অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೋಂಕುರೋಗಗಳು

ಸೋಂಕುರೋಗಗಳು

ರೋಗ

ಹರಡುವ ಬಗೆ

ಮಗುವಿಗಿರುವ ಅಪಾಯ?

ತಡೆಯುವುದು ಹೇಗೆ/ಚಿಕಿತ್ಸೆ

ಏಡ್ಸ(ವೈರಾಣು)

  • ಮಲಿನವಾದ ಒಂದೇ ಸೂಜಿಯನ್ನು  ಹಲವರು ಹಂಚಿಕೊಳ್ಳುವ ಮೂಲಕ
  • ಅಸುರಕ್ಷಿತ
  • ಲೈಂಗಿಕ  ಕ್ರಿಯೆ

    • ಹೆರಿಗೆ ಸಮಯದಲ್ಲಿ ಮಾಸದ ಮೂಲಕ, ಗರ್ಭಾವಸ್ಥೆಯಲ್ಲಿ  ಮತ್ತು ಎದೆ ಹಾಲು ನೀಡುವಾಗ
    • ಗರ್ಭಾವಸ್ಥೆಯ ಮೊದಲ ಮೂರುತಿಂಗಳಲ್ಲಿ ಸೋಂಕಿಗೆ ಈಡಾಗಿದ್ದರೆ- ಚಿಕ್ಕ ತಲೆ ವಿಕೃತ ಮುಖ ಕಂಡು ಬರಬಹುದು.
    • ಎಚ್‌ಐವಿ ಸೋಂಕಿತ ತಾಯಿಯು ಮಗುವಿಗೆ  ಸೋಂಕು ಹರಡುವ ಸಂಭವ ೫೦% ಇದೆ
    • ಎಚ್‌ಐವಿ ಹರಡುವ ಸಂದರ್ಭಗಳಿಂದ ದೂರವಿರಿ

    ಚಿಕನ್ ಪಾಕ್ಸ (ವೈರಾಣು)

    • ಗರ್ಭಾವಸ್ಥೆಯ ಪ್ರಾರಂಭದಲ್ಲಿ  ಹಂತದಲ್ಲಿ ಸೋಂಕು ಉಂಟಾದರೆ ಹುಟ್ಟಿನಿಂದ ವಿಕಾರ ಇರಬಹುದು. ಆದರೆ ಅಪಾಯ ಕಡಿಮೆ-೨.೨%
    • ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಕೈಕಾಲು, ಕಣ್ಣು ಮತ್ತು ಮೆದುಳಿನ ಅಸಮರ್ಪಕ ಬೆಳವಣಿಗೆ, ಚರ್ಮಕಲೆ  ಕಲೆಯಾಗಿರುವುದು. ಕಡಿಮೆ  ತೂಕ, ; ಶಿಶುವಿಗೆ ಹುಟ್ಟಿನಿಂದ ನಿಯೋ ನಾಟಲ್ ಝೋಸ್ಟರ್.
    • ತಾಯಿಗೆ  ಹೆರಿಗೆಯ ೫ ದಿನ ಮೊದಲು ಇಲ್ಲವೆ ೨ದಿನ ನಂತರ ಸಣ್ಣ ಸಣ್ಣ ಗುಳ್ಳೆಗಳು ಬಂದರೆ ಮಗುವಿಗೆ ಸೋಂಕು ಹರಡುವ ಅವಕಾಶ ೨೦% ಇರುತ್ತದೆ
    • ಚಿಕನ್‌ ಪಾಕ್ಸ್‌ ಬರದಂತೆ ತಡೆಯಲು ಅಥವಾ ಕಡಿಮೆ ಮಾಡಲು ಗರ್ಭಾವಸ್ಥೆಯ  ಮೊದಲ ಹಂತದಲ್ಲಿ  ಮೊದಲ ಬಾರಿ ವೈದ್ಯರನ್ನು ಭೇಟಿ ಮಾಡಿದಾಗಲೇ – ವೆರಿಸೆಲ್ಲಾ ಝೋಸ್ಟರ್‌ ಇಮ್ಯೂನ್‌ ಗ್ಲೋಬಲಿನ್‌ (ವಿ ಝೆಡ್ ಐ  ಜಿ ) ಕೊಡಬಹುದು.
    • ರೋಗನಿರೋಧಕ ಚುಚ್ಚು ಮದ್ದು ಲಭ್ಯವಿದೆ. ಆದರೆ ಅದನ್ನು ಗರ್ಭಿಣಿಯಾಗಿದ್ದಾಗ ಕೊಡಲು ಸಾಧ್ಯವಿಲ್ಲ. ವರಿಸೆಲ್ಲಾ ರೋಗನಿರೋಧಕ ಚುಚ್ಚುಮದ್ದು ಪಡೆದ ನಂತರ ಕನಿಷ್ಠ ಒಂದು ತಿಂಗಳವರೆಗೆ ಗರ್ಭಧರಿಸಬಾರದು.

    ಚಲ್ಮಿಡಿಯ(ಗನೋರಿಯಾಕ್ಕೂ ಇವೇ ಅನ್ವಯವಾಗುತ್ತವೆ)ಬ್ಯಾಕ್ಟೀರಿಯಾ)

    • ಲೈಂಗಿಕವಾಗಿ ಹರಡುತ್ತದೆ- ಯಾವುದೇ ಲಕ್ಷಣಗಳನ್ನು ತೋರದೆ ಯೋನಿಯಲ್ಲಿಯೇ ಇರಬಹುದು.
    • ಹೆರಿಗೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಬರಬಹುದು.
    • ಗರ್ಭಾವಸ್ಥೆಯ ಸಂದರ್ಭದಲ್ಲಿ, ಮಗುವು ಕಡಿಮೆ ತೂಕವನ್ನು ಹೊಂದಬಹುದು ಮತ್ತು ಗರ್ಭಪೊರೆಯು ಅವಧಿಗೆ ಮುನ್ನವೇ ಸೀಳಬಹುದು.
    • ನವಜಾತ ಶಿಶುಗಳಲ್ಲಿ ಕಣ್ಣಿನ ಸೋಂಕು, ನ್ಯುಮೋನಿಯಾ, ಜನನಾಂಗಗಳ ಸೋಂಕು ಮತ್ತು ಜಿಐ ನಾಳದ ಸೋಂಕು ಉಂಟಾಗಬಹುದು.
    • ಒಂದು ಸಲ ಪತ್ತೆಯಾದ ಮೇಲೆ ತಾಯಿ, ಮಗು, ಮತ್ತು ತಂದೆಗೆ ಆಂಟಿಬಯಾಟಿಕ್ಸ ನೀಡಬೇಕು.

    ಪುನಃ ವೈದ್ಯರಿಂದ ಪರೀಕ್ಷೆ ಅಗುವ ತನಕ ಕಾಂಡೋಮ ಉಪಯೋಗಿಸ ಬೇಕು.

    ಸೈಟೋಮೆಗಲೊವರಿಸ್ವೈರಾಣು)

    • ಜೀರ್ಣ ನಾಳ, ರಕ್ತ, ವೀರ್ಯ, ಮೂತ್ರ, ಸರ್ವಿಕಲ್ ಸ್ರಾವಗಳು, ಎದೆ ಹಾಲಿನಿಂದ ಬರಬಹುದು.
    • ಅವಧಿ ಪೂರ್ವ ತಾಯಿಯಿಂದ ಮಗುವಿಗೆ ಹರಡುವುದು ಜನನ, ಬುದ್ಧಿಮಾಂದ್ಯ, ಲಿವರ್ ನ ತೊಂದರೆ
    • ದೇಹದ ಸ್ರಾವಗಳನ್ನು ಮುಟ್ಟಿದಾಗ ಚೆನ್ನಾಗಿ ಕೈತೊಳೆಯ ಬೇಕು.
    • ಮೂತ್ರದಿಂದ ಒದ್ದೆಯಾದ ಡಯಾಫರನ್ನು ಎಚ್ಚ ರಿಕೆಯಿಂದ ಬಿಸಾಡ ಬೇಕು


    ಪರ್ವೊವೈರಸ್‌ (ವೈರಸ್‌)

    • ವ್ಯಕ್ತಿ ಯಿಂದ ವ್ಯಕ್ತಿಗೆ, ಮೂಗು ಮತ್ತು ಗಂಟಲಿನಸ್ರಾವಗಳ ಸಂಪರ್ಕಕ್ಕೆ ಬಂದಾಗ (ಕೆಮ್ಮು, ಶೀನು), ಅಥವ ಒಂದೆ ಕುಡಿಯುವ ಲೋಟ,  ಪಾತ್ರೆ ಬಳಸಿದಾಗ
    • ತಾಯಿಯು ಬಸುರಿನ ಮೊದಲ ಅರ್ಧದ ಅವಧಿಯಲ್ಲಿ ಸಂಪರ್ಕಕ್ಕೆ ಬಂದರೆ ಕೆಂಪು ರಕ್ತ ಕಣಗಳ ಉತ್ಪಾದನೆಯ ಮೇಲೆ ೧೦% ಗಿಂತ ಕಡಿಮೆ ಪ್ರಮಾಣದ ಪರಿಣಾಮ ಆಗಬಹುದು. ತೀವ್ರ ಅನಿಮೀಯಾ, ಗರ್ಭಪಾತ ಅಥವಾ ಭ್ರೂಣ ನಾಶ ಆಗಬಹುದು

     

    • ಬಹುತೇಕ ಪ್ರೌಢರು ಈಗಾಗಲೇ ಈ ಸೋಂಕಿಗೆ ಗುರಿಯಾಗಿರಬಹುದು.
    • ಜ್ವರ ಪೀಡಿತರಿಂದ ದೂರವಿರಿ;  ಪದೆಪದೇ ಕೈ ತೊಳೆದು ಕೊಳ್ಳಿ: ಕೆಮ್ಮುವಾಗ, ಶೀನುವಾಗ ಬಾಯಿಗೆ ಕೈ ಅಡ್ಡ ಇಟ್ಟುಕೊಳ್ಳಿ  ಇತರರು ಬಳಸಿದ ಲೋಟ ತಟ್ಟೆಗಳನ್ನು ಪಯೋಗಿಸಬೇಡಿ.

    ಗ್ರೂಪ್‌ ಬಿ
    ಸ್ಟ್ರೆಪ್ಟೊಕೊಕಲ್ ,(ಬ್ಯಾಕ್ಟಿರಿಯಾ)

     

    • ಶೇಕಡಾ ೧೫-೩೦ ಮಹಿಳೆಯರ ಯೋನಿಯಲ್ಲಿ ಮತ್ತು  ಕರುಳಿನ ಕೆಳಬಾಗದಲ್ಲಿ ಕಂಡು ಬರುವುದು.
    • ಹೆರಿಗೆಗೆ ತುಸು ಮುಂಚೆ ಅಮ್ನಿಯೋಟಿಕ್ ಕುಹರದಲ್ಲಿ  ಸೇರಬಹದು. ಇಲ್ಲವೆ  ಅಮ್ನಿಯೋಟಿಕ್ ಚೀಲದಲ್ಲಿ ಕಣ್ಣೀರಿನ ಮೂಲಕ, ಅಥವ ಮಗುವು ಜನನ ಸಮಯದಲ್ಲಿ ಅದು ಬಾಯಿಯ ಮೂಲಕ ಇಲ್ಲವೆ ಗಾಳಿಯ ಮೂಲಕ ಒಳ ಹೋಗಬಹುದು. ೫೦%-೭೫% ಸೋಂಕು ತಗುಲಿದ ಶಿಶುಗ ಳಲ್ಲಿ ೧ರ ರೋಗ-೨% ಮಕ್ಕಳು ತೀವ್ರ ರೋಗಕ್ಕೆ ಗುರಿಯಾಗಬಹುದು .ಮೆನೆಂಜೈಟಿಸ್, ಸೆಪಸಿಸ್‌ಅಥವಾ ನ್ಯುಮೋನಿಯಾ ಬರಬಹುದು.
    • ಗರ್ಭಿಣಿಯಾಗಿದ್ದಾಗಲೇ ಪರೀಕ್ಷಿಸುವುದು ಮತ್ತು ಚಿಕಿತ್ಸೆಯನ್ನು  ಕೆಳಕಂಡ  ಪರಿಸ್ಥಿತಿಯಲ್ಲಿ ನೀಡಬೇಕು  ಅವಧಿಪೂರ್ವ ಹೆರಿಗೆ ನೋವು (೩೭ ವಾರ ಕ್ಕಿಂತ ಕಡಿಮೆ); ಅಕಾಲಿಕವಾದ ಪೊರೆಯ ಬಿರಿತ (೩೭ ವಾರಕ್ಕಿಂತ ಕಡಿಮೆ) ಧಿರ್ಘಕಾಲ ಬಿರುಕಿರುವುದು (೧೮ ಗಂ. ಹೆಚ್ಚು). ಹೆರಿಗೆನೋವಿನ ಸಮಯದಲ್ಲಿ ಜ್ವರ; ಬಹು ಮಕ್ಕಳ ಜನನ;ಮೂತ್ರದಲ್ಲಿ ಗಿ ಬಿ ಎಸ್ ಬ್ಯಾಕ್ಟೀರಿಯ: ಹೆಚ್ಚು ಸಾಂದ್ರ ಬ್ಯಾಕ್ಟೀರಿಯ: ೨೦ವರ್ಷಕ್ಕಿಂತ ಕಿರಿಯ ಮಹಿಳೆಗೆ ತಾಯ್ತನ; ಹಿಂದಿನ ಹೆರಿಗೆಯಲ್ಲಿ ಗಿ ಬಿ ಎಸ್  ಇತಿಹಾಸ (೬) –IV  ಆಂಡಿಬಯೋಟಿಕ್ಸನ್ನು ಹೆರಿಗೆ ಸಮಯದಲ್ಲಿ ನೀಡುವುದು.
    • ರೋಗನಿರೋಧಕ ಲಸಿಕೆಯ ಅಭಿವೃದ್ಧಿ

    ಹೆಪಿಟೈಟಿಸ್ ಬಿ(ವೈರಾಣು)

    • ದೇಹದ  ಸೋಂಕಿತ ಸ್ರಾವಗಳು, ರಕ್ತದ, ವೀರ್ಯ, ಯೋನಿಯ ಸ್ರಾವಗಳು, ಜೊಲ್ಲು; ಅಸುರಕ್ಷಿತ ಲೈಂಗಿಕ ಸಂಪರ್ಕ; ಸೂಜಿ, ಬ್ಲೇಡ್‌, ಟೂತ್ ಬ್ರಷ್‌ಗಳನ್ನು ಇತರರ ಜತೆ ಹಂಚಿಕೊಳ್ಳುವುದು
    • ಪಾಜಿಟಿವ್ ತಾಯಿಯಿಂದ ಮಗುವಿಗೆ ಹೆರಿಗೆಯ ಸಮಯದಲ್ಲಿ ಅಥವಾ ನಂತರ, ಕೆಲವು ಸಲ ಎದೆಹಾಲಿನಿಂದ
    • ಪೆರಿನಾಟಲ್ ಸೋಂಕಿನಿಂದತೀವ್ರ ಕ್ರಾನಿಕ್ ಹೆಪಿಟೈಟಿಸ್,‍ ಸಿರೋಸಿಸ್, ಅಥವಾ ಕ್ಯಾನ್ಸರ್  ಸಂಭವ
    • ಕಡ್ಡಾಯವಾಗಿ ಗರ್ಭಿಣಿಯ ಪರೀಕ್ಷೆ, ಪಾಸಿಟಿವ್ ಆಗಿದ್ದರೆ  ಹುಟ್ಟಿದ ೧೨ ತಾಸಿನೊಳಗೆ ಮಗುವಿಗೆ ಹೆಪಿಟೈಟಿಸ್ ಬಿ ನಿರೋಧಕ ಗ್ಲೊಬುಲಿನ್ & ಹೆಪಿಟೈಟಿಸ್ ಬಿ ವ್ಯಾಕ್ಸೀನಿನ ೩ರಲ್ಲಿನ ೧ನೇ ಡೋಜನ್ನು ನೀಡಬೇಕು. ೩ & ೬ನೇ ತಿಂಗಳಲ್ಲಿ ಪುನಃ ಕೊಡಬೇಕು
    • ತಂದೆಯನ್ನು ಪರೀಕ್ಷಿಸಿ & ಅಗತ್ಯ ಬಿದ್ದರೆ ವ್ಯಾಕ್ಸಿನ್ ನೀಡಬೇಕು

    ಸರಳ ಸರ್ಪಸುತ್ತು ವೈರಾಣು-ಎಚಎಸ್ವಿ೧ಅಥವಾ ೨

     

    • ಚರ್ಮದಿಂದ ಚರ್ಮಕ್ಕೆ ಲೈಂಗಿಕ ಸಂಪರ್ಕದಿಂದ, ಇಲ್ಲವೆ ಹರ್ಪಿಸ್ ಅನ್ನು ಮುಟ್ಟುವುದರಿಂದ ದೇಹದ ಇತರ ಭಾಗಕ್ಕೆ ಬರುವುದು
    • ೨೦ ವಾರಗಳಿಗೆ ಮೊದಲೇ ತನ್ನಷ್ಟಕ್ಕೆ ತಾನೇ ಗರ್ಭಸ್ರಾವವಾದರೆ ಜನನಾಂಗಗಳ ಸೋಂಕು ಕಾರಣವಾಗಿರಬಹುದು; ಅವಧಿ ಪೂರ್ವ ಜನನದ ಸಾಧ್ಯತೆ- ಮಾಸದ ಮೂಲಕ  ಸೋಂಕು ಹರಡುವ ಸಾಧ್ಯತೆ
    • ನವಜಾತ ಶಿಶುವಿಗೆ ಪಿತ್ತಜನಕಾಂಗದ ಸಮಸ್ಯೆಗಳು,  ಸನ್ನಿ, ದೀರ್ಘಕಾಲೀನ ನರಮಂಡಲದ ಸಮಸ್ಯೆಗಳು  ಮೆನಿಮಜಿಟಿಸ್‌ ಸಮಸ್ಯೆಗಳು ಬರಬಹುದು
    • ಗಾಯ ತೀವ್ರವಾಗಿದ್ದಾಗ ಸಂಭೋಗ ಸಲ್ಲ.
    • ಹೆರಿಗೆ ಸಮಯದಲ್ಲಿ ರಸಿಕೆ ಹೆಚ್ಚಾದರೆ ಸಿಸರಯಿನ್ ಸೆಕ್ ಷನ್ ಅಗತ್ಯವಾಗಬಹುದು
    • ಆಂಟಿ-ವೈರಲ್ ತೆರಪಿ

    ರುಬೆಲ್ಲಾ(ಜರ್ಮನ್ ಮೀಸಲ್ಸ) (ವೈರಾಣು)

    • ಮಾಸದ ಮೂಲಕ
    • ಮೊದಲ ತ್ರೈಮಾಸಿಕದಲ್ಲಾದರೆ ಗರ್ಭ ಪಾತವಾಗುವಾದು. ಅಂಗಾಂಗಳ ರಚನೆ ಸರಿಯಿರಲಿಕ್ಕಿಲ್ಲ; ಕಿವಡು, ಬುದ್ಧಿ  ಮಾಂದ್ಯ  ದೋಷಪೂರಿತ ಹೃದಯ, ಲಿವರ್ ತೊಂದರೆ
    • ಬರಬಹುದಾದ ಸಂಭವವಿರುವ ಗರ್ಭಣಿಗೆ ಇಮ್ಯುನೈಜೇಷನ್ ಕೊಡಬೇಕು
    • ಗರ್ಭಧಾರಣೆಗೆ ಒಂದು ತಿಂಗಳು ಪೂರ್ವದಲ್ಲಿ   ಇರುವ ವ್ಯಾಕ್ಸಿನ್ ನೀಡಬೇಕು.

    ಟಾಕ್ಸೋ ಪ್ಲಾಸ್ಮೊಸಿಸ್(ಪರೋಪಜೀವಿ ಟಾಕ್ಸೋಪ್ಲಾಸ್ಮ ಗೊಂಡೈ)

    • ಸೋಂಕಿತ ಬೆಕ್ಕಿನ ಮಲ
    • ಪೂರ್ಣ ಬೇಯಿಸದ ಇಲ್ಲವೆ ಹಸಿ ಮಾಂಸ
    • ಹಸಿ ಮಾಂಸ ಕತ್ತರಿಸಿದ ಚಾಕು, ಮಲಿನವಾದ ಮಣ್ಣಿನಲ್ಲಿನ ಹಣ್ಣು , ತರಕಾರಿ
    • ಬೆಕ್ಕು ಹೋಗಬಹುದಾದ ತೋಟದ  ಮರಳಿನ ಡಬ್ಬಗಳು
    • ಮಾಸದ ಮೂಲಕ ಭ್ರೂಣಕ್ಕೆ
    • ಮೊದಲ ತ್ರೈಮಾಸಿಕವಾದರೆ ಗರ್ಭಪಾತ, ಮೆದುಳಿಗೆ ಹಾನಿ, ಸೆಳೆತ ತೀವ್ರ ದೃಷ್ಟಿ ದೋಷ, ಹೈಡ್ರೋಸಿಫಾಲಿಟಿ ಮತ್ತು ಇತರ ಸಮಸ್ಯೆಗಳು
    • ಬೆಳೆದ ಬಸುರಿನಲ್ಲಾದರೆ, ಗರ್ಭಪಾತ, ಮೃತ ಶಿಶುವಿನ ಜನನ, ಸಿರೋಸಿಸ್‌, ಎನಸೈಫೆಲಿಟಿಸ್, ದೃಷ್ಟಿ ಸಮಸ್ಯೆ ಬುದ್ಧಿಮಾಂದ್ಯ ೧೫-೨೦ ವರ್ಷದ ವರೆಗೆನರಸಂಬಂಧಿ ಸಮಸ್ಯೆಗಳು
    • ಹಸಿ ತರಕಾರಿ , ಮಾಂಸ ಮುಟ್ಟಿದರೆ ಊಟದ ಮೊದಲು ಚೆನ್ನಾಗಿ  ಕೈತೊಳೆಯಬೇಕು.
    • ಹಸಿ ಮತ್ತು ಬೇಯಿಸಿದ ಆಹಾರ ಪದಾರ್ಥಗಳಿಗೆ ಬೇರೆ ಬೇರೆ ಸ್ಥಳ ಮತ್ತು ಪಾತ್ರೆ ಉಪಯೋಗಿಸಿ
    • ಮಂಸವನ್ನು ಚೆನ್ನಾಗಿ ಬೇಯಿಸಿ.( ಮೈಕ್ರೋ ವೇವಿನಲ್ಲಿ ಬೇಡ)
    • ಸ್ಮೋಕ್ಡ ಮಾಂಸವನ್ನು ಗರ್ಭಿಣಿ ತಿನ್ನಬಾರದು
    • ಮಲಿನ ಮಣ್ಣಿನ ತಕಾರಿಗಳನ್ನು ಚೆನ್ನಾಗಿ  ಬೇಯಿಸಿ , ಹಸಿತರಕಾರಿ ತಿನ್ನುವಾಗ ಚೆನ್ನಾಗಿ ತೊಳೆಯಿರಿ.
    • ಎಲ್ಲ ಬೆಕ್ಕುಗಳ ಬಗ್ಗೆ ಎಚ್ಚರವಿರಲಿ. ಬೆಕ್ಕಿನ ಮಲವನ್ನು ಕೈಗವಸು ಹಾಕಿಕೊಂಡು ಮುಟ್ಟಿ. ಬೆಕ್ಕಿನ ಮಲವನ್ನು ಫ್ಲಷ್‌ ಮಾಡಿ.  ಆ ಟ್ರೇಯನ್ನು ಚೆನ್ನಾಗಿ ಪುತಿನಾಶಕದಿಂದ ತೊಳೆಯಿರಿ ಬೆಕ್ಕು  ಇರುವ ತೋಟದಲ್ಲಿ ಓಡಾಡ ಬೇಡಿ. ಬೆಕ್ಕುಗಳನ್ನು ಸಾಕಬೇಡಿ.
    • ಬೆಕ್ಕುಗಳು ಓಡಾಡುವಲ್ಲಿ ತರಕಾರಿ ಬೆಳೆಯಬೇಡಿ.
    • ಆಹಾರದ ಸುತ್ತ ನೊಣ ಮತ್ತು ಜಿರಲೆಗಳು  ಬರದಂತೆ ಎಚ್ಚರಿಕೆವಹಿಸಿ

    ಮೂಲ : ರ.ಇ.ಐಡ್ ಪೆರಿನತಲ್ ಏಡ್ಸ್ ", ಪೆರಿನತಲ್ ಓಉತ್ರೆಅಚ್  ಪ್ರೊಗ್ರಾಮ್  ನೆವ್ಸ್ಲೆತ್ತೆರ್

     

    ಕೊನೆಯ ಮಾರ್ಪಾಟು : 1/28/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate