ಗರ್ಭಾಶಯದ ಒಳಪಸೆಯನ್ನು ರಕ್ತಸ್ರಾವದ ಜತೆ ಹೊರಹಾಕುವುದೆ ಮುಟ್ಟು. ಮಹಿಳೆಯ ಜೀವನದ ಉತ್ಪಾದನಾ ಅವಧಿಯಲ್ಲಿ ಸರಿ ಸುಮಾರು ಮಾಸಿಕ ಚಕ್ರದಲ್ಲಿ ಗರ್ಭಿಣಿಯಿದ್ದಾಗ ಹೊರತುಪಡಿಸಿ ಇದು ಆಗುವುದು. ಮುಟ್ಟು ಪ್ರೌಢಾವಸ್ಥೆಗೆ( ಮೈನೆರಯುವುದು) ಬಂದಾಗಿನಿಂದ ಪ್ರಾರಂಭವಾಗಿ ಮನೊಪಾಜು ಆದ ಮೇಲೆ ಶಾಸ್ವತವಾಗಿ ನಿಲ್ಲುವುದು.
ಋತುಸ್ರಾವ ಚಕ್ರ ವು ರಕ್ತಸ್ರಾವವಾದ ಮೊದಲ ದಿನದಿಂದ ಪ್ರಾರಂಬವಾಗುವುದು. ಅದನ್ನು ಮೊದಲದಿನ ಎಂದು ಪರಿಗಣಿಸುವರು. ಈ ಚಕ್ರವು ಮುಂದಿನ ಮುಟ್ಟಿನ ಅವಧಿಗಿಂತ ಮುಂಚೆ ಮುಕ್ತಾಯವಾಗುವುದು. ಋತುಸ್ರಾವ ಚಕ್ರವು ಸಾಮಾನ್ಯವಾಗಿ 25 ರಿಂದ 36 ದಿನಗಳದ್ದಾಗಿರುವುದು. ಮಹಿಳೆಯರಲ್ಲಿ y 10 ರಿಂದ 15% ಜನ ಮಾತ್ರ ನಿಖರವಾದ 28 ದಿನಗಳ ಚಕ್ರವನ್ನು ಹೊಂದಿರುವರು.ಸಾದಾರಣವಾಗಿ ಈ ಚಕ್ರವು ಬದಲಾಗುತ್ತಲೆ ಇರುವುದು.ಅವು ಮೈನೆರದಹೊಸದರಲ್ಲಿ ಮತ್ತು ಮುಟ್ಟು ನಿಲ್ಲುವ ಸಮಯದ ಮುಂಚಿನ ವರ್ಷಗಳಲ್ಲಿ ದೀರ್ಘವಾಗಿರುವುದು.
ಮುಟ್ಟಿನ ರಕ್ತ ಸ್ರಾವವು 3 ರಿಂದ 7 ದಿನಗಳ ವರೆಗೆ ಇರುವುದು, ಸರಾಸರಿ 5 ದಿನಗಳು.ಈ ಅವಧಿಯಲ್ಲಿ ಆಗುವ ರಕ್ತ ನಷ್ಟವು ಸಾಮಾನ್ಯವಾಗಿ ½ ದಿಂದ 2½ ವನ್ಸು ಇರುವುದು.ಸ್ಯಾನಿಟರಿ ಪ್ಯಾಡು ಅಥವ A sanitary pad or ಟೆಂಪೊನು ಉಪಯೋಗಿಸುವುದನ್ನು ಅವಲಂಬಿಸಿ ಒಂದು ಔನ್ಸವರೆಗೆ ರಕ್ತವನ್ನು ತಡೆಯಬಹುದು. ಮುಟ್ಟಿನ ರಕ್ತವು , ಗಯದ ರಕ್ತದಂತೆ ಹೆಪ್ಪುಗಟ್ಟುವುದಿಲ್ಲ.ರಕ್ತಸ್ರಾವವು ಬಹಳ ಹೆಚ್ಚಾದಾಗ ಮತ್ರ ಅಗಬಹುದು.
ಋತು ಚಕ್ರವನ್ನು ಹರ್ಮೋನುಗಳು ನಿಯಂತ್ರಿಸುತ್ತವೆ. ಪಿಟ್ಯುಟರಿ ಗ್ರಂಥಿಯಲ್ಲಿ ಸ್ರವಿಸುವ ಲುಟೈನಿಜಿಂಗ್ ಹಾರ್ಮೋನು ಮತ್ತು ಫಾಲಿಕಲ್ ಉತ್ತೇಜಕ ಹಾರ್ಮೋನುಗಳು ಅಂಡೋತ್ಪತ್ತಿಯನ್ನು ಪ್ರೊತ್ಸಾಹಿಸಿ , ಅಂಡಾಶಯದಲ್ಲಿ ಇಸ್ಟ್ರೊಜಿನ್ ಮತ್ತು ಪ್ರೊಜೆಸ್ಟ್ರೊನ್ ಉತ್ಪಾದನೆಯನ್ನು ಉತ್ತೇಜಿಸಸುತ್ತವೆ. ಇಸ್ಟ್ರೊಜಿನ್ ಮತ್ತು ಪ್ರೊಜೆಸ್ಟ್ರೊನ್ ಗಳು ಗರ್ಭಾಶಯವನ್ನು ಮತ್ತು ಸ್ಥನಗಳನ್ನು ಉತ್ತೇಜಿಸಿ ಫಲೋತ್ಪದನೆಗೆ ತಯಾರು ಮಾಡುತ್ತವೆ.
ಈ ಋತುಚಕ್ರವು ಮೂರು ಹಂತಗಳನ್ನು ಒಳಗೊಂಡಿದೆ.:
ಈ ಹಂತವು ಋತುಸ್ರಾವದ ಮೊದಲ ದಿನ ಪ್ರಾರಂಭವಾಗುವುದು (1 ನೆ ದಿನ) ಆದರೆ ಈ ಹಂತದಲ್ಲಿ ಮುಖ್ಯ ಘಟನೆಯು ಗರ್ಭಾಶಯದಲ್ಲಿ ಫಾಲಿಕಲ್ ಗಳ ಬೆಳವಣಿಗೆ . ಈ ಫಾಲಿಕ್ಯುಲರ್ ಹಂತದ ಮೊದ,ಲ್ಲಿ ಗರ್ಭಾಶಯದ ಒಳ ಪಸೆಯು ಭ್ರೂಣಕ್ಕೆ ಆಹಾರ ಒದಗಿಸುವ ಜೀವದ್ರವಗಳಿಂದ ಮತ್ತು ಪೋಷಕಾಂಶಗಳಿಂದ ಕೂಡಿ ಮಂದವಾಗಿರುವುದು. ಅಂಡಾಣುವು ಫಲಿತವಾಗದಿದ್ದರೆ , ಎಸ್ಟ್ರೊಜೆನ ಮತ್ತು ಪ್ರೊಜೆಸ್ಟ್ರೊನಗಳ ಮಟ್ಟವು ಕಡಿಮೆ ಯಾಗುವುದು. ಅದರ ಪರಿಣಾಮವಾಗಿ ಗರ್ಭಾಶಯದ ಒಳಪಸೆಯಮೇಲ್ಪದರು ಹೊರಹಾಕಲಾಗುವುದು. ಮತ್ತು ರಕ್ತ ಸ್ರಾವವು ಮೊದಲಾಗುವುದು. ಇದೆ ಸಮಯದಲ್ಲಿ ಪಿಟ್ಯಟರಿ ಗ್ರಂಥಿಯು ಫಲಿಕಲ್ ಗಳ ಉತ್ಪಾದನೆಯನ್ನು ಹೆಚ್ಚಳವನನ್ನು ಉತ್ತೇಜಿಸುವ ಹಂಓðನನ್ನು ಬಿಡುಗಡೆ ಮಾಡುವುದು ಈ ಹಾರ್ಮೋನು 3 ರಿಂದ 30 ಫಲಿಕಲ್ ಗಳ ಉತ್ಪಾದನೆಗೆ ಉತ್ತೇಜನ ನೀಡುವುದು. ಪ್ರತಿ ಪಾಲಿಕಲ್ನಲ್ಲಿಯೂ ಒಂದು ಅಂಡಾಣು ಇರುವುದು. ಈ ಹಂತದ ನಂತರ ಹರ್ಮೋನುಗಳ ಮಟ್ಟವು ಕಡಿಮೆಯಾಗುವುದು.ಆ ಫಾಲಿಕಲ್ ಗಳಲ್ಲಿ ಒಂದು ಫಾಲಿಕಲ್ ( ಪ್ರಧಾನ ಫಾಲಿಕಲ್ ಎಂದು ಕರೆಯುವ) ಮಾತ್ರ ಬೆಳವಣಿಗೆಯನ್ನು ಮುಂದುವರಿಸುವುದು.. ಅದೇ ಬೇಗ ಎಸ್ಟ್ರೊಜಿನ್ ಉತ್ಪಾದನೆಗೆ ತೊಡಗುವುದು. ಮತ್ತು ಇತರ ಉತ್ತೇಜಿತ ಫಾಲಿಕಳ್ಗಳು ವಿಘಟನೆ ಯಾಗುತೊಡಗುವವು.
ಈ ಫಾಲಿಕ್ಯುಲರ್ ಹಂತವು ಸರಾಸರಿ 13 ಅಥವ 14 ದಿನಗಳ ಇರುವುದು. ಎಲ್ಲ ಹಮತಗಳಲ್ಲಿ ಈ ಹಂತವು ಬಹಳ ದೀರ್ಘ ಅವಧಿಯದಾಗಿರುವುದು ಮತ್ತು ಮನೊ ಪೋಜ ಅವಧಿ ಹತ್ತಿರಬಂದಮತೆ ಈ ಅವಧಿ ಕಡಿಮೆ ಯಾಗುತ್ತಾ ಹೋಗುವುದು.ಲುಟೈನಿಜಿಂಗ್ ಹಾರ್ಮೋನಿನ ಮಟ್ಟವು ನಾಟಕೀಯವಾಗಿ ಅಧಿಕವಾದಾಗ( ಚಿಮ್ಮುತ್ತದೆ). ಚಿಮ್ಮುವಿಕೆಯಿಂದ ಅಂಡಾಣುವು ಬಿಡುಗಡೆಯಾಗುತ್ತದೆ ( ಓವುಲೇಷನ್ ).
ಈ ಹಂತವು ಲುಟೈನಿಜಿಂಗ್ ಹಾರ್ಮೋನಿನ ಮಟ್ಟವು ನಾಟಕೀಯವಾಗಿ ಅಧಿಕವಾದಾಗಿ ಚಿಮ್ಮಿದಾಗ ಮೊದಲಾಗುತ್ತದೆ., ಈ ಹಾರ್ಮೋನು ಪ್ರಧಾನ ಫಾಲಕಲ್ ಅನ್ನು ಉತ್ತೇಜಿಸಿ ಅಂಡಾಶಯದ ಮೆಲ್ ಮೈನಲ್ಲಿ ದಪ್ಪವಾಗತ್ತಾ ಹೋಗಿ ಕೊನೆಗೆ ಒಡೆಯುತ್ತದೆ. ಗ ಅಂಡಾಣು ಬಿಡುಗಡೆಯಾತ್ತದೆ. ಫಾಲಿಕಲ್ ಅನ್ನು ಉತ್ತೇಜಿಸುವ ಹಾರ್ಮೋನಿನ ಹೆಚ್ಚಳದ ಮಟ್ಟವುT ಇಳಿಯುತ್ತದೆ. ಫಲಿಕಲ್ ಅನ್ನು ಉತ್ತೇಜಿಸುವ ಈ ಹಾರ್ಮೋನಿನ ಕಾರ್ಯದ ಬಗೆಗೆ ಹೆಚ್ಚು ತಿಳಿದಿಲ್ಲ. ಈ ಓವುಲೇಟರಿ ಹಂತವು ಸಾಮಾನ್ಯವಾಗಿ 16 ರಿಂದ 32 ಗಂಟೆಗಲ ಅವಧಿಯದಾಗಿರುವುದು.. ಅಂಡಾಣು ಬಿಡುಗಡೆಯಿಂದ ಈ ಹಂತ ಮುಕ್ತಾಯವಾಗುವುದು..
ಅಂಡಾಣುವು ಬಿಡುಗಡೆಯಾದ ಸುಮಾರು 12 ರಿಂದ 24 ಗಂತೆಗಲ ನಂತರ , ಲುಟೈನಿಜಿಂಗ್ ಹಾರ್ಮೋನಿನ ಮಟ್ಟವು ನ್ನು ಮೂತ್ರದಲ್ಲಿ ಇದರ ಮಟ್ಟ್ವನ್ನು ಅಳೆಯುವ ಮೂಲಕ ಪತ್ತೆ ಹಚ್ಚಬಹುದು. ಇದರಿಂದ ಮಃಇಳೆಯು ಯಾಔಆಗ ಫಲ ಪ್ರದಳಾಗುವಳ ಎಂಬುದನ್ನು ಅರಿಯಬಹುದು.ಅಂಡಾಣುವು ಬಿಡುಗಡೆಯಾದ 12 ಗಂಟೆಗಲ ವರೆಗೆ ಮಾತ್ರ ಫಲಪ್ರದವಾಗುವುದು.ಸಂತಾನೋತ್ಪತ್ತಿ ನಾಳದಲ್ಲಿ ಅಮಡಾಣುವ ಪ್ರವೇಶಿಸುವ ಮೊದಲೆ ವಿರ್ಯಾಣವು ಇದ್ದರೆ ಮಾತ್ರ . ಅದು ಫಲ ಪ್ರದವಾಗುತ್ತದೆ. ಅಂಡಾಣುಗಳ ಉತ್ಪಾದನೆ ಯ ಸಮಯದಲ್ಲಿ ಮಹಿಳೆಗೆ ಕಿಬ್ಬೊಟ್ಟೆಯ ಒಂದು ಭಾಗದಲ್ಲಿ ಮಂದವಾದ ನೋವು ಕಾಣಿಸಿಕೊಳ್ಳಬಹುದು.ಈ ನೋವನ್ನು ಸೊಂಟನೋವು ಎಂದೆ ಕರೆಯುವರು. ಈ ನೋವು ಕೆಲ ನಿಮಿಷ ದಿಂದ ಗಂಟೆಗಳವರೆಗೆ ಇರಬಹುದು ಇ ನೋವು ಗರ್ಭಾಶಯದ ಯಾವ ಭಾಗದಲ್ಲಿ ಅಂಡಾಣುವು ಬಿಡುಗಡೆಯಾಗುವದೋ ಅಲ್ಲಿಯೇ ಅನುಭವವಾಗುವುದು. ಈ ನೋವಿಗೆ ನಿರ್ಧಿಷ್ಟ ಕಾರಣ ಇದುವರೆಗೆ ಗೊತ್ತಿಲ್ಲ. ಈ ನೋವು ಅಂಡಾಣುವಿನ ಬಿಡುಗಡೆಯ ಮೊದಲು ಅಥವ ನಂತರ ಬರಬಹುದು. ಮತ್ತು ಇದು ಎಲ್ಲ ಋತುಚಕ್ರದಲ್ಲೂ ಬರದೆ ಇರಬಹುದು. ಅಂಡಾಣುವ ಎರಡು ಗರ್ಭಕೋಸಗಳಲ್ಲಿ ಒಂದಾದರ ಮೇಲೆ ಇನ್ನೊಂದರಲ್ಲಿ ಬಿಡುಗಡೆಯಾಗುವುದಿಲ್ಲ.ಅದು ಹೆಗೆಮದರೆ ಹಾಗೆ ಆಗವುದು. ಓಂದು ಗರ್ಭಾಶಯವನ್ನು ತೆಗೆದು ಹಾಕಿದರೂ ಉಳಿದ ಗರ್ಭಾಶಯದಲ್ಲಿ ಅಂಡಾಣುವು ಪರ್ತಿ ತಿಂಗಳೂ ಬಿಡುಗಡೆಯಾಗಬಹುದು.
ಈ ಹಂತವು ಅಂಡಾಣುವು ಉತ್ಪತ್ತಿಯಾಗುವ ಮುನ್ನ ಶುರುವಾಗುತ್ತದೆ. ಸುಮಾರು ೧೪ ದಿನಗಳ ಕಾಲ ಇವುರವ ಈ ಹಂತ (ಅಂಡಾಣು ಫಲಿತವಾಗದಿದ್ದರೆ) ಋತುಚಕ್ರ ಆರಂಭವಾಗುವ ಮುನ್ನ ಮುಗಿಯುತ್ತದೆ. ಈ ಹಂತದಲ್ಲಿ ಒಡೆದ ಫಾಲಿಕಲ್ ಅಂಡಾಣುವನ್ನು ಬಿಡುಗಡೆ ಮಾಡಿದ ನಂತರ ಮುಚ್ಚಿಕೊಳ್ಳುತ್ತದೆ. ಅಲ್ಲದೆ ಪ್ರೊಜೆಸ್ಟೆರೋನ್ ಅನ್ನು ಉತ್ಪಾದಿಸುವ ಕಾರ್ಪಸ್ ಲುಟೆಯಂ ಅನ್ನು ಸೃಷ್ಟಿಸುತ್ತದೆ. ಅಂಡಾಣುವು ಫಲಿತಗೊಂಡರೆ ಅದನ್ನು ಧರಿಸಲು ಅನುವಾಗುವಂತೆ ಗರ್ಭವನ್ನು ಸಿದ್ಧಗೊಳಿಸುತ್ತದೆ. ಇದು ಉತ್ಪಾದನೆ ಮಾಡಿದ ಪ್ರೊಜೆಸ್ಟಿರೋನ್ ನಿಂದ ಗರ್ಭಗೋಡೆಯು ದಪ್ಪವಾಗುತ್ತದೆ, ಅಲ್ಲದ ಸಂಭವನೀಯ ಭ್ರೂಣವನ್ನು ಬೆಳೆಸಲು ಅಗತ್ಯವಾಗುವ ದ್ರವವನ್ನು ತುಂಬುತ್ತದೆ. ಸರ್ವೆಕ್ಸ್ ಮ್ಯೂಕಸ್ ಗಾಢವಾಗುವಂತೆ ಮಾಡುತ್ತದೆ. ಇದರಿಂದ ವೀರ್ಯಾಣು ಅಥವಾ ಬ್ಯಾಕ್ಟೀರಿಯಾಗಳಾಗಲೀ ಒಳಸೇರುವುದು ದುಸ್ತರವಾಗುತ್ತದೆ. ಪ್ರೊಜೆಸ್ಟಿರೋನ್ ಉತ್ಪತ್ತಿ ಹೆಚ್ಚಾದಾಗ ದೇಹದ ಉಷ್ಣತೆ ಹೆಚ್ಚುತ್ತದೆ. ಲ್ಯೂಟೆಲ್ ಹಂತದಲ್ಲಿ ಹೆಚ್ಚುವ ದೇಹದ ತಾಪಮಾನ ಮುಟ್ಟಾಗುವವರೆಗೆ ಮುಂದುವರಿಯುತ್ತದೆ. ಈ ದೇಹದ ತಾಪಮಾನದ ಏರಿಕೆಯ ಮೇಲೆಯೇ ಅಂಡಾಣು ಬಿಡುಗಡೆಯಾಗಿದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚಬಹುದು. ಲ್ಯುಟೇಲ್ ಹಂತದಲ್ಲಿ ಈಸ್ಟ್ರೋಜನ್ ಪ್ರಮಾಣವೂ ಹೆಚ್ಚಿರುತ್ತದೆ. ಈಸ್ಟ್ರೊಜನ್ ಕೂಡ ಎಂಡೊಮೆಟ್ರಿಯಮ್ ದಪ್ಪವಾಗುವಂತೆ ಮಾಡುತ್ತದೆ.
ಈಸ್ಟ್ರೊಜನ್ ಮತ್ತು ಪ್ರೊಜೆಸ್ಟಿರೋನ್ ಪ್ರಮಾಣದಲ್ಲಿ ಹೆಚ್ಚುವುದಿರಂದ ಎದೆಯಲ್ಲಿನ ಹಾಲೂಡಿಸುವ ನಾಳಗಳು ವಿಸ್ತಾರಗೊಳ್ಳುತ್ತವೆ. ಇದರಿಂದ ಮೊಲೆಗಳು ಮೃದುವಾಗಿ ಉಬ್ಬುತ್ತವೆ.
ಅಂಡಾಣುವು ಫಲಿತಗೊಳ್ಳದಿದ್ದರೆ ೧೪ ದಿನಗಳ ನಂತರ ನಾಶಗೊಳ್ಳುತ್ತದೆ. ಮತ್ತೊಂದು ಹೊಸ ಋತುಚಕ್ರ ಆರಂಭವಾಗುತ್ತದೆ. ಅಂಡಾಣುವು ಫಲಿತಗೊಂಡರೆ ಭ್ರೂಣ ಸುತ್ತ ಇರುವ ಕೋಶಗಳು ಹ್ಯೂಮನ್ ಕೊರಿಯೋನಿಕ್ ಗೊನಡೊಟ್ರೋಪಿನ್ ಅನ್ನೋ ಹಾರ್ಮೋನ್ ಅನ್ನು ಉತ್ಪತ್ತಿ ಮಾಡತ್ತೆ. ಈ ಹಾಮೋನ್ ಕಾರ್ಪಸ್ ಲೆಟ್ಯೂಮ್ ಮುಂದುವರಿಯುವಂತೆ ಮಾಡುತ್ತೆ. ಭ್ರೂಣವು ತನ್ನದೇ ಹಾರ್ಮೋನುಗಳನ್ನು ಉತ್ಪತ್ತಿ ಮಾಡಲು ಸಮರ್ಥವಾಗುವವರೆ ಗೆ ಈ ವ್ಯವಸ್ಥೆ ಮುಂದುವರಿಯುತ್ತದೆ. ಈ ಹ್ಯೂಮನ್ ಕೊರಿಯಾನಿಕ್ ಗೊನಡೊಟ್ರೊಪಿನ್ ಇರುತ್ತದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 10/14/2019
ಈ ಪುಸ್ತಕದಲ್ಲಿ ಋತುಸ್ರಾವ ಮತ್ತು ಫಲವತ್ತತೆ, ಗರ್ಭಾವಸ್ಥೆ...
ಹೆಂಗಸರು ಅವರ ದೇಹ ಹೇಕೆ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ...