ್ಲಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು  ಹೆಚ್ಚಿನ ವಿಭಾಗಗಳಲ್ಲಿ ಸೆಳೆದುಕೊಂಡು ನಡೆಸುವ ಆಲೋಚನೆ ಮಾಡಲಾಗಿದೆ .

ಕಾರ್ಯಾಚರಣೆಯ ಭಾಗವಾಗಿ ಗ್ರಾಮೀಣ ಮನೆಗಳ  ಶೌಚಾಲಯ ಘಟಕದ ವೆಚ್ಚ ನಿಬಂಧನೆಯನ್ನು ರೂ 12,000 ಗೆ ರೂ 10,000 ರಿಂದ ಹೆಚ್ಚಿಸಲಾಗಿದೆ ಇದರಿಂದ ನೀರಿನ ಲಭ್ಯತೆಯನ್ನು ಒದಗಿಸಲು ಅನುಕೂಲವಾಗುತ್ತದೆ.ಇಂತಹ ಶೌಚಾಲಯಗಳ ನಿರ್ಮಾಣದಲ್ಲಿ  ಕೇಂದ್ರ ಪಾಲು ರೂ 9,೦೦೦ ಮತ್ತು ರಾಜ್ಯದ ಪಾಲು ರೂ 3,000 ಆಗಿರುತ್ತದೆ.ಈಶಾನ್ಯ ರಾಜ್ಯಗಳು , ಜಮ್ಮು ಮತ್ತು ಕಾಶ್ಮೀರ ಮತ್ತು ವಿಶೇಷ ಪ್ರದೇಶ ಗಳ ಅಡಿಯಲ್ಲಿ ಬರುವ  ರಾಜ್ಯಗಳಿಗೆ ಕೇಂದ್ರದ  ಪಾಲು ರೂ.10,800 ಮತ್ತು ರಾಜ್ಯದ ಪಾಲು ರೂ 1,200 ಆಗಿರುತ್ತದೆ ಅಲ್ಲದೆ ಇತರ ಮೂಲಗಳಿಂದ ಹೆಚ್ಚುವರಿ ಕೊಡುಗೆಗಳ ಅನುಮತಿಇರುತ್ತದೆ.

ಸ್ವಚ್ಛ  ಭಾರತ್ ಸ್ವಚ್ಛ  ವಿದ್ಯಾಲಯ ಪ್ರಚಾರ:

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ  ಸ್ವಚ್ಛ  ಭಾರತ - ಸ್ವಚ್ಛ  ವಿದ್ಯಾಲಯ ಪ್ರಚಾರವನ್ನು  ಕೇಂದ್ರೀಯ ವಿದ್ಯಾಲಯ  ಮತ್ತು ನವೋದಯ ವಿದ್ಯಾಲಯ  ಸಂಘಟನೆಗಳಲ್ಲಿ 25 ನೇ ಸೆಪ್ಟೆಂಬರ್, 2014 ರಿಂದ  31 ನೇ ಅಕ್ಟೋಬರ್, 2014  ವರೆಗೆ ನಡೆಸಲಾಯಿತು. ಈ ಸಮಯದಲ್ಲಿ ಅನೇಕ ಚಟುವಟಿಕೆಗಳನ್ನು ನಡಿಸಲಾಯಿತು

* ಶಾಲೆಗಳಲ್ಲಿ ಮಕ್ಕಳಿಂದ ಸ್ವಚ್ಛತೆ ಮತ್ತು ನೈರ್ಮಲ್ಯ ಮೇಲೆ , ವಿಶೇಷವಾಗಿ ಮಹಾತ್ಮ ಗಾಂಧಿಯವರ  ಬೋಧನೆಗಳಿಗೆ         ಸಂಬಂಧಿಸಿದಂತೆ ಸ್ವಚ್ಛತೆ ವಿವಿಧ ಅಂಶಗಳ ಮೇಲೆ  ಪ್ರತಿ ದಿನ ಚರ್ಚೆ.

* ಶಾಲಾಕೊಠಡಿ , ಪ್ರಯೋಗಾಲಯಗಳು , ಗ್ರಂಥಾಲಯಗಳು ಇತ್ಯಾದಿ ಸ್ವಚ್ಛಗೊಳಿಸುವಿಕೆ

* ಶಾಲೆಯಲ್ಲಿ ಸ್ಥಾಪಿಸಲಾದ ಯಾವುದೇ ಪ್ರತಿಮೆಯ ಸ್ವಚತೆ ಮತ್ತು ಆ ಪ್ರತಿಮೆ ಶಾಲೆಯಲ್ಲಿ  ಅನುಸ್ಥಾಪಿತಗೊಂಡಿದ್ದರ ಬಗ್ಗೆ ಚರ್ಚೆ

* ಕುಡಿಯುವ ನೀರಿನ ಪ್ರದೇಶ ಮತ್ತು ಶೌಚಾಲಯಗಳ ಸ್ವಚ್ಛಗೊಳಿಸುವುದು

* ಅಡುಗೆ ಮನೆ,  ಮಳಿಗೆಗಳು ಮತ್ತು ಇತ್ಯಾದಿಗಳ ಸ್ವಚತೆ.

* ಆಟದ ಮೈದಾನಗಳ ಶುದ್ಧೀಕರಣ

* ಶುದ್ಧೀಕರಣ ಮತ್ತು ಶಾಲೆಯ ಉದ್ಯಾನಗಳ ನಿರ್ವಹಣೆ

* ಶಾಲಾಕಟ್ಟಡಗಳ ವಾರ್ಷಿಕ ನಿರ್ವಹಣೆ ಮತ್ತು ಬಣ್ಣ ಬಳೆಯುವಿಕೆ

* ನೈರ್ಮಲ್ಯ ಮತ್ತು ಆರೋಗ್ಯದ ಮೇಲೆ ಪ್ರಬಂಧ , ಚರ್ಚೆ , ಚಿತ್ರಕಲೆ , ಸ್ಪರ್ಧೆಗಳನ್ನು ಆಯೋಜಿಸುವಿಕೆ

* ಮಕ್ಕಳಿಂದ ಸ್ವಚ್ಛತೆಯ ಮೇಲ್ವಿಚಾರಣೆ

ಜೊತೆಗೆ, ಶಾಲೆಗಳಲ್ಲಿ  ಸ್ವಚ್ಛತೆ , ಉತ್ತಮ ಆರೋಗ್ಯ ಮತ್ತು ಸೂಕ್ತ ಶೌಚಾಲಯ ಸಂದೇಶಗಳನ್ನು ಪುನರುಚ್ಚರಿಸುವ ಬಗ್ಗೆ   ಚಿತ್ರ ಪ್ರದರ್ಶನಗಳು, ನೈರ್ಮಲ್ಯದ ಬಗ್ಗೆ  ಪ್ರಬಂಧ / ವರ್ಣಚಿತ್ರ ಮತ್ತು ಇತರ ಸ್ಪರ್ಧೆಗಳ ಆಯೋಜನೆ. ಸಚಿವಾಲಯ ಕೂಡ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಸಮುದಾಯದ ಸದಸ್ಯರನ್ನು ಒಳಗೊಂಡತೆ  ಶಾಲೆಯಲ್ಲಿ ವಾರದಲ್ಲಿ ಎರಡು ಬಾರಿ ಅರ್ಧ ಗಂಟೆ ಶುದ್ಧೀಕರಣ ಪ್ರಚಾರ ಪರಿಚಯಿಸಲು ಪ್ರಸ್ತಾಪಿಸುತ್ತದೆ.

ರಾಷ್ಟ್ರೀಯ ಸ್ವಚ್ಛತಾ ಕೋಶ:

ರಾಷ್ಟ್ರೀಯ ಸ್ವಚ್ಛತಾ ಕೋಶ (S.B.ಕ)  ವು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (C .S .R ) ವಲಯ ,ವೈಯಕ್ತಿಕ ವಲಯ ದಿಂದ ನಿಧಿ ಸಂಗ್ರಹ ಮಾಡಿ ಇಸವಿ ೨೦೧೯ ರ ಹೊತ್ತಿಗೆ ಸ್ವಚ್ಛ ಬಾರತ ವನ್ನು ನಿರ್ಮಿಸುವ ಗುರಿಹೊಂದಿದೆ . ಈ ನಿಧಿಯನ್ನು ಶಾಲೆಗಳು  ಸೇರಿದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ  ಸ್ವಚ್ಛತೆ ಮಟ್ಟದಸುಧಾರಣೆಯ ಗುರಿ ಸಾಧಿಸಲು ಬಳಸಲಾಗುತ್ತದೆ. ಇಂತಹ ಸ್ವಚತಾ ಚಟುವಟಿಕೆಗಳಿಗಾಗಿ   ಇಲಾಖಾ ಸಂಪನ್ಮೂಲಗಳನ್ನುಈ ನಿಧಿಗೆ  ಪೂರಕವಾಗಿ ಬಳಸಲಾಗುತ್ತದೆ. ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಕೊಡುಗೆಗಳ ಅನುದಾನಗಳಿಗೆ  ತೆರಿಗೆ ರಿಯಾಯಿತಿಯನ್ನು ನೀಡಲು ಪರಿಗಣಿಸಲಾಗಿದೆ.










ಮೂಲ: ಸಂಗ್ರಹ: ಸ್ವಚ ಭಾರತ ಅಭಿಯಾನ

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate