অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹುಸಿಗರ್ಭ

ಹುಸಿಗರ್ಭ ಎಂದರೇನು?

ಬ್ಲೈಟೆಡ್‌ ಓವಂ ಎಂದರೆ ಹುಸಿಗರ್ಭ. ಫಲಿತವಾದ ಅಂಡಾಣುವು ಗರ್ಭಾಶಯದ ಗೋಡೆಗೆ ಅಂಟಿಕೊಂಡಾಗ ಹುಸಿ ಗರ್ಭವು  ಉಂಟಾಗುತ್ತದೆ. ಭ್ರೂಣವು ಬೆಳೆಯುವುದಿಲ್ಲ. ಜೀವಕೋಶಗಳು ಭ್ರೂಣವನ್ನು ಹೊಂದಿರುವ ಚೀಲವನ್ನು ರಚಿಸುತ್ತವೆಯೇ ವಿನಃ ಭ್ರೂಣವನ್ನಲ್ಲ. ಇದು ಸಾಧಾರಣವಾಗಿ ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಆಗುತ್ತದೆ. ಮಹಿಳೆಗೆ ತಾನು ಗರ್ಭವತಿ ಎಂಬುದೇ ತಿಳಿದಿರುವುದಿಲ್ಲ. ಹೆಚ್ಚಿನ ಮಟ್ಟದ ವರ್ಣತಂತುಗಳ ಅಸಹಜತೆಯು ಕಂಡುಬಂದರೆ ನೈಸರ್ಗಿಕವಾಗಿ ಗರ್ಭಸ್ರಾವವಾಗುವುದು.

ಹುಸಿ ಗರ್ಭವಾಗಿದೆ ಎಂಬುದನ್ನು ಅರಿಯುವುದು ಹೇಗೆ?

ಹುಸಿ ಗರ್ಭವು ಗರ್ಭಧಾರಣೆಯ ಪ್ರಾರಂಭದಲ್ಲೇ ಆಗುತ್ತದೆ. ಅನೇಕ ಮಹಿಳೆಯರಿಗೆ ತಾವು ಗರ್ಭವತಿಯರಾಗಿದ್ದೇವೆ ಎಂಬುದೇ ತಿಳಿಯುವುದಿಲ್ಲ. ಗರ್ಭಧಾರಣೆಯ ಲಕ್ಷಣಗಳು ಕಾಣಿಸಬಹುದು. ತಪ್ಪಿದ ಋತುಚಕ್ರ ಇಲ್ಲವೇ ತಡವಾದ ಋತುಚಕ್ರ ಮತ್ತು ಗರ್ಭಧಾರಣೆ ಪರೀಕ್ಷೆಯ ಧನಾತ್ಮಕ ಫಲಿತಾಂಶಗಳು ಗರ್ಭಧಾರಣೆಯ ಬಗ್ಗೆ ಸೂಚನೆ ನೀಡಬಹುದು. ಕೊಂಚ ಹೊಟ್ಟೆ ನೋವು ಅಲ್ಪಸ್ವಲ್ಪ ರಕ್ತ ಸ್ರಾವ ಮತ್ತು ದ್ರವ ಹೊರ ಬರಬಹುದು. ಸಾಮಾನ್ಯವಾಗಿ ದೇಹವು ಗರ್ಭಾಶಯದ ಗೋಡೆಯ ಮೇಲಿನ ಅಂಶಗಳನ್ನು ಹೊರಹಾಕುವುದು. ಅದು ಸ್ವಲ್ಪ ಹೆಚ್ಚಿನ ಸ್ರಾವ ಆಗಬಹುದು.

ಬಹಳಷ್ಟು ಮಹಿಳೆಯರು ತಮ್ಮ ಎಚ್‌ಸಿಜಿ ಮಟ್ಟವು ಏರಿರುವುದರಿಂದ ಗರ್ಭವು ಸರಿಯಾಗಿದೆ ಎಂದೇ ಭಾವಿಸುವರು. ಮಾಸವು ತನ್ನ ಬೆಳವಣಿಗೆಯನ್ನು ಮುಂದುವರಿಸಿ ಮಗು ಇಲ್ಲದಿದ್ದರೂ ಸ್ವಯಂ ಆಧಾರ ಪಡೆಯುವುದು. ಗರ್ಭದ ಹಾರ್ಮೋನುಗಳು ಅಧಿಕವಾಗಿರುವುದು. ಇದರಿಂದ ಮಹಿಳೆಯು ತಾನು ಗರ್ಭಿಣಿ ಎಂದು ಭಾವಿಸುವಳು. ಅಲ್ಟ್ರಾ ಸೌಂಡ್‌ ಪರೀಕ್ಷೆಯಾದರೆ ಮಾತ್ರ ಖಾಲಿ ಗರ್ಭಾಶಯ ಇಲ್ಲವೇ ಖಾಲಿ ಗರ್ಭದ ಚೀಲವಿರುವುದು ಗೊತ್ತಾಗುತ್ತದೆ.

ಹುಸಿ ಗರ್ಭವಾಗಲು ಕಾರಣಗಳೇನು?

ಹುಸಿಗರ್ಭವು ವರ್ಣತಂತುಗಳ ಅಸಜತೆಯಿಂದ ಉಂಟಾಗುತ್ತದೆ. ಇದರಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಶೇ.೫೦ ಜನರಿಗೆ ಗರ್ಭಸ್ರಾವವಾಗುತ್ತದೆ. ಮಹಿಳೆಯರ ದೇಹವೇ ಭ್ರೂಣದಲ್ಲಿನ ಅಸಹಜ ವರ್ಣತಂತುಗಳನ್ನು ಗುರುತಿಸುತ್ತದೆ. ನೈಸರ್ಗಿಕವಾಗಿಯೇ ಅದು ಗರ್ಭವನ್ನು ಮುಂದುವರಿಯಲು ಬಿಡುವುದಿಲ್ಲ. ಏಕೆಂದರೆ ಅದು ಸಹಜ ಮಗುವಾಗಿ ಬೆಳೆಯುವುದಿಲ್ಲ. ಇದು ಜೀವಕೋಶಗಳ ಅಸಹಜ ವಿಭಜನೆ ಇಲ್ಲವೇ ಗುಣಮಟ್ಟವಿಲ್ಲದ ವೀರ್ಯಾಣು ಇಲ್ಲವೇ ಅಂಡಾಣುವಿನಿಂದ ಉಂಟಾಗಿರಬಹುದು.

ನಾನು ನೈಸರ್ಗಿಕ ಗರ್ಭಪಾತಕ್ಕಾಗಿ ಕಾಯಲೇ ಇಲ್ಲವೇ ಡಿ ಅಂಡ್‌ ಸಿ ಮಾಡಿಸಿಕೊಳ್ಳಲೇ?

ಇದು ಪೂರ್ಣವಾಗಿ ನೀವೇ ತೆಗೆದುಕೊಳ್ಳಬೇಕಾದ ನಿರ್ಧಾರ. ಬಹುತೇಕ ವೈದ್ಯರು ಆರಂಭದ ಹಂತದ ಗರ್ಭಸ್ರಾವಕ್ಕೆ ಡಿ ಸಿ ಮಾಡಿಸುವುದನ್ನು ಶಿಫಾರಸು ಮಾಡುವುದಿಲ್ಲ. ಮಹಿಳೆಯ ದೇಹವು ತನ್ನಿಂದ ತಾನೇ ಅನಗತ್ಯ ಅಂಗಾಂಶವನ್ನು ಹೊರಹಾಕುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಮತ್ತು ಹೊರಗಿನ ಶಸ್ತ್ರಕ್ರಿಯೆಯ ಮಧ್ಯವರ್ತನೆಯ ಅಗತ್ಯವಿಲ್ಲ. ಅದರಿಂದ ಹೊಸ ಸಮಸ್ಯೆಗಳು ಬರಬಹುದು. ನೀವು ಏನಾದರೂ ಗರ್ಭಪಾತದ ಕಾರಣವನ್ನು ಪತ್ತೆ ಮಾಡಲು ವೈದ್ಯರಲ್ಲಿಗೆ ಅಂಗಾಂಶಗಳನ್ನು ತೋರಿಸಲು ಬಯಸಿದರೆ. ಡಿ&ಸಿ ಯು ಅನುಕೂಲ. ಕೆಲವು ಮಹಿಳೆಯರು ಡಿ;ಸಿ ದೈಹಿಕ ಮತ್ತು ಮಾನಸಿಕ ಒತ್ತಡ ಕೊನೆಗಾಣುತ್ತದೆ ಎಂದು ಭಾವಿಸುತ್ತಾರೆ.

ಹುಸಿಗರ್ಭವನ್ನು ತಡೆಯುವುದು ಹೇಗೆ?

ದುರದೃಷ್ಟವಶಾತ್‌ ಹುಸಿಗರ್ಭವನ್ನು ತಡೆಯುವುದು ಬಹಳ ಸಂದರ್ಭದಲ್ಲಿ ಸಾಧ್ಯವಿಲ್ಲ. ಅನೇಕ ಜೋಡಿಗಳು ಹಲವು ಗರ್ಭಸ್ರಾವವಾದರೆ ವಂಶವಾಹಿಗಳ ಪರೀಕ್ಷೆಯನ್ನು ಬಯಸುತ್ತಾರೆ.

ಹುಸಿ ಗರ್ಭವು ಬಹುಮಟ್ಟಿಗೆ ಒಂದೇ ಸಲದ ಘಟನೆ. ಅದು ಬಹು ವಿರಳವಾಗಿ ಒಂದಕ್ಕಿಂತ ಹೆಚ್ಚು ಸಲ ಆಗುವುದು. ಹೆಚ್ಚಿನ ವೈದ್ಯರು ಗರ್ಭಪಾತದ ನಂತರ ಜೋಡಿಗಳಿಗೆ ಮೂರು ನಿಯಮಿತ ಋತುಚಕ್ರದವರೆಗೆ ಕಾಯ್ದು ನಂತರ ಗರ್ಭಧಾರಣೆಯ ಪ್ರಯತ್ನ ಮಾಡಬಹುದು ಎಂದು ಹೇಳುತ್ತಾರೆ.

ಮೂಲ : ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/8/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate