ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಯೋನಿಸ್ರಾವ

ಆರೋಗ್ಯ, ಆರ್ಥಿಕತೆ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ಗಾಢವಾದ ಪರಿಣಾಮಗಳನ್ನು ಲೈಂಗಿಕ ಸೋಂಕು ರೋಗಗಳು ಬೀರಬಲ್ಲವು. ಸ್ತ್ರೀಯರಲ್ಲಿ ಲೈಂಗಿಕ ಸೋಂಕುಗಳಂತೂ ಇನ್ನಷ್ಟು ಅಪಾಯಕಾರಿ.

ಆರೋಗ್ಯ, ಆರ್ಥಿಕತೆ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ಗಾಢವಾದ ಪರಿಣಾಮಗಳನ್ನು ಲೈಂಗಿಕ ಸೋಂಕು ರೋಗಗಳು ಬೀರಬಲ್ಲವು. ಸ್ತ್ರೀಯರಲ್ಲಿ ಲೈಂಗಿಕ ಸೋಂಕುಗಳಂತೂ ಇನ್ನಷ್ಟು ಅಪಾಯಕಾರಿ. ಅವರು ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ, ಆರೋಗ್ಯವಂತರಂತೆ ಕಾಣುತ್ತಿದ್ದರೂ, ತಮ್ಮ ಲೈಂಗಿಕ ಜೊತೆಗಾರರಿಗೆ, ತ‌ನ್ನ ಇನ್ನೂ ಜನಿಸಿರದ ಶಿಶುವಿಗೆ ಈ ರೋಗವನ್ನು ವರ್ಗಾಯಿಸಬಲ್ಲರು. ಲೈಂಗಿಕ ಸೋಂಕುಗಳನ್ನು ಸ್ತ್ರೀಯರು ನಿರ್ಲಕ್ಷಿಸಿದರೆ,

ಅದು ಮುಂದೆ ಸಂತಾನ ಹೀನತೆ, ಗರ್ಭಾವಸ್ಥೆಯ ಸಮಸ್ಯೆಗಳು, ಕಡಿಮೆ ತೂಕದ ಶಿಶು ಜನನ ಮತ್ತಿತ‌ರ ತೆೊಂದರೆಗಳಿಗೆ ಕಾರಣ ಆಗಬಹುದು. ಸ್ತ್ರೀಯರಲ್ಲಿ ಯೋನಿಸ್ರಾವ ಲೈಂಗಿಕ ಸೋಂಕು ರೋಗ ತಗುಲಿರುವ ಲಕ್ಷಣವಾಗಿರಬಹುದು. ದಲ್ಲದೆ ಆಘಾತ, ಪರಕೀಯ ವಸ್ತು ತಗುಲಿ ಚರ್ಮರೋಗ ಉಂಟಾಗಿರುವುದು (ಕಾಂಡೊಮ್‌ ಬಳಕೆ, ಟ್ಯಾಂಪನ್‌ ಬಳಕೆ ಅಥವಾ ಯೋನಿಯಲ್ಲಿ ಪ್ರಯೋಗಿಸುವ ವೀರ್ಯ ನಾಶಕಗಳ ಬಳಕೆ‌) ಮತ್ತಿತ‌ರ ಕಾರಣಗಳಿಂದಲೂ ಯೋನಿಸ್ರಾವ ಕಾಣಿಸಿಕೊಳ್ಳಬಹುದು

ಕೆಲವೊಮ್ಮೆ ಕೆಲವು ಔಷಧಿಗಳು ದೇಹದ ಮೇಲೆ ದುಷ್ಪರಿಣಾಮ ಬೀರಿ, ಯೋನಿಯಲ್ಲಿ ಹುಣ್ಣುಗಳಾಗುವು ದರಿಂದಲೂ ಯೋನಿಸ್ರಾವ ಕಾಣಿಸಿಕೊಳ್ಳಬಹುದು. ಯೋನಿಯಲ್ಲಿ ಪ್ರಾಯಕ್ಕೆ ತ‌ಕ್ಕಂತೆ ಬದಲಾವಣೆಗಳು ಆಗುತ್ತಿರುತ್ತವೆ. ತಾಯಿಯ ದೇಹದ ತಾಯ್ತನದ ಹಾರ್ಮೋನುಗಳ ಪ್ರಭಾವದಿಂದ ನವಜಾತ ಶಿಶುವಿನಲ್ಲೂ ಆರಂಭದ ಕೆಲವು ವಾರಗಳಲ್ಲಿ ಯೋನಿಸ್ರಾವ ಕಾಣಿಸಿಕೊಳ್ಳುವುದಿದೆ.

ಬಾಲ್ಯದಲ್ಲಿ ಕೆಲವು ಬ್ಯಾಕ್ಟೀರಿಯಾ ಸೋಂಕುಗಳಿಂದ (ಉದಾ: ಎಕ್ಸ್‌-ಗೊನೊಕಾಕಸ್‌, ಸ್ಟೆಫೈಲೊ ಕಾಕಸ್‌ ಅರೆಯಸ್‌, ಸ್ಟ್ರೆಪ್ಟೊಕಾಕಸ್‌... ಇತ್ಯಾದಿ ಬ್ಯಾಕ್ಟೀರಿಯಾಗಳು), ಏಕಾಣು ಜೀವಿಗಳ ಸೋಂಕಿನಿಂದ, ಪರಕೀಯ ವಸ್ತುಗಳಿಂದ, ನೀರುಕೋಟ್ಲೆ, ಸಿಡುಬುಗಳಂತಹ ದೇಹ ವ್ಯವಸ್ಥೆಯ ರೋಗಗಳು ಕಾಣಿಸಿಕೊಂಡಾಗ, ದಾರದಾಕೃತಿಯ ಹುಳುಗಳು ಗುದದ್ವಾರದಿಂದ ಯೋನಿ ಭಾಗವನ್ನು ಪ್ರವೇಶಿಸಿದಾಗ, ಯೋನಿಸ್ರಾವ ಕಾಣಿಸಿಕೊಳ್ಳಬಹುದು. ಮುಟ್ಟು ನಿಲ್ಲುವ ಪ್ರಾಯದಲ್ಲಿ ಸ್ತ್ರೀಯರ ಯೋನಿಯ ಒಳಪದರ ಹಾಗೂ ಚರ್ಮ ತೆಳ್ಳಗಾಗುತ್ತದೆ. ಈ ಚರ್ಮ ಕೆಲವೊಮ್ಮೆ ಒಣಕಲಾಗಿ, ನೆರಿಗೆ ಕಟ್ಟಿ, ತುರಿಕೆ ಕಾಣಿಸಿಕೊಳ್ಳುವುದೂ ಇದೆ.

ಲೈಂಗಿಕ ಸೋಂಕುಗಳಾದ ಸಿಫಿಲಿಸ್‌ ಷಾಂಕ್ರಾಯ್ಡ ಇರುವವರಲ್ಲಿ ಯೋನಿಯ ಹುಣ್ಣುಗಳ ಜೊತೆ ಯೋನಿ ಸ್ರಾವ ಕೂಡ ಕಾಣಿಸಿಕೊಳ್ಳಬಹುದು. ಗೊನೊರಿಯಾ ಮಹಿಳೆಯೊಬ್ಬರು ಯೋನಿ ಸ್ರಾವದ ದೂರಿನೊಂದಿಗೆ ವೈದ್ಯರ ಬಳಿ ಬಂದಾಗ, ವೈದ್ಯರು ಅದು ಲೈಂಗಿಕ ಸೋಂಕು ತ‌ಗುಲಿರುವ ಕಾರಣದಿಂದ ಸಂಭವಿಸಿದ್ದಾದರೆ, ಅದಕ್ಕೆ ಗೊನೊಕಾಕಲ್‌ ಸೋಂಕು ಕಾರಣ ಅಲ್ಲ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳುತ್ತಾರೆ. ಈ ಸೋಂಕು ತಗುಲಿರುವ ಸೋಂಕಿನ ವಾಹಕ ವ್ಯಕ್ತಿಯ ಜೊತೆೆ ಒಮ್ಮೆ ಲೈಂಗಿಕ ಸಂಪರ್ಕ (ಸಂಭೋಗ) ನಡೆಸಿದರೆ, ಸೋಂಕು ತಗಲುವ ಸಾಧ್ಯತೆ ನೂರಕ್ಕೆ ಇಪ್ಪತ್ತರಷ್ಟು .

ಹೆಚ್ಚಾಗಿ ಸ್ತ್ರೀಯರಲ್ಲಿ ಗರ್ಭಕೋಶದ ಕತ್ತಿನ ಒಳಭಾಗದ ಕಾಲುವೆ, ಸೋಂಕಿಗೀಡಾಗಿರುತ್ತದೆ. ರೋಗ ಲಕ್ಷಣಗಳು ಸುಮಾರು 10 ದಿನಗಳೊಳಗೇ ಕಾಣಿಸಿಕೊಳ್ಳುತ್ತವೆ. ರೋಗಿಯಲ್ಲಿ ಯೋನಿ ಸ್ರಾವ, ಮೂತ್ರ ವಿಸರ್ಜನೆಯ ವೇಳೆ ನೋವು, ಋತುಸ್ರಾವ ಇಲ್ಲದ ಅವಧಿಯಲ್ಲೂ ತೀವ್ರ ರಕ್ತಸ್ರಾವ, ಗರ್ಭಾಶಯದಿಂದ ದೀರ್ಘ‌ಕಾಲ ಪದೇಪದೇ ರಕ್ತಸ್ರಾವ ಮತ್ತಿತರ ರೋಗ ಲಕ್ಷಣಗಳು ಕಾಣಿಸಿಕೊಂಡಿರುತ್ತವೆ.

ಯೋನಿಯನ್ನು ಹಿಗ್ಗಿಸಿ ತಪಾಸಣೆ ನಡೆಸಿದಾಗ, ಕೀವು-ರಕ್ತ ಸಹಿತ ಶ್ಲೇಷ್ಮ ಸ್ರಾವ ಕಂಡುಬರುತ್ತದೆ. ಈ ಸ್ಥಿತಿಯನ್ನು ನಿರ್ಲಕ್ಷಿಸಿದರೆ, ಈ ಸೋಂಕು ಗರ್ಭಾಶಯದ ಒಳಪದರ, ಅಂಡನಾಳಗಳಿಗೂ ಹಬ್ಬಬಹುದು. ಕೆಲವರಲ್ಲಿ ಗಂಟಲು ಮತ್ತು ಗುದದ್ವಾರಗಳಲ್ಲಿ ಕೂಡ ಈ ಸೋಂಕು ಪತ್ತೆ ಆಗಬಹುದು. ರೋಗಿಯ ಸ್ರಾವವನ್ನು ಮೈಕ್ರೊಸ್ಕೋಪಿಕ್‌ ತಪಾಸಣೆಗೆ ಒಳಪಡಿಸಿದಾಗ, ಕೋಶಾಂತರ್ಗತ ಗ್ರಾಮ್‌ ನೆಗೆಟಿವ್‌ ಕೊಸೈಗಳ ಜೋಡಿಗಳು ಕಂಡುಬರುತ್ತವೆ. ಕಲ್ಚರ್‌ ಆಂಡ್‌ ಫೆರ್ಮಂಟೇಶನ್‌ ತಪಾಸಣೆ, ಫ್ಲೋರಸೆಂಟ್‌ ತಪಾಸಣೆಗಳ ಮೂಲಕ ಈ ತೊಂದರೆಯನ್ನು ಖಚಿತಪಡಿಸಿಕೊಳ್ಳಬಹುದು. ಪೆನ್ಸಿಲ್ಲಿನ್‌ ಚಿಕಿತ್ಸೆಗೆ ಸೂಕ್ಷ್ಮಗ್ರಾಹಿಗಳಾಗಿರುವವರಲ್ಲಿ ಗೊನೊರಿಯಾ ತೆೊಂದರೆ ತೀವ್ರ ಹಂತಕ್ಕೆ ತಲುಪಲಾರದು. ಕ್ಲಾಮೈಡಿಯಾ ಸೋಂಕು ಗೊನೊರಿಯ ಸೋಂಕಿನಂತೆಯೇ ಕಂಡುಬರುವ ಇನ್ನೊಂದು ಸೋಂಕು ಎಂದರೆ, ಕೋಶಾಂತರ್ಗತ ಜೀವಿಯಾದ ಕ್ಲಾಮೈಡಿಯಾ ಸೋಂಕು. ಹೆಚ್ಚಾಗಿ ಈ ಸೋಂಕು ಇರುವವರಲ್ಲಿ ರೋಗ ಲಕ್ಷಣಗಳು ಕಂಡು ಬರುವುದಿಲ್ಲ.

ಕೆಲವರಲ್ಲಿ ಯೋನಿಯಲ್ಲಿ ಹಳದಿ ಮಿಶ್ರಿತ‌ ಕೀವು ಸಹಿತ ಶ್ಲೇಷ್ಮ ಸ್ರಾವ ಕಂಡುಬರಬಹುದು. ತಪಾಸಣೆಯ ವೇಳೆ, ರೋಗಿಯಲ್ಲಿ ಗರ್ಭಕೋಶದ ಕುತ್ತಿಗೆಗೆ ಸೋಂಕು ಹರಡಿರುವುದು ಕಾಣಿಸುತ್ತದೆ. ಅಂಡಾಣುಗಳು ಗರ್ಭಾಶಯದ ಪದರದ ಬಳಿ ಒತ್ತೂತ್ತಾಗಿ ಕಂಡುಬರಬಹುದು.) ಗ್ರಾಮ್‌ ಸ್ಟೇನ್‌x ಸ್ಮಿಯರ್‌ ತಪಾಸಣೆಯ ವೇಳೆ ಗೊನೊಕೋಸೈ ಬ್ಯಾಕ್ಟೀರಿಯಾ ಕಂಡುಬರುವುದಿಲ್ಲ. ರೋಗವನ್ನು ಖಚಿತ‌ಪಡಿಸಿಕೊಳ್ಳಲು ಸೀರಲಾಜಿಕಲ್‌ ತಪಾಸಣೆ, ಅಂಗಾಂಶ ವಿಶ್ಲೇಷಣೆ ಅಗತ್ಯ ಇರುತ್ತದೆ. ಅಪರೂಪಕ್ಕೆ ಕೆಲವರಲ್ಲಿ ಪೆಲ್ವಿಸ್‌ನ ಉರಿಯೂತ ಕಂಡು ಬಂದಾಗ, ಅಥವಾ ನವಜಾತ‌ ಶಿಶುವಿನಲ್ಲಿ ಕ್ಲಾಮೈಡಿಯಾ ಸೋಂಕಿನಿಂದ ಕಣ್ಣಿನ ಉರಿಯೂತ ಕಾಣಿಸಿಕೊಂಡಾಗ, ಈ ಸೋಂಕು ಬೆಳಕಿಗೆ ಬರುವುದಿದೆ. ಟ್ರೈಕೊಮೊನಾಸ್‌ ವೆಜಿನಾಲಿಸ್‌ ಸೋಂಕು ಟ್ರೈಕೊಮೊನಾಸ್‌ ವೆಜಿನಾಲಿಸ್‌ ಅಂಡಾಕಾರದ ಏಕಾಣು ಜೀವಿ. ಅದು ತ‌ನ್ನ ಚಾವಟಿಯಂತಹ ಮೀಸೆಗಳ ಸಹಾಯದಿಂದ ಚಲಿಸುತ್ತದೆ.

ಈ ಜೀವಿಯ ಸೋಂಕು, ತೀವ್ರ ಲೈಂಗಿಕ ಚಟುವಟಿಕೆಗಳಲ್ಲಿ ತೆೊಡಗಿರುವವರಲ್ಲಿ ಮತ್ತು ಹಲವಾರು ಮಂದಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿರುವವರಲ್ಲಿ ಸಾಮಾನ್ಯ. ರೋಗದ ಲಕ್ಷಣಗಳು ಋತುಸ್ರಾವದ ಅವಧಿಯಲ್ಲಿ ತೀವ್ರಗೊಳ್ಳುತ‌¤ವೆ. ಭಾರೀ ಪ್ರಮಾಣದಲ್ಲಿ ನೊರೆನೊರೆಯಾದ, ಕೆಟ್ಟ ವಾಸನೆ ಸಹಿತ ಯೋನಿ ಸ್ರಾವ, ಜನನೇಂದ್ರಿಯದ ಉರಿಯೂತ, ಸಂಭೋಗದ ವೇಳೆ ತೀವ್ರನೋವು ಮತ್ತಿತರ ತೆೊಂದರೆಗಳು ಈ ಸೋಂಕಿನ ಲಕ್ಷಣಗಳು. ಯೋನಿಯನ್ನು ಹಿಗ್ಗಿಸಿ ತಪಾಸಣೆ ನಡೆಸಿದಾಗ, ಯೋನಿಯ ಗೋಡೆ ಕೆಂಪಗಾಗಿ, ಅಲ್ಲಲ್ಲಿ ಕೆಂಪುಗುಳ್ಳೆಗಳು ಕಂಡುಬರಬಹುದು.

ಮೈಕ್ರೋಸ್ಕೋಪ್‌ ತಪಾಸಣೆಯ ಮೂಲಕ ಈ ಜೀವಿಯ ಇರುವನ್ನು ಖಚಿತ‌ಪಡಿಸಿಕೊಳ್ಳಬಹುದು. ಈ ರೋಗದ ಜೊತೆಗೆ ಗೊನೊರಿಯದಂತಹ ಸೋಂಕುಗಳೂ ಬಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಟ್ರೈಕೊಮೊನಾಸ್‌ ವೆಜಿನಾಲಿಸ್‌ ಸೋಂಕು ಕಂಡುಬಂದಿರುವವರಲ್ಲಿ ಸಿಸೇರಿಯನ್‌ ಶಸ್ತ್ರಕ್ರಿಯೆಯ ಬಳಿಕ ಸೋಂಕು ಕಾಣಿಸಿಕೊಳ್ಳುವ ಅಥವಾ ಅವಧಿ ಪೂರ್ವ ಶಿಶು ಜನನದ ತೊಂದರೆಗಳು ಕಾಣಿಸಿಕೊಳ್ಳಬಹುದು. ಶಿಲೀಂಧ್ರ ಸೋಂಕುಗಳು ಕ್ಯಾಂಡಿಡಾ, ಅಲ್ಬಿಕಾನ್ಸ್‌ ಮತ್ತು ಟೊರುಲೊಪ್ಸಿಸ್‌ಗ್ಲಾಬ್ರಾಟದಂತ‌ಹ ಶಿಲೀಂಧ್ರಗಳು ಕೂಡ ಯೋನಿಯ ಉರಿಯೂತದ ಸೋಂಕಿಗೆ ಕಾರಣ ಆಗಬಲ್ಲವು. ಮಧುಮೇಹಿಗಳಲ್ಲಿ, ಗರ್ಭಿಣಿಯರಲ್ಲಿ, ದೀರ್ಘ‌ಕಾಲ ಆಂಟಿಡಯಾಬೆಟಿಕ್ಸ್‌ ಅಥವಾ ಸ್ಟೀರಾಯಿಡ್‌ಗಳನ್ನು ಸೇವಿಸಿದವರಲ್ಲಿ ಈ ಸೋಂಕು ಸಾಮಾನ್ಯ.

ಈ ಸೋಂಕುಗಳು ಲೈಂಗಿಕ ಸಂಪರ್ಕದ ಮೂಲಕ ಹರಡಬಲ್ಲವು. ಈ ಸೋಂಕಿನ ಲಕ್ಷಣಗಳೆಂದರೆ, ಮೂತ್ರ ವಿಸರ್ಜನೆಯ ವೇಳೆ ನೋವು, ದಪ್ಪಗೆ ಮೊಸರಿನಂತಹ ಬಿಳಿಸ್ರಾವ, ಲೈಂಗಿಕ ಚಟುವಟಿಕೆಗಳ ವೇಳೆ ನೋವು. ಕೆಲವರಲ್ಲಿ ಜನನೇಂದ್ರಿಯದ ಚರ್ಮ ಕೆಂಪಗಾಗುವ, ಚರ್ಮ ಸತ್ತು ಹೆರುಪೆ ಏಳುವ, ಗುಳ್ಳೆಗಳು ಕಾಣಿಸಿಕೊಳ್ಳುವ ಲಕ್ಷಣಗಳೂ ಕಂಡುಬರಬಹುದು. ಸ್ಮಿಯರ್‌ ಹಾಗೂ ಕಲ್ಚರ್‌ ತಪಾಸಣೆಗಳ ಮೂಲಕ ಈ ರೋಗವನ್ನು ಪತ್ತೆ ಹಚ್ಚಬಹುದು. ಬ್ಯಾಕ್ಟೀರಿಯಾ ಸೋಂಕು ಇದು ಹಲವಾರು ಸೂಕ್ಷಾ$¾ಣು ಬ್ಯಾಕ್ಟೀರಿಯಾಗಳು ಸೇರಿ, ಕಾಣಿಸಿಕೊಳ್ಳುವ ರೋಗ ಸ್ಥಿತಿ. ದೇಹದಲ್ಲಿ ಸಾಮಾನ್ಯವಾಗಿ ಇರುವ ಉಪಕಾರಿ ಬ್ಯಾಕ್ಟೀರಿಯಾ ವೆಜಿನಲ್‌ ಲ್ಯಾಕ್ಟೊಬ್ಯಾಸಿಲ್ಲೆ$çಯ ಸ್ಥಾನದಲ್ಲಿ ಉಪದ್ರಕಾರಕ ಬ್ಯಾಕ್ಟೀರಿಯಾಗಳು ಸೇರಿಕೊಂಡು, ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಅಂತಹ ಕೆಲವು ಬ್ಯಾಕ್ಟೀರಿಯಾಗಳೆಂದರೆ, ಗಾಡ್ನìರೆಲ್ಲ ವೆಜಿನಾಲಿಸ್‌, ಬ್ಯಾಕ್ಟೆರಾಯೆxಸ್‌ ಸ್ಪೆಶೀಸ್‌ ಮತ್ತು ಮೈಕೊಪ್ಲಾಸ್ಮಾ ಹೊಮಿನಿಸ್‌. ಈ ಸೋಂಕಿನ ರೋಗ ಲಕ್ಷಣಗಳೆಂದರೆ, ಬೂದು ಬಣ್ಣದ, ಕೆಟ್ಟ ವಾಸನೆ ಸಹಿತ ಯೋನಿ ಸ್ರಾವ, ಕಿಬ್ಬೊಟ್ಟೆ ನೋವು, ಸುದೀರ್ಘ‌ ಋತುಸ್ರಾವ ಅಥವಾ ಋತುಸ್ರಾವಗಳೆರಡರ ನಡುವೆಯೂ ಸ್ರಾವ. ಸಾಮಾನ್ಯವಾಗಿ ಹಲವಾರು ಮಂದಿಯ ಜೊತೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿರುವವರಲ್ಲಿ, ಸಣ್ಣ ಪ್ರಾಯದಲ್ಲೆ ಸಂಭೋಗದ ಅನುಭವ ಆಗಿರುವವರಲ್ಲಿ, ಈ ಹಿಂದೆ ಲೈಂಗಿಕ ಸೋಂಕುಗಳ ತೆೊಂದರೆಗೆ ಗುರಿ ಆಗಿರುವವರಲ್ಲಿ ಈ ವಿಧದ ಸೋಂಕು ಕಂಡುಬರುತ್ತದೆ. ಈ ಸೋಂಕು ಇರುವವರಲ್ಲಿ ಹಠಾತ್‌ ಗರ್ಭಪಾತ, ಅವಧಿ ಪೂರ್ವ ಹೆರಿಗೆ, ಶಿಶುವಿನ ಆಮ್ನಿಯಾಟಿಕ್‌ ಪೊರೆ ಅವಧಿಗೆ ಮುನ್ನವೇ ಹರಿದಿರುವುದು, ಹೆರಿಗೆಯ ಬಳಿಕ ಗರ್ಭಾಶಯದ ಗೋಡೆಯ ಉರಿಯೂತ ಮತ್ತಿತರ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳಿರುತ್ತವೆ.

ಯಾವತ್ತೂ ಯೋನಿಸ್ರಾವ ಅಸಹಜ ಪ್ರಮಾಣದಲ್ಲಿ ಕಂಡುಬಂದಾಗ ಯೋನಿಯನ್ನು ಹಿಗ್ಗಿಸಿ ನಡೆಸುವ ತಪಾಸಣೆಗೆ ಒಳಗಾಗಿ, ಗೊನೊರಿಯಾದಂತಹ ಗಂಭೀರ ಸೋಂಕುಗಳು ತ‌ಗುಲಿಲ್ಲ ಎಂಬುದನ್ನು ಖಚಿತ‌ಪಡಿಸಿಕೊಳ್ಳುವುದು ಅಗತ್ಯ. ನಿರ್ಲಕ್ಷಿಸಿದಲ್ಲಿ, ಈ ಸೋಂಕು ಪೆಲ್ವಿಸ್‌ನ ಭಾಗಗಳಿಗೆ ಹರಡಿ, ಸಂತಾನಹೀನತೆ, ಗರ್ಭಾಶಯದ ಹೊರಗೆ ಭ್ರೂಣ ಇರುವ ಸ್ಥಿತಿ ಮತ್ತಿತರ ತೊಂದರೆಗಳು ಕಾಣಿಸಿಕೊಳ್ಳಬಹುದು. ಹೆಚ್ಚಿನ ಈ ಎಲ್ಲ ಸೋಂಕುಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಲು ಸರಳ ತಪಾಸಣೆಗಳು ಸಾಕಾಗುತ್ತವೆೆ. ಹೆಚ್ಚಿನವರಿಗೆ ಲೈಂಗಿಕ ಸೋಂಕು ರೋಗಗಳ ತಪಾಸಣೆ ಕೇಂದ್ರಗಳಿಗೆ ಭೇಟಿ ನೀಡಿ, ತಪಾಸಣೆಗೆ ಒಳಗಾಗಲು ಮುಜುಗರ ಇರಬಹುದು ಅಂತಹವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಕುಟುಂಬ ಕಲ್ಯಾಣ ಕೇಂದ್ರಗಳಲ್ಲಿ ಅಥವಾ ತಾಯಿ ಮತ್ತು ಶಿಶುವಿನ ಆರೋಗ್ಯ ಕೇಂದ್ರಗಳಲ್ಲಿ ಈ ರೀತಿಯ ತಪಾಸಣೆೆಗಳಿಗೆ ಸುಲಭವಾಗಿ, ಮುಜುಗರವಿಲ್ಲದೆ ಒಳಗಾಗಬಹುದು.

ಮೂಲ : ಅರೋಗ್ಯ ವಾಣಿ

2.9173553719
ga gas(ಹುಡಗಿ) Nov 20, 2019 07:22 AM

ಬಿಳಿ ಚೀಬೆಗೆ ಪರಿಹಾರ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top