ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ಸಲ ಔಷಧಗಳ ಅವಶ್ಯಕತೆ ಇರುತ್ತವೆ. ಇಂತಹ ಸಂದಭ೯ಗಳಲ್ಲಿ ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಮುನ್ನ (ಔಷಧಿ ಅಂಗಡಿಗಳಲ್ಲಿ ಖರೀದಿಸಿದ ಔಷಧಗಳನ್ನೊಳಗೊಂಡು) ಅಥವಾ ಹೆಚ್ಚಿನ ಆಹಾರ ಕ್ರಮದ (ಔಷಧೀಯ ಸಸ್ಯಗಳನ್ನೊಳಗೊಂಡ) ಬಳಕೆಯ ಮುನ್ನ ಗಭ೯ಧರಿಸಿದ ಮಹಿಳೆಯು ವೈದ್ಯರ ಸಲಹೆಯನ್ನು ಪಡೆಯಲೇಬೇಕು ಮತ್ತು ಆಗ ವೈದ್ಯರು ಕೆಲವು ಆಹಾರ ಸತ್ವಗಳನ್ನು (ವಿಟಾಮಿನ್) ಮತ್ತು ಖನಿಜಾಂಶಗಳನ್ನು ಗಭಾ೯ವಸ್ಥೆಯಲ್ಲಿ ತೆಗೆದುಕೊಳ್ಳಲು ಸಲಹೆಯನ್ನು ಕೊಡುತ್ತಾರೆ.
ಗಭ೯ಧರಿಸಿದ ಮಹಿಳೆಯು ತೆಗೆದುಕೊಂಡ ಔಷಧಿಯು ಮುಖ್ಯವಾಗಿ ಗಭ೯ವೇಷ್ವನವನ್ನು ಪಾರುಮಾಡಿ, ಭ್ರೂಣದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬೇಕಾಗುವ ಆಮ್ಲಜನಕ ಮತ್ತು ಪೋಷಕಾಂಶಗಳು ಬಳಸುವ ಮಾಗ೯ದ ಮುಖಾಂತರವೇ ಭ್ರೂಣಕ್ಕೆ ತಲುಪುತ್ತವೆ. ಗಭಾ೯ವಸ್ಥೆಯಲ್ಲಿರುವ ಮಹಿಳೆಯು ಸೇವಿಸಿದ ಔಷಧಿಯು ಅವಳ ಭ್ರೂಣದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ.
ಭ್ರೂಣದ ರಕ್ತಗುಚ್ಛದ ರಕ್ತ ಮತ್ತು ತಾಯಿಯ ರಕ್ತದ ಗುಲ್ಮಗಳನ್ನು ಬೇರ್ಪಡಿಸುವುದು ಒಂದು ತಿಳು ಪದರಿನಿಂದ (ಗಭ೯ವೇಷ್ಟನದ ಪದರು) ಮಾತ್ರ ತಾಯಿಯ ರಕ್ತದಲ್ಲಿಯ ಔಷಧಿಯು ಈ ತಿಳು ಪದರನ್ನು ದಾಟಿ ರಕ್ತ ಗುಲ್ಮದ ನಾಳಗಳ ಮುಖಾಂತರ ಮತ್ತು ಹೊಕ್ಕಳ ಬಳ್ಳಿಯ ಮುಖಾಂತರ ಭ್ರೂಣವನ್ನು ತಲುಪುತ್ತದೆ. ಔಷಧಿಯು ಭ್ರೂಣದ ಮೇಲೆ ಹೇಗೆ ಪರಿಣಾಮ ಬೀರುವದು ಎಂಬುದು ಭ್ರೂಣದ ಬೆಳವಣಿಗೆಯ ಹಂತ ಮತ್ತು ಔಷಧಿಯ ಪ್ರಮಾಣದ ಶಕ್ತಿಯ ಮೇಲೆ ಅವಲಂಬಿಸಿರುತ್ತದೆ. ಗಭಾ೯ವಸ್ಥೆಯಲ್ಲಿ ಮೊದಲ ದಿನಗಳಲ್ಲಿ (ಗಭ೯ಧರಿಸಿದ್ದ ೨೦ ದಿನಗಳಲ್ಲಿ) ತೆಗೆದುಕೊಂಡ ಕೆಲ ಔಷಧಿಯು ಭ್ರೂಣವನ್ನು ಕೊಂದು ಹಾಕಬಹುದು ಅಥವಾ ಏನೂ ಪರಿಣಾಮ ಬೀರದೇ ಇರಬಹುದು. ಈ ಆವಸ್ಥೆಯಲ್ಲಿ ಭ್ರೂಣವು ಹುಟ್ಟುನ್ಯೂನ್ಯತೆಗಳಿಗೆ ಅತೀವ ವಿರೋಧ ವ್ಯಕ್ತ ಪಡಿಸುತ್ತದೆ. ಆದರೂ ಸಹ ಭ್ರೂಣವು ವಿಶೇಷವಾಗಿ ಗಭ೯ಧರಿಸಿದ ೩ ನೇ ವಾರದಿಂದ ೮ನೇವಾರದೊಳಗೆ (ಭ್ರೂಣದ ಅಂಗಾಂಗಗಳು ಬೆಳೆಯುವಾಗ) ಹುಟ್ಟು ನ್ಯೂನ್ಯತೆಗಳಿಗೆ ಒಳಗಾಗುತ್ತದೆ. ಈ ಹಂತದಲ್ಲಿ ಭ್ರೂಣವನ್ನು ತಲುಪುವ ಔಷಧಿಯು ಭ್ರೂಣದ ಮೇಲೆ ಪರಿಣಾಮ ಬೀರದೆ ಇರಬಹುದು ಅಥವಾ ಗಭ೯ಪಾತಕ್ಕೆ ಕಾರಣವಾಗಬಹುದು. ಇದರಿಂದ ಒಂದು ನಿಖರವಾದ ಹುಟ್ಟು ನ್ಯೂನ್ಯತೆ ಅಥವಾ ಒಂದು ಸ್ಥಿರ ಆದರೂ ಸೂಕ್ಷ್ಮ ಜೀವನದ ನಂತರದ ದಿನಗಳಲ್ಲಿ ಕಾಣಬಹುದಾದ ನ್ಯೂನ್ಯತೆ ಸಂಭವಿಸಬಹುದು. ಅಂಗಾಂಗಗಳ ಸಂಪೂಣ೯ ಬೆಳವಣಿಗೆಯಾದ ನಂತರ ಸೇವಿಸಿದ ಔಷಧಿ ನಿಖರವಾದ ಹುಟ್ಟು ನ್ಯೂನ್ಯತೆಗೆ ಕಾರಣವಾಗದೇ ಇರಬಹುದು ಆದರೆ ಸಹಜವಾಗಿ ತಯಾರಾದ ಅಂಗಾಂಗಗಳ ಮತ್ತು ಊತಕಗಳ ಬೆಳವಣಿಗೆಯ ಮತ್ತು ಕಾಯ೯ಗಳನ್ನು ಹೆಚ್ಚು ಕಡಿಮೆ ಮಾಡಬಹುದು.
ಆಹಾರ ಮತ್ತು ಔಷಧಿ ಆಡಳಿತ (ಎಫ್.ಡಿ.ಎ.)ಯು ಔಷಧಿಗಳನ್ನು ಅವುಗಳ ಭ್ರೂಣದ ಮೇಲೆ ಬೀರಬಹುದಾದ ಗಂಡಾಂತರದ ಅಂಶಗಳ ಆಧಾರದ ಮೇಲೆ ವರ್ಗೀಕರಣ ಮಾಡಿದೆ. ಕೆಲವು ಔಷಧಿಗಳು ಅತೀವ ವಿಷಕಾರಿಯಾಗಿರುತ್ತವೆ. ಅವುಗಳನ್ನು ಗಭ೯ಧರಿಸಿದ ಮಹಿಳೆಯರು ಯಾವತ್ತೂ ಸೇವಿಸಲೇಬಾರದು ಯಾಕೆಂದರೆ ಅವು ಅನೇಕ ಕಠೋರ ಹುಟ್ಟು ನ್ಯೂನ್ಯತೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಥಾಲಿಡೋಮೈಡ (ವ್ಯಾಪಾರ ಶೀಷಿ೯ಕೆ- ಥ್ಯಾಲೋಮಿಡ್) ಕೆಲವು ದಶಕಗಳ ಹಿಂದೆ ಈ ಔಷಧಿಯನ್ನು ಸೇವಿಸಿದ , ಗಭ೯ಧರಿಸಿದ ಮಹಿಳೆಯರಲ್ಲಿ ಅತಿರೇಕದ ಕೈಕಾಲುಗಳ ಕಡಿಮೆ ಬೆಳವಣಿಗೆ ಮತ್ತು ಕರುಳಿನ ಹೃದಯದ ಮತ್ತು ರಕ್ತನಾಳಗಳ ನ್ಯೂನ್ಯತೆಗಳ ಕಾರಣವಾಗಿತ್ತು. ಕೆಲ ಔಷಧಿಗಳು ಪ್ರಾಣಿಗಳಲ್ಲಿ ಹುಟ್ಟು ನ್ಯೂನ್ಯತೆಗಳ ಕಾರಣವಾಗಿವೆ. ಆದರೆ ಅದೇ ಪರಿಣಾಮಗಳು ಮನುಷ್ಯರಲ್ಲಿ ಕಾಣಿಸಿಕೊಂಡಿಲ್ಲ. ಒಂದು ಉದಾಹರಣೆ ಮೆಕ್ಲಿಝೀನ್ (ವ್ಯಾಪಾರ ಶೀಷಿ೯ಕೆ-ಎಂಟಿವಟ೯) ವಾಂತಿ, ಆಮಶಂಕೆ ಮತ್ತು ಪ್ರವಾಸದ ಸಂದರ್ಭದಲ್ಲಿ ಆಗುವ ಸಮಸ್ಯೆ ನಿವಾರಣೆಗಾಗಿ ಮೇಲಿಂದ ಮೇಲೆ ಸೇವಿಸಿದ ಔಷಧ .
ಹಲವು ಬಾರಿ ಒಂದು ಸುರಕ್ಷಿತ ಔಷಧಿಯನ್ನು ಗಭಾ೯ವಸ್ಥೆಯಲ್ಲಿ ತೊಂದರೆಗೆ ಕಾರಣವಾಗಬಹುದಾದ ಔಷಧಿಗೆ ಪರ್ಯಾಯವಾಗಿ ಕೊಡಬಹುದಾಗಿದೆ. ಅತಿಚುರುಕು ಥೈರಾಯಿಡ ಗ್ರಂಥಿಯ ಬಾಧೆಗೆ ಪ್ರಾಪಿಲ್ ಥಾಯರಾಸಿಲ್ ನ್ನು ಸಾಮಾನ್ಯವಾಗಿ ಆಯ್ದುಕೊಳ್ಳಲಾಗುತ್ತದೆ. ರಕ್ತಹೆಪ್ಪುಕಟ್ಟುವುದನ್ನು ತಡೆಯಲಿಕ್ಕೆ ಎಂಟಿಕೋಯಾಗುಲಂಟ ಹಿಪ್ಯಾರಿನ್ ನ್ನು ಬಳಸಲಾಗುತ್ತದೆ. ಅನೇಕ ಪೆನ್ಸಿಲಿನ ನಂತಹ ಸುರಕ್ಷಿತ ಆಂಟಿಬಾಯೋಡಿಕಗಳು ಲಭ್ಯವಿವೆ. ಕೆಲವು ಔಷಧಿಗಳು ಅವುಗಳನ್ನು ಸೇವಿಸುವುದನ್ನು ನಿಲ್ಲಿಸದ ಮೇಲೆ ಪ್ರಭಾವ ಬೀರುವಂತಹವಿರುತ್ತವೆ. ಉದಾಹರಣೆಗೆ-ಆಯಿಸೋಟ್ರೇಡಿನೊಯಿನ್ (ವ್ಯಾಪಾರ ಶೀಷಿ೯ಕೆ – ಅಕ್ಯುಟೇನ್) ಇದೊಂದು ಚಮ೯ದ ವ್ಯಾಧಿಗೆ ಬಳಸುವ ಔಷಧಿಯ ಸೇವನೆಯನ್ನು ಸ್ಥಗಿಸಿದ ೨ ವಾರಗಳಲ್ಲಿ ಮಹಿಳೆಯು ಗಭ೯ಧರಿಸಿದರೆ ಅದು ಮಗುವಿನ ಹುಟ್ಟು ನ್ಯೂನ್ಯತೆಗೆ ಸಂಭವಿಸಬಹುದು. ಆದ್ದರಿಂದ ಈ ಔಷಧಿಯನ್ನು ಸೇವಿಸಿದ ಮಹಿಳೆಯರಿಗೆ ೩ ರಿಂದ ೪ ವಾರ ತಡೆದು ನಂತರ ಗಭ೯ಧರಿಸುವಂತೆ ಸಲಹೆ ಮಾಡಲಾಗುತ್ತದೆ.
ಜೀವಂತ ವೈರಾಣುವಿನಿಂದ ಮಾಡಿದ ಲಸಿಕೆಗಳನ್ನು (ಉದಾ-ರುಬೆಲ್ಲಾ, ವೇರಿಸೆಲ್ಲಾ ಲಸಿಕೆಗಳು) ಗಭ೯ಧಾರಣೆ ಮಾಡಿದ ಅಥವಾ ಮಾಡಬಹುದಾದ ಮಹಿಳೆಯರಿಗೆ ಕೊಡುವುದಿಲ್ಲ. ಬೇರೆ ಲಸಿಕೆಗಳನ್ನು (ಉದಾ-ಕಾಲೆರಾ, ಹಿಪ್ಯಾಡಿಟಿಸ್ ಎ ಮತ್ತು ಬಿ , ಪ್ಲೇಗ್ , ಕೇಬೀಸ್ , ಟಿಟ್ಯಾನಸ್ , ಡಿಫ್ತಿರಿಯಾ ಮತ್ತು ಟೈಫಾಯಿಡ್ ) ಗಭ೯ಸ್ಥ ಮಹಿಳೆಯರಿಗೆ ಒಂದು ವೇಳೆ ಅವರು , ಆಯಾ ಕಾಯಿಲೆಯಿಂದ ಗಣನೀಯವಾಗಿ ತೊಂದರೆಗೀಡಾಗುವ ಗಂಡಾಂತರದಲ್ಲಿದ್ದರೆ ಮಾತ್ರ ಕೊಡಲಾಗುತ್ತದೆ. ಏನೇ ಆದರೂ ಮೊದಲ ಅಥವಾ ಎರಡನೇಯ ೩ ತಿಂಗಳ ಅವಧಿಯಲ್ಲಿರುವ ಗರ್ಭಾವಸ್ಥೆಯಲ್ಲಿದ್ದು ಶೀತಜ್ವರದಿಂದ ಬಳಲುವ ಮಹಿಳೆಯರಿಗೆ ಶೀತಜ್ವರದ ಲಸಿಕೆಯನ್ನು ಕೊಡಲೇಬೇಕು.ಅತೀವ ರಕ್ತದೊತ್ತಡ ಇರುವ ಗಭ೯ಸ್ಥ ಮಹಿಳೆಯರಿಗೆ ಅಥವಾ ರಕ್ತದೊತ್ತಡ ಕಾಯಿಲೆಯನ್ನು ಗಭಾ೯ವಸ್ಥೆಯಲ್ಲಿ ಪಡೆದ ಮಹಿಳೆಯರಿಗೆ ಅವರ ರಕ್ತದ ಒತ್ತಡವನ್ನು ನಿಯಂತ್ರಿಸಲು ಔಷಧಿಯನ್ನು ಕೊಡಬೇಕಾಗುತ್ತದೆ. ಈ ಎರಡೂ ತರಹದ ರಕ್ತದ ಒತ್ತಡಗಳು ಮಹಿಳೆಯ ಮತ್ತು ಭ್ರೂಣದ ಮೇಲೆ ತೊಂದರೆಯನ್ನುಂಟು ಮಾಡುವ ಗಂಡಾಂತರವನ್ನು ವೃದ್ಧಿಸುತ್ತವೆ. ಏನೇ ಆದರೂ ಅತೀವ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಔಷಧಿಗಳು ಒಂದು ವೇಳೆ ಗಭ೯ಸ್ಥ ಮಹಿಳೆಯರಲ್ಲಿ ಅತೀ ಶೀಘ್ರವಾಗಿ ರಕ್ತದ ಒತ್ತಡವನ್ನು ಕಡಿಮೆ ಮಾಡಿದರೆ ಅದರಿಂದ ಪ್ರಮುಖವಾಗಿ ಗಭ೯ವೇಷ್ಟನಕ್ಕೆ ರಕ್ತದ ಸರಬರಾಜನ್ನು ಕಡಿತಗೊಳಿಸಬಹುದು. ಆದ್ದರಿಂದ ಇಂತಹ ಔಷಧಿಗಳನ್ನು ಸೇವಿಸುವ ಗಭ೯ಸ್ಥ ಮಹಿಳೆಯರನ್ನು ಅತೀ ಸೂಕ್ಷ್ಮತೆಯಿಂದ ನೋಡಿಕೊಳ್ಳಲಾಗುತ್ತದೆ. ಎರಡು ತರಹದ ರಕ್ತದೊತ್ತಡ ನಿಯಂತ್ರಿಸುವ ನಿಯಂತ್ರಿಸುವ ಔಷಧಿಗಳಾದ ಎಂಜಿಯೋಟೆನ್ಸಿನ್ ಕನ್ವರ್ಟಿಂಗ್ ಎಂಝೂಯಿಮ್ (ಎ.ಸಿ.ಇ) ಅವರೋಧಕಗಳು ಮತ್ತು ಥೈಯಝಾಯಿಡ್ ಡೈಯುರೆಟಿಕ್ಸ ಗಳನ್ನು ಸಾಮಾನ್ಯವಾಗಿ ಗಭ೯ಸ್ಥ ಮಹಿಳೆಯರಿಗೆ ಕೊಡುವುದಿಲ್ಲ. ಏಕೆಂದರೆ ಈ ಔಷಧಿಗಳು ಅವರ ಭ್ರೂಣಕ್ಕೆ ಗಂಭೀರ ಸಮಸ್ಯೆಯನ್ನು ಒಡ್ಡಬಹುದಾಗಿದೆ.
ಹೃದಯಾಘಾತ ಮತ್ತು ಅಸಾಮಾನ್ಯ ಹೃದಯ ತೊಂದರೆಗಳ ಚಿಕಿತ್ಸೆಗೆ ಬಳಸುವಂತಹ ಡಿಗಾಗ್ಜಿನ್ (ವ್ಯಾಪಾರಿ ಶೀಷಿ೯ಕೆ-ಲ್ಯಾನೊಗ್ಜಿನ್) ಔಷಧಿಯು ಗಭ೯ವೇಷ್ವವನ್ನು ಸರಾಗವಾಗಿ ಪಾರು ಮಾಡಬಲ್ಲದು. ಆದರೆ ಇದು ಮಗುವಿನ ಹುಟ್ಟುವ ಮೊದಲು ಅಥವಾ ನಂತರ ಅತೀ ವಿರಳವಾಗಿ ಪರಿಣಾಮವನ್ನು ಬೀರುತ್ತದೆ.
ಗಭಾ೯ವಸ್ಥೆಯಲ್ಲಿ ತೊಂದರೆಯನ್ನುಂಟು ಮಾಡುವ ಕೆಲವು ಔಷಧಿಗಳು:-
ವಿಭಾಗ |
ವಿವರಣೆ. |
ಎ. |
ಈ ಔಷಧಿಗಳು ಅತೀವ ಸುರಕ್ಷಿತವಾಗಿವೆ. ಮಾನವನ ಮೇಲೆ ಮಾಡಿದ ಒಳ್ಳೆಯ ಉದ್ದೇಶಿತ ಅಧ್ಯಯನವು ಭ್ರೂಣದ ಮೇಲೆ ಯಾವುದೇ ಗಂಡಾಂತರ/ಅಪಾಯವನ್ನು ತೋರಿಲ್ಲ. |
ಬಿ. |
ಪ್ರಾಣಿಗಳ ಮೇಲೆ ಮಾಡಿದ ಅಧ್ಯಯನ ಭ್ರೂಣದ ಮೇಲೆ ಯಾವುದೇ ಪರಿಣಾಮವನ್ನು ತೋರಿಲ್ಲ. ಮತ್ತು ಸದುದ್ದೇಶ ಪೂರಿತ ಯಾವುದೇ ಅಧ್ಯಯನವನ್ನು ಮಾನವನ ಮೇಲೆ ಮಾಡಲಾಗಿಲ್ಲ. ಅಥವಾ ಪ್ರಾಣಿಗಳ ಮೇಲೆ ಮಾಡಿದ ಅಧ್ಯಯನ ಅವುಗಳ ಭ್ರೂಣದ ಮೇಲೆ ಅಪಾಯವನ್ನು ತೋರುತ್ತವೆ. ಆದರೆ ಸದುದ್ದೇಶ ಪೂರಿತವಾದ ಮಾನವನ ಮೇಲೆ ಮಾಡಿದ ಅಧ್ಯಯನ ಯಾವುದೇ ಅಪಾಯವನ್ನು ತೋರಿಲ್ಲ. |
ಸಿ. |
ಪ್ರಾಣಿ ಅಥವಾ ಮಾನವನ ಮೇಲೆ ಸಾಕಷ್ಟು ಅಧ್ಯಯನ ಮಾಡಲಾಗಿಲ್ಲ. ಅಥವಾ ಪ್ರಾಣಿಗಳ ಮೇಲೆಪ್ರಯೋಗಿಸಿದ ಔಷಧಿಯು ಅವುಗಳ ಭ್ರೂಣದ ಮೇಲಿನ ತೊಂದರೆಗಳನ್ನು ಪ್ರಾಣಿಗಳ ಅಧ್ಯಯನದಲ್ಲಿ ಕಾಣಬಹುದು. ಆದರೆ ಮಾನವನ ಭ್ರೂಣದ ಮೇಲೆ ಔಷಧವು ಹೇಗೆ ಪರಿಣಾಮ ಬೀರುವುದೆಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. |
ಡಿ. |
ಸಾಕ್ಷಿಗಳು ಮಾನವನ ಭ್ರೂಣದ ಮೇಲೆ ಅಪಾಯವನ್ನು ತೋರುತ್ತವೆ. ಆದರೆ ಔಷಧಿಯ ಲಾಭಗಳು ಕೆಲ ಸಂಧಬ೯ಗಳಲ್ಲಿ ಗಂಡಾಂತರಗಳನ್ನು ಮೀರಿಸುವಂತಿರುತ್ತವೆ. ಉದಾಹರಣೆಗೆ ತಾಯಿಗೆ ಜೀವಬೆದರಿಕೆಯ ಅವ್ಯವಸ್ಥೆ ಅಥವಾ ಯಾವುದೇ ಔಷಧಿಯಿಂದ ಚಿಕಿತ್ಸೆ ಮಾಡಲಾಗದಂತಹ ಗಂಭೀರ ವ್ಯಾಧಿಗೆ ಕಾರಣವಾಗಬಹುದು. |
ಎಕ್ಸ. |
ಭ್ರೂಣದ ಮೇಲೆ ಆಗುವ ಅಪಾಯಗಳು ಔಷಧಿಯ ಲಾಭಗಳನ್ನು ಮೀರಿಸುವಂತಿರುತ್ತವೆ. |
ತಂಬಾಕು ಸೇವನೆ(ಧೂಮ್ರಪಾನ) ಗಭ೯ಸ್ಥ ಮಹಿಳೆಯರಿಗೆ ಮತ್ತು ಭ್ರೂಣಕ್ಕೆ ತೊಂದರೆಯನ್ನುಂಟು ಮಾಡಿದರೂ ಸಹ ಕೇವಲ ೨೦% ಮಹಿಳೆಯರು ಧೂಮ್ರಪಾನವನ್ನು ಗಭಾ೯ವಸ್ಥೆಯಲ್ಲಿ ತ್ಯಜಿಸುತ್ತಾರೆ. ಗಭಾ೯ವಸ್ಥೆಯಲ್ಲಿ ಭ್ರೂಣದ ಮೇಲಾಗುವ ಧೂಮ್ರಪಾನದ ಅತೀ ಹೆಚ್ಚು ಸ್ಥಿರವಾಗಿ ಕಂಡಂತಹ ಪರಿಣಾಮವೆಂದರೆ ಮಗುವಿನ ಹುಟ್ಟು ತೂಕ ಕಡಿಮೆಯಾಗಿರುವದು. ಗಭಾ೯ವಸ್ಥೆಯಲ್ಲಿ ಮಹಿಳೆಯು ಹೆಚ್ಚು ಹೆಚ್ಚು ಧೂಮ್ರಪಾನ ಮಾಡಿದರೆ ಮಗುವಿನ ಭಾರ ಕಡಿಮೆ ಕಡಿಮೆಯಾಗುತ್ತ ಹೋಗುತ್ತದೆ. ಗಭಾ೯ವಸ್ಥೆಯಲ್ಲಿ ಧೂಮ್ರಪಾನ ಮಾಡಿದ ಮಹಿಳೆಯರ ಮಕ್ಕಳ ಸರಾಸರಿ ಹುಟ್ಟು ತೂಕವು ಧೂಮ್ರಪಾನ ಮಾಡದ ಮಹಿಳೆಯರ ಮಗುವಿನ ತೂಕಕ್ಕಿಂತ ಸುಮಾರು ೧೭೦ ಗ್ರಾಂ ಕಡಿಮೆಯಾಗಿರುತ್ತದೆ. ಬಹಳ ದಿನಗಳಿಂದ ಧೂಮ್ರಪಾನ ಮಾಡಿದಂತಹ ಮಹಿಳೆಯರ ಮಕ್ಕಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಹುಟ್ಟು ತೂಕವನ್ನು ಕಾಣಬಹುದಾಗಿದೆ.ಹೃದಯದ , ಮೆದುಳಿನ ಮತ್ತು ಮುಖದ ಹುಟ್ಟು ನ್ಯೂನ್ಯತೆಗಳು ಧೂಮ್ರಪಾನ ಮಾಡುವವರ ಮಕ್ಕಳಲ್ಲಿ ಧೂಮ್ರಪಾನ ಮಾಡದೇ ಇರುವವರ ಮಕ್ಕಳಿಗಿಂತ ಹೆಚ್ಚು . ಇದರ ಜೊತೆಗೆ ಅತೀ ಶೀಘ್ರದ “ ಮಗು ಸಾಯುವ ಸಹ ಲಕ್ಷಣ” (ಎಸ್.ಆಯ್.ಡಿ.ಎಸ್.)ದ ಅಪಾಯವೂ ಕೂಡ ಹೆಚ್ಚಿಗಿರುತ್ತದೆ. ಇದರಂತೆ ಸ್ಥಳಾಂತರಿತ ಗಭ೯ವೇಷ್ವನ, ಸಮಯಕ್ಕೆ ಮುಂಚಿತವಾಗಿ ಬೇರ್ಪಡುವ ಗಭ೯ವೇಷ್ವನ, ಸಮಯಕ್ಕೆ ಮುಂಚಿತವಾಗಿ ಪರಪಿ ಹರಿದುಹೋಗುವುದು(ಭ್ರೂಣದ) ಸಮಯಕ್ಕಿಂತ ಮುಂಚಿನ ಪ್ರಸವ, ಗಭಾ೯ಶಯದ ಸೋಂಕುಗಳು, ಗಭ೯ಪಾತಗಳು, ಗಭ೯ದಲ್ಲೇ ಸತ್ತು ಹುಟ್ಟಿದ ಮಗು, ಮತ್ತು ಸಮಯಕ್ಕೆ ಮುಂಚಿನ ಹೆರಿಗೆ ಬೇನೆ ಮುಂತಾದವುಗಳು ಕೂಡ ಆಗುವ ಸಾಧ್ಯತೆಗಳಿರುತ್ತವೆ. ಇದಕ್ಕಿಂತಲೂ ಹೆಚ್ಚಾಗಿ ಧೂಮ್ರಪಾನ ಮಾಡುವ ಮಹಿಳೆಯರ ಮಕ್ಕಳಲ್ಲಿ ಅತೀ ಕಡಿಮೆ ಆದರೂ ಅಳೆದು ನೋಡುವಷ್ಟು ನ್ಯೂನ್ಯತೆಗಳನ್ನು ಮಕ್ಕಳ ಭೌತಿಕ ಬೆಳವಣಿಗೆಯಲ್ಲಿ , ಭೌದ್ಧಿಕ ಬೆಳವಣಿಗೆಯಲ್ಲಿ ಮತ್ತು ನಡತೆಯ ಬೆಳವಣಿಗೆಗಳಲ್ಲಿ ಕಾಣಬಹುದಾಗಿದೆ. ಈ ಎಲ್ಲ ಪರಿಣಾಮಗಳ ಕಾರಣ ಇಂಗಾಲದ ಮೊನಾಕ್ಸೈಡ್ ಮತ್ತು ನಿಕೋಟಿನ್ ಗಳು ಗಭ೯ಸ್ಥ ಮಹಿಳೆಯರು ಅಪರೋಕ್ಷ ಧೂಮ್ರಪಾನದ ವಾತಾವರಣಕ್ಕೆ ಬಹಿರಂಗಗೊಳ್ಳಬಾರದು ಏಕೆಂದರೆ ಅದೂ ಕೂಡ ಭ್ರೂಣದ ಮೇಲೆ ಅದೇ ಪರಿಣಾಮವನ್ನು ಬೀರಬಹುದು.
ಗಭಾ೯ವಸ್ಥೆಯಲ್ಲಿ ಮಧ್ಯಪಾನ ಮಾಡುವುದರಿಂದ ಹುಟ್ಟು ನ್ಯೂನ್ಯತೆಗಳಾಗುವದರಲ್ಲಿ ಸಂದೇಹವಿಲ್ಲ. ಏಕೆಂದರೆ “ ಭ್ರೂಣದ ಮದ್ಯಪಾನ ಸಹ ಲಕ್ಷಣ” ಕ್ಕೆ ಮಧ್ಯದ ಪ್ರಮಾಣ ಎಷ್ಟು ಎಂದು ಗೊತ್ತಿಲ್ಲ. ಗಭ೯ಸ್ಥ ಮಹಿಳೆಯರು ನಿಯಮಿತ ಮಧ್ಯಪಾನದಿಂದ ದೂರವಿರಲು ಸಲಹೆ ಮಾಡಲಾಗುತ್ತದೆ. ಸಂಪೂಣ೯ವಾಗಿ ಮಧ್ಯಪಾನವನ್ನು ತ್ಯಜಿಸುವದು ಇದಕ್ಕಿಂತ ಸುರಕ್ಷಿತ. ಗಭಾ೯ವಸ್ಥೆಯಲ್ಲಿಯ ಮಧ್ಯಪಾನದಿಂದಾಗುವ ಪರಿಣಾಮಗಳ ಪರಿಮಿತಿ ಬಹಳ ದೊಡ್ಡದಾಗಿದೆ. ಗಭಾ೯ವಸ್ಥೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಧ್ಯಪಾನ ಸೇವಿಸುವ ಮಹಿಳೆಯರಲ್ಲಿ ಗಭ೯ಪಾತದ ಅಪಾಯವು ದ್ವಿಗುಣವಾಗಿರುತ್ತದೆ. ಹೆಚ್ಚಾಗಿ ನಿಯಮಿತ ಮಧ್ಯಪಾನ ಮಾಡುವ ಮಹಿಳೆಯರ ಮಕ್ಕಳು ಹುಟ್ಟು ತೂಕವು ಸಹಜಕ್ಕಿಂತ ಅತೀ ಕಡಿಮೆಯಾಗಿರುತ್ತದೆ. ಹೆಚ್ಚಿನ ಪ್ರಮಾಣದ ಮಧ್ಯಪಾನಕ್ಕೀಡಾದ ಮಹಿಳೆಯರ ಮಕ್ಕಳ ಸರಾಸರಿ ತೂಕವು ೪ ಪೌಂಡನಷ್ಟಾಗಿರುತ್ತದೆ. ಅದೇ ಬೇರೆಲ್ಲ ಮಕ್ಕಳ ತೂಕವು ೭ ಪೌಂಡಗಳಷ್ಟಾಗಿರುತ್ತದೆ. ಗಭಾ೯ವಸ್ಥೆಯಲ್ಲಿ ಮಧ್ಯಪಾನ ಮಾಡಿದ ಮಹಿಳೆಯರ ನವಜಾತ ಶಿಶುಗಳು ಬೇಗ ಬೆಳವಣಿಗೆ ಹೊಂದುವುದಿಲ್ಲ ಮತ್ತು ಅವು ಜನನದ ತಕ್ಷಣ ಸಾಯುವ ಸಾಧ್ಯತೆಗಳು ಹೆಚ್ಚು.
“ಭ್ರೂಣದ ಮಧ್ಯಪಾನ ಸಹಲಕ್ಷಣ ” ವು ಗಭಾ೯ವಸ್ಥೆಯಲ್ಲಿ ಮಧ್ಯಪಾನ ಮಾಡುವದರಿಂದಾಗುವ ಅತೀ ಗಂಭೀರ ಪರಿಣಾಮವಾಗಿದೆ. ‘ಬಿಂಗೆ’ ಪಾನವನ್ನು ದಿನಕ್ಕೆ ಮೂರು ಸಲ ಕುಡಿದರೂ ಈ ಸಹಲಕ್ಷಣಕ್ಕೆ ಕಾರಣವಾಗಬಹುದು. ಈ ಸಹಲಕ್ಷಣವನ್ನು ೧೦೦೦ ಜೀವಂತ ಜನನಗಳಲ್ಲಿ ೨ ರಲ್ಲಿ ಕಾಣಬಹುದು. ಈ ಸಹಲಕ್ಷಣವು ಜನನದ ಮುಂಚೆ ಮತ್ತು ನಂತರ ಸಾಕಾಗದಷ್ಟು ಕಡಿಮೆ ಬೆಳವಣಿಗೆಯನ್ನು ಒಳಗೊಂಡಿರುತ್ತದೆ. ಮುಖದ ನ್ಯೂನ್ಯತೆಗಳನ್ನು , ಅಸಹಜ ನಡತೆಯ ಬೆಳವಣಿಗೆಯನ್ನು ಚಿಕ್ಕ ತಲೆ, ಬುದ್ಧಿ ಮಂದತೆಗಳನ್ನು ಒಳಗೊಂಡಿರುತ್ತದೆ. ಅತೀ ವಿರಳವಾಗಿ ಅಸಹಜ ಸಂದುಗಳನ್ನು ಮತ್ತು ಹೃದಯದ ನ್ಯೂನ್ಯತೆಗಳು ಇರುತ್ತವೆ.ಗಭಾ೯ವಸ್ಥೆಯಲ್ಲಿ ಮಧ್ಯಪಾನ ಮಾಡಿದ ಮಹಿಳೆಯರ ಮಕ್ಕಳಲ್ಲಿ ಮತ್ತು ಬೆಳೆಯುತ್ತಿರುವ ಮಕ್ಕಳಲ್ಲಿ ಸಮಾಜ ವಿರೋಧಿ ನಡವಳಿಕೆ ಮತ್ತು ಆಸಕ್ತಿ ಕೊರತೆಯ ವ್ಯಾಧಿಯಂತಹ ಕಠೋರ ನಡತೆಯ ತೊಂದರೆಗಳನ್ನೊಳಗೊಂಡಿರಬಹುದಾಗಿದೆ. ಈ ತರದ ತೊಂದರೆಗಳು ಸ್ಪಷ್ಟವಾದ ಭೌತಿಕ ಹುಟ್ಟು ನ್ಯೂನ್ಯತೆಗಳು ಇರದೇ ಇದ್ದ ಮಕ್ಕಳಲ್ಲಿಯೂ ಸಂಭವಿಸಬಹುದು.
ಗಭಾ೯ವಸ್ಥೆಯಲ್ಲಿ ಕೆಫಿನ್ ಸೇವಿಸುವುದರಿಂದ ಭ್ರೂಣದ ಮೇಲೆ ತೊಂದರೆ ಆಗುತ್ತದೆಯೋ ಇಲ್ಲವೋ ಅದು ಸ್ಪಷ್ಟವಾಗಿಲ್ಲ. ಸಾಕ್ಷಿಗಳನ್ನು ನೋಡಿದಾಗ ಗಭಾ೯ವಸ್ಥೆಯಲ್ಲಿ ಸಣ್ಣ ಪ್ರಮಾಣದಲ್ಲಿ (ಉದಾ- ಒಂದು ದಿನಕ್ಕೆ ಒಂದು ಕಪ್ ಕಾಫಿ) ಕೇಫಿನ್ ನ್ನು ಸೇವಿಸಿದಾಗ ಅದರಿಂದ ಭ್ರೂಣದ ಮೇಲೆ ಅತೀ ಸ್ವಲ್ಪ ಅಪಾಯ ಅಥವಾ ಅಪಾಯ ಇರದೇ ಇರಬಹುದು. ಕಾಫೀ, ಚಹ, ಕೆಲವು ಸೋಡಾಗಳು, ಚಾಕಲೇಟು ಮತ್ತು ಕೆಲ ಔಷಧಿಗಳಲ್ಲಿರುವ ಕೆಫಿನ್ ಒಂದು ಉದ್ದೀಪನವಾಗಿದ್ದು ಅದು ಭ್ರೂಣದ ಗಭ೯ವೇಷ್ವನವನ್ನು ಸಲೀಸಾಗಿ ಪಾರು ಮಾಡುತ್ತದೆ. ಆದ್ದರಿಂದ ಅದು ಭ್ರೂಣವನ್ನು ಉತ್ತೇಜಿಸಿ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಗಭ೯ವೇಷ್ವನಕ್ಕೆ ರಕ್ತದ ಹರಿವನ್ನು ಕೆಫಿನ್ ಕಡಿಮೆ ಮಾಡಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು (ರಕ್ತಹೀನತೆಯ ಅಪಾಯ ಹೆಚ್ಚು) ಕಡಿಮೆ ಮಾಡುತ್ತದೆ. ಕೆಲವು ಸಾಕ್ಷಿಗಳ ಸಲಹೆಗಳ ಪ್ರಕಾರ ದಿನಕ್ಕೆ ಏಳು ಕಪ್ಪುಗಳಿಗಿಂತ ಹೆಚ್ಚಾಗಿ ಕಾಫೀಯನ್ನು ಸೇವಿಸುವುದರಿಂದ , ಆಜೀವ ಹುಟ್ಟು, ಸಮಯಕ್ಕಿಂತ ಮುಂಚಿನ ಹುಟ್ಟು , ಮಗುವಿನ ಅತೀ ಕಡಿಮೆ ಭಾರ, ಅಥವಾ ಗಭ೯ಪಾತದ ಅಪಾಯವು ಹೆಚ್ಚುತ್ತದೆ. ಕೆಲವು ತಜ್ಞರು ಕಾಫಿಯ ಸೇವನೆಯನ್ನು ಕಡಿಮೆ ಮಾಡಲು ಮತ್ತು ಕೆಫಿನ್ ತೆಗೆದಂತಹ ಪಾನೀಯಗಳನ್ನು ಸಾಧ್ಯವಾದಷ್ಟು ಸೇವಿಸಲು ಸಲಹೆ ಮಾಡುತ್ತಾರೆ.
ಆಸ್ಪರಟೇಮ ಇದೊಂದು ಕೃತ್ರಿಮ ಸಿಹಿ ಮಾಡುವ ವಸ್ತುವಾಗಿದ್ದು , ಇದನ್ನು ಗಭಾ೯ವಸ್ಥೆಯಲ್ಲಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದಾಗ ಸುರಕ್ಷಿತ ಎಂದು ಕಾಣುತ್ತದೆ. ಫಿನೈಲ್ ಕಿಟೋನ್ಯೂರಿಯಾ ಒಂದು ಅಸಾಧಾರಣ ರೋಗವಿರುವಂತಹ ಗಭ೯ಸ್ಥ ಮಹಿಳೆ ಆಸ್ಪರಟೇಮನ್ನು ಸೇವಿಸಲೇಬಾರದು.
ಎದೆಯ ಹಾಲುಣಿಸುವಾಗ ಔಷಧಿಯನ್ನು ಸೇವಿಸುವುದು :-
ಎದೆಯ ಹಾಲುಣಿಸುತ್ತಿರುವ ತಾಯಂದಿರು ಔಷಧಿ ಸೇವನೆ ಮಾಡಬೇಕಾದಲ್ಲಿ ಅವರು ಎದೆಯ ಹಾಲುಣಿಸುವುದನ್ನು ನಿಲ್ಲಿಸಲೇಬೇಕು ಅಥವಾ ಈ ಕೆಳಗಿನ ಅಂಶಗಳ ಮೇಲೆ ಅವಲಂಬಿತರಾಗಿರಬಾರದು.
ಕೆಲವು ಔಷಧಿಗಳಾದ ಎಫಿನೆಫ್ರಾಯಿನ್, ಹಿಪ್ಯಾರಿನ್ , ಇನ್ಸುಲಿನ್ ಗಳು ಮೊಲೆಯ ಹಾಲಿನಲ್ಲಿ ಸೇರಿಕೊಳ್ಳದೇ ಇರುವುದರಿಂದ ಅವು ಸೇವಿಸಲು ಸುರಕ್ಷಿತವಾಗಿವೆ. ಅತೀ ಹೆಚ್ಚಿನ ಔಷಧಿಗಳು ಮೊಲೆಯ ಹಾಲಿನಲ್ಲಿ ಸೇರ್ಪಡೆಯಾಗುತ್ತವೆ, ಆದರೆ ಅತೀ ಕಡಿಮೆ ಪ್ರಮಾಣದಲ್ಲಿ ಮಾತ್ರ. ಏನೇ ಆದರೂ ಅತೀ ಕಡಿಮೆ ಪ್ರಮಾಣದಲ್ಲಿಯಾದರೂ ಕೂಡ ಕೆಲವು ಔಷಧಿಗಳು ಮಕ್ಕಳಿಗೆ ತೊಂದರೆಗಳನ್ನುಂಟು ಮಾಡಬಲ್ಲವು. ಕೆಲವು ಔಷಧಿಗಳು ಮೊಲೆಯ ಹಾಲಿನಲ್ಲಿ ಸೇರಿಕೊಳ್ಳುತ್ತವೆ. ಆದರೆ ಮಗು ಸಾಮಾನ್ಯವಾಗಿ ಅದರಲ್ಲಿನ ಅತ್ಯಲ್ಪ ಪ್ರಮಾಣವನ್ನು ಮಾತ್ರ ಹೀರಿಕೊಳ್ಳುವುದರಿಂದ ಅವು ಮಗುವಿನ ಮೇಲೆ ಪರಿಣಾಮ ಮಾಡಲಾರವು. ಉದಾಹರಣೆಗೆ ಎಂಟಿಬಾಯೋಟಿಕ್ ಗಳಾದ ಜೆಂಟಾಮೈಸಿನ್ , ಕ್ಯಾನಾಮೈಸಿನ್, ಸ್ಟ್ರೆಪ್ಟೋಮೈಸಿನ್, ಮತ್ತು ಟೆಟ್ರಾಸೈಕ್ಲಿನ್ ಮುಂತಾದವುಗಳು.
ಸುರಕ್ಷಿತ ಎಂದು ಭಾವಿಸಿರುವ ಔಷಧಿಗಳಲ್ಲಿ ವೈದ್ಯರ ಔಷಧಿ ಸಲಹೆ ಟೀಟಿ ಅಲ್ಲದ (ಅಂಗಡಿಯಲ್ಲಿ ಖರೀದಿಸಿದ) ಔಷಧಿಗಳು . ಅಪವಾದಗಳೆಂದರೆ ಎಂಟಿಹಿಸ್ಟಮಿನ್ (ಕೆಮ್ಮು ಮತ್ತು ಶೀತದ ಉಪಶಮನಗಳು, ಒಗ್ಗದಿರುವ (ಅಲಜಿ೯) ಔಷಧಿಗಳು, ನಿದ್ರೆ ಸಹಾಯಕಗಳು ಮತ್ತು ಗತಿರುಗ್ನತೆಯ ಔಷಧಿಗಳಲ್ಲಿರುವಂತಹ) ಮತ್ತು ಆಸ್ಪಿರಿನ್ ಮತ್ತು ಸ್ಯಾಲಿಸಿಲೇಟಗಳ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು.
ಚಮ೯ಕ್ಕೆ , ಮೂಗಿಗೆ, ಕಣ್ಣುಗಳಿಗೆ ಲೇಪಿಸುವಂತಹ ಅಥವಾ ಆಘ್ರಾಣಿಸುವಂತಹ ಔಷಧಿಗಳು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ. ಹೆಚ್ಚಿನ ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧಿಗಳು ಮೊಲೆಯುಣಿಸಿದ ಮಕ್ಕಳಲ್ಲಿ ಗಮನಾಹ೯ ತೊಂದರೆಗೆ ಕಾರಣವಾಗುವುದಿಲ್ಲ. ಮಹಿಳೆಯರು ಮೊಲೆಯ ಹಾಲಿಣಿಸುತ್ತಿದ್ದರೆ ಬೀಟಾ ಬ್ಲಾಕರಗಳನ್ನು ಸೇವಿಸಬಹುದು. ಆದರೆ ಮಗುವನ್ನು ಸಾಧ್ಯವಾಗ ಬಹುದಾದ ಔಷಧದ ಅನಪೇಕ್ಷಿತ ಪರಿಣಾಮಗಳಾದಂತಹ ಕಡಿಮೆ ಹೃದಯ ಬಡಿತ ಮತ್ತು ಕಡಿಮೆ ರಕ್ತದ ಒತ್ತಡಗಳಿಗೆ ನಿಯಮಿತ ತಪಾಸನೆಯನ್ನು ಮಾಡಲೇಬೇಕು. ಕೌಮ್ಯಾಡಿನ್ ನ್ನು ಮಗು ಸಮಯ ತುಂಬಿ ಹುಟ್ಟಿದ್ದು , ಆರೋಗ್ಯವಂತವಾಗಿದ್ದರೆ ಸೇವಿಸಬಹುದಾಗಿದೆ. ಆದರೆ ಅದರ ಬಳಕೆಯನ್ನು ನಿಗಾವಹಿಸಬೇಕು. ಕೆಫಿನ್ ಮತ್ತು ಥಿಯೋಫೈಲಿನ್ ಗಳು ಮೊಲೆಯುಣಿಸುತ್ತಿರುವ ಮಕ್ಕಳಿಗೆ ತೊಂದರೆಯನ್ನು೦ಟು ಮಾಡುವುದಿಲ್ಲ. ಆದರೆ ಅವು ಅವರನ್ನು ಕೋಪ ಸ್ವಭಾವದವರನ್ನಾಗಿಸಬಹುದು. ಮಗುವಿನ ಹೃದಯದ ಮತ್ತು ಉಸಿರಾಟದ ಮಿತಿಗಳು ಹೆಚ್ಚಾಗಬಹುದು. ಎಷ್ಟೋ ಔಷಧಿಗಳನ್ನು ಸುರಕ್ಷಿತ ಎಂದು ಘೋಷಿಸಿದ್ದರೂ ಕೂಡ ಮೊಲೆಯುಣಿಸುತ್ತಿರುವ ತಾಯಂದಿರು ಯಾವುದೇ ಔಷಧಿಯನ್ನು ( ನೇರವಾಗಿ ಅಂಗಡಿಯಿಂದ ಖರೀದಿಸಿದ ಅಥವಾ ಔಷಧಿಯ ಸಸ್ಯದ) ಸೇವಿಸುವದಕ್ಕೆ ವೈದ್ಯರ ಸಲಹೆಯನ್ನು ಪಡೆಯಲೇಬೇಕು. ಎಲ್ಲ ಔಷಧಿಗಳ ಲೇಬಲ್ಲಗಳನ್ನು ಮೊಲೆಯುಣಿಸುತ್ತಿರುವ ಸಮಯದಲ್ಲಿ ಸೇವಿಸಲು ಅನಹ೯ ಮುನ್ನೆಚ್ಚರಿಕೆಗಳಿಗೆ ಗಮನಿಸಲೇಬೇಕು.
ಕೆಲವು ಔಷಧಿಗಳು ಅವುಗಳನ್ನು ಬಳಸುವಾಗ ವೈದ್ಯರ ಮೇಲ್ವಿಚಾರಣೆ ಅಗತ್ಯವಾಗಿದೆ. ಮೊಲೆಯುಣಿಸುವಾಗ ಸುರಕ್ಷತೆಯನ್ನು ವಹಿಸಲು ಔಷಧಿಗಳ ಪ್ರಮಾಣದ ನಿಯಂತ್ರಣ, ಸೇವಿಸುವ ಸಮಯದ ಮಿತಿಗೊಳಿಸುವುದು, ಅಥವಾ ಮೊಲೆಯುಣಿಸುವ ಸಮಯಕ್ಕನುಸಾರವಾಗಿ ಸಮಯವನ್ನು ಗೊತ್ತುಪಡಿಸುವುದನ್ನು ನಿಯಂತ್ರಿಸಬೇಕಾಗುತ್ತದೆ. ಹೆಚ್ಚಿನ ಕಾತುರತೆ ನಿಯಂತ್ರಣ ಔಷಧಿಗಳು, ಕಳವಳ ನಿಯಂತ್ರಣ ಔಷಧಿಗಳು ಮಾನಸಿಕ ಅವ್ಯವಸ್ಥೆಯನ್ನು ನಿಯಂತ್ರಿಸುವ ಔಷಧಿಗಳನ್ನು ಅವು ಮಗುವಿನಲ್ಲಿ ಗಮನಾಹ೯ ತೊಂದರೆಗಳಿಗೆ ಕಾರಣವಾಗದೇ ಇದ್ದರೂ ವೈದ್ಯರ ಮೇಲ್ವಿಚಾರಣೆಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಏನೇ ಆದರೂ ಈ ಔಷಧಿಗಳು ದೇಹದಲ್ಲಿ ಬಹಳ ಸಮಯದವರೆಗೆ ಉಳಿಯುತ್ತದೆ. ಜೀವನದ ಮೊದಲಿನ ಕೆಲವು ತಿಂಗಳುಗಳಲ್ಲಿ ಮಕ್ಕಳು ಈ ಔಷಧಿಯನ್ನು ವಜಿ೯ಸಲು ತೊಂದರೆಯಾಗುತ್ತದೆ. ಮತ್ತು ಈ ಔಷಧಿಗಳು ಮಗುವಿನ ನರಮಂಡಲದ ಮೇಲೆ ಪ್ರಭಾವವನ್ನು ಬೀರಬಹುದು. ಉದಾಹರಣೆಗೆ ಕಾತುರತೆ ನಿಯಂತ್ರಣದ ಔಷಧಿಗಳಾದ ಡೈಯಜೆಫಮ್ , ಬೆಂಜೋಡೆಯ ಜೆಫಾಯಿನ್ ಗಳು ಮೊಲೆಯುಣಿಸಿದ ಮಕ್ಕಳಲ್ಲಿ ನಿರುತ್ಸಾಹ , ನಿದ್ರೆತರುವುದು, ಕಡಿಮೆ ತೂಕದಂತಹವುಗಳ ಕಾರಣವಾಗಬಹುದು. ಮಕ್ಕಳು ಫಿನೋಬಾಬಿ೯ಟಲ್ ಮತ್ತು ಬಾಬ೯ಟುರೇಟಗಳನ್ನು ನಿಧಾನವಾಗಿ ವಜಿ೯ಸುತ್ತವೆ. ಆದ್ದರಿಂದ ಈ ಔಷಧಿಗಳು . ಅತಿ ಹೆಚ್ಚಿನ ನಿದ್ರಾಗುಂಗಿಗೆ ಕಾರಣವಾಗುತ್ತವೆ. ಈ ಕಾರಣದಿಂದಾಗಿ ವೈದ್ಯರು ಈ ಔಷಧಿಗಳ ಪ್ರಮಾಣವನ್ನು ಕಡಿತಗೊಳಿಸುತ್ತಾರಲ್ಲದೇ ಮೊಲೆಯುಣಿಸುತ್ತಿರುವ ಮಹಿಳೆಯರ ಮೇಲೆ ನಿಗಾ ಇಡುತ್ತಾರೆ.
ಅತೀ ಮುಖ್ಯವಾದ ಮುನ್ನೆಚ್ಚರಿಕೆಗಳು:-
ಗಭಾ೯ವಸ್ಥೆಯ ಸಮಯದಲ್ಲಿ ಕಾನೂನು ಬಾಹಿರ ಔಷಧಿಗಳ ಸೇವನೆಯು ಬೆಳೆಯುತ್ತಿರುವ ಭ್ರೂಣ ಹಾಗೂ ನವಜಾತ ಶಿಶುವಿನ ಮೇಲೆ ಗಭಾ೯ವಸ್ಥೆಯ ಜಟಿಲತೆ, ಗಂಭೀರ ತೊಂದರೆಗಳಿಗೆ ಕಾರಣವಾಗಬಹುದಾಗಿದೆ. ಗಭ೯ಸ್ಥ ಮಹಿಳೆಗೆ ಕಾನೂನು ಬಾಹಿರ ಔಷಧಿಯ ಚುಚ್ಚುಮದ್ದನ್ನು ಕೊಟ್ಟರೆ ಅದು ಸೊಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಅಥವಾ ಭ್ರೂಣಕ್ಕೆ ರವಾನಿಸಲಾಗುತ್ತದೆ. ಈ ಸೊಂಕುಗಳು ಯಕೃತ ವ್ಯಾಧಿ , ಏಡ್ಸನಂತಹ ಲೈಂಗಿಕ ರೋಗಗಳಾಗಿವೆ. ಮತ್ತು ಗಭ೯ಸ್ಥ ಮಹಿಳೆಯು ಕಾನೂನು ಬಾಹಿರ ಔಷಧಿಯನ್ನು ಸೇವಿಸುವುದರಿಂದ ಭ್ರೂಣದ ಸಾಕಾಗಲಾರದಷ್ಟು ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಇದರಲ್ಲಿ ಸಮಯಕ್ಕೆ ಮುಂಚಿನ ಹೆರಿಗೆಗಳ ಸಂಭವ ಅತೀ ಸಾಮಾನ್ಯವಾಗಿವೆ. ಕೊಕೇನ್ ಮೇಲಿಂದ ಮೇಲೆ ಬಳಸಿದ ತಾಯಂದಿರಿಗೆ ಜನಿಸಿದ ಮಕ್ಕಳಿಗೆ ಸಾಮಾನ್ಯವಾಗಿ ತೊಂದರೆಗಳಿರುತ್ತವೆ. ಆದರೆ ಆ ತೊಂದರೆಗಳು ಕೊಕೇನನಿಂದಲೇ ಸಂಭವಿಸಿವೆ ಎನ್ನುವುದು ನಿಖರವಾಗಿಲ್ಲ. ಉದಾಹರಣೆಗೆ-ಸಿಗರೇಟು ಸೇವನೆ, ಬೇರೆ ಕಾನೂನು ಬಾಹಿರ ಔಷಧಿ, ಕಡಿಮೆಯಾದ ಜನದ ಮುಂಚಿನ ಕಾಳಜಿ ಅಥವಾ ಬಡತನ ಏನೇ ಕಾರಣವಾಗಿರಬಹುದು.
ಹಿರೋಯಿನ್ , ಮೆಥಡೋನ ಮತ್ತು ಮೊರಫೀನ್ ನಂತಹ ಉದ್ದೀಪನಗಳು ಸರಾಗವಾಗಿ ಗಭ೯ವೇಷ್ವನವನ್ನು ಪಾರಮಾಡುತ್ತವೆ. ಆದಕಾರಣ ಭ್ರೂಣವು ಅವುಗಳಿಗೆ ದುವ್ಯ೯ಸನಿಯಾಗಬಹುದು. ಮತ್ತು ಅವುಗಳಿಗೆ ಜನನದ ೬ ರಿಂದ ೮ ದಿನಗಳಲ್ಲಿ ಮೈದೆಗೆಯುವ ರೋಗ ಚಿನ್ಹೆ ( ವಿಡ್ರಾವಲ ಸಿಂಪಟಮ್) ಇರಬಹುದಾಗಿದೆ. ಏನೇ ಆದರೂ ಉದ್ದೀಪನಗಳನ್ನು ಅತೀ ವಿರಳವಾಗಿ ಹುಟ್ಟುನ್ಯೂನ್ಯತೆಗಳಿಗೆ ಕಾರಣೀಭೂತವಾಗಿರುತ್ತವೆ. ಗಭಾ೯ವಸ್ಥೆಯಲ್ಲಿ ಉದ್ದೀಪನಗಳ ಬಳಕೆಯು ಗಭ೯ಪಾತ, ಮಗು ಅಸಾಧಾರಣವಾಗಿರುವುದು. ಸಮಯಕ್ಕೆ ಮುಂಚಿನ ಹೆರಿಗೆಗಳಂತಹ ಗಭಾ೯ವಸ್ಥೆಯ ಜಟಿಲಗಳ ಅಪಾಯಗಳನ್ನು ಹೆಚ್ಚಿಸಬಹುದಾಗಿದೆ. ಹಿರೋಯಿನ ಬಳಕೆಯ ಮಹಿಳೆಯರ ಮಕ್ಕಳು ಅತೀ ಚಿಕ್ಕಗಾತ್ರದ್ದಾಗಿರುತ್ತವೆ.
ಗಭಾ೯ವಸ್ಥೆಯಲ್ಲಿ ಎಂಫಟಾಮೈನ್ಸಗಳ ಬಳಕೆಯು ಮುಖ್ಯವಾಗಿ ಹೃದಯದಂತಹ ಹುಟ್ಟುನ್ಯೂನ್ಯತೆಗಳಿಗೆ ಕಾರಣವಾಗುತ್ತವೆ.
ಗಭಾ೯ವಸ್ಥೆಯಲ್ಲಿ ಮಾರಿಜುವಾನಾದ ಬಳಕೆ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ನಿಖರವಾಗಿಲ್ಲ. ಮಾರಿಜುವಾನಾದ ಮುಖ್ಯ ಭಾಗವಾದ ಟೆಟ್ರಾಹೈಡ್ರೋಕ್ಯಾನೆಬಿನಾಲ್ ಗಭ೯ವೇಷ್ವವನ್ನು ಸರಾಗವಾಗಿ ಪಾರುಮಾಡಿ ಭ್ರೂಣಕ್ಕೆ ಕೆಟ್ಟ ಪರಿಣಾಮ ಬೀರಬಹುದಾಗಿದೆ. ಏನೇ ಆದರೂ ಮಾರಿಜುವಾನಾ ಹುಟ್ಟುನ್ಯೂನ್ಯತೆಗಳ ಅಪಾಯವನ್ನು ಹೆಚ್ಚಿಸುವಂತೆ ಅಥವಾ ಭ್ರೂಣದ ಬೆಳವಣಿಗೆಯನ್ನು ಕುಂಠಿತಗೊಳಿಸುವಂತೆ ಕಾಣುವುದಿಲ್ಲ. ಮಾರಿಜುವಾನಾವನ್ನು ಗಭಾ೯ವಸ್ಥೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿದ್ದಾಗ ನವಜಾತ ಶಿಶುವಿನಲ್ಲಿ ನಡುವಳಿಕೆಯ ತೊಂದರೆಗೆ ಕಾರಣವಾಗುವುದಿಲ್ಲ.
ಸ್ಥಳೀಯ ಸಂಜ್ಞಾಹರಣಗಳು (ಅನೆಸ್ಥೆಟಿಕ್) ಉದ್ದೀಪನಗಳು ಮತ್ತು ಬೇರೆ ನೋವು ನಿವಾರಕಗಳು ಸಾಮಾನ್ಯವಾಗಿ ಗಭ೯ವೇಷ್ಯನವನ್ನು ಪಾರು ಮಾಡುವುದರ ಮೂಲಕ ನವಜಾತ ಶಿಶುವಿಗೆ ತೊಂದರೆಯನ್ನುಂಟು ಮಾಡುತ್ತದೆ. ಉದಾಹರಣೆಗೆ- ಅವುಗಳ ನವಜಾತ ಶಿಶುವಿನ ಉಸಿರಾಡುವ ಪ್ರೇರೆಪನೆಯನ್ನು ಶಕ್ತಿಹೀನಗೊಳಿಸಬಹುದು. ಆದ್ದರಿಂದ ಈ ಔಷಧಿಗಳು ಪ್ರಸವದ ಸಮಯದಲ್ಲಿ ಬೇಕಾದಾಗ ಅವುಗಳನ್ನು ಪರಿಣಾಮ ಬೀರುವ ಅತೀ ಕಡಿಮೆ ಪ್ರಮಾಣದಲ್ಲಿ ಕೊಡಲಾಗುತ್ತದೆ. ಮಗುವಿನ ಎತ್ತರ(ಉದ್ದ) ಸಾಮಾನ್ಯವಾಗಿ ವೃದ್ಧಿಯಾಗುವುದಿಲ್ಲ ಮತ್ತು ಮಗು ಹೆಚ್ಚಿನ ತೂಕವನ್ನು ಗಳಿಸಬಹುದಾಗಿದೆ.
ವಿಧ |
ಉದಾಹರಣೆ |
ತೊಂದರೆ |
ಆತಂಕ ನಿವಾರಕ ಔಷಧಿ(ಎಂಟಿಎಂಕ್ಸಾಯಿಟಿ) |
ಡಯಾಜೆಪಮ್ (ವ್ಯಾಪಾರ ಶೀಷಿ೯ಕೆ- ಡೈಯಾಸ್ಟ್ಯಾಟ್ವಾಲಿಯಂ) |
ಈ ಔಷಧಿಯನ್ನು ಕೊನೆಯ ಹಂತದಲ್ಲಿ ಸೇವಿಸಿದಾಗ ನವಜಾತ ಶಿಶುವಿನಲ್ಲಿ ಖಿನ್ನತೆ, ಕೋಪ ಸ್ವಭಾವ, ಕಂಪನ ಮತ್ತು ಅತಿಶಯವಾದ ಪ್ರತಿವತ೯ನೆಗಳನ್ನು ಕಾಣಬಹುದು. |
ಜೀವಿಗಳ ಭಾಧಕಗಳು (ಎಂಟಿಬಾಯಟಿಕ್ಸ್) |
ಕ್ಲೋರ್ಯಾಂಫೆನಿಕಾಲ್ |
ಗ್ರೇಬೇಬಿ(ಬೂದಿಬಣ್ಣದ ಮಗು) ಸಹಲಕ್ಷಣಗಳು, ಮಹಿಳೆ ಅಥವಾ ಭ್ರೂಣದಲ್ಲಿ ಗ್ಲೂಕೋಸ-೬-ಫಾಸ್ಪೇಟ ಡಿಹೈಡ್ರೋಜಿನೇಸನ ಕೊರತೆಯ ರೋಗ, ಕೆಂಪುರಕ್ತ ಕಣಗಳ ಕುಸಿತ. |
ಜೀವಿಗಳ ಭಾಧಕಗಳು (ಎಂಟಿಬಾಯಟಿಕ್ಸ್) |
ಫ್ಲೋರೋಕ್ವಿನೋಲೋನ್ಸ್ ಉದಾ-ಸಿಪ್ರೋಪ್ಲಾಕ್ಸ್ಯಾಸಿನ್(ಸಿಲಾಕ್ಸ್ಯಾನ್ ಸಿಪ್ರೊ) ಓಫ್ಲ್ಯಾಕ್ಸಾಸಿನ್ (ಪ್ಲಾಕ್ಸಿನೋ ಕ್ಯೊಪ್ಲಾಕ್ಸ)ಲಿವೋಪ್ಲಾಕ್ಸ್ಯಾಸಿನ್ (ಲಿವಾ ಕ್ವಿನ್ ಕ್ವಿಕ್ಸಿನ್) ಮತ್ತು ನಾಕ್ ಫ್ಲಾಕ್ಸ್ಯಾಸಿನ್ (ನಾರಾಕ್ಸಿನ್) |
ಕೀಲುಗಳು ಅಸಹಜವಾಗುವ ಸಾಧ್ಯತೆ ಇದೆ. ( ಪ್ರಾಣಿಗಳಲ್ಲಿ ಮಾತ್ರ ಕಾಣಬಹುದಾಗಿದೆ) |
ಜೀವಿಗಳ ಭಾಧ(ಎಂಟಿಬಾಯಟಿಕ್ಸ)ಕಗಳು) |
ಕಾನಾಮೈಸಿನ್ |
ಕಿವುಡುತನಕ್ಕೆ ಕಾರಣವಾಗುವ ಭ್ರೂಣದ ಕಿವಿಗೆ ಧಕ್ಕೆಯಾಗಬಹುದು. |
ಜೀವಿಗಳ ಭಾಧಕಗಳು (ಎಂಟಿಬಾಯಟಿಕ್ಸ್) |
ನೈಟ್ರೋಫ್ಯೂರೆಂಟೋಯಿನ್ |
ಮಹಿಳೆಯಲ್ಲಿ ಅಥವಾ ಭ್ರೂಣದಲ್ಲಿ ಗ್ಲೂಕೋಸ-೬ ಫಾಸ್ಪೇಟ ಡಿಹೈಡ್ರೋಜಿನೇಸ್ ನ ಕೊರತೆಯರೋಗ, ಕೆಂಪು ರಕ್ತದ ಕಣಗಳ ಕುಸಿತ. |
ಜೀವಿಗಳ ಭಾಧಕಗಳು (ಎಂಟಿಬಾಯಟಿಕ್ಸ್) |
ಸ್ಟ್ರೇಪ್ಟೋಮೈಸಿನ್ |
ಕಿವುಡುತನಕ್ಕೆ ಕಾರಣವಾದ ಬಹುದಾದಂತಹ ಭ್ರೂಣದ ಕಿವಿಗೆ ಧಕ್ಕೆಯುಂಟಾಗಬಹುದು. |
ಆಂಟಿಬಾಯೋಸಿಕ್ಸ್ |
ಸೆಲ್ಪೋನಾಮಾಯಿಡೆಸಿ ಉದಾ-ಸಲ್ಪಾಸ್ಯಾಲಾಜಾಯಿನ್ ಮತ್ತು ಟ್ರೈಮೆಥೂಪ್ರಿಮ್ ಸಲ್ಪಾಮೆಥೊಕ್ಷಾಜೋಲ್. |
ಗಭಾ೯ವಸ್ಥೆಯಲ್ಲಿ ಕೊಟ್ಟ ಈ ಔಷಧಿಯು ನವಜಾತ ಶಿಶುವಿನಲ್ಲಿ ಕಾಮಾಲೆ ಮತ್ತು ಮೆದುಳಿಗೆ ಧಕ್ಕೆ ಆಗುವ ಸಾಧ್ಯತೆಗಳಿವೆ. |
|
ಟೆಟ್ರಾಸೈಕ್ಲಿನ್ (ಸುಮಿಸಿನ್) |
ಕಡಿಮೆಯಾದ ಎಲುವಿನ ಬೆಳವಣಿಗೆ, ಹಲ್ಲುಗಳು ಶಾಶ್ವತವಾಗಿ ಹಳದಿಯಾಗುವುದು, ಮಗುವಿನ ಹಲ್ಲುಗಳಲ್ಲಿ ಗುಳ್ಳಿಗಳಾಗುವ ಸಾಧ್ಯತೆಗಳಿವೆ. ಸಾಂದಭ೯ಕವಾಗಿ ಗರ್ಭಸ್ಥ ಮಹಿಳೆಯಲ್ಲಿ ಪಿತ್ತಜನಕಾಂಗದ ವಿಫಲತೆಯಾಗಬಹುದು. |
ಆಂಟಿಕೋಯಾಗುಲಂಟ (ಪ್ರತಿಸ್ಕಂದಿ) |
ಹಿಪ್ಯಾರಿನ್ |
ಈ ಔಷಧಿಯನ್ನು ಬಹಳ ಸಮಯದವರೆಗೆ ಸೇವಿಸಿದಾಗ ಗಭ೯ಸ್ಥ ಮಹಿಳೆಯಲ್ಲಿ ಎಲುಬುಗಳ ಟೊಳ್ಳಾಗುವಿಕೆ , ರಕ್ತಕಣಗಳ(ರಕ್ತಹೆಪ್ಪುಗಟ್ಟಲು ಕಾರಣವಾಗುವ) ಸಂಖ್ಯೆ ಕಡಿಮೆಯಾಗುವುದು. |
ಆಂಟಿಕನವಲ್ಸೆಂಟ್ಸ(ಆಕ್ಷೇಪರೋಧಿ) |
ಕಾಬಾ೯ಮೆಝೆಪಾಯಿನ್ (ಟೆಗ್ರೆಟಾಲ್) |
ಹುಟ್ಟು ನ್ಯೂನ್ಯತೆಗಳ ಕೆಲಸಾಧ್ಯತೆಗಳಿವೆ. ನವಜಾತ ಶಿಶುವಿನಲ್ಲಿ ರಕ್ತಸ್ರಾವವಾಗಬಹುದು. ಆದರೆ ಇದನ್ನು ಗಭ೯ಸ್ಥ ಮಹಿಳೆಯು ಪ್ರತಿದಿನ ವಿಟಾಮಿನ್-ಕೆಯ ಮಾತ್ರೆಯನ್ನು ಹೆರಿಗೆಯ ಮುಂಚೆ ಒಂದು ತಿಂಗಳು ಸೇವಿಸಿದರೆ ಅಥವಾ ನವಜಾತ ಶಿಶುವಿಗೆ ಜನನದ ತಕ್ಷಣ ವಿಟಾಮಿನ್ ಚುಚ್ಚುಮದ್ದನ್ನು ಕೊಟ್ಟರೆ, ತಡೆಯಬಹುದಾಗಿದೆ. |
|
ಫಿನೋಬಾಬಿ೯ಟಲ್(ಲ್ಯುಮಿನಲ್) |
ಹುಟ್ಟು ನ್ಯೂನ್ಯತೆಗಳ ಕೆಲಸಾಧ್ಯತೆಗಳಿವೆ. ನವಜಾತ ಶಿಶುವಿನಲ್ಲಿ ರಕ್ತಸ್ರಾವವಾಗಬಹುದು. ಆದರೆ ಇದನ್ನು ಗಭ೯ಸ್ಥ ಮಹಿಳೆಯು ಪ್ರತಿದಿನ ವಿಟಾಮಿನ್-ಕೆಯ ಮಾತ್ರೆಯನ್ನು ಹೆರಿಗೆಯ ಮುಂಚೆ ಒಂದು ತಿಂಗಳು ಸೇವಿಸಿದರೆ ಅಥವಾ ನವಜಾತ ಶಿಶುವಿಗೆ ಜನನದ ತಕ್ಷಣ ವಿಟಾಮಿನ್ ಚುಚ್ಚುಮದ್ದನ್ನು ಕೊಟ್ಟರೆ, ತಡೆಯಬಹುದಾಗಿದೆ. |
|
ಫಿನಿಟೋಯಿನ್(ಡಿಲಾಂಟಿನ್) |
ಹುಟ್ಟು ನ್ಯೂನ್ಯತೆಗಳ ಕೆಲಸಾಧ್ಯತೆಗಳಿವೆ. ನವಜಾತ ಶಿಶುವಿನಲ್ಲಿ ರಕ್ತಸ್ರಾವವಾಗಬಹುದು. ಆದರೆ ಇದನ್ನು ಗಭ೯ಸ್ಥ ಮಹಿಳೆಯು ಪ್ರತಿದಿನ ವಿಟಾಮಿನ್-ಮಾತ್ರೆಯನ್ನು ಹೆರಿಗೆಯ ಮುಂಚೆ ಒಂದು ತಿಂಗಳು ಸೇವಿಸಿದರೆ ಅಥವಾ ನವಜಾತ ಶಿಶುವಿಗೆ ಜನನದ ತಕ್ಷಣ ವಿಟಾಮಿನ್ ಚುಚ್ಚುಮದ್ದನ್ನು ಕೊಟ್ಟರೆ, ತಡೆಯಬಹುದಾಗಿದೆ. |
|
ಟ್ರೈ ಮೆಥಾಇಯೋನ್ (ಟ್ರೈಡಿಯನ್) |
ಮಹಿಳೆಯರಲ್ಲಿ ಗಭ೯ಪಾತವಾಗುವ ಸಾಧ್ಯತೆಗಳಿವೆ, ೭೦% ಹುಟ್ಟುನ್ಯೂನ್ಯತೆಗಳಾಗುವ ಅಪಾಯಗಳಿವೆ, ಉದಾ:- ಬಾಯಿಯ ಅಂಗಳದ ಬಿರುಕು, ಹೄದಯ, ಮುಖ, ಬುರುಡೆ, ಕೈಗಳ ನ್ಯೂನ್ಯತೆ |
|
ವಾಲ್ ಪ್ರೋಯೇಟ (ಡಿಪ್ಯಾಕಾನ್) |
೧% ಹುಟ್ಟು ನ್ಯೂನ್ಯತೆಗಳ ಸಾಧ್ಯತೆ, ಉದಾ:-ಬಾಯಿಯ ಅಂಗಳದ ಬಿರುಕು, ಹೃದಯ, ಮುಖ, ಬುರುಡೆ, ಬೆನ್ನು ಮೂಳೆ ಅಥವಾ ಕೈಕಾಲುಗಳ ನ್ಯೂನ್ಯತೆ. |
ಆಂಟಿಹೈಪೆರಟೆನ್ಸಿವ್ಸ (ಅತೀವ ರಕ್ತದೊತ್ತಡ ರೋಧಕಗಳು) |
ಆಂಟಿಯೋಟೆನ್ ಸಿನ್ ಕನವಟಿ೯೦ಗ್ ಎಂಝೂಯಿಮ್ ಇನ್ ಹಿಬಿಟರ(ಎ.ಸಿ.ಇ.) |
ಗಭಾ೯ವಸ್ಥೆಯ ಕೊನೆಯ ಹಂತದಲ್ಲಿ ಈ ಔಷಧಿಯನ್ನು ಸೇವಿಸಿದಾಗ ಭ್ರೂಣದಲ್ಲಿ ಮೂತ್ರಪಿಂಡಗಳಿಗೆ ಧಕ್ಕೆಯಾಗಬಹುದು, ಭ್ರೂಣದ ಸುತ್ತಮುತ್ತಲಿರುವ ದ್ರವ ಕಡಿಮೆಯಾಗುವುದು, (ಆಮ್ನಿಯಟಿಕ್ ದ್ರವ) ಮತ್ತು ಮುಖ, ಕೈಕಾಲುಗಳು ,ಶ್ವಾಸಕೋಶಗಳ ನ್ಯೂನ್ಯತೆಯನ್ನು ಕಾಣಬಹುದು |
ಆಂಟಿಹೈಪೆರಟೆನ್ಸಿವ್ಸ (ಅತೀವ ರಕ್ತದೊತ್ತಡ ರೋಧಕಗಳು) |
ಬೀಟಾಬ್ಲಾಕರ್ಸ |
ಗಭಾ೯ವಸ್ಥೆಯಲ್ಲಿ ಈ ಔಷಧಿಯನ್ನು ಸೇವಿಸಿದರೆ ಹೃದಯ ಬಡಿತ ಕಡಿಮೆಯಾಗುವುದು, ಭ್ರೂಣದ ರಕ್ತದ ಸಕ್ಕರೆಯ ಮಟ್ಟದಲ್ಲಿ ಕಡಿಮೆಯಾಗುವುದು, ಕಡಿಮೆ ಬೆಳವಣಿಗೆಯನ್ನು ಕಾಣಬಹುದಾಗಿದೆ. |
ಆಂಟಿಹೈಪೆರಟೆನ್ಸಿವ್ಸ (ಅತೀವ ರಕ್ತದೊತ್ತಡ ರೋಧಕಗಳು) |
ಥೈಜಾಯಿಡ್-ಡೈ-ಯುರೆಟಿಕ್ಸ. |
ಭ್ರೂಣದ ರಕ್ತಕಣಗಳಲ್ಲಿಯ ಆಮ್ಲಜನಕ, ಸೋಡಿಯಂ, ಪೊಟ್ಯಾಸಿಯಂಗಳ ಮಟ್ಟದಲ್ಲಿ ಕ್ಷೀನತೆ, ಕಡಿಮೆಯಾದ ಬೆಳವಣಿಗೆಯನ್ನು ಕಾಣಬಹುದು. |
ರಸಾಯನ ಚಿಕಿತ್ಸೆಯ ಔಷಧಿಗಳು ( ಖೆಮೋಥೆರಪಿ) |
ಆಕ್ಟಿನೋಮೈಸಿನ್ |
ಹುಟ್ಟು ನ್ಯೂನ್ಯತೆಗಳ ಸಾಧ್ಯಗಳಿವೆ (ಪ್ರಾಣಿಗಳಲ್ಲಿ ಮಾತ್ರ ಕಾಣಬಹುದಾಗಿದೆ.) |
ರಸಾಯನ ಚಿಕಿತ್ಸೆಯ ಔಷಧಿಗಳು ( ಖೆಮೋಥೆರಪಿ) |
ಬುಸಲ್ಪಾನ್ (ಮೈಲೆರಾನ್) |
ಕೆಳದವಡೆಯ ಕಡಿಮೆ ಬೆಳವಣಿಗೆ , ಸೀಳು ಅಂಗಳ, ಬುರುಡೆಯ ಮೂಳೆಗಳ ಅಸಹಜ ಬೆಳವಣಿಗೆ, ಬೆನ್ನು ಮೂಳೆಯ ನ್ಯೂನ್ಯತೆಗಳು, ಕಿವಿಯ ನ್ಯೂನ್ಯತೆಗಳು ಜೋಡಿದ ಕಾಲುಗಳಂತಹ ಹುಟ್ಟು ನ್ಯೂನ್ಯತೆಗಳನ್ನು ಕಾಣಬಹುದು.) |
ರಸಾಯನ ಚಿಕಿತ್ಸೆಯ ಔಷಧಿಗಳು ( ಖೆಮೋಥೆರಪಿ) |
ಕ್ಲೋರ್ಯಾಂಬುಸಿಲ್(ಲ್ಯೂಕೆರಾನ್) |
ಕೆಳದವಡೆಯ ಕಡಿಮೆ ಬೆಳವಣಿಗೆ , ಸೀಳು ಅಂಗಳ, ಬುರುಡೆಯ ಮೂಳೆಗಳ ಅಸಹಜ ಬೆಳವಣಿಗೆ, ಬೆನ್ನು ಮೂಳೆಯ ನ್ಯೂನ್ಯತೆಗಳು, ಕಿವಿಯ ನ್ಯೂನ್ಯತೆಗಳು ಜೋಡಿಸಿದ ಕಾಲುಗಳಂತಹ ಹುಟ್ಟು ನ್ಯೂನ್ಯತೆಗಳನ್ನು ಕಾಣಬಹುದು. |
ರಸಾಯನ ಚಿಕಿತ್ಸೆಯ ಔಷಧಿಗಳು ( ಖೆಮೋಥೆರಪಿ) |
ಸೈಕ್ಲೋಫಾಸ್ಪೆಮೈಡ್ (ಲೆಯೋಫಿಲೈಜಡ ಸೈಟೋಕ್ಸೈನ್) |
ಕೆಳದವಡೆಯ ಕಡಿಮೆ ಬೆಳವಣಿಗೆ , ಸೀಳು ಅಂಗಳ, ಬುರುಡೆಯ ಮೂಳೆಗಳ ಅಸಹಜ ಬೆಳವಣಿಗೆ, ಬೆನ್ನು ಮೂಳೆಯ ನ್ಯೂನ್ಯತೆಗಳು, ಕಿವಿಯ ನ್ಯೂನ್ಯತೆಗಳು ಜೋಡಿಸಿದ ಕಾಲುಗಳಂತಹ ಹುಟ್ಟು ನ್ಯೂನ್ಯತೆಗಳನ್ನು ಕಾಣಬಹುದು. |
ರಸಾಯನ ಚಿಕಿತ್ಸೆಯ ಔಷಧಿಗಳು ( ಖೆಮೋಥೆರಪಿ) |
ಮರಕ್ಯಾಪ್ಟೊಪ್ಯುರೈನ್(ಪ್ಯೂರಿನೆಥಾಲ್) |
ಕೆಳದವಡೆಯ ಕಡಿಮೆ ಬೆಳವಣಿಗೆ , ಸೀಳು ಅಂಗಳ, ಬುರುಡೆಯ ಮೂಳೆಗಳ ಅಸಹಜ ಬೆಳವಣಿಗೆ, ಬೆನ್ನು ಮೂಳೆಯ ನ್ಯೂನ್ಯತೆಗಳು, ಕಿವಿಯ ನ್ಯೂನ್ಯತೆಗಳು ಜೋಡಿಸಿದ ಕಾಲುಗಳಂತಹ ಹುಟ್ಟು ನ್ಯೂನ್ಯತೆಗಳನ್ನು ಕಾಣಬಹುದು. |
ರಸಾಯನ ಚಿಕಿತ್ಸೆಯ ಔಷಧಿಗಳು ( ಖೆಮೋಥೆರಪಿ) |
ಮೆಥೋಟ್ರಿಕ್ಸೇಟ್ (ಟ್ರೆಕ್ಸಾಲ್) |
ಕೆಳದವಡೆಯ ಕಡಿಮೆ ಬೆಳವಣಿಗೆ , ಸೀಳು ಅಂಗಳ, ಬುರುಡೆಯ ಮೂಳೆಗಳ ಅಸಹಜ ಬೆಳವಣಿಗೆ, ಬೆನ್ನು ಮೂಳೆಯ ನ್ಯೂನ್ಯತೆಗಳು, ಕಿವಿಯ ನ್ಯೂನ್ಯತೆಗಳು ಜೋಡಿಸಿದ ಕಾಲುಗಳಂತಹ ಹುಟ್ಟು ನ್ಯೂನ್ಯತೆಗಳನ್ನು ಕಾಣಬಹುದು. |
|
ವಿನ್ ಬ್ಲಾಸ್ಟಿನ್ |
ಹುಟ್ಟು ನ್ಯೂನ್ಯತೆಗಳ ಸಾಧ್ಯಗಳಿವೆ (ಪ್ರಾಣಿಗಳಲ್ಲಿ ಮಾತ್ರ ಕಾಣಬಹುದಾಗಿದೆ.) |
|
ವಿನ್ ಕ್ರಿಸ್ಟೈನ್ |
ಹುಟ್ಟು ನ್ಯೂನ್ಯತೆಗಳ ಸಾಧ್ಯಗಳಿವೆ (ಪ್ರಾಣಿಗಳಲ್ಲಿ ಮಾತ್ರ ಕಾಣಬಹುದಾಗಿದೆ.) |
ಮೂಡ್-ಸ್ಟೆಬಿಲೈಜಿಂಗ ಔಷಧಿಗಳು (ಮನಸ್ಥಿತಿಯನ್ನು ಶಾಂತಮಾಡುವ) |
ಲೀಥಿಯಂ (ಲೀಥೋಬಿಡ್) |
ಹೃದಯದ-ಹುಟ್ಟು ನ್ಯೂನ್ಯತೆಗಳು, ನಿರುತ್ಸಾಹಿತನ , ಕಡಿಮೆಯಾದ ಸ್ನಾಯುಗಳ ಆರೋಗ್ಯ, ವಿರಳವಾದ ಪೋಷಣೆ, ಥೈರಾಯಿಡ್ ಗ್ರಂಥಿಯ ಕಡಿಮೆ ಕ್ಷಮತೆ, ಮೂತ್ರಪಿಂಡದ ಬಹುಮೂತ್ರ, ಮಧುಮೇಹ ಸಮಸ್ಯೆ ಇತ್ಯಾದಿಗಳನ್ನು ನವಜಾತ ಶಿಶುವಿನಲ್ಲಿ ಕಾಣಬಹುದು. |
ನಾನ್ ಸ್ಟಿರಾಯಡಲ ಎಂಟಿ ಇನಪ್ಲೇಮೇಟರಿ ಔಷಧಿಗಳ (ಎನ್.ಎಸ್.ಎ.ಆಯ್.ಡಿ) |
ಆಸ್ಪ್ರಿನ್ ಮತ್ತು ಇನ್ನಿತರ ಸ್ಯಾಲಿಸ್ಲೇಟಗಳು, ಇಬುಪ್ರೊಫೇನ್ (ಆಡ್ವಿಲ್ ಮೊಟ್ರಿನ್) ನ್ಯಾಪ್ರೊಕ್ಷನ್ (ಆಲಿವಿಯನಾಪ್ರೊಕ್ಸ್ನಾಪ್ರೊಸಿನ್) |
ಈ ಔಷಧಿಯನ್ನು ಬಹಳ ಪ್ರಮಾಣದಲ್ಲಿ ಸೇವಿಸಿದಾಗ ಪ್ರಸವ ತಡವಾಗುವುದು, ಆಯೋರ್ಟಾ ಮತ್ತು ರಕ್ತನಾಳಗಳ ಜೋಡಣೆಯು ಸಮಯಕ್ಕೆ ಮುಂಚಿತವಾಗಿ ಮುಟ್ಟಿಹೋಗುವುದು,(ಡಾಕ್ಟಸ್ ಆರಡೀರಿಯೊಸಸ್) ಕಾಮಲೆ, ಭ್ರೂಣದ ಮೆದುಳಿಗೆ ಧಕ್ಕೆ ರಕ್ತಸ್ರಾವದ ತೊಂದರೆಗಳನ್ನು ನವಜಾತ ಶಿಶುಗಳಲ್ಲಿ ಕಾಣಬಹುದು. ಈ ಔಷಧಿಯನ್ನು ಗಭಾ೯ವಸ್ಥೆಯ ಕೊನೆಯ ಹಂತದಲ್ಲಿ ಸೇವಿಸಿದಾಗ ಬೆಳೆಯುತ್ತಿರುವ ಭ್ರೂಣದ ಸುತ್ತಮುತ್ತಲಿನ ದ್ರವದ ಮಟ್ಟ ಕಡಿಮೆಯಾಗುವುದು. |
ಸೇವಿಸುವಂತಹ ಔಷಧಿಗಳು ಆಂಟಿಹೈಪರಗ್ಲಿಸೆಮಿಕ್. |
ಕ್ಲೊರಪ್ರೊಪಮೈಡ್ (ಡೈಯಬಿನೀಸ್) |
ನವಜಾತ ಶಿಶುವಿನಲ್ಲಿ ಅತೀ ಕಡಿಮೆಯಾದ ರಕ್ತದ ಸಕ್ಕರೆಯ ಮಟ್ಟ, ಗಭ೯ಸ್ಥ ಮಹಿಳೆಯಲ್ಲಿ ಮಧುಮೇಹದ ಸಾಲದಿರುವ ನಿಯಂತ್ರಣ, ಮಧುಮೇಹವಿರುವ ಗಭ೯ಸ್ಥ ಮಹಿಳೆ ಈ ಔಷಧಿಯನ್ನು ಸೇವಿಸಿದಾಗ ಹುಟ್ಟು ನ್ಯೂನ್ಯತೆಯ ಹಚ್ಚಿದ ಅಪಾಯಗಳ ಸಾಧ್ಯತೆಗಳಿವೆ. |
|
ಟೊಲ್ಬುಟೆಮಾಯಿಡ್ |
ನವಜಾತ ಶಿಶುವಿನಲ್ಲಿ ಅತೀ ಕಡಿಮೆಯಾದ ರಕ್ತದ ಸಕ್ಕರೆಯ ಮಟ್ಟ, ಗಭ೯ಸ್ಥ ಮಹಿಳೆಯಲ್ಲಿ ಮಧುಮೇಹದ ಸಾಲದಿರುವ ನಿಯಂತ್ರಣ, ಎರಡನೆ ತಂದ ಮಧುಮೇಹವಿರುವ ಗಭ೯ಸ್ಥ ಮಹಿಳೆ ಈ ಔಷಧಿಯನ್ನು ಸೇವಿಸಿದಾಗ ಹುಟ್ಟು ನ್ಯೂನ್ಯತೆಯ ಹಚ್ಚಿದ ಅಪಾಯಗಳ ಸಾಧ್ಯತೆಗಳಿವೆ. |
ಲೈಂಗಿಕ ಪುಷ್ಟಿಕಾರಕ ಸತ್ವಗಳ ಔಷಧಿಗಳು(ಸೆಕ್ಸ್ ಹಾರ್ಮೋನ್ಸ್) |
ಡೆನಾಝೋಲ್ |
ಗಭಾ೯ವಸ್ಥೆಯ ಮೊದಲಿನ ದಿನಗಳಲ್ಲಿ ಈ ಔಷಧಿಯನ್ನು ಸೇವಿಸಿದಾಗ ಹೆಣ್ಣು ಭ್ರೂಣದ ಲಿಂಗಾಂಗ ಗಂಡು ಲಿಂಗವಾಗುವ ಸಾಧ್ಯತೆಯಿದೆ. ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯ ಅವಶ್ಯಕವಾಗಬಹುದು. |
|
ಸಿಂಥೆಟಿಕ್ ಪ್ರೊಜೆಸ್ಟಿನ್ಸ್(ಕಡಿಮೆ ಮಾತ್ರೆಯಲ್ಲಿರುವ ಸೇವಿಸುವಂತಹ ಗಭ೯ನಿರೋಧಕಗಳನ್ನು ಹೊರತುಪಡಿಸಿ) |
ಗಭಾ೯ವಸ್ಥೆಯ ಮೊದಲಿನ ದಿನಗಳಲ್ಲಿ ಈ ಔಷಧಿಯನ್ನು ಸೇವಿಸಿದಾಗ ಹೆಣ್ಣು ಭ್ರೂಣದ ಲಿಂಗಾಂಗ ಗಂಡು ಲಿಂಗವಾಗುವ ಸಾಧ್ಯತೆಯಿದೆ. ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯ ಅವಶ್ಯಕವಾಗಬಹುದು. |
|
ಡೈಈಥೈಲಸ್ಟಿಲ್ ಬೆಸ್ಟ್ರಾಲ್(ಡಿ.ಇ.ಎಸ್) |
ಹೆಣ್ಣು ಮಕ್ಕಳಲ್ಲಿ ಗಭಾ೯ಶಯದ ಅತಿರೇಕಗಳು, ಋತುಶ್ರಾವದ ತೊಂದರೆಗಳು, ಯೋನಿ ಕ್ಯಾನ್ಸರನ ಅಪಾಯಗಳು, ಗಭ೯ಧರಿಸುವ ತೊಂದರೆಗಳನ್ನು ಕಾಣಬಹುದು. ಗಂಡು ಮಕ್ಕಳಲ್ಲಿ ಶಿಶ್ನದ ಅತಿರೇಕಗಳು ಇರಬಹುದು. |
ಚಮ೯ದ ಚಿಕಿತ್ಸೆಗಳು |
ಎಟ್ರೆಟಿನೇಟ್ |
ಹೃದಯದ ತೊಂದರೆಗಳು, ಸಣ್ಣ ಕಿವಿಗಳು, ಮೆದುಳಿಗೆ ಸಂಬಂಧಿಸಿದ ಹುಟ್ಟು ನ್ಯೂನ್ಯತೆಗಳನ್ನು ಕಾಣಬಹುದು. |
|
ಆಯಿಸೋಟ್ರೆಡಿನೊಯಿನ್ (ಅಕ್ಯುಟೇನ್) |
|
ಥೈರಾಯಿಡ್ ಔಷಧಿಗಳು |
ಮಥ್ಮಾಝೋಲ್ (ಟ್ಯಾಪಾಝೋಲ್) |
ಭ್ರೂಣದ ಥೈರಾಯಿಡ್ ಗ್ರಂಥಿಯ ಊತ ಅಥವಾ ಕ್ಷೀನಿಸಿದ ಕ್ಷಮತೆ,ನವಜಾತ ಶಿಶುವಿನಲ್ಲಿ ತಲೆಯ ಚಮ೯ದ ನ್ಯೂನ್ಯತೆಗಳು. |
|
ಪ್ರಾಪಿಲಥಿಯೋಯುರಾಸಿಲ್ |
ಭ್ರೂಣದ ಥೈರಾಯಿಡ್ ಗ್ರಂಥಿಯ ಊತ ಅಥವಾ ಕ್ಷೀಣಿಸಿದ ಕ್ಷಮತೆ |
|
ರೇಡಿಯೋ ಎಕ್ವಿವ್ ಆಯೋಡಿನ್ |
ಭ್ರೂಣದ ಥೈರಾಯಿಡ್ ಗ್ರಂಥಿಯ ನಾಶ, ಅತಿ ಚುರುಕಾದ ಮತ್ತು ಊತ ಡೈರಾಯಿಡ್ ಗ್ರಂಥಿ(ಮೊದಲ ಮೂರು ತಿಂಗಳ ಕೊನೆಯಲ್ಲಿ ಈ ಔಷಧಿಯನ್ನು ಸೇವಿಸಿದಾಗ) |
|
ಟ್ರೈಆಯೋಡೋಥೈರೋನೈನ(ಥೈರೋಲಾರ) |
ಭ್ರೂಣದ ಥೈರಾಯಿಡ್ ಗ್ರಂಥಿಯ ಅತಿ ಚುರುಗಾಗುವಿಕೆ ಮತ್ತು ಊತ. |
ಲಸಿಕೆಗಳು( ಜೀವಂತ ವೈರಾಣು) |
ಜಮ೯ನ್ ಸಿಡುಬುರೋಗ (ರುಬೆಲ್ಲಾ) ಮತ್ತು ಚಿಕ್ಕಮ್ಮ ರೋಗ(ವೇರಿಸೆಲ್ಲಾ)ಗಳ ಲಸಿಕೆಗಳು. |
ಬೆಳೆಯುತ್ತಿರುವ ಭ್ರೂಣದ ಮತ್ತು ಗಭ೯ವೇಷ್ವನದ ಸೋಂಕು ಬರುವ ಸಾಧ್ಯತೆ. |
|
ಸಿಡುಬು, ಹಳದಿಜ್ವರ, ಮಂಗನಬಾವು ಮತ್ತು ಪೋಲಯೋ ರೋಗಗಳ ಲಸಿಕೆಗಳು |
ಅತೀಶಕ್ಯದ ಅಪಾಯಗಳು ಆದರೆ ಅವುಗಳ ಗಂಡಾಂತರಗಳು ಗೊತ್ತಿಲ್ |
ಗಭಾ೯ವಸ್ಥೆಯಲ್ಲಿ ಔಷಧಗಳ ಪೂಣ೯ ಪ್ರಮಾಣದ ಅವಶ್ಯಕತೆ ಆಗುವವರೆಗೆ ಯಾವುದೇ ಔಷಧಿಯನ್ನು ಬಳಸಲೇಬಾರದು. ಏನೇ ಆದರೂ ಕೆಲವು ಸಲ ಗಭ೯ಸ್ಥ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣದ ಆರೋಗ್ಯಕ್ಕೆ ಔಷಧಿಗಳ ಅವಶ್ಯಕತೆ ಇರುತ್ತದೆ. ಇಂತಹ ಸಂದಭ೯ಗಳಲ್ಲಿ ಮಹಿಳೆಯು ತನ್ನ ಆರೋಗ್ಯದ ಕುರಿತು ವೈದ್ಯರ ಜೊತೆಗೆ ಔಷಧಗಳ ಅಪಾಯಗಳು ಮತ್ತು ಉಪಯೋಗಗಳ ಬಗ್ಗೆ ಚಚೆ೯ ಮಾಡಬೇಕು. ಮೂಲ: ಪೋರ್ಟಲ್ ತಂಡ |
ಕೊನೆಯ ಮಾರ್ಪಾಟು : 10/14/2019
ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿ...
ಆರೋಗ್ಯ ದಿನಚರಿ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.
ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆ...
ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಆದರೆ ಆರೋಗ್ಯ ದಿನವು ...