ಹೌದು, ಗರ್ಭಿಣಿಯಾಗಿರುವಾಗ ಮೂಗಿನಲ್ಲಿ ರಕ್ತ ಸೋರುವುದು ಸಾಮಾನ್ಯ. ಗರ್ಭಧಾರಣೆಯು ನಿಮ್ಮ ಮೂಗಿನಲ್ಲಿರುವ ರಕ್ತ ನಾಳಗಳು ಹಿಗ್ಗುವಂತೆ ಮಾಡುತ್ತದೆ ಮತ್ತು ಆ ಸೂಕ್ಷ್ಮವಾದ ನಾಳಗಳ ಮೇಲೆ ಒತ್ತಡ ಸಹ ಹಾಕುತ್ತದೆ. ಇದರಿಂದಾಗಿ ಅವು ಹೊಡೆದು ರಕ್ತ ಸೋರುತ್ತವೆ. ಇದು ನಿಮಗೆ ಅಸೌಖ್ಯವನ್ನುಂಟು ಮಾಡಬಹುದು ಮತ್ತು ಅಹಿತಕರವಾಗಿರಬಹುದು. ಆದರೆ ಯಾವಾಗಲೋ ಒಮ್ಮೆ ಮೂಗಿನಲ್ಲಿ ರಕ್ತ ಸೋರುವುದು ಅಪಾಯಕಾರಿಯಲ್ಲ.
ನಿಮಗೆ ಶೀತವಾಗಿದ್ದಾಗ, ಸೈನಸ್ ಇನ್‍ಫೆಕ್ಷನ್ ಅಥವಾ ಅಲರ್ಜಿಗಳು ಇದ್ದಾಗ ಮೂಗಿನಲ್ಲಿ ರಕ್ತ ಸೋರಬಹುದು. ಅಥವಾ ನಿಮ್ಮ ಮೂಗಿನ ಒಳಗಿನ ಪೊರೆಗಳು ಶೀತ ಹವಾಮಾನ, ಏರ್-ಕಂಡೀಶನ್ ರೂಮ್, ಏರ್‌ಲೈನ್ ಕ್ಯಾಬಿನ್ ಮುಂತಾದ ಒಣ ಪ್ರದೇಶಗಳ ಕಾರಣವಾಗಿ ಮತ್ತು ಗಾಯ ಹಾಗು ಇನ್ನಿತರ ವೈಧ್ಯಕೀಯ ಕಾರಣಗಳ ಸಲುವಾಗಿ ಮೂಗು ಒಣಗಿದ್ದರೆ ಮತ್ತು ಅಧಿಕ ರಕ್ತದೊತ್ತಡ ಮತ್ತು ಬಟ್ಟೆಯ ಡಿಸಾರ್ಡರ್ ನಿಮಗೆ ಇದ್ದರೆ ಮೂಗಿನಲ್ಲಿ ರಕ್ತಸ್ರಾವವಾಗಬಹುದು.
ಮೂಗಿನಲ್ಲಿ ರಕ್ತಸ್ರಾವವನ್ನು ಹೇಗೆ ತಡೆಯುವುದು? ನಿಮ್ಮ ಮೂಗಿನಲ್ಲಿ ಯಾವಾಗ ಕ್ತಸ್ರಾವವಾಗುವುದೋ, ಆಗ ನಿಮ್ಮ ಮೂಗನ್ನು ಹೃದಯ ಎತ್ತರಕ್ಕಿಂತ ಮೇಲೆ ಇಡಿ. ರಕ್ತಸ್ರಾವವಾಗುವ ಮೂಗಿನ ಹೊಳ್ಳೆಯ ಮೇಲೆ ಐದು ನಿಮಿಷಗಳ ಒತ್ತಡ ಬಿಡಿ. (ಇದಕ್ಕಾಗಿ ಒಂದು ಗಡಿಯಾರವನ್ನು ಬಳಸಬಹುದು).
ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳನ್ನು ರಕ್ತಸ್ರಾವವಾಗುತ್ತಿರುವ ಮೂಗಿನ ಮೃದುವಾದ ಭಾಗದ ಮೇಲೆ ಹಿಂಡಿ. ಒಂದು ಸೆಕೆಂಡ್ ಸಹ ಇದನ್ನು ಬಿಡಬೇಡಿ. ಏಕೆಂದರೆ ರಕ್ತ ಸ್ರಾವ ನಿಂತಿತೆ ಇಲ್ಲವೆ ಎಂಬ ಕುತೂಹಲ ನಿಮಗೆ ಇರುತ್ತದೆ. ಆಗಲೂ ಸಹ ಕುತೂಹಲಕ್ಕು ಸಹ ಇದನ್ನು ಸುಮ್ಮನೆ ಬಿಡಬೇಡಿ. ನೀವು ಹೀಗೆ ಮಾಡುವುದರಿಂದ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ.
ರಕ್ತ ಸೋರುತ್ತಿರುವ ಮೂಗಿನ ಹೊಳ್ಳೆಯ ಮೇಲೆ ಮಂಜುಗಡ್ಡೆ ಇಡುವುದರಿಂದ ಸಹ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಇದು ರಕ್ತವನ್ನು ಹೆಪ್ಪುಗಟ್ಟಿಸುವ ಕೆಲಸವನ್ನು ಮಾಡುತ್ತದೆ. ಮೂಗು ಮತ್ತು ಕೆನ್ನೆಯ ನಡುವೆ ಈ ಪ್ಯಾಕನ್ನು ಇಡಿ, ಯಾವುದೇ ಕಾರಣಕ್ಕು ಮಲಗಬೇಡಿ. ಮಲಗಿದರೆ ರಕ್ತವನ್ನು ನೀವು ನುಂಗುವ ಸಾಧ್ಯತೆ ಇರುತ್ತದೆ. ಆಗ ನಿಮಗೆ ವಾಂತಿ ಸಂಭವಿಸುವ ಸಾಧ್ಯತೆ ಇರುತ್ತದೆ.
ಒಂದು ವೇಳೆ ರಕ್ತ ಸ್ರಾವವು ಹತ್ತು ನಿಮಿಷವಾದರು ನಿಲ್ಲಲಿಲ್ಲವಾದರೆ, ಮತ್ತೊಮ್ಮೆ ಐಸ್ ಪ್ಯಾಕ್ ಇಡಿ. ಒಂದು ವೇಳೆ ರಕ್ತ ಸ್ರಾವ ಹೆಚ್ಚಿದ್ದು 20 ನಿಮಿಷ ಆದರೂ ನಿಲ್ಲಲಿಲ್ಲವಾದಲ್ಲಿ ನಿಮ್ಮ ವೈದ್ಯರನ್ನು ತಡಮಾಡದೆ ಭೇಟಿ ಮಾಡಿ. ಒಂದು ವೇಳೆ ತಲೆಗೆ ಗಾಯ ಬಿದ್ದು ಮೂಗಿನಲ್ಲಿ ರಕ್ತಸ್ರಾವವಾದರೆ, ಅದು ಸಣ್ಣ ಪ್ರಮಾಣದ ರಕ್ತಸ್ರಾವವಾಗಿದ್ದರು ಸಹ ಅದನ್ನು ಉದಾಸೀನ ಮಾಡದೆ ನಿಮ್ಮ ವೈದ್ಯರಿಗೆ ತಿಳಿಸಿ. ಆಗ ಅವರಿಗೆ ನಿಮ್ಮ ಮೂಗಿನ ರಕ್ತಸ್ರಾವಕ್ಕೆ ನಿಖರ ಕಾರಣ ತಿಳಿಯಲು ಅನುಕೂಲವಾಗುತ್ತದೆ.
ಮೂಗಿನ ರಕ್ತಸ್ರಾವ ನಿಲ್ಲಿಸಲು ಏನಾದರು ಉಪಾಯ ಮಾಡಬಹುದೇ? *ಹೆಚ್ಚು ನೀರು ಕುಡಿಯಿರಿ, ಆಗ ನಿಮ್ಮ ಎಲ್ಲಾ ನಾಸಿಕ ಪೊರೆಗಳಿಗೆ ನೀರಿನಂಶ ದೊರೆಯುತ್ತದೆ. ನಿಧಾನವಾಗಿ ನಿಮ್ಮ ಮೂಗಿನಿಂದ ಗಾಳಿಯನ್ನು ಸೀನಿ. ಜೋರಾಗಿ ಮಾಡಬೇಡಿ. ಇದರಿಂದ ರಕ್ತಸ್ರಾವ ಹೆಚ್ಚಾಗಬಹುದು. *ಸೀನು ಬಂದಾಗ ನಿಮ್ಮ ಬಾಯಿಯನ್ನು ತೆರೆದಿಡಲು ಪ್ರಯತ್ನಿಸಿ. *ಆದಷ್ಟು ಒಣಗಾಳಿಯಲ್ಲಿ ಓಡಾಡಬೇಡಿ. ವಿಶೇಷವಾಗಿ ಚಳಿಗಾಲ ಅಥವಾ ಒಣ ಹವಾಮಾನದಲ್ಲಿ ಎಚ್ಚರಿಕೆಯಿಂದ ಇರಿ. ಮನೆಯಲ್ಲಿ ಹ್ಯುಮಿಡಿಫೈರ್ ಅಥವಾ ಹೀಟರ್ ಹೆಚ್ಚು ಬಳಸಬೇಡಿ. ಧೂಮಪಾನ ಮಾಡಬೇಡಿ, ಮಾಡುವವರಿಂದ ದೂರವಿರಿ.
ನಾಸಿಕಗಳ ಒಣಗುವಿಕೆಯನ್ನು ತಡೆಯಲು ಲೂಬ್ರಿಕೆಂಟ್ ಬಳಸಿ. ಕೆಲವು ತಜ್ಞರು ಇದಕ್ಕಾಗಿ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಲು ಸೂಚಿಸುತ್ತಾರೆ. ಇನ್ನೂ ಕೆಲವರು ವಿಶೇಷವಾದ ಮೂಗಿನ ಲೂಬ್ರಿಕೆಂಟ್ ಬಳಸಲು ತಿಳಿಸುತ್ತಾರೆ. ಇದು ಔಷಧಿ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಸಲೈನ್ ನಾಸಲ್ ಸ್ಪ್ರೇಗಳು ಸಹ ಲಭ್ಯವಿರುತ್ತವೆ. ಇವು ಸಹ ನಿಮಗೆ ಸಹಕಾರಿ, ಆದರೆ ಈ ಔಷಧಿಗಳನ್ನು ಅಧಿಕವಾಗಿ ಬಳಸಬೇಡಿ. ಏಕೆಂದರೆ ಇವುಗಳು ನಿಮ್ಮ ಮೂಗನ್ನು ಮತ್ತಷ್ಟು ಒಣಗಿಸಿಬಿಡುತ್ತವೆ.
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 4/27/2020
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...
ಈ ದಿನಗಳಲ್ಲಿ ನಾರ್ಮಲ್ ಡೆಲಿವರಿ ತುಂಬಾ ಅಪರೂಪವಾಗುತ್ತದೆ. ...
ಆಶಾಳ ಕರ್ತವ್ಯ ಮತ್ತು ಜವಾಬ್ದಾರಿಗಳು