ಹೆರಿಗೆ ನೋವೆಂದರೆ ಅದೊಂದು ಅತೀವ ವೇದನೆ. ಈ ನೋವಿನ ಬಳಿಕ ಮಗುವಿನ ಮುಖವನ್ನು ನೋಡಿದಾಗ ಸಿಗುವ ಸಂತೋಷವೇ ಬೇರೆ. ಆದರೆ ಸಂತಸದಂತೆ ಕೆಲವೊಮ್ಮೆ ಭಾವನಾತ್ಮಕ ಹಾಗೂ ದೈಹಿಕವಾಗಿ ಕೆಲವು ಅನಾನುಕೂಲ ಹಾಗೂ ನಿತ್ರಾಣವಾಗುವಂತಹ ಪರಿಸ್ಥಿತಿ ಬರುತ್ತದೆ. ಹಿಂದಿನ ಉಡುಪುಗಳಿಗೆ ನಿಮ್ಮ ದೇಹ ಹೊಂದಿಕೊಳ್ಳುತ್ತದೆಯಾ ಎನ್ನುವುದನ್ನು ಚಿಂತಿಸಬೇಕಾಗುತ್ತದೆ.
ನೀವು ಹೆರಿಗೆ ಬಳಿಕದ ಮೊದಲ ಕೆಲವು ವಾರಗಳಲ್ಲಿ ಆಗುವ ದೈಹಿಕ ಏರುಪೇರುಗಳಿಗೆ ತಯಾರಾಗಿರಬೇಕಾಗುತ್ತದೆ. ಮಗುವಿಗೆ ಜನ್ಮ ನೀಡಿದ ಬಳಿ ದೈಹಿಕ ಹಾಗೂ ಭಾವನಾತ್ಮಕವಾಗಿ ಕೆಲವೊಂದು ಬದಲಾವಣೆಗಳಾಗುತ್ತದೆ.
ಹೆರಿಗೆಯ ನಂತರ ಪ್ರತಿಯೊಂದು ಸ್ತ್ರೀ ಈ ದೈಹಿಕ ಬದಲಾವಣೆಗೆ ಹೊಂದಿಕೊಳ್ಳಬೇಕಾಗುತ್ತದೆ:
ನಿಮ್ಮ ಸ್ತನಗಳು ಮೊದಲ ಕೆಲವು ದಿನ ಹಾಲು ಬರುವಾಗ ನೋವಾಗಬಹುದು. ಸ್ತನದ ತೊಟ್ಟು ಕೂಡ ನೋಯುತ್ತಿರಬಹುದು.
ರಕ್ತ ಸ್ರಾವದ ನಂತರದ ಕೆಲವು ದಿನ ಕರುಳಿನ ಚಲನೆಗಳು ಬದಲಾಗಬಹುದು. ಸೂಕ್ಷ್ಮ ಮೂಲವ್ಯಾಧಿ, ಅಪಿಜಿಟಮಿ ಮತ್ತು ಸ್ನಾಯು ಸೆಳೆತ ನೋವನ್ನು ಉಂಟು ಮಾಡುತ್ತದೆ.
ನಿಮ್ಮ ಮೂಲಾಧಾರವನ್ನು(ಯೋನಿ ಮತ್ತು ಗುದದ ನಡುವಿನ ಚರ್ಮದ ಪ್ರದೇಶ) ವೈದ್ಯರು ತುಂಡರಿಸಿದ್ದರೆ ಅಥವಾ ಹೆರಿಗೆ ವೇಳೆ ಇದು ಹರಿದು ಅದನ್ನು ಹೊಲಿದಿದ್ದರೆ ಇದು ವಾಸಿಯಾಗುವ ತನಕ ಕುಳಿತುಕೊಳ್ಳುವಾಗ ಅಥವಾ ನಡೆಯುವಾಗ ತುಂಬಾ ನೋವಾಗುತ್ತದೆ. ಕೆಮ್ಮುವಾಗ ಅಥವಾ ಸೀನುವಾಗಲೂ ಇದು ನೋವಾಗುತ್ತದೆ.
ಇದು ಸಾಮಾನ್ಯ. ಮೂಲವ್ಯಾಧಿ(ಗುದನಾಳದಲ್ಲಿ ಊದಿಕೊಂಡ ರಕ್ತನಾಳಗಳು) ಆಗಾಗ ಅನಿರೀಕ್ಷಿತವೂ ಆಗಿರುತ್ತದೆ.
ಹೊಸ ಹಾರ್ಮೋನ್ ಮತ್ತು ರಕ್ತಕ್ಕೆ ನಿಮ್ಮ ದೇಹ ಹೊಂದಿಕೊಳ್ಳುವಾಗ ಆಂತರಿಕ ಥರ್ಮೊಸ್ಪಾಟ್ ಗೆ ತೊಂದರೆಯಾಗಬಹುದು.
ಹೆರಿಗೆ ವೇಳೆ ನಿಮ್ಮ ಸ್ನಾಯುಗಳು ಎಳೆತಕ್ಕೊಳಗಾಗುವುದರಿಂದ ಕೆಮ್ಮುವಾಗ, ನಗುವಾಗ ನಿಮಗರಿವಿಲ್ಲದಂತೆ ಮೂತ್ರ ವಿಸರ್ಜನೆಯಾಗಬಹುದು ಅಥವಾ ಮಲವಿಸರ್ಜನೆಯನ್ನು ತಡೆದುಕೊಳ್ಳಲು ಕಷ್ಟವಾಗಬಹುದು. ಹೆರಿಗೆ ವೇಳೆ ತುಂಬಾ ದೀರ್ಘ ಸಮಯ ಬೇಕಾದರೆ ಇಂತಹ ಸಮಸ್ಯೆ ಕಾಡುತ್ತದೆ.
ಹೆರಿಗೆ ಬಳಿಕ ಕೆಲವು ದಿನಗಳ ಕಾಲ ಗರ್ಭಕೋಶದಲ್ಲಿ ಕುಗ್ಗುವಿಕೆ ಉಂಟಾಗುತ್ತದೆ. ರಕ್ತಸ್ರಾವ ಕಡಿಮೆ ಮಾಡಲು ಔಷಧಿಗಳನ್ನು ನೀಡಲಾಗಿದ್ದರೆ ಇದು ಸಹಜ.
ಅವಧಿಯ ಆರಂಭದಲ್ಲಿ ತೂಕ ಮತ್ತು ಹೆಚ್ಚಾಗಿ ಹೆಪ್ಪುಗಟ್ಟಿಸುವ ಯೋನಿಯಿಂದ ಬಿಳಿ ಅಥವಾ ಹಳದಿ ಕ್ರಮೇಣ ಮಂಕಾಗಿ ಅನೇಕ ವಾರಗಳಲ್ಲಿ ಇದು ನಿಲ್ಲುತ್ತದೆ. ಭಾರ: ನಿಮ್ಮ ದೇಹದ ತೂಕಕ್ಕಿಂತ ಪ್ರಸವಾನಂತರದ ತೂಕ ಸುಮಾರು 12ರಿಂದ 13 ಪೌಂಡ್(ಮಗುವಿನ ತೂಕ, ಪ್ಲಾಸೆಟ್ ಮತ್ತು ಆಮ್ನಿಯೋಟಿಕ್ ದ್ರವ ಕಳಕೊಂಡು) ಕಡಿಮೆಯಾಗುತ್ತದೆ. ಹೆಚ್ಚುವರಿ ನೀರಿನ ತೂಕ ಮೊದಲ ವಾರದಲ್ಲೇ ಕಡಿಮೆಯಾಗಿ ನಿಮ್ಮ ದೇಹ ಸಮತೋಲನಕ್ಕೆ ಬರುತ್ತದೆ.
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 7/17/2019
ವಿಶ್ವ ಆರೋಗ್ಯ ಸಂಸ್ಥೆಯು ಹದಿಹರೆಯವನ್ನು ವಯೋಮಾನಕ್ಕೆ ಅನುಗ...
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಸವಾನಂತರದ ಸೋಂಕು ನೇರವಾಗಿ ಹೆರಿಗೆಯ ಕಾರಣದಿಂದಲೆ ಬರಬಹುದು ...
ಪ್ರಸವಾನಂತರದ ಖಿನ್ನತೆ ಎಂದರೆ ಹೆರಿಗೆಯಾದ ಕೆಲವು ವಾರಗಳ ನಂ...