ಮಹಿಳೆಗೆ ಒಲಿಗೋ ಹೈಡ್ರಾಮ್ನಿಯಾಸ್ ಆಗಿದ್ದರೆ ಮಗುವನ್ನು ಸುತ್ತುವರಿದ ಆಮ್ನಿಯಾಟಿಕ್ ದ್ರವವು ತುಂಬಾ ಕಡಿಮೆ ಇರುವುದು. ಇದು ಹೇಗೆ ನಿಮ್ಮ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂಬುದನ್ನು ತಿಳಿಯಲು, ಆಮ್ನಿಯಾಟಿಕ್ ದ್ರವವು ಆರೋಗ್ಯ ಪೂರ್ಣ ಗರ್ಭದಲ್ಲಿ ವಹಿಸುವ ಪಾತ್ರವನ್ನು ಅರಿಯುವುದು ಮುಖ್ಯ.
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತದೆ. ಈ ವರ್ಣರಹಿತ ದ್ರವವು ಮಗುವನ್ನು ರಕ್ಷಿಸುವುದು ಮತ್ತು ಅದಕ್ಕೆ ದ್ರವವನ್ನು ಒದಗಿಸುವುದು. ಮಗುವು ದ್ರವವನ್ನು ಸೇವಿಸುವ ಮೂಲಕವೇ ಉಸಿರಾಟ ನಡೆಸುವುದು. ಇದು ಮಗುವಿನ ಶ್ವಾಸಕೋಶ ಜೀರ್ಣಾಂಗಗಳನ್ನು ಬಲವಾಗಿಸುವುದು. ಇದು ಮಗುವು ಸರಾಗವಾಗಿ ಚಲಿಸಲು ಮತ್ತು ಅದರ ಸ್ನಾಯು ಮತ್ತು ಮೂಳೆಗಳ ಅಭಿವೃದ್ಧಿಗೆ ಕಾರಣವಾಗಿದೆ.
ಮಗುವನ್ನು ಹೊಂದಿರುವ ಈ ಆಮ್ನಿಯಾಟಿಕ್ ಚೀಲದ ರಚನೆಯು ಗರ್ಭಧಾರಣೆಯ ೧೨ನೇ ದಿವಸದಿಂದಲೇ ಪ್ರಾರಂಭವಾಗುತ್ತದೆ. ಆಗ ಆಮ್ನಿಯಾಟಿಕ್ ದ್ರವವು ಉತ್ಪಾದನೆಯಾಗುತ್ತದೆ. ಬಸಿರಿನ ಆರಂಭದ ವಾರಗಳಲ್ಲಿ ಈ ದ್ರವವು ಮುಖ್ಯವಾಗಿ ತಾಯಿ ಒದಗಿಸಿದ ನೀರಿನಿಂದ ಆಗಿರುತ್ತದೆ. ೧೨ ವಾರದ ನಂತರ ಇರುವ ಆಮ್ನಿಯಾಟಿಕ್ ದ್ರವವು ಬಹುಮಟ್ಟಿಗೆ ಮಗುವಿನ ಮೂತ್ರದಿಂದ ಆಗಿರುತ್ತದೆ. ಗರ್ಭಧಾರಣೆಯ ೨೮- ೩೨ನೇ ವಾರದ ವರೆಗೆ ಆಮ್ನಿಯಾಟಿಕ್ ದ್ರವದ ಪ್ರಮಾಣವು ಹೆಚ್ಚುತ್ತಾ ಇರುತ್ತದೆ. ಆ ಸಮಯದಲ್ಲಿ ಒಂದು ಕ್ವಾರ್ಟರ್ ದ್ರವವಿರುತ್ತದೆ. ಅದಾದ ಮೇಲೆ ೩೭ ರಿಂದ ೪೦ ವಾರದವರೆಗೆ ಅದೇ ಮಟ್ಟದಲ್ಲಿರುತ್ತದೆ. ಆಗ ಮಗುವು ಪೂರ್ಣಾವಧಿಯನ್ನು ಮುಗಿಸಿದೆ ಎನ್ನಬಹುದು. ಅದಾದ ನಂತರ ದ್ರವದ ಪ್ರಮಾಣವು ಕಡಿಮೆಯಾಗುತ್ತದೆ.
ಒಲಿಗೋ ಹೈಡ್ರಾಮ್ನಿಯಾಸ್ (ಅತಿ ಕಡಿಮೆ ದ್ರವದ ಸ್ಥಿತಿ) ಯು ೧೦೦ ಜನರಲ್ಲಿ ೮ ಮಂದಿಗೆ ಆಗುವುದು. ಇದು ಮೊದಲ ತ್ರೈಮಾಸಿಕದಲ್ಲಿ ಸಾಮಾನ್ಯ ಮಟ್ಟದಲ್ಲಿರುವುದು. ಆದರೆ ಯಾವಾಗಬೇಕಾದರೂ ಬರಬಹುದು. ಸುಮಾರು ೮ ಮಹಿಳೆಯರಲ್ಲಿ ಒಬ್ಬರಿಗೆ ಅವಧಿ ಪೂರ್ಣವಾದ ಎರಡು ವಾರದ ನಂತರ ಒಲಿಗೋ ಹೈಡ್ರಾಮ್ನಿಯಾಸ್ ಬರುವುದು. ಆ ಅವಧಿಯಲ್ಲಿ ಆಮ್ನಿಯಾಟಿಕ್ ದ್ರವವು ಕಡಿಮೆಯಾಗುವುದು.
ಒಲಿಗೋ ಹೈಡ್ರಾಮ್ನಿಯಾಸ್ ಅನ್ನು ಅಲ್ಟ್ರಾಸೌಂಡ್‌ನಿಂದ ಪತ್ತೆ ಹಚ್ಚಬಹುದು. ಇದಕ್ಕೆ ಕಾರಣ ಪೂರ್ತಿಯಾಗಿ ತಿಳಿದಿಲ್ಲ. ಬಹುತೇಕ ಗರ್ಭಿಣಿ ಸ್ತ್ರೀಯರು ಮಹಿಳೆಯರು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಒಲಿಗೋ ಹೈಡ್ರಾಮ್ನಿಯಾಸ್ ನಿಂದ ಬಳಲುತ್ತಾರೆ.
ಮೊದಲ ಹಂತದ ಬಸಿರಿನಲ್ಲಿ ಒಲಿಗೋ ಹೈಡ್ರಾಮ್ನಿಯಾಸ್‌ಗೆ ಅತಿ ಮುಖ್ಯ ಕಾರಣಗಳೆಂದರೆ
ಮೂತ್ರಪಿಂಡ ಮತ್ತು ಮೂತ್ರನಾಳಕ್ಕೆ ಸಂಬಂಧಿಸಿದ ನ್ಯೂನ್ಯತೆಗಳಿದ್ದಾಗ ಈ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಈ ನ್ಯೂನ್ಯತೆಯಿಂದ ಹುಟ್ಟಿದ ಮಕ್ಕಳು ಕಡಿಮೆ ಮೂತ್ರವನ್ನು ಉತ್ಪಾದಿಸುತ್ತವೆ. ಆಮ್ನಿಯಾಟಿಕ್ ದ್ರವದ ಬಹುಭಾಗವು ಮಗುವಿನ ಮೂತ್ರವೇ ಆಗಿರುವುದರಿಂದ, ಈ ನ್ಯೂನ್ಯತೆಯು ಕಡಿಮೆ ಮೂತ್ರವನ್ನು ಉತ್ಪಾದಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ತಾಯಿಯ ಆರೋಗ್ಯದ ಸಮಸ್ಯೆಗಳೂ ಕಾರಣವಾಗಬಹುದು. ಏರು ರಕ್ತದೊತ್ತಡ, ಡಯಾಬಿಟಿಸ್, ಸಿಸ್ಟಂ ಲುಪಸ್ ಎರಿತ್ಮಾಟಸ್ ಮತ್ತು ಮಾಸ (ಪ್ಲಾಸೆಂಟಾ)ದ ತೊಂದರೆಗಳು ಕಾರಣಗಳು.
ಒಲಿಗೋ ಹೈಡ್ರಾಮ್ನಿಯಾಸ್ ತಾಯಿ, ಮಗು ಮತ್ತು ಹೆರಿಗೆಯ ಮೇಲೆ ಬೇರೆಬೇರೆ ಬಗೆಯಲ್ಲಿ ಪರಿಣಾಮ ಬೀರುತ್ತದೆ. ಇದರ ಪರಿಣಾಮವು ಗರ್ಭಚೀಲದಲ್ಲಿರುವ ದ್ರವದ ಪ್ರಮಾಣ, ಅದಕ್ಕೆ ಕಾರಣ ಮತ್ತು ಸಮಸ್ಯೆ ಯಾವಾಗ ಆರಂಭವಾಗುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.
ನಾನೇನು ಮಾಡಬೇಕು?
ಕೆಲವು ಅಧ್ಯಯನಗಳ ಪ್ರಕಾರ ಬೇರೆಲ್ಲ ಬಗೆಯಲ್ಲಿ ಸಾಮಾನ್ಯ ಗರ್ಭಧಾರಣೆಯನ್ನು ಹೊಂದಿರುವವರಲ್ಲಿ ಒಲಿಗೋ ಹೈಡ್ರಾಮ್ನಿಯಾಸ್‌ಗೆ ಯಾವುದೇ ಚಿಕಿತ್ಸೆ ನೀಡುವ ಅಗತ್ಯವಿಲ್ಲ. ಅವರ ಮಕ್ಕಳು ಆರೋಗ್ಯವಾಗಿಯೇ ಜನಿಸುವ ಸಾಧ್ಯತೆಯಿದೆ. ಚಿಕಿತ್ಸೆಯ ಅಗತ್ಯವಿದ್ದಾಗ, ಗರ್ಭಿಣಿಯರಲ್ಲಿ ಪ್ರಸವದ ಸಮಯದಲ್ಲಿ ಆಮ್ನಿಯೋಟಿಕ್ ದ್ರವವನ್ನು ಕೃತಕ ದ್ರವದ ಮೂಲಕ ಮರುಪೂರಣ ಮಾಡಬೇಕಾಗಿ ಬರಬಹುದು
ಮೂಲ : ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 10/15/2019
ಆರೋಗ್ಯ ದಿನಚರಿ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.
ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆ...
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...
ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿ...