ಈ ಕಾರ್ಯಕ್ರಮದ ಉದೇಶ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸಲು ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.ಈ ಕಾರ್ಯಕ್ರಮವು ಗರ್ಭಿಣಿ ಮಹಿಳೆಯರಿಗೆ ರಕ್ತ ಹೀನತೆಯನ್ನು ತಡೆದು ಸುರಕ್ಷತೆ ಹೆರಿಗಯಾಗಿ ತಾಯಿ ಮತ್ತು ಮಗು ಆರೋಗ್ಯವಾಗಿರಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.ಅಂದರೆ ಆರು ಅಥವಾ ಏಳು ತಿಂಗಳು ತುಂಬಿದ ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕ ಆಹಾರ ನೀಡಿ ರಕ್ತ ಹೀನತೆಯನ್ನು ತಡೆಯಲು ೧೦೦೦ ರೂ ಗಳನ್ನು ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ ನೀಡಲಾಗುತ್ತದೆ. ಈ ಹಣದಲ್ಲಿ ಗರ್ಭಿಣಿ ಸ್ತ್ರೀಯು ಪೌಷ್ಟಿಕ ಆಹಾರಗಳಾದ ಸೊಪ್ಪು , ತರಕಾರಿ , ಹಾಲು , ಹಣ್ಣು , ಮೊಟ್ಟೆ ಮತ್ತು ಮೀನು ಇತ್ಯಾದಿ ಪೌಷ್ಟಿಕ ಆಹಾರಗಳನ್ನು ಸೇವಿಸಲು ಈ ಹಣವನ್ನು ನೀಡಲಾಗುತ್ತದೆ . ಇದರಿಂದ ಗರ್ಭಿಣಿ ಸ್ತ್ರೀಯ ರಕ್ತ ಹೀನತೆ ಕಡಿಮೆಯಾಗಿ ಹೆರಿಗೆಯಲ್ಲಿ ಯಾವುದೇ ತೊಂದರೆಯಾಗದೆ ಸುರಕ್ಷತೆಯಾಗಿ ಹೆರಿಗೆಯಾಗಲು ಮತ್ತು ತಾಯಿ ಮಗು ಆರೋಗ್ಯದಿಂದಿರಲು ಈ ಕಾರ್ಯಕ್ರಮವು ಅನುಕೂಲಕರವಾಗಿದೆ. ಹೆರಿಗೆ ನಂತರ ಮಗುವಿಗೆ ಕೊನೆ ಪಕ್ಷ ೬ ತಿಂಗಳವರಗೆ ತಪ್ಪದೇ ಎದೆ ಹಾಲು ಕುಡಿಸಬೇಕು ಆದ ಕಾರಣ ಮಗುವಿಗೆ ಸಂಪೂರ್ಣವಾಗಿ ಎದೆ ಹಾಲು ಸಿಗಬೇಕಾದರೆ ತಾಯಿಗೆ ಪೌಷ್ಟಿಕ ಆಹಾರಗಳನ್ನುನೀಡಬೇಕು ಆದರಿಂದ ಹೆರಿಗೆಯಾದ ನಂತರ ೩೦೦ ರೂ. ಪ್ರಸೂತಿ ಆರೈಕೆ ಕಾರ್ಯಕ್ರಮ ಮತ್ತು೭೦೦ ರೂ. ಗಳು ಜನನಿ ಸುರಕ್ಷಾ ಯೋಜನೆಯ ಮೊತ್ತ ಒಟ್ಟು ೧೦೦೦ ರೂ. ಗಳು ತಾಯಿಯ ಪೌಷ್ಟಿಕ ಆಹಾರ ಸೇವಿಸಲು ಈ ಹಣವನ್ನು ನೀಡಲಾಗುತ್ತದೆ . ಈ ೨ ಕಾರ್ಯಕ್ರಮಗಳಿಂದ ಗರ್ಭಿಣಿ ಸ್ತ್ರೀಗೆ ಹೆರಿಗೆ ಸಮಯದಲ್ಲಿ ರಕ್ತಹಿನತೆಯಿಂದ ಆಗುವ ಅನಾಹುತಗಳಿಂದ ತಪ್ಪಿಸಿ ತಾಯಿ ಮತ್ತು ಮಗು ಆರೋಗ್ಯದಿಂದಿರಲು ಸಹಕಾರಿಯಾಗಿದೆ .
ಕೊನೆಯ ಮಾರ್ಪಾಟು : 3/4/2020
ವಿಶ್ವ ಆರೋಗ್ಯ ಸಂಸ್ಥೆಯು ಹದಿಹರೆಯವನ್ನು ವಯೋಮಾನಕ್ಕೆ ಅನುಗ...